ರಾಮಸ್ವಾಮಿ ಶ್ರೇಯಾಸ್ ಗೋಪಾಲ್[] (ಜನನ 4 ಸೆಪ್ಟೆಂಬರ್ 1993). ಇವರು ಒಬ್ಬ ಭಾರತೀಯ ಕ್ರಿಕೆಟಿಗರು. ಇವರು ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಾರೆ. ಕರ್ನಾಟಕ ತಂಡದ ಆಟಗಾರ. ಇವರು ಆಲ್ ರೌಂಡರ್ ಆಗಿದ್ದು, ಬಲಗೈನಲ್ಲಿ ಬ್ಯಾಟ್ ಮಾಡುತ್ತಾರೆ ಮತ್ತು ಬೌಲ್ ಲೆಗ್ ಬ್ರೇಕ್ ಮಾಡುತ್ತಾರೆ. ಇವರು ೨೦೧೧ ರಲ್ಲಿ ಭಾರತ ಅಂಡರ್ -೧೯ ಕ್ರಿಕೆಟ್ ತಂಡಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದರು.[] ೧೩ ವರ್ಷದೊಳಗಿನವರು, ೧೫ ವರ್ಷದೊಳಗಿನವರು, ೧೬ ವರ್ಷದೊಳಗಿನವರು ಮತ್ತು ೧೯ ವರ್ಷದೊಳಗಿನವರಂತಹ ವಿವಿಧ ವಯೋಮಾನದ ಹಂತಗಳಲ್ಲಿ ಕರ್ನಾಟಕ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದರು.[]

ಶ್ರೇಯಸ್ ಗೋಪಾಲ್
ಗೋಪಾಲ್ ೨೦೧೯ ರ ಐಪಿಎಲ್ ಪಂದ್ಯದ ನಂತರದ ಪ್ರಸ್ತುತಿಯಲ್ಲಿ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ರಾಮಸ್ವಾಮಿ ಶ್ರೇಯಸ್ ಗೋಪಾಲ್
ಹುಟ್ಟು (1993-09-04) ೪ ಸೆಪ್ಟೆಂಬರ್ ೧೯೯೩ (ವಯಸ್ಸು ೩೧)
ಬೆಂಗಳೂರು, ಕರ್ನಾಟಕ, ಭಾರತ
ಬ್ಯಾಟಿಂಗ್ಬಲಗೈ
ಬೌಲಿಂಗ್ಬಲಗೈ ಲೆಗ್ ಬ್ರೇಕ್
ಪಾತ್ರಆಲ್ ರೌಂಡರ್
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
2013/14–2022/23ಕರ್ನಾಟಕ
2014–2017ಮುಂಬೈ ಇಂಡಿಯನ್ಸ್ (squad no. ೧೯)
2018–2021ರಾಜಸ್ಥಾನ್ ರಾಯಲ್ಸ್ (squad no. ೩೭)
2022ಸನ್ ರೈಸರ್ಸ್ ಹೈದರಾಬಾದ್
2023–ಕೇರಳ ಕ್ರಿಕೆಟ್ ತಂಡ
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಎಫ಼್‌ಸಿ ಎಲ್‌ಎ ಟಿ೨೦
ಪಂದ್ಯಗಳು ೫೬ ೨೯ ೪೯
ಗಳಿಸಿದ ರನ್ಗಳು ೨,೪೩೧ ೩೨೮ ೨೩೫
ಬ್ಯಾಟಿಂಗ್ ಸರಾಸರಿ ೩೫.೭೫ ೨೯.೮೧ ೧೫.೬೬
೧೦೦/೫೦ ೪/೯ ೦/೦ ೦/೦
ಉನ್ನತ ಸ್ಕೋರ್ ೧೬೧* ೩೮ ೩೯
ಎಸೆತಗಳು ೮,೦೪೭ ೧,೧೪೩ ೮೪೫
ವಿಕೆಟ್‌ಗಳು ೧೮೪ ೪೬ ೫೯
ಬೌಲಿಂಗ್ ಸರಾಸರಿ ೨೬.೧೯ ೨೦.೨೮ ೧೭.೩೫
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ ೫/೧೭ ೫/೧೯ ೫/೧೧
ಹಿಡಿತಗಳು/ ಸ್ಟಂಪಿಂಗ್‌ ೧೭/– ೧೦/– ೧೩/–
ಮೂಲ: ESPNcricinfo, ೪ ಮೇ ೨೦೧೯

ವೈಯಕ್ತಿಕ ಜೀವನ

ಬದಲಾಯಿಸಿ

ಶ್ರೇಯಸ್ ಗೋಪಾಲ್ ದಿ ಫ್ರಾಂಕ್ ಆಂಥೋನಿ ಪಬ್ಲಿಕ್ ಸ್ಕೂಲ್, ಬೆಂಗಳೂರು ನಲ್ಲಿ ಓದಿದ್ದಾರೆ. ಅವರು ಜೈನ್ ವಿಶ್ವವಿದ್ಯಾನಿಲಯದಿಂದ ತಮ್ಮ ಬಿಕಾಮ್‌ (ಬ್ಯಾಚುಲರ್ ಆಫ್ ಕಾಮರ್ಸ್) ಅನ್ನು ಪೂರ್ಣಗೊಳಿಸಿದರು.[]

ಅವರ ತಂದೆ ರಾಮಸ್ವಾಮಿ ಗೋಪಾಲ್ ಅವರು ೨೦ ವರ್ಷಗಳ ಕಾಲ ಕ್ಲಬ್ ಕ್ರಿಕೆಟಿಗರಾಗಿದ್ದರು, ಅವರ ತಾಯಿ ಅಮಿತಾ ರಾಜ್ಯ ಮಟ್ಟದಲ್ಲಿ ವಾಲಿಬಾಲ್ ಆಡುತ್ತಿದ್ದರು.[] ಅವರ ಬಾಲ್ಯದಲ್ಲಿ ಅವರು ತಮ್ಮ ರೋಲ್ ಮಾಡೆಲ್‌ ಆಗಿ ಅನಿಲ್ ಕುಂಬ್ಳೆ ಬೌಲಿಂಗ್ ಕ್ರಮವನ್ನು ಅನುಕರಿಸಲು ಇಷ್ಟಪಟ್ಟರು.[]

ದೇಶೀಯ ವೃತ್ತಿ

ಬದಲಾಯಿಸಿ

ಗೋಪಾಲ್ 2013 ರಲ್ಲಿ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಫೆಬ್ರವರಿ 12, 2014 ರಂದು, ಗೋಪಾಲ್ ಇರಾನಿ ಕಪ್ ಇತಿಹಾಸದಲ್ಲಿ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮೊದಲ ಹ್ಯಾಟ್ರಿಕ್ ಹೊಡೆದರು, ಇದು ಕರ್ನಾಟಕಕ್ಕೆ ಇರಾನಿ ಕಪ್ ಗೆಲ್ಲಲು ಸಹಾಯ ಮಾಡಿತು.[] ಆಗಸ್ಟ್ ೨೦೧೯ ರಲ್ಲಿ, ೨೦೧೯–೨೦ ದುಲೀಪ್ ಟ್ರೋಫಿಗಾಗಿ ಇಂಡಿಯಾ ಬ್ಲೂ ತಂಡದಲ್ಲಿ ಅವರು ಸ್ಥಾನವನ್ನು ಪಡೆದರು.[][]

ಅಕ್ಟೋಬರ್ ೨೦೧೮ ರಲ್ಲಿ, ೨೦೧೮–೧೯ ದೇವಧರ್ ಟ್ರೋಫಿಗಾಗಿ ಭಾರತದ ಎ ಕ್ರಿಕೆಟ್ ತಂಡದಲ್ಲಿ ಅವರನ್ನು ಹೆಸರಿಸಲಾಯಿತು.[೧೦]

ಇಂಡಿಯನ್ ಪ್ರೀಮಿಯರ್ ಲೀಗ್

ಬದಲಾಯಿಸಿ

೨೦೧೪ ರ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಇವರನ್ನು ಖರೀದಿಸಿದರು, ಅಲ್ಲಿ ಅವರು ನಾಲ್ಕು ಋತುಗಳನ್ನು ಕಳೆದರು.

ಜನವರಿ ೨೦೧೮ ರಲ್ಲಿ, ಇವರನ್ನು ೨೦೧೮ ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ಖರೀದಿಸಿತು.[೧೧] ೩೦ ಏಪ್ರಿಲ್ ೨೦೧೯ ರಂದು, ಇವರು ೨೦೧೯ ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ೩ ಸತತ ವಿಕೆಟ್‌ಗಳನ್ನು ತೆಗೆದರು, ಇದರಲ್ಲಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಮಾರ್ಕಸ್ ಸ್ಟೊಯಿನಿಸ್ ಅವರ ವಿಕೆಟ್‌ಗಳು ಸೇರಿವೆ.[೧೨] ಶ್ರೇಯಸ್ ಗೋಪಾಲ್ ಐಪಿಎಲ್‌ನ ಅತಿ ಕಡಿಮೆ ಪಂದ್ಯಗಳಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.[೧೩]

ಫೆಬ್ರವರಿ ೨೦೨೨ ರಲ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿಗಾಗಿ ೨೦೨೨ ಹರಾಜಿನಲ್ಲಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ಖರೀದಿಸಿತು.[೧೪]

೨೦೨೪ ರ ಐಪಿಎಲ್ ಹರಾಜಿನಲ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಖರೀದಿಸಿದರು.

ಉಲ್ಲೇಖಗಳು :

ಬದಲಾಯಿಸಿ
  1. "Shreyas Gopal - CricketArchive profile". CricketArchive.
  2. "Under-19 ODI Matches played by Shreyas Gopal". CricketArchive.
  3. "Rahul Dravid is my cricketing God, says Shreyas Gopal". Times of India. Retrieved 10 August 2014.
  4. Notable Alumni Jain University
  5. "Rahul Dravid is my cricketing God, says Shreyas Gopal | New Zealand in India 2016 News - Times of India".
  6. IANS. "No Pressure, But Dream to Don India Colors Soon: Shreyas Gopal". India West (in ಇಂಗ್ಲಿಷ್). Archived from the original on 8 ಜುಲೈ 2020. Retrieved 8 July 2020.
  7. "Shreyas Gopal records first hat-trick of Irani Cup history - Times of India". The Times of India. Retrieved 4 May 2019.
  8. "Shubman Gill, Priyank Panchal and Faiz Fazal to lead Duleep Trophy sides". ESPNcricinfo. Retrieved 6 August 2019.
  9. "Duleep Trophy 2019: Shubman Gill, Faiz Fazal and Priyank Panchal to lead as Indian domestic cricket season opens". Cricket Country. Retrieved 6 August 2019.
  10. "Rahane, Ashwin and Karthik to play Deodhar Trophy". ESPNcricinfo. Retrieved 19 October 2018.
  11. "List of sold and unsold players". ESPNcricinfo. Retrieved 27 January 2018.
  12. "Gopal hat-trick in washout, RCB eliminated". ESPNcricinfo. Retrieved 1 May 2019.
  13. Rajarshi Gupta (May 1, 2019). "IPL 2019: Shreyas Gopal of Rajasthan Royals claims a hat-trick in 5-over game vs RCB". India Today (in ಇಂಗ್ಲಿಷ್). Retrieved 29 August 2021.
  14. "IPL 2022 auction: The list of sold and unsold players". ESPNcricinfo. Retrieved 13 February 2022.

ಬಾಹ್ಯ ಕೊಂಡಿಗಳು

ಬದಲಾಯಿಸಿ