ಶ್ರೀ ಶಂಕರನಾರಾಯಣ ದೇವಸ್ಥಾನ

ಶ್ರೀ ಶಂಕರನಾರಾಯಣ ದೇವಸ್ಥಾನ ವನ್ನು ಮಹರ್ಷಿ ಪರಶುರಾಮರು ರಚಿಸಿದ ಏಳು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಶಂಕರ(ಶಿವ) ನಾರಾಯಣ(ವಿಷ್ಣು) ಸಂಗಮವನ್ನು ನಾವು ನೋಡಬಹುದಾದ ಅಪರೂಪದ ದೇವಾಲಯಗಳಲ್ಲಿ ಇದು ಒಂದಾಗಿದೆ. ಶಂಕರನಾರಾಯಣ ಗ್ರಾಮವು ಸಹ್ಯಾದ್ರಿಯ ಸಮೀಪವಿರುವ ಪರ್ವತ ಶ್ರೇಣಿಗಳ ಕಣಿವೆಯಲ್ಲಿದೆ. ಇದು ಕರ್ನಾಟಕದ ಉಡುಪಿ ಜಿಲ್ಲೆಯ ಅರಬ್ಬೀ ಸಮುದ್ರದಿಂದ ೨೫ ಕಿ.ಮೀ.ದೂರದಲ್ಲಿದೆ.

ಪರಶುರಾಮ ಪುಣ್ಯಕ್ಷೇತ್ರಗಳು

ಬದಲಾಯಿಸಿ

ಈ ಏಳು ಪುಣ್ಯಕ್ಷೇತ್ರಗಳು ಪರಶುರಾಮ ಕ್ಷೇತ್ರವಾಗಿದೆ. ಈ ಪವಿತ್ರ ಸ್ಠಳಗಳನ್ನು ರಾಮ ಕ್ಷೇತ್ರದ ಏಳು ಪವಿತ್ರ ಸ್ಥಳಗಳಾದ: ಅಯೋಧ್ಯೆ, ಮಥುರಾ, ಮಾಯಾ, ಕಾಶಿ, ಕಂಚಿ, ಆವಂತಿಕಾ ಮತ್ತು ಪುರಿಗಳೊಂದಿಗೆ ಹೊಲಿಸಲಾಗಿದೆ.

ಇತಿಹಾಸ

ಬದಲಾಯಿಸಿ

ಕ್ರೋಡ ಮಹರ್ಷಿಯ ನಂತರ ಶಂಕರನಾರಾಯಣನನ್ನು ಕ್ರೋಡ ಎಂದೂ ಕರೆಯುತ್ತಾರೆ. ಪದ್ಮ ಪುರಾಣದ ಪುಷ್ಕರ ಕಾಂಡದ ೨೪ ನೇ ಅಧ್ಯಾಯದಲ್ಲಿ ಕ್ರೋಧ ಶಂಕರನಾರಾಯಣನ ಸುಂದರ ವಿವರಣೆಯನ್ನು ಕಾಣಬಹುದು. ಇದರ ಪ್ರಕಾರ ಖರಾಸುರ ಮತ್ತು ರಟ್ಟಾಸುರ ರಾಕ್ಷಸರು ಸಾಮಾನ್ಯ ಜನರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಕ್ರೋಡ ಮಹರ್ಷಿ ಭಗವಾನ್ ಶಿವ ಮತ್ತು ಭಗವಾನ್ ವಿಷ್ಣುವನ್ನು ಒಟ್ಟಿಗೆ ಧ್ಯಾನಿಸಿದರು ಮತ್ತು ಭಗವಾನ್ ಶಂಕರನಾರಾಯಣನ ರೂಪದಲ್ಲಿ ಬರುವಂತೆ ಪ್ರಾರ್ಥಿಸಿದರು. ಕ್ರೋಧ ಮಹರ್ಷಿಯ ಧ್ಯಾನದಿಂದ ಸಂತುಷ್ಟರಾದ ಶಿವ ಮತ್ತು ವಿಷ್ಣುವು ಶಂಕರನಾರಾಯಣನಾಗಿ ಈ ಸ್ಥಳಕ್ಕೆ ಬಂದು ಖರಾಸುರ ಮತ್ತು ರಟ್ಟಾಸುರರನ್ನು ಸಂಹರಿಸಿದರು. ಶಂಕರನಾರಾಯಣ ದೇವಸ್ಥಾನದ ಪಕ್ಕದಲ್ಲಿರುವ ಬೆಟ್ಟಕ್ಕೆ ಕ್ರೋಡಗಿರಿ ಎಂದು ಹೆಸರಿಸಲಾಗಿದೆ. ಕ್ರೋಡಗಿರಿಯ ಮೇಲ್ಬಾಗದಲ್ಲಿ ಶಂಕರನಾರಾಯಣ ದೇವರ ವಿಗ್ರಹವು ಗೌರಿ ಮತ್ತು ಲಕ್ಷ್ಮೀ ದೇವಿಯ ಜೊತೆಗೆ ಇದೆ.

ಗರ್ಭಗುಡಿ

ಬದಲಾಯಿಸಿ

ಶಂಕರನಾರಾಯಣ ದೇವಸ್ಥಾನದ ಮುಖ್ಯ ದೇವರು ಉದ್ಭವ ಲಿಂಗದ ರೂಪದಲ್ಲಿದೆ. ಶಂಕರ ಮತ್ತು ನಾರಾಯಣನನ್ನು ನೈಸರ್ಗಿಕವಾಗಿ ರೂಪುಗೊಂಡ ಲಿಂಗವು ಗರ್ಭಗುಡಿಯೊಳಗೆ ನೆಲದಿಂದ ಒಂದು ಅಡಿ ಕೆಳಗೆ ಇದೆ. ಲಿಂಗವನ್ನು ನೋಡಲು ಸಾಧ್ಯವಿಲ್ಲ. ಶಂಕರ ಲಿಂಗವು ಬಲಭಾಗದಲ್ಲಿದೆ(ಭಕ್ತರು ನೋಡುವಂತೆ ಎಡಭಾಗದಲ್ಲಿ) ಮತ್ತು ಎಡಭಾಗದಲ್ಲಿ ನಾರಾಯಣನ ಲಿಂಗವಿದೆ. ಶಂಕರ ಲಿಂಗವು ದುಂಡನೆಯ ಆಕಾರದಲ್ಲಿದ್ದರೆ, ನಾರಾಯಣ ಲಿಂಗವು ಪವಿತ್ರ ಹಸುವಾದ ಕಾಮಧೇನುವಿನ ಹೆಜ್ಜೆಗುರುತುಗಳೊಂದಿಗೆ ಸಮತಟ್ಟಾಗಿದೆ. ಇವು ಶಂಕರ ಲಿಂಗದ ಮೇಲೆ ಹಾಲು ಚಿಮುಕಿಸಲು ನಿಂತಿದ್ದ ಕಾಮಧೇನುವಿನ (ಪವಿತ್ರ ಹಸು)ಪಾದದ ಗುರುತುಗಳು. ವರ್ಷದ ಎಲ್ಲಾ ಸಮಯದಲ್ಲೂ ನೀರಿನ ಹರಿವು ಲಿಂಗಗಳಿಗೆ ಅಡ್ಡಲಾಗಿ ಹರಿಯುತ್ತದೆ ಮತ್ತು ಹರಿಯುವ ನೀರಿನ ಮಟ್ಟವು ಎಲ್ಲಾ ಸಮಯದಲ್ಲೂ ಸ್ಥಿರವಾಗಿರುತ್ತದೆ ಮತ್ತು ಒಂದೇ ಆಗಿರುತ್ತದೆ. ಲಿಂಗಗಳನ್ನು ಉದ್ಬವ (ನೈಸರ್ಗಿಕವಾಗಿ ರೂಪುಗೊಂಡ) ಎಂದು ಪರಿಗಣಿಸಲಾಗುತ್ತದೆ. ಈ ಪವಿತ್ರ ನೀರನ್ನು ಶುದ್ಧಾಮೃತ ತೀರ್ಥವೆಂದು ಕರೆಯಲಾಗುತ್ತದೆ. ಲಿಂಗಗಳು ನೆಲಮಟ್ಟದಿಂದ ೧ ಅಡಿ ಕೆಳಗಿರುವುದರಿಂದ ಭಕ್ತರಿಗೆ ಕಾಣುವುದಿಲ್ಲ. ದೇವಾಲಯದ ಪಂಡಿತರು ಲಿಂಗಗಳ ಪ್ರತಿಬಿಂಬವನ್ನು ಭಕ್ತರು ನೋಡುವಂತೆ ಕೋನದಲ್ಲಿ ನೆಲಮಟ್ಟದಲ್ಲಿ ಕನ್ನಡಿಯನ್ನು ಇಡುತ್ತಾರೆ. ಆದಾಗ್ಯೂ, ೨೦೧೩ ರಲ್ಲಿ ದೇವಾಲಯದ ನವೀಕರಣದ ನಂತರ ಈ ಲಿಂಗಗಳನ್ನು ಮುಚ್ಚಲಾಗಿದೆ ಮತ್ತು ಅದರ ಮೇಲೆ ಭಗವಾನ್ ಶಂಕರ ಮತ್ತು ಭಗವಾನ್ ನಾರಾಯಣನ ಮುಖಗಳನ್ನು ಇರಿಸಲಾಗಿದೆ. ಅರ್ಧ ಶಂಕರ ಮತ್ತು ಅರ್ಧ ನಾರಾಯಣನ ವಿಗ್ರಹವನ್ನು ಲಿಂಗಗಳ ಹಿಂದೆ ಇರಿಸಲಾಗಿದೆ ಮತ್ತು ಪ್ರಸ್ತುತ ಎಲ್ಲಾ ಆಚರಣೆಗಳನ್ನು ಈ ವಿಗ್ರಹಕ್ಕೆ ನಡೆಸಲಾಗುತ್ತದೆ. ದೇವಾಲಯದ ಎದುರು ಬೃಹತ್ ಪುಷ್ಕರಣಿ ಇದೆ. ದೇವಾಲಯದ ಗೋಡೆಗಳ ಮೇಲೆ ಪೌರಾಣಿಕ ಪಾತ್ರಗಳನ್ನು ಚಿತ್ರಿಸುವ ಟೆರಾಕೋಟಾ ವರ್ಣಚಿತ್ರಗಳಿವೆ. ದೇವಾಲಯವು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೧ ರವರೆಗೆ ಮತ್ತು ಸಂಜೆ ೫ ರಿಂದ ರಾತ್ರಿ ೮.೩೦ ರವರೆಗೆ ತೆರೆದಿರುತ್ತದೆ.

ಕೋಟಿ ತೀರ್ಥ

ಬದಲಾಯಿಸಿ

ದೇವಾಲಯದ ಮುಂಭಾಗದಲ್ಲಿ ಕೋಟಿ ತೀರ್ಥವಿದೆ. ಈ ದೇವಾಸ್ಥಾನಕ್ಕೆ ಬರುವ ಭಕ್ತರು ಮೊದಲು ಈ ತೀರ್ಥದ ಪ್ರೋಕ್ಷಣೆ ಮಾಡಿ ನಂತರ ಶಂಕರನಾರಾಯಣ ದೇವರ ದರ್ಶನ ಮಾಡುತ್ತಾರೆ. ಕಲ್ಲಿನ ಆವರಣ ಮತ್ತು ಸುತ್ತಲಿನ ತೆಂಗು ಮತ್ತು ಅಡಿಕೆ ತೋಟಗಳು ಕೊಳದ ಸೌಂದರ್ಯವನ್ನು ಹೆಚ್ಚಿಸಿವೆ. ಕೊಳವು ಶ್ರೀಮಂತ ಆಧ್ಯಾತ್ಮಿಕ ಸಂಬಂಧವನ್ನು ಹೊಂದಿದೆ. ಈ ಕೊಳದಲ್ಲಿ ಪಿತೃತರ್ಪಣ ಮತ್ತು ತೀರ್ಥಸ್ನಾನದಂತಹ ಆಚರಣೆಗಳು ನಡೆಯುತ್ತವೆ. ಕೋಟಿ ತೀರ್ಥವು ಈ ಸ್ಥಳದ ಸುತ್ತಲೂ ಕಂಡುಬರುವ ಎಲ್ಲಾ ಇಪ್ಪತ್ತೊಂದು ಕೊಳಗಳಲ್ಲಿ ಅತ್ಯಂತ ವಿಶಾಲವಾಗಿದೆ. ಈ ದೇವಾಸ್ಥಾನದಲ್ಲಿ ಒಂದು ಬಾವಿಯಿದೆ. ದೇವಾಲಯದ ಬಾವಿಯು ಯಾವುದೇ ಋತುವಿನಲ್ಲಿ ತುಂಬಿರುತ್ತದೆ ಮತ್ತು ಋತುವಿನ ಉದ್ದಕ್ಕೂ ಯಾವುದೇ ಇಂಚು ಕಡಿಮೆಯಾಗುವುದಿಲ್ಲ.

ಉಲೇಖಗಳು

ಬದಲಾಯಿಸಿ
  1. https://shankaranarayana.org/history/ Archived 2023-01-29 ವೇಬ್ಯಾಕ್ ಮೆಷಿನ್ ನಲ್ಲಿ.
  2. https://shankaranarayana.org/how-to-reach/ Archived 2023-01-29 ವೇಬ್ಯಾಕ್ ಮೆಷಿನ್ ನಲ್ಲಿ.
  3. https://www.pilgrimaide.com/blog/Shankaranarayana-temple
  4. https://www.justdial.com/Udupi/Sri-Shankaranarayana-Temple/0820PX820-X820-180310000819-J5M7_BZDET[ಶಾಶ್ವತವಾಗಿ ಮಡಿದ ಕೊಂಡಿ]