ವಿಷಯುಕ್ತ ಹಸಿರು ಸಸ್ಯದ ಜಾತಿ

Poison ivy
Ground-level poison ivy, Ottawa, Ontario
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
T. radicans

Binomial name
Toxicodendron radicans
Synonyms
  • Rhus toxicodendron
  • Rhus radicans

ಇದು ಟಾಕ್ಷಿಕೊಡೆಂಡ್ರಾನ್ ಅಂದರೆ ಸಸ್ಯಶಾಸ್ತ್ರದಲ್ಲಿ ಇದನ್ನು ವಿಷಕಾರಿ ಹರಿದ್ವರ್ಣ ಸಸ್ಯ ಜಾತಿಗೆ ಸೇರಿದ ಪೊದೆಯುಳ್ಳ ಕಂಟಿ ಎನ್ನಲಾಗುತ್ತದೆ.ರುಸ್ ಟಾಕ್ಷಿಕೊಡೆಂಡ್ರಾನ್ ,[] ರುಸ್ ರಾಡಿಕನ್ಸ್ ಇದು ಅತ್ಯಂತ ವಿಷಯುಕ್ತ ಬಳ್ಳಿಯ ಜಾತಿಯಾಗಿದೆ.ಅನಾಕರ್ಡಿ ಅಕೇಶಿಯಾ ಎಂಬ ಸಸ್ಯ ವರ್ಗಕ್ಕೆ ಇದು ಸೇರಿದ್ದು ಎಂದೂ ಹೇಳಲಾಗುತ್ತದೆ. ಇದು ಪೊದೆಯುಳ್ಳ ಬಳ್ಳಿ ಒಂದು ವಿಚಿತ್ರ ಮತ್ತು ಹಾನಿಕಾರಕ ರಸ ಸೃವಿಸುವ ಸಾಮರ್ಥ್ಯ ಹೊಂದಿದೆ.ಇದರ ತಗಲುವಿಕೆಯು ಮನುಷ್ಯಚರ್ಮದ ಮೇಲೆ ತುರಿಕೆ ಅಥವಾ ನವೆಯುಂಟಾಗಿ ಅಲ್ಲಿಚರ್ಮಕ್ಕೆ ಬಿರುಕು ಉಂಟಾಗುವ ಸಾಧ್ಯತೆ ಇದೆ.ತಂತ್ರಜ್ಞಾನದ ಪ್ರಕಾರ ಇದು ಯುರಿಶಿಯಲ್ ಸಂಪರ್ಕದಿಂದಾಗಿ ಮನುಷ್ಯನ ಚರ್ಮದ ಮೇಲ್ಪದರದ ಮೇಲೆ ಪರಿಣಾಮ ಬೀರುತ್ತದೆ.ಆದರೆ ಇದು ನಿಜವಾದ ಹಸಿರುಜಾತಿ ಹೆಡೆರಾ ಸಸ್ಯವಲ್ಲ.

ಇದರ ಬೆಳೆಯುವ ತಾಣ ಮತ್ತು ಬೆಳೆವ ಮಟ್ಟ

ಬದಲಾಯಿಸಿ

ವಿಷಯುಕ್ತ ಹಸಿರು ಸಸ್ಯವು ಉತ್ತರ ಅಮೆರಿಕದಾದ್ಯಂತ,ಕೆನೆಡಿಯನ್ ಮೇರಿಟೈಮ್ ಪ್ರಾಂತ್ಯಗಳಾದ ಕ್ವುಬೆಕ್ ಮತ್ತು ಒಂಟಾರಿಯೊ,ಅಲ್ಲದೇ U.S.ನ ಎಲ್ಲಾ ರಾಜ್ಯಗಳು ಪೂರ್ವದ ಬಂಡೆಗಳು ಅಂದರೆ ಉತ್ತರ ಡಕೊಟಾ ಬಿಟ್ಟರೆ ಮತ್ತೆ ಮೆಕ್ಷಿಕೊ ಸುತ್ತಮುತ್ತ(1,500 m (4,900 ft)ಕ್ಯಾಕ್ವಿಸ್ಟಲೆ ಅಥವಾ ಕ್ಯಾಕ್ಷಿಸ್ಟಲ್ ನಹಾಯುತ್ ಪದ ನೋಡಿ),ಇದು ಸಾಮಾನ್ಯವಾಗಿ ಅರಣ್ಯ ಪ್ರದೇಶದ ಅಂಚಿನ ಭಾಗದಲ್ಲಿ ಬೆಳೆಯುತ್ತದೆ. ಇದು ಬಯಲು ತೆರೆದ ಬಂಡೆ ಪ್ರದೇಶಗಳು ಮತ್ತು ಬಯಲು ವಿಶಾಲ ಜಾಗೆ ಮತ್ತು ಫಲವತ್ತಾಗಿರದ ಜಮೀನಿನಲ್ಲಿ ಕಾಣಬರುತ್ತದೆ. ಇದನ್ನು ಅರಣ್ಯದ ಸಸ್ಯವೆಂದೂ ಬೆಳೆಸಲಾಗುತ್ತದೆ.ಮರಗಳ ನೆರಳಲ್ಲೂ ಇದು ಬೆಳೆಯುವ ಸಾಮರ್ಥ್ಯ [] ಪಡೆದಿದೆ. ಹೊಸ ಇಂಗ್ಲೆಂಡಿನ ಉಪಪ್ರಾಂತ್ಯ ಮತ್ತು ಸಾಮಾನ್ಯ ಭೂ ಪ್ರದೇಶ ಮಧ್ಯ ಅಟ್ಲಾಂಟಿಕ್ ಮತ್ತು ಯುನೈಟೆಡ್ ಸ್ಟೇಟ್ಸ್ ನ ವಾಯುವ್ಯ ಭಾಗಗಳಲ್ಲಿ ಯಥೇಚ್ಛವಾಗಿ ಬೆಳೆಯುತ್ತದೆ. ಇದೇ ತೆರನಾದ ಸಸ್ಯಜಾತಿಗಳು ವಿಷಯುಕ್ತ-ಯೋಕ್ ಮತ್ತು ಟಾಕ್ಷಿಕೊಡೆಂಡ್ರಾನ್ ರಿಡ್ ಬೆರ್ಗಿಲ್ ಸಸ್ಯ ಜಾತಿಯ ಬಳ್ಳಿಗಳು ಉತ್ತರ ಅಮೆರಿಕಾದ ಪಶ್ಚಿಮ ಭಾಗದಲ್ಲಿ ಕಂಡುಬರುತ್ತವೆ. ವಿಷಯುಕ್ತ ಹಸಿರು ಸಸ್ಯವು ಅಕ್ಷಾಂಶಗಳ 1,500 m (4,900 ft)ಮೇಲ್ಭಾಗದಲ್ಲಿ ಬೆಳೆಯುತ್ತದೆ,ಅಕ್ಷಾಂಶ ಮತ್ತು ರೇಖಾಂಶಗಳ ಎತ್ತರ ಪ್ರಮಾಣವು ಆಯಾ ಸ್ಥಳೀಯತೆಯನ್ನು ಆಧರಿಸಿ ವ್ಯತ್ಯಾಸ [] ಹೊಂದುತ್ತಿರುತ್ತದೆ. ಈ ಸಸ್ಯವು ಒಂದು ಪೊದೆ ಅಥವಾ ಕಂಟಿ ಬೇಲಿಯಷ್ಟು 1.2 metres (3.9 feet)ಎತ್ತರಕ್ಕೆ ಬೆಳೆದು ಹಬ್ಬಬಲ್ಲದು,ಇದರ ಬೆಳವಣಿಗೆಯಿಂದ ಕೆಳಭಾಗದ ಪ್ರದೇಶ ಕೂಡಾ ಕಾಣದಷ್ಟು ಇದು 10–25 cm (3.9–9.8 in)ಅಕ್ಕ ಪಕ್ಕದ ಆಸರೆಯೊಂದಿಗೆ ಪಸರಿಸುತ್ತದೆ. ಇದರ ಹಳೆಯ ಬಳ್ಳಿಯ ಕವಲುಗಳು ಹೇಗೆ ಹರಡಿಕೊಂಡಿರುತ್ತವೆ ಎಂದರೆ ಇದು ಸುತ್ತಿಕೊಂಡ ಮರವೇ ಇದಾಗಿದೆ ಎಂದು ಭಾಸವಾಗುತ್ತದೆ.

ಇದು ಮಣ್ಣಿನ ಆರ್ದ್ರತೆಗೆ ಅಷ್ಟಾಗಿ ಪ್ರತಿಕ್ರಿಯಿಸುದಿಲ್ಲವಾದರೂ ಇದು ಮರಭೂಮಿ ಅಥವಾ ಒಣ ಭೂಪ್ರದೇಶದಲ್ಲಿ ಹವಾಮಾನ ಪರಿಸ್ಥಿತಿಯಲ್ಲಿ ಬೆಳೆಯಲಾರದು. ಇದು ವಿಶಾಲ ಮತ್ತು ವಿಭಿನ್ನ ಜಾತಿಯ ಮಣ್ಣಿನ ಪ್ರದೇಶದಲ್ಲಿ ಬೆಳೆಯುತ್ತದೆ.ಮಣ್ಣುpH 6.0ಯಿಂದ (ಆಮ್ಲಿಕ) 7.9(ಸಾಮಾನ್ಯ ಅಲ್ಕಲೈನ್ ) ಆಗಾಗ ಪ್ರವಾಹಕ್ಕೀಡಾಗುವ ಪ್ರದೇಶ ಮತ್ತುಹಿನ್ನೀರಿನ ಜವಳು ಪ್ರದೇಶದಲ್ಲಿಯೂ ಇದು [] ಬೆಳೆಯುತ್ತದೆ.

.ಯುರೊಪಿಯನ್ ರು ಉತ್ತರ ಅಮೆರಿಕಾದಲ್ಲಿ ಮೊದಲು ಪ್ರವೇಶ ಮಾಡಿದಾಗಿನ ಅವಧಿಗಿಂತ ಇದು ಈಗ ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳು ಯೋಜನಾ ಪ್ರದೇಶಕ್ಕೆ ಹೊಂದಿಕೊಂಡ ಜಾಗ,ಅಲ್ಲದೇ ಅಭಿವೃದ್ಧಿ ಕಾಣದ ಪ್ರದೇಶಗಳು ಇದರ ಬೆಳೆಯಿಂದ "ಅಪಾಯದ ಪರಿಣಾಮಗಳ ಅಂಚಿಗೆ" ಹೋಗಬಹುದು. ಯಾಕೆಂದರೆ ಈ ವಿಷಯುಕ್ತ ಹಸಿರು ಸಸ್ಯ ವಿಶಾಲವಾಗಿ ಬೆಳೆದು ಹಸಿರು ಪೊದೆಯನ್ನೇ ನಿರ್ಮಿಸುತ್ತವೆ. ಇದು U.Sನ ಮಿನ್ನೊಸ್ಟಾ ಮತ್ತು ಮಿಚಿಗೆನ್ ಮತ್ತು ಒಂಟಾರಿಯೊದ ಕೆನಡಿಯನ್ ಪ್ರದೇಶಗಳಲ್ಲಿ ಇದನ್ನು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವ ಅಪಾಯಕಾರಿ ಕಸದ ಹುಲ್ಲು ಎನ್ನಲಾಗುತ್ತದೆ.

ವಿಷಯುಕ್ತ ಹಸಿರು ಸಸ್ಯ ಮತ್ತು ಅದಕ್ಕೆ ಸಮಾನ ಸಸ್ಯಗಳು ಯುರೋಪಿನಲ್ಲಿ ಅಪರಿಚಿತವಾಗಿಯೇ ಉಳಿದುಕೊಂಡಿವೆ. U.S ಮತ್ತು ಕೆನಡಾದಲ್ಲಿರುವ ಹಲವಾರು ಯುರೋಪಿಯನ್ ರು ಇಂತಹ ಆರೋಗ್ಯಕ್ಕೆ ಹಾನಿಕಾರಕ ಸಸ್ಯವೊಂದು ನಮ್ಮ ಭೂಖಂಡದಲ್ಲಿ ಇಷ್ಟೊಂದು ಸಾಮಾನ್ಯವಾಗಿ ಬೆಳೆಯುತ್ತದಯೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಚಿತ್ರಣ

ಬದಲಾಯಿಸಿ
 
ವಿಷಯುಕ್ತ ಹಸಿರು ಸಸ್ಯದ ಬಳ್ಳಿಯ ಸಾಮಾನ್ಯ ಕೆಂಪು "ಕೂದಲು"(ಎಲೆಗಳಂತೆ ಬಳ್ಳಿಗಳಂತೂ ಮಾನವರಿಗೆ ಅತ್ಯಂತ ಅಪಾಯಕಾರಿ)

ಇದರ ಉದುರುವ ಎಲೆಗಳು ವಿಷಯುಕ್ತ ಹಸಿರು ಬಾದಾಮಿ ಆಕಾರದ ಮೂರು ಎಲೆಗಳನ್ನು ಪಡೆದಿದ್ದು ಇದು ಮೂರು ಅಂಚುಗಳಲ್ಲಿ ಬೆಳೆದು ತನ್ನ ಎಲೆ ಭಾಗಗಳನ್ನು [] ಚಾಚಿಕೊಂಡಿರುತ್ತದೆ. ಎಲೆಗಳ ಬಣ್ಣವು ಸಾಮಾನ್ಯವಾಗಿ ತಿಳಿ ಹಸಿರು(ಸಾಮಾನ್ಯವಾಗಿ ಎಳೆ ಎಲೆಗಳು) ವರ್ಣದಿಂದ ಕಪ್ಪು ಹಸಿರು(ಮಾಗಿದ ಎಲೆಗಳು),ಉದುರುವ ಹೊತ್ತಿಗೆ ಅವು ಕಡುಕಪ್ಪು ಬಣ್ಣದ್ದಾಗಿರುತ್ತವೆ;ಇನ್ನು ಕೆಲವು ಮೂಲಗಳ ಪ್ರಕಾರ ಎಲೆಗಳು ದೊಡ್ದದಾಗುವಾಗ ಕೆಂಪು,ಮಾಗುವ ಅವಧಿಯಲ್ಲಿ ಹಸಿರು ಮತ್ತೆ ಮರಳಿ ಕೆಂಪು ಮತ್ತು ಕಿತ್ತಳೆ ಅಥವಾ ಹಳದಿಯಾಗಿ ಬಿದ್ದು ಹೋಗುತ್ತವೆ. ಮಾಗಿದ ಎಲೆಗಳು ಕೊಂಚ ಮಿಂಚಿನ ಹೊಳಪನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಎಲೆಗಳು 3 ರಿಂದ 12 ಸೆಂಟಿ ಮೀಟರ್ ಉದ್ದ,ಅಪರೂಪವೆನ್ನುವಂತೆ 30 ಸೆಂಟಿಮೀಟರ್ ವರೆಗೂ ಉದ್ದವಾಗಿರುತ್ತವೆ. ಪ್ರತಿಯೊಂದು ಬಿಡಿ ಎಲೆ ಅಥವಾ ಚಿಗುರೆಲೆ ತನ್ನ ಅಂಚಿನಲ್ಲಿ ಒಂದೆರೆಡು ಹಲ್ಲಿನಂತಹ ಎಳೆ ಹೊಂದಿರುತ್ತದೆ,ಆದರೆ ಅದರ ಮೇಲ್ಭಾಗ ಮೆದುವಾಗಿರುತ್ತದೆ. ಬಿಡಿ ಎಲೆಗಳ ಸೂಡು ಅಥವಾ ಗುಂಪು ಪೊದೆ ಮೇಲೆ ಪರ್ಯಾಯವಾಗಿ ಪಸರಿಸಿರುತ್ತದೆ,ಆದರೆ ಇಲ್ಲಿ ಮುಳ್ಳು ಇರುವುದಿಲ್ಲ. ಮರದ ಕೊಂಬೆ ಮೇಲೆ ಬೆಳೆಯುವ ಬಳ್ಳಿಯು ತನ್ನ ಬೇರುಗಳನ್ನು ಬಿಗಿಯಾಗಿ ಚಾಚುವ ಮೂಲಕ ಸುತ್ತಮುತ್ತಲೂ [] ಹಬ್ಬಿರುತ್ತದೆ. ಈ ಬಳ್ಳಿಯು ಬೆಳವಣಿಗೆಗೆ ಅನುಕೂಲಕರವಾಗಿ ಬೇರುಗಳನ್ನು ಬಿಡುತ್ತದೆ,ಅಥವಾ ಈ ಸಸ್ಯವುಕಾಂಡದ ಬೇರುಗಳ ಮೂಲಕ ಕೆಳಗಿನಿಂದ ಬೇರುಗಳ ಕವಚವನ್ನು ಬೆಳೆಸುತ್ತದೆ. ಈ ಹಸಿರು ಸಸ್ಯದ ಹಾಲಿನಂತಹ ಗಟ್ಟಿ ವಿಷವು ಗಾಳಿಗೆ ತೆರೆದುಕೊಂಡ ನಂತರ ಕಪ್ಪು ಬಣ್ಣಕ್ಕೆ ತಿರುಗಿಕೊಳ್ಳುತ್ತದೆ.

ವಿಷಯುಕ್ತ ಹಸಿರು ಸಸ್ಯವು ಸಸ್ಯಜಾತಿಯಾಗಿ ಮತ್ತು ತನ್ನ ಸಂತತಿ ವೃದ್ಧಿಸಲು ನಿರಂತರವಾಗಿ ಹಬ್ಬುತ್ತಿರುತ್ತದೆ. ವಿಷಯುಕ್ತ ಹಸಿರು ಸಸ್ಯವು ವಿಭಿನ್ನ ಲಿಂಗಿಯಾಗಿದ್ದು,ಮೇ ತಿಂಗಳಿಂದ ಜುಲೈ ವರೆಗೆ ಹೂ ಬಿಡುವುದು ಮತ್ತು ಪರಾಗಸ್ಪರ್ಶಕ್ಕೆ ಅಣಿಯಾಗುತ್ತದೆ. ಹಳದಿ-ಅಥವಾ ಹಸಿರು ಮಿಶ್ರಿತ ಬಿಳಿ ಬಣ್ಣದಹೂವುಗಳು ಕಾಂತಿಹೀನವಾಗಿರುತ್ತವೆ.ಎಲೆಗಳ ಸೂಡಿನ ಮೇಲ್ಭಾಗದಲ್ಲಿ ಸುಮಾರು ಎಂಟು ಸೆಂಟಿಮೀಟರ್ ನಷ್ಟು ಮೇಲೆ ಚಾಚಿರುತ್ತವೆ. ಬೆರ್ರಿ ಹಣ್ಣಿನಂತಹ ಒಂದು ಗೊರಟೆ ಕಾಯಿ ಅಥವಾ ಓಟೆಯು ಆಗಷ್ಟ್ ನಿಂದ ನವೆಂಬರ್ ಹೊತ್ತಿಗೆ ನೇರಳೆ-ತಿಳಿ ಬಿಳುಪಿನ [] ಹಣ್ಣಾಗುತ್ತದೆ. ಇದರ ಹಣ್ಣುಗಳು ಚಳಿಗಾಲದಲ್ಲಿ ಹಲ್ವು ಪಕ್ಷಿ ಪ್ರಾಣಿಗಳ ನೆಚ್ಚಿನ ಆಹಾರವೆನಿಸಿವೆ. ಇದರ ಬೀಜಗಳು ಬಹುತೇಕವಾಗಿ ಪ್ರಾಣಿಗಳಿಂದ ಪಸರಿಸುತ್ತವೆ.ಪ್ರಾಣಿಗಳ ಜೀರ್ಣಕ್ರಿಯೆಯ ನಂತರ ಇವು ವಿವಿಧ ಜಾಗೆಗಳಲ್ಲಿ ಬೆಳೆಯಲು ಅನುಕೂಲವಾಗುತ್ತವೆ.

ಇವುಗಳ ಪತ್ತೆಗೆ ಸುಲಭ ಅಂಶಗಳು

ಬದಲಾಯಿಸಿ

ಈ ಕೆಳಗಿನ ಮೂರು ಗುಣಲಕ್ಷಣಗಳ ಮೂಲಕ ಈ ವಿಷಯುಕ್ತ ಹಸಿರು ಸಸ್ಯವನ್ನು ಗುರ್ತಿಸಬಹುದಾಗಿದೆ: ಮೂರು ಎಲೆಗಳ ಸೂಡು,ಪರ್ಯಾಯ ಎಲೆಗಳ ವ್ಯವಸ್ಠೆ ಮತ್ತು ಮುಳ್ಳುಗಳಿಲ್ಲದಿರುವುದು. ಆದಾಗ್ಯೂ ಅಸಂಖ್ಯಾತ ಇತರ ಸಸ್ಯಗಳು ಇದೇ ತೆರನಾಗಿದ್ದುದು ಕಂಡು ಬರುತ್ತವೆ,ಇಂತಹದೇ ಗುಣಗಳಿರುವ ಸಸ್ಯ ಸಂಕುಲಗಳಿಗೆ ಹೆದರಿಕೊಳ್ಳಬೇಕಾಗುತ್ತದೆ.ಇದಕ್ಕಾಗಿ ಅಪರಿಚಿತ ಸಸ್ಯಗಳನ್ನು ಗುರ್ತಿಸಿ ವಿಷಯುಕ್ತ ಹಸಿರು ಸಸ್ಯಗಳ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ. ಅನುಭವಸ್ಥ ಜನರು ಈ ಎಲೆಗಳಿಂದ ಹಾನಿಯಾಗುವುದನ್ನು ಹೇಳುತ್ತಾರೆ,ಚಳಿಗಾಲದಲ್ಲಿ ಎಲೆಗಳಿಲ್ಲದ ಈ ಸಸ್ಯವು ಬೋಳು ಬೋಳಾಗಿದ್ದರೂ ಮತ್ತೆ ಚಿಗುರಿಕೊಳ್ಳುತ್ತದೆ,ಪರಿಸರ ಮತ್ತು ಸಂತತಿ ವೃದ್ಧಿಗೆ ನೆರವಾಗುತ್ತದೆ.

ಹಲವಾರು ರಾಸಾಯನಿಕ ನಿಯಮಗಳು ವಿಶಯುಕ್ತ ಹಸಿರು ಸಸ್ಯದ ಗುಣಲಕ್ಷಣಗಳನ್ನು ಗೋಚರಿಸುವಿಕೆಯಿಂದಲೇ ಕಂಡು ಹಿಡಿದು [] ಬಿಡುತ್ತಾರೆ.

  1. "ಮೂರು ಎಲೆಗಳ ಸೂಡು,ಇದು ಹೀಗಿರಲಿ,
  2. "ಎಸಳುಗಳುಳ್ಳ ಬಳ್ಳಿ,ಯಾರೂ ನನಗೆ ಸ್ನೇಹಿತರಿಲ್ಲ.."[] ವಿಷಯುಕ್ತ ಹಸಿರು ಸಸ್ಯದ ಬಳ್ಳಿಗಳು ಬಹಳಷ್ಟು ವಿಷಕಾರಿ.
  3. "ರಗ್ಗಿ ರೋಪ್ ,ಕೀಲೆಣ್ಣೆ ಅಲ್ಲ".

!" appearance.ವಿಷಯುಕ್ತ ಹಸಿರು ಸಸ್ಯದ ಬಳ್ಳಿಗಳು ಮರದ ಮೇಲೆ ಒಂದು ತೆರನಾದ "ಮಿಂಚನ್ನು" ಹೊಂದಿರುತ್ತವೆ. ಈ ಬಳ್ಳಿಯ ಸುತ್ತುವರಿಕೆಯು ಮರ ಹತ್ತುವವರಿಗೆ ಒಂದು ಎಚ್ಕರಿಕೆಯಾಗಿರುತ್ತದೆ.

  1. "ಒಂದು, ಎರಡು, ಮೂರು? ನನ್ನನ್ನು ಮುಟ್ಟಬೇಡಿ."
  2. []"ಬಿಳಿ ಬೆರ್ರಿಗಳು ಹೆದ್ರಿಸಿದರೆ,ಬೆರ್ರಿ ಬಿಳಿ ಹಣ್ಣುಗಳು ಅಪಾಯಕಾರಿ [] ಗೋಚರಗಳಾಗಿವೆ."
  3. "ಉದ್ದನೆಯ ಮದ್ಯದ ಕಾಂಡ, ಇವುಗಳಿಂದ ದೂರವಿರಿ" ಇದೆಂದರೆ ಮಧ್ಯದ ಚಿಗುರೆಲೆಯು ಉಳಿದ ಎರಡು ಬದಿಯ ಎಲೆಗಳಿಗಿಂತ ಉದ್ದನೆಯ ಕಾಂಡವನ್ನು ಹೊಂದಿರುತ್ತದೆ.ಇದರಿಂದಾಗಿ ಇದನ್ನು ಬೇರೆ ಬಳ್ಳಿಗಳಿಂದ ಪ್ರತ್ಯೇಕಿಸಬಹುದಾಗಿದೆ.ಇದರಂತೆ ಕಾಣುವ ರುಸ್ ವಾಸನಾ ಯುಕ್ತ ವಿಷದ ಅಂಶದ ಸುವಾಸನಾ ಬಳ್ಳಿ ಗಳನ್ನು ಗುರ್ತಿಸಬಹುದು.
  4. "ವಸಂತಕಾಲದಲ್ಲಿನ ಕೆಂಪು ಚಿಗುರೆಲೆಗಳು,ಇದೊಂದು ಅಪಾಯಕಾರಿ ವಿಷಯ." ಇದರ ಕೆಂಪಾಗಿ ಕಾಣುವ ಚಿಗುರೆಲೆಗಳು ವಸಂತಕಾಲವೆಂದೂ ಪರಿಗಣಿಸಬಹುದಾದ ಸಾಧ್ಯತೆ ತೋರುತ್ತವೆ. (ಗಮನಿಸಬೇಕಾದೆಂದರೆ, ಬೇಸಿಗೆಯಲ್ಲಿ, ಚಿಗುರೆಲೆಗಳು ಹಸಿರಾಗಿರುತ್ತವೆ , ಹೀಗಾಗಿ ಬೇರೆ ಸಸ್ಯಗಳ ಎಲೆಗಳೊಂದಿಗೆ ಹೋಲಿಕೆ ಮಾಡುವುದು ಕಠಿಣವಾಗುತ್ತದೆ.ಗ್ರೀಷ್ಮ ಋತುವಿನಲ್ಲಿ ಅವು ಕೆಂಪು-ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ.)
  5. "ಬದಿಯ ಚಿಗುರೆಲೆಗಳು ಮುಟ್ಟಿದವರಿಗೆ ನವೆಯನ್ನು ಉಂಟು ಮಾಡುತ್ತವೆ". ಇದು ಕೆಲವು ಬಳ್ಳಿಗಳಲ್ಲಿ ಈ ಲಕ್ಷಣ ಕಾಣಬರುತ್ತದೆ ಆದರೆ ಎಲ್ಲದರಲ್ಲಿಯೂ ಅಲ್ಲ.ಈ ಎಲೆಗಳ ಗುಂಪುಗಳು ಎರಡು ಬದಿಗಳಲ್ಲಿ ಒಂದು" ಹೆಬ್ಬಟ್ಟಿ"ನ ಗಾತ್ರದ ಆಕಾರದ ಕೈಗವಸಿನಂತೆ ಕಾಣುತ್ತದೆ. (ಇದರರ್ಥವೆಂದರೆ ಕೇವಲ ಬದಿಯ ಎಲೆಗಳು ಮಾತ್ರ ಚರ್ಮದ ನವೆಯನ್ನುಂಟು ಮಾಡುವುದಿಲ್ಲ ಆದರೆ ಇಡೀ ಸಸ್ಯವೇ ವಿಷಕಾರಿಯಾಗಿದ್ದು ಯಾವುದೇ ಭಾಗವೂ ಚರ್ಮಕ್ಕೆ ಹಾನಿಯನ್ನುಂಟು ಮಾದಬಲ್ಲದೆಂಬುದನ್ನು ಗಮನಿಸಬೇಕಾಗುತ್ತದೆ).
  6. "ಅಲ್ಲಿ ಏನಾದರೂ ಬಣ್ಣದ ಚಿಟ್ಟೆ ಇದೆಯೆಂದು ನೀವು ಕೈ ಇಟ್ಟರೆ ಅದು ಅಪಾಯಕಾರಿ . ಅಲ್ಲಿ ನಿಮ್ಮ ಕೈ ಚಾಚಬೇಡಿ." ಹಲವಾರು ಬಣ್ಣದ ಚಿಟ್ಟೆಗಳು ವಿಷಯುಕ್ತ ಈ ಹಸಿರು ಸಸ್ಯದ ಮೇಲೆ ಕುಳಿತುಕೊಳ್ಳುತ್ತವೆ,ಆದರೆ ಅವುಗಳಿಗೆ ಯಾವದೇ ಪರಿಣಾಮ ಉಂಟಾಗುವುದಿಲ್ಲ. ಇವುಗಳಿಗೆ ಬೇರೆ ಸಸ್ಯಗಳಿಂದಾಗುವ ಅಪಾಯದಿಂದ ರಕ್ಷಿಸಿಕೊಳ್ಳಬಹುದಾದ [] ಅವಕಾಶಗಳಿವೆ.

ದೇಹದ ಮೇಲೆ ಪರಿಣಾಮಗಳು

ಬದಲಾಯಿಸಿ

ಈ ವಿಷಯುಕ್ತ ಹಸಿರು ಸಸ್ಯವು ಉರುಶಿಯೊಲ್ -ಸಂಪರ್ಕವು ಚರ್ಮದ ಒಳಭಾಗಕ್ಕೆ ಪ್ರವೇಶಿಸಿ ಅಲರ್ಜಿ ಪ್ರತಿಕ್ರಿಯೆಯನ್ನು ಉಂಟು ಮಾಡಬಹುದು. ಸುಮಾರು 15%[] ರಿಂದ 30%[] ರಷ್ಟು ಜನರು ಯಾವುದೇ ಅಲರ್ಜಿಗೆ ಒಳಗಾಗುವದಿಲ್ಲ, ಆದರೆ ಪದೇ ಪದೇ ಈ ಸಸ್ಯದ ಎಲೆಗಳೊಂದಿಗೆ ಸಂಪರ್ಕಕ್ಕೆ ಬರುವುದರಿಂದ ಅಥವಾ ಉರುಶಿಯೊಲ್ ನೊಂದಿಗೆ ಒಡ್ದಿಕೊಂಡರೆ ಇದು ಸಂವೇದನಾ ಶೀಲತೆಗೆ ಧಕ್ಕೆ ಯನ್ನುಂಟು ಮಾದಬಹುದು. Reactions can progress to ಇದರ ಪ್ರತಿಕ್ರಿಯೆಗಳು ಅಥವಾ ಅತಿ ಸಂವೇದನೆ ಶೀಲತೆಯಿಂದ ಊತಕ್ಕೆ ಕಾರಣವಾಗಬಹುದು.

 
ರಸ್ತೆ ಬದಿಯ ವಿಷಯುಕ್ತ ಹಸಿರು ಸಸ್ಯ

ಇದರೊಳಗಿನ ಉರುಶಿಯೊಲ್ ಚರ್ಮದ ಸ6ಪರ್ಕಕ್ಕೆ ಬಂದ ನಂತರ ಅಲ್ಲಿ ತನ್ನ ಬಿಗಿಯನ್ನು ಸಾಧಿಸುತ್ತದೆ,ಇದರಿಂದಾಗಿ ನವೆಯ ವಿಪರೀತಗಳಿಂದಾಗಿ ಆ ಜಾಗೆಯಲ್ಲಿ ಕೆಂಪು ಬಣ್ಣದ ಚರ್ಮ ಉಂಟಾಗಿ ಉರಿತ ಅಥವಾ ಯಾವುದೇ ಬಣ್ಣ ಬರದಿದ್ದರೂ ಗುಳ್ಳೆ ಆಕಾರ ಪಡೆಯಬಹುದಾಗಿದೆ.ಇದು ಉಜ್ಜುವುದರಿಂದಾಗಿ ಒಂದು ಬೊಕ್ಕೆಗೆ ದಾರಿ ಮಾಡಿಕೊಡುತ್ತದೆ. ಇದನ್ನು ಕ್ಯಾಲಾಮೈನ್ ಮುಲಾಮಿನಿಂದ ಇದನ್ನು ಚಿಕಿತ್ಸೆ [] ಮಾಡಬಹುದಾಗಿದೆ.ಬುರೊಸ್ ಪರಿಹಾರಗಳು ಅಥವಾ ಸ್ನಾನ ಮಾಡುವುದರಿಂದ ಇದನ್ನು ಹೋಗಲಾಡಿಸುವ ಸಾಧ್ಯತೆ ಇದೆ.ಆದರೆ ಕೆಲವು ಸಂಪ್ರದಾಯಿಕ ಔಷಧಿಗಳು ಅಷ್ಟಾಗಿ [೧೦][೧೧] ಪರಿಣಾಮಕಾರಿಯಲ್ಲ. ಈ ವಿಷಯುಕ್ತ ಹಸಿರು ಸಸ್ಯದ ನವೆ ಮತ್ತು ದುಷ್ಪರಿಣಾಮಗಳಿಗೆ ವೈದ್ಯರು ನವೆ ನಿವಾರಣೆಗೆ ಸರಳವಾಗಿ ಅಂದರೆ ಒಟಾಮೀಲ್ ಸ್ನಾನ ಮತ್ತು ಅಡಿಗೆ ಸೋಡಾವನ್ನು ಬಳಸುವಂತೆ ಸಲಹೆ ಶಿಫಾರಸು [೧೨] ಮಾಡುತ್ತಾರೆ. ಹಲವಾರು ಗಂಭೀರ ಪ್ರಕರಣಗಳಲ್ಲಿ ಈ ಬಳ್ಳಿಯಿಂದ ಹೊರ ಭಾಗದಲ್ಲಿ ಸುರಿಯುತ್ತಿರುತ್ತದೆ.ಈ ಸಂದರ್ಭದಲ್ಲಿ ಸ್ಟಿರೊಯಿಡ್ ಅಥವಾ ಹಾರ್ಮೋನ್ ಗಳನ್ನು ಇದರ ಗುಣಮುಖ ಮಾಡಲು ಬಳಸಲಾಗುತ್ತದೆ.

 
Blisters from contact with poison ivy

ಇದರಿಂದ ಉತ್ಪತ್ತಿಯಾದ ದೃವವು ಗುಳ್ಳೆಗಳಿಗೆ ಕಾರಣವಾದರೂ ಇದು ವಿಶವನ್ನು [೧೩][೧೪][೧೫] ಪಸರಿಸುವುದಿಲ್ಲ. ಚರ್ಮದ ಮೇಲಿನ ಕೆಲವು ಸೂಕ್ಷ್ಮ ಜಾಗಗಳಲ್ಲಿ ಈ ದೃವವು ಅಂಟಿಕೊಂಡರೆ ಇದರ ವಿಷದ ತೀವ್ರತೆಯು ಅಧಿಕವಾಗಿರುತ್ತದೆ.ಬೇರೆ ಬೇರೆ ಜಾಗಗಳಲ್ಲಿ ಇದು ಅಂಟಿಕೊಂಡಿದ್ದರೂ ಮೂಲ ವಿಷಪ್ರಮಾಣದಷ್ಟು ಅಪಾಯಕಾರಿ [೧೩] ಎನಿಸದು. ಚರ್ಮದ ಗುಳ್ಳೆಗಳು ಉರಿ ಹಾಗು ಕೆಂಪಾದ ಚರ್ಮದ ರಾಶ್ ಕಾರಣವಾಗುತ್ತವೆ,ಇವುಗಳ ಮಧ್ಯ ಉಂಟಾದ ಜಾಗದಲ್ಲಿ ಸಣ್ಣಗೆ ದೃವ ಸೃವಿಸುತ್ತದೆ,ಇದು ಚರ್ಮದ ಮೂಲಕ ಸಂಪರ್ಕಕ್ಕೆ ಬರುವಾಗ ಉರಿತ ಬರುತ್ತದೆ ಇದನ್ನು ತಕ್ಷಣದಲ್ಲಿ ತಂಪುಗೊಳಿಸಿದರೆ ಇದು [ಸಾಕ್ಷ್ಯಾಧಾರ ಬೇಕಾಗಿದೆ]ಶಮನವಾಗುವುದು. ಈ ವಿಷಯುಕ್ತ ಹಸಿರು ಸಸ್ಯವನ್ನು ಸುಟ್ಟರೆ ಇದರ ಹೊಗೆಯಿಂದ ಉಂಟಾಗುವ ಮಾಲಿನ್ಯವು ಗಂಟಲೊಳಗೆ ಪ್ರವೇಶಿಸಿ ಶ್ವಾಸನಾಳದ ಮೇಲೆ ಪರಿಣಾಮ ಬೀರಬಹುದಾಗಿದೆ.ಇದರಿಂದ ಅತೀವ ನೋವು ಮತ್ತು ಗಂಭೀರ ಉಸಿರಾಟದ ತೊಂದರೆ [೧೬] ಕಾಣಿಸಿಕೊಳ್ಳಬಹುದು. ವಿಷಯುಕ್ತ ಹಸಿರು ಸಸ್ಯವನ್ನು ತಿಂದರೆ ಜೀರ್ಣಾಂಗ,ಉಸಿರಾಟದ ಮಾರ್ಗ,ಮೂತ್ರಕೋಶಗಳು ಅಥವಾ ಇನ್ನಿತರ ಅವಯವಗಳು ತೀವ್ರ [ಸಾಕ್ಷ್ಯಾಧಾರ ಬೇಕಾಗಿದೆ]ಹಾನಿಗೀಡಾಗುತ್ತವೆ. ವಿಷಯುಕ್ತ ಹಸಿರು ಸಸ್ಯದ ಚರ್ಮದ ಮೇಲಿನ ಇದರ ಪರಿಣಾಮವು ಒಂದು ವಾರದಿಂದ ನಾಲ್ಕು ವಾರಗಳ ಅವಧಿಯಲ್ಲಿ ಕಾಣಿಸಬಹುದಾಗಿದೆ.ಇದರ ಗಂಭೀರತೆಯನ್ನು ಪರಿಗಣಿಸಿ ಔಷಧೋಪಚಾರ ಮಾಡಬಹುದಾಗಿದೆ. ಕೆಲವು ಅಪರೂಪದ ಪ್ರಕರಣಗಳಲ್ಲಿ ವಿಷಯುಕ್ತ ಹಸಿರು ಸಸ್ಯದ ಪ್ರತಿಕ್ರಿಯೆಗಳು ಆಸ್ಪತ್ರೆಗೆ ದಾಖಲಿಸುವ ಪ್ರಸಂಗವೂ [೧೩][೧೭] ಬರಬಹುದು.

ಉರುಶಿಯೊಲ್ ಎಣ್ಣೆಯು ಹಲವಾರು ವರ್ಷಗಳ ಕಾಲ ಕ್ರಿಯಾತ್ಮಕವಾಗಿರುತ್ತದೆ.ಕಳಚಿದ ಎಲೆಗಳ ಅಥವಾ ಬಳ್ಳಿಯನ್ನು ಮುಟ್ಟುವುದರಿಂದ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. ಅದೂ ಅಲ್ಲದೇ ಪ್ರಾಣಿಗಳ ಮೂಲಕ ಪಸರಿಸುವ ಈ ವಿಷಯುಕ್ತ ದೃವವು ಚರ್ಮದ ಮೇಲೆ ಗೆರೆಯಂತಹ ಗುರುತುಗಳನ್ನು [೧೮][೧೯] ಮೂಡಿಸುತ್ತದೆ. ಬಟ್ಟೆ,ಸಲಕರಣೆಗಳು ಮತ್ತು ಇನ್ನಿತರ ವಸ್ತುಗಳು ಎಣ್ಣೆ ತಗಲುವುದರಿಂದ ಅಥವಾ ಅದಕ್ಕೆ ಒಡ್ದುವುದರಿಂದ ಇದು ದುಷ್ಪರಿಣಾಮ ಉಂಟು ಮಾಡುತ್ತದೆ.ಇದರ ಅವಘಡ ತಪ್ಪಿಸಲು ಮೊದಲೇ ಸ್ವಚ್ಚಗೊಳಿಸಿದರೆ ಉತ್ತಮ. ಈ ವಿಷಯುಕ್ತ ಹಸಿರು ಸಸ್ಯದ ಸಂವೇದನಾಶೀಲವು ಮಾವಿನ ಹಣ್ಣಿನಿಂದ ಉಂಟು ಮಾಡುವ ಪರಿಣಾಮವೇ ಇದರಿಂದ ಉಂಟಾಗುತ್ತದೆ. ಮಾವಿನ ಕಾಯಿಗಳು ಕೂಡಾ ಅನಕಾರ್ಡಿಎಸಿಯಾ ಜಾತಿಗೆ ಸೇರಿದ ಸಸ್ಯ ವರ್ಗವಾಗಿದೆ.ಉರೊಶಿಯೊಲ್ ನಂತಹ ರಾಸಾಯನಿಕ ಪರಿಣಾಮವನ್ನುಂಟು [೨೦] ಮಾಡುತ್ತದೆ.

ಸುಮ್ಯಾಕ್ ಸಸ್ಯದ ಸುವಾಸನಾಯುಕ್ತ ರುಸ್ ಅರೊಮ್ಯಾಟಿಕ್ ಅಥವಾ ಜಪಾನಿನ ಲ್ಯಾಕರ್ ಗಿಡದ ವಿಷಯುಕ್ತ ಹಸಿರು ಸಸ್ಯದ ಗುಣವನ್ನೇ ಹೋಲುತ್ತದೆ.ಇವುಗಳ ಸಂಪರ್ಕದಿಂದಲೂ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

ಅದೇ -ತೆರನಾಗಿ ಕಾಣುವ ಸಸ್ಯಗಳು

ಬದಲಾಯಿಸಿ
  • ವರ್ಜಿನ್ ನ ಬೌವರ್ (ಕ್ಲೆಮೆಟಿಸ್ ವರ್ಜಿನಿಯನ್ ) (ಅಲ್ಲದೇ ಪಿಶಾಚಿಯ ಸೂಜಿಯ ಮುಳ್ಳುಗಳು ಎನ್ನಲಾಗುವುದು,ಇವುಗಳನ್ನು ದೆವ್ವುಗಳ ಹೊಲಿಯುವ ಸೂಜಿಗಳು,ದೆವ್ವದ ಕೂದಲು,ಪ್ರೀತಿಯ ಬಳ್ಳಿ,ಪ್ರವಾಸಿಗರ ಸಂತಸ ) ವರ್ಜಿನ್ ನ ಬೌವರ್ ನ ವೈಲ್ಡ್ ಹಾಪ್ಸ್, ಮತ್ತು ವುಡ್ಲೆನ್; syn. ಕ್ಲೆಮಿಟಿಸ್ ವರ್ಜಿನಿಯನ್ L. var. ಮಿಸೊರಿನಿಯೊನ್ಸ್ (Rydb.) ಯುನೈಟೆಡ್ ಸ್ಟೇಟ್ಸ್ ನ ಪಾಲ್ಮರ್ ಮತ್ತು ಸ್ಟೆಯೆರ್ಮಾರ್ಕ್ ಸಸ್ಯ ಕೂಡಾ ರಾನುಕುಲಾಅಕೇಸಿಯಾವು ಈ ಜಾತಿಯಾಗಿದೆ.. ಈ ಬಳ್ಳಿಯು ಸುಮಾರು 10-20ಅಡಿಗಳ ವರೆಗೆ ಎತ್ತರ ಬೆಳೆಯುತ್ತದೆ. ಇದು ಪೊದೆಗಳ ಉದ್ದಕ್ಕೂ ತೇವಾಂಶದ ಇಳಿಜಾರು,ಬೇಲಿಯ ಸುತ್ತಲು ಗಟ್ಟಿಯಾದ ಕಾಂಡಗಳ ಮೇಲೆ ಬೆಳೆಯುತ್ತದೆ. ಇದು ಸುಮಾರು ಒಂದು ಇಂಚಿನಷ್ಟು ಉದ್ದದ ಬಿಳಿ,ಸುವಾಸಿತ ಹೂವುಗಳನ್ನುಜುಲೈ ಮತ್ತುಸೆಪ್ಟೆಂಬರ್ ನಲ್ಲಿ ಬಿಡುತ್ತದೆ.
  • ಬಾಕ್ಸರ್ --ಎಲ್ದರ್(ಏಸರ್ ನೆಗುಂಡೊ ) ಸಸ್ಯಗಳ ಎಲೆಗಳು ಸಹ ವಿಷಯುಕ್ತ ಹಸಿರು ಸಸ್ಯದ ಬಳ್ಳಿಯಂತೆ ಕಾಣುತ್ತದೆ. ಸಸ್ಯದ ಕೇಸರಗಳು ಸಹ ಇದಕ್ಕಿಂತ ಭಿನ್ನವಾಗಿವೆ. ಈ ಬಾಕ್ಸ್ ಎಲ್ಡರ್ಸ್ ಗಳು ಐದು ಅಥವಾ ಏಳು ಎಲೆಗಳನ್ನು ಹೊಂದಿರುತ್ತವೆ,ಇದರಲ್ಲಿ ಮೂರು ಎಲೆಗಳು ಸಣ್ಣವು ಅಲ್ಲದೇ ಒಂದೇ ರೂಪದ್ದಾಗಿರುತ್ತವೆ. ಇವೆರಡರ ಮಧ್ಯದ ಅಂತರವೆಂದರೆ ಇದರ ಕಾಂಡವು ಹೇಗೆ ಎಲೆಗಳಿಗೆ ಮಧ್ಯ ಇಟ್ಟಾಗ ಹೇಗೆ ಹೊಂದಾಣಿಕೆಯಾಗುತ್ತದೆ ಎಂದು ಹೇಳಬೇಕಾಗುತ್ತದೆ.(ಎಲ್ಲಿ ಮೂರು ಎಲೆಗಳು ಸೇರಿರುತ್ತದೆ) ವಿಷಯುಕ್ತ ಹಸಿರು ಸಸ್ಯವು ಪರ್ಯಾಯ ಎಲೆಗಳು ಹುಟ್ಟಿಕೊಂಡಿರುತ್ತವೆ.ಅಂದರೆ ಈ ಮೂರು ಮುಖ್ಯ ಕೊಂಬೆಯೊಂದಿಗೆ ಅಂಟಿಕೊಂಡಿರುತ್ತವೆ. ಈ ಬಾಕ್ಸ್ ಎಲ್ದರ್ ಗಿಡವು ಹೋಲುವ ಚಿಗುರೆಲೆಯ ಮೂರು ಎಲೆಗಳು ಒಂದೆಡೆಗೆ ಸೇರಿರುತ್ತವೆ.ಇನ್ನೊಂದು ಭಾಗವು ಕಾಂಡದ ಮೇಲ್ಭಾಗಕ್ಕೆ ಸೇರಿಕೊಂಡಿರುತ್ತದೆ.
  • ವರ್ಜಿನಿಯ ಕ್ರೀಪರ್ (ಪಾರ್ಥೆನೊಸಿಸೆಸ್ ಕ್ವಿಂಕಿಫೊಲಿಯಾ )ಬಳ್ಳಿಗಳು ವಿಷಯುಕ್ತ ಹಸಿರು ಸಸ್ಯದ ಬಳ್ಳಿಗಳಂತೆ ಕಾಣುತ್ತವೆ. ಚಿಗುರೆಲೆಗಳು ಮೂರು ಎಲೆಗಳನ್ನು ಹೊಂದಿದ್ದು ಎಲೆಯ ಅಂಚಿನೊಂದಿಗೆ ನುಣುಪಾಗಿದ್ದು ಮೇಲ್ಭಾಗವು ಕೊಂಚ ಮಡಿಕೆಯಾಗಿರುತ್ತದೆ. ಹೇಗೆಯಾದರೂ ಬಹುತೇಕ ವರ್ಜಿನಿಯಾ ಕ್ರೀಪರ್ ಗಳು ಐದು ಎಲೆಗಳನ್ನು ಹೊಂದಿರುತ್ತವೆ. ವರ್ಜಿನಿಯಾ ಕ್ರೀಪರ್ ಮತ್ತು ವಿಷಯುಕ್ತ ಹಸಿರು ಸಸ್ಯಗಳು ಒಟ್ಟಾಗಿಯೇ ಬೆಳೆಯುತ್ತವೆಯಲ್ಲದೇ ಒಂದೇ ಗಿಡವನ್ನು ಆಶ್ರಯಿಸಿ ಬೆಳೆಯುತ್ತವೆ, ವಿಷಯುಕ್ತ ಹಸಿರು ಸಸ್ಯಕ್ಕೆ ಅಲರ್ಜಿಕ್ ಆಗದವರು ವರ್ಜಿನಿಯಾ ಕ್ರೀಪರ್ ನಲ್ಲಿರುವ ಆಕ್ಸಾಲೇಟ್ ಕ್ರಿಸ್ಟಲ್ಸ್ ಗಳಿಂದ ಅಲರ್ಜಿ ಉಂಟಾಗಬಹುದು.
  • ಪಾಶ್ಚಿಮಾತ್ಯ ವಿಷಯುಕ್ತ -ಓಕ್ (ಟೊಕ್ಷಿಕೊಡ್ರೆಂದಡೃಮ್ ಡೈವರ್ಸಿಲೊಬಮ್ ) ನ ಎಲೆಗಳು ಸಹ ಮೂರು ಎಲೆಗಳಾಗಿ ಕಾಂಡದ ಮೇಲೆ ಬೆಳೆಯುತ್ತವೆ.ಇದು ಹಲವು ಬಾರಿ ಓಕ್ ಎಲೆಯಂತೆ ಆಕಾರ ಹೊಂದಿರುತ್ತದೆ. ಪಾಶ್ಚಿಮಾತ್ಯ ವಿಷಯುಕ್ತ-ಓಕ್ ಕೂಡಾ ಯುನೈಟೈಡ್ ಸ್ಟೇಟ್ಸ್ ಮತ್ತು ಕೆನಡಾದಲ್ಲಿ ಬೆಳೆಯುತ್ತದೆ.ಹಲವರು ವಿಷಯುಕ್ತ ಹಸಿರು ಸಸ್ಯವನ್ನು ವಿಷಯುಕ್ತ ಓಕ್ ಗಿಡಕ್ಕೆ ಹೋಲಿಕೆ ಮಾಡುತ್ತಾರೆ. ಯಾಕೆಂದರೆ ಈ ವಿಷಯುಕ್ತ ಹಸಿರು ಸಸ್ಯವು ವಿಷಯುಕ್ತ ಓಕ್ ನ ಪೊದೆಯಂತೆ ಸಮನಾಗಿ ಬೆಳೆಯುತ್ತದೆ.ಇದು ಓಕ್ -ಆಕಾರದ ಸಸ್ಯವು ಆರ್ದೃತೆ ಮತ್ತು ಪ್ರಕಾಶಾಮಾನವಾದ ವಾತಾವರಣದಲ್ಲಿ ಬೆಳೆಯುತ್ತದೆಯಲ್ಲದೇ ಇತರ ವಿಷಯುಕ್ತ ಸಸ್ಯದ ಪ್ರಕಾರವನ್ನು ಹೋಲುತ್ತದೆ. ಈ ವಿಷಕಾರಿ ಹಸಿರು ಸಸ್ಯವು ನೆರಳಿನ ಮರಗಳಿಗೆ ವಾಲಿಕೊಂಡು ಬೆಳೆಯುತ್ತದೆ.ಸ್ವಲ್ಪ ಮಟ್ಟಿಗಿನ ಸೂರ್ಯನ ಶಾಖವಿದ್ದರೂ ಸಾಕು ಹಬ್ಬಿದ ಕೊಂಬೆಗಳಿಂದ ಹಿಡಿದು ನೆಲದವರೆಗೂ ಹಬ್ಬಿಕೊಳ್ಳುತ್ತದೆ
  • ವಿಷಯುಕ್ತ ಸುಮ್ಯಾಕ್ (ಟೊಕ್ಷೊಕೊಡೆಂಡ್ರಾನ್ ವರ್ನಿಕ್ಷ್ ) ಗಳು ಒಟ್ಟು ಗುಂಪಿನ ಎಲೆಗಳನ್ನು ಅಂದರೆ 7–15 ಎಲೆಗಳು ಸಮೂಹದಲ್ಲಿರುತ್ತವೆ. ವಿಷಯುಕ್ತ ಸುಮ್ಯಾಕ್ ಎಂದೂ ಮೂರೆ ಮೂರು ಎಲೆಗಳ ಗುಚ್ಚವನ್ನು ಹ್ಯೊಂದಿರುವದಿಲ್ಲ.
  • ಕುಡುಜು (ಪೆರಿರಿಯಾ ಲೊಬಾಟಾ ) ಸಸ್ಯವು ವಿಷಕಾರಿಯಲ್ಲ,ಇದು ಉದ್ದವಾಗಿ ಹಬ್ಬಿ ಎಲ್ಲೆಡೆಗೂ ಪಸರಿಸಿ ಕಡಿಮೆ ಸಸ್ಯವರ್ಗ ಬೆಳೆಯುವಲ್ಲಿಯೂ ಗಿಡಗಳ ಮೇಲೆ ಪಸರಿಸುತ್ತದೆ. ಕುಡುಜು ದಕ್ಷಿಣ ಯುನೈಟೆಡ್ ಸ್ಟೇಟ್ಸ್ ನಲ್ಲಿ ಬೆಳೆಯುವ ದಾಳಿಕೋರ ಸಸ್ಯಗಳ ಜಾತಿಗೆ ಸೇರಿದೆ. ವಿಷಯುಕ್ತ ಹಸಿರು ಸಸ್ಯದಂತೆ ಮೂರು ಎಲೆಗಳನ್ನು ಹೊಂದಿರುತ್ತದೆ.ಇವು ವಿಷಯುಕ್ತ ಹಸಿರು ಸಸ್ಯದ ಎಲೆಗಳಿಗಿಂತ ದೊಡ್ಡವವಾಗಿರುತ್ತವೆ.ಇವು ಬೆಳೆದ ದೊಡ್ಡ ಎಲೆಗಳಲ್ಲಿ ಸಣ್ಣ ಸಣ್ಣಕೂದಲುಗಳುಳ್ಳ ಕೇಶರಗಳನ್ನು ಕೆಳಭಾಗದಲ್ಲಿ ಹೊಂದಿರುತ್ತದೆ.
  • .ಬ್ಲ್ಯಾಕ್ ಬೆರ್ರೀಸ್ ಮತ್ತು ರಾಸ್ಪ್ ಬೆರ್ರೀಸ(ರುಬಸ್ spp.)ಗಳ ಜೊತೆಗೆ ಈ ವಿಷಕಾರಿ ಹಸಿರು ಸಸ್ಯವನ್ನೇ ಹೋಲುತ್ತವೆ ಅಲ್ಲದೇ ಒಂದೇ ಪ್ರದೇಶದಲ್ಲಿ ಬೆಳೆಯುತ್ತವೆ. ಬ್ಲ್ಯಾಕ್ ಬೆರ್ರೀಸ್ ಮತ್ತು ರಾಸ್ಪ್ ಬೆರ್ರೀಸ್ ಗಳು ತಮ್ಮ ಕಾಂಡದಲ್ಲಿ ಮುಳ್ಳುಗಳನ್ನು ಹೊಂದಿದ್ದರೆ ಈ ವಿಷಯುಕ್ತ ಹಸಿರು ಸಸ್ಯದ ಕಾಂಡದ ಭಾಗವು ಮೆದುವಾಗಿರುತ್ತದೆ.ಈ ಸಸ್ಯಗಳ ಪ್ರಧಾನ ಅಂತರವೆಂದರೆ ಇವೆರಡರಲ್ಲಿ ಒರಟಾದ ಮತ್ತು ಮೆದುವಿನ ಎಲೆ ಭಾಗಗಳು. ಬ್ಲ್ಯಾಕ್ ಬೆರ್ರ್ಯೀ ಮತ್ತು ರಾಸ್ಪ್ ಬೆರ್ರೀ ಸಸ್ಯ ಬಳ್ಳಿಯ ಮೂರು ಅಲಗಿನ ಎಲೆಗಳ ಮಾದರಿ ಹೊಂದಿರುತ್ತವೆ:ದಿನಗಳೆದಂತೆ ಈ ಎಲೆಗಳು ಋತುವಿಗೆ ಅನುಗುಣವಾಗಿ ಐದು ಅಲಗಿನ ಎಲೆಗಳಾಗುವುದಲ್ಲದೇ ಅವುಗಳ ಬಣ್ಣವೂ ಬದಲಾಗುತ್ತದೆ. ಬ್ಲ್ಯಾಕ್ ಬೆರ್ರೀಸ್ ಮತ್ತು ರಾಸ್ಪ್ ಬೆರ್ರೀಸ್ ಎಲೆಗಳ ಅಂಚಿನಲ್ಲಿ ಹಲ್ಲಿನಂತಹ ಮುಳ್ಳುಗಳಾಗುತ್ತವೆ,ಇವುಗಳ ಮೇಲ್ಭಾಗದ ಎಲೆಗಳು ಮುರುಟಿದ ಆಕಾರದಲ್ಲಿರುತ್ತವೆ.ಎಲೆಗಳ ಒಳಗಿನ ಶೇರುಕಗಳು ತಿಳಿ ಹಸಿರು ಬಣ್ಣದ ಹೊಳಪನ್ನು ಹೊಂದಿರುತ್ತವೆ. ವಿಷಯುಕ್ತ ಹಸಿರು ಸಸ್ಯವು ಸಂಪೂರ್ಣ ಹಸಿರಾಗಿರುತ್ತದೆ. ವಿಷಯುಕ್ತ ಹಸಿರು ಸಸ್ಯದ ಕಾಂಡವು ಕಂದು ಬಣ್ಣದಾಗಿದ್ದುಇದು ನಾಳದ ಆಕಾರದಲ್ಲಿರುತ್ತದೆ,ಆದರೆ ಬ್ಲ್ಯಾಕ್ ಬೆರ್ರೀ ಮತ್ತು ರಾಸ್ಪ್ ಬೆರ್ರೀಸ್ ಗಳ ಕಾಂಡವು ಚೌಕಾಕಾರದಲ್ಲಿದ್ದು ಹಸಿರು ಬಣ್ಣದ್ದಾಗಿರುತ್ತದೆ.ಇದರಲ್ಲಿ ಹಲ್ಲಿನಂತಹ ಮುಳ್ಳುಗಳಿರುತ್ತವೆ. ರಾಸ್ಪ್ ಬೆರ್ರೀಸ್ ಮತ್ತು ಬ್ಲ್ಯಾಕ್ ಬೆರ್ರೀಸ್ ಗಳು ನಿಜವಾದ ಅರ್ಥದಲ್ಲಿ ಬಳ್ಳಿಗಳಲ್ಲ;ಆದ್ದರಿಂದ ಅವುಗಳು ಯಾವುದೇ ಮರವನ್ನು ಆಶ್ರಯಿಸಿ ಬೆಳೆಯುವದಿಲ್ಲ.
  • ನದಿ ತೀರದಲ್ಲಿ ಬೆಳೆಯುವ ರಿವರ್ ಬ್ಯಾಂಕ್ ಗ್ರೇಪ್ ವಿಟೀಸ್ ರಿಪಾರಿಯಾ ವು ಯಾವುದೇ ಬೇರುಗಳನ್ನು ಕಾಣಿಸಲು ಬಿಡುವದಿಲ್ಲ ಆದರೆ ವಿಷಯುಕ್ತ ಹಸಿರು ಸಸ್ಯವು ಸಣ್ಣ ಬೇರುಗಳ ಸಮೂಹವು ಕಾಂಡದೊಂದಿಗೆ ಮೇಲಕ್ಕೆ ಬೆಳೆಯುತ್ತದೆ,ಇದು ಮಿಂಚಿನಂತೆ ಕಾಣುತ್ತದೆ. ನದಿ ದಡದ ಮೇಲಿನ ದ್ರಾಕ್ಷಿ ಬಳ್ಳಿಯು ತಿಳಿ ಹಳದಿಯಾಗಿದ್ದು ಆ ಬಳ್ಳಿಯು ಆಸರೆಯ ಮರದಿಂದ ಹೊರಕ್ಕೆ ಚಾಚಿಕೊಂಡಿರುತ್ತದೆ.ಆದರೆ ಈ ವಿಷಯುಕ್ತ ಹಸಿರು ಸಸ್ಯವು ತಾನು ಬೆಳೆದ ಮರಕ್ಕೆ ಅಂಟಿಕೊಂಡೇ ಬೆಳೆಯುತ್ತದೆ.ಇದು ಆಧಾರದ ಮೇಲೆ ಅಷ್ಟಾಗಿ ಆಲಂಬಿತವಾಗಿರುವದಿಲ್ಲ.
  • ಸುವಾಸನೆಯ ಸುಮ್ಯಾಕ್ (ರುಸ್ ಅರೊಮೆಟಿಕ್ ) ಇವುಗಳು ವಿಷಯುಕ್ತ ಹಸಿರು ಸಸ್ಯದ ಬಳ್ಳಿಯನ್ನು ಹೋಲುತ್ತದೆ. ಎರಡೂ ಜಾತಿ ಸಸ್ಯಗಳು ಮೂರು ಎಲೆಗಳ ಅಂಚನ್ನು ಹೊಂದಿವೆ.ವಿಷಯುಕ್ತ ಹಸಿರು ಸಸ್ಯದ ಮಧ್ಯದ ಚಿಗುರೆಲೆಯು ನಡುವಿನ ಭಾಗದಲ್ಲಿ ಕಾಂಡ ಹೊಂದಿದ್ದರೆ ಸುಮ್ಯಾಕ್ ಎಲೆಯ ಮಧ್ಯಭಾಗದಲ್ಲಿ ಉದ್ದನೆಯ ಕಾಂಡದ ಭಾಗವನ್ನು ಹೊಂದಿರುವದಿಲ್ಲ. ಸುಮ್ಯಾಕ್ ಸಸ್ಯವು ವಸಂತಕಾಲದಲ್ಲಿ ಎಲೆಗಳಿಗಿಂತ ಮೊದಲು ಹೂವು ಬಿಟ್ಟರೆ ವಿಷಯುಕ್ತ ಹಸಿರು ಸಸ್ಯವು ಎಲೆಗಳು ಬೆಳೆದ ನಂತರ ಹೂವು ಬಿಡುತ್ತದೆ. ಸುಮ್ಯಾಕ್ ಸಸ್ಯದ ಕಾಂಡದ ತುದಿಯಲ್ಲಿ ಸುವಾಸನೆಯುಕ್ತ ಹೂವುಗಳು ಮತ್ತು ಹಣ್ಣುಗಳು,ಆದರೆ ವಿಷಯುಕ್ತ ಹಸಿರು ಸಸ್ಯದ ಮಧ್ಯಭಾಗದಲ್ಲಿ ಸಹಜವಾಗಿ ಇದು ಕಂಡು ಬರುತ್ತದೆ.

ಇವನ್ನೂ ಗಮನಿಸಿ

ಬದಲಾಯಿಸಿ

ಆಕರಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ USDA ಬೆಂಕಿ ಪರಿಣಾಮಗಳ ಮಾಹಿತಿ ನೀಡುವ ವಿಧಾನ: ಟೊಕ್ಷಿಕೊಡೆಂಡ್ರಾನ್ ರಾಡಿಕನ್ಸ್ Archived 2010-06-23 ವೇಬ್ಯಾಕ್ ಮೆಷಿನ್ ನಲ್ಲಿ.
  2. ಪೆಟ್ರಿಡಿಸ್ , ಜಾರ್ಜ್ ಎ. ಕ್ಷೇತ್ರದ ಗಿಡ ಮತ್ತು ಪೊದೆಗಳ ಕುರಿತ ಓರ್ವ ಮಾರ್ಗದರ್ಶಿ (ಪೀಟರ್ ಸನ್ ಫೀಲ್ದ್ ಗೈಡ್), ಬಾಸ್ಟನ್: ಹೊಗ್ಟನ್ ಮಿಫ್ಲಿನ್ ಕಂ., 1986, p. 130.
  3. "Poison Ivy Treatment Guide , Getting Rid of the Plants: Identifying Poison Ivy". {{cite web}}: line feed character in |title= at position 27 (help)
  4. http://www.parks.ca.gov/pages/735/files/transcriptmtlivermoreangelisland.pdf Page 3.
  5. ೫.೦ ೫.೧ "ಕಾಂಪ್ ಕ್ರಸ್ಟಿ". Archived from the original on 2013-10-07. Retrieved 2010-03-29.
  6. ಮೆಚೆಲ್ ರಾಬರ್ಟ್, . T., "ಬಟರ್ ಫ್ಲೈಸ್ ಮತ್ತು ಮೊಥ್ಸ್,"ನ್ಯೂಯಾರ್ಕ್: ಸೇಂಟ್. ಮಾರ್ಟಿನ್ ' ಮುದ್ರಣಾಲಯ, 2001, p. 133.
  7. ಹೈ ಸ್ಟಫ್ ವರ್ಕ್ಸ್"ವಿಷಯುಕ್ತ ಹಸಿರು ಸಸ್ಯ ಹೇಗೆ ಪರಿಣಾಮ ಬೀರುತ್ತದೆ "
  8. "ವಿಶ್ವದ -ವಿಷಕಾರಿ ಸಸ್ಯಗಳ ಸಂಪರ್ಕ". Archived from the original on 2010-07-02. Retrieved 2010-03-29.
  9. ವಿಲ್ಸನ್, W. H. & ಲೊಡರ್ ಮಿಲ್ಕ್, P. (| 2006- ಮೆಟರ್ನಿಯಲ್ ಚೈಲ್ಡ್ ನರ್ಸಿಂಗ್ ಕೇರ್ (3ನೆ ಸಂಪುಟ). ಸೇಂಟ್. ಲೂಯಿಸ್: ಮೊಸ್ಬಿ ಎಲ್ಸೆವಿಯರ್.
  10. "American Topics. An Outdated Notion, That Calamine Lotion". Archived from the original on 2007-05-19. Retrieved 2007-07-19.
  11. Appel, L.M. Ohmart and R.F. Sterner, Zinc oxide: A new, pink, refractive microform crystal . AMA Arch Dermatol 73 (1956), pp. 316–324. PMID 13301048
  12. "American Academy of Dermatology - Poison Ivy, Oak & Sumac".
  13. ೧೩.೦ ೧೩.೧ ೧೩.೨ "Treating Poison Ivy Rash With Home Remedies: Jewelweed;Is Poison Ivy Rash Contagious?".
  14. "Facts about Poison Ivy: Is it contagious?".
  15. "Poison Ivy Treatment Guide, Outsmarting Poison Ivy: Treating Poison Ivy Exposures". Retrieved June 01, 2008. {{cite web}}: Check date values in: |accessdate= (help)
  16. "Facts about Poison Ivy: How do you get poison ivy?".
  17. "Facts about Poison Ivy: How long does the rash last?, What can you do once the itching starts?, How do you get poison ivy?".
  18. "ವಿಷಯುಕ್ತ ಹಸಿರು ಸಸ್ಯ ಓಕ್ ಮತ್ತು ಸುಮ್ಯಾಕ್". Archived from the original on 2007-07-08. Retrieved 2010-03-29.
  19. "Facts about Poison Ivy: How do you get poison ivy?, Pets and Poison Ivy, How long does the oil last?".
  20. ಮಾವು ಮತ್ತು ವಿಷಯುಕ್ತ ಹಸಿರು ಸಸ್ಯ (New England Journal of Medicine Web Article)


ಹೊರಗಿನ ಕೊಂಡಿಗಳು

ಬದಲಾಯಿಸಿ