ಸತ್ತೂ ಒಂದು ರೀತಿಯ ಹಿಟ್ಟು. ಇದನ್ನು ಮುಖ್ಯವಾಗಿ ನೇಪಾಳ, ಭಾರತ ಮತ್ತು ಪಾಕಿಸ್ತಾನದಲ್ಲಿ ಬಳಸಲಾಗುತ್ತದೆ. ಇದು ಕುಟ್ಟಿದ ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳ ಮಿಶ್ರಣವನ್ನು ಹೊಂದಿರುತ್ತದೆ. ಒಣ ಪುಡಿಯನ್ನು ಭಕ್ಷ್ಯಗಳ ಪ್ರಧಾನ ಅಥವಾ ದ್ವಿತೀಯಕ ಘಟಕಾಂಶವಾಗಿ ವಿವಿಧ ರೀತಿಯಲ್ಲಿ ತಯಾರಿಸಲಾಗುತ್ತದೆ. ಎರಡೂ ದೇಶಗಳಲ್ಲಿ ವಿವಿಧ ಬಗೆಯ ಸತ್ತೂಗಳನ್ನು ತಯಾರಿಸಲಾಗುತ್ತದೆ: ತೆಲಂಗಾಣದ ಬತುಕಮ್ಮದ ಸಮಯದಲ್ಲಿ ಮತ್ತು ಪಾಕಿಸ್ತಾನದ ಬೇಸಿಗೆಯಲ್ಲಿ ರೈತರಿಗೆ ಉಲ್ಲಾಸಕರ ಪಾನೀಯವಾಗಿ.

ಸತ್ತೂ ಸಸ್ಯಾಹಾರಿ ಪಾಕಪದ್ಧತಿಯ ಅತ್ಯಗತ್ಯ ಭಾಗವಾಗಿದೆ ಏಕೆಂದರೆ ಇದು ಪ್ರೋಟೀನ್‌ನ ಪ್ರಮುಖ ಮೂಲವಾಗಿದೆ. ಜೀವನಶೈಲಿ ಮತ್ತು ಕ್ಷೇಮ ಗುರುಗಳು ಸತ್ತೂವನ್ನು ಈಗ ಸೂಪರ್‌ಫುಡ್ ಎಂದು ಗುರುತಿಸುತ್ತಿದ್ದಾರೆ.

ಸತ್ತೂ ತಯಾರಿಸುವ ಪ್ರಕ್ರಿಯೆಯು ಪ್ರಾಚೀನವಾದುದು[] ಮತ್ತು ಇದು ಉತ್ತರ ಭಾರತದ ವಿಶಾಲ ಪ್ರದೇಶದಲ್ಲಿ, ವಿಶೇಷವಾಗಿ ಬಿಹಾರದಲ್ಲಿ ಜನಪ್ರಿಯವಾಗಿದೆ.

ಉಪಯೋಗಗಳು

ಬದಲಾಯಿಸಿ
 
ಲಿಟ್ಟಿಯಲ್ಲಿ ಸತ್ತೂ ಮುಖ್ಯ ಘಟಕಾಂಶವಾಗಿದೆ.

ಬಿಹಾರದಲ್ಲಿ, ಇದನ್ನು ಸಾಮಾನ್ಯವಾಗಿ ಬೇಸಿಗೆಯಲ್ಲಿ ತೀವ್ರವಾದ ಶಾಖದ ಅಲೆಗಳ ಸಮಯದಲ್ಲಿ ತಂಪಾದ ಉಪ್ಪುಖಾರದ ಪಾನೀಯವಾಗಿ ಅಥವಾ ಗಂಜಿ ಅಥವಾ ಮೃದುವಾದ ಕಣಕವಾಗಿ ನೀಡಲಾಗುತ್ತದೆ. ಸಿಹಿ ಭಕ್ಷ್ಯಗಳು ಸತ್ತೂವಿನ ಜೊತೆಗೆ ಹಣ್ಣಿನ ಚೂರುಗಳು, ಸಕ್ಕರೆ ಮತ್ತು ಹಾಲನ್ನು ಸಂಯೋಜಿಸುತ್ತವೆ. ಖಾರದ ತಿನಿಸುಗಳಲ್ಲಿ, ಹಸಿರು ಮೆಣಸಿನಕಾಯಿ, ನಿಂಬೆ ರಸ ಮತ್ತು ಉಪ್ಪಿನೊಂದಿಗೆ ಸತ್ತೂವನ್ನು ಸವಿಯಬಹುದು. ಇದು ಪರಾಠಾಗಳಲ್ಲಿ ಜನಪ್ರಿಯವಾದ ಹೂರಣವಾಗಿದೆ. ಸತ್ತೂವಿಗೆ ಸ್ವಲ್ಪ ಸಾಸಿವೆ ಎಣ್ಣೆ ಮತ್ತು ಕೆಲವು ಮಸಾಲೆಗಳನ್ನು ಬೆರೆಸಿ ಸಾಂಪ್ರದಾಯಿಕ ಬಿಹಾರಿ ಆಹಾರ "ಲಿಟ್ಟಿ" ಯಲ್ಲಿ ತುಂಬಲು ಬಳಸಲಾಗುತ್ತದೆ.

ಘಟಕಾಂಶಗಳು

ಬದಲಾಯಿಸಿ

ಧಾನ್ಯಗಳು ಅಥವಾ ದ್ವಿಧಳ ಧಾನ್ಯಗಳನ್ನು, ಹೆಚ್ಚಾಗಿ ಬಾರ್ಲಿ ಅಥವಾ ಕಡಲೆ ಬೇಳೆಯನ್ನು ಒಣವಾಗಿ ಹುರಿದು ಸತ್ತೂವನ್ನು ತಯಾರಿಸಲಾಗುತ್ತದೆ. ಒಡಿಶಾದಲ್ಲಿ, ಸತ್ತೂ ಅಥವಾ ಚತುವಾವನ್ನು ಗೋಡಂಬಿ, ಬಾದಾಮಿ, ರಾಗಿ, ಬಾರ್ಲಿ ಮತ್ತು ಕಡಲೆಹಿಟ್ಟನ್ನು ಒಣವಾಗಿ ಹುರಿದು ತಯಾರಿಸಲಾಗುತ್ತದೆ ಮತ್ತು ನಯವಾದ ಹಿಟ್ಟಾಗಿ ರುಬ್ಬಲಾಗುತ್ತದೆ. ಸತ್ತೂ ತಯಾರಿಸುವ ಸಾಂಪ್ರದಾಯಿಕ ವಿಧಾನವು ಕಬ್ಬಿಣದ ಪಾತ್ರೆಯ ಬಳಕೆಯನ್ನು ಒಳಗೊಂಡಿರುತ್ತದೆ. ಇದರಲ್ಲಿ ಧಾನ್ಯಗಳು ಅಥವಾ ದ್ವಿದಳಧಾನ್ಯಗಳನ್ನು ಮರಳಿನಲ್ಲಿ ಹುರಿಯಲಾಗುತ್ತದೆ. ನಂತರ ಅವುಗಳನ್ನು ಜರಡಿ ಹಿಡಿದು ನಂತರ ನಯವಾದ ಹಿಟ್ಟಾಗಿ ಪುಡಿ ಮಾಡಲಾಗುತ್ತದೆ.

ಉಲ್ಲೇಖಗಳು

ಬದಲಾಯಿಸಿ

 

  1. Harkesh Singh Kehal. Alop Ho Riha Punjabi Virsa. Pub. Lokgeet Parkashan. ISBN 81-7142-869-X

ಹೊರಗಿನ ಕೊಂಡಿಗಳು

ಬದಲಾಯಿಸಿ
"https://kn.wikipedia.org/w/index.php?title=ಸತ್ತೂ&oldid=1059676" ಇಂದ ಪಡೆಯಲ್ಪಟ್ಟಿದೆ