ಕ್ರಿಕೆಟ್ ಆಟದಲ್ಲಿ ಕ್ಷಿಪ್ರವಾಗಿ ಚಲಿಸುವ ಚೆಂಡನ್ನು ತಡೆದು ನಿಲ್ಲಿಸುವುದು ಕಷ್ಷ. ಅದೇ ಚೆಂಡು ಸಾಧಾರಣ ವೇಗದಲ್ಲಿ ಚಲಿಸುವಾಗ ಹಿಡಿಯುವುದು ಸುಲಭ.ಒಂದೇ ಜವದಲ್ಲಿ ವಿರುದ್ಧ ದಿಕ್ಕುಗಳಲ್ಲಿ ಚಲಿಸುವ ಕಾರು ಮತ್ತು ಸ್ಕೊಟರ್ ದುರದೃ ಷ್ಟವಶಾತ್ ಪರಸ್ಪರ ಡಿಕ್ಕಿಯಾದರೆ ಸ್ಕೊಟರಿಗೆ ಹೆಚ್ಚು ಹಾನಿಯೂಗುತ್ತದೆ. ಚಲನೆಯಿಂದ ಉಂಟಾಗುವ ಪರಿಣಾಮವು ಆ ವಸ್ತುವಿನ ವೇಗ ಮತ್ತು ರಾಶಿ ಎರಡನ್ನೂ ಅವಲಂಬಿಸಿದೆ ಎಂಬುದು ಮೇಲಿನ ಉದಾಹರಣೆಗಳಿಂದ ಸ್ಪಷ್ಷವಾಗುತ್ತದೆ. ಇವೆರಡನ್ನೂ ಒಳಗೊಂಡಿರುವ ಭೌಶ ಪರಿಣಾಮವೇ ರೇಖೀಯ ಸಂವೇಗ ಅಥವಾ ಸಂವೇಗ.ವಸ್ತುವಿನ ರಾಶಿ ಮತ್ತು ವೇಗದ ಗುಣಲಬ್ಧದಿಂದ ಅದನ್ನು ಅಳೆಯುತ್ತಾರೆ. ಇದೂ ಒಂದು ಸದಿಶ ಪರಿಮಾಣ ವೇಗದ ದಿಕ್ಕಿನಲ್ಲೇ ಸಂವೇಗದ ದಿಕ್ಕೂ ಇರುತ್ತದೆ. ವಿರಾಮದಲ್ಲಿ ಇರುವ ವಸ್ತುವಿನ ವೇಗವು ಶೂನ್ಯವಷ್ಷೆ. ಆದ್ದರಿಂದ ಅದರ ಸಂವೇಗವೂ ಶೂನ್ಯ. ಸಂವೇಗದ ನಿತ್ಯತ್ವ ನಿಯಮ: 'ಬಾಹ್ಯ ಬಲಗಳಿಗೊಳಗಾಗದ ಒಂದು ವ್ಯವಸ್ಥೆಯಲ್ಲಿ ಒಟ್ಟು ರೇಖೀಯ ಸಂವೇಗ ಯಾವಾಗಲು ಒಂದೇ ಆಗಿರುತ್ತದೆ,' ಎಂದು ನಿತೃತ್ವ ನಿಯಮ ಹೇಳುತ್ತದೆ. ಈ ನಿಯಮದ ಪ್ರಕಾರದ, ಬಾಹ್ಯ ಬಲದ ಪ್ರಬಾವವಿಲ್ಲದೆ ಚಲಿಸುತ್ತಿರುವ ಎರಡು ವಸ್ತುಗಳು ಪರಸ್ಪರ ಡಿಕ್ಕಿ ಹೊಡೆದರೆ ಅವುಗಳ ಒಟ್ಟು ರೇಖೀಯ ಸಂವೇಗ ಡಿಕ್ಕಿಗೆ ಮೊದಲು ಮತ್ತು ಅನಂತರ ಒಂದೇ ಅಗಿರುತ್ತದೆ. ಗುಂಡು ಹಾರುವ ಮೊದಲು ಬಂದೂಕು ಮತ್ತು ಅದರಲ್ಲಿರುವ ಗುಂಡು ಇವುಗಳು ಒಟ್ಟು ಸಂವೇಗ ಶೂನ್ಯ ಗುಂಡು ಹಾರಿದಾಗ ಅದು ನಿಶ್ಚಿತ ಸಂವೇಗದೊಂದಿಗೆ ಚಲಿಸುತದೆ. ಬಂದೂಕು ಮತ್ತು ಗುಂಡಿನ ಒಟ್ಟು ಸಂವೇಗ ಶೂನ್ಯವಾಗುವಂತೆ ಬಂದೂಕು ಹಿನ್ನೆಗೆಯುತ್ತದೆ.ಇದನ್ನರಿತೇ ಗುಂಡು ಹೊಡೆಯುವಾಗ ಬಂದೂಕನ್ನು ಆಧರಿಸುವ ಕ್ರಮವನ್ನು ಅಳವಡಿಸಿಕೊಳ್ಳುತ್ತಾರೆ.ರಾಕೆಟ್ ಚಲನೆಯೂ ಸಂವೇಗದ ನಿತೃತ್ವ ನಿಯಮವನ್ನು ದೃಢೀಕರಿಸುತ್ತದೆ.ಇಂಧನ ಉರಿದು ಉತ್ಪತ್ತಿಯಾಗುವ ಅನಿಲಗಳು ಕೆಳಮುಖವಾಗಿ ಅತಿವೇಗದಿಂದ ಬಹಿರ್ಗಮಿಸುತ್ತವೆ. ರಾಕೆಟ್ ಮತ್ತು ಅನಿಲಗಳ ಒಟ್ಟು ಸಂವೇಗವನ್ನು ಕಾಯ್ದುಕೊಳ್ಳಲು ರಾಕೇಟ್ ಮೇಲ್ಮುಖವಾಗಿ ಚಲಿಸುತ್ತದೆ.