ಶಾಸನಗಳ ಮತ್ತು ಹಸ್ತಪ್ರತಿಗಳಸಂರಕ್ಷಣೆ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಸಾಮಾನ್ಯವಾಗಿ ನಾಶವಾಗುವಂತಹ ತಾಳೇಗರಿ, ಭೂರ್ಜಪತ್ರ, ಕಾಗದ ಮೊದಲಾದವುಗಳ ಮೇಲಿನ ಬರಹಗಳನ್ನು ಬಿಟ್ಟು ಬಹುಕಾಲ ಉಳಿಯುವಂತಹ ಶಿಲೆ, ಲೋಹಗಳು ಮೊದಲಾದವುಗಳ ಮೇಲಿನ ಬರಹಗಳನ್ನು ಶಾಸನಗಳೆಂದು ಕರೆಯುತ್ತಾರೆ.ಶಾಸನವು ಸಂಸ್ಕೃತದ 'ಶಾಸ್' ಎಂಬ ಪದದಿಂದ ಬಂದಿದೆ. ಅಂದರೆ 'ಆಜ್ಙೆ' ಎಂದರ್ಥ.
ಶಾಸನಗಳ ಬರವಣಿಗೆಗೆ ಮಾಧ್ಯಮವಾಗಬಹುದಾದ ಎಲ್ಲಾ ವಸ್ತುಗಳ ಮೇಲೂ ಕಂಡು ಬರುತ್ತದೆ.ಮರದ ಮೇಲೆ ಬರೆದಿರುವ ಶಾಸನ ಚೈನಾದಲ್ಲಿ ಸಿಕ್ಕಿವೆ.ನಾಣ್ಯಗಳ ಮೇಲೆ ಮಣ್ಣಿನ ಪಾತ್ರೆಗಳ ಮೇಲೆಬರೆದಿರುವ ಶಾಸನಗಳು ದೊರೆತಿವೆ. ಭಾರತದಲ್ಲಿ ಅತ್ಯಂತ ಪ್ರಾಚಿನವಾದ ನಾಗರಿಕತೆ ಹರಪ್ಪ ಮತ್ತು ಮೆಹೆಂಜೊದಾರೊ. ಆದರೆ ಅವುಗಳ ಕಾಲ ಎನ್ನೂ ಖಚಿತವಾಗದ್ದರಿಂದ ಅಶೋಕನ ಶಾಸನಗಳೇ ಅತ್ಯಂತ ಪ್ರಾಚೀನ ಶಾಸನವೆನ್ನಬಹುದಾಗಿದೆ. ಕರ್ನಾಟಕದಲ್ಲಿಯೂ ಅಶೋಕನ ಶಾಸನಗಳು ದೊರೆತಿವೆ. ಕರ್ನಾಟಕದಲ್ಲಿ ಕನ್ನಡ ಮಾತ್ರವಲ್ಲದೆ ಇತರ ಭಾಷೆಯ ಶಾಸನಗಳು ದೊರೆತಿವೆ. ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಶಾಸನಗಳು ಅಧಿಕ ಪ್ರಮಾಣದಲ್ಲಿ ದೊರೆತಿವೆ. ಅದರಲ್ಲಿ ತಮಿಳು ಭಾಷೆಯೇ ಮೊದಲ ಸ್ಥಾನದಲ್ಲಿದೆ. ಕನ್ನಡ ಭಾಷೆಯೂ ಎರಡನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಇದುವರೆಗೆ ತಿಳಿದಿರುವ ಮಟ್ಟಿಗೆ ೨೦.೦೦೦ ಶಾಸನಗಳನ್ನು ಸಂಗ್ರಹಿಸಲಾಗಿದೆ.
ಮೂಲತ: ಶಾಸನ ಎಂದರೆ ಮೊದಲೇ ಹೇಳಿದ "ಆಜ್ಞೆ" ಎಂದರ್ಥ. ಶಾಸನದಲ್ಲಿ ರಾಜನ ಸ್ವಂತ ರುಜು ಇರಬೆಕು. ಆಜ್ಞೆ ಹೊರಡಿಸಿದ ದಿನಾಂಕ ಇರಬೇಕು.ಅದು ಹೆಗೆ ಆರಂಭವಾಗುವದು ನೀವೆಲ್ಲ ಹೀಗೆ ಮಾಡಬೇಕು ಮತ್ತು ಈ ಆಜ್ಞೆಯಂತೆ ನಡೆದುಕೊಳ್ಳಬೇಕು ಇತ್ಯಾದಿಗಳು. ಶಾಸನಗಳನ್ನು ಹೆಗೆ ಸಿದ್ದಗೊಳಿಸಬೇಕು ಎಂಬುದನ್ನು ತಿಳಿಸುವ ಕೆಲವು ಕೈಪಿಡಿಗಳು ಪ್ರಾಚೀನ ಬಾರತದಲ್ಲಿದ್ದವು. ಕ್ಷೇಮೇಂದ್ರ ವ್ಯಾಸದಾಸನ 'ಲೋಕಪ್ರಕಾಶ' ಲೇಖಪಂಚಾಶಿಕ' 'ಲೇಖಪದ್ದತಿ' ಗ್ರಂಥಗಳು ಇತ್ಯಾದಿ. ಶಾಸನಗಳನ್ನು ಸಿದ್ದಗೊಳಿಸುವಲ್ಲಿ ಸಾನಾನ್ಯವಾಗಿ ಮೂವರು ಪಾತ್ರವಹಿಸುತ್ತಿದ್ದರು. ಕೃತಿಕಾರ, ಲಿಪಿಕಾರ ಹಾಗು ಶಿಲ್ಪಿ. ಕೃತಿಕಾರ ಶಾಸಮದ ಕರಡನ್ನು ತಾಳೆಪತ್ರ ಅಥವಾ ಭೂರ್ಜ ಪತ್ರದ ಮೇಲೆ ಸಿದ್ದಪಡಿಸಲಾಗುತ್ತಿದೆ. ಅದನ್ನು ಲಿಪಿಕಾರ ಶಿಲೆಯ ಮೇಲೆ ತಾಮ್ರ ಪಟದ ಮೇಲೆ ಬಳಪದಿಂದಲೋ, ಮಸಿಯಿಂದಲೋ, ಬಣ್ಣದಿಂದಲೋ ಬರೆದುಕೊಳ್ಳುತ್ತಿದ್ದ.ಶಿಲ್ಪಿ ಅದನ್ನು ಕೊರೆಯುತ್ತಿದ್ದ. ಕೊರೆಯುವದು ಎಂಬ ಅರ್ಥದಲ್ಲಿ 'ಉತ್ಕೀರ್ಣ' ಎಂಬ ಶಬ್ದ ಸಂಸ್ಕೃತದಲ್ಲಿ ಪ್ರಯುಕ್ತವಾಗಿದೆ. ಅಂತೂ ಶಾಸನ ವಿಷಯವನ್ನೂ ರಚಿಸುವ ಮತ್ತು ಕೊರೆಯುವ ವ್ಯಕ್ತಿಗಳು ಸಂಪೂರ್ಣವಾಗಿ ಬೇರೆ ಬೆರೆ. ಅವರಿಲ್ಲದೇ ಶಾಸನವೇ ಆಗುತ್ತಿರಲಿಲ್ಲ. ಹಿಂದಿನ ಕಾಲದಲ್ಲಿ ಲಿಪಿಕಾರ್ ಎನ್ನುವಂತದ್ದು ಒಂದು ರೀತಿಯಲ್ಲಿ ವೃತ್ತಿಯೇ ಆಗಿತ್ತು. ಲಿಪಿಕಾರ ಎಂಬ ಅರ್ಥದಲ್ಲಿ ;ಲೇಖಕ' ಎಂಬ ಶಬ್ದ ಮೊದಲು ಬಳಕೆಯಲ್ಲಿತ್ತೆಂದೂ, 'ಲಿಪಿಕಾರ' ಎಂಬುದು ಈಚೆಗೆ ಬಂದುದೆಂದೂ ಹೆಳುತ್ತಾರೆ. 'ಲಿಪಿ' ಎಂಬುದು 'ದಿಪಿ' ಎಂಬ ಪರ್ಶಿಯನ್ ಶಬ್ದದಿಂದ ಬಂದಿದೆಯೆಂದೂ ;ಲೇಖಕ' ಎಂಬರ್ಥದ 'ದಬೀರ' ಎಂಬ ಪರ್ಶಿಯನ್ ಶಬ್ದ ಕೂಡಾ ಭಾರತೀಯ ಶಾಸನಗಳಲ್ಲಿ 'ದಿಬಿರ' ಎಂಬ ರೂಪದಲ್ಲಿ ಕಂಡು ಬರುತ್ತದೆಂದು ಹೇಳಲಾಗಿದೆ.
ಸಂರಕ್ಷಣೆ
ಬದಲಾಯಿಸಿಶಾಸನದಲ್ಲಿ ಅನೇಕ ಇತಿಹಾಸಕ್ಕೆ ಸಂಭಂಧಪಟ್ಟ ವಿಷಯಗಳು ಇರುತ್ತಿದ್ದವು. ಹಿಂದಿನ ಕಾಲದಲ್ಲಿ ದಾನ ಪಡೆದವನ ಮತ್ತು ಅವನ ವಂಶಜರ ಪಾಲಿಗೆ ತಾಮ್ರ ಶಾಸನಗಳು ಅತ್ಯಮೂಲ್ಯ ದಾಖಲೆಗಳಾಗಿದ್ದು, ಅವು ಕಳೆದು ಹೋದರೆ ಅಥವಾ ನಾಶಗೊಂಡರೆ ಅವರು ತಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತಿದ್ದರು. ಆದುದರಿಂದಲೇ ಅವುಗಳನ್ನು ಎಚ್ಚರಿಕೆಯಿಂದ ಸಂರಕ್ಷಿಸುತ್ತಿದ್ದರು.
ಹಿಂದಿನ ಕಾಲದಲ್ಲಿ ಸನ್ಯಾಸಿಗಳು ತಮಗೆ ಬಂದ ದಾನಗಳಿಗೆ ಸಂಭಂಧಿಸಿದ ತಾಮ್ರ ಶಾಸನಗಳನ್ನು ಗುಹಾಭಿತ್ತಿಗಳ ಮೇಲೆ ಕೆತ್ತಿ ನಕಲು ಮಾಡುತ್ತಿದ್ದರು. ಪ್ರಾಚೀನ ವಲಭಿ ನಗರದಲ್ಲಿ ಹಲವಾರಿ ತಾಮ್ರ ಪಟಗಳು ಸಿಕ್ಕಿವೆ. ಅನೇಕ ಕಡೆ ಇಂತಹ ತಾಮ್ರ ಪಟಗಳನ್ನು ದಾನಕೊಟ್ಟ ಭೂಮಿಯಿಂದ ಅಗೆದು ತೆಗೆಯಲಾಗಿದೆ. ಇದರಿಂದ ದಾನ ಪಡೆದವರು ತಾಮ್ರಪಟಗಳನ್ನು ಹೇಗೆ ರಕ್ಷಿಸಿಡುತ್ತಿದ್ದರೆಂಬುದು ವ್ಯಕ್ತವಾಗುತ್ತದೆ.
ಹಲವಾರು ಶಾಸನಗಳು ಒಟ್ಟಿಗೆ ಇಟ್ಟಿದ್ದರೂ ಕೂಡಾ ಸುರಕ್ಷಿತವಾಗಿದ್ದವು. ಉದಾ: ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಅಂಧಾವರಂ ಗ್ರಾಮದಲ್ಲಿ ಒಂದು ಮರದ ಬುಡದಲ್ಲಿ ನಾಲ್ಕು ತಾಮ್ರದ ಶಾಸನಗಳು ಒಟ್ಟಿಗೆ ಎದ್ದ ಮಡಕೆಯೊಂದು ದೊರೆಯಿತು. ಅವುಗಳು ಬೇರೆ ಬೇರೆ ದೊರೆಗಳು ವಿಭಿನ್ನ ವ್ಯಕ್ತಿಗಳಗೆ ಕೊಟ್ಟ ದಾಖಲೆಗಳು. ಮಡಕೆಗೆ ಮುಚ್ಚಳವಿದ್ದುದರಿಂದ ಪಟಗಳನ್ನು ಭತ್ತದ ಹೊಟ್ಟಿನೊಳಗೆ ಹುದುಗಿಕೊಂಡಿದ್ದರಿಂದಲೂ ಅವು ಸುರಕ್ಷಿತ ಸ್ಥಿತಿಯಲ್ಲಿದ್ದವು.
ಕೇಲವು ಸಂದರ್ಭಗಳಲ್ಲಿ ತಾಮ್ತಪಟಗಳನ್ನು ವಿಶೇಷವಾಗಿ ತಯಾರಿಸಿದ ಶಿಲಾಕರಂಡಕದೊಳಗೆ ರಕ್ಷಿಸುತ್ತಿದ್ದರು.ನಿದರ್ಶನಕ್ಕೆ ಯಾದವ ಮಹಾದೇವನ ಕಲೆಗಾನ ತಾಮ್ರ ಪಟಗಳು, ಅವುಗಳನ್ನೊಳಗೊಂಡ ಸುಭಧ್ರ ಶಾಸನಗಳು, ಕೆಲವೊಮ್ಮೆ ಹೊರಡಿಸಿದ ಸ್ಥಳಗಳಿಂದ ಬಹುದೂರದಲ್ಲಿ ಸಿಕ್ಕಿವೆ. ಶಾಸನಗಳನ್ನು ಹಿಂದಿನ ಕಾಲದಲ್ಲಿ ಮಣ್ಣಿನ ಒಳಗೆ ಬಚ್ಚಿಡುತ್ತಿದ್ದರು.
ಇಂದು ನಾವು ಅನೇಕ ಶಾಸನಗಳನ್ನು ರಕ್ಷಿಸಬೇಕಾದ ಅಗತ್ಯವಿದೆ. ಅವುಗಳನ್ನು ಬಿಸಿಲು, ಮಳೆಯಿಂದ ರಕ್ಷಿಸಬೇಕು. ಕೇಲವರಲ್ಲಿ ಪ್ರಶ್ನೆಗಳು ಮೂಡಬಹುದು ಇದರ ಅವಶ್ಯಕತೆ ಏನು? ಎಂದು . ಶಾಸನಗಳು ಸಾಹಿತ್ಯಾಂಶಗಳಿಂದ ಅವು ಕೊಡುವ ರಾಜಕಿಯ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಇತ್ಯಾದಿ ವಿವರಗಳು ಅತ್ಯಂತ ಪ್ರಮುಖವಾದವು. ವಿದೇಶಿ ಪ್ರವಾಸಿ ಬರಹಗಳನ್ನೂ, ಶಾಸನಗಳೊಡನೆ ಹೋಲಿಸಿದಾಗ ಅವು ತೀರಾ ಪ್ರಮುಖವಲ್ಲವೆಂದೆನಿಸುತ್ತದೆ. ಅಲ್ಲದೇ ಅವು ಶಾಸನಗಳು ಕೊಡುವಷ್ಟು ಖಚಿತವಾದ ಆ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ವಿವರಗಳು ತಿಳಿಯಬೇಕೆನ್ನುವವನಿಗೆ ಶಾಸನಗಳು ನಿಜವಾಗಿಯೂ ಅತ್ಯವಶ್ಯಕ.
ಹಸ್ತ ಪ್ರತಿಗಳು
ಬದಲಾಯಿಸಿಕೈಯಿಂದ ಬರೆದ ಕೃತಿಗೆ ಮತ್ತು ಕೃತಿಯ ಭಾಗಕ್ಕೆ ಹಸ್ತಪ್ರತಿ ಎನ್ನುತ್ತೇವೆ. ಯಾವುದಾದರೊಂದು ಹಲಗೆಯ ಮೇಲೆ ಚೂಪಾದ ತುದಿಯ ಮೂಲಕ ದ್ರವ್ಯವೊಂದರಿಂದ ಲೇಪಿಸುವದನ್ನೇ ಲಿಪಿ ಎನ್ನುತಾರೆ. ಹಸ್ತಪ್ರತಿಯನ್ನು ಒಂದು ರೀತಿಯ ಶಾಸ್ತ್ರ ಎಂದು ಹೇಳಬಹುದು.ಆದರಿಂದ ಇದನ್ನು ಹಸ್ತಪ್ರತಿ ಶಾಸ್ತ್ರ ಎಂದು ಹೇಳುತ್ತಾರೆ. ಹಸ್ತಪ್ರತಿಯಲ್ಲಿ ಲಿಪಿ ಬರವಣಿಗೆಯನ್ನು ಗುರುತಿಸಬಹುದು.
ಹಸ್ತಪ್ರತಿಗಳಿಂದ ನಮಗೆ ಶಾಸನದಂತೆ ಅನೇಕ ವಿಷಯಗಳು ದೊರಕುತ್ತವೆ. ಮೊದಲೇ ಹೇಳಿದಂತೆ ಹಸ್ತಪ್ರತಿಗಳು ಬೇರೆ ಬೇರೆ ಸಾಮಗ್ರಿಗಳ ಮೇಲೆ ಬರೆಯಲ್ಪಟ್ಟಿವೆ ಎಂದು, ಅದರಲ್ಲೂ ಅತ್ಯಂತ ಅಚ್ಚರಿಯೆಂದರೆ ಸ್ಪಟಿಕದ ಹಾಗೇ ಬರೆದಿರುವ ಹಸ್ತಪ್ರತಿ ದೊರಕಿರುವದು. ಇಂದೇ ಇಂದು ಗಸ್ತಪ್ರತಿ ಅದು ಆಂಧ್ರ ಜಿಲ್ಲೆಯ ಕೃಷ್ಣ ಜಿಲ್ಲೆಯ ಭಟ್ಟ ಫೋಟ್ ನಲ್ಲಿ ಸುಮಾರು ಅರ್ಧ ಅಂಗುಲ ಅಗಲವಿರುವ ಆರು ಮುಖಗಳನ್ನು ಈ ಸ್ಪಟಿಕ ಮೇಲೆ ಲಿಪಿ ಕೊರೆಯಲಾಗಿದೆ.
ಆದರೆ ಇಂದು ಅನೇಕ ಪ್ರಮುಖ ವಿಚಾರ ಹೊಂದಿದಂತಹ ಹಸ್ತಪ್ರತಿಗಳು ನಾಶವಾಗಿವೆ.ಇದಕ್ಕೆ ಇಂದಲ್ಲ ಅನೇಕ ಕಾರಣಗಳೂ ಇವೆ. ಮೊದಲನೆಯದಾಗಿ ವಾತಾವರಣದಲ್ಲಿರುವ ಉಷ್ಣತೆ. ಸೂರ್ಯನ ಬೆಳಕು ನೇರವಾಗಿ ಬಿದ್ದರೆ ಅದರಲ್ಲಿರುವ ಅಲ್ಟ್ರಾವೈಲೆಟ್ ಪತ್ರಗಳನ್ನು ದುರ್ಬಲತೆ, ಬಣ್ಣ ಬದಲಾವಣೆ, ಬಿದುರತೆ ಮಾಡಿ ಹಾಳಾಗುತ್ತದೆ. ಹಸ್ತಪ್ರತಿಗಳ ಅಂದ ತೇವಾಂಶದ ಕಾರಣದಿಂದಾಗಿ ಬಣ್ಭಗೆಡುತ್ತದೆ. ಸುರುಳಖಿಯಾಗಿ ಸುಕ್ಕು ಕಟ್ಟುತ್ತದೆ. ವಿವಿಧ ಮೂಲಗಳಿಂದಾಗಿ ವಾತಾವರಣದಲ್ಲಿ ಉಂಟಾಗುವ ಕಾರ್ಬನ್ ಸಲ್ಫರ್ ಇತ್ಯಾದಿ ಕಣ್ಣಿಗೆ ಕಾಣದ ವಸ್ತ ಸೊಕಿದಾದ ಹಸ್ತಪ್ರತಿ ಹಾಳಾಗುವ ಸಾಧ್ಯತೆ ಇದೆ.ಕೆಲವೊಮ್ಮೆ ವಿಧ್ವಂಸಕ ಕೃತ್ಯ, ಬೇಜವಾಬ್ದಾರಿ ಸಿಬ್ಬಂದಿ ಹೀಗೆ ವಿವಿಧ ಮೂಲಗಳಿಂದ ಹಸ್ತಪ್ರತಿಗಳು ನಾಶವಾಗುತ್ತಿವೆ.
ಸಂರಕ್ಷಣೆ
ಬದಲಾಯಿಸಿಹಸ್ತಪ್ರತಿಗಳನ್ನು ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಹಸ್ತಪ್ರತಿಗಳನ್ನು ಒಮ್ಮೆ ಗ್ರಂಥಾಲಯದವರು ತೆಗೆದುಕೊಂಡ ಮೇಲೆ ಅವುಗಳನ್ನು ವರ್ಗಿಕರಿಸಿದ ಮೇಲೆ ಕಪಾಟಿನಲ್ಲಿ ಜಾಗ್ರತೆಯಿಂದ ಇರಿಸಬೇಕೆಂದು ಎಲ್ಲರಿಗೂ ತಿಳಿದಿರುವದು ಸಾಮಾನ್ಯ ಜ್ಞಾನವಾದರೂ ಇನ್ನೂ ಹೆಚ್ಚಿನ ಜಾಗ್ರತೆ ವಹಿಸುವದು ಅಗತ್ಯವಾಗಿದೆ. ಇವುಗಳನ್ನು ಓಲೆಗ್ರಂಥಗಳ ಕಟ್ಟುಗಳಗೆ ಎರಡು ಕಡೆಯೂ ಮರದ ಪಟ್ಟಿಗಳನ್ನು ಹಾಕಿ ಎಲ್ಲಾ ಪತ್ರಗಳಿಗೂ ಪತ್ರಗಳ ರಂಧ್ರದಿಂದ ದಾರದಿಂದ ಪೋಣಿಸಿ ಕಟ್ಟಿಡುವದು ಸಾಮಾನ್ಯ. ಇವುಗಳನ್ನು ಜೋಡಿಸುವಾಗ ಹಲಗೆಯ ಒಂದು ಕಡೆಯ ಪಟ್ಟಿಯು ಕೆಳಗಣ ಹಲಗೆಯ ಮೇಲೂ ಮತ್ತೊಂದು ಭಾಗದ ಪಟ್ಟಿಯ ಮೇಲ್ಭಾಗಕ್ಕೂ ಬರುವಂತೆ ಜೋಡಿಸಬೇಕಾಗುತ್ತದೆ. ಎರಡರ ನಡುವೆ ಸ್ವಲ್ಪ ಜಾಗ ಬೀಡಬೇಕು. ಇಲ್ಲದಿದ್ದಲ್ಲಿ ಪತ್ರಗಳ ಅಂಚು ಮುರಿಯುವ ಸಾಧ್ಯತೆ ಇರುತ್ತದೆ. ಕಾಗದದ ಹಸ್ತಪ್ರತಿಗಳನ್ನು ಅವುಗಳಗೆ ತಕ್ಕಂತೆ ಅವುಗಳಲ್ಲಿನ ಆಮ್ಲಗಳನ್ನು ಹೋಗಲಾಡಿಸಿ ಟಿಶ್ಯೂ ಕಾಗದಗಳಿಂದ ಬಲಪಡಿಸಿ ರಟ್ಟು ಕಟ್ಟಿ ಕಾಪಾಡುವದು ಅತ್ಯಗತ್ಯ. ರಟ್ಟುಕಟ್ಟಿನ ಕಾಗದದ ಹಸ್ತಪ್ರತಿಗಳು ಮತ್ತು ಪುಸ್ತಕಗಳನ್ನು ಅವುಗಳ ಮುಂಬಾಗದ ಕೆಳಗೆ ಬರುವಂತೆ ಕಪಾಟಿನಲ್ಲಿ ನಿಲ್ಲಿಸಿದರೆ ಅದರಿಂದ ಗ್ರಂಥದ ಹೊರೆಯು ಹೊರ ಹೊದಿಕೆಯ ಮೇಲೆ ಬಿದ್ದು ಹಿಂಬಾಗದ ಬೆನ್ನು ಕಿತ್ತು ಹೋಗುತ್ತದೆ. ಒಂದೇರೆಡು ಸಾರಿಗೆ ಕೀಳದಿದ್ದರೂ, ಕೀಳುವದಂತೂ ನಿಶ್ಚಯ, ಪುಸ್ತಕಗಳನ್ನು ಅವುಗಳ ಮುಂಭಾಗ, ಹಿಂದೆ ಹೋಗಿ ಅವುಗಳ ಎದುರಾಳಿ ಬರುವಂತೆ ಉಳಿದ ಎರಡು ಭಾಗಗಳ ಮೇಲೆ ಕೆಳಗೆ ಬರುವಂತೆ ಒಂದರ ಪಕ್ಕದಲ್ಲಿ ಒಂದನ್ನು ಜೋಡಿಸುವಂತಹದು ನಿಜವಾಗಿಯೂ ಒಂದು ರೀತಿಯ ಉತ್ತಮ ವಿಧಾನವಾಗಿದೆ. ಗ್ರಂಥಗಳು ದೊಡ್ಡವಾಹಿದ್ದರೆ ಅಥವಾ ಚಿಕ್ಕವಾಗಿದ್ದರೆ ಅಂತವುಗಳನ್ನು ವಿಶೇಷ ರೀತಿಯ ಕಪಾಟುಗಳಲ್ಲಿ ಮೇಲ್ಕಂಡತೆಯೇ ಇಡುವದು ಒಳ್ಳೆಯದು.
ದಕ್ಷಿಣ ಭಾರತದಲ್ಲಿ ಮುಖ್ಯವಾಗಿ ತಾಲೋಡೆ ಮತ್ತು ಕಾಗದದ ಹಸ್ತಪ್ರತಿ ಕಾಣಸಿಗುತ್ತದೆ, ಇವುಗಳನ್ನು ನಾವು ಸಂರಕ್ಷೀಸಬೇಕಾದ್ದು ಅತ್ಯಂತ ಅಗತ್ಯವಾಗಿದೆ. ಏಕೆಂದರೆ ಇದರಲ್ಲಿ ವೇದ, ಉಪನಿಷತ್ತು, ತಂತ್ರ, ಮಂತ್ರ, ಆಗಮ, ಜ್ಯೋತಿಷ್ಯ, ವೈದ್ಯ, ಇತಿಹಾಸ,ಕಾವ್ಯ, ನಾಟಕ ಈ ಮೊದಲಾದವಕ್ಕೆ ಸಂಭಂಧಿಸಿದ ಅನೇಲ ವಿಷಯಗಳನ್ನು ಕಾಣಬಹುದು. ತಾಡೋಲೆ ಹಸ್ತಪ್ರತಿಗಳಲ್ಲಿ ಮುಖ್ಯವಾಗಿ ಎರಡು ಪ್ರಕಾರಗಳಿವೆ. ಅವುಗಳು ೧. ತಾಳೆ ೨. ಶೀತಾಳೆ. ಇದರಲ್ಲಿ ಶೀತಾಳೆ ಹೆಚ್ಚು ಉಪಯುಕ್ತ ಹಾಗೂ ಬಾಳಿಕೆ ಬರುತ್ತದೆ. ಸುಮಾರು ೧,೦೦೦ ತಾಡೋಲೆ ಎಲೆಗಳನ್ನು ತಂದು ಲಿಪಿಕಾರ ಕುಡಿಯುವ ನೀರಿನಲ್ಲಿ ಮುಳುಗಿಸಿ ಅದನ್ನು ಸ್ವಲ್ಪ ಒಣಗಿಸಿ ಅದನ್ನು ಬೆಣಚು ಕಲ್ಲಿನಿಂದ ಹದ ಮಾಡಿ ಬೇಕಾದ ಅಳತೆಯಲ್ಲಿ ಜೋಡಿಸಿ ಎರಡು ಮಗ್ಗಲುಗಳಗೆ ಮರದ ಪಟ್ಟಿಕೆ ಜೋಡಿಸಿ ಕಬ್ಬಿಣದ ಖಂಡದಿಂದ ಬರೆಯುದದಕ್ಕೆ ಉಪಯೋಗಿಸುತ್ತಾರೆ.
ಇಂತಹ ಹಸ್ತಪ್ರತಿಗಳು, ಶಾಸನಗಳು ನಮ್ಮ ದೇಶದಲ್ಲಿ ಲಕ್ಷಾಂತರವಿದ್ದು, ನಮ್ಮ ಅಜ್ಞಾನದ ಕಾರಣ ನಾಶದ ಅಂಚಿಗೆ ತಲುಪಿವೆ. ಅವೆಷ್ಟೋ, ಬೇಜವಾಬ್ದಾರಿ ಕಾರಣದಿಂದ ನಶಿಸಿ ಹೋಗಿವೆ. ಕೆಲವೊದು ನಮ್ಮ ಅಲಕ್ಷದಿಂದಾಗಿ ಜಿರಲೆ, ಗೆದ್ದಲು ನಾಶಮಾಡುತ್ತವೆ. ಇವುಗಳ ಸಂರಕ್ಷಣೆಯನ್ನು ನಾವು ಮಾಡಬೇಕಾಗಿದೆ. ಇತಿಹಾಸ ಪರಂಪರೆಯನ್ನು ಉಳಿಸಬೇಕಾಗಿದೆ. ಇವುಗಳನ್ನು ನಾವು ಗೌರವಿಸಬೇಕು. ಅದು ನಮ್ಮ ಕರ್ತವ್ಯವೂ ಆಗಿದೆ. ಇಂದು ನಾವೆಲ್ಲರೂ ಗ್ರಂಥದ ಕುರಿತು ಜ್ಞಾನ ಹೊಂದುವದು ನಿಜವಾಗಲೂ ಅಗತ್ಯವಾಗಿದೆ.ಅದು ಕೂಡಾ ನಮ್ಮ ಭವ್ಯ ಭಾರತದ ಪರಂಪರೆಗೆ ಅಗತ್ಯವಾಗಿದೆ.ಇದನ್ನು ಸಂರಕ್ಷೀಸುವ ತುಡಿತ ನಮ್ಮ ನಮ್ಮಲ್ಲಿಯೇ ಬರಬೇಕು. ಆಗ ನಮ್ಮ ಪ್ರಾಚೀನ ಕಾಲದ ಇತಿಹಾಸ, ಸಾಹಿತ್ಯ ಕಲೆಯನ್ನು ಉಳಿಸುವದರಲ್ಲಿ ನಮ್ಮ ಪಾತ್ರವು ಸೇರಿಕೊಳ್ಳುತ್ತದೆ.[೧][೨]
ಉಲ್ಲೇಖ
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2016-04-05. Retrieved 2015-08-13.
- ↑ "ಆರ್ಕೈವ್ ನಕಲು". Archived from the original on 2015-02-13. Retrieved 2015-08-13.