ಶ್ರೀ ಪಡ್ರೆ ಯವರು ಪತ್ರಕರ್ತರು, ಕೃಷಿಕರು ಮತ್ತು ಸಾಮಾಜಿಕ ಕಾರ್ಯಕರ್ತರು. ಕಳೆದ ೪೦ ವರ್ಷಗಳಿಂದ ಅಧ್ಯಯನ, ಮಳೆ ನೀರು ಇಂಗಿಸುವ ಸಂಶೋಧನಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ತಾಯ್ನುಡಿ ಕನ್ನಡ. ಕಾಸರಗೋಡು ಜಿಲ್ಲೆ ವಾಣಿನಗರದ ಶ್ರೀ ಪಡ್ರೆ ಅವರು ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್ ಪ್ರಕಟಿಸುತ್ತಿರುವ ‘ಅಡಿಕೆ ಪತ್ರಿಕೆ’ ಕೃಷಿ ಮಾಸಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು.

ಶ್ರೀ ಪಡ್ರೆ
Shree Padre.jpg
ಜನನನವಂಬರ್ ೧೯, ೧೯೫೫
ಪೆರ್ಲ
ವಾಸಭಾರತ Flag of India.svg
ರಾಷ್ಟ್ರೀಯತೆಭಾರತೀಯ Flag of India.svg
ಕಾರ್ಯಕ್ಷೇತ್ರಗಳುಪತ್ರಕರ್ತ ಕೃಷಿಕ
ಅಭ್ಯಸಿಸಿದ ಸಂಸ್ಥೆಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಸಂತ ಫಿಲೋಮಿನಾ ಕಾಲೇಜು ಪುತ್ತೂರು
ಶ್ರೀ ಪಡ್ರೆ ಯವರೊಂದಿಗೆ ಪದ್ಮಶ್ರೀ ಮಹಾಲಿಂಗ ನಾಯ್ಕ್ ದಂಪತಿ

ಹುಟ್ಟುಸಂಪಾದಿಸಿ

ಶ್ರೀ ಪಡ್ರೆ ಯವರು ಕಾಸರೊಗೋಡು ಜಿಲ್ಲೆಯ ಪಡ್ರೆಯಲ್ಲಿ ೧೯೫೫ ನವಂಬರ್ ೧೯ ರಂದು ಜನಿಸಿದರು. ಶ್ರೀ ಕೆ. ರಾಮಕೃಷ್ಣ ಭಟ್ ಮತ್ತು ಶ್ರಿಮತಿ ಸಾವಿತ್ರಿ ಯವರು ಇವರ ಹೆತ್ತವರು.

ವಿದ್ಯಾಭ್ಯಾಸಸಂಪಾದಿಸಿ

ಇವರು ಬಿ.ಎಸ್ಸಿ ಪದವಿ (ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ)ಯನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರು ಇಲ್ಲಿ ಪಡೆದರು ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ದಲ್ಲಿ ಪಡೆದರು.

ರೈತ ಸ್ನೇಹಿ ಬರವಣಿಗೆಸಂಪಾದಿಸಿ

ಕಳೆದ ಮೂರು ದಶಕಗಳಿಗೂ ಹೆಚ್ಚು ಸಮಯದಿಂದ ಕನ್ನಡ, ಇಂಗ್ಲಿಷ್ ಮತ್ತು ಮಲಯಾಳಂ ಮೂರೂ ಭಾಷೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದವರು. ನೀರುಳಿಸುವ, ಇಳೆಗೆ ನೀರಿಂಗಿಸುವ ಮಹತ್ವವನ್ನು ಸಾಕಷ್ಟು ಮುಂಚಿತವಾಗಿಯೇ ಮನಗಂಡ ಅವರು, ಜಲಸಾಕ್ಷರತೆ ಹೆಚ್ಚಿಸಲು ನಾಡಿನ ಉದ್ದಗಲ ಸಂಚರಿಸಿ ಅರಿವಿನ ಬೀಜ ಬಿತ್ತಿದವರು. ಜನವಾಹಿನಿಯ ‘ಸುಜಲಾಂ ಸುಫಲಾಂ’, ವಿಜಯ ಕರ್ನಾಟಕ ದ ‘ಹನಿಗೂಡಿಸೋಣ’ ಮತ್ತು ವಿಜಯವಾಣಿಯ ‘ನೀರಿದ್ದರೆ ನಾಳೆ’ ಅಂಕಣಗಳಲ್ಲಿ ಅನೇಕಾನೇಕ ಜಲಪಾಠಗಳನ್ನು, ಯಶೋಗಾಥೆಗಳನ್ನು ಸಾದರಪಡಿಸಿದವರು.[೧]. ಕರ್ನಾಟಕದ ಉದ್ದಗಲಕ್ಕೆ ಸಾವಿರಾರು ಮೈಲಿಗಳನ್ನು ಸಂಚರಿಸಿ ನೂರಾರು ಪ್ರಾತ್ಯಕ್ಷಿಕೆಗಳ ಮೂಲಕ ನೀರುಳಿಸುವ ವಿಧಾನಗಳನ್ನು ತಿಳಿಸಿದರು. ನೀರಿಗಾಗಿ ಪತ್ರಿಕೋದ್ಯಮವೆಂಬ ಶೀರ್ಷಿಕೆಯಡಿ ಪ್ರಜಾವಾಣಿ ಪತ್ರಿಕೆಯವರು ನಡೆಸುವ ಕಾರ್ಯಕ್ರಮದಲ್ಲಿ ಇವರು ಪ್ರಮುಖ ಸಂಪನ್ಮೂಲ ವ್ಯಕ್ತಿ. ಪದ್ಮಶ್ರೀ ಪ್ರಶಸ್ತಿ ಪಡೆದ ಅಮೈ ಮಹಾಲಿಂಗ ನಾಯ್ಕ್ ರವರ ಯಶೋಗಾಥೆಯನ್ನು ಜನರಿಗೆ ತಿಳಿಸಿದ ಕೀರ್ತಿ ಶ್ರೀ ಪಡ್ರೆಯವರದು.[೨][೩]

ಹಲಸಿನ ಹಣ್ಣಿನ ಬಗ್ಗೆ ಜಾಗ್ರತಿಸಂಪಾದಿಸಿ

ಹಲಸಿನ ಹಣ್ಣಿನ ಬಗೆಗೆ ಜನಜಾಗ್ರತಿ ಮಾಡುವ ಮೂಲಕ ಅದರ ಮಹತ್ವವನ್ನು ಜನಮನಕ್ಕೆ ಮುಟ್ಟಿಸುವ ಕೆಲಸ ಮಾಡುತಿದ್ಡಾರೆ. [೪] ಬಹು ಉಪಯೋಗಿ ಹಲಸಿನ ಹಣ್ಣಿನ ಬಗೆಗೆ ಕೇರಳ ಸರಕಾರದಲ್ಲಿ ಬಹಳ ಸ್ಪಂದನೆ ಸಿಗುವ ಹಾಗಾಗಿದೆ. [೫] [೬][೭] ಕಳೆದ ಹತ್ತಾರು ವರ್ಷಗಳಿಂದ ವಿಶ್ವದ ವಿವಿಧ ತಳಿಯ ಹಲಸಿನ ಹಣ್ಣಿನ ಬಗ್ಗೆ ಅಡಿಕೆ ಪತ್ರಿಕೆಯಲ್ಲಿ ಹಲವಾರು ಲೇಖನಗಳನ್ನು ಬರೆದು ಜನರಿಗೆ ನೀಡಿದ್ದಾರೆ. ಶ್ರಿಲಂಕಾ ಮುಂತಾದ ದೇಶಗಳಿಗೆ ತೆರಳಿ ಅಧ್ಯಯನ ಮಾಡಿದ್ದಾರೆ. ಇದರಿಂದಾಗಿ ಹಲಸಿನ ಬೆಳೆಗಾರರೊಂದಿಗೆ ಸಮನ್ವಯ ಏರ್ಪಟ್ಟಿದೆ.[೮]

ಪುಸ್ತಕಗಳುಸಂಪಾದಿಸಿ

  1. Rain Water Harvesting ((English)
  2. ಅಡಿಕೆ ಪತ್ರಿಕೆ -ಸಂಪಾದಕ
  3. ಮಣ್ಣು ಮತ್ತು ನೀರು ಕರ್ನಾಟಕ ಬರನಿರೋಧಕ ಜಾಣ್ಮೆಗಳು (ಕನ್ನಡ)
  4. ವಿಷ ಮಳಯಿಲ್ ಪೊಳ್ಳಿಯ ಮನಸ್ಸು (ಮಲಯಾಳಂ)
  5. ಅಲಕ್ಷಿತ ಕಲ್ಪವೃಕ್ಷ ಹಲಸು ಭವಿಷ್ಯದ ಬೆಳೆ
  6. ಜನಶಕ್ತಿಯಿಂದ ನದಿಗಳಿಗೆ ಮರುಜೀವ
  7. ಬಾಳೆಕಾಯಿ ಸೋತಾಗ ಊರುಗೋಲಾದ ಬಾಕಾಹು
  8. ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ
  9. ನೆಲ ಜಲ ಉಳಿಸಿ
  10. ಹನಿಗೊಡಿಸುವ ಹಾಡಿಯಲ್ಲಿ
  11. ಬಾನಿಗೊಂದು ಆಳಿಕೆ
  12. ಗುಜರಾತಿನ ನೀರ ತಿಜೋರಿ ತಾಮ್ಕ
  13. The Water Catchers (English)
  14. ಕಟ್ಟಗಳು (ಸಂ. ಶ್ರ್ರೀಪಡ್ರೆ ಮತ್ತು ಡಾ. ಕೃಷ್ಣಮೂರ್ತಿ ವಾರಣಾಸಿ)
  15. ಕೃಷಿಕರ ಕೈಗೆ ಲೇಖನಿ (ಸಂ.)
  16. ರೂಪರೆಲ್ ಮತ್ತೆ ಬತ್ತಲಿಲ್ಲ
  17. ನೀರ ನೆಮ್ಮದಿಗೆ ನೂರಾರು ದಾರಿ
  18. ಶರಣು ಬನ್ನಿ ಜಲಕಾಯಕ್ಕೆ
  19. ನೀರ ಸಮಸ್ಯೆಗೆ ಇಲ್ಲಿದೆ ಪರಿಹಾರ
  20. ಓಡಲು ಬಿಡದಿರಿ ಮಳೆ ನೀರ
  21. ಮಣ್ಣು ನೀರು
  22. ಬರವನು ಮಣಿಸಿದ ಮಲ್ಲಣ್ಣ
  23. ಗುಡ್ದದ ಮೇಲಿನ ಏಕವ್ಯಕ್ತಿ ಸೈನ್ಯ

ಗೌರವಗಳು ಮತ್ತು ಪ್ರಶಸ್ತಿಗಳುಸಂಪಾದಿಸಿ

  1. ಅಶೋಕ ಫೆಲೊ (2000)[೯]
  2. ಸ್ಟೇಟ್ಸ್ ಮಾನ್ ಅವಾರ್ಡ್ (1997)- ಪಬ್ಲಿಕ್ ರಿಲೇಶನ್ ಸೊಸೈಟಿ [೧೦]
  3. ಇಂಟರ್ನ್ಯಾಷನಲ್ ಅಂಬಾಸಿಡಾರ್ಅ ಫಾರ್ ಜಾಕ್ ಫ್ರೂಟ್ (2017) ಜಾಕ್ ಫ್ರೂಟ್ ಪ್ರಮೋಷನ್ ಕೌನ್ಸಿಲ್ ಆಫ್ ಇಂಡಿಯಾ [೧೧]
  4. ಸಂದೇಶ ಪ್ರಶಸ್ತಿ (2001)[೧೨]
  5. ಡಾ. ಶಿವರಾಮ ಕಾರಂತ ಪರಿಸರ ಪ್ರಶಸ್ತಿ (2018)[೧೩]

ಉಲ್ಲೇಖಸಂಪಾದಿಸಿ

  1. www.rainwaterharvesting.org/People/RuralJY.htm#shre )
  2. https://thelogicalindian.com/agriculture/amai-mahalinga-naik-converted-his-barren-land-into-flourishing-farm-33561
  3. https://www.thehindu.com/news/cities/Mangalore/mahalinga-naik-felicitated/article38330938.ece
  4. https://www.civilsocietyonline.com/cover-story/how-farmer-journos-made-jackfruit-a-star-in-kerala/
  5. https://www.vice.com/en/article/d7ky4v/this-man-is-trying-to-save-indias-food-future-with-jackfruit
  6. https://www.downtoearth.org.in/interviews/food/-the-jackfruit-will-definitely-become-the-most-sought-after-fruit-in-the-coming-years-in-india--50450
  7. https://indiatogether.org/new-horizons-for-jackfruit-industry-agriculture
  8. https://www.itfnet.org/v1/2015/01/india%E2%80%99s-unique-treasure-red-fleshed-jackfruit/
  9. https://www.ashoka.org/en-us/fellow/shree-padre
  10. http://asu.thehoot.org/media-watch/media-practice/shree-padre-s-water-story-2599
  11. https://www.mangalorean.com/shree-padre-nominated-global-jackfruit-ambassador/
  12. https://timesofindia.indiatimes.com/city/mangaluru/padre-8-others-get-sandesha-awards/articleshow/11958236.cms
  13. https://www.daijiworld.com/news/newsDisplay?newsID=532304