ಸಂಕ್ಷೇಪಣ ವೆಂದರೆ (ಲ್ಯಾಟಿನ್ ನ ಪದ ಬ್ರೆವಿಸ್, ಚಿಕ್ಕದು ಎಂಬ ಅರ್ಥವನ್ನು ನೀಡುತ್ತದೆ) ಒಂದು ಪದ ಅಥವಾ ಪದಗುಚ್ಛದ ಸಂಕ್ಷಿಪ್ತ ರೂಪ. ಎಲ್ಲ ಸಂದರ್ಭಗಳಲ್ಲಿ ಅಲ್ಲದಿದ್ದರೂ, ಸಾಮಾನ್ಯವಾಗಿ ಇದು, ಪದ ಅಥವಾ ಪದಗುಚ್ಚದಿಂದ ಒಂದು ಅಕ್ಷರ ಅಥವಾ ಅಕ್ಷರಗಳ ಗುಂಪನ್ನು ಒಳಗೊಂಡಿರುತ್ತದೆ. ಉದಾಹರಣೆಗೆ, ಸ್ವತಃ abbreviation ಪದವನ್ನು ಸಂಕ್ಷಿಪ್ತ ರೂಪದಲ್ಲಿ ಹೀಗೆ ಬರೆಯಬಹುದು: abbr. , abbrv. ಅಥವಾ abbrev.

ಖಚಿತವಾದ ವಿಶ್ಲೇಷಣೆಯಲ್ಲಿ, ಸಂಕ್ಷೇಪಣವನ್ನುಹ್ರಸ್ವತೆ ಅಥವಾ ಪ್ರಥಮಾಕ್ಷರಿಗಳ ಜೊತೆಗೆ ತಪ್ಪಾಗಿ ಗ್ರಹಿಸಬಾರದು(ಆದ್ಯಕ್ಷರ ಗುಚ್ಚಗಳನ್ನು ಒಳಗೊಂಡಂತೆ), ಇವುಗಳ ಜೊತೆಗೆ ಸಂಕ್ಷೇಪಣವು ಕೆಲವು ಶಬ್ದಾರ್ಥ ಹಾಗು ಧ್ವನಿ ವಿಜ್ಞಾನದ ಜೊತೆಗೆ ಸಾಮ್ಯತೆಗಳನ್ನು ಹಂಚಿಕೊಂಡಿದೆ. ಆದಾಗ್ಯೂ ಈ ಎಲ್ಲ ಮೂರು ಪದ ಪ್ರಯೋಗಗಳು ರೂಢಿ ಮಾತಿನಲ್ಲಿ "abbreviation"(ಸಂಕ್ಷೇಪಣ) ಎಂದೇ ನಿರೂಪಿತವಾಗುತ್ತದೆ.[]: p167 ಪದವನ್ನು ಯಾವುದೇ ವಿಧಾನದಿಂದಲಾದರೂ ಸಂಕ್ಷಿಪ್ತಗೊಳಿಸುವುದೇ ಒಂದು ಸಂಕ್ಷೇಪಣ; ಒಂದು ಪದಸಂಕೋಚನವೆಂದರೆ, ಒಟ್ಟಾಗಿ ತೆಗೆದುಕೊಂಡ ಪದದ ಎಲ್ಲ ಭಾಗಗಳನ್ನು ಕನಿಷ್ಠ ಪ್ರಮಾಣಕ್ಕೆ ತಗ್ಗಿಸುವುದು. ಒಂದು ಪದದ ಸಂಕೋಚನವು ಕೆಲವು ಅಕ್ಷರಗಳು ಅಥವಾ ಉಚ್ಚಾರಾಂಶಗಳನ್ನು ಉಪೇಕ್ಷಿಸುವುದರ ಜೊತೆಗೆ ಮೊದಲ ಅಥವಾ ಕಡೆಯ ಅಕ್ಷರಗಳನ್ನು ಅಥವಾ ಅಂಶಗಳನ್ನು ಒಟ್ಟುಗೂಡಿಸುವುದರಿಂದ ರಚನೆಯಾಗಿರುತ್ತದೆ; ಒಂದು ಸಂಕ್ಷೇಪಣವು, ಪದದ ಒಳಭಾಗದಿಂದ ಕೆಲವು ಅಂಶಗಳನ್ನು ಉಪೇಕ್ಷಿಸುವುದು ಅಥವಾ ಆ ಭಾಗವನ್ನೇ ತೆಗೆದುಹಾಕುವುದು. ಒಂದು ಪದಸಂಕೋಚನವು ಒಂದು ಸಂಕ್ಷೇಪಣವಾಗಬಹುದು ಆದರೆ ಒಂದು ಸಂಕ್ಷೇಪಣವು ಒಂದು ಪದಸಂಕೋಚನವಾಗಿರಬೇಕಾದ ಅಗತ್ಯವಿಲ್ಲ. ಆದಾಗ್ಯೂ, ಸಾಧಾರಣವಾಗಿ ಪ್ರಥಮಾಕ್ಷರಗಳನ್ನು ಸಂಕ್ಷೇಪಣಗಳ ಒಂದು ಉಪವರ್ಗವೆಂದು ಪರಿಗಣಿಸಲಾಗುತ್ತದೆ(ಕೌನ್ಸಿಲ್ ಆಫ್ ಸೈನ್ಸ್ ಎಡಿಟರ್ಸ್ ನೀಡಿದ ಉದಾಹರಣೆಗಳು).

ಇತಿಹಾಸ

ಬದಲಾಯಿಸಿ

ಉಚ್ಚಾರಿತ ಧ್ವನಿಯ ಅಕ್ಷರ ವ್ಯವಸ್ಥೆಯು ಬಳಕೆಯಲ್ಲಿರುವವರೆಗೆ ಸಂಕ್ಷೇಪಣವು ಬಳಕೆಯಲ್ಲಿತ್ತು, ಒಂದು ದೃಷ್ಟಿಯಲ್ಲಿ ವಾಸ್ತವವಾಗಿ ಇದು ಮುಂಚಿನ ಅಕ್ಷರಜ್ಞಾನದಲ್ಲಿ ಸಾಮಾನ್ಯವಾಗಿತ್ತು, ಇದರಲ್ಲಿ ಸಂಪೂರ್ಣ ಪದದ ಕಾಗುಣಿತವನ್ನು ಸಾಮಾನ್ಯವಾಗಿ ಬಿಟ್ಟುಬಿಡಲಾಗುತ್ತಿತ್ತು. ಪ್ರಥಮಾಕ್ಷರಗಳನ್ನು ಸಾಮಾನ್ಯವಾಗಿ ನಿರ್ದಿಷ್ಟ ಬಳಕೆಯಲ್ಲಿರುವಂತಹ ಪದಗಳನ್ನು ನಿರೂಪಿಸಲು ಬಳಸಲಾಗುತ್ತಿತ್ತು. ಕ್ಲ್ಯಾಸಿಕಲ್ ಗ್ರೀಸ್ ಹಾಗು ರೋಮ್ ನಲ್ಲಿ, ಪದಗಳನ್ನು ಏಕೈಕ ಅಕ್ಷರಕ್ಕೆ ಸಂಕೋಚನಗೊಳಿಸುವುದು ರೂಢಿಯಲ್ಲಿತ್ತು, ಆದರೆ ಇದು ಉಪೇಕ್ಷೆಯಿಂದ ಮಾತ್ರ ಉಂಟಾಗುತ್ತಿತ್ತು.

ಐತಿಹಾಸಿಕವಾಗಿ, ಅಕ್ಷರಜ್ಞಾನದ ಬೆಳವಣಿಗೆಯೊಂದಿಗೆ, ಕೆಲವೊಂದು ಬಾರಿ ಸಂಕ್ಷೇಪಣದೆಡೆಗೆ ಒಂದು ಬಗೆ ಒಲವು ಹುಟ್ಟಿಕೊಂಡಿತು. ಕಳೆದ 15ನೇ ಶತಮಾನದಿಂದ 17ನೇ ಶತಮಾನದ ನಡುವೆ ಪ್ರೋತ್ಸಾಹಕ್ಕೆ ಒಳಪಟ್ಟ ಇಂಗ್ಲಿಷ್ ಭಾಷೆಯು ಸಂಕ್ಷೇಪಣದ ಬಳಕೆಯಲ್ಲಿ ಇಂತಹ ಬೆಳವಣಿಗೆಯನ್ನು ಕಂಡಿತು.[] ಮೊದಲಿಗೆ, ಸಂಕ್ಷೇಪಣಗಳನ್ನು ಕೆಲವೊಂದು ಬಾರಿ ಕೇವಲ ಪೂರ್ಣವಿರಾಮ ಚಿಹ್ನೆಗಳ್ಳದೆ ಹಲವಾರು ಸ್ವರ ಸಂಕೇತಗಳ ಮೂಲಕ ನಿರೂಪಿಸಲಾಗುತ್ತಿತ್ತು. ಉದಾಹರಣಗೆ, ನಿರ್ದಿಷ್ಟ ಧ್ವನಿಮಾ ಗುಂಪುಗಳಾದ "er"ಗಳನ್ನು ಪದಗಳಿಂದ ಕೈಬಿಡಲಾಗುವುದರ ಜೊತೆಗೆ ɔಯಿಂದ ಅದರ ಸ್ಥಾನವನ್ನು ಭರ್ತಿ ಮಾಡಲಾಯಿತು, ಉದಾಹರಣೆಗೆ "master" ಬದಲಿಗೆ "mastɔ" ಅಥವಾ "exacerbate" ಬದಲಿಗೆ exacɔbate. ಇದು ಒಂದು ಕ್ಷುಲ್ಲಕ ಸಂಗತಿಯೆಂದು ಕಂಡುಬಂದರೂ ಸಹ, ಶೈಕ್ಷಣಿಕ ಪುಸ್ತಕಗಳನ್ನು ಕೈಯಿಂದ ಬರೆಯುತ್ತಿದ್ದ ಜನರು ಬರವಣಿಗೆಯ ಅವಧಿಯನ್ನು ಕಡಿಮೆಗೊಳಿಸಲು ಮಾಡಿದ ಪ್ರಯತ್ನದ ಒಂದು ಲಕ್ಷಣವಾಗಿತ್ತು. ಆಕ್ಸ್ಫರ್ಡ್ ಯುನಿವರ್ಸಿಟಿ ರಿಜಿಸ್ಟರ್, 1503ರ ಒಂದು ಉದಾಹರಣೆ:

Mastɔ subwardenɔ y ɔmēde me to you. And wherɔ y wrot to you the last wyke that y trouyde itt good to differrɔ thelectionɔ ovɔ to quīdenaɔ tinitatis y have be thougħt me synɔ that itt woll be thenɔ a bowte mydsomɔ.

ಕಳೆದ 1830ರಲ್ಲಿ ಯುನೈಟೆಡ್ ಸ್ಟೇಟ್ಸ್ ನ ಬಾಸ್ಟನ್ ನಲ್ಲಿ ಪ್ರಾರಂಭಗೊಂಡು, ಸಂಕ್ಷೇಪಣವು ಒಂದು ಒಲವಿನ ವಿಷಯವಾಯಿತು. ಉದಾಹರಣೆಗೆ, ಭಾಷಾಶಾಸ್ತ್ರದ ಅಧ್ಯಯನದ ಸಿದ್ಧಾಂತವು ಶೈಕ್ಷಣಿಕ ಬ್ರಿಟನ್ ನಲ್ಲಿ ಬೆಳವಣಿಗೆಯಾದ ಸಂದರ್ಭದಲ್ಲಿ, ಪದವನ್ನು ಸಂಕ್ಷಿಪ್ತಗೊಳಿಸುವುದು ಹೊಸ ಶೈಲಿಯಾಯಿತು. "ಆಧುನಿಕ ವ್ಯುತ್ಪತ್ತಿಶಾಸ್ತ್ರದ ಜನಕ" J. R. R. ಟೋಲ್ಕಿನ್ ಹಾಗು ಅವರ ಸ್ನೇಹಿತ C. S. ಲೆವಿಸ್, ಹಾಗು ಇಂಕ್ಲಿಂಗ್ಸ್ ಎಂದು ಕರೆಯಲ್ಪಡುತ್ತಿದ್ದ ಆಕ್ಸ್ಫರ್ಡ್ ಸಾಹಿತ್ಯಕ ಗುಂಪಿನ ಇತರ ಸದಸ್ಯರು ಹೆಸರುಗಳಲ್ಲಿ ಸಂಕ್ಷೇಪಣದ ಬಳಕೆಗೆ ಕೆಲವೊಂದು ಬಾರಿ ಪ್ರಯತ್ನಿಸಿದ್ದರೆಂದು ಉಲ್ಲೇಖಿಸಲಾಗುತ್ತದೆ. ಅಂತೆಯೇ, ಬಾಸ್ಟನ್ ನಲ್ಲಿ ಒಂದು ಶತಮಾನಕ್ಕೆ ಮುಂಚೆ, ಸಂಕ್ಷೇಪಣದ ಬಗ್ಗೆ ಒಂದು ಒಲವು ಪ್ರಾರಂಭವಾಗುವುದರ ಜೊತೆಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಸಂಪೂರ್ಣವಾಗಿ ಹರಡಿಕೊಂಡಿತು. ವಿಶ್ವವ್ಯಾಪಕವಾದ ಜನಪ್ರಿಯ ಪದ OKಯನ್ನು ಸಾಧಾರಣವಾಗಿ ಇದರ ಪ್ರಭಾವಕ್ಕೆ ಒಳಪಟ್ಟ ಒಂದು ಉಳಿಕೆಯೆಂದು ಮನ್ನಣೆ ಮಾಡಲಾಗುತ್ತದೆ.[][]

ವಿಶ್ವ ಯುದ್ಧ IIರ ನಂತರ, ಬ್ರಿಟಿಷರು ಪೂರ್ಣ ವಿರಾಮದ ಹಾಗು ಇತರ ವಿರಾಮ ಚಿಹ್ನೆಗಳ ಬಳಕೆಯನ್ನು ಕಡೆ ಪಕ್ಷ ಅರೆ-ವ್ಯವಸ್ಥಿತ ಬರವಣಿಗೆಗಳಲ್ಲಿ ಬಹಳಷ್ಟು ಕಡಿಮೆ ಮಾಡಿದರು, ಈ ನಡುವೆ ಅಮೆರಿಕನ್ನರು ಇತ್ತೀಚಿನವರೆಗೂ ಇದರ ಬಳಕೆಯನ್ನು ಮಾಡುತ್ತಾರೆ ಜೊತೆಗೆ ಇನ್ನೂ ಕೂಡ ಬ್ರಿಟನ್ನರಿಗಿಂತ ಹೆಚ್ಚಾಗಿ ಬಳಕೆಯನ್ನು ಮಾಡುತ್ತಾರೆ. ಅವರ ಅಮೆರಿಕನ್ ಸಹಚರರು ಪರಿಗಣಿಸಿದ ಸಂಪೂರ್ಣವಾಗಿ ಆಸಕ್ತಿಕರವಾದ ಅತ್ಯುತ್ತಮ ಉದಾಹರಣೆಯೆಂದರೆ, ಒಂದು ಬ್ರಿಟಿಶ್ ಬೇಹುಗಾರಿಕೆ ಸಂಸ್ಥೆಯಲ್ಲಿ ಬಳಕೆ ಮಾಡಲಾದ ಆಂತರಿಕ ಅಲ್ಪವಿರಾಮ "ಸ್ಪೆಷಲ್ ಆಪರೆಷನ್ಸ್ ಎಕ್ಸಿಕ್ಯೂಟಿವ್" — "S.O.,E" — ಇದರ ಉಲ್ಲೇಖವನ್ನು 1960ರ ನಂತರ ಬರೆಯಲಾದ ಇತಿಹಾಸದಲ್ಲಿ ಕಂಡುಬರುವುದಿಲ್ಲ.

ಆದರೆ ಅದಕ್ಕೆ ಮುಂಚೆ, ಹಲವು ಬ್ರಿಟನ್ನರು ಈ ಫ್ರೆಂಚ್ ರೂಪವನ್ನು ಬಳಕೆ ಮಾಡುವಲ್ಲಿ ಹೆಚ್ಚು ಜಾಗರೂಕರಾಗಿದ್ದರು. ಫ್ರೆಂಚ್ ಭಾಷೆಯಲ್ಲಿ, ಸಂಕ್ಷೇಪಣದ ಕಡೆ ಪದವು ಅದರ ಪೂರ್ವ ಪದ ಅಲ್ಲದಿದ್ದದರೆ , ಆಗ ಸಂಕ್ಷೇಪಣವು ಕೇವಲ ಪೂರ್ಣವಿರಾಮ ಚಿಹ್ನೆಯೊಂದಿಗೆ ಕೊನೆಗೊಳ್ಳುತ್ತದೆ: "M.", "monsieur"ನ ಸಂಕ್ಷಿಪ್ತ ರೂಪವಾದರೆ, "Mme" ಎನ್ನುವುದು "madame"ನ ಸಂಕ್ಷಿಪ್ತ ರೂಪ. ಇತರ ಹಲವು ವಿಭಿನ್ನ-ಮಾರ್ಗದ ಭಾಷಾ ಸಂಗ್ರಹಣೆಯಲ್ಲಿರುವಂತೆ, ಹಲವು ಬ್ರಿಟನ್ನರು ಕೂಡಲೇ ಇದನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಈ ನಿಯಮವನ್ನು ಸ್ವತಃ ತಾವೇ ಬಳಕೆ ಮಾಡಿದರು, ಈ ನಡುವೆ ಅಮೆರಿಕನ್ನರು ಒಂದು ಸರಳವಾದ ನಿಯಮವನ್ನು ಅಳವಡಿಸಿಕೊಂಡು ಅದನ್ನು ಅತ್ಯಂತ ಕಟ್ಟುನಿಟ್ಟಾಗಿ ಬಳಕೆ ಮಾಡಿಕೊಂಡರು.[ಸೂಕ್ತ ಉಲ್ಲೇಖನ ಬೇಕು]

ಆದಾಗ್ಯೂ, ವರ್ಷಾಂತರದಲ್ಲಿ, ಕೆಲವು ಮಾರ್ಗದರ್ಶನ ಶೈಲಿಯಲ್ಲಿ ರೂಢಿಯ ಕೊರತೆಯಿಂದಾಗಿ, ಯಾವ ಎರಡು-ಪದದ ಸಂಕ್ಷೇಪಣಗಳನ್ನು ಸಂಕೀರ್ಣವಾಕ್ಯಗಳೊಂದಿಗೆ ಸಂಕ್ಷಿಪ್ತಗೊಳಿಸಬೇಕು ಹಾಗು ಯಾವುದನ್ನು ಸಂಕ್ಷಿಪ್ತಗೊಳಿಸಬಾರದು ಎಂಬುದನ್ನು ನಿರ್ಧರಿಸುವುದು ಕಷ್ಟವಾಗಿದೆ. U.S. ಮಾಧ್ಯಮವು, ಯುನೈಟೆಡ್ ಸ್ಟೇಟ್ಸ್ ನಂತೆ(U.S.) ಎರಡು-ಪದದ ಸಂಕ್ಷೇಪಣಗಳಲ್ಲಿ ಪೂರ್ಣವಿರಾಮ ಚಿಹ್ನೆಗಳ ಬಳಕೆಗೆ ಒಲವನ್ನು ತೋರಿತು, ಆದರೆ ಪರ್ಸನಲ್ ಕಂಪ್ಯೂಟರ್ (PC) ಅಥವಾ ಟೆಲಿವಿಷನ್ (TV)ಎಂಬ ಪದಗಳಲ್ಲಿ ಈ ಚಿಹ್ನೆಗಳು ಬಳಕೆಯಾಗಲಿಲ್ಲ. ಹಲವು ಬ್ರಿಟೀಷ್ ಪ್ರಕಾಶನಗಳು, ಸಂಕ್ಷೇಪಣಗಳಲ್ಲಿ ಕ್ರಮೇಣವಾಗಿ ಪೂರ್ಣವಿರಾಮ ಚಿಹ್ನೆಗಳ ಸಂಪೂರ್ಣ ಬಳಕೆಯನ್ನು ನಿಲ್ಲಿಸಿತು.

ಬೆರಳಚ್ಚು ಮಾಡಲಾದಂತಹ ವಿಷಯಗಳಲ್ಲಿ ವಿರಾಮಚಿಹ್ನೆಗಳ ಬಳಕೆಯ ಪ್ರಮಾಣದಲ್ಲಿ ಇಳಿಕೆಯು 1960 ಹಾಗು 1970ರಲ್ಲಿ ಹಲವು ಕಾರ್ಬನ್-ಫಿಲಂ ರಿಬ್ಬನ್ ಗಳ ಬಳಕೆದಾರರಿಗೆ ಆರ್ಥಿಕ ದೃಷ್ಟಿಯಿಂದ ಒಳ್ಳೆಯದೆನಿಸಿತು. ಏಕೆಂದರೆ, ಒಂದು ದೊಡ್ದಕ್ಷರಕ್ಕೆ ಬೇಕಾಗುವ ಅದೇ ಉದ್ದದ ಪುನರ್ಬಳಕೆ ಮಾಡಲಾಗದಂತಹ ದುಬಾರಿ ರಿಬ್ಬನ್ ನಷ್ಟೇ ಉದ್ದವು ಒಂದು ಪೂರ್ಣವಿರಾಮ ಚಿಹ್ನೆ ಅಥವಾ ಅಲ್ಪವಿರಾಮ ಚಿಹ್ನೆಗೆ ಬೇಕಾಗುತ್ತಿತ್ತು.

ಕಳೆದ 1990ರ ಸುಮಾರಿಗೆ ಮೊಬೈಲ್ ಫೋನುಗಳು ಹಾಗು ದಿ ಇಂಟರ್ನೆಟ್(ಅಂತರಜಾಲ)ನಂತಹ ಎಲೆಕ್ಟ್ರಾನಿಕ್ ಸಾಧನಗಳ ವ್ಯಾಪಕ ಬಳಕೆಯು, ಆಡುಮಾತಿನ ಸಂಕ್ಷೇಪಣದ ಬಳಕೆಯ ಅಧಿಕತೆಗೆ ಅವಕಾಶ ಮಾಡಿಕೊಟ್ಟಿತು. ಇದು ವ್ಯಾಪಕವಾಗಿ ಮೂಲ ಸಾಧನ ಸೇವೆಗಳಾದ ಇನ್ಸ್ಟಂಟ್- ಹಾಗು ಟೆಕ್ಸ್ಟ್ ಮೆಸೇಜಿಂಗ್ ನ ಅಧಿಕಗೊಂಡ ಜನಪ್ರಿಯತೆಯ ಕಾರಣವಾಗಿತ್ತು. ಉದಾಹರಣೆಗೆ SMS ಹೆಚ್ಚೆಂದರೆ 160 ಅಕ್ಷರ ಸಂಕೇತಗಳ ಸಂದೇಶ ನೀಳತೆಗೆ ಸಹಾಯಕವಾಗಿದೆ (GSM 03.38 ಅಕ್ಷರ ಸಂಕೇತಗಳ ಬಳಕೆ). ಈ ಸಂಕ್ಷಿಪ್ತತೆಯು ಒಂದು ಅನೌಪಚಾರಿಕ ಸಂಕ್ಷೇಪಣ ವ್ಯವಸ್ಥೆಯ ಹುಟ್ಟಿಗೆ ಕಾರಣವಾಯಿತು, ಇದನ್ನು ಕೆಲವೊಂದು ಬಾರಿ ಟೆಕ್ಸ್ಟೀಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಒಂದು ವಿಶಿಷ್ಟ SMSನ 10%ನಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷಿಪ್ತಗೊಳಿಸಲಾಗುತ್ತದೆ.[] ತೀರ ಇತ್ತೀಚಿಗೆ, ಒಂದು ಸಾಮಾಜಿಕ ನೆಟ್ವರ್ಕ್ ಸೇವೆಯಾದ ಟ್ವಿಟರ್, 140 ಅಕ್ಷರ ಸಂಕೇತಗಳಿಗೆ ಸೀಮಿತವಾದ ಸಂದೇಶದಲ್ಲಿ ಸಂಕ್ಷೇಪಣದ ಬಳಕೆಗೆ ಚಾಲನೆ ನೀಡಿತು.

ಇಂಗ್ಲಿಷ್ ಭಾಷೆಯಲ್ಲಿರುವ ಸಾಂಪ್ರದಾಯಿಕ ಶೈಲಿ

ಬದಲಾಯಿಸಿ

ಆಧುನಿಕ ಇಂಗ್ಲಿಷ್ ಭಾಷೆಯಲ್ಲಿ ಸಂಕ್ಷೇಪಣಗಳಿಗೆ ಹಲವಾರು ಮಾದರಿಗಳಿವೆ ಹಾಗು ಇವುಗಳ ಆಯ್ಕೆಯಲ್ಲಿ ಗೊಂದಲ ಉಂಟಾಗಬಹುದು. ಸಾರ್ವತ್ರಿಕವಾಗಿ ಅಂಗೀಕಾರಗೊಂಡ ಒಂದು ನಿಯಮವೆಂದರೆ ಒಬ್ಬರು ಇದರ ಬಗ್ಗೆ ಸ್ಥಿರತೆ ಯನ್ನು ಹೊಂದಿರುವುದರ ಜೊತೆಗೆ ಇದನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಪ್ರಕಾಶಕರು ಒಂದು ಮಾದರಿ ಶೈಲಿಯ ಬಗ್ಗೆ ತಮ್ಮ ಒಲವನ್ನು ತೋರಿದರು. ಉದ್ಭವಿಸುವ ಪ್ರಶ್ನೆಗಳು ಕೆಳ ಕಂಡುಬರುವ ಉಪವರ್ಗಗಳಲ್ಲೂ ಕಂಡು ಬರುತ್ತದೆ.

ಸಣ್ಣ ಅಕ್ಷರಗಳು

ಬದಲಾಯಿಸಿ

ಮೂಲ ಪದವು ದೊಡ್ದಕ್ಷರವಾಗಿ ಬರೆಯಲ್ಪಟ್ಟಿದ್ದರೆ, ಆಗ ಸಂಕ್ಷೇಪಣಗೊಂಡ ಪದದ ಮೊದಲ ಅಕ್ಷರವನ್ನು ದೊಡ್ಡಕ್ಷರದಲ್ಲೇ ಉಳಿಸಿಕೊಳ್ಳಬೇಕಾಗುತ್ತದೆ, ಉದಾಹರಣೆಗೆ, Leviticus Lev. ಎಂದಾಗ ಬೇಕಾಗುತ್ತದೆ. ಸಂಕ್ಷಿಪ್ತಗೊಳ್ಳುವ ಪದಗಳು ಸಣ್ಣ ಅಕ್ಷರದಲ್ಲಿ ಬರೆಯಲಾಗಿದ್ದರೆ, ಅಂತಹ ಕಡೆ ದೊಡ್ಡಕ್ಷರದ ಬಳಕೆಯ ಅಗತ್ಯವಿಲ್ಲ.

ಪೀರಿಯಡ್ಸ್ (ಪೂರ್ಣವಿರಾಮ ಚಿಹ್ನೆಗಳು) ಹಾಗು ಪದಗಳ ಅಂತರ

ಬದಲಾಯಿಸಿ

ಒಂದು ಪೀರಿಯಡ್(ಪೂರ್ಣವಿರಾಮ ಚಿಹ್ನೆ)ನ್ನು ಕೆಲವೊಂದು ಬಾರಿ ಒಂದು ಪದವು ಸಂಕ್ಷಿಪ್ತಗೊಂಡ ನಂತರ ಬರೆಯಲಾಗುತ್ತದೆ, ಆದರೆ ಕೆಲವು ವಿನಾಯಿತಿಗಳಿವೆ ಹಾಗು ಇದನ್ನು ಯಾವ ಸಂದರ್ಭದಲ್ಲಿ ಬಳಸಬೇಕೆಂಬುದಕ್ಕೆ ಸಾಧಾರಣವಾಗಿ ಒಂದು ಬಹುಮತಾಭಿಪ್ರಾಯದ ಕೊರತೆಯಿದೆ. ಒಂದು ಸಂಕ್ಷೇಪಣಕ್ಕೆ (ಒಂದು ಪದದ ಅಂತಿಮ ಭಾಗವನ್ನು ಉಪೇಕ್ಷಿಸಿ ಪದವನ್ನು ಚಿಕ್ಕದಾಗಿಸುವುದು)- ಒಂದು ಪೂರ್ಣವಿರಾಮದ ಅಗತ್ಯವಿರುತ್ತದೆ (ಅಥವಾ ಫುಲ್ ಸ್ಟಾಪ್ ಅಥವಾ ಪೂರ್ಣವಿರಾಮ) - ಹಾಗು ಒಂದು ಪದಸಂಕೋಚನಕ್ಕೆ (ಒಂದು ಪದ ಅಥವಾ ಸಮಾಸಪದದ ಮಧ್ಯ ಭಾಗವನ್ನು ಉಪೇಕ್ಷಿಸಿ ಪದವನ್ನು ಚಿಕ್ಕದಾಗಿಸುವುದು) - ಒಂದು ಫುಲ್ ಪಾಯಿಂಟ್ ಅಥವಾ ಪೂರ್ಣವಿರಾಮ ಚಿಹ್ನೆಯ ಅಗತ್ಯವಿರುವುದಿಲ್ಲ. ಇವೆರಡರ ನಡುವೆ ನಿರ್ದಿಷ್ಟವಾದ ವ್ಯತ್ಯಾಸದ ಬಗ್ಗೆ ಕೆಲವು ಗೊಂದಲಗಳಿವೆ. ಅಮೆರಿಕನ್ ಇಂಗ್ಲಿಷ್ ಬಳಕೆಯಲ್ಲಿ ಈ ವ್ಯತ್ಯಾಸಕ್ಕೆ ಅಷ್ಟೊಂದು ಕಟ್ಟುನಿಟ್ಟಿಲ್ಲ ಹಾಗು ಇದು ಒಂದು ಪದಸಂಕೋಚನವನ್ನು ಪೂರ್ಣಗೊಳಿಸುತ್ತದೆ, ಉದಾಹರಣೆಗೆ "Junior" ಎಂಬ ಪದದ ಸಂಕ್ಷಿಪ್ತ ರೂಪವು Jr. ಎಂಬುದರ ಜೊತೆಗೆ ಒಂದು ಪೂರ್ಣವಿರಾಮ ಚಿಹ್ನೆಯನ್ನು ಹೊಂದಿರುತ್ತದೆ.

ಒಂದೇ ಪದದ ಅಕ್ಷರಗಳ ನಡುವೆ ಒಂದು ಪೂರ್ಣವಿರಾಮ ಚಿಹ್ನೆಯಿರುವುದಿಲ್ಲ(ಫುಲ್ ಸ್ಟಾಪ್). ಉದಾಹರಣೆಗೆ, "kilometer" ಎಂಬ ಪದದ ಸಂಕ್ಷಿಪ್ತ ರೂಪವು km ಹೊರತು k.m. ಅಲ್ಲ. ಆದಾಗ್ಯೂ, "miles per hour" ಪದಗಳನ್ನು ಪ್ರಥಮಾಕ್ಷರಗಳೊಂದಿಗೆ ಸಂಕ್ಷಿಪ್ತಗೊಳಿಸಬಹುದು m.p.h. ಅಥವಾ, ಹೆಚ್ಚಾಗಿ ಬಳಕೆಯಲ್ಲಿರುವ mph ಮೂಲಕ ಸೂಚಿಸಬಹುದು.

ಬ್ರಿಟೀಷ್ ಇಂಗ್ಲಿಷ್ ನಲ್ಲಿ, ಹಾರ್ಟ್'ಸ್ ರೂಲ್ಸ್ ನ ಪ್ರಕಾರ, ಸಾಧಾರಣವಾದ ನಿಯಮವೆಂದರೆ, ಸಂಕ್ಷೇಪಣಗಳು ಒಂದು ಫುಲ್ ಸ್ಟಾಪ್ (ಪೂರ್ಣವಿರಾಮ ಚಿಹ್ನೆ)ನೊಂದಿಗೆ ಅಂತ್ಯಗೊಳ್ಳುತ್ತವೆ, ಆದರೆ ಪದಸಂಕೋಚನಗಳು ಈ ರೀತಿಯಾಗಿ ಅಂತ್ಯಗೊಳ್ಳುವುದಿಲ್ಲ.[]: p167 

ಉದಾಹರಣೆ ವಿಭಾಗ ಹ್ರಸ್ವ ರೂಪ ಮ‌ೂಲ
Doctor ಸಂಕೋಚನ Dr D–r
Professor ಸಂಕ್ಷೇಪಣ Prof. Prof...
The Reverend ಸಂಕೋಚನ(ಅಥವಾ ಸಂಕ್ಷೇಪಣ ) Revd (or Rev.) Rev–d
The Right Honourable ಸಂಕೋಚನ ಹಾಗು ಸಂಕ್ಷೇಪಣ Rt Hon. R–t Hon...

ಅಮೆರಿಕನ್ ಇಂಗ್ಲಿಷ್ ನಲ್ಲಿ, ಸಂಕ್ಷೇಪಣವನ್ನು ಒಂದು ಪದವಾಗಿ ಉಲ್ಲೇಖಿಸುವಾಗ ಮಾತ್ರ ಪೂರ್ಣವಿರಾಮ ಚಿಹ್ನೆಯನ್ನು ಸಾಮಾನ್ಯವಾಗಿ ಸೇರಿಸಲಾಗುತ್ತದೆ, ಆದರೆ ಕೆಲವು ಅಮೆರಿಕನ್ ಬರಹಗಾರರು ಇಲ್ಲೂ ಸಹ ಪೂರ್ಣವಿರಾಮ ಚಿಹ್ನೆಯನ್ನು ಬಳಕೆ ಮಾಡುವುದಿಲ್ಲ. ಕೆಲವೊಂದು ಬಾರಿ, ಪೂರ್ಣವಿರಾಮ ಚಿಹ್ನೆಗಳನ್ನು ಕೆಲವು ಆದ್ಯಕ್ಷರ ಗುಚ್ಛಗಳಲ್ಲಿ(ಇನಿಷಿಯಾಲಿಸಂಸ್) ಬಳಸಲಾಗುತ್ತದೆ, ಆದರೆ ಎಲ್ಲದಕ್ಕೂ ಅಲ್ಲ; ಒಂದು ಗಮನಾರ್ಹ ಉದಾಹರಣೆಯೆಂದರೆ, ಅಮೆರಿಕನ್ ಇಂಗ್ಲಿಷ್ ನಲ್ಲಿ United States , European Union , ಹಾಗು United Nations ಪದಗಳನ್ನು ಬರೆಯಲು U.S., EU , ಹಾಗು UN ಎಂದು ಕ್ರಮವಾಗಿ ಬರೆಯಲಾಗುತ್ತದೆ.

ಒಂದು ತೃತೀಯ ಮಟ್ಟವು, ಎಲ್ಲ ಸಂಕ್ಷೇಪಣಗಳಿಂದ ಪೂರ್ಣವಿರಾಮ ಚಿಹ್ನೆಗಳನ್ನು ಉಪೇಕ್ಷಿಸುತ್ತದೆ ("Saint" ಹಾಗು "Street" ಎರಡೂ ಪದಗಳು "St" ಎಂದೇ ಸಂಕ್ಷಿಪ್ತಗೊಳ್ಳುತ್ತವೆ). U.S.ನ ಮ್ಯಾನ್ಯುಅಲ್ ಆನ್ ಯುನಿಫಾರ್ಮ್ ಟ್ರ್ಯಾಫಿಕ್ ಕಂಟ್ರೋಲ್ ಡಿವೈಸಸ್, ಉದ್ದಿಷ್ಟ ಸ್ಥಳದ ಹೆಸರನ್ನು ಒಳಗೊಂಡ ಪ್ರಧಾನ ದಿಕ್ಕನ್ನು ಸೂಚಿಸುವ ಹೊರತಾಗಿ ರಸ್ತೆಯ ನಾಮಫಲಕಗಳ ಮೇಲೆ ಸಂಕ್ಷೇಪಣಗಳನ್ನು ಬಳಸಬಾರದೆಂದು ಸಲಹೆ ನೀಡುತ್ತದೆ. (ಉದಾಹರಣೆಗೆ, "Northwest Blvd" , "W. Jefferson" , ಹಾಗು "PED XING" ಎಲ್ಲವೂ ಈ ಶಿಫಾರಸನ್ನು ಅನುಸರಿಸುತ್ತವೆ.)

ಪ್ರಥಮಾಕ್ಷರಗಳನ್ನು ಮೂಲವಾಗಿ ದೊಡ್ದಕ್ಷರದಲ್ಲಿ ಬರೆಯಲಾಗುತ್ತಿತ್ತು (ಪೂರ್ಣವಿರಾಮ ಚಿಹ್ನೆಗಳನ್ನು ಬಳಸಿ ಅಥವಾ ಬಳಕೆ ಮಾಡದೆ). ಆದರೆ ಸಾರ್ವತ್ರಿಕ ಪದಗಳಾಗಿ ಶಬ್ದಕೋಶವನ್ನು ಪ್ರವೇಶಿಸಿದ ನಂತರ, ದೊಡ್ಡಕ್ಷರದಲ್ಲಾಗಲಿ ಅಥವಾ ಯಾವುದೇ ಪೂರ್ಣವಿರಾಮ ಚಿಹ್ನೆಗಳನ್ನು ಬಳಸಿಕೊಂಡು ಸಂಕ್ಷಿಪ್ತಗೊಳಿಸಲಾಗುತ್ತಿಲ್ಲ. ಉದಾಹರಣೆಗೆ sonar, radar, lidar, laser, snafu, ಹಾಗು scuba.

ಒಂದು ಪದಗುಚ್ಚದಲ್ಲಿ ಬರುವ ಪದದಲ್ಲಿನ ಒಂದೇ ಅಕ್ಷರ ಸಂಕ್ಷೇಪಣಗಳ ನಡುವೆ ಪದಗಳ ಅಂತರವನ್ನು ಸಾಧಾರಣವಾಗಿ ಬಳಕೆ ಮಾಡಲಾಗುವುದಿಲ್ಲ, ಹೀಗಾಗಿ "U. S." ಎಂದು ಬಳಕೆಯಾಗಿದ್ದು ಎಲ್ಲಿಯೂ ಕಂಡುಬಂದಿಲ್ಲ.

ಒಂದು ಸಂಕ್ಷೇಪಣವು ಒಂದು ವಾಕ್ಯದ ಅಂತಿಮದಲ್ಲಿ ಕಂಡುಬಂದರೆ, ಅಲ್ಲಿ ಕೇವಲ ಒಂದೇ ಒಂದು ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು: ಯುನೈಟೆಡ್ ಸ್ಟೇಟ್ಸ್ ನ ರಾಜಧಾನಿ ವಾಶಿಂಗ್ಟನ್, D.C.

ಬಹುವಚನದ ರೂಪಗಳು

ಬದಲಾಯಿಸಿ

ಒಂದು ಸಂಕ್ಷೇಪಣದ ಬಹುವಚನವನ್ನು ರೂಪಿಸಲು, ಒಂದು ಅಂಕಿ, ಅಥವಾ ಒಂದು ದೊಡ್ಡಕ್ಷರವನ್ನು, ಒಂದು ನಾಮಪದವಾಗಿ ಬಳಕೆ ಮಾಡಲಾಗುತ್ತದೆ, ಕೇವಲ ಒಂದು ಸಣ್ಣ ಅಕ್ಷರದ s ನ್ನು ಕೊನೆಯಲ್ಲಿ ಸೇರಿಸಬೇಕು.

  • A group of MPs
  • The roaring '20s
  • Mind your Ps and Qs

ಸಂಕ್ಷೇಪಣದ ಬಹುವಚನ ರೂಪದಲ್ಲಿ ಒಂದು ಏಕಮಾನದ ಅಳತೆಯನ್ನು ಸೂಚಿಸಲು, ಅದೇ ರೂಪವನ್ನು ಏಕವಚನವಾಗಿ ಬಳಸಲಾಗುತ್ತದೆ.

  • 1 lb. ಅಥವಾ 20 lb.
  • 1 km. ಅಥವಾ 16 km.
  • 1 min. ಅಥವಾ 45 min.

ಒಂದು ಸಂಕ್ಷೇಪಣವು ಒಂದಕ್ಕಿಂತ ಹೆಚ್ಚು ಪೂರ್ಣವಿರಾಮಗಳನ್ನು ಹೊಂದಿದ್ದರೆ, ಅಂತಿಮ ಪದದ ನಂತರ s ನ್ನು ಸೇರಿಸಬಹುದು.[]: p175 

  • Ph.D.s
  • M.Phil.s
  • the d.t.s

ಆದಾಗ್ಯೂ, ಯಾವುದೇ ಮುದ್ರಣಾಲಯದ ಶೈಲಿ ಅಥವಾ ಸ್ಥಿರತೆಯ ಅಗತ್ಯಕ್ಕೆ ಒಳಪಟ್ಟಿದ್ದರೆ, ಇದೆ ಬಹುವಚನಗಳನ್ನು ಕಡಿಮೆ ವಿಧ್ಯುಕ್ತತೆಯೊಂದಿಗೆ ನಿರೂಪಿಸಬಹುದು ಉದಾಹರಣೆಗೆ:

  • PhDs
  • MPhils
  • the DTs (ಡೆಲಿರಿಅಂ ಟ್ರೀಮೆನ್ಸ್ ). (ಬರಹಗಾರರು ಹಾಗು ಸಂಪಾದಕರಿಗೆ ಈ ರೂಪವನ್ನು ನ್ಯೂ ಆಕ್ಸ್ಫರ್ಡ್ ಡಿಕ್ಷನರಿಯಲ್ಲಿ ಶಿಫಾರಸು ಮಾಡಲಾಗಿದೆ.)

ಸ್ಫಷ್ಟತೆಯ ಅಗತ್ಯವನ್ನು ಬೇಡುವ ಅಪರೂಪದ ಸಂದರ್ಭಗಳಲ್ಲಿ ಒಂದು ಅಪಾಸ್ಟ್ರಫಿಯನ್ನು (ಅಕ್ಷರ ಯಾ ಸಂಖ್ಯೆಗಳ ಲೋಪಚಿಹ್ನೆ)ಬಳಸಬಹುದು, ಉದಾಹರಣೆಗೆ ಅಕ್ಷರಗಳು ಅಥವಾ ಸಂಕೇತಗಳು, ವಸ್ತುಗಳಾಗಿ ಸೂಚಿತವಾಗುವಾಗ ಇದರ ಬಳಕೆ ಮಾಡಬಹುದು.[]: p.66 

  • The x's of the equation
  • Dot the i's and cross the t's

ಆದಾಗ್ಯೂ, ಪದಗಳು ಇಟ್ಯಾಲಿಕ್ಸ್ ಅಥವಾ ಕ್ವೋಟ್ಸ್ ನೊಂದಿಗೆ ರಚನೆಯಾಗಿದ್ದರೆ ಅಂತಹ ಸಂದರ್ಭದಲ್ಲಿ ಅಪಾಸ್ಟ್ರಫಿಯನ್ನು ಬಿಟ್ಟುಬಿಡಬಹುದು:

  • The x s of the equation
  • Dot the 'i's and cross the 't's

ಲ್ಯಾಟಿನ್ ನಲ್ಲಿ, ಯುರೋಪಿಯನ್ ಭಾಷೆಗಳ ವ್ಯುತ್ಪನ್ನ ರೂಪಗಳಲ್ಲಿ ಮುಂದುವರಿದಂತೆ ಹಾಗು ಇಂಗ್ಲಿಷ್ ಭಾಷೆಯಲ್ಲಿರುವಂತೆ, ಏಕ ಅಕ್ಷರದ ಸಂಕ್ಷೇಪಣಗಳು, ಟಿಪ್ಪಣಿಗಳಲ್ಲಿ ಜೋಡಿ ಅಕ್ಷರಗಳ ಬಹುವಚನ ಸ್ವರೂಪವನ್ನು ಹೊಂದಿರುತ್ತವೆ. ಇದರಲ್ಲಿ ಹೆಚ್ಚಿನವು ಬರವಣಿಗೆ ಹಾಗು ಪ್ರಕಟಣೆಯ ಜೊತೆ ಸಂಬಂಧವನ್ನು ಹೊಂದಿದೆ. ಕೆಲವು ದೊಡ್ಡ ಸಂಕ್ಷಿಪ್ತ ರೂಪಗಳೂ ಸಹ ಇದನ್ನು ಬಳಸುತ್ತವೆ.

ಏಕ ಸಂಕ್ಷೇಪಣ ಏಕ ಪದ ಬಹು ಸಂಕ್ಷೇಪಣ ಬಹುವಚನ ಪದ ಶಿಸ್ತು
D didot dd. didots ಮುದ್ರಣಶೈಲಿ
f following line or page ff. following lines or pages ಟಿಪ್ಪಣಿಗಳು
h. hand hh. hands horse height
l. line ll. lines ಟಿಪ್ಪಣಿಗಳು
MS manuscript MSS manuscripts ಟಿಪ್ಪಣಿಗಳು
op. opus opp. opera ಟಿಪ್ಪಣಿಗಳು
p. page pp. pages ಟಿಪ್ಪಣಿಗಳು
P. pope PP. popes
s. (or §) section ss. (or §§) sections ಟಿಪ್ಪಣಿಗಳು
v. volume vv. volumes ಟಿಪ್ಪಣಿಗಳು

ಪ್ರಕಟನಾಲಯಗಳು ಹಾಗು ದಿನಪತ್ರಿಕೆಗಳು ಅನುಸರಿಸುವ ಕ್ರಮಗಳು

ಬದಲಾಯಿಸಿ

ಯುನೈಟೆಡ್ ಸ್ಟೇಟ್ಸ್

ಬದಲಾಯಿಸಿ

U.S. ಮೂಲದ ಪ್ರಕಟನಾಲಯಗಳು ಚಿಕಾಗೋ ಮ್ಯಾನ್ಯುಅಲ್ ಆಫ್ ಸ್ಟೈಲ್ ಹಾಗು ಅಸೋಸಿಯೇಟೆಡ್ ಪ್ರೆಸ್ನ ಮಾದರಿ ಶೈಲಿಯನ್ನು ಅನುಸರಿಸುವ ಒಲವನ್ನು ತೋರಿದವು.[verification needed] U.S. ಸರ್ಕಾರವು, U.S. ಗವರ್ನಮೆಂಟ್ ಪ್ರಿಂಟಿಂಗ್ ಆಫೀಸ್ ಪ್ರಕಟಿಸಿದ ಒಂದು ಮಾದರಿ ಶೈಲಿಯನ್ನು ಅನುಸರಿಸುತ್ತದೆ.

ಆದಾಗ್ಯೂ, ಸಂಕ್ಷೇಪಣ ಶೈಲಿಗಳಲ್ಲಿ ಕೆಲವು ಅಸಾಮಂಜ್ಯಸತೆಗಳಿವೆ, ಏಕೆಂದರೆ ಅವುಗಳನ್ನು ಮಾದರಿ ಶೈಲಿಗಳು ಸಮಂಜಸವಾಗಿ ವಿವರಿಸಿರುವುದಿಲ್ಲ. ಕೆಲವು ಎರಡು-ಪದದ ಸಂಕ್ಷೇಪಣಗಳು, ಉದಾಹರಣೆಗೆ "United Nations" ಪದವನ್ನು ದೊಡ್ದಕ್ಷರದಲ್ಲಿ ಸಂಕ್ಷಿಪ್ತಗೊಳಿಸಿ ಪೂರ್ಣವಿರಾಮ ಚಿಹ್ನೆ ಹಾಕಲಾಗಿರುತ್ತದೆ, ಹಾಗು ಇತರ ಪದಗಳು, ಉದಾಹರಣೆ "personal computer" (PC) ಹಾಗು "compact disc" (CD) ಪದಗಳನ್ನು ವಿಶೇಷವಾಗಿ ಪೂರ್ಣವಿರಾಮ ಚಿಹ್ನೆಗಳಿಲ್ಲದೆ ಕೇವಲ ದೊಡ್ಡಕ್ಷರದಲ್ಲಿ ಮಾತ್ರ ಸಂಕ್ಷಿಪ್ತಗೊಳಿಸಲಾಗಿರುತ್ತದೆ. ಮೂರನೇ ಬದಲಾವಣೆಯೆಂದರೆ ಪೂರ್ಣವಿರಾಮ ಚಿಹ್ನೆಗಳೊಂದಿಗೆ ಸಣ್ಣ ಅಕ್ಷರಗಳ ಬಳಕೆ; ಇದನ್ನು ಟೈಮ್ ಮ್ಯಾಗಜಿನ್ "public relations" (p.r.)ಪದವನ್ನು ಸಂಕ್ಷಿಪ್ತಗೊಳಿಸಲು ಬಳಸಿಕೊಂಡಿತ್ತು. ಇದಲ್ಲದೆ, ಮೂರು-ಪದದ ಸಂಕ್ಷೇಪಣಗಳನ್ನೂ ಸಹ(ಹಲವು U.S. ಪ್ರಕಟನಾಲಯಗಳು ಪೂರ್ಣವಿರಾಮ ಚಿಹ್ನೆಗಳಿಲ್ಲದೆ ದೊಡ್ಡಕ್ಷರದಲ್ಲಿ ಸಂಕ್ಷೇಪಣಗಳನ್ನೂ ಬಳಸುತ್ತವೆ) ಕೆಲವೊಂದು ಬಾರಿ ಅದೇ ಲೇಖನದೊಳಗೆ ಸಮಂಜಸವಾಗಿ ಸಂಕ್ಷಿಪ್ತಗೊಂಡಿರುವುದಿಲ್ಲ.

ದಿ ನ್ಯೂ ಯಾರ್ಕ್ ಟೈಮ್ಸ್ ಯಾವಾಗಲೂ ಪೂರ್ಣವಿರಾಮ ಚಿಹ್ನೆಗಳೊಂದಿಗೆ ಸಂಕ್ಷಿಪ್ತಗೊಳಿಸಿ ಒಂದು ಸಮಂಜಸ ಮಾದರಿಯೊಂದಿಗೆ ವಿಶಿಷ್ಟತೆಯನ್ನು ಹೊಂದಿದೆ: P.C., I.B.M., P.R. ಇದು ಅನುಕೂಲಕ್ಕಾಗಿ ಪೂರ್ಣವಿರಾಮ ಚಿಹ್ನೆಗಳನ್ನೂ ಉಪೇಕ್ಷಿಸುವ ಬ್ರಿಟೀಷ್ ಪ್ರಕಟನಾಲಯಗಳ ಶೈಲಿಗೆ ವಿರುದ್ಧವಾಗಿದೆ.

ಯುನೈಟೆಡ್ ಕಿಂಗ್ಡಮ್

ಬದಲಾಯಿಸಿ

ಹಲವು ಬ್ರಿಟೀಷ್ ಪ್ರಕಟನಾಲಯಗಳು ಸಂಕ್ಷೇಪಣದ ಕೆಲವು ಮಾರ್ಗದರ್ಶನ ಸೂತ್ರಗಳನ್ನು ಅನುಸರಿಸುತ್ತವೆ:

  • ಅನುಕೂಲದ ದೃಷ್ಟಿಯಿಂದ, ಹಲವು ಬ್ರಿಟೀಷ್ ಪ್ರಕಾಶನಗಳು, BBC ಹಾಗು ದಿ ಗಾರ್ಡಿಯನ್ ನನ್ನು ಒಳಗೊಂಡಂತೆ ಎಲ್ಲ ಸಂಕ್ಷೇಪಣಗಳಲ್ಲಿ ಫುಲ್ ಸ್ಟಾಪ್ ಅಥವಾ ಪೂರ್ಣವಿರಾಮ ಚಿಹ್ನೆಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಅವುಗಳೆಂದರೆ:
    • ಸಾಮಾಜಿಕ ಶೀರ್ಷಿಕೆಗಳು, ಉದಾಹರಣೆಗೆ Ms ಅಥವಾ Mr(ಆದಾಗ್ಯೂ ಈ ಪದಗಳು ಸಾಮಾನ್ಯವಾಗಿ ಪೂರ್ಣವಿರಾಮಗಳನ್ನು ಹೊಂದಿರುವುದಿಲ್ಲ - ಮೇಲೆ ನೋಡಿ)Capt, Prof, etc.;
    • ರಾಷ್ಟ್ರಗಳ ಹೆಸರನ್ನು ಸೂಚಿಸುವ ಎರಡಕ್ಷರದ ಸಂಕ್ಷೇಪಣಗಳು ("US" , "U.S." ಅಲ್ಲ)
    • ಮೂರು ಅಕ್ಷರಗಳಿಗೂ ಹೆಚ್ಚಿನ ಸಂಕ್ಷೇಪಣಗಳು (ಎಲ್ಲದಕ್ಕೂ ಸಂಪೂರ್ಣವಾಗಿ ದೊಡ್ಡಕ್ಷರದ ಬಳಕೆ, ಪ್ರಥಮಾಕ್ಷರಗಳನ್ನು ಹೊರತುಪಡಿಸಿ);
    • ಪದಗಳನ್ನು ವಿರಳವಾಗಿ ಸಣ್ಣ ಅಕ್ಷರಗಳಲ್ಲಿ ಸಂಕ್ಷಿಪ್ತಗೊಳಿಸಲಾಗುತ್ತದೆ ("p.r." , ಅಥವಾ "pr" ನ ಬದಲಿಗೆ "PR" )
    • ಹೆಸರುಗಳು ("FW de Klerk" , "GB Whiteley" , "Park JS" ).
ಒಂದು ಗಮನಾರ್ಹ ಅಪವಾದವೆಂದರೆ ದಿ ಇಕನಾಮಿಸ್ಟ್  "Mr F. W. de Klerk" ಎಂದು ಬರೆಯುತ್ತದೆ. 
    • ವೈಜ್ಞಾನಿಕ ಏಕಮಾನಗಳು (ನೋಡಿ ಮಾಪನ ವಿಭಾಗ).
  • ಪ್ರಥಮಾಕ್ಷರಗಳನ್ನು ಸಾಮಾನ್ಯವಾಗಿ ಸಂಕ್ಷೇಪಣಗೊಂಡ ದೊಡ್ಡಕ್ಷರದ ಮೊದಲ ಅಕ್ಷರಕ್ಕೆ ಸೂಚಿಸಲಾಗುತ್ತದೆ. ಉದಾಹರಣೆಗೆ, North Atlantic Treaty Organisationನನ್ನು "Nato" ಅಥವಾ "NATO" ಎಂದು ಸಂಕ್ಷಿಪ್ತಗೊಳಿಸಬಹುದು, ಹಾಗು Severe Acute Respiratory Syndromeನನ್ನು 1}"Sars" ಅಥವಾ "SARS" ಎಂದು ಸಂಕ್ಷಿಪ್ತಗೊಳಿಸಬಹುದು ("laser" ಎಂಬ ಪದದ ಜೊತೆ ಹೋಲಿಸಿದಾಗ, ಈ ಪದವು ಸಂಪೂರ್ಣವಾಗಿ ಇಂಗ್ಲಿಷ್ ಪದವಾಗಿ ಮಾರ್ಪಾಡಾಗಿದೆ ಹಾಗು ಪದವನ್ನು ದೊಡ್ಡಕ್ಷರದಲ್ಲಿ ವಿರಳವಾಗಿಯೂ ಸಹ ಯಾವುದೇ ಕಾರಣಕ್ಕೆ ಬಳಸಲಾಗುವುದಿಲ್ಲ).
  • ಆದ್ಯಕ್ಷರ ಗುಚ್ಛಗಳನ್ನು ಯಾವಾಗಲು ದೊಡ್ಡಕ್ಷರದಲ್ಲಿ ಬರೆಯಲಾಗುತ್ತದೆ; ಉದಾಹರಣೆಗೆ "British Broadcasting Corporation" ನನ್ನು "BBC" ಎಂದು ಸಂಕ್ಷಿಪ್ತಗೊಳಿಸಲಾಗುತ್ತದೆ, "Bbc" ಎಂದಲ್ಲ. ಒಂದು ಆದ್ಯಕ್ಷರ ಗುಚ್ಚವು ಪ್ರಥಮಾಕ್ಷರಕ್ಕೆ ಸಾಮ್ಯತೆಯನ್ನು ಹೊಂದಿದೆ ಆದರೆ ಇದನ್ನು ಒಂದು ಪದವಾಗಿ ಉಚ್ಚಾರಣೆಯಲ್ಲಿಲ್ಲ.
  • ವೈಜ್ಞಾನಿಕ ಏಕಮಾನಗಳನ್ನು ಸಂಕ್ಷಿಪ್ತಗೊಳಿಸುವಾಗ, ಅಂಕಿ ಹಾಗು ಏಕಮಾನದ ನಡುವೆ ಯಾವುದೇ ಅಂತರವನ್ನು ಸೇರಿಸಲಾಗುವುದಿಲ್ಲ (100mph, 100m, 10cm, 10°C).
(ಇದು SI ಪ್ರಮಾಣಕಕ್ಕೆ ವಿರುದ್ಧವಾಗಿದೆ, ಕೆಳಗೆ ನೋಡಿ.)

ಇತರ ವಿಷಯಗಳು ಹಾಗು ಸಾಮಾನ್ಯ ನಿಯಮಗಳು

ಬದಲಾಯಿಸಿ
  • ವೆಲ್ಷ್ ಹೆಸರುಗಳನ್ನು ಸಂಕ್ಷೇಪಣಗೊಳಿಸುವಾಗ ಒಂದು ಜೋಡಿ ಅಕ್ಷರಗಳು ಸಹ ಕಂಡುಬರುತ್ತದೆ, ಉದಾಹರಣೆಗೆ Welsh, ಜೋಡಿಯಾದ "l" ಅಕ್ಷರವು ಒಂದು ಪ್ರತ್ಯೇಕ ಉಚ್ಚಾರಣೆ:"Ll. ಜಾರ್ಜ್" (ಬ್ರಿಟೀಷ್ ಪ್ರಧಾನಮಂತ್ರಿ)David Lloyd George.
  • ಕೆಲವು ಶೀರ್ಷಿಕೆಗಳಾದ "Reverend" ಹಾಗು "Honourable" ಪದಗಳ ಮುಂದೆ "the" ಸೇರಿಸಿ ಬರೆಯಲಾಗುತ್ತದೆ, ಇದನ್ನು ಕೇವಲ "Rev." ಅಥವಾ "Hon." ಎಂದು ಬರೆಯಲಾಗುವುದಿಲ್ಲ. ಈ ಪರಿಸ್ಥಿತಿಯು ಹಲವು ಬ್ರಿಟೀಷ್ ಪ್ರಕಟನಾಲಯಗಳಲ್ಲಿ ಹಾಗು ಕೆಲವು ಯುನೈಟೆಡ್ ಸ್ಟೇಟ್ಸ್ ನ ಪ್ರಕಟನಾಲಯಗಳಲ್ಲಿ ಉಂಟಾಗುತ್ತದೆ.
  • ಪುನರಾವರ್ತಿತವಾಗಿ ಬಳಕೆಯಾಗುವ ಒಂದು ಸಂಕ್ಷೇಪಣವನ್ನು ಗುರುತಿಸುವ ಸಲುವಾಗಿ ಅದು ಮೊದಲ ಬಾರಿಗೆ ಉಲ್ಲೇಖವಾಗುವ ಬರಹ ಅಥವಾ ಮಾತಿನ ಭಾಗಗಳಲ್ಲಿ ತಿಳಿಸಬೇಕಾಗುತ್ತದೆ. ಹಲವು ಓದುಗರಿಗೆ ಅಪರಿಚಿತವಾಗಿರುವ ಸಂಕ್ಷಿಪ್ತ ರೂಪಗಳನ್ನು ಆದಷ್ಟು ಕಡಿಮೆ ಮಾಡಬೇಕು.

ಉದಾಹರಣೆ post office(ಪೋಸ್ಟ್ ಆಫೀಸ್)ಗೆ PO

ಮಾಪನಗಳು

ಬದಲಾಯಿಸಿ

ದಿ ಇಂಟರ್ನ್ಯಾಷನಲ್ ಸಿಸ್ಟಂ ಆಫ್ ಯುನಿಟ್ಸ್(SI) ಆಧಾರ ಏಕಮಾನಗಳ ಒಂದು ಗುಂಪನ್ನು ವಿವರಿಸುತ್ತದೆ, ಇದರಿಂದ ಇತರ "ಜನ್ಯವಾದ" ಏಕಮಾನಗಳನ್ನು ಪಡೆದುಕೊಳ್ಳಬಹುದಾಗಿದೆ. ಸಂಕ್ಷೇಪಣಗಳು, ಅಥವಾ ಇನ್ನೂ ನಿರ್ದಿಷ್ಟವಾಗಿ ಹೇಳುವುದಾದರೆ "ಸಂಕೇತಗಳು" (ohm ಹಾಗು microಎಂಬ ಪದಗಳ ಬಳಕೆಯಲ್ಲಿ ರೋಮನ್ ಅಕ್ಷರಗಳು, ಗ್ರೀಕ್ ಅಕ್ಷರಗಳನ್ನು ಬಳಸುವುದು) ಹಾಗು degrees celsius(ಡಿಗ್ರಿ ಸೆಲ್ಷಿಯಸ್)ಪದದ ಬಳಕೆಯಲ್ಲಿ ಇತರ ಸಂಕೇತಗಳನ್ನು ಬಳಸುವುದು). ಈ ಏಕಮಾನಗಳನ್ನು ಪೂರ್ವಪ್ರತ್ಯಯಗಳ ಒಂದು ಗುಂಪಿನ ಮೂಲಕ ಒಟ್ಟಾರೆಯಾಗಿ ಸ್ಫಷ್ಟವಾಗಿ ವಿವರಿಸಬಹುದು. ಈ ಪೂರ್ವಪ್ರತ್ಯಯಗಳಿಗೂ ಸಹ ಸಂಕ್ಷೇಪಣಗಳು ಅಥವಾ ಸಂಕೇತಗಳಿರುತ್ತವೆ. ಒಂದು ಏಕಮಾನದ ನಂತರ ಅಥವಾ ಅದರೊಳಗೆ ಒಂದು ಪೂರ್ಣವಿರಾಮ ಚಿಹ್ನೆಯು ಇರಬಾರದು; '10 k.m.' ಹಾಗು '10 k.m' ಎರಡೂ ಸಹ ತಪ್ಪಾದ ನಿರೂಪಣೆಗಳು - ಇದರ ಸರಿಯಾದ ರೂಪವೆಂದರೆ '10 km'(ಒಂದು ವಾಕ್ಯದ ಅಂತಿಮದಲ್ಲಿ ಮಾತ್ರ ಪೂರ್ಣವಿರಾಮ ಚಿಹ್ನೆಯನ್ನು ಬಳಸಬೇಕು)

ಒಂದು ಸಂಯುಕ್ತ ಏಕಮಾನದ "ಒಳಗಿರುವ" ಒಂದು ಪೂರ್ಣವಿರಾಮ ಚಿಹ್ನೆಯು, ಆಧಾರ ಏಕಮಾನಗಳ ಎರಡೂ ಬದಿಯ ಗುಣಾಕಾರವನ್ನು ಸೂಚಿಸುತ್ತದೆ. ಸೈದ್ಧಾಂತಿಕವಾಗಿ, ಈ ಪೂರ್ಣವಿರಾಮ ಚಿಹ್ನೆಯನ್ನು ಗೆರೆಯ ಮಧ್ಯಭಾಗದಿಂದ ಎಳೆಯಬೇಕು, ಆದರೆ ಇದನ್ನು ಸಾಮಾನ್ಯವಾಗಿ ಮಾಡಲಾಗಿರುವುದಿಲ್ಲ. ಉದಾಹರಣೆಗೆ, '5 ms' ಎಂದರೆ 5 millisecond(s), ಆದರೆ '5 m.s' ಎಂದರೆ 5 metre·second(s).

ಇಲ್ಲಿ "m.s", ಎರಡು ಮೂಲಭೂತ SI ಏಕಮಾನಗಳ ಪರಿಣಾಮದಿಂದ ರೂಪುಗೊಂಡ ಒಂದು ಸಂಯುಕ್ತ ಏಕಮಾನ - ಮೀಟರ್ ಹಾಗು ಸೆಕೆಂಡ್. ಆದಾಗ್ಯೂ, ಮಧ್ಯ ಬಿಂದುವಿನ ಸಂಕೇತವನ್ನು (·, ಯೂನಿಕೋಡ್ U+00B7, HTML ·) ಸಂಯುಕ್ತ ಏಕಮಾನಗಳು ದೊರೆತಾಗ ಸೂಚಿಸಲು ಇರುವಂತಹ ಆಯ್ಕೆ ವಿಧಾನ, ಉದಾಹರಣೆಗೆ."5 m·s".

ಒಂದು ಸಂಖ್ಯೆ ಹಾಗು ಏಕಮಾನದ ನಡುವೆ ಯಾವಾಗಲೂ ಒಂದು ಅಂತರವಿರಬೇಕು(ಭಂಗಗೊಳ್ಳದೆ)- '25 km' ಸರಿಯಾದ ರೂಪ, ಹಾಗು '25km' ತಪ್ಪು ನಿರೂಪಣೆ. ದಿ ಇಂಟರ್ನ್ಯಾಷನಲ್ ಸಿಸ್ಟಂ ಆಫ್ ಯುನಿಟ್ಸ್ (SI)ನ 5.3.3. ವಿಭಾಗದಲ್ಲಿ, ದಿ ಇಂಟರ್ನ್ಯಾಷನಲ್ ಬ್ಯೂರೋ ಆಫ್ ವೇಯ್ಟ್ಸ್ ಅಂಡ್ ಮೆಷರ್ಸ್(BIPM) ನಿರೂಪಿಸುವಂತೆ "ಸಂಖ್ಯಾ ಮೌಲ್ಯವು ಯಾವಾಗಲೂ ಏಕಮಾನದ ಮುಂದಿರುತ್ತದೆ, ಹಾಗು ಅಂತರವನ್ನು ಒಂದು ಏಕಮಾನದಿಂದ ಸಂಖ್ಯೆಯನ್ನು ಪ್ರತ್ಯೇಕಿಸಲು ಯಾವಾಗಲೂ ಬಳಸಲಾಗುತ್ತದೆ. ... ಈ ನಿಯಮಕ್ಕಿರುವ ಒಂದೇ ಅಪವಾದವೆಂದರೆ ಡಿಗ್ರಿ, ನಿಮಿಷಕ್ಕೆ ಏಕಮಾನದ ಸಂಕೇತಗಳು, ಹಾಗು ಸಮಕೋನಕ್ಕೆ ಸೆಕೆಂಡ್ ನ ಸಂಕೇತ."[]

ಅಕ್ಷರದ ಮಾದರಿಗಳು (ದೊಡ್ಡಕ್ಷರ ಅಥವಾ ಸಣ್ಣಕ್ಷರ)SI ವಿಧಾನದಲ್ಲಿ ಅದರದೇ ಆದ ಅರ್ಥವನ್ನು ಹೊಂದಿದೆ, ಹಾಗು ಈ ಅಕ್ಷರದ ಮಾದರಿಯನ್ನು, ಸಂಕ್ಷೇಪಣ ಶೈಲಿಯನ್ನು ಅನುಸರಿಸುವ ನಿಟ್ಟಿನಲ್ಲಿ ಒಂದು ತಪ್ಪಾಗಿ ನಿರ್ದೇಶಿತವಾದ ಪ್ರಯತ್ನದಿಂದ ಬದಲಾಯಿಸಬಾರದು. ಉದಾಹರಣೆ, "10 S", 10 ಸೀಮನ್ಸ್ ನ್ನು (ವಾಹಕತೆಯ ಒಂದು ಏಕಮಾನ)ಸೂಚಿಸಿದರೆ, "10 s", 10 ಸೆಕೆಂಡುಗಳನ್ನು ಸೂಚಿಸುತ್ತದೆ. ಒಂದು ವ್ಯಕ್ತಿಯನ್ನು ಆಧರಿಸಿದ ಯಾವುದೇ ಏಕಮಾನವನ್ನು ಒಂದು ಸಂಕೇತದ ಜೊತೆಗೆ ದೊಡ್ದಕ್ಷರದ ಮೊದಲ ಅಕ್ಷರ ಮೂಲಕ ಸೂಚಿಸಲಾಗುತ್ತದೆ (S, Pa, A, V, N, Wb, W), ಆದರೆ ಇದನ್ನು ಬರೆಯುವುದು ಮಾತ್ರ ಸಣ್ಣ ಅಕ್ಷರದಲ್ಲಿ,(siemens, pascal, ampere, volt, newton, weber ಹಾಗು watt).

 ಅಂತೆಯೇ ಇದಕ್ಕೆ ಪರ್ಯಾಯವಾಗಿ g, l, m, s, cd, ha, gram, litre, metre, second, candela ಹಾಗು hectareನ್ನು ಕ್ರಮವಾಗಿ ಸೂಚಿಸುತ್ತವೆ. ಈ ನಿಯಮದ ಒಂದೇ ಒಂದು ಸಣ್ಣ ಅಪವಾದವೆಂದರೆ, litreನ ಸಂಕೇತವನ್ನು L ಮೂಲಕ ಸೂಚಿಸಬಹುದಾಗಿದೆ. ಇದನ್ನು ದೊಡ್ದಕ್ಷರದ i  ಅಥವಾ one(ಒಂದು ಅಂಕಿ)ನ್ನು ಕೆಲವು ನಿರ್ದಿಷ್ಟ ಮಾದರಿಯ ಅಕ್ಷರಗಳೊಂದಿಗೆ ತಪ್ಪಾಗಿ ಗ್ರಹಿಸುವುದನ್ನು ತಡೆಯಲು ಬಳಸಲಾಗುತ್ತದೆ - l, I, ಹಾಗು 1ನ್ನು ಹೋಲಿಸಿ ನೋಡಿ.

ಅಂತೆಯೇ, ಹತ್ತರ ಘಾತವನ್ನು ಸೂಚಿಸುವ ಸಂಕ್ಷೇಪಣದ ಪೂರ್ವಪ್ರತ್ಯಯಗಳು ಕೇಸ್-ಸೆನ್ಸಿಟಿವ್ ಆಗಿರುತ್ತವೆ: m(ಮಿಲ್ಲಿ)ಸಾವಿರ ಸಂಖ್ಯೆಯನ್ನು ಸೂಚಿಸಿದರೆ, M(ಮೆಗಾ) ಮಿಲ್ಯನ್ ನನ್ನು ಸೂಚಿಸುತ್ತದೆ, ಹೀಗಾಗಿ ಅಕ್ಷರ ಮಾದರಿಯಲ್ಲಿ ಅನುದ್ದಿಷ್ಟ ಬದಲಾವಣೆಯು(ಈ ಉದಾಹರಣೆಯಲ್ಲಿ)1 000 000 000 ಗುಣಕದಲ್ಲಿ ತಪ್ಪು ಗ್ರಹಿಕೆಗೆ ಎಡೆ ಮಾಡಿಕೊಡುತ್ತದೆ. ಒಂದು ಏಕಮಾನವನ್ನು ಸಂಪೂರ್ಣವಾಗಿ ಬರೆದಾಗ, ಆ ಏಕಮಾನವನ್ನು ಪೂರ್ವಪ್ರತ್ಯಯಗಳನ್ನೊಳಗೊಂಡಂತೆ ಸಣ್ಣ ಅಕ್ಷರದಲ್ಲಿ ಬರೆಯಲಾಗುತ್ತದೆ: millivolt ಗೆ mV, nanometre ಗೆ nm, gigacandela ಗೆ Gcd.

ಈ ರೀತಿಯಾಗಿ ಮೇಲೆ ಹೇಳಲಾಗಿರುವ ನಿಯಮಗಳನ್ನು ಅನುಸರಿಸಲ್ಪಟ್ಟರೆ, SI ವಿಧಾನವು ಯಾವಾಗಲು ಸರಳವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು, ಈ ರೀತಿಯಾಗಿ ಉದಾಹರಣೆಗೆ mK, millikelvin ನ ಸೂಚಿಸಿದರೆ, K.m, kelvin.metreನ್ನು ಸೂಚಿಸುತ್ತದೆ ಹಾಗು km kilometreನ್ನು ಸೂಚಿಸುತ್ತದೆ. k.m ಹಾಗು Km ನ ರೂಪಗಳನ್ನು ತಪ್ಪಾಗಿ-ರೂಪಿಸಲಾಗುತ್ತದೆ ಹಾಗು ಇದು SI ವಿಧಾನದಲ್ಲಿ ತಾಂತ್ರಿಕವಾಗಿ ಅರ್ಥರಹಿತವಾಗಿರುತ್ತದೆ, ಆದಾಗ್ಯೂ ಉದ್ದೇಶಿತ ಅರ್ಥವು ಸಂದರ್ಭಕ್ಕೆ ತಕ್ಕಂತೆ ಅರ್ಥ ನೀಡುತ್ತದೆ.

ಉಚ್ಚಾರಾಂಶದ ಸಂಕ್ಷೇಪಣ

ಬದಲಾಯಿಸಿ

ಒಂದು ಉಚ್ಚಾರಾಂಶದ ಸಂಕ್ಷೇಪಣ ವೆಂದರೆ ಹಲವಾರು ಪದಗಳ(ಸಾಮಾನ್ಯವಾಗಿ) ಆದ್ಯಕ್ಷರ ಉಚ್ಚಾರಂಶ ಗಳಿಂದ ರೂಪುಗೊಂಡ ಒಂದು ಸಂಕ್ಷೇಪಣ, ಉದಾಹರಣೆಗೆ Interpol = Inter national + pol ice . ಇದು ಮೂಲತಃ ಪ್ರಥಮಾಕ್ಷರಕದ ಒಂದು ಭೇದ.

ಉಚ್ಚಾರಾಂಶದ ಸಂಕ್ಷೇಪಣಗಳನ್ನು ಸಾಮಾನ್ಯವಾಗಿ ಸಣ್ಣ ಅಕ್ಷರದಲ್ಲಿ ಬರೆಯಲಾಗುತ್ತದೆ, ಕೆಲವೊಂದು ಬಾರಿ ದೊಡ್ಡ ಅಕ್ಷರದಲ್ಲಿ ಪ್ರಾರಂಭಿಸಲಾಗುತ್ತದೆ, ಹಾಗು ಇವುಗಳನ್ನು ಯಾವಾಗಲು ಒಂದು ಪದಕ್ಕಿಂತ ಹೆಚ್ಚಾಗಿ ಅಕ್ಷರ ಅಕ್ಷರವಾಗಿ ಉಚ್ಚರಿಸಲಾಗುತ್ತದೆ.

ಉಚ್ಚಾರಂಶದ ಸಂಕ್ಷೇಪಣಗಳ ಜೊತೆಗೆ ಮಿಶ್ರಪದಗಳ ವ್ಯತ್ಯಾಸವನ್ನು ಅರಿಯಬೇಕು.

ವಿವಿಧ ಭಾಷೆಗಳು

ಬದಲಾಯಿಸಿ

ಉಚ್ಚಾರಂಶದ ಸಂಕ್ಷೇಪಣಗಳು ಇಂಗ್ಲಿಷ್ ಅಥವಾ ಫ್ರೆಂಚ್ ಭಾಷೆಯಲ್ಲಿ ವ್ಯಾಪವಾಗಿ ಬಳಕೆಯಲಿಲ್ಲ. ಆದಾಗ್ಯೂ, ದಿ ಯುನೈಟೆಡ್ ಸ್ಟೇಟ್ಸ್ ನೇವಿಯು, ಸಾಮಾನ್ಯವಾಗಿ ಉಚ್ಚಾರಾಂಶದ ಸಂಕ್ಷೇಪಣಗಳನ್ನು ಬಳಕೆ ಮಾಡುತ್ತದೆ, ಇದರ ವಿವರಣೆಯನ್ನು ಈ ಕೆಳಕಂಡಂತೆ ನೀಡಲಾಗಿದೆ.

ಮತ್ತೊಂದು ಭಾಗದಲ್ಲಿ, ಇದು ನಾಜಿಗಳ ನಾಯಕತ್ವದಲ್ಲಿ ಜರ್ಮನಿಯಲ್ಲಿ ಹೆಚ್ಚು ಬಳಕೆಯಲ್ಲಿತ್ತು ಹಾಗು ಸೋವಿಯತ್ ಯೂನಿಯನ್ ನಲ್ಲಿ ಅತ್ಯಾಧಿಕ್ಯವಾಗಿದ್ದ ಹೊಸ ನಿಯಮಾನುಸಾರಿ ಸಂಸ್ಥೆಗಳನ್ನು ಹೆಸರಿಸಲು ಇದನ್ನು ಬಳಸಿಕೊಳ್ಳಲಾಗುತ್ತಿತ್ತು. ಉದಾಹರಣೆಗೆ, Gestapo ಪದವು Ge heime Sta ats-Po lizei ಯ ಸಂಕ್ಷಿಪ್ತ ರೂಪ, ಅಥವಾ "ಸೀಕ್ರೆಟ್ ಸ್ಟೇಟ್ ಪೋಲಿಸ್" ಎಂಬ ಅರ್ಥವನ್ನು ನೀಡುತ್ತದೆ. ಇದೆ ರೀತಿಯಾಗಿ, Comintern ಎಂಬುದು Communist International ನ ಸಂಕ್ಷಿಪ್ತ ರೂಪ. ಇದು ಉಚ್ಚಾರಂಶದ ಸಂಕ್ಷೇಪಣಗಳಿಗೆ ನಿಷೇದಾರ್ಥಕವನ್ನು ಉಂಟುಮಾಡುತ್ತದೆ, ಆದಾಗ್ಯೂ ಇಂತಹ ಸಂಕ್ಷೇಪಣಗಳನ್ನು ನಾಜಿಗಳು ಅಧಿಕಾರಕ್ಕೆ ಬರುವ ಮುನ್ನ ಜರ್ಮನಿಯಲ್ಲಿ ಬಳಕೆಯಲ್ಲಿತ್ತು, ಉದಾಹರಣೆಗೆ., Schutzpolizei ಗೆ Schupo .

ಉಚ್ಚಾರಂಶದ ಸಂಕ್ಷೇಪಣಗಳು ಜರ್ಮನ್ ಡೆಮೋಕ್ರ್ಯಾಟಿಕ್ ರಿಪಬ್ಲಿಕ್ ನಲ್ಲಿ ಬಳಕೆಯಲ್ಲಿದ್ದ ಜರ್ಮನ್ ಭಾಷೆಗೂ ಸಹ ವೈಶಿಷ್ಟ್ಯವಾಗಿತ್ತು, ಉದಾಹರಣೆಗೆ Stasi ಎಂಬುದು Staatssicherheit ಪದದ ಸಂಕ್ಷಿಪ್ತ ರೂಪ ("ರಾಷ್ಟ್ರದ ಭದ್ರತೆ", ದಿ ಸೀಕ್ರೆಟ್ ಪೋಲಿಸ್) ಅಥವಾ Vopo ಎಂಬುದು Volkspolizist ನ ಸಂಕ್ಷಿಪ್ತ ರೂಪವಾಗಿತ್ತು("ಪೀಪಲ್'ಸ್ ಪೋಲಿಸ್ ಮ್ಯಾನ್").

ಪೂರ್ವ ಏಷಿಯದ ಭಾಷೆಗಳು ತಮ್ಮ ಬರವಣಿಗೆಗಳಲ್ಲಿ ಒಂದು ಅಕ್ಷರ ರೂಪದ ಸಂಕ್ಷೇಪಣಗಳಿಗೆ ಬದಲಾಗಿ ಚೈನೀಸ್-ಹುಟ್ಟಿನ ಭಾವಲಿಪಿಗಳನ್ನು ಒಂದು ಶಬ್ದ ಅಥವಾ ಪದಗುಚ್ಛದ ಪ್ರಮುಖ ಸಂಕೇತಗಳನ್ನು ಅದೇ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತವೆ. ಉದಾಹರಣೆಗೆ, ಜಪಾನೀಸ್ ಭಾಷೆಯಲ್ಲಿ, ಯುನೈಟೆಡ್ ನೇಷನ್ಸ್ ಗೆ kokusai rengō (国際連合)ಎಂದು ಕರೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ kokuren (国連) ಎಂದು ಸಂಕ್ಷಿಪ್ತಗೊಳಿಸಲಾಗುತ್ತದೆ. (ಇಂತಹ ಸಂಕ್ಷೇಪಣಗಳನ್ನು ಜಪಾನೀಸ್ ಭಾಷೆಯಲ್ಲಿ ರಾಕುಗೋ (略語)ಎಂದು ಕರೆಯಲಾಗುತ್ತದೆ). ಉಚ್ಚಾರಂಶದ ಸಂಕ್ಷೇಪಣಗಳನ್ನು ಸಾಧಾರಣವಾಗಿ ವಿಶ್ವವಿದ್ಯಾಲಯಗಳಲ್ಲಿ ಬಳಕೆ ಮಾಡಲಾಗುತ್ತದೆ: ಉದಾಹರಣೆಗೆ Běijīng Dàxué ಗೆ(北京大学, ಪೀಕಿಂಗ್ ವಿಶ್ವವಿದ್ಯಾಲಯ) Běidà (北大) ಹಾಗು Tōkyō daigaku (東京大学, ಯುನಿವರ್ಸಿಟಿ ಆಫ್ ಟೋಕಿಯೋ)ಗೆ Tōdai (東大) ಎಂದು ಬಳಸಲಾಗುತ್ತದೆ.

ಸಂಸ್ಥೆಗಳು

ಬದಲಾಯಿಸಿ

ಉಚ್ಚಾರಂಶದ ಸಂಕ್ಷೇಪಣಗಳನ್ನು US ನೌಕಾಪಡೆಯು ಆರಿಸಿಕೊಂಡಿದೆ, ಏಕೆಂದರೆ ಇದು ಒಂದು ದೊಡ್ಡ ಸಂಖ್ಯೆಯ ಆದ್ಯಕ್ಷರ ಗುಚ್ಛಗಳನ್ನು ಸ್ಫುಟವಾಗಿ ಓದಲು ನೆರವನ್ನು ಹೆಚ್ಚಿಸುತ್ತದೆ. ಇಲ್ಲದಿದ್ದರೆ ಇದು ಅದೇ ಪ್ರಥಮಾಕ್ಷರಕಗಳ ಒಳಗೆ ಹೊಂದಿಕೊಳ್ಳುವ ಪ್ರವೃತ್ತಿಯನ್ನು ಹೊಂದಿದೆ. ಇದರ ಪರಿಣಾಮವಾಗಿ DESRON 6 (ಸಂಪೂರ್ಣ ದೊಡ್ಡಕ್ಷರದ ರೂಪ)ಎಂಬುದು "Destroyer Squadron 6," ಎಂಬುದರ ಸಂಕ್ಷಿಪ್ತ ರೂಪ, ಈ ನಡುವೆ COMNAVAIRLANT ಎಂಬುದು "Commander, Naval Air Force (in the) Atlantic." ಎಂಬುದರ ಸಂಕ್ಷಿಪ್ತ ರೂಪ.

ಇವನ್ನೂ ನೋಡಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ New Hart's Rules: The handbook of style for writers and editors. Oxford University Press, 2005. ISBN 0-19-861041-6.
  2. "ಸ್ಪೆಲ್ಲಿಂಗ್ ಸೊಸೈಟಿ: ಶಾರ್ಟ್ಕಟ್ಸ್ 1483-1660". Archived from the original on 2007-10-15. Retrieved 2010-06-30.
  3. "The Choctaw Expression 'Okeh' and the Americanism 'Okay'". Jim Fay. 2007-09-13. Archived from the original on 2010-12-24. Retrieved 2008-05-12.
  4. "What does "OK" stand for?". The Straight Dope. Archived from the original on 2008-05-12. Retrieved 2008-05-12.
  5. ಕ್ರಿಸ್ಟಲ್, ಡೇವಿಡ್. Txtng: The Gr8 Db8. ಆಕ್ಸ್ಫರ್ಡ್: ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್, 2008. ISBN 978-0-19-954490-5
  6. "The International System of Units (SI)" (pdf). International Bureau of Weights and Measures (BIPM). Retrieved 2008-04-18.


ಬಾಹ್ಯ ಕೊಂಡಿಗಳು

ಬದಲಾಯಿಸಿ
  • Abbreviations.com — ಪ್ರಥಮಾಕ್ಷರಗಳು ಹಾಗು ಸಂಕ್ಷೇಪಣಗಳ ಒಂದು ದತ್ತಾಂಶ ಸಂಗ್ರಹ
  • ಅಕ್ರೋನಿಮ್ ಫೈನ್ಡರ್ — ಪ್ರಥಮಾಕ್ಷರಗಳು ಹಾಗು ಸಂಕ್ಷೇಪಣಗಳ ಒಂದು ದತ್ತಾಂಶ ಸಂಗ್ರಹ (750,000ಕ್ಕೂ ಮೇಲ್ಪಟ್ಟ ದಾಖಲಾತಿಗಳು)
  • ಆಲ್ ಅಕ್ರೋನಿಮ್ಸ್ — ಪ್ರಥಮಾಕ್ಷರಗಳು, ಆದ್ಯಕ್ಷರ ಗುಚ್ಛಗಳು ಹಾಗು ಸಂಕ್ಷೇಪಣಗಳ ಒಂದು ದತ್ತಾಂಶ ಸಂಗ್ರಹ (750,000ಕ್ಕೂ ಮೇಲ್ಪಟ್ಟ ದಾಖಲಾತಿಗಳು)
  • AcronymCreator.net -

ಅರ್ಥವತ್ತಾದ ಹೊಸ ಪ್ರಥಮಾಕ್ಷರಗಳು ಹಾಗು ಸಂಕ್ಷೇಪಣೆಗಳನ್ನು ರೂಪಿಸುವ ಒಂದು ಭಾಷಾ ಸಾಧನ