ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೨ ನೇ ಸಾಲು:
[ಮಧ್ವಮಹಾಭಾರತ ಮಹಾ ಪ್ರಸ್ಥಾನ ನಂತರ '''ಶ್ರೀಮನ್ಮಹಾಭಾರತಮ್ ಉಪಸಂಹಾರ''' ]
*ಭೂಮಿಯಲ್ಲಿ ಹುಟ್ಟಿದ,ತ್ರಿಪುರಾಸುರರೇ ಮುಂತಾದ ತಾಮಸರು, ತತ್ವ ವಿದ್ಯೆಯನ್ನು ಸ್ವೀಕರಿಸಿ ಜ್ಞಾನವನ್ನು ಹೊಂದಿದರು. ಅಸುರ ಸಂಪ್ರದಾಯವು ನಷ್ಟವಾಗಿ ಯಥಾರ್ಥ ಜ್ಞಾನವೇ ಉಳಿದದ್ದರಿಂದ ದೈತ್ಯರೂ ಕೂಡಾ ತತ್ವ ಜ್ಞಾನವನ್ನು ಸಂಪಾದಿಸಿದರು. ಸುರರು ಇದನ್ನು ಸಹಿಸದೆ ನೀರಜಾಕ್ಷನನ್ನು ಸ್ತುತಿಸಿದರು. ಶ್ರೀಶನು ಅವರಿಗೆ ಸುಜನರಿಗೆ ಜ್ಞಾನವನ್ನೂ, ಅಯೋಗ್ಯರಿಗೆ ಅನ್ಯಥಾ ಜ್ಞಾನವನ್ನೂ ಕೊಡುವೆನು, ಅಸುರರು ಹೊಂದಿರುವ ಜ್ಞಾನವನ್ನು ಅವರಿಂದ ದೂರೀಕರಿಸುವೆನು. ಎಂದು ಅಭಯವನ್ನಿತ್ತು ಕಳಿಸಿದನು. ತ್ರಿಪುರಾಸುರರಲ್ಲಿ ಪ್ರಥಮನಾದ ವಿರೂಪಾಕ್ಷನು ಭೂಮಿಯಲ್ಲಿ ಶುದ್ಧೋನನನಾಗಿ ಜನಿಸಿದನು. ಇವನ ಪತ್ನಿ ಮಾಯೆ [ಗಯಾ] ಪಡೆದ ಕೂಸನ್ನು ದೂರ ಮಾಡಿ, ಅಲ್ಲಿ ಶಿಶು ರೂಪವಾಗಿ ಶ್ರೀಹರಿಯೇ ಅವತರಿಸಿದನು. ಆ ಕೂಸನ್ನು ತಮ್ಮದೆಂದು ತಿಳಿದು ಅವರು ಜಾತಕರ್ಮವನ್ನು ಮಾಡಲು ಹೊರಟಾಗ, ಶಿಶು ಅಪಹಸಿಸಿ ನಕ್ಕಿತು. ಏಕೆ ನಗುವೆ ? ನೀನಾರೆಂದು ಕೇಳಿದಾಗ, ಶಿಶುವು ನಾನು ಬುದ್ಧನು ಎಂದು ಹೇಳಿ ಅವರಿಗೆ ಬುದ್ಧ ದರ್ಶನವನ್ನು ಉಪದೇಶಿಸಿತು. ಅದನ್ನು ಅವರು ನಂಬಲಿಲ್ಲ.
*ಶ್ರೀಶನೇ ಆಗ ದೇವತೆಗಳನ್ನು ನೆನೆದನು. ಅವರು ಶಿಶುವಿನ ಮೇಲೆ ಆಯುಧಗಳನ್ನು ಎಸೆದರು. ಅವನ್ನು ಶ್ರೀಶನು ನುಂಗಿ ಸುದರ್ಶನವನ್ನು ಕೈಯಲ್ಲಿ ಹಿಡಿದನು. ಆ ಚಕ್ರದ ಮೇಲೆ ಕುಳಿತನು. ಆಗ ಶ್ರೀಶನ ಆಟವು ಸಫಲವಾಗಿ ದೈತ್ಯರು ವಿಷ್ಣುವಿಗಿಂತಲೂ ಬುದ್ಧನೇ ಅಧಿಕನೆಂದು ತಿಳಿದು ಬೌದ್ಧಧರ್ಮವನ್ನು ಅನುಸರಿಸಿದರು. . ಜಗತ್ತು ಕ್ಷಣಿಕ; ಎಲ್ಲವೂ ಶೂನ್ಯ ಎಂದು ಧ್ಯಾನಿಸಿ ಅಂಧಂತಮಸ್ಸನ್ನು ಹೊಂದಿದರು. ದೇವತೆಗಳು ಸಂತಸಗೊಂಡರು. ನಿಜವಾದ ಅರ್ಥವನ್ನು ಶ್ರೀಶನು ದೇವತೆಗಳಿಗೆ ಮಾತ್ರಾ ತಿಳಿಸಿದನು : ೧] ಜಗತ್ತು ಕ್ಷಣದಲ್ಲೂ ಸ್ಥಿರ ರೂಪ ಹೊಂದಿದೆ. ೨] ಶೂ ಎಂದರೆ ವಿಷ್ಣು, ನೀಯತೆ ನಡೆಯುವುದು ಶೂನ್ಯ . ೩] ಅ ಎಂಬ ಪರಮಾತ್ಮ - ಶ್ರೀಶನಿಂದ ಸಂಹಾರವಾಗುವುದು. [ [[ಅಸತ್]] ಅಥವಾ ಅ ವಾಸುದೇವನಿಂದ ಭವತಿ ಹುಟ್ಟುತ್ತದೆ ]
*(ಟಿಪ್ಪಣಿ : ಎಂದರೆ ಶ್ರೀಶನು ಸುಳ್ಳು ಹೇಳಿಲ್ಲ . ಆದರೆ ದೈತ್ಯರು ತಪ್ಪು ತಿಳಿದು ಅಂಧತಮವನ್ನು ಸೇರಿದರು ಎಂದು ಭಾವ.)