ವೇಣುಗೋಪಾಲ್ ಚಂದ್ರಶೇಖರ್

ವೇಣುಗೋಪಾಲ್ ಚಂದ್ರಶೇಖರ್ (೧೯೫೭/೧೯೫೮ - ೧೨ ಮೇ ೨೦೨೧[]) ಭಾರತೀಯ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್ ಮತ್ತು ಅರ್ಜುನ ಪ್ರಶಸ್ತಿ ವಿಜೇತರಾಗಿದ್ದರು.[]

ವೇಣುಗೋಪಾಲ್ ಚಂದ್ರಶೇಖರ್
ಜನನ
ರಾಷ್ಟ್ರೀಯತೆಭಾರತೀಯ
ಸಂಗಾತಿಮಾಲ
ಮಕ್ಕಳುಸಂಜಯ್
ಪ್ರಶಸ್ತಿಗಳುಅರ್ಜುನ ಪ್ರಶಸ್ತಿ, ೧೯೮೧ ವರ್ಷದ ಕ್ರೀಡಾಪಟು ಪ್ರಶಸ್ತಿ, ಜೀವಮಾನದ ಸಾಧನೆ ಪ್ರಶಸ್ತಿ

ವೇಣುಗೋಪಾಲ್ ಚಂದ್ರಶೇಖರವರು ಮಾಜಿ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಚಾಂಪಿಯನ್ ಮತ್ತು ೧೯೮೨ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದರು. ಇವರ ಹುಟ್ಟೂರು ತಮಿಳುನಾಡು. ಅವರ ತಂದೆ ವಿದ್ಯುತ್ ಇಂಜಿನಿಯರಾಗಿ ಭಾರತೀಯ ರೈಲ್ವೇಯಲ್ಲಿ ಸೇವೆ ಸಲ್ಲಿಸಿದ್ದರು. ಅವರ ತಂದೆ ವರ್ಗಾವಣೆ ಮಾಡಬಹುದಾದ ಕೆಲಸದಲ್ಲಿ ಇದ್ದ ಕಾರಣ ಚಂದ್ರಶೇಖರವರು ತಮ್ಮ ತಂದೆ ತಾಯಿಯರಿಂದ ದೂರವಿರಬೇಕಾಗಿತ್ತು. ಹಾಗಾಗಿ ಅವರು ತಮ್ಮ ಅಜ್ಜನ ಮನೆಯಲ್ಲಿ ಬೆಳೆದರು. ಅವರು ತಮ್ಮ ಬಾಲ್ಯದಿಂದ ಕ್ರಿಕೆಟರ್ ಆಗಬೇಕೆಂದು ಬಯಸಿದವರು. ಆದರೆ, ಬಾಲ್ಯದಲ್ಲಿ ಆದ ತಲೆ ಗಾಯದ ಕಾರಣದಿಂದಾಗಿ ಟೇಬಲ್ ಟೆನ್ನಿಸನ್ನು ಆಡಲು ಪ್ರಾರಂಭಿಸಿದರು.

ರಾಷ್ಟ್ರೀಯ ಚಾಂಪಿಯನ್

ಬದಲಾಯಿಸಿ
 
ಟೇಬಲ್ ಟೆನ್ನಿಸ್

ಚಂದ್ರಶೇಖರವರು ಟೇಬಲ್ ಟೆನ್ನಿಸನ್ನು ಮುಂದುವರಿಸಬೇಕೆಂದು ನಿರ್ಧರಿಸಿದರು ಮತ್ತು ತರಬೇತಿಯನ್ನು ಜಪಾನ್ನಲ್ಲಿ ಪಡೆದರು. ಇವರು ಹನ್ನೆರಡನೇ ವಯಸ್ಸಿನಲ್ಲಿ ಮದ್ರಾಸ್ ಪೋರ್ಟ್ ಟ್ರಸ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದರು. ರಾಷ್ಟ್ರೀಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಇವರು ನಂತರ ರಾಷ್ಟ್ರೀಯ ಚಾಂಪಿಯನ್ಶಿಪ್ ಗೆದ್ದುರು.

  • ೧೯೭೦: ರಾಜ್ಯ ಸಬ್ ಜೂನಿಯರ್ ಚಾಂಪಿಯನ್, ತಮಿಳುನಾಡು
  • ೧೯೭೩: ರಾಜ್ಯ ಜೂನಿಯರ್ ಚಾಂಪಿಯನ್, ತಮಿಳುನಾಡು *ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್, ಟೇಬಲ್ ಟೆನಿಸ್
  • ಕಂಚಿನ ಪದಕ: ಏಷ್ಯನ್ ಗೇಮ್ಸ್
  • ಯು.ಎಸ್. ಚಾಂಪಿಯನ್ಶಿಪ್ - ರನ್ನರ್ಸ್ ಅಪ್
  • ೧೯೮೨: ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಸೆಮಿಫೈನಲ್ ಪ್ರವೇಶಿಸಿದರು
  • ೧೯೮೨: ಅರ್ಜುನ ಪ್ರಶಸ್ತಿ ಜೊತೆಗೆ ಜೀವಮಾನ ಸಾಧನೆ ಪ್ರಶಸ್ತಿ.[]

ದುರಂತ: ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ

ಬದಲಾಯಿಸಿ

ಸೆಪ್ಟೆಂಬರ್ ೧೯೮೪ ರಲ್ಲಿ ತಮ್ಮ ೨೫ನೇ ವಯಸ್ಸಿನಲ್ಲಿ, ರಾಷ್ಟ್ರೀಯ ಚಾಂಪಿಯನ್ ಮತ್ತು ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ನಲ್ಲಿ ತಮ್ಮ ಗುರುತು ಮಾಡಿಕೊಂಡಿರುವ ಚಂದ್ರಶೇಖರಿಗೆ ಮೊಣಕಾಲು ನೋವುಂಟಾಗಿದ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿತ್ತು. ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ ಆತನ ಮೊಣಕಾಲಿನ ಶಸ್ತ್ರಚಿಕಿತ್ಸೆ ನಡೆಯಿತ್ತು.[] ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರಿಗೆ ಅನೆಸ್ಟಿಸಿಯಾವನ್ನು ತಪ್ಪಾದ ಪ್ರಮಾಣದಲ್ಲಿ ನೀಡಿದ ಕಾರಣ ಮೆದುಳಿನ ಹಾನಿ ಅನುಭವಿಸಬೇಕಾಗಿತ್ತು ಮತ್ತು ಅವರು ತಮ್ಮ ದೃಷ್ಟಿಯನ್ನು ಕಳೆದುಕೊಂಡರು ಹಾಗೂ ತಮ್ಮ ಕಾಲುಗಳ ನಿಯಂತ್ರಣವನ್ನು ಕೂಡ ಕಳೆದುಕೊಂಡರು. ಆಸ್ಪತ್ರೆಯ ನಿರ್ಲಕ್ಷ್ಯದ ಕಾರಣದಿಂದಾಗಿ ಅವರು ೩೬ ದಿನಗಳನ್ನು ಕೋಮಾ ಸ್ಥಿತಿಯಲ್ಲಿ ಕಳೆದರು ಮತ್ತು ಪುನರ್ವಸತಿ ಭಾಗವಾಗಿ ಎಂಭತ್ತೊಂದು ದಿನಗಳನ್ನು ಆಸ್ಪತ್ರೆಯಲ್ಲಿ ಕಳೆದರು.

ಚೇತರಿಕೆ

ಬದಲಾಯಿಸಿ

ಸಾರ್ವಜನಿಕರ ಸದಸ್ಯರು, ಭಾರತ ಮತ್ತು ವಿದೇಶದಿಂದ ಕ್ರೀಡಾಪಟುಗಳು, ರಾಜಕಾರಣಿಗಳು ಮತ್ತು ನಟರು ಉದಾರವಾಗಿ ಅವರಿಗೆ ಸಹಾಯ ಮಾಡಿದರು. ವಿದೇಶದಲ್ಲಿ ನಡೆದ ಅವರ ಚಿಕಿತ್ಸೆಯು ಸ್ವಲ್ಪಮಟ್ಟಿಗೆ ಅವರನ್ನು ಸುಧಾರಿಸಿತು. ಚಂದ್ರಶೇಖರವರು ಆಸ್ಪತ್ರೆಯ ನಿರ್ಲಕ್ಷ್ಯಕ್ಕಾಗಿ ೧೯೮೫ ರಲ್ಲಿ ಮೊಕದ್ದಮೆ ಹೂಡಿದರು ಮತ್ತು ಸುಮಾರು ಇಪ್ಪತ್ತು ಲಕ್ಷವನ್ನು ಗಳಿಸಿದರು.[] ವಿಚಾರಣೆಯ ವರ್ಷಗಳಲ್ಲಿ ಚಂದ್ರಶೇಖರವರು ಭಾರತ ಮತ್ತು ವಿದೇಶಗಳಲ್ಲಿ ತನ್ನ ಚಿಕಿತ್ಸೆಯನ್ನು ಮುಂದುವರೆಸಿದರು ಮತ್ತು ಸ್ವತಃ ಬೆಂಬಲಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕೆಲಸ ಮಾಡಿದರು. ಚಂದ್ರಶೇಖರವರು ದೈಹಿಕವಾಗಿ ಉತ್ತಮ ಚೇತರಿಕೆ ಮಾಡಿದ್ದಾರೆ. ಅವರಿಗೆ ತಮ್ಮ ದೃಷ್ಟಿ ೭೦% ರವರೆಗೆ ಹಿಂತಿರುಗಿವೆ ಆದರೆ ಕಂಪ್ಯೂಟರ್ ಅಲ್ಲಿ ಸಣ್ಣ ಅಕ್ಷರಗಳು ಓದುವುದು ಮತ್ತು ರಾತ್ರಿ ಚಾಲನೆ ಮಾಡುವುದು ಸಮಸ್ಯೆ ಆಯಿತ್ತು.

ಚಂದ್ರಶೇಖರ್ ಅವರು ಭಾರತದ ಕ್ರೀಡಾ ವೃತ್ತಿಪರರಲ್ಲಿ ಒಬ್ಬರಾಗಿದ್ದರು ಮತ್ತು ಆಟಗಾರರ ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದರು. ಅವರು "ದಿ ಟೆಲಿಗ್ರಾಫ್" ಗಾಗಿ ಟೇಬಲ್ ಟೆನ್ನಿಸ್, "ಟಾಪ್‌ಸ್ಪಿನ್" ಎಂಬ ಅಂಕಣವನ್ನು ಬರೆದರು ಮತ್ತು ಅವರ ಕಾರ್ಯಾಚರಣೆಯ ನಂತರ ಪತ್ರಿಕೆಗಳಿಗೆ ಪಂದ್ಯಾವಳಿಗಳನ್ನು ಸಹ ಬರೆದರು.

ಕುಟುಂಬ

ಬದಲಾಯಿಸಿ

ಚಂದ್ರಶೇಖರವರ ಪತ್ನಿಯ ಹೆಸರು ಮಾಲ. ಮಾಲ ಸ್ಟೇಟ್ ಬ್ಯಾಂಕ್ನಲ್ಲಿ ಚಂದ್ರಶೇಖರವರ ಸ್ನೇಹಿತನ ಸಹೋದ್ಯೋಗಿಯಾಗಿದ್ದವರು. ಚಂದ್ರಶೇಖರವರ ಸ್ನೇಹಿತ ಅವರಿಗೆ ಮದುವೆ ಪ್ರಸ್ತಾಪವನ್ನು ರೂಪಿಸಿದಾಗ, ಇಬ್ಬರು ಆಲೋಚಿಸಿ, ಭೇಟಿಯಾಗಿದ ನಂತರ ೧೯೯೮ ರಲ್ಲಿ ಸುಖವಾಗಿ ಮದುವೆಯಾದರು. ಇವರ ಮಗ ಸಂಜಯ್.

ಪ್ರಶಸ್ತಿಗಳು

ಬದಲಾಯಿಸಿ

೧೯೮೧ ರಲ್ಲಿ ತಮಿಳುನಾಡಿನ ಸರ್ಕಾರವು ಚಂದ್ರಶೇಖರವರಿಗೆ 'ವರ್ಷದ ಕ್ರೀಡಾಪಟು ಪ್ರಶಸ್ತಿ'ಯನ್ನು ನೀಡಿತು. ೧೯೮೨ ರಲ್ಲಿ 'ಅರ್ಜುನ ಪ್ರಶಸ್ತಿ'ಯನ್ನು ಪಡೆದರು. ಹಾಗೂ ೧೯೯೯ ರಲ್ಲಿ 'ಜೀವಮಾನದ ಸಾಧನೆ ಪ್ರಶಸ್ತಿ'ಯನ್ನು ಗೆದ್ದರು.

ಜೀವನದ ಕನಸು

ಬದಲಾಯಿಸಿ

" ಭಾರತ ಮತ್ತು ವಿಶ್ವ ಮಟ್ಟದ ಟೇಬಲ್ ಟೆನ್ನಿಸ್ ನಡುವಿನ ಅಂತರವನ್ನು ಸರಿದೂಗಿಸಲು ಕ್ರೀಡಾ ಸಂಕೀರ್ಣವನ್ನು ನಾನು ಬಯಸುತ್ತೇನೆ ಮತ್ತು ಇದು ಎಲ್ಲರಿಗಿಂತಲೂ ಆರಂಭಿಕರಿಗಾಗಿ ಮುಕ್ತವಾಗಿರಬೇಕು ಎಂದು ನಾನು ಬಯಸುತ್ತೇನೆ. " ಎಂದು ಚಂದ್ರಶೇಖರವರು ಹೇಳುತ್ತಾರೆ. ಈ ಅನ್ವೇಷಣೆಯ ಸಹಾಯಕ್ಕಾಗಿ ತಮಿಳುನಾಡಿನ ಸರಕಾರವು ಸೌಲಭ್ಯವನ್ನು ನಿರ್ಮಿಸಲು ಭೂಮಿಯನ್ನು ನೀಡಿತು ಮತ್ತು ಇದಕ್ಕಾಗಿ ಚಂದ್ರಶೇಖರವರು ನಿಧಿಯನ್ನು ಸಂಗ್ರಹಿಸುತ್ತಾರೆ. ಇದರಿಂದ ಅವರು ಆಗಸ್ಟ್ ೨೦೧೪ ರಲ್ಲಿ ಪ್ರಧಾನ ಮಂತ್ರಿಯವರನ್ನು ಭೇಟಿಯಾಗಲು ಕಾರಣವಾಯಿತು. ಮೋದಿಯವರು ಚಂದ್ರಶೇಖರ ಯೋಜನೆಯನ್ನು ಪೂರೈಸಲು ಸಹಾಯ ಮಾಡುವುದಾಗಿ ಖಾತ್ರಿಪಡಿಸಿದರು. ಅವರು ಟೇಬಲ್ ಟೆನ್ನಿಸ್ ಫೆಡರೇಶನ್ ಆಫ್ ಇಂಡಿಯಾ (ಟಿ ಟಿ ಎಫ್ಐ) ಕಡೆಯಿಂದಲು ಕೂಡ ಸಹಾಯ ಬರಬೇಕೆಂದು ಬಯಸುತ್ತಿದ್ದಾರೆ. "ನನ್ನ ಕನಸು ನನಸಾಗುವಲ್ಲಿ ನನಗೆ ಸಹಾಯವಾಗುವ ಎಲ್ಲ ಸಹಾಯ ಬೇಕು" ಎಂದು ಹೇಳುತ್ತಾರೆ.

ಆತ್ಮಚರಿತ್ರೆ

ಬದಲಾಯಿಸಿ

ಚಂದ್ರಶೇಖರ್ ಅವರು ೨೦೦೬ ರಲ್ಲಿ ಚೆನ್ನೈನ ಈಸ್ಟ್‌ವೆಸ್ಟ್ ಬುಕ್ಸ್‌ನಿಂದ ಪ್ರಕಟವಾದ ಮೈ ಫೈಟ್‌ಬ್ಯಾಕ್ ಫ್ರಂ ಡೆತ್ಸ್ ಡೋರ್ ಎಂಬ ಆತ್ಮಚರಿತ್ರೆಯನ್ನು ಸೀತಾ ಶ್ರೀಕಾಂತ್ ಅವರ ಸಹಾಯದಿಂದ ಬರೆದರು.[]

ಚಂದ್ರಶೇಖರ್ ಅವರು ೧೨ ಮೇ ೨೦೨೧ ರಂದು ಕೋವಿಡ್-೧೯ ಭಾರತದಲ್ಲಿನ ಸಾಂಕ್ರಾಮಿಕ ರೋಗದ ಮಧ್ಯೆ ನಿಧನರಾದರು. ಆಗ ಅವರಿಗೆ ೬೩ ವರ್ಷ.

ಉಲ್ಲೇಖಗಳು

ಬದಲಾಯಿಸಿ
  1. Indian table tennis legend Venugopal Chandrasekhar passes away
  2. "Arjuna winning former TT player V Chandrasekhar dies due to COVID complications". The Economic Times. 12 May 2021. Retrieved 13 May 2021.
  3. Wadehra, Randeep (3 December 2006). "Facing Life like a Champ". The Sunday Tribune. Retrieved 21 September 2012.
  4. Aurora, Bhavna Vij (3 July 2006). "Anatomy of a Coverup". Outlook India. Retrieved 21 September 2012.
  5. Raj, Manish (7 Oct 2014). "Gaps in law leave patients open to med neglect - Chennai News". The Times of India. Retrieved 5 Mar 2023.
  6. Chandrashekhar, V. "My fightback from Death's door". East West Books, Chennai. Archived from the original on 6 ಅಕ್ಟೋಬರ್ 2016. Retrieved 21 September 2012.

ಬಾಹ್ಯ ಕೊಂಡಿಗಳು

ಬದಲಾಯಿಸಿ