ಸತ್ಯವತಿ ದೇವಿ

ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರು

ಸತ್ಯವತಿ ದೇವಿ (೨೬ಜನವರಿ ೧೯೦೬ - ೨೧ಅಕ್ಟೋಬರ್ ೧೯೪೫) ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರು. ಇವರನ್ನು ಜೋನ್ ಆಫ್ ಆರ್ಕ್ ಆಫ್ ಇಂಡಿಯಾ ಎಂದು ಪರಿಗಣಿಸಲಾಗಿತ್ತು.

ಸತ್ಯವತಿ ದೇವಿ
Born೨೬ ಜನವರಿ ೧೯೦೬
ಜುಲುಂದೂರ್, ಪಂಜಾಬ್ ಪ್ರಾಂತ್ಯ, ಬ್ರಿಟಿಷ್ ಭಾರತ
Died೨೧ ಅಕ್ಟೋಬರ್ ೧೯೪೫ (೩೯ ವರ್ಷ)
ದೆಹಲಿ, ಬ್ರಿಟಿಷ್ ರಾಜ್
Nationalityಭಾರತೀಯರು
Known forಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಿಕೆ

ಕುಟುಂಬ :

ಬದಲಾಯಿಸಿ

ಅವರು ಸ್ವಾಮಿ ಶ್ರದ್ಧಾನಂದರ ಮೊಮ್ಮಗಳು ಮತ್ತು ವಕೀಲ ಧನಿ ರಾಮ್ ಮತ್ತು ವೇದ್ ಕುಮಾರಿ ಅವರ ಮಗಳು.[] ಅವರು ದೆಹಲಿಯ ಬಟ್ಟೆ ಗಿರಣಿಗಳ ಫ್ಯಾಕ್ಟರಿಯ ಅಧಿಕಾರಿಯನ್ನು ವಿವಾಹ ಆಗಿದ್ದರು.

ಕ್ರಿಯಾಶೀಲತೆ

ಬದಲಾಯಿಸಿ

ದೆಹಲಿಯ ರಾಷ್ಟ್ರೀಯವಾದಿ ಮಹಿಳೆಯರಲ್ಲಿ, ಸತ್ಯವತಿ ನಾಯಕಿಯ ಪಾತ್ರವನ್ನು ವಹಿಸಿದರು. ಅರುಣಾ ಅಸಫ್ ಅಲಿ ಅವರು ಸತ್ಯವತಿ ಅವರನ್ನು ರಾಷ್ಟ್ರೀಯವಾದಿ ಚಳವಳಿಗೆ ಸೇರಲು ಪ್ರೇರೇಪಿಸಿದರು. [] ಸತ್ಯವತಿ ಅವರು ಗ್ವಾಲಿಯರ್ ಮತ್ತು ದೆಹಲಿಯ ಜವಳಿ ಗಿರಣಿಗಳಲ್ಲಿ ಗಿರಣಿ ಕಾರ್ಮಿಕರಲ್ಲಿ ಸಾಮಾಜಿಕ ಕಾರ್ಯವನ್ನು ಕೈಗೊಂಡರು. ಅವರು ಕಾಂಗ್ರೆಸ್ ಮಹಿಳಾ ಸಮಾಜ [] ಮತ್ತು ಕಾಂಗ್ರೆಸ್ ದೇಶ ಸೇವಿಕಾ ದಳವನ್ನು ಸ್ಥಾಪಿಸಿದರು ಮತ್ತು ಅವರು ಕಾಂಗ್ರೆಸ್ ಸಮಾಜವಾದಿ ಪಕ್ಷವನ್ನು ಸಹ-ಸ್ಥಾಪಿಸಿದರು. ಇವರು ನಾಗರಿಕ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ನಾಗರಿಕ ಅಸಹಕಾರ ಚಳವಳಿಯ ಸಂದರ್ಭದಲ್ಲಿ ಅವರು ದೆಹಲಿಯ ಕಾಂಗ್ರೆಸ್‌ನ ಮಹಿಳಾ ವಿಭಾಗದ ನಾಯಕಿಯಾದರು. ಅವರು ದೆಹಲಿಯಲ್ಲಿ ಉಪ್ಪಿನ ಕಾನೂನನ್ನು ಮುರಿಯಲು ಸಂಘಟಿಸಿದರು, ಅಲ್ಲಿ ಇವರು ಮತ್ತು ಸ್ವಯಂಸೇವಕರ ಗುಂಪು ಅಲ್ಲಿ ನೆರೆದಿದ್ದ ಜನರಿಗೆ ಅಕ್ರಮ ಉಪ್ಪಿನ ಪ್ಯಾಕೆಟ್‌ಗಳನ್ನು ತಯಾರಿಸಿ ವಿತರಿಸಿದರು. ಅವರನ್ನು ಪೊಲೀಸರು ಬಂಧಿಸಿದರು ಮತ್ತು ೧೯೩೨ ರಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅವರು ಜೈಲಿನಲ್ಲಿದ್ದಾಗ ಅವರಿಗೆ ಪ್ಲೆರೈಸಿ ಮತ್ತು ಕ್ಷಯರೋಗ ತಗುಲಿತು. [] ಜೈಲಿನಲ್ಲಿದ್ದಾಗ, ರಾಜಕೀಯ ಚಟುವಟಿಕೆಯಿಂದ ದೂರವಿರುವುದಾಗಿ ಭರವಸೆ ನೀಡಿದರು.[] ಅವರು ೧೯೪೫ ರಲ್ಲಿ ತಮ್ಮ ೩೯ನೇ ವಯಸ್ಸಿನಲ್ಲಿ ಕ್ಷಯರೋಗದಿಂದ ನಿಧನರಾದರು.

ಬರಹಗಳು :

ಬದಲಾಯಿಸಿ

ಇವರು ಜೈಲಿನಲ್ಲಿರುವ ಮಹಿಳಾ ರಾಜಕೀಯ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕವನಗಳು ಮತ್ತು ರಾಷ್ಟ್ರೀಯತಾವಾದಿ ಕರಕುಶಲಗಳನ್ನು ರಚಿಸಿದರು. ಅವುಗಳನ್ನು ಕಳ್ಳಸಾಗಣೆ ಮಾಡಿ ಪ್ರಕಟಿಸಲಾಯಿತು. ಸತ್ಯವತಿ ದೇವಿಯವರು ಬರೆದಿರುವ ಬರಹದ ಒಂದು ತುಣುಕು, 'ಬಹಿನ್ ಸತ್ಯವತಿ ಕಾ ಜೈಲ್ ಸಂದೇಶ' (ಸಹೋದರಿ ಸತ್ಯವತಿಯ ಜೈಲು ಸಂದೇಶ) ಈ ಕೆಳಗಿನಂತಿರುತ್ತದೆ: []

This is a message from your jailed sister
Sister Satyavati appeals to you
Do not slacken from your work
Jump, if required, into the burning flames
The sacred battle should be full of strength
Once you have stepped forward, never retreat
Die before the men in the battlefield
Do not fear bullets or sticks
Put your head forward before the men
Once lit, the fire should never go out
I have full faith now
Because the women have prepared themselves

ಇದು ಮತ್ತು ಅವರ ಇತರ ಬರಹಗಳು ಮತ್ತು ಜೈಲಿನಲ್ಲಿ ಬರೆದ ಹಾಡುಗಳು ಭಾರತದ ಸ್ವಾತಂತ್ರ್ಯ ಚಳವಳಿಗೆ ಪ್ರವೇಶಿಸಲು ಮಹಿಳೆಯರನ್ನು ಪ್ರೇರೇಪಿಸುವ ಮತ್ತು ಸಜ್ಜುಗೊಳಿಸುವ ಗುರಿಯನ್ನು ಹೊಂದಿದ್ದವು.

ಗುರುತಿಸುವಿಕೆ

ಬದಲಾಯಿಸಿ

ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅಸಾಧಾರಣ ನಾಯಕಿ ಎಂದು ನಂಬಲಾಗಿದೆ. ೧೯೭೨ ರಲ್ಲಿ ದೆಹಲಿ ಸರ್ಕಾರವು ಸ್ಥಾಪಿಸಿದ ಕಾಲೇಜಿಗೆ ಸತ್ಯವತಿ ( ದೆಹಲಿ ವಿಶ್ವವಿದ್ಯಾಲಯ ) ಅವರ ಹೆಸರನ್ನು ಇಡಲಾಗಿದೆ. []


ಉಲ್ಲೇಖಗಳು

ಬದಲಾಯಿಸಿ
  1. Taneja, Anup (2005). Gandhi, Women, and the National Movement, 1920–47. Haranand Publications Pvt Ltd. p. 153. ISBN 9788124110768.
  2. Taneja, Anup (2005). Gandhi, Women, and the National Movement, 1920–47. Har-anand Publications Pvt Ltd. p. 154. ISBN 9788124110768.
  3. "CONGRESS SOCIALIST PARTY (CSP) AT A GLANCE AND SHORT PROFILES WORKS OF ITS LEADERS" (PDF). lohiatoday.com. p. 91. Archived from the original (PDF) on 23 November 2015. Retrieved 3 November 2015.
  4. Geraldine Forbes (1999). Women in Modern India, Volume 4. Cambridge University Press. p. 148. ISBN 978-0521653770.
  5. "Toofani Satyawati An Unsung Hero of Freedom Struggle" (PDF). www.manushi.in. Manushi – Forum for Women's Rights & Democratic Reforms. Archived from the original (PDF) on 2 October 2015. Retrieved 1 October 2015.
  6. Thapar-Björkert, Suruchi (20 December 2006). "Gender, nationalism and the colonial jail: a study of women activists in Uttar Pradesh". Women's History Review. 7 (4): 583–615. doi:10.1080/09612029800200182.
  7. "About Us". satyawati.du.ac.in/.