ಚೀನಾದ ಮಹಾ ಗೋಡೆ
ದಿ ಗ್ರೇಟ್ ವಾಲ್ ಆಫ್ ಚೀನಾ (simplified Chinese: 长城; traditional Chinese: 長城; pinyin: Chángchéng; literally "long city/fortress") ಅಥವಾ (simplified Chinese: 万里长城; traditional Chinese: 萬里長城; pinyin: Wànlǐ Chángchéng; literally "The long wall of 10,000 Li (里)"[೧]) ಎಂಬುದು ವಿವಿಧ ಪರಂಪರೆಯ ರಾಜವಂಶಗಳ ಅವಧಿಯಲ್ಲಿ ಕಂಡುಬಂದ ಚೀನಾದ ಸಾಮ್ರಾಜ್ಯದ ಉತ್ತರದ ಗಡಿಭಾಗಗಳನ್ನು ರಕ್ಷಿಸಲು 5ನೇ ಶತಮಾನ BC ಮತ್ತು 16ನೇ ಶತಮಾನದ ನಡುವೆ ನಿರ್ಮಿಸಿ, ಮರುನಿರ್ಮಿಸಿ, ಮತ್ತು ನಿರ್ವಹಣೆ ಮಾಡಲ್ಪಟ್ಟ, ಉತ್ತರದ ಚೀನಾದಲ್ಲಿನ ಕಲ್ಲು ಮತ್ತು ಸುಟ್ಟ ಜೇಡಿಮಣ್ಣಿನ ಕೋಟೆ-ನಿರ್ಮಾಣಗಳ ಒಂದು ಸರಣಿಯಯಾಗಿದೆ.
ಮಹಾ ಗೋಡೆ | |
---|---|
ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವ ಹೆಸರು | |
ಪ್ರಕಾರ | ಸಾಂಸ್ಕೃತಿಕ |
ಮಾನದಂಡಗಳು | i, ii, iii, iv, vi |
ಉಲ್ಲೇಖ | 438 |
ಯುನೆಸ್ಕೊ ಪ್ರದೇಶ | ಏಷ್ಯಾ-ಪೆಸಿಫಿಕ್ |
ದಾಖಲೆಯ ಇತಿಹಾಸ | |
Inscription | 1987 (11ನೆಯ ಸಮಾವೇಶ) |
5tನೇ ಶತಮಾನದ BCಯಿಂದ ಮೊದಲ್ಗೊಂಡು, ಹಲವಾರು ಗೋಡೆಗಳು ಕಟ್ಟಲ್ಪಟ್ಟಿದ್ದು, ಅವು ಮಹಾನ್ ಗೋಡೆ ಎಂದು ಉಲ್ಲೇಖಿಸಲ್ಪಟ್ಟಿವೆ. ಕ್ವಿನ್ ಷಿ ಹುವಾಂಗ್ ಎಂಬ ಮೊದಲನೆಯ, ಚೀನಾದ ಚಕ್ರವರ್ತಿಯಿಂದ 220–206 BCಯ ನಡುವಿನ ಅವಧಿಯಲ್ಲಿ ನಿರ್ಮಿಸಲ್ಪಟ್ಟ ಗೋಡೆಯು ಅತ್ಯಂತ ಪ್ರಸಿದ್ಧವಾದವುಗಳಲ್ಲಿ ಒಂದಾಗಿದೆ. ಆ ಗೋಡೆಯ ಅಲ್ಪ ಭಾಗವು ಉಳಿದುಕೊಂಡಿದೆ; ಈಗ ಅಸ್ತಿತ್ವದಲ್ಲಿರುವ ಗೋಡೆಯ ಬಹುಭಾಗಗಳು ಮಿಂಗ್ ರಾಜವಂಶದ ಅವಧಿಯಲ್ಲಿ ನಿರ್ಮಿಸಲ್ಪಟ್ಟವು.
ಮಹಾನ್ ಗೋಡೆಯು ಪೂರ್ವದಲ್ಲಿನ ಷಾನ್‌ಹೈಗುವಾನ್‌ನಿಂದ ಪಶ್ಚಿಮದಲ್ಲಿನ ಲೊಪ್ ನೂರ್‌ವರೆಗೆ, ಮಂಗೋಲಿಯಾದ ಒಳಭಾಗದ ದಕ್ಷಿಣದ ಅಂಚನ್ನು ಸ್ಥೂಲವಾಗಿ ರೂಪಿಸುವ ಒಂದು ಕಮಾನಿನಾಕಾರದ ಉದ್ದಕ್ಕೂ ಹಬ್ಬಿದೆ. ಪುರಾತತ್ತ್ವ ಶಾಸ್ತ್ರದ ಅತ್ಯಂತ ವ್ಯಾಪಕ ಸಮೀಕ್ಷೆಯು ಮುಂದುವರಿದಿರುವ ತಂತ್ರಜ್ಞಾನಗಳನ್ನು ಬಳಸಿಕೊಂಡು, ಇತ್ತೀಚೆಗಷ್ಟೇ ತೀರ್ಮಾನವೊಂದಕ್ಕೆ ಬಂದಿದ್ದು, ಅದರ ಅನುಸಾರ ಸಂಪೂರ್ಣ ಮಹಾನ್ ಗೋಡೆಯು ತನ್ನೆಲ್ಲಾ ಶಾಖೆಗಳೊಂದಿಗೆ, 8,851.8 km (5,500.3 mi)ರವರೆಗೆ ಚಾಚಿಕೊಳ್ಳುತ್ತದೆ. ಇದು ವಾಸ್ತವಿಕ ಗೋಡೆಯ359.7 km (223.5 mi) ವಿಭಾಗಗಳಿಂದ,6,259.6 km (3,889.5 mi) ಕಂದಕಗಳಿಂದ ಮತ್ತು ಗುಡ್ಡಗಳು ಹಾಗೂ ನದಿಗಳಂಥ ಸ್ವಾಭಾವಿಕ2,232.5 km (1,387.2 mi) ಪ್ರತಿಬಂಧಕಗಳಿಂದ ಮಾಡಲ್ಪಟ್ಟಿದೆ.[೨][೩][೪]
ಇತಿಹಾಸ
ಬದಲಾಯಿಸಿಚೀನಿಯರು ಕ್ರಿ.ಪೂ ೮ನೇ ಶತಮಾನದ ಸುಮಾರಿನ ವಸಂತಋತು ಮತ್ತು ಶರದೃತುವಿನ ಅವಧಿಯ ಹೊತ್ತಿಗಾಗಲೇ ಗೋಡೆ-ಕಟ್ಟುವ ಕಸುಬಿನಲ್ಲಿ ಚೆನ್ನಾಗಿ ಪಳಗಿದ್ದರು. ಕ್ರಿ.ಪೂ. ೫ನೇ ಶತಮಾನದ ಕ್ರಿ.ಪೂ ೨೨೧ರ ಅವಧಿಯ ರಾಜ್ಯಗಳು ಪರಸ್ಪರ ಕಚ್ಚಾಡುತ್ತಿದ್ದ ಅವಧಿಯ ಸಮಯದಲ್ಲಿ, ಕ್ವಿ, ಯಾನ್ ಮತ್ತು ಝಾವೋ ಸಂಸ್ಥಾನಗಳೆಲ್ಲವೂ ತಂತಮ್ಮ ಗಡಿಪ್ರದೇಶಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ವ್ಯಾಪಕವಾದ ಕೋಟೆ-ನಿರ್ಮಾಣಗಳಲ್ಲಿ ತೊಡಗಿಸಿಕೊಂಡವು. ಕತ್ತಿಗಳು ಮತ್ತು ಈಟಿಗಳಂಥ ಸಣ್ಣ ಶಸ್ತ್ರಾಸ್ತ್ರಗಳ ದಾಳಿಯನ್ನು ತಡೆದುಕೊಳ್ಳಲು ನಿರ್ಮಿಸಲಾಗಿದ್ದ ಈ ಗೋಡೆಗಳು, ಹಲಗೆಯ ಚೌಕಟ್ಟುಗಳ ನಡುವೆ ಮಣ್ಣು ಮತ್ತು ಜಲ್ಲಿಕಲ್ಲುಗಳನ್ನು ತುಳಿಯುವ ಮೂಲಕ ಪ್ರಾಯಶಃ ರೂಪಿಸಲ್ಪಟ್ಟವು.
ಪರಸ್ಪರ ವಿರೋಧಿಗಳಾಗಿದ್ದ ಎಲ್ಲ ಸಂಸ್ಥಾನಗಳನ್ನು ಗೆಲ್ಲುವ ಮೂಲಕ ಕ್ವಿನ್ ಷಿ ಹುವಾಂಗ್ ಎಂಬಾತ ಕ್ರಿ.ಪೂ ೨೨೧ರಲ್ಲಿ ಚೀನಾವನ್ನು ಒಗ್ಗೂಡಿಸಿ, ಕ್ವಿನ್ ರಾಜವಂಶದ ಸ್ಥಾಪನೆಗೆ ಕಾರಣನಾದ. ಕೇಂದ್ರೀಕೃತ ಆಡಳಿತವನ್ನು ವಿಧಿಸುವ ಹಾಗೂ ಊಳಿಗಮಾನ್ಯ ಮದ್ಧತಿಯ ಧಣಿಗಳು ಮತ್ತೆ ತಲೆಯೆತ್ತುವುದನ್ನು ತಪ್ಪಿಸುವ ಆಶಯದಿಂದ, ಹಿಂದಿದ್ದ ಸಂಸ್ಥಾನದ ಗಡಿಗಳುದ್ದಕ್ಕೂ ತನ್ನ ಸಾಮ್ರಾಜ್ಯವನ್ನು ವಿಭಜಿಸಿದ್ದ ಗೋಡೆಯ ವಿಭಾಗಗಳ ನಾಶಕ್ಕಾಗಿ ಆತ ಆದೇಶಿಸಿದ. ಉತ್ತರ ಭಾಗದಿಂದ ಬರುವ ಕ್ಸಿಯಾಂಗ್ನು ಜನರಿಂದಾಗುವ ಆಕ್ರಮಣಗಳಿಗೆ ಪ್ರತಿಯಾಗಿ ತನ್ನ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳಲು, ಸಾಮ್ರಾಜ್ಯದ ಉತ್ತರ ಭಾಗದ ಹೊಸ ಗಡಿನಾಡಿನ ಉದ್ದಕ್ಕೂ ಇರುವ ಉಳಿದ ಕೋಟೆ-ನಿರ್ಮಾಣಗಳನ್ನು ಸಂಪರ್ಕಿಸಲು ಹೊಸ ಗೋಡೆಯೊಂದನ್ನು ನಿರ್ಮಿಸಲು ಆತ ಆದೇಶಿಸಿದ. ಸದರಿ ನಿರ್ಮಾಣ ಕಾಮಗಾರಿಗಾಗಿ ಅಗತ್ಯವಿರುವ ಬೃಹತ್ ಪ್ರಮಾಣದ ಸಾಮಗ್ರಿಗಳನ್ನು ಸಾಗಣೆಮಾಡುವುದು ತುಂಬಾ ಕಷ್ಟದಾಯಕವಾಗಿತ್ತು. ಆದ್ದರಿಂದ ಕಟ್ಟಡ ನಿರ್ಮಾಣಮಾಡುವವರು ಯಾವಾಗಲೂ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಲು ಪ್ರಯತ್ನಿಸಿದರು. ಪರ್ವತಗಳಿಂದ ತರಿಸಲಾದ ಕಲ್ಲುಗಳನ್ನು ಪರ್ವತ ಶ್ರೇಣಿಗಳ ಮೇಲೆ ಬಳಸಲಾದರೆ, ದಮ್ಮಸು ಮಾಡಿದ ಮಣ್ಣನ್ನು ಸಮತಲದ ಭೂಮಿಯಲ್ಲಿನ ನಿರ್ಮಾಣ ಕಾಮಗಾರಿಗಾಗಿ ಬಳಸಲಾಯಿತು. ಕ್ವಿನ್ ರಾಜವಂಶದ ಗೋಡೆಗಳ ಕರಾರುವಾಕ್ಕಾದ ಉದ್ದ ಮತ್ತು ನಿರ್ಮಾಪಥವನ್ನು ಸೂಚಿಸುವ ಯಾವುದೇ ಐತಿಹಾಸಿಕ ದಾಖಲೆಗಳು ಈಗ ಉಳಿದಿಲ್ಲ. ಪ್ರಾಚೀನ ಗೋಡೆಗಳ ಬಹುಭಾಗವು ಶತಮಾನಗಳು ಉರುಳುತ್ತಿದ್ದಂತೆ ಸವಕಳಿಗೀಡಾಗಿದ್ದು, ಕೇವಲ ಸ್ವಲ್ಪೇ ಸ್ವಲ್ಪ ವಿಭಾಗಗಳು ಇಂದು ಉಳಿದುಕೊಂಡಿವೆ. ನಂತರದಲ್ಲಿ, ಹಾನ್, ಸೂಯಿ, ಉತ್ತರ ಭಾಗದ ಮತ್ತು ಜಿನ್ ರಾಜವಂಶಗಳೆಲ್ಲವೂ ಉತ್ತರ ಭಾಗದ ದಾಳಿಕಾರರುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಅಪಾರ ವೆಚ್ಚದಲ್ಲಿ ಸದರಿ ಮಹಾನ್ ಗೋಡೆಯ ವಿಭಾಗಗಳನ್ನು ದುರಸ್ತಿಗೊಳಿಸಿವೆ, ಮರುನಿರ್ಮಾಣ ಮಾಡಿವೆ, ಇಲ್ಲವೇ ವಿಸ್ತರಣೆ ಮಾಡಿವೆ.
ಮಹಾನ್ ಗೋಡೆಯ ಪರಿಕಲ್ಪನೆಯು ಮಿಂಗ್ ರಾಜವಂಶದ ಅವಧಿಯಲ್ಲಿ ಮತ್ತೊಮ್ಮೆ ಮರುಹುಟ್ಟು ಪಡೆಯಿತು. 1449ರಲ್ಲಿ ನಡೆದ ಟುಮುವಿನ ಕದನದಲ್ಲಿ ಓಯಿರಾಟ್‌ಗಳಿಂದ ಮಿಂಗ್ ಸೇನೆಯು ಸೋತ ನಂತರ ಈ ಬೆಳವಣಿಗೆ ಕಂಡುಬಂತು. ಪರಂಪರೆಯ ಕದನಗಳ ನಂತರ, ಮಂಚೂರಿಯಾದ ಮತ್ತು ಮಂಗೋಲಿಯಾದ ಬುಡಕಟ್ಟು ಜನಾಂಗದವರ ಮೇಲೆ ಒಂದು ಸ್ಪಷ್ಟವಾದ ಮೇಲುಗೈ ಸಾಧಿಸುವಲ್ಲಿ ಮಿಂಗ್ ರಾಜವಂಶವು ವಿಫಲಗೊಂಡಿತ್ತು, ಮತ್ತು ಸುದೀರ್ಘಾವಧಿಯ ತಿಕ್ಕಾಟವು ಸಾಮ್ರಾಜ್ಯದ ಮೇಲೆ ಒಂದು ದೊಡ್ಡ ನಷ್ಟವನ್ನುಂಟುಮಾಡುತ್ತಿತ್ತು. ಚೀನಾದ ಉತ್ತರ ಭಾಗದ ಗಡಿಯ ಉದ್ದಕ್ಕೂ ಗೋಡೆಗಳನ್ನು ನಿರ್ಮಿಸುವ ಮೂಲಕ ಅಲೆಮಾರಿ ಬುಡಕಟ್ಟು ಜನಾಂಗದವರನ್ನು ಆಚೆಯಲ್ಲೇ ಇಡಲು ಮಿಂಗ್ ರಾಜವಂಶವು ಒಂದು ಹೊಸ ಸಮರತಂತ್ರವನ್ನು ಅಳವಡಿಸಿಕೊಂಡಿತು. ಓರ್ಡಸ್ ಮರುಭೂಮಿಯಲ್ಲಿ ನೆಲೆಗೊಂಡಿದ್ದ ಮಂಗೋಲರ ನಿಯಂತ್ರಣವನ್ನು ಪರಿಗಣಿಸಿ, ಹುವಾಂಗ್ ಹಿಯ ತಿರುವನ್ನು ತನ್ನೊಂದಿಗೆ ಸಂಯೋಜಿಸಿಕೊಳ್ಳುವ ಬದಲು ಮರುಭೂಮಿಯ ದಕ್ಷಿಣ ಭಾಗದ ಅಂಚನ್ನು ಸದರಿ ಗೋಡೆಯು ಅನುಸರಿಸಿತು.
ಮುಂಚಿನ ಕ್ವಿನ್ ಕೋಟೆ-ನಿರ್ಮಾಣಗಳಿಗಿಂತ ಭಿನ್ನವಾಗಿದ್ದ ಮಿಂಗ್ ನಿರ್ಮಾಣ ಕಾಮಗಾರಿಯು ಸದೃಢವಾಗಿತ್ತು ಮತ್ತು ಹೆಚ್ಚು ವಿಸ್ತಾರವಾಗಿತ್ತು. ದಮ್ಮಸುಮಾಡಿದ ಮಣ್ಣಿನ ಬದಲಿಗೆ ಇಟ್ಟಿಗೆಗಳು ಮತ್ತು ಕಲ್ಲನ್ನು ಬಳಸಿದ್ದು ಇದಕ್ಕೆ ಕಾರಣವಾಗಿತ್ತು. ವರ್ಷಗಳಾಗುತ್ತಿದ್ದಂತೆ ಮಂಗೋಲರ ಆಕ್ರಮಣಗಳು ಆಗಿಂದಾಗ್ಗೆ ಮುಂದುವರಿಯುತ್ತಲೇ ಹೋಗಿದ್ದರಿಂದ, ಗೋಡೆಗಳನ್ನು ದುರಸ್ತಿ ಮಾಡಲು ಹಾಗೂ ಬಲಪಡಿಸಲು ಮಿಂಗ್ ರಾಜವಂಶವು ಗಣನೀಯ ಪ್ರಮಾಣದಲ್ಲಿ ಸಂಪನ್ಮೂಲಗಳನ್ನು ಈಕಡೆಗೆ ವಿನಿಯೋಗಿಸಿತು. ನಿರ್ದಿಷ್ಟವಾಗಿ ಹೇಳುವುದಾದರೆ, ಬೀಜಿಂಗ್‌ನ ಮಿಂಗ್ ರಾಜಧಾನಿಗೆ ಸಮೀಪದ ವಿಭಾಗಗಳು ಸದೃಢವಾಗಿದ್ದವು.[ಸೂಕ್ತ ಉಲ್ಲೇಖನ ಬೇಕು]
1440ರ ದಶಕ–1460ರ ದಶಕದ ಅವಧಿಯಲ್ಲಿ, "ಲಿಯಾವೊಡಾಂಗ್ ಗೋಡೆ" ಎಂದು ಕರೆಯಲ್ಪಟ್ಟ ಗೋಡೆಯನ್ನೂ ಸಹ ಮಿಂಗ್ ರಾಜವಂಶವು ನಿರ್ಮಿಸಿತು. ಮಹಾನ್ ಗೋಡೆಗೆ (ಒಂದು ಅರ್ಥದಲ್ಲಿ ಈ ಗೋಡೆಯು ಮಹಾನ್ ಗೋಡೆಯ ವಿಸ್ತರಣೆಯೇ ಆಗಿತ್ತು) ಹೋಲುವ ರೀತಿಯಲ್ಲಿಯೇ ಕಾರ್ಯಾತ್ಮಕ ಅಥವಾ ಪ್ರಯೋಜನಾತ್ಮಕವಾಗಿದ್ದರೂ ಸಹ, ನಿರ್ಮಾಣಶೈಲಿಯಲ್ಲಿ ಹೆಚ್ಚು ಪ್ರಾಥಮಿಕ ಅಥವಾ ಕೆಳದರ್ಜೆಯನ್ನು ಹೊಂದಿತ್ತು. ಲಿಯಾವೊಡಾಂಗ್ ಪ್ರಾಂತ್ಯದ ಕೃಷಿ ಪ್ರಧಾನ ಭೂಭಾಗವನ್ನು ಸುತ್ತುವರಿಯುವ ಮೂಲಕ, ಲಿಯಾವೊಡಾಂಗ್ ಗೋಡೆಯು ಅದನ್ನು ವಾಯವ್ಯ ದಿಕ್ಕಿನಿಂದ ಬರುವ ಜರ್ಚೆಡ್-ಮಂಗೋಲ್ ಓರಿಯಾನ್‌ಘಾನ್ ಮತ್ತು ಉತ್ತರ ಭಾಗದಿಂದ ಬರುವ ಜಿಯಾಂಝೌ ಜರ್ಚೆನ್ಸ್‌ರ ಸಂಭಾವ್ಯ ಹಠಾತ್ ದಾಳಿಗೆ ಪ್ರತಿಯಾಗಿ ರಕ್ಷಿಸುತ್ತಿತ್ತು. ಲಿಯಾವೊಡಾಂಗ್ ಗೋಡೆಯ ಕೆಲವೊಂದು ಭಾಗಗಳಲ್ಲಿ ಕಲ್ಲುಗಳು ಮತ್ತು ಹಾಸುಬಿಲ್ಲೆಗಳನ್ನು ಬಳಸಲಾಗಿತ್ತಾದರೂ, ಅದರ ಬಹುಭಾಗವು ವಾಸ್ತವವಾಗಿ ಒಂದು ಮಣ್ಣಿನ ಮೋಟುಗೋಡೆಯಾಗಿದ್ದು ಎರಡೂ ಪಾರ್ಶ್ವಗಳಲ್ಲಿ ಕಂದಕಗಳನ್ನು ಹೊಂದಿದ್ದವು.[೫]
ಮಿಂಗ್ ರಾಜವಂಶದ ಅಂತ್ಯದ ವೇಳೆಗೆ, 1600ರ ಸುಮಾರಿಗೆ ಪ್ರಾರಂಭವಾದ ಮಂಚು ಆಕ್ರಮಣಗಳಿಗೆ ಪ್ರತಿಯಾಗಿ ಸಾಮ್ರಾಜ್ಯವನ್ನು ರಕ್ಷಿಸಿಕೊಳ್ಳುವಲ್ಲಿ ಮಹಾನ್ ಗೋಡೆಯು ನೆರವಾಯಿತು. ಯುವಾನ್ ಚೊಂಘುವಾನ್ ಎಂಬಾತನ ಸೇನಾ ನಾಯಕತ್ವದಡಿಯಲ್ಲಿ, ಅತೀವವಾದ ರಕ್ಷಣೆಯನ್ನು ಒದಗಿಸಲಾಗಿದ್ದ ಷಾನ್‌ಹೈಗುವಾನ್ ಕಣಿವೆಯಲ್ಲಿ ಮಂಚುಗಳನ್ನು ಹಿಮ್ಮೆಟ್ಟಿಸುವ ಮೂಲಕ, ಚೀನಾದ ಪ್ರಧಾನ ಭೂಭಾಗಕ್ಕೆ ಮಂಚುಗಳು ಪ್ರವೇಶಿಸುವುದನ್ನು ತಡೆಯಲಾಯಿತು. ಅಂತಿಮವಾಗಿ ಮಂಚುಗಳು 1644ರಲ್ಲಿ ಮಹಾನ್ ಗೋಡೆಯನ್ನು ದಾಟಿಬರುವಲ್ಲಿ ಯಶಸ್ವಿಯಾದರು. ಷುನ್ ರಾಜವಂಶದ ಆಡಳಿತಗಾರರ ಕಾರ್ಯಚಟುವಟಿಕೆಗಳನ್ನು ಇಷ್ಟಪಡದಿದ್ದ ವು ಸಂಗುಯಿ ಎಂಬ ಓರ್ವ ಮಿಂಗ್ ಗಡಿರಕ್ಷಣಾ ಮುಖ್ಯಸ್ಥನಿಂದ ಷಾನ್‌ಹೈಗುವಾನ್‌ನಲ್ಲಿನ ಬಾಗಿಲುಗಳು ತೆರೆಯಲ್ಪಟ್ಟಿದ್ದರಿಂದಾಗಿ, ಮಂಚುಗಳು ಮಹಾನ್ ಗೋಡೆಯನ್ನು ದಾಟಲು ಸಾಧ್ಯವಾಯಿತು. ಮಂಚುಗಳು ಕ್ಷಿಪ್ರವಾಗಿ ಬೀಜಿಂಗ್‌ನ್ನು ತಮ್ಮ ವಶಕ್ಕೆ ತೆಗೆದುಕೊಂಡರು, ಮತ್ತು ಹೊಸದಾಗಿ ಸ್ಥಾಪನೆಗೊಂಡಿದ್ದ ಷುನ್ ರಾಜವಂಶವನ್ನು ಮತ್ತು ಉಳಿದಿದ್ದ ಮಿಂಗ್ ಪ್ರತಿರೋಧಕತೆಯನ್ನು ಸೋಲಿಸಿದರು. ಅಲ್ಲಿಂದ ಕ್ವಿಂಗ್ ರಾಜವಂಶವು ಸ್ಥಾಪನೆಯಾಯಿತು.
ಇಲ್ಲಿಯವರೆಗೆ ಕಂಡುಹಿಡಿಯದ, ಮಿಂಗ್ ರಾಜವಂಶದ ಅವಧಿಯಲ್ಲಿ ಕಟ್ಟಲಾದ ಹೆಚ್ಚುವರಿ 290 ಕಿಲೋಮೀಟರುಗಳಷ್ಟು (180 ಮೈಲುಗಳು) ಗೋಡೆಯ ಭಾಗಗಳು 2009ರಲ್ಲಿ ಪತ್ತೆಯಾದವು. ಹೊಸದಾಗಿ ಕಂಡುಹಿಡಿಯಲ್ಪಟ್ಟ ವಿಭಾಗಗಳು ಉತ್ತರ ಭಾಗದ ಲಯೋನಿಂಗ್ ಪ್ರಾಂತ್ಯದಲ್ಲಿರುವ ಹುಷಾನ್ ಪರ್ವತಗಳಿಂದ ಪಶ್ಚಿಮ ಭಾಗದ ಗನ್ಸು ಪ್ರಾಂತ್ಯದಲ್ಲಿನ ಜಿಯಾಯುಗುವಾನ್‌ವರೆಗೂ ಹಬ್ಬಿವೆ. ಶುಷ್ಕ ವಲಯದಾದ್ಯಂತ ಬೀಸಿದ ಮರಳ ಬಿರುಗಾಳಿಗಳಿಂದಾಗಿ ಕಾಲಾನಂತರದಲ್ಲಿ ಈ ವಿಭಾಗಗಳು ಮುಳುಗಿಹೋದವು.[೬]
ಕ್ವಿಂಗ್ ಆಡಳಿತದಡಿಯಲ್ಲಿ, ಚೀನಾದ ಗಡಿಗಳು ಗೋಡೆಗಳಿಂದಾಚೆಗೆ ವಿಸ್ತರಣೆಗೊಂಡವು ಮತ್ತು ಸಾಮ್ರಾಜ್ಯಕ್ಕೆ ಮಂಗೋಲಿಯಾವು ಸೇರ್ಪಡೆಗೊಂಡಿತು. ಆದ್ದರಿಂದ ಮಹಾನ್ ಗೋಡೆಯ ನಿರ್ಮಾಣ ಕಾಮಗಾರಿ ಮತ್ತು ದುರಸ್ತಿ ಕಾರ್ಯಗಳು ಸ್ಥಗಿತಗೊಂಡವು.
ಗಮನಾರ್ಹ ಪ್ರದೇಶಗಳು
ಬದಲಾಯಿಸಿಈ ಕೆಳಗಿನ ವಿಭಾಗಗಳ ಪೈಕಿ ಕೆಲವು ಬೀಜಿಂಗ್ ನಗರಸಭೆಯಲ್ಲಿದ್ದು ಅವುಗಳನ್ನು ನವೀಕರಿಸಲಾಯಿತು ಮತ್ತು ಇಂದಿನ ಆಧುನಿಕ ಪ್ರವಾಸಿಗರು ಇಲ್ಲಿಗೆ ನಿರಂತರವಾಗಿ ಭೇಟಿನೀಡುತ್ತಿದ್ದಾರೆ.
- ಜುಯೋಂಗ್ಗುವಾನ್ ಕಣಿವೆಯ "ಉತ್ತರ ಕಣಿವೆ", ಬದಾಲಿಂಗ್ ಎಂದು ಇದಕ್ಕೆ ಹೆಸರಿದೆ. ಚೀನಿಯರು ತಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ಇದನ್ನು ಬಳಸಿಕೊಂಡಾಗ, ಚೀನಾದ ರಾಜಧಾನಿಯಾದ ಬೀಜಿಂಗ್‌ನ್ನು ಸಂರಕ್ಷಿಸಲು ಗೋಡೆಯ ಈ ವಿಭಾಗವು ಅನೇಕ ರಕ್ಷಕ ಭಟರನ್ನು ಹೊಂದಿತ್ತು. ಬೆಟ್ಟಗಳಿಂದ ಪಡೆದ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾದ ಮಹಾನ್ ಗೋಡೆಯ ಈ ಭಾಗವು ಟೆಂಪ್ಲೇಟು:M to ft ಎತ್ತರವಾಗಿದೆ ಮತ್ತು ಟೆಂಪ್ಲೇಟು:M to ft ಅಗಲವಾಗಿದೆ.
- ಜಿಯಾಯುಗುವಾನ್ ಕಣಿವೆಯ "ಪಶ್ಚಿಮ ಕಣಿವೆ". ಈ ಕೋಡೆಯು ಮಹಾನ್ ಗೋಡೆಯ ಪಶ್ಚಿಮ ಭಾಗದ ಅಂಚುಗಳಿಗೆ ಸಮೀಪದಲ್ಲಿದೆ.
- ಷಾನ್‌ಹೈಗುವಾನ್‌ನ "ಕಣಿವೆ". ಈ ಕೋಟೆಯು ಮಹಾನ್ ಗೋಡೆಯ ಪೂರ್ವಭಾಗದ ಅಂಚುಗಳಿಗೆ ಸಮೀಪದಲ್ಲಿದೆ.
- ಅತ್ಯಂತ ಕಡಿದಾದ ಇಳುಕಲುಗಳನ್ನು ಗೋಡೆಯು ಹತ್ತುವ ಭಾಗವು, ಮಿಂಗ್ ಮಹಾನ್ ಗೋಡೆಯ ಅತ್ಯಂತ ಆಕರ್ಷಕ ವಿಭಾಗಗಳಲ್ಲಿ ಒಂದಾಗಿದೆ. ಇದು ೧೧ kilometers (೭ mi) ಉದ್ದದವರೆಗೆ ಓಡುತ್ತದೆ, 5 ರಿಂದ 8 ಮೀಟರ್‌ಗಳಷ್ಟು (16–26 ಅಡಿ) ಎತ್ತರವಿದೆ, ಮತ್ತು ತಳದಾದ್ಯಂತ ಟೆಂಪ್ಲೇಟು:M to ft ನಷ್ಟಿದ್ದು, ತುದಿಯಾದ್ಯಂತ ಟೆಂಪ್ಲೇಟು:M to ftರವರೆಗೆ ಕಿರಿದಾಗುತ್ತಾ ಹೋಗುತ್ತದೆ. ವಾಂಗ್‌ಜಿಂಗ್ಲೌ ಎಂಬುದು ಜಿನ್‌ಷಾನ್ಲಿಂಗ್‌ನ 67 ಕಾವಲು ಗೋಪುರಗಳಲ್ಲಿ ಒಂದಾಗಿದ್ದು, ಸಮುದ್ರ ಮಟ್ಟದಿಂದ ಟೆಂಪ್ಲೇಟು:M to ft ನಷ್ಟು ಎತ್ತರದಲ್ಲಿದೆ.
- ಜಿನ್‌ಷಾನ್ಲಿಂಗ್‌ನ ಆಗ್ನೇಯ ಭಾಗವು, ಮುಟಿಯಾನ್ಯು ಮಹಾನ್ ಗೋಡೆಯಾಗಿದ್ದು, ಅತ್ಯುನ್ನತವಾದ, ಬಂಡೆಗಳಿಂದ ತೂಂಬಿದ ಪರ್ವತಗಳ ಉದ್ದಕ್ಕೂ ಆಗ್ನೇಯದಿಂದ ವಾಯವ್ಯಕ್ಕೆ ಸರಿಸುಮಾರು 2.25 ಕಿಲೋಮೀಟರುಗಳವರೆಗೆ (ಸುಮಾರು 1.3 ಮೈಲುಗಳು) ಸುತ್ತುತ್ತಾ ಹೋಗುತ್ತದೆ.
ಇದು ಪಶ್ಚಿಮಕ್ಕೆ ಜುಯೋಂಗ್ಗುವಾನ್ ಕಣಿವೆಯೊಂದಿಗೂ ಮತ್ತು ಪೂರ್ವಕ್ಕೆ ಗ್ಯೂಬಿಕೋವ್‌ನೊಂದಿಗೂ ಸಂಪರ್ಕಿಸಲ್ಪಟ್ಟಿದೆ.
- ಲಿಯಾವೋ ಟಿಯಾನ್ ಲಿಂಗ್‌ನ 25 ಕಿಮೀ ಪಶ್ಚಿಮಕ್ಕೆ ಮಹಾನ್ ಗೋಡೆಯ ಭಾಗವು ನಿಂತಿದ್ದು, ಅದು ಕೇವಲ 2~3 ಅಂತಸ್ತುಗಳಷ್ಟು ಎತ್ತರವಿದೆ. ಲಿನ್ ಟಿಯಾನ್‌ನ ದಾಖಲೆಗಳ ಅನುಸಾರ, ಗೋಡೆಯು ಇತರವುಗಳೊಂದಿಗೆ ಅತಿ ಕಡಿಮೆಯಾಗಿ ಹೋಲಿಸಲ್ಪಟ್ಟಿರುವುದು ಮಾತ್ರವಲ್ಲದೆ, ಇದು ಬೆಳ್ಳಿಯಂತೆಯೂ ಕಾಣಿಸಿಕೊಳ್ಳುತ್ತದೆ. ಈ ಗೋಡೆಯ ನಿರ್ಮಾಣಕ್ಕೆ ಷಾನ್ ಕ್ಸಿಯಿಂದ ತರಲಾದ ಕಲ್ಲುಗಳನ್ನು ಬಳಸಲಾಗಿದ್ದು, ಅಲ್ಲಿ ಅನೇಕ ಗಣಿಗಳು ಕಂಡುಬಂದಿರುವುದರಿಂದ, ಗೋಡೆಯು ಬೆಳ್ಳಿಯಂತೆ ಕಾಣಿಸುತ್ತದೆ ಎಂದು ಪುರಾತತ್ತ್ವ ಶಾಸ್ತ್ರಜ್ಞರು ವಿವರಿಸುತ್ತಾರೆ. ಅತೀವ ಹೆಚ್ಚು ಪ್ರಮಾಣದ ಲೋಹದ ಅಂಶವು ಸದರಿ ಕಲ್ಲುಗಳಲ್ಲಿರುವುದರಿಂದ ಇದು ಬೆಳ್ಳಿಯಂತೆ ಕಾಣುತ್ತದೆ. ಆದಾಗ್ಯೂ, ಮಹಾನ್ ಗೋಡೆಯು ಅನೇಕ ವರ್ಷಗಳಿಂದ ಶಿಥಿಲವಾಗುತ್ತಿರುವುದರ ಕಾರಣದಿಂದಾಗಿ, ಇಂದು ಗೋಡೆಯ ಬೆಳ್ಳಿ ಭಾಗವನ್ನು ನೋಡುವುದು ಅಪರೂಪವಾಗಿ ಪರಿಣಮಿಸಿದೆ.
ಮತ್ತೊಂದು ಗಮನಾರ್ಹ ವಿಭಾಗವು ಗೋಡೆಯ ಪೂರ್ವಭಾಗದ ತುತ್ತತುದಿಯ ಸಮೀಪವಿದೆ. ಈ ಭಾಗದಲ್ಲಿ, ಮಹಾನ್ ಗೋಡೆಯು ಹತ್ತುವ ಮೊದಲ ಪರ್ವತವಾದ ಷಾನ್‌ಹೈಗುವಾನ್‌ನ ಮೇಲೆ (“ಪ್ರಪಂಚದ ಅತ್ಯುತ್ಕೃಷ್ಟ ಕಣಿವೆ” ಎಂದೂ ಇದಕ್ಕೆ ಹೆಸರಿದೆ) ಮಹಾನ್ ಗೋಡೆಯ ಮೊದಲ ಕಣಿವೆಯು ನಿರ್ಮಿಸಲ್ಪಟ್ಟಿತು. ಜಿಯುಮೆನ್‌ಕೋವ್ ಇರುವಂತೆಯೇ ಜಿಯಾ ಷಾನ್ ಕೂಡಾ ಇಲ್ಲಿದ್ದು, ಅದು ಒಂದು ಸೇತುವೆಯಂತೆ ನಿರ್ಮಿಸಲ್ಪಟ್ಟ ಗೋಡೆಯ ಏಕೈಕ ಭಾಗವಾಗಿದೆ. ಸೋಂಗ್ ರಾಜವಂಶದ ಅವಧಿಯಲ್ಲಿ ನಿರ್ಮಿಸಲಾದ ಮೆಂಗ್ ಜಿಯಾಂಗ್-ನ್ಯು ದೇವಾಲಯದ ಕಾರಣದಿಂದಾಗಿ, ಷಾನ್‌ಹೈಗುವಾನ್ ಮಹಾನ್ ಗೋಡೆಯು “ಮಹಾನ್ ಗೋಡೆಯ ನಿರ್ಮಾಣ ಕಾಮಗಾರಿಯ ವಸ್ತುಸಂಗ್ರಹಾಲಯ” ಎಂದು ಕರೆಯಲ್ಪಡುತ್ತದೆ.
ಗುಣಲಕ್ಷಣಗಳು
ಬದಲಾಯಿಸಿಇಟ್ಟಿಗೆಗಳ ಬಳಕೆಗೆ ಮೊದಲು, ದಮ್ಮಸುಮಾಡಿದ ಮಣ್ಣು, ಕಲ್ಲುಗಳು, ಮತ್ತು ಮರದಿಂದ ಮಹಾನ್ ಗೋಡೆಯು ಪ್ರಮುಖವಾಗಿ ನಿರ್ಮಿಸಲ್ಪಟ್ಟಿತು.
ಆದಾಗ್ಯೂ, ಮಿಂಗ್ ರಾಜವಂಶದ ಅವಧಿಯಲ್ಲಿ, ಹಾಸುಬಿಲ್ಲೆಗಳು, ಸುಣ್ಣಕಲ್ಲು, ಮತ್ತು ಕಲ್ಲಿನಂಥ ಸಾಮಗ್ರಿಗಳಂತೆ ಇಟ್ಟಿಗೆಗಳನ್ನು ಗೋಡೆಯ ಅನೇಕ ಪ್ರದೇಶಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಬಳಸಲಾಯಿತು. ಇಟ್ಟಿಗೆಗಳ ಗಾತ್ರ ಮತ್ತು ತೂಕವು, ಮಣ್ಣು ಮತ್ತು ಕಲ್ಲಿಗಿಂತ ಸುಲಭಸಾಧ್ಯವಾಗಿ ಕೆಲಸ ಮಾಡಲು ಅನುವು ಮಾಡಿಕೊಟ್ಟವು. ಆದ್ದರಿಂದ ನಿರ್ಮಾಣ ಕಾಮಗಾರಿಯು ಕ್ಷಿಪ್ರಗತಿಯಲ್ಲಿ ಸಾಗಿತು. ಎಲ್ಲಕ್ಕಿಂತ ಮಿಗಿಲಾಗಿ, ದಮ್ಮಸುಮಾಡಿದ ಮಣ್ಣಿಗಿಂತ ಇಟ್ಟಿಗೆಗಳು ಹೆಚ್ಚು ತೂಕವನ್ನು ಹೊರಬಲ್ಲವು ಹಾಗೂ ಉತ್ತಮವಾಗಿ ಸಹಿಸಿಕೊಳ್ಳಬಲ್ಲವು. ತನ್ನದೇ ಸ್ವಂತ ತೂಕದಡಿಯಲ್ಲಿ ಇಟ್ಟಿಗೆಗಿಂತ ಉತ್ತಮವಾಗಿ ಕಲ್ಲು ಹಿಡಿದುಕೊಳ್ಳಬಲ್ಲುದಾದರೂ, ಅದನ್ನು ಬಳಸುವುದು ತುಂಬಾ ಕಷ್ಟ. ಇದರ ಪರಿಣಾಮವಾಗಿ, ಆಯತಾಕಾರದ ವಿನ್ಯಾಸದಲ್ಲಿ ಕತ್ತರಿಸಲಾದ ಕಲ್ಲುಗಳನ್ನು ತಳಪಾಯ, ಒಳಗಿನ ಮತ್ತು ಹೊರಗಿನ ಏಣುಗಳು, ಮತ್ತು ಗೋಡೆಯ ಬಾಗಿಲುದ್ವಾರಗಳಿಗಾಗಿ ಬಳಸಲಾಯಿತು. ಕೋಟೆಮಾಳಿಗೆಗಳು ಗೋಡೆಯ ವಿಶಾಲ ಭಾಗದ ಅತಿ ಎತ್ತರದ ಭಾಗವನ್ನು ತುಂಬುತ್ತವೆ. ಇದರ ರಕ್ಷಣಾತ್ಮಕ ಅಂತರಗಳು 30 ಸೆಂಮೀಗಿಂತ (ಒಂದು ಅಡಿ) ಎತ್ತರವಾಗಿದ್ದು, ಅಗಲವು ಸುಮಾರು 23 ಸೆಂಮೀಗಳಷ್ಟಿದೆ (9 ಇಂಚುಗಳು).
ಪರಿಸ್ಥಿತಿ
ಬದಲಾಯಿಸಿಬೀಜಿಂಗ್ನ ಉತ್ತರ ಭಾಗ ಮತ್ತು ಪ್ರವಾಸಿ ಕೇಂದ್ರಗಳ ಸಮೀಪವಿರುವ ಕೆಲವೊಂದು ಭಾಗಗಳು ಸಂರಕ್ಷಿಸಲ್ಪಟ್ಟಿದ್ದು, ವ್ಯಾಪಕವಾಗಿ ನವೀಕರಿಸಲ್ಪಟ್ಟಿವೆಯಾದರೂ, ಅನೇಕ ತಾಣಗಳಲ್ಲಿ ಗೋಡೆಯು ದುರಸ್ತಿ ಮಾಡಲಾಗದ ಸ್ಥಿತಿಯನ್ನು ತಲುಪಿದೆ. ಆ ಭಾಗಗಳು ಹಳ್ಳಿಯೊಂದರ ಆಟದ ಮೈದಾನವಾಗಿ ಇಲ್ಲವೇ, ಮನೆಗಳು ಹಾಗೂ ರಸ್ತೆಗಳನ್ನು ನಿರ್ಮಿಸಲು ಬೇಕಾಗುವ ಕಲ್ಲುಗಳ ಒಂದು ಮೂಲವಾಗಿ ಪಾತ್ರವಹಿಸಬಹುದೆನಿಸುತ್ತದೆ.[೭] ಗೋಡೆಯ ವಿಭಾಗಗಳು ಗೀಚುಬರಹ ಮತ್ತು ವಿಧ್ವಂಸಕತೆಗೂ ಸಹ ಈಡಾಗುವಂತಿವೆ. ಗೋಡೆಯು ನಿರ್ಮಾಣದ ಹಾದಿಯಲ್ಲಿರುವುದರಿಂದಾಗಿ ಕೆಲವೊಂದು ಭಾಗಗಳು ನಾಶಗೊಳಿಸಲ್ಪಟ್ಟಿವೆ.[೮]
ಗನ್ಸು ಪ್ರಾಂತ್ಯದಲ್ಲಿನ ಗೋಡೆಯ 60 kilometers (37 mi) ಕ್ಕಿಂತ ಹೆಚ್ಚು ಭಾಗವು, ಮರಳ ಬಿರುಗಾಳಿಗಳ ಕಾರಣದಿಂದಾಗಿ ಮುಂದಿನ 20 ವರ್ಷಗಳಲ್ಲಿ ಕಣ್ಮರೆಯಾಗಬಹುದು. ಕೆಲವೊಂದು ಕಡೆ ಗೋಡೆಯ ಎತ್ತರವು ಐದು ಮೀಟರುಗಳಿಗಿಂತ ಹೆಚ್ಚಿನ ಎತ್ತರದಿಂದ (16.4 ಅಡಿ) ಎರಡು ಮೀಟರುಗಳಿಗಿಂತಲೂ ಕಡಿಮೆಯ ಎತ್ತರಕ್ಕೆ ಕಡಿಮೆಗೊಳಿಸಲ್ಪಟ್ಟಿದೆ. ಗೋಡೆಯ ಅತ್ಯಂತ ಸುಪ್ರಸಿದ್ಧ ಬಿಂಬಗಳನ್ನು ನಿರೂಪಿಸುವ ಚೌಕಾಕಾರದ ವೀಕ್ಷಣಾ ಗೋಪುರಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ. ಗೋಡೆಯ ಪಶ್ಚಿಮ ಭಾಗದ ಅನೇಕ ವಿಭಾಗಗಳನ್ನು ಇಟ್ಟಿಗೆ ಮತ್ತು ಕಲ್ಲಿನ ಬದಲಿಗೆ ಮಣ್ಣಿನಿಂದ ನಿರ್ಮಿಸಲಾಗಿದೆ, ಮತ್ತು ಈ ಕಾರಣದಿಂದಾಗಿ ಅದು ಹೆಚ್ಚು ಸವಕಳಿಗೊಳಗಾಗುತ್ತದೆ.[೯]
ಕಾವಲು ಗೋಪುರಗಳು ಮತ್ತು ಸೈನಿಕರ ಸಾಲುಮನೆಗಳು
ಬದಲಾಯಿಸಿವೈರಿಗಳ ಚಲನವಲನಗಳ ಕುರಿತು ರಕ್ಷಕ ಸೈನ್ಯಗಳನ್ನು ಎಚ್ಚರಿಸುವ ಹಾಗೂ ಸೈನ್ಯದ ಬಲವನ್ನು ಹೆಚ್ಚಿಸುವ ಸಾಮರ್ಥ್ಯವೂ ಸೇರಿದಂತೆ, ಮಹಾನ್ ಗೋಡೆಯ ಉದ್ದಕ್ಕೂ ಇರುವ ಸೇನಾ ತುಕಡಿಗಳ ನಡುವಿನ ಸಂವಹನೆಯು, ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು. ಸೂಚನಾ ಗೋಪುರಗಳನ್ನು ಅವುಗಳ ದೃಗ್ಗೋಚರತೆಯ ಕಾರಣಕ್ಕಾಗಿ ಬೆಟ್ಟದ ತುದಿಗಳ ಮೇಲೆ ಅಥವಾ ಗೋಡೆಯ ಉದ್ದಕ್ಕೂ ಇರುವ ಇತರ ಎತ್ತರದ ಬಿಂದುಗಳಲ್ಲಿ ನಿರ್ಮಿಸಲಾಗಿತ್ತು.
ಬಾಹ್ಯಾಕಾಶದಿಂದ ಕಾಣುವ ದೃಶ್ಯ ಗೋಚರತೆ
ಬದಲಾಯಿಸಿಚಂದ್ರನಿಂದ ಕಾಣಿಸುವ ದೃಶ್ಯ ಗೋಚರತೆ
ಬದಲಾಯಿಸಿರಿಪ್ಲೇಯ ಬಿಲೀವ್ ಇಟ್ ಆರ್ ನಾಟ್! ವ್ಯಂಗ್ಯಚಿತ್ರಗಳಿಂದ ಮೊದಲ್ಗೊಂಡು ಅನೇಕ ಜನಪ್ರಿಯ ನಂಬಿಕೆಗಳು ಚಾಲ್ತಿಯಲ್ಲಿವೆ. 1930ರ ದಶಕಗಳಿಂದಲೂ ಅಸ್ತಿತ್ವದಲ್ಲಿರುವ ಸದರಿ ವ್ಯಂಗ್ಯಚಿತ್ರಗಳಲ್ಲಿ ಸಮರ್ಥಿಸಲ್ಪಟ್ಟಿರುವ, ಮಹಾನ್‌ಗೋಡೆಯು "ಮನುಷ್ಯನ ಅತ್ಯಂತ ಪವಾಡಸದೃಶ್ಯ ಕಾರ್ಯವಾಗಿದ್ದು, ಚಂದ್ರನಿಂದ ಮಾನವನ ಕಣ್ಣುಗಳಿಗೆ ಕಾಣಿಸಬಲ್ಲ ಏಕೈಕ ಕಟ್ಟಡ ಸಂರಚನೆಯಾಗಿದೆ" ಎಂಬ ನಂಬಿಕೆಯಿಂದ ಮೊದಲ್ಗೊಂಡು, 1938ರಲ್ಲಿ ಬಂದ ರಿಚರ್ಡ್ ಹ್ಯಾಲಿಬರ್ಟನ್‌ನ ಪುಸ್ತಕವಾದ ಸೆಕಂಡ್ ಬುಕ್ ಆಫ್ ಮಾರ್ವೆಲ್ಸ್‌ವರೆಗೂ ನಂಬಿಕೆಯ ಸರಣಿ ಹಬ್ಬುತ್ತದೆ. ಈ ಪುಸ್ತಕವೂ ಸಹ ಸದರಿ ವ್ಯಂಗ್ಯಚಿತ್ರಗಳ ರೀತಿಯಲ್ಲಿಯೇ ತನ್ನ ಸಮರ್ಥನೆಗಳನ್ನು ಮಂಡಿಸುತ್ತಾ ಹೋಗುತ್ತದೆ. ನಗರ ಪ್ರದೇಶದ ದಂತಕಥೆಯ ಪ್ರತಿಷ್ಠೆಯನ್ನುನ್ನು ಭಾವಿಸಿಕೊಂಡು, ಮತ್ತು ಕೆಲವೊಮ್ಮೆ ಶಾಲಾ ಪಠ್ಯ ಪುಸ್ತಕಗಳಲ್ಲಿಯೂ ಕಾಣಿಸಿಕೊಳ್ಳುವ ಮೂಲಕ ತಮ್ಮ ವಾದವನ್ನು ಪಟ್ಟುಹಿಡಿದು ಮುಂದುವರೆದುಕೊಂಡು ಬಂದಿವೆ. ದಿ ಗ್ರೇಟ್ ವಾಲ್ ಆಫ್ ಚೈನಾ: ಫ್ರಂ ಹಿಸ್ಟರಿ ಟು ಮಿಥ್ ಎಂಬ ಕೃತಿಯ ಲೇಖಕನಾದ ಅರ್ಥರ‍್ ವಾಲ್ಡ್ರಾನ್ ಎಂಬಾತ , ಮಂಗಳ ಗ್ರಹದ ಮೇಲೆ "ಕಾಲುವೆಗಳ" ಅಸ್ತಿತ್ವವಿದೆ ಎಂಬ ಒಂದು ಕಾಲದ ನಂಬಿಕೆಯ ಮೋಹಕತೆಯೆಡೆಗೆ ಈ ನಂಬಿಕೆಯು ಹಿಂದಕ್ಕೆ ಚಲಿಸಬಹುದು ಎಂದು ಊಹಿಸಿದ್ದಾನೆ.
ಈ ನಂಬಿಕೆಗಿರುವ ಅತ್ಯಂತ ಹಳೆಯ ಉಲ್ಲೇಖಗಳಲ್ಲೊಂದು ವಿಲಿಯಂ ಸ್ಟೂಕೆಲಿ ಎಂಬ ಇಂಗ್ಲಿಷ್ ಪ್ರಾಚೀನಾನ್ವೇಷಕನಿಂದ 1754ರಲ್ಲಿ ಬರೆಯಲ್ಪಟ್ಟ ಪತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತದೆ. ಸ್ಟೂಕೆಲಿಯ ಪತ್ರದಲ್ಲಿರುವ ಸಾಲುಗಳು ಹೀಗಿವೆ: "ಎಂಬತ್ತು ಮೈಲುಗಳಷ್ಟು ಉದ್ದದ ಈ ಪವಾಡ-ಸದೃಶ ಗೋಡೆಯು (ಹಾಡ್ರಿಯನ್‌ನ ಗೋಡೆ), ಕೇವಲ ಚೀನಾದ ಗೋಡೆಯಿಂದ ಅತಿಕ್ರಮಿಸಲ್ಪಟ್ಟಿದ್ದು, ಅದು ಭೂಮಂಡಲದ ಮೇಲಿನ ಒಂದು ಗಮನಾರ್ಹವಾದ ಆಕಾರವನ್ನು ರೂಪಿಸುತ್ತದೆ, ಮತ್ತು ಅದನ್ನು ಚಂದ್ರನಿಂದ ಗ್ರಹಿಸಬಹುದಾಗಿದೆ."[೧೦]
ಮಹಾನ್ ಗೋಡೆಯು ಗರಿಷ್ಟ 9.1 ಮೀ (30 ಅಡಿ) ಅಗಲವಿದೆ ಮತ್ತು ಅದನ್ನು ಸುತ್ತುವರೆದಿರುವ ಬಣ್ಣವನ್ನೇ ಸುಮಾರಾಗಿ ಹೊಂದಿದೆ. ಪೃಥಕ್ಕರಿಸುವ ಶಕ್ತಿಯ ದೃಗ್ವಿಜ್ಞಾನವನ್ನಾಧರಿಸಿ (ಕಣ್ಣಿನ ಪಾಪೆ ಪೊರೆಯ ಅಗಲಕ್ಕೆ ಪ್ರತಿಯಾಗಿರುವ ದೂರ: ಮಾನವ ಕಣ್ಣಿಗೆ ಕೆಲವೇ ಮಿಲಿಮೀಟರುಗಳು, ದೊಡ್ಡ ದೂರದರ್ಶಕಗಳಿಗೆ ಮೀಟರುಗಳು), 70 ಮೈಲುಗಳು ಅಥವಾ ಅದಕ್ಕಿಂತ ಹೆಚ್ಚು ವ್ಯಾಸದ (1 ಚಾಪ-ನಿಮಿಷ) ತನ್ನ ಸುತ್ತಮುತ್ತಲ ಪ್ರದೇಶಗಳಿಗೆ ಸಮಂಜಸವಾದ ಛಾಯಾವ್ಯತ್ಯಾಸದ ಒಂದು ವಸ್ತು ಮಾತ್ರವೇ, ಭೂಮಿಯಿಂದ 384,393 ಕಿಮೀಗಳಷ್ಟು ಸರಾಸರಿ ದೂರವಿರುವ (238,857 ಮೈಲುಗಳು) ಚಂದ್ರನ ನೆಲೆಯಿಂದ ಯಾವುದೇ ಒತ್ತಾಸೆಯಿಲ್ಲದ ಬರಿಗಣ್ಣಿಗೆ ಕಾಣಿಸಬಲ್ಲದು. ಚಂದ್ರನಿಂದ ಕಾಣುವ ಮಹಾನ್ ಗೋಡೆಯ ಸುಸ್ಪಷ್ಟ ವಿಸ್ತಾರವು, 2 ಮೈಲುಗಳಷ್ಟು ದೂರದಿಂದ ಮಾನವನ ಕೂದಲನ್ನು ನೋಡಿದಾಗ ಹೇಗೆ ಕಾಣಬಹುದೋ ಹಾಗಿರುತ್ತದೆ. ಚಂದ್ರನಿಂದ ಗೋಡೆಯನ್ನು ನೋಡಬೇಕೆಂದರೆ, ಸಾಮಾನ್ಯ (20/20) ನೋಟಕ್ಕಿಂತ 17,000 ಪಟ್ಟು ಉತ್ತಮವಾಗಿರುವ ಸ್ಥಳವಿಸ್ತಾರದ ಪೃಥಕ್ಕರಣ ಸಾಮರ್ಥ್ಯವು ಅಗತ್ಯವಾಗಿರುತ್ತದೆ.[೧೧] ಆಶ್ಚರ್ಯಕರವಲ್ಲದಂತೆ, ಯಾವುದೇ ಚಂದ್ರಯಾನದ ಗಗನಯಾತ್ರಿಯು ತಾನು ಚಂದ್ರನಿಂದ ಮಹಾನ್ ಗೋಡೆಯನ್ನು ನೋಡಿರುವ ಕುರಿತು ಎಂದಿಗೂ ಪ್ರತಿಪಾದಿಸಿಲ್ಲ.
ಭೂಮಿಯ ಕೆಳಮಟ್ಟದ ಕಕ್ಷೆಯಿಂದ ಕಾಣುವ ದೃಶ್ಯ ಗೋಚರತೆ
ಬದಲಾಯಿಸಿಭೂಮಿಯ ಕೆಳಮಟ್ಟದ ಕಕ್ಷೆಯಿಂದ, ಅಂದರೆ, 100 miles (160 km)ನಷ್ಟು ಕಡಿಮೆ ಎತ್ತರದಿಂದ ಗೋಡೆಯು ಕಾಣಿಸಬಲ್ಲದೇ ಎಂಬುದೇ ಒಂದು ಹೆಚ್ಚು ವಿವಾದಾತ್ಮಕ ಪ್ರಶ್ನೆಯಾಗಿದೆ. ಇದು ಎಷ್ಟು ಬೇಕೋ ಅಷ್ಟು ಮಾತ್ರ, ಮತ್ತು ಕೇವಲ ಕರಾರುವಾಕ್ಕಿಗೆ ಸಮೀಪದ ಸನ್ನಿವೇಶಗಳಲ್ಲಿ ಮಾತ್ರವೇ ಕಾಣಿಸುತ್ತದೆ ಎಂದು ನಾಸಾ ಸಮರ್ಥನೆಯನ್ನು ನೀಡಿದೆ; ಇತರ ಅನೇಕ ಮಾನವ-ನಿರ್ಮಿತ ವಸ್ತುಗಳಿಗಿಂತ ಇದು ಹೆಚ್ಚೇನೂ ಸ್ಪಷ್ಟಗೋಚರವಾಗಿಲ್ಲ.[೧೨] ಕಣ್ಣಿನ ದೃಗ್ವಿಜ್ಞಾನದ ಇತಿಮಿತಿಗಳ ಮತ್ತು ಅಕ್ಷಿಪಟದ ಮೇಲಿನ ದ್ಯುತಿಗ್ರಾಹಿಗಳ ಅಂತರ ಬಿಡುವಿಕೆಯ ಕಾರಣದಿಂದಾಗಿ, ಕೆಳಮಟ್ಟದ ಕಕ್ಷೆಯಿಂದಲೂ ಸಹ ಬರಿಗಣ್ಣಿನಿಂದ ಗೋಡೆಯನ್ನು ನೋಡುವುದು ಸಾಧ್ಯವಿಲ್ಲ, ಮತ್ತು ಇದಕ್ಕಾಗಿ 20/3ನಷ್ಟು (ಸಾಮಾನ್ಯ ಮಟ್ಟಕ್ಕಿಂತ 7.7 ಪಟ್ಟು ಉತ್ತಮ) ಪ್ರಮಾಣದ ದೃಷ್ಟಿಗೋಚರ ತೀಕ್ಷ್ಣತೆಯು ಅಗತ್ಯವಿರುತ್ತದೆ ಎಂದು ಇತರ ಲೇಖಕರು ವಾದಿಸಿದ್ದಾರೆ.[೧೧]
ಉಪಾಖ್ಯಾನ ರೂಪದ ವರದಿಗಳು
ಬದಲಾಯಿಸಿವಿಲಿಯಂ ಪೋಗ್ ಎಂಬ ಗಗನಯಾತ್ರಿಯು ಇದನ್ನು ತಾನು ಆಕಾಶ ಪ್ರಯೋಗಾಲಯದಿಂದ (ಸ್ಕೈಲ್ಯಾಬ್‌ನಿಂದ) ನೋಡಿದ್ದಾಗಿ ಭಾವಿಸಿದ; ಆದರೆ ತಾನು ವಾಸ್ತವವಾಗಿ ನೋಡುತ್ತಿರುವುದು ಬೀಜಿಂಗ್ ಸಮೀಪವಿರುವ ಚೀನಾದ ಮಹಾನ್ ಕಾಲುವೆಯನ್ನು ಎಂದು ಆತನಿಗೆ ಅರಿವಾಯಿತು. ಆತ ದುರ್ಬೀನುಗಳ ನೆರವಿನಿಂದ ಮಹಾನ್ ಗೋಡೆಯನ್ನು ಪತ್ತೆಹಚ್ಚಿದ, ಆದರೆ, "ಇದು ಯಾವುದೇ ಒತ್ತಾಸೆಯಿಲ್ಲದೆ ಬರಿಗಣ್ಣಿಗೆ ಕಾಣಿಸುವಂತಿರಲಿಲ್ಲ" ಎಂದು ಹೇಳಿದ. ಜೇಕ್ ಗರ್ನ್ ಎಂಬ U.S. ಸೆನೆಟರ‍್ 1980ರ ದಶಕದ ಆರಂಭದಲ್ಲಿ, ಬಾಹ್ಯಾಕಾಶ ನೌಕೆಯ ಕಕ್ಷೆಯೊಂದರಿಂದ ಬರಿಗಣ್ಣಿನಲ್ಲಿ ಮಹಾನ್ ಗೋಡೆಯನ್ನು ನೋಡಲು ತನಗೆ ಸಾಧ್ಯವಾಯಿತು ಎಂದು ಸಮರ್ಥಿಸಿದ; ಆದರೆ ಅವನ ಈ ಸಮರ್ಥನೆಯನ್ನು ಹಲವಾರು U.S. ಗಗನಯಾತ್ರಿಗಳು ಅಲ್ಲಗಳೆದರು. ಜೀನ್ ಸೆರ್ನಾನ್ ಎಂಬ ಪರಿಣತ U.S. ಗಗನಯಾತ್ರಿ ಈ ರೀತಿಯಾಗಿ ಹೇಳಿಕೆ ನೀಡಿದ: " 100 miles (160 km) ರಿಂದ 200 miles (320 km) ರವರೆಗಿನಷ್ಟು ಎತ್ತರದ ಭೂಮಿ ಕಕ್ಷೆಯಲ್ಲಿ ಚೀನಾದ ಮಹಾನ್ ಗೋಡೆಯು ನಿಶ್ಚಯವಾಗಿ ಬರೆಗಣ್ಣಿಗೆ ಕಾಣಿಸುತ್ತದೆ." ವಿಶೇಷ ಕಾರ್ಯಯಾತ್ರೆ 7ಯ ವಿಜ್ಞಾನಿ ಅಧಿಕಾರಿಯಾದ ಎಡ್ ಲು ಎಂಬಾತ, ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನ ಒಳಗಿದ್ದುಕೊಂಡು ಹೀಗೆ ಹೇಳಿದ, "ಇತರ ಅಸಂಖ್ಯಾತ ವಸ್ತುಗಳಿಗಿಂತ ಇದು ಕಡಿಮೆ ಪ್ರಮಾಣದಲ್ಲಿ ಕಾಣಿಸುತ್ತದೆ. ಮತ್ತು ಎಲ್ಲಿ ನೋಡಬೇಕೆಂದು ನಿಮಗೆ ಗೊತ್ತಿರಬೇಕಾಗುತ್ತದೆ."
ಅಪೊಲೊ 11ರಿಂದ ಕಾಣಿಸಿದ ದೃಶ್ಯದ ಕುರಿತು ನೀಲ್ ಆರ್ಮ್‌ಸ್ಟ್ರಾಂಗ್ ಹೀಗೆ ಹೇಳಿದ: "ನಾನು ಅದನ್ನು ನಂಬುವುದಿಲ್ಲ, ಅದೂ ನನ್ನ ಈ ಕಣ್ಣುಗಳೊಂದಿಗೆ, ಅಲ್ಲಿ ನಾನು ನೋಡಬಹುದಾದ ಯಾವುದೇ ಮಾನವ-ನಿರ್ಮಿತ ವಸ್ತುವಿದೆ ಎಂಬುದನ್ನು ನಂಬಲಾರೆ. ಭೂಮಿ ಕಕ್ಷೆಯಿಂದ ಚೀನಾದ ಗೋಡೆಯನ್ನು ತಾವು ನೋಡಿದ್ದಾಗಿ ನನಗೆ ಹೇಳಿದ ಒಬ್ಬರನ್ನು ನಾನು ಇದುವರೆಗೂ ಕಂಡಿಲ್ಲ. ...ನಾನು ಅನೇಕ ಜನರನ್ನು, ಅದರಲ್ಲೂ ನಿರ್ದಿಷ್ಟವಾಗಿ ಚೀನಾದ ಸುತ್ತಲೂ ಹಗಲು ಹೊತ್ತಿನಲ್ಲಿ ಅನೇಕ ಸುತ್ತುಹಾಕಿದ ಗಗನನೌಕೆಯ ಮಂದಿಯನ್ನು ಈ ಕುರಿತು ಕೇಳಿರುವೆ, ಮತ್ತು ನನ್ನೊಂದಿಗೆ ಮಾತಾಡಿದವರು ತಾವು ಅದನ್ನು ನೋಡಿಲ್ಲ ಎಂದು ತಿಳಿಸಿದ್ದಾರೆ."[೧೩]
2003ರ ಅಕ್ಟೋಬರ್‌ನಲ್ಲಿ, ಯಾಂಗ್ ಲಿವೀ ಎಂಬ ಚೀನಾದ ಗಗನಯಾತ್ರಿಯು ಚೀನಾದ ಮಹಾನ್ ಗೋಡೆಯನ್ನು ನೋಡಲು ತನಗೆ ಸಾಧ್ಯವಾಗಲಿಲ್ಲ ಎಂದು ತಿಳಿಸಿದ. ಇದಕ್ಕೆ ಪ್ರತಿಕ್ರಿಯೆಯಾಗಿ, ಯುರೋಪಿಯನ್ ಸ್ಪೇಸ್ ಏಜೆನ್ಸಿಯು (ESA) ಒಂದು ಪತ್ರಿಕಾ ಹೇಳಿಕೆಯನ್ನು ನೀಡಿ, 160 ಮತ್ತು 320 ಕಿಮೀ ನಡುವಿನ ಒಂದು ಕಕ್ಷೆಯಿಂದ ಮಹಾನ್ ಗೋಡೆಯು ಬರಿಯ ಕಣ್ಣಿಗೆ ಕಾಣಿಸುತ್ತದೆ ಎಂದು ತಿಳಿಸಿತು. ವಿಷಯಗಳನ್ನು ಮತ್ತಷ್ಟು ಸ್ಪಷ್ಟೀಕರಿಸುವ ದೃಷ್ಟಿಯಿಂದ, ಬಾಹ್ಯಾಕಾಶದಿಂದ ಛಾಯಾಗ್ರಹಣ ಮಾಡಲಾದ “ಮಹಾನ್ ಗೋಡೆ”ಯ ಭಾಗವೊಂದರ ಚಿತ್ರವೊಂದನ್ನು ESAಯು ಪ್ರಕಟಿಸಿತು. ಆದಾಗ್ಯೂ, ಒಂದು ವಾರದ ನಂತರ ಬಿಡುಗಡೆಯಾದ ಪತ್ರಿಕಾ ಹೇಳಿಕೆಯೊಂದರಲ್ಲಿ (ಇದು ಈಗ ESAಯ ವೆಬ್‌ಸೈಟ್‌ನಲ್ಲಿ ಎಂದಿಗೂ ಲಭ್ಯವಿಲ್ಲ), ಚಿತ್ರದಲ್ಲಿದ್ದ "ಮಹಾನ್ ಗೋಡೆ"ಯು ವಾಸ್ತವವಾಗಿ ಒಂದು ನದಿಯೆಂದು ಒಪ್ಪಿಕೊಂಡಿತು.[೧೧]
ಲೆರಾಯ್ ಚಿಯಾವೋ ಎಂಬ ಓರ್ವ ಚೀನೀ-ಅಮೆರಿಕಾದ ಗಗನಯಾತ್ರಿಯು, ಗೋಡೆಯನ್ನು ತೋರಿಸುವ ಛಾಯಾಚಿತ್ರವೊಂದನ್ನು ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್‌ನಿಂದ ತೆಗೆದ. ಅದು ಎಷ್ಟೊಂದು ಮಸುಕು ಅಥವಾ ಅಸ್ಪಷ್ಟವಾಗಿತ್ತೆಂದರೆ, ತಾನೇ ವಾಸ್ತವವಾಗಿ ಆ ಚಿತ್ರವನ್ನು ಸೆರೆಹಿಡಿದದ್ದೇ ಎಂಬುದರ ಕುರಿತು ಸದರಿ ಛಾಯಾಗ್ರಾಹಕನಿಗೇ ಖಾತ್ರಿಯಿರಲಿಲ್ಲ. ಛಾಯಾಚಿತ್ರವನ್ನು ಆಧರಿಸಿ, ಚೀನಾ ಡೈಲಿ ಪತ್ರಿಕೆಯು ನಂತರ ವರದಿಯೊಂದನ್ನು ಪ್ರಕಟಿಸಿತು. ಪೂರಕವಾಗಿ ನಿಲ್ಲುವ ವೀಕ್ಷಣಾ ಸನ್ನಿವೇಶಗಳಡಿಯಲ್ಲಿ ಮಹಾನ್ ಗೋಡೆಯನ್ನು ಬಾಹ್ಯಾಕಾಶದಿಂದ ಬರಿಗಣ್ಣಿನಿಂದ ನೋಡಬಹುದು. ಎಲ್ಲಿ ನೋಡಬೇಕು ಎಂಬುದು ನೋಡುವಾತನಿಗೆ ನಿಖರವಾಗಿ ಗೊತ್ತಿದ್ದರೆ ಮಾತ್ರ ಇದು ಸಾಧ್ಯ ಎಂಬುದು ಈ ವರದಿಯ ಸಾರವಾಗಿತ್ತು.[೧೪] ಆದಾಗ್ಯೂ, ಮಾನವನ ದೃಷ್ಟಿಗೋಚರ ವ್ಯವಸ್ಥೆಗಿಂತ ಕ್ಯಾಮೆರಾವೊಂದರ ಪೃಥಕ್ಕರಣ ಸಾಮರ್ಥ್ಯವು ತುಂಬಾ ಹೆಚ್ಚಿನದಾಗಿರಬಲ್ಲದು. ಇದರಿಂದಾಗಿ ಬರಿಗಣ್ಣಿಗೆ ಗೋಡೆಯು ಗೋಚರವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಚರ್ಚಾವಿಷಯಕ್ಕೆ ಅಸಂಬದ್ಧ ಎನಿಸುವ ಛಾಯಾಚಿತ್ರ ಸ್ವರೂಪದ ಸಾಕ್ಷ್ಯವನ್ನು ಒದಗಿಸಲು ಸಾಧ್ಯವಾಗುತ್ತದೆ.[೧೧]
ಚಿತ್ರಸಂಪುಟ
ಬದಲಾಯಿಸಿಇವನ್ನೂ ಗಮನಿಸಿ
ಬದಲಾಯಿಸಿ- ಕಿ ಪ್ರದೇಶದ ಮಹಾನ್ ಗೋಡೆ
- ಮಹಾನ್ ಗೋಡೆಯ ರಕ್ಷಣೆ
- ಚೀನಾದ ನಗರದ ಗೋಡೆ
- ಚೀನಾದ ಮಹಾನ್ ಗೋಡೆಯ ಕುಚೇಷ್ಟೆ
- ಮಹಾನ್ ಗೋಡೆ ಸುದೀರ್ಘ ಓಟ
- ಪ್ರತ್ಯೇಕತೆಯ ತಡೆಗೋಡೆ
- ಪ್ರಮಾಣದ ಅನುಕ್ರಮಗಳು (ಉದ್ದ)
- ಚೀನಾದ ಸೇನಾ ಇತಿಹಾಸ
- ಚೀನಾದ ಆರ್ಥಿಕ ಇತಿಹಾಸ
ಆಕರಗಳು
ಬದಲಾಯಿಸಿ- ↑ 10,000 li = 6,508 ಕಿಮೀ (4,000 ಮೈಲುಗಳು). ಚೀನಿಯರಲ್ಲಿ, 10,000 ಎಂಬುದು ಸಾಂಕೇತಿಕವಾಗಿ "ಅನಂತ" ಎಂಬ ಅರ್ಥವಿವರಣೆಯನ್ನು ನೀಡುತ್ತದೆ, ಮತ್ತು ಸದರಿ ಸಂಖ್ಯೆಯನ್ನು ಅದರ ವಾಸ್ತವಿಕ ಮೌಲ್ಯಕ್ಕಾಗಿ ಅರ್ಥವಿವರಿಸುವಂತಿಲ್ಲ, ಆದರೆ "ಎಲ್ಲೆಯಿಲ್ಲದೆ ಉದ್ದವಾದ ಗೋಡೆ" ಎಂಬ ಅರ್ಥವನ್ನು ಹೊಂದಿರುವಂತೆ ವಿವರಿಸಬಹುದು.
- ↑ "Great Wall of China 'even longer'". BBC. 2009-04-20. Retrieved 2009-04-20.
- ↑ "China's Great Wall far longer than thought: survey". AFP. 2009-04-20. Archived from the original on 2009-04-27. Retrieved 2009-04-20.
- ↑ "China's Great Wall far longer than thought: survey". The Sydney Morning Herald. 2009-04-20. Retrieved 2009-04-20.
- ↑ Edmonds, Richard Louis (1985). Northern Frontiers of Qing China and Tokugawa Japan: A Comparative Study of Frontier Policy. University of Chicago, Department of Geography; Research Paper No. 213. pp. 38–40. ISBN 0-89065-118-3.
- ↑ "ಗ್ರೇಟ್ ವಾಲ್ ಆಫ್ ಚೈನಾ ಲಾಂಗರ‍್ ದ್ಯಾನ್ ಬಿಲೀವ್ಡ್ ಆಸ್ 180 ಮಿಸ್ಸಿಂಗ್ ಮೈಲ್ಸ್ ಫೌಂಡ್; ಯೂಸಿಂಗ್ ರೇಂಜ್ ಫೈಂಡರ್ಸ್ ಅಂಡ್ GPS ಡಿವೈಸಸ್, ಅಫಿಷಿಯಲ್ ಮ್ಯಾಪಿಂಗ್ ಪ್ರಾಜೆಕ್ಟ್ ಡಿಸ್ಕವರ್ಸ್ ಸೆಕ್ಷನ್ಸ್ ಕನ್ಸೀಲ್ಡ್ ಬೈ ಹಿಲ್ಸ್, ಟ್ರೆಂಚಸ್ ಅಂಡ್ ರಿವರ್ಸ್,' Guardian.co.uk, ಏಪ್ರಿಲ್ 20, 2009
- ↑ ಫೋರ್ಡ್, ಪೀಟರ್ (2006, ನವೆಂಬರ‍್ 30). ನ್ಯೂ ಲಾ ಟು ಕೀಪ್ ಚೈನಾಸ್ ವಾಲ್ ಲುಕಿಂಗ್ ಗ್ರೇಟ್. ಕ್ರಿಶ್ಚಿಯನ್ ಸೈನ್ಸ್ ಮಾನಿಟರ್, ಏಷ್ಯಾ ಪೆಸಿಫಿಕ್ ವಿಭಾಗ. 2007-03-17ರಂದು ಸಂಪರ್ಕಿಸಲಾಯಿತು.
- ↑ ಬ್ರೂಸ್ G. ಡೋವರ್: ದಿ ಗ್ರೇಟ್ ವಾಲ್ ಆಫ್ ಚೈನಾ: ಟ್ಯಾಂಜಿಬಲ್, ಇಂಟ್ಯಾಂಜಿಬಲ್ ಅಂಡ್ ಡಿಸ್ಟ್ರಕ್ಟಬಲ್. Archived 2008-07-19 ವೇಬ್ಯಾಕ್ ಮೆಷಿನ್ ನಲ್ಲಿ. ಚೈನಾ ಹೆರಿಟೇಜ್ ನ್ಯೂಸ್‌ಲೆಟರ್, ಚೈನಾ ಹೆರಿಟೇಜ್ ಪ್ರಾಜೆಕ್ಟ್, ಆಸ್ಟ್ರೇಲಿಯಾn ನ್ಯಾಷನಲ್ ಯೂನಿವರ್ಸಿಟಿ
- ↑ "China's Wall becoming less and less Great". Reuters. 2007-08-29. Retrieved 2007-08-30.
- ↑ ದಿ ಫ್ಯಾಮಿಲಿ ಮೆಮ್‌ವಾರ್ ಆಫ್ ದಿ ರೆ. ವಿಲಿಯಂ ಸ್ಟೂಕೆಲಿ (ಡರ್ಹಾಮ್: ಸರ್ಟೀಸ್ ಸೊಸೈಟಿ, 1882-1887) ಸಂಪುಟ 3, ಪುಟ 142.
- ↑ ೧೧.೦ ೧೧.೧ ೧೧.೨ ೧೧.೩ Norberto López-Gil. "Is it Really Possible to See the Great Wall of China from Space with a Naked Eye?" (PDF). Journal of Optometry. 1 (1): 3–4. Archived from the original (PDF) on 2009-10-07. Retrieved 2010-02-11.
- ↑ "NASA – ಗ್ರೇಟ್ ವಾಲ್ ಆಫ್ ಚೈನಾ". Archived from the original on 2021-04-08. Retrieved 2021-07-21.
- ↑ "NASA" (PDF). Archived from the original (PDF) on 2012-10-21. Retrieved 2010-02-11.
- ↑ ಮಾರ್ಕಸ್, ಫ್ರಾನ್ಸಿಸ್. (2005, ಏಪ್ರಿಲ್ 19). ಗ್ರೇಟ್ ವಾಲ್ ವಿಸಿಬಲ್ ಇನ್ ಸ್ಪೇಸ್ ಫೋಟೋ. BBC ನ್ಯೂಸ್, ಏಷ್ಯಾ-ಪೆಸಿಫಿಕ್ ವಿಭಾಗ. 2007-03-17ರಂದು ಸಂಪರ್ಕಿಸಲಾಯಿತು.
ಹೆಚ್ಚಿನ ಓದಿಗೆ
ಬದಲಾಯಿಸಿ- ಅರ್ನಾಲ್ಡ್, H.J.P, "ದಿ ಗ್ರೇಟ್ ವಾಲ್: ಈಸ್ ಇಟ್ ಆರ‍್ ಇಸಂಟ್ ಇಟ್?" ಅಸ್ಟ್ರಾನಮಿ ನೌ , 1995.
- ಹೆಸ್ಲರ‍್, ಪೀಟರ್. "ವಾಕಿಂಗ್ ದಿ ವಾಲ್". ದಿ ನ್ಯೂಯಾರ್ಕರ್ , ಮೇ 21, 2007, ಪುಟಗಳು 56–65.
- ಲೊವೆಲ್, ಜೂಲಿಯಾ. ದಿ ಗ್ರೇಟ್ ವಾಲ್: ಚೈನಾ ಎಗೇನ್ಸ್ಟ್ ದಿ ವರ್ಲ್ಡ್. 1000 BC - 2000 AD. ಲಂಡನ್: ಅಟ್ಲಾಂಟಿಕ್ ಬುಕ್ಸ್; ಸಿಡ್ನಿ, ಆಸ್ಟ್ರೇಲಿಯಾ: ಪಿಕಡಾರ್, 2006. ISBN 978-0-330-42241-3; ISBN 0-330-42241-3.
- Man, John. (2008). The Great Wall. London: Bantam Press. p. 335 pages. ISBN 9780593055748.
{{cite book}}
: Unknown parameter|nopp=
ignored (help) - ಮಿಚೌಡ್, ರೋಲ್ಯಾಂಡ್ (ಛಾಯಾಗ್ರಾಹಕ); ಸಬ್ರೀನಾ ಮಿಚೌಡ್ (ಛಾಯಾಗ್ರಾಹಕ), & ಮೈಕೇಲ್ ಜ್ಯಾನ್, ದಿ ಗ್ರೇಟ್ ವಾಲ್ ಆಫ್ ಚೈನಾ . ಅಬೆವಿಲ್ಲೆ ಪ್ರೆಸ್, 2001. ISBN 0-7892-0736-2
- ವಾಲ್ಡ್ರೋನ್, ಅರ್ಥರ್, ದಿ ಗ್ರೇಟ್ ವಾಲ್ ಆಫ್ ಚೈನಾ: ಫ್ರಂ ಹಿಸ್ಟರಿ ಟು ಮಿಥ್ . ಕೇಂಬ್ರಿಜ್: ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್, 1990.
- Yamashita, Michael; Lindesay, William (2007). The Great Wall — From Beginning to End. New York: Sterling. p. 160 pages. ISBN 978-1-4027-3160-0.
{{cite book}}
: Unknown parameter|nopp=
ignored (help)CS1 maint: multiple names: authors list (link)
ಹೊರಗಿನ ಕೊಂಡಿಗಳು
ಬದಲಾಯಿಸಿ- ಗ್ರೇಟ್ ವಾಲ್ ಆಫ್ ಚೈನಾ ಸೊಸೈಟಿ Archived 2010-01-31 ವೇಬ್ಯಾಕ್ ಮೆಷಿನ್ ನಲ್ಲಿ. (Chinese)
- UNESCO ವಿಶ್ವ ಪರಂಪರೆ ಕೇಂದ್ರದ ಪಾರ್ಶ್ವಚಿತ್ರ
- Enthusiast/scholar website (Chinese)
- ಇಂಟರ್‌ನ್ಯಾಷನಲ್ ಫ್ರೆಂಡ್ಸ್ ಆಫ್ ದಿ ಗ್ರೇಟ್ ವಾಲ್ Archived 2009-02-17 ವೇಬ್ಯಾಕ್ ಮೆಷಿನ್ ನಲ್ಲಿ. – ಸಂರಕ್ಷಣೆಯ ಕುರಿತು ಗಮನಹರಿಸಿರುವ ಸಂಘಟನೆ