ವೀರಕಪುತ್ರ ಎಂ.ಶ್ರೀನಿವಾಸ

ವೀರಕಪುತ್ರ ಎಂ ಶ್ರೀನಿವಾಸ / ವೀರಕಪುತ್ರ ಶ್ರೀನಿವಾಸ ( 8 ಜೂನ್ 1982 -) ಎಂಬ ಹೆಸರಿನಿಂದ ಜನಪ್ರಿಯವಾಗಿರುವ ವೀರಕಪುತ್ರ ಮುನಿವೆಂಕಟಪ್ಪ ಶ್ರೀನಿವಾಸ  ಅವರು ಕರ್ನಾಟಕದ ಒಬ್ಬ ಪುಸ್ತಕೋದ್ಯಮಿ, ಪ್ರಕಾಶಕ, ಸಾಮಾಜಿಕ ಕಾರ್ಯಕರ್ತ, ಫಸ್ಟ್ ಫೋರ್ಸ್ ಕಟ್ಟಡ ಸುರಕ್ಷಣಾ ಸೇವಾ ಸಂಸ್ಥೆ ಮಾಲೀಕ ಮತ್ತು ಕನ್ನಡ ಚಲಚಿತ್ರರಂಗದಲ್ಲಿ ನಟ ಡಾ ವಿಷ್ಣುವರ್ಧನ್ ಅಭಿಮಾನಿಗಳ ಡಾ. ವಿಷ್ಣು ಸೇನಾ ಸಮಿತಿ[೧]ಯ ರಾಜ್ಯಾಧ್ಯಕ್ಷರು. ಅವರು ವೀರಲೋಕ ಬುಕ್ಸ್ ಎಂಬ ಪುಸ್ತಕ ಪ್ರಕಾಶಕ ಸಂಸ್ಥೆ, ಕನ್ನಡ ಮಾಣಿಕ್ಯ ಪತ್ರಿಕೆ ಮತ್ತು ಬುಕ್ಸ್ ಬರ್ಗರ್ ಕಾಫಿ (ಬಿಬಿಸಿ) [೩] [೪] ಮಳಿಗೆಯನ್ನು ಆರಂಭಿಸಿ ಅದರ ವ್ಯವಸ್ಥಾಪಕ ನಿರ್ದೇಶಕರಾಗಿ ನಡೆಸುತ್ತಿದ್ದಾರೆ.

ವೀರಕಪುತ್ರ ಎಂ. ಶ್ರೀನಿವಾಸ
ವೀರಕಪುತ್ರ ಎಂ. ಶ್ರೀನಿವಾಸ
ಜನನ(೧೯೮೨-೦೬-೦೮)೮ ಜೂನ್ ೧೯೮೨
ವೀರಕಪುತ್ರ, ಕೋಲಾರ ಜಿಲ್ಲೆ, ಕರ್ನಾಟಕ, ಭಾರತ
ಕಾವ್ಯನಾಮವೀರಕಪುತ್ರ ಎಂ. ಶ್ರೀನಿವಾಸ
ವೃತ್ತಿಪುಸ್ತಕೋದ್ಯಮಿ, ಚಲನಚಿತ್ರ ಅಭಿಮಾನಿ, ಸಮಾಜ ಸೇವಕ ಮತ್ತು ಉದ್ಯಮಿ
ರಾಷ್ಟ್ರೀಯತೆಭಾರತ
ವಿಷಯಕನ್ನಡ

ಪ್ರಭಾವಗಳು

ಜನನ, ಜೀವನ ಬದಲಾಯಿಸಿ

  • ಶ್ರೀನಿವಾಸ ಅವರು ವೀರಕಪುತ್ರ ಗ್ರಾಮ , ಮಾಲೂರು ತಾಲೂಕು [೨], ಕೋಲಾರ ಜಿಲ್ಲೆಯಲ್ಲಿ 8 ಜೂನ್ 1982 ರಂದು ಜನಿಸಿದರು. ಇವರ ತಂದೆ ಮುನಿವೆಂಕಟಪ್ಪನವರು ಮತ್ತು ತಾಯಿ ನಾರಾಯಣಮ್ಮನವರು.
  • ಇವರು ಕೆ.ಜಿ.ಎಫ್ ನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾಪದವಿ ಪಡೆದರು.

[೩]ವೃತ್ತಿ ಮತ್ತು ಸಮಾಜ ಸೇವೆ ಬದಲಾಯಿಸಿ

  • ಇವರು ಬೆಂಗಳೂರಿನಲ್ಲಿ ಫಸ್ಟ್ ಫೋರ್ಸ್ ಎಂಬ ಕಟ್ಟಡ ಸುರಕ್ಷಣಾ ದಳದ ಸೇವಾ ಸಂಸ್ಥೆಯನ್ನು 2005 ರಲ್ಲಿ ಆರಂಭಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇದರಲ್ಲಿ 200ಕೂ ಹೆಚ್ಚು ಸಿಬ್ಬಂದಿ ಸೇವೆಯಲ್ಲಿದ್ದಾರೆ.
  • ಚಲನಚಿತ್ರ ನಟ ಡಾ.ವಿಷ್ಣುವರ್ಧನ್ ಅವರ ಅಭಿಮಾನಿಯಾದ ಇವರು ಅವರ ಹೆಸರಿನ ಡಾ.ವಿಷ್ಣು ಸೇನಾ ಸಮಿತಿ ಎಂಬ ಅಭಿಮಾನಿ ಸಂಘವನ್ನು ರಾಜ್ಯದ್ಯಾಂತ ಕಟ್ಟಿ ಅದರ ರಾಜ್ಯಾದ್ಯಕ್ಷರಾಗಿ ಹಲವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ [೪][೫]
  • ಕಾಲೇಜಿನ ವಿದ್ಯಾರ್ಥಿಯಾದ ಸಮಯದಿಂದಲೂ ಕನ್ನಡ ಸಾಹಿತ್ಯದ ಒಲವು ಇದ್ದುದರಿಂದ ಶ್ರೀಯುತರು ತಮ್ಮದೇ ಆದ ಪುಸ್ತಕ ಪ್ರಕಾಶಕ ಸಂಸ್ಥೆ -ವೀರಲೋಕ ಬುಕ್ಸ್[೬] ಮತ್ತು ಅದರ ವಿಶೇಷ ಮಳಿಗೆ ಬುಕ್ಸ್ ಬರ್ಗರ್ ಕಾಫಿ [೫](ಬಿಬಿಸಿ) ತೆರೆದು ಆ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ.
  • ರಾಜ್ಯದಾದ್ಯಂತ ಹಸಿರಿನ ಉಳಿವಿಗಾಗಿ ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ ಅಭಿಯಾನದ ನೇತೃತ್ವವನ್ನು ವಹಿಸಿದ್ದಾರೆ.. ಇದುವರೆಗೆ ನೇರ ರಕ್ತದಾನದ ಮೂಲಕ ಸುಮಾರು ೪೫೬ ಜನರಿಗೆ ರಕ್ತದಾನಿಗಳನ್ನು ಡಾ. ವಿಷ್ಣು ಸೇನಾನಿಗಳ ಮೂಲಕ ಒದಗಿಸಿಕೊಟ್ಟಿದ್ದಾರೆ. ಏಳಕ್ಕೂ ಹೆಚ್ಚು ಕನ್ನಡ ಶಾಲೆಗಳನ್ನು ಆಧುನಿಕರಣಗೊಳಿಸಿದ್ದಾರೆ. ಡಾ.ವಿಷ್ಣುವರ್ಧನ್ ಅವರ ವಿಶೇಷ ಅಂಚೆ ಲಕೋಟೆಯನ್ನು ಹೊರತರಲು ಶ್ರಮಿಸಿದ್ದಾರೆ. ಒರಿಸ್ಸಾ ದ ಪುರಿ ಸಮುದ್ರ ತೀರದಲ್ಲಿ ಡಾ.ವಿಷ್ಣುವರ್ಧನ್‌ ಅವರ ಮರಳು ಶಿಲ್ಪ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.
  • ದೆಹಲಿಯಲ್ಲಿ ಡಾ.ವಿಷ್ಣುವರ್ಧನ್ (ನಟ) ರಾಷ್ಟ್ರೀಯ ಉತ್ಸವ ಆಯೋಜಿಸಿ ದಾಖಲೆ ಬರೆದಿದ್ದಾರೆ. ಇದುವರೆಗೆ ೫೪ ಡಾ.ವಿಷ್ಣುವರ್ಧನ್‌ ಅವರ ಪ್ರತಿಮೆಗಳನ್ನು ಕೊಡುಗೆಯಾಗಿ ನೀಡಿ ದಾಖಲೆಯಾಗಿಸಿದ್ದಾರೆ. ಇವರು ಆಯೋಜಿಸಿದ ಕಟೌಟ್‌ ಜಾತ್ರೆ ಎಂಬ ಕಾರ್ಯಕ್ರಮವು ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
  • ಮೈಸೂರಿನಿಂದ ಬೆಂಗಳೂರಿನ ತನಕ ೧೮೦ ಕಿಮಿಗಳ ಸ್ವಾಸ್ಥ್ಯ ಸಮಾಜಕ್ಕಾಗಿ ಪಾದಯಾತ್ರೆ ಮಾಡಿದ್ದಾರೆ. ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣಕ್ಕೆ ಒತ್ತಾಯಿಸಿ ೧೪ ದಿನಗಳ ಅನಿರ್ಧಿಷ್ಠಾವಧಿ ಧರಣಿ ಮಾಡಿ, ಸರ್ಕಾರವನ್ನು ತಾವಿದ್ದ ಜಾಗಕ್ಕೆ ಕರೆಸಿಕೊಂಡಿದ್ದಾರೆ.
  • ಡಾ.ವಿಷ್ಣುವರ್ಧನ್‌ ಅವರ ಬದುಕು, ಸಾಧನೆ ಕುರಿತಾದ ಕರುನಾಡ ಯಜಮಾನ ಎಂಬ ಪುಸ್ತಕದ ಹತ್ತುಸಾವಿರ ಪ್ರತಿಗಳನ್ನು ಶಾಲಾ ಮಕ್ಕಳಿಗೆ ಓದಲು ಒದಗಿಸಿದ್ದಾರೆ. ಕನ್ನಡಪರ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಹತ್ತು ವರ್ಷದಿಂದ ಹದಿನೈದು ಮಕ್ಕಳ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತಿದ್ದಾರೆ. ಕೋಟಿಗೊಬ್ಬ ಎಂಬ ಕ್ಯಾಲೆಂಡರ್‌ ಅನ್ನು ರೂಪಿಸಿ ಅದು ಪ್ರತಿವರ್ಷ ಇಪ್ಪತ್ತು ಸಾವಿರ ಮನೆಗಳಿಗೆ ತಲುಪಿಸವಲ್ಲಿ ಯಶಸ್ವಿಯಾಗಿದ್ದಾರೆ.
  • ಕನ್ನಡಪ್ರಭ ದಿನಪತ್ರಿಕೆ+ಏಷ್ಯಾನೆಟ್ -ಸುವರ್ಣ ನ್ಯೂಸ್ ಆಯೋಜಿಸಿದ ಅಕ್ಟೋಬರ್ 13, 2023ರ ಸಮಾರಂಭದಲ್ಲಿ ಇವರಿಗೆ "ಅಸಾಮಾನ್ಯ ಕನ್ನಡಿಗ" ಪುರಸ್ಕಾರ ಪ್ರದಾನ ಮಾಡಲಾಗಿದೆ. [೭][೮][೯]
  • ಡಾ, ಶರಣ ಹುಲ್ಲೂರ ಅವರ ಜೊತೆಗೂಡಿ ಡಾ.ವಿಷ್ಣುವರ್ಧನ್‌ ರ ವೃತ್ತಿ ಜೀವನದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ "ಮೇರುನಟ" ಎಂಬ ಪುಸ್ತಕವನ್ನುಹೊರತಂದಿದ್ದಾರೆ.
  • ತಮ್ಮ ಗ್ರಾಮ ವೀರಕಪುತ್ರ ಕ್ಕೆ ಹದಿನೈದು ಸೋಲಾರ್ ದೀಪಗಳನ್ನು ಸೇವಾರ್ಥವಾಗಿ ಸ್ವತಃ ಅಳವಡಿಸಿಕೊಟ್ಟಿದ್ದಾರೆ[೧೦]
  • ವಿಜಯ ಕರ್ನಾಟಕ ಸಹಯೋಗದಲ್ಲಿ ವಿಕ- ವೀರಲೋಕ ದೀಪಾವಳಿ ಕಥಾಸ್ಪರ್ಧೆ 2023 ನಡೆಸಿ ಜನವರಿ 21ರಂದು ಒಂದು ಸಾರ್ವಜನಿಕ ಸಮಾರಂಭದಲ್ಲಿ ವಿಜೇತರನ್ನು ಸತ್ಕರಿಸಿ ಬಹುಮಾನ ವಿತರಿಸಲಾಯಿತು.[೬][೧೧]
  • ವೀರಲೋಕ ಬುಕ್ಸ್ ಆಶ್ರಯದಲ್ಲಿ ಬೆಂಗಳೂರಿನಲ್ಲಿ ನೂರಾರು ಕನ್ನಡ ಪುಸ್ತಕ ಪ್ರಕಾಶಕರ ಸಂಗಮದಂತೆ ಪುಸ್ತಕ ಸಂತೆ ಎಂದು ನಗರದ ಹೆಚ್ ಎಸ್ ಆರ್ ಲೇ ಔಟಿನ ಸ್ವಾಭಿಮಾನ ಉದ್ಯಾನವನದಲ್ಲಿ ಫ಼ೆಬ್ರವರಿ 10-11 ರಂದು ಅಭೂತಪೂರ್ವವಾಗಿ ಏರ್ಪಡಿಸಲಾಯಿತು[೧೨]
  • "ಉತ್ತರ ಪರ್ವ" ಎಂಬ ಮಹತ್ತರ ಕನ್ನಡ ಸಾಹಿತ್ಯ ಕೃತಿಗಳ ಯೋಜನೆಯೊಂದನ್ನು ವೀರಲೋಕ ಬುಕ್ಸ್ ವತಿಯಿಂದ ಹಮ್ಮಿಕೊಂಡಿದ್ದು ಇದಕ್ಕೆ ಭಾಗವಹಿಸಲು ನಾಡಿನ ನೂರಾರು ಉತ್ತಮ ದರ್ಜೆಯ ಕೃತಿಗಳು ಬಂದಿದ್ದು, ಸಾಹಿತಿಗಳಾದ ರಾಜಶೇಖರ ಮಠಪತಿ ಮತ್ತು ವೀರಕಪುತ್ರ ಶ್ರೀನಿವಾಸ ತಂಡದವರು ಆಯ್ಕೆ ಪ್ರಕ್ರಿಯೆ ಸಂಪೂರ್ಣಗೊಳಿಸಿದ್ದು ಪ್ರಕಟಿಸಲು ಯೋಗ್ಯವಾದ ಟಾಪ್ 10 ಕೃತಿಗಳನ್ನು ಈಗ ಹೆಸರಿಸಿದ್ದಾರೆ. ಅದರಲ್ಲಿ ರವೀಂದ್ರ ಮುದ್ದಿ ವಿರಚಿತ ‘ವರದಾ ತೀರದ ಕಥೆಗಳು’ ಸಹ ಪಟ್ಟಿಯಲ್ಲಿದೆ ಎಂದು ಟಿ ವಿ 9 ಕನ್ನಡ ವರದಿ ಮಾಡಿದೆ. ಆಗಸ್ಟ್ ತಿಂಗಳಲ್ಲಿ ಉತ್ತರ ಕರ್ನಾಟಕದ ಸಾಹಿತ್ಯ ಸುಗ್ಗಿಯಲ್ಲಿ ನಾಡಿನ ಶ್ರೇಷ್ಠ ಗಣ್ಯರ ಸಮ್ಮುಖದಲ್ಲಿ ಉತ್ತರ ಪರ್ವದಲ್ಲಿ ಆಯ್ಕೆಗೊಂಡ 10 ಕೃತಿಗಳನ್ನು ವೀರಲೋಕ ಪ್ರಕಟಿಸಲಿದ್ದಾರೆ.

ಉಲ್ಲೇಖಗಳು[೧೩] ಬದಲಾಯಿಸಿ

[೭]

  1. "Dr. Vishnu Sena Samiti Archives".
  2. ಮಾಲೂರು#ಮಾಲೂರು ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳು
  3. https://vijaykarnataka.com/lavalavk/weekly-magazine/literary/vijaya-karnataka-veeraloka-deepavali-2023-story-contest-top-25-story-writers-names-final/articleshow/104596233.cms
  4. "ಕೊರೋನಾ ಸಂಕಷ್ಟ: ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೊಂದು ಬಹಿರಂಗ ಪತ್ರ".
  5. "ಕೊರೋನಾ ಸಂಕಷ್ಟ: ಸ್ಯಾಂಡಲ್‌ವುಡ್ ಸ್ಟಾರ್ ನಟರಿಗೊಂದು ಬಹಿರಂಗ ಪತ್ರ".
  6. [೧]
  7. "Kannada Prabha ePaper: Read e-newspaper in Kannada by Kannada Prabha BENGALURU:20231014".
  8. "Kannada Prabha ePaper: Read e-newspaper in Kannada by Kannada Prabha".
  9. "Kannada Prabha ePaper: Read e-newspaper in Kannada by Kannada Prabha".
  10. [೨]
  11. https://vijaykarnataka.com/news/vk-special/vijaya-karnataka-veeraloka-deepawali-story-competition-2023-prize-distribution/articleshow/107234187.cms
  12. https://www.prajavani.net/district/bengaluru-city/pustaka-sante-2676701
  13. ""ಉತ್ತರ ಪರ್ವ'ದಲ್ಲಿ ಟಿವಿ9 ರವೀಂದ್ರ ಮುದ್ದಿ ಪುಸ್ತಕ ಟಾಪ್-10ಗೆ ಆಯ್ಕೆ"". TV 9 Kannada. tv9kannada.com. Apr 18, 2024.

ಬಾಹ್ಯ ಕೊಂಡಿಗಳು ಬದಲಾಯಿಸಿ