ಜೈನ್ ವಿಶ್ವವಿದ್ಯಾನಿಲಯ

ಭಾರತದಲ್ಲಿರುವ ಒಂದು ವಿಶ್ವವಿದ್ಯಾಲಯ

ಜೈನ್ ವಿಶ್ವವಿದ್ಯಾನಿಲಯ, ಅಧಿಕೃತವಾಗಿ ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) , ಭಾರತದ ಬೆಂಗಳೂರಿನಲ್ಲಿರುವ ಖಾಸಗಿ ಡೀಮ್ಡ್-ಟು -ಬಿ-ವಿಶ್ವವಿದ್ಯಾಲಯ. ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಿಂದ ಆರಂಭವಾಗಿದ್ದು, ಇದು ೨೦೦೯ರಲ್ಲಿ ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ಸ್ಥಾನಮಾನವನ್ನು ಪಡೆಯಿತು.

ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ) ಗ್ಲೋಬಲ್ ಕ್ಯಾಂಪಸ್ ಕನಕಪುರ ಬೆಂಗಳೂರು

ಇತಿಹಾಸ

ಬದಲಾಯಿಸಿ

ಜೈನ್ ವಿಶ್ವವಿದ್ಯಾನಿಲಯವು ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜ್ (ಎಸ್ ಬಿ ಎಮ್ ಜೆ ಸಿ)ನಿಂದ ಆರಂಭವಾಗಿದ್ದು, ಇದನ್ನು ೧೯೯೦ ರಲ್ಲಿ ಜೆಜಿಐ ಗುಂಪಿನ ಸ್ಥಾಪಕ ಮತ್ತು ಅಧ್ಯಕ್ಷ ಡಾ.ಚೆನ್ರಾಜ್ ರಾಯ್ಚಂದ್ ಅವರು ಸ್ಥಾಪಿಸಿದರು. [] [] ೨೦೦೯ರಲ್ಲಿ ಈ ಕಾಲೇಜನ್ನು ವಿಶ್ವವಿದ್ಯಾನಿಲಯ ಸ್ಥಾನಮಾನವೆಂದು ಪರಿಗಣಿಸಲಾಯಿತು. [] ಇತ್ತೀಚಿನ ನವೀಕರಣಗಳನ್ನು ಪಡೆಯಲು ಜನರು ಜೈನ್ ವಿಶ್ವವಿದ್ಯಾನಿಲಯ ಕೊಚ್ಚಿ ವಾರ್ತೆಗಳನ್ನು ಸಹ ಹುಡುಕುತ್ತಾರೆ.

ಘಟಕ ಕಾಲೇಜುಗಳು ಮತ್ತು ಕೇಂದ್ರಗಳು

ಬದಲಾಯಿಸಿ

ಜೈನ್ (ಡೀಮ್ಡ್-ಟು-ಬಿ ಯುನಿವರ್ಸಿಟಿ) ಈ ಕೆಳಗಿನ ಕಾಲೇಜುಗಳು ಮತ್ತು ಕೇಂದ್ರಗಳನ್ನು ಒಳಗೊಂಡಿದೆ, ಎಲ್ಲವೂ ಬೆಂಗಳೂರಿನಲ್ಲಿ ಇವೆ. []

  • ಸಿಎಮ್‍ಸಿ ಬಿಸ್ನೆಸ್ ಸ್ಕೂಲ್
  • ಸೆಂಟರ್ ಆಫ಼್ ಮ್ಯಾನೇಜ್‍ಮೆಂಟ್ ಸ್ಟಡೀಸ್
  • ಸ್ನಾತಕೋತ್ತರ ಅಧ್ಯಯನ ಕೇಂದ್ರ
  • ದೂರ ಶಿಕ್ಷಣ ಮತ್ತು ವಾಸ್ತವ ಕಲಿಕಾ ಕೇಂದ್ರ
  • ಸಮಾಜ ವಿಜ್ಞಾನ ಮತ್ತು ಶಿಕ್ಷಣ ಸಂಶೋಧನಾ ಕೇಂದ್ರ
  • ನ್ಯಾನೊ ಮತ್ತು ಮೆಟೀರಿಯಲ್ ಸೈನ್ಸ್ ಸೆಂಟರ್
  • ಶುದ್ಧ ಮತ್ತು ಅನ್ವಯಿಕ ವಿಜ್ಞಾನ ಸಂಶೋಧನಾ ಕೇಂದ್ರ
  • ಸೆಂಟರ್ ಫ಼ಾರ್ ಡಿಸಾಸ್ಟರ್ ಮಿಟಿಗೇಶನ್
  • ಪ್ರಾಚೀನ ಭಾರತೀಯ ಇತಿಹಾಸ ಮತ್ತು ಸಂಸ್ಕೃತಿ ಕೇಂದ್ರ
  • ಭಾರತೀಯ ಮನೋವಿಜ್ಞಾನ ಕೇಂದ್ರ
  • ಜೀವ ವಿಜ್ಞಾನ ಸುಧಾರಿತ ಅಧ್ಯಯನ ಕೇಂದ್ರ
  • ಚೆನ್ರಾಜ್ ರಾಯ್ಚಂದ್ ವಾಣಿಜ್ಯೋದ್ಯಮ ಕೇಂದ್ರ
  • ಅಂತರಾಷ್ಟ್ರೀಯ ಏರೋಸ್ಪೇಸ್ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಸಂಸ್ಥೆ
  • ಸ್ಕೂಲ್ ಆಫ್ ಅಲೈಡ್ ಹೆಲ್ತ್‌ಕೇರ್ ಅಂಡ್ ಸೈನ್ಸಸ್
  • ಸ್ಕೂಲ್ ಆಫ್ ಕಾಮರ್ಸ್ ಸ್ಟಡೀಸ್
  • ಸ್ಕೂಲ್ ಆಫ್ ಸೈನ್ಸಸ್
  • ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ - ಜೈನ್ ವಿಶ್ವವಿದ್ಯಾಲಯ (ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಫ್ಯಾಕಲ್ಟಿ ಎಂದೂ ಕರೆಯಲಾಗುತ್ತದೆ)
  • ಸೃಜನಾತ್ಮಕ ಕಲೆ ಮತ್ತು ವಿನ್ಯಾಸ ಕೇಂದ್ರ

ಶಿಕ್ಷಣ

ಬದಲಾಯಿಸಿ

ಶೈಕ್ಷಣಿಕ ಕಾರ್ಯಕ್ರಮಗಳು

ಬದಲಾಯಿಸಿ

ಜೈನ್ ವಿಶ್ವವಿದ್ಯಾಲಯವು ವಾಣಿಜ್ಯ, ವಿಜ್ಞಾನ, ಮಾನವಿಕ ಮತ್ತು ಕಲೆ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮತ್ತು ನಿರ್ವಹಣೆಯಲ್ಲಿ ೨೦೦ಕ್ಕೂ ಹೆಚ್ಚು ಪದವಿ ಪೂರ್ವ ಮತ್ತು ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನೀಡುತ್ತದೆ. [] ಇದು ವ್ಯವಹಾರ ಆಡಳಿತ, ಎಂಜಿನಿಯರಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ತರಬೇತಿ ಸಹ ನೀಡುತ್ತದೆ.

ಮಾನ್ಯತೆಗಳು ಮತ್ತು ಶ್ರೇಯಾಂಕಗಳು

ಬದಲಾಯಿಸಿ

ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್ ಆಯ್ ಆರ್ ಎಫ಼್) ಸಂಸ್ಥೆಯು ೨೦೨೦ರಲ್ಲಿ ಒಟ್ಟಾರೆಯಾಗಿ ೧೦೧-೧೫೦ ವಿಶ್ವವಿದ್ಯಾನಿಲಯಗಳಲ್ಲಿ ೮೫ನೇ ಸ್ಥಾನವನ್ನು ಗಳಿಸಿದೆ. ಇದು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ೧೧೭ ಮತ್ತು ವ್ಯಾಪಾರ ಶಾಲೆಗಳಲ್ಲಿ ೮೬ನೇ ಸ್ಥಾನವನ್ನು ನೀಡಿದೆ. ಔಟ್ಲುಕ್ ಇಂಡಿಯಾ ವಿಶ್ವವಿದ್ಯಾನಿಲಯಗಳಲ್ಲಿ ೬೮ ನೇ ಸ್ಥಾನವನ್ನು ನೀಡಿದೆ.

ವಿದ್ಯಾರ್ಥಿ ಜೀವನ

ಬದಲಾಯಿಸಿ

ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯ) ಕ್ಯಾಂಪಸ್ ವಸತಿ ವ್ಯವಸ್ಥೆಯು ಸುಮಾರು ೮೫ ಪ್ರತಿಶತದಷ್ಟು ವಿದ್ಯಾರ್ಥಿ ಜನಸಂಖ್ಯೆಗೆ ಅವಕಾಶವನ್ನು ಕಲ್ಪಿಸುತ್ತದೆ.

 
ಜೈನ್ ವಿಶ್ವವಿದ್ಯಾಲಯದ ಹಾಸ್ಟೆಲ್ ಕಟ್ಟಡ

ಹಾಸ್ಟೆಲ್ ವಸತಿ

ಬದಲಾಯಿಸಿ

ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾನಿಲಯ) ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಆನ್-ಕ್ಯಾಂಪಸ್ (ಜೆಜಿಐ ಗ್ಲೋಬಲ್ ಕ್ಯಾಂಪಸ್) ಮತ್ತು ಆಫ್-ಕ್ಯಾಂಪಸ್ ವಸತಿಗಳನ್ನು ಒದಗಿಸುತ್ತದೆ. ಅವರ ಹೆಚ್ಚಿನ ಹಾಸ್ಟೆಲ್ ವಸತಿಗಾಗಿ ಅವರು ಕ್ಯಾಂಪಸ್ ಸ್ಟೂಡೆಂಟ್ಸ್ ಕಮ್ಯುನಿಟೀಸ್ (ಸಿಎಸಿ) ಎಂಬ ಕಂಪನಿಯೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ. ವಸತಿ ವ್ಯವಸ್ಥೆಗಳು ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕವಾಗಿರುತ್ತವೆ.[]

ಗಮನಾರ್ಹ ಹಳೆಯ ವಿದ್ಯಾರ್ಥಿಗಳು

ಬದಲಾಯಿಸಿ

ಇವನ್ನೂ ನೋಡಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Dr. Chenraj Roychand Founder Chairman of JAIN Group".
  2. "Sri Bhagawan Mahaveer Jain College". Jain College. Archived from the original on 2022-05-18. Retrieved 2018-04-16.
  3. "Deemed Universities in Karnataka". University Grants Commission. Retrieved 2018-04-17.
  4. "Schools: Jain (Deemed-to-be University)". Jain (Deemed-to-be University). Archived from the original on 13 December 2011. Retrieved 9 December 2011.
  5. "Programs and Courses Offered". Jain University. Retrieved 2018-04-16.
  6. "Hostel facility in Best university of Bangalore". Jain (Deemed-to-be University) (in ಇಂಗ್ಲಿಷ್). Retrieved 21 December 2018.
  7. "Anup Sridhar Profile". I love India. Retrieved 21 December 2018.
  8. "Top University for (Sports) in Bangalore, India". Jain University. Retrieved 21 December 2018.

ಬಾಹ್ಯ ಕೊಂಡಿಗಳು

ಬದಲಾಯಿಸಿ