ಮುತ್ತಯ್ಯ ಮುರಳೀಧರನ್
ಶ್ರೀಲಂಕಾ ಕ್ರಿಕೆಟ್ ತಂಡದ ಆಫ್ ಸ್ಪಿನ್ ಬೌಲರರು
ಮುತ್ತಯ್ಯ ಮುರಳೀಧರನ್ ಇವರು ಶ್ರೀಲಂಕಾ ಕ್ರಿಕೆಟ್ ತಂಡದ ಆಫ್ ಸ್ಪಿನ್ ಬೌಲರರು. ಇವರು ಟೆಸ್ಟ್ ಪಂದ್ಯಗಳಲ್ಲಿ ಅತೀ ಹೆಚ್ಚಿನ ವಿಕೆಟ್ ಪಡೆದಿರುವ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಇವರು ಎರಡನೆಯ ಸ್ಥಾನದಲ್ಲಿದ್ದಾರೆ. ೨೦೦೨ರಲ್ಲಿ ವಿಸ್ಡೆನ್ ಕ್ರಿಕೆಟ್ ಪಂಚಾಂಗ ಇವರನ್ನು ಅತ್ಯುತ್ತಮ ಟೆಸ್ಟ್ ಮ್ಯಾಚ್ ಬೌಲರ್ ಎಂದು ಘೋಷಿಸಿತ್ತು. ಇವರ ಬೌಲಿಂಗ್ ಶೈಲಿ ಬಹಳಷ್ಟು ಚರ್ಚೆ ಮತ್ತು ವಿವಾದಕ್ಕೆ ಗ್ರಾಸವಾಗಿತ್ತು. ಮೂರು ಬಾರಿ ಬಯೊ-ಮೆಕ್ಯಾನಿಕಲ್ ಪರೀಕ್ಷೆಗಳ ನಂತರ ಇವರ ಶೈಲಿ ಸರಿಯಾಗಿದೆ ಎಂದು ಹೇಳಲಾಗಿದೆ. ಇವರು ೧೯೯೬ರ ವಿಶ್ವ ಕಪ್ ಕ್ರಿಕೆಟ್ ಗೆದ್ದ ಶ್ರೀಲಂಕಾ ತಂಡದ ಸದಸ್ಯರಾಗಿದ್ದರು.
ಬೌಲಿಂಗ್ ಸಾಧನೆ
ಬದಲಾಯಿಸಿಟೆಸ್ಟ್ ಪಂದ್ಯಗಳು
ಬದಲಾಯಿಸಿಮುತ್ತಯ್ಯ ಮುರಳೀಧರನ್ ಟೆಸ್ಟ್ ಸಾಧನೆ | |||||||
---|---|---|---|---|---|---|---|
ಆಡಿದ ಪಂದ್ಯಗಳು | ಒಟ್ಟು ಎಸೆತಗಳು | ವಿಕೆಟ್ಟುಗಳು | ಸರಾಸರಿ | ಉತ್ತಮ ಸಾಧನೆ | ಇನ್ನಿಂಗ್ನಲ್ಲಿ ೫ ವಿಕೆಟ್ | ಪಂದ್ಯದಲ್ಲಿ ೧೦ ವಿಕೆಟ್ | ಕ್ಯಾಚುಗಳು |
೧೨೫ | ೪೧,೬೦೨ | ೭೬೯ | ೨೧.೯೫ | ೯/೫೧ | ೬೬ | ೨೨ | ೬೮ |
ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳು
ಬದಲಾಯಿಸಿಮುತ್ತಯ್ಯ ಮುರಳೀಧರನ್ ಒಂದು ದಿನದ ಅಂತರ್ರಾಷ್ಟ್ರೀಯ ಪಂದ್ಯಗಳ ಸಾಧನೆ | ||||||
---|---|---|---|---|---|---|
ಆಡಿದ ಪಂದ್ಯಗಳು | ಒಟ್ಟು ಎಸೆತಗಳು | ವಿಕೆಟ್ಟುಗಳು | ಸರಾಸರಿ | ಪಂದ್ಯದಲ್ಲಿ ೫ ವಿಕೆಟ್ | ಉತ್ತಮ ಸಾಧನೆ | ಕ್ಯಾಚುಗಳು |
೩೨೫ | ೧೭,೫೩೫ | ೫೦೨ | ೨೨.೫೨ | ೯ | ೭/೩೦ | ೧೨೬ |