ಶೇನ್ ವಾರ್ನ್ ಇವರು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಲೆಗ್ ಸ್ಪಿನ್ ಗೂಗ್ಲಿ ಬೌಲರರು ಮತ್ತು ವಿಶ್ವ ಕ್ರಿಕೆಟ್ ಕಂಡ ಗೂಗ್ಲಿ ಬೌಲರರಲ್ಲಿ ಒಬ್ಬರು. ಇವರು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದರು. ಈ ದಾಖಲೆಯನ್ನು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ ಅವರು ಸರಿಗಟ್ಟಿದರು. ೨೦೦೦ ವಿಸ್ಡೆನ್ ಘೋಷಿಸಿದ ಐದು ಮಂದಿ ವಿಸ್ಡೆನ್ ಕ್ರಿಕೆಟರ ಅಫ್ ದಿ ಸೆಂಚುರಿಯಲ್ಲಿ ಇವರೊಬ್ಬರಾಗಿದ್ದರು, ಮತ್ತು ಆ ಪಟ್ಟಿಯಲ್ಲಿದ್ದ ಕೇವಲ ಏಕೈಕ ಬೌಲರರಾಗಿದ್ದರು. ಟೆಸ್ಟ್ ಪಂದ್ಯಗಳಲ್ಲಿ ೩೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿರುವ ಇವರು ಯಾವುದೇ ಶತಕವಿಲ್ಲದೇ ಅತೀ ಹೆಚ್ಚು ರನ್ನುಗಳನ್ನು ಗಳಿಸಿರುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಶೇನ್ ವಾರ್ನ್

ಇವರು ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಮತ್ತು ತರಬೇತುದಾರರಾಗಿದ್ದಾರೆ. ಇವರ ತಂಡ ಈ ಲೀಗಿನ ಮೊದಲ ವರ್ಷದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಬೌಲಿಂಗ್ ಸಾಧನೆ

ಬದಲಾಯಿಸಿ
 
ಬ್ರಿಸ್ಬೇನ್ದಲ್ಲಿ ಬೌಲಿಂಗ್ ಮಾಡುತ್ತಿರುವ ವಾರ್ನ್

ಟೆಸ್ಟ್ ಪಂದ್ಯಗಳು

ಬದಲಾಯಿಸಿ
ಶೇನ್ ವಾರ್ನ್ ಟೆಸ್ಟ್ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಉತ್ತಮ ಸಾಧನೆ ಇನ್ನಿಂಗ್ನಲ್ಲಿ ೫ ವಿಕೆಟ್ ಪಂದ್ಯದಲ್ಲಿ ೧೦ ವಿಕೆಟ್ ಕ್ಯಾಚುಗಳು
೪೦,೭೦೪ ೭೦೮ ೨೫.೪೧ ೮/೭೧ ೩೭ ೧೦ ೧೨೫

ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು

ಬದಲಾಯಿಸಿ
ಶೇನ್ ವಾರ್ನ್ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ
ಒಟ್ಟು ಎಸೆತಗಳು ವಿಕೆಟ್ಟುಗಳು ಸರಾಸರಿ ಪಂದ್ಯದಲ್ಲಿ ೫ ವಿಕೆಟ್ ಉತ್ತಮ ಸಾಧನೆ ಕ್ಯಾಚುಗಳು
೧೦೬೪೨ ೨೯೩ ೨೫.೭೩ ೫/೩೩ ೮೦

ಟೆಸ್ಟ್ ವಿಕೆಟ್ ಮೈಲಿಗಲ್ಲುಗಳು

ಬದಲಾಯಿಸಿ