ಶರಾವತಿ ನದಿಯು ಕರ್ನಾಟಕದ ಪ್ರಮುಖ ನದಿಗಳಲ್ಲೊಂದು. ಈ ನದಿಯು ಭಾರತದ ಪಶ್ಮಿಮ ದಿಕ್ಕಿನಲ್ಲಿ ಹರಿಯುವ ನದಿಗಳಲ್ಲಿ ಒಂದಾಗಿದೆ. ಈ ಆಣೆಕಟ್ಟು ೨.೪ಕಿ. ಮೀ. ಉದ್ದವನ್ನು ಹೊಂದಿದೆ. ಹೊನ್ನಾವರದಲ್ಲಿ ಅರಬ್ಬಿ ಸಮುದ್ರಕ್ಕೆ ಸೇರುವ ಶರಾವತಿ ನದಿಯು ಹರಿಯುವ ಉದ್ದ ಸುಮಾರು ೧೨೮ ಕಿ.ಮೀ. ಹೊನ್ನಾವರದಲ್ಲಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆ ಕರ್ನಾಟಕದಲ್ಲೇ ಅತ್ಯಂತ ಉದ್ದದ ಸೇತುವೆ. ಜೋಗದಲ್ಲಿ ಶರಾವತಿ ೯೦೦ ಅಡಿ ಧುಮುಕಿ ಜೋಗ ಜಲಪಾತವನ್ನು ಸೃಷ್ಟಿಸಿದೆ. ಸಾಗರದ ಬಳಿ ಲಿಂಗನಮಕ್ಕಿಯಲ್ಲಿ ಶರಾವತಿಗೆ ಆಣೆಕಟ್ಟನ್ನು ಕಟ್ಟಲಾಗಿದೆ. ಆಣೆಕ‌ಟ್ಟೆಯ ಕೆಳಭಾಗದಲ್ಲಿ ಶರಾವತಿ ಜಲವಿದ್ಯುದಾಗಾರ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ದೀರ್ಘಕಾಲದವರೆಗೆ ಕರ್ನಾಟಕದ ವಿದ್ಯುತ್ ಬೇಡಿಕೆಯ ಬಹು ಪಾಲನ್ನು ಈ ಯೋಜನೆಯೇ ಪೂರೈಸುತ್ತಿತ್ತು. ನದಿ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶವು ಅನೇಕ ಜೀವವೈವಿಧ್ಯತೆಯಿಂದ ಸಮೃದ್ಧವಾಗಿದೆ ಮತ್ತು ಅನೇಕ ರೀತಿಯ ಅಪರೂಪದ ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ.

ಶರಾವತಿ ನದಿ
ಜೋಗ

ಶರಾವತಿ ನದಿಯು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದಲ್ಲಿ ಹುಟ್ಟುತ್ತದೆ. ಪ್ರಾಚೀನ ದಂತಕಥೆಯ ಪ್ರಕಾರ, ಸೀತಾ ದೇವಿಗೆ ಬಾಯಾರಿಕೆ ಆದಾಗ ರಾಮ ದೇವರು ತನ್ನ ಬಾಣವನ್ನು ನೆಲಕ್ಕೆ ಹಾರಿಸಿದ ಸಂದರ್ಭದಲ್ಲಿ ಬಾಣವು ಭೂಮಿಗೆ ಅಪ್ಪಳಿಸಿ ನೀರು ಸುರಿಯಿತು. ಈ ಘಟನೆಯೊಂದಿಗೆ ಹುಟ್ಟಿದ ನದಿಯನ್ನು 'ಶರಾವತಿ' ಎಂದು ಕರೆಯಲಾಗುತ್ತದೆ.[] 'ಶರಾ' ಎಂದರೆ ಬಾಣ ಎಂಬ ಅರ್ಥವನ್ನು ನೀಡುತ್ತದೆ. ನದಿಯ ಪ್ರಮುಖ ಉಪನದಿಗಳು :ನಂದಿಹೊಳೆ, ಹರಿದ್ರಾವತಿ, ಮಾವಿನಹೊಳೆ, ಹಿಲ್ಕುಂಜಿ, ಯೆನ್ನೆಹೊಳೆ, ಹರ್ಲಿಹೊಳೆ, ನಾಗೋಡಿಹೊಳೆ.

ಆಣೆಕಟ್ಟುಗಳು

ಬದಲಾಯಿಸಿ
  • ಲಿಂಗನಮಕ್ಕಿ ಆಣೆಕಟ್ಟು

ಲಿಂಗನಮಕ್ಕಿ ಅಣೆಕಟ್ಟನ್ನು ೧೯೬೪ರಲ್ಲಿ ಶರಾವತಿ ನದಿಗೆ ಅಡ್ಡವಾಗಿ ನಿರ್ಮಿಸಲಾಯಿತು.

  • ಗೇರುಸೊಪ್ಪ ಆಣೆಕಟ್ಟು

ಗೇರುಸೊಪ್ಪ ಆಣೆಕಟ್ಟು ಯೋಜನೆ ೨೦೦೨ರಲ್ಲಿ ಪೂರ್ಣಗೊಂಡಿತು. ಇದರ ಮುಖ್ಯ ಉದ್ದೇಶ ವಿದ್ಯುತ್ ಉತ್ಪಾದನೆ. ಇದನ್ನು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಬಳಿ ನಿರ್ಮಿಸಲಾಯಿತು. ಇದು ೫೬ ಮೀಟರ್ ಎತ್ತರ ಮತ್ತು ೫೪೫ ಮೀಟರ್ ಉದ್ದವನ್ನು ಹೊಂದಿದೆ. ಗೇರುಸೊಪ್ಪ ಆಣೆಕಟ್ಟಿನ ಬಲದಂಡೆಯಲ್ಲಿರುವ ಪವರ್ ಹೌಸ್ ನಾಲ್ಕು ಫ್ರಾನ್ಸಿಸ್ ಮಾದರಿಯ ಟರ್ಬೈನ್ ಗಳನ್ನು ಒಳಗೊಂಡಿದೆ.

ಜಲಪಾತಗಳು

ಬದಲಾಯಿಸಿ

ಜೋಗ ಜಲಪಾತ ಭಾರತದ ಮೂರನೇ ಅತೀ ಎತ್ತರವಾದ ಜಲಪಾತವಾಗಿದೆ. ಮೊದಲ ಅತ ಎತ್ತರದ ಕುಂಚಿಕಲ್ ಜಲಪಾತ ಮತ್ತು ಎರಡನೇ ಎತ್ತರದ ಬರ್ಕಣ ಜಲಪಾತ , ಶಿವಮೊಗ್ಗ ಜಿಲ್ಲೆಯಲ್ಲಿದೆ.[] ಶರವತಿ ನದಿ ರಾಜ, ರೋವರ್, ರಾಕೆಟ್ ಮತ್ತು ರಾಣಿ , ಹೀಗೆ ನಾಲ್ಕು ವಿಭಾಗಗಳಾಗಿ ಆಳವಾದ ಕಮರಿಗೆ ಇಳಿಯುತ್ತದೆ.[][]

ಹವಾಮಾನ

ಬದಲಾಯಿಸಿ

ನದಿಯ ಬಹುಪಾಲು ಪಶ್ಮಿಮ ಘಟ್ಟದಲ್ಲಿ ಇದ್ದು, ಶರಾವತಿ ನದಿಯ ಜಲಾನಯಾನ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತದೆ. ಸರಾಸರಿ ವಾರ್ಷಿಕ ಮಳೆಯು ಪಶ್ಮಿಮ ಭಾಗದಲ್ಲಿ ೬೦೦ಮಿ.ಮೀ ನಿಂದ ಜಲಾನಯನದ ಪೂರ್ವ ಭಾಗದಲ್ಲಿ ೧೭೦೦ ಮಿ.ಮೀ. ಜೂನ್ ನಿಂದ ಸಪ್ಟೆಂಬರ್ ವರೆಗೆ ಶೇಕಡ ೯೫ರಷ್ಟು ಮಳೆಯಾಗುತ್ತದೆ.

ತಾಪಮಾನ

ಬದಲಾಯಿಸಿ

ಎಪ್ರಿಲ್ ತಿಂಗಳಲ್ಲಿ ಸಾಮಾನ್ಯವಾಗಿ ಗರಿಷ್ಠ ತಾಪಮಾನ 35.8oC ಮತ್ತು ಸರಾಸರಿ ದೈನಂದಿನ ತಾಪಮಾನ 22.2oC ರಷ್ಟು ಹೊಂದಿರುತ್ತದೆ.

ಸಸ್ಯಗಳು ಮತ್ತು ಪ್ರಾಣಿಗಳು

ಬದಲಾಯಿಸಿ

ಶರಾವತಿ ನದಿ ಜಲಾನಯ ಪ್ರದೇಶವು ಜೀವವೈವಿಧ್ಯತೆಯಿಂದ ಕೂಡಿದೆ. ಜಲಾನಯನ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬುಫೊನಿಡೆ,ಇಚ್ಥಿಯೊಫಿಡೆ, ಮೈಕ್ರೋಹೈಲಿಡೆ, ರಾಣಿಡೆ ಮತ್ತು ರಾಕೊಫೊರಿಡೆ ಕುಟುಂಬಗಳಿಗೆ ಸೇರಿದ ೨೩ ಉಭಯಚರಗಳನ್ನು ದಾಖಲಿಸಲಾಗಿದೆ.[]

ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ

ಹೊನ್ನೇಮರಡು ಲಿಂಗನಮಕ್ಕಿ ಅಣೆಕಟ್ಟಿನಿಂದ ರೂಪಿತಗೊಂಡ ಜಲಾಶಯದ ದ್ವೀಪವಾಗಿದೆ. ಇದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿದೆ.[] ಈ ಸ್ಥಳವು ಜಲ ಕ್ರೀಡೆಗಳಿಗೆ ಉತ್ತಮವಾಗಿದೆ ಮತ್ತು ಇದೊಂದು ಆಕರ್ಷೀಣಿಯ ಸ್ಥಳವಾಗಿದೆ. ಕ್ಯಾನೋಯಿಂಗ್, ಕಯಾಕಿಂಗ್, ವಿಂಡ್ ಸರ್ಫಿಂಗ್ ಇಲ್ಲಿನ ಕೆಲವು ಜಲ ಕ್ರೀಡೆಗಳು.

೨ ಸಾವಿರ ಮೆ.ವಾ. ವಿದ್ಯುತ್ತ್ ಶರಾವತಿ ಕಣಿವೆ ಯೋಜನೆ

ಬದಲಾಯಿಸಿ
  • ಮುನ್ನೂರು ಅಡಿಗೂ ಮಿಕ್ಕಿ ಆಳಕ್ಕೆ ನೆಲ ಕೊರೆದು ನಿರ್ಮಿಸಲಿರುವ ಈ ಬೃಹತ್ ವಿದ್ಯುತ್ ಸ್ಥಾವರ; ಎರಡು ಸಾವಿರ ಮೆ.ವಾ. ವಿದ್ಯುತ್ತಿಗಾಗಿ, ಸುಮಾರು ಆರು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಕೆಪಿಸಿಯು ಈ ಯೋಜನೆ ಕೈಗೆತ್ತಿಕೊಳ್ಳುತ್ತಿದೆ. ಸಾವಿರಾರು ಎಕರೆ ದಟ್ಟ ಕಾಡನ್ನು ಕಡಿದು, ಕಣಿವೆಯನ್ನೇ ಕೊರೆದು ಮಾಡುವ ಕಾಮಗಾರಿ. ಗೇರುಸೊಪ್ಪೆ ಜಲಾಶಯದಿಂದ ತಲಕಳಲೆಯವರೆಗೆ ಭೂಗತ ಕೊಳವೆಮಾರ್ಗದಲ್ಲಿ ನೀರನ್ನು ಅಪಾರ ವಿದ್ಯುತ್‍ನಿಂದ ಮೇಲೆತ್ತಿ ತರಬೇಕು. ಈ ಹಣವನ್ನು ಈಗಿರುವ ಸ್ಥಾವರಗಳ ಆಧುನೀಕರಣಕ್ಕೆ, ಸಾಗಣೆ ಮಾರ್ಗಗಳ ಕ್ಷಮತೆ ಹೆಚ್ಚಿಸಲು ವ್ಯಯಿಸಿದರೆ, ಅದಕ್ಕೂ ಹೆಚ್ಚಿನ ವಿದ್ಯುತ್ ಉಳಿಸಬಹುದೆಂದು ಶಕ್ತಿತಜ್ಞರು ಅಭಿಪ್ರಾಯಪಡುತ್ತಿದ್ದಾರೆ.[]

ವಿಶಿಷ್ಟ ಯೋಜನೆ:

ಬದಲಾಯಿಸಿ
  • ಏಷ್ಯಾದ ಮೊಟ್ಟ ಮೊದಲ ಭೂ ಗರ್ಭ ವಿದ್ಯುದಾಗಾರವನ್ನು ಉಡುಪಿ ಜಿಲ್ಲೆ ಹೊಸಂಗಡಿ ಬಳಿ ನಿರ್ಮಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಮಾಣಿಯಲ್ಲಿ ವರಾಹಿ ಜಲಾಶಯ ನಿರ್ಮಿಸಲಾಗಿದೆ. ಆದರೆ, ಶರಾವತಿ ಪಂಪ್ಡ್ ಸ್ಟೋರೇಜ್‌ ಯೋಜನೆಯು ವಿಶಿಷ್ಟವಾಗಿದ್ದು ಭಾರತದಲ್ಲಿ ಅತಿದೊಡ್ಡದು. ತಲಕಳಲೆ ಮತ್ತು ಗೇರುಸೊಪ್ಪ ಜಲಾಶಯಗಳ ನಡುವೆ ಭೂಮಿ ಆಳದಲ್ಲಿ ಸುರಂಗ ಕೊರೆದು ವಿದ್ಯುದಾಗಾರ ನಿರ್ಮಿಸಲಾಗುತ್ತದೆ. ಅದಕ್ಕಾಗಿ ತಲಾ 250 ಮೆಗಾವ್ಯಾಟ್‌ ಸಾಮರ್ಥ್ಯದ 8 ಘಟಕಗಳನ್ನು ಸ್ಥಾಪಿಸಲಾಗುತ್ತದೆ.
  • ಈ ವಿದ್ಯುದಾಗಾರದಲ್ಲಿವಿದ್ಯುತ್‌ಗೆ ಅತಿಬೇಡಿಕೆ ಬರುವ ಹೊತ್ತಿನಲ್ಲಿಅಂದರೆ ದಿನ 6ಗಂಟೆ ಮಾತ್ರ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ತಲಕಳಲೆ ಜಲಾಶಯವು ಎತ್ತರದಲ್ಲಿದ್ದು ಸುರಂಗ ಮಾರ್ಗದ ಮೂಲಕ ಟರ್ಬೈನ್‌ಗಳಿಗೆ ಹರಿಸಿ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಅದಾದ ಬಳಿಕ ನೀರು ಸುರಂಗ ಮಾರ್ಗದ ಮೂಲಕವೇ ಗೇರುಸೊಪ್ಪ ಜಲಾಶಯ ತಲುಪುತ್ತದೆ. ಮತ್ತೆ ಅದೇ ಟರ್ಬೈನ್‌ಗಳನ್ನು ಪಂಪ್‌ಸೆಟ್‌ನಂತೆ ಬಳಸಿ ಗೇರುಸೊಪ್ಪದಿಂದ 500 ಮೀ. ಎತ್ತರದ ತಲಕಳಲೆಗೆ ಹರಿಸುತ್ತದೆ. ಅಂದರೆ ನೀರು ವ್ಯರ್ಥ ಮಾಡದಂತೆ ಮರುಬಳಕೆ ಮಾಡುತ್ತಲೇ ಇರುತ್ತದೆ. ವ್ಯಾಪ್‌ಕೋಸ್‌ ಲಿಮಿಟೆಡ್‌ ಸಂಸ್ಥೆ ಫೀಸಿಬಿಲಿಟಿ ವರದಿ ತಯಾರಿಸಿದ್ದು ಅದರ ಆಧಾರದ ಮೇಲೆ ಡಿಪಿಆರ್‌ ಸಿದ್ಧಪಡಿಸಲು ಸೂಚಿಸಲಾಗಿದೆ.
  • 800 ಎಕರೆ ಅರಣ್ಯ ನಾಶ: ಯೋಜನೆಗೆ 378 ಎಕರೆ ಅರಣ್ಯ ಭೂಮಿ ಸಾಕು ಎಂದು ಅಂದಾಜಿಸಲಾಗಿದೆ. ಆದರೆ, 15 ಕಿ.ಮೀ. ಉದ್ದದ 10 ಮೀ. ಅಗಲದ 6 ಟನೆಲ್‌ಗಳ ನಿರ್ಮಾಣಕ್ಕೆ 140 ಎಕರೆ, ಪವರ್‌ಹೌಸ್‌ಗೆ ಸುಮಾರು 60 ಎಕರೆ, ಅಲ್ಲಿಗೆ ತಲುಪಲು 20 ಕಿ. ಮೀ. ರಸ್ತೆಗಾಗಿ 110 ಎಕರೆ, 60 ಕಿ.ಮೀ. ಉದ್ದದ ಬೃಹತ್‌ ತಂತಿ ಮಾರ್ಗಕ್ಕೆ 490 ಎಕರೆ ಅರಣ್ಯ ನಾಶವಾಗಲಿದೆ ಎಂದು ಹೇಳಲಾಗುತ್ತಿದೆ.[][]

ಹೆಚ್ಚಿನ ಮಾಹಿತಿ

ಬದಲಾಯಿಸಿ

.ಶರಾವತಿ ಪಾಲಿಗೆ ಮರಣ ಮೃದಂಗವಾಗಲಿದೆಯೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ?


ಉಲ್ಲೇಖಗಳು

ಬದಲಾಯಿಸಿ
  1. "Ambutheertha (Ambuthirtha), Shimoga". www.karnatakaholidays.com. Archived from the original on 10 ಜನವರಿ 2020. Retrieved 10 January 2020.
  2. "ಕುಂಚಿಕಲ್ ಜಲಪಾತ, Agumbe". kannada.nativeplanet.com. Retrieved 10 January 2020. {{cite news}}: Cite has empty unknown parameter: |1= (help)
  3. "ಬರ್ಕಣ ಜಲಪಾತ, Agumbe". kannada.nativeplanet.com. Retrieved 10 January 2020. {{cite news}}: Cite has empty unknown parameter: |1= (help)
  4. "List of Tourist Attractions | Tourist Places To Visit in Jog falls". kannada.nativeplanet.com. Retrieved 10 January 2020. {{cite news}}: Cite has empty unknown parameter: |1= (help)
  5. "ಶರಾವತಿ ಕಣಿವೆ ವನ್ಯಜೀವಿಧಾಮ, Shimoga". kannada.nativeplanet.com. Retrieved 10 January 2020. {{cite news}}: Cite has empty unknown parameter: |1= (help)
  6. "ಹೊನ್ನಿನಂತಹ ಆಕರ್ಷಣೆಗಳುಳ್ಳ ಹೊನ್ನೇಮರಡು!". 20 January 2017. Retrieved 10 January 2020. {{cite news}}: Cite has empty unknown parameters: |1= and |2= (help)
  7. ಸಹ್ಯಾದ್ರಿಯ ಕೊನೆಯ ಕೂಗು!ಕೇಶವ ಎಚ್. ಕೊರ್ಸೆ Updated: 05 ಜೂನ್ 2020,
  8. ಶರಾವತಿ ಕಣಿವೆ ಭೂ ಗರ್ಭ ಯೋಜನೆ
  9. "ಭೂಗತ ವಿದ್ಯುತ್ ಯೋಜನೆ". Archived from the original on 2020-06-05. Retrieved 2020-06-05.
"https://kn.wikipedia.org/w/index.php?title=ಶರಾವತಿ&oldid=1252739" ಇಂದ ಪಡೆಯಲ್ಪಟ್ಟಿದೆ