ವಿತ್ತೀಯ ನೀತಿ
This article may contain too much repetition or redundant language.(September 2009) |
ಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಪ್ರಗತಿ ಕಡೆಗೆ ಗುರಿಯಿಟ್ಟು ಅವುಗಳ ಸಮೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ.[೧] ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ.
ವಿತ್ತೀಯ ನೀತಿಯನ್ನು ವಿಸ್ತರಣೆ ನೀತಿ ಅಥವಾ ಪರಿಮಿತ ನೀತಿ ಎಂದು ಉಲ್ಲೇಖಿಸಲಾಗಿದೆ. ವಿಸ್ತರಣೆಯ ನೀತಿಯು ಆರ್ಥಿಕತೆಯಲ್ಲಿ ಹಣದ ಒಟ್ಟು ಪೂರೈಕೆಯನ್ನು ವರ್ಧಿಸುತ್ತದೆ. ಪರಿಮಿತ ನೀತಿಯು ಒಟ್ಟು ಹಣದ ಪೂರೈಕೆಯನ್ನು ಕುಗ್ಗಿಸುತ್ತದೆ.
ಆರ್ಥಿಕ ಹಿಂಜರಿತದ ಕಾಲದಲ್ಲಿ ಬಡ್ಡಿದರವನ್ನು ಕುಂಠಿತಗೊಳಿಸುವ ಮೂಲಕ ನಿರುದ್ಯೋಗ ನಿವಾರಣೆಗೆ ವಿಸ್ತರಣಾ ನೀತಿಯನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತದೆ. ಪರಿಮಿತ ನೀತಿಯಲ್ಲಿ ಹಿಂಜರಿತ ನಿಭಾಯಿಸಲು ಬಡ್ಡಿದರಗಳ ಏರಿಕೆ ಒಳಗೊಂಡಿದೆ. ವಿತ್ತೀಯ ನೀತಿಯು ಖಜಾನೆ ನೀತಿಗೆ ಭಿನ್ನವಾಗಿದೆ. ಸರ್ಕಾರದ ಸಾಲ,ವೆಚ್ಚ ಮತ್ತು ತೆರಿಗೆ ಪದ್ಧತಿಯನ್ನು ಖಜಾನೆ ನೀತಿ ಉಲ್ಲೇಖಿಸುತ್ತದೆ.[೨]
ಸ್ಥೂಲ ಅವಲೋಕನ
ಬದಲಾಯಿಸಿಆರ್ಥಿಕ ವ್ಯವಸ್ಥೆಯಲ್ಲಿ ಬಡ್ಡಿದರಗಳ ನಡುವಿನ ಸಂಬಂಧದ ಮೇಲೆ ವಿತ್ತೀಯ ನೀತಿ ಅವಲಂಬಿತವಾಗಿದೆ. ಹಣವನ್ನು ಸಾಲವಾಗಿ ಪಡೆಯುವ ದರ ಮತ್ತು ಹಣದ ಒಟ್ಟು ಪೂರೈಕೆ ಇದರಲ್ಲಿ ಸೇರಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ, ಇತರೆ ಕರೆನ್ಸಿಗಳ ಜತೆ ವಿನಿಮಯ ದರ ಮತ್ತು ನಿರುದ್ಯೋಗ ಮುಂತಾದ ಫಲಶ್ರುತಿಗಳ ಪೈಕಿ ಪೈಕಿ ಒಂದು ಅಥವಾ ಎರಡನ್ನೂ ನಿಯಂತ್ರಿಸಿ ಅವುಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ವಿತ್ತೀಯ ನೀತಿಯು ವಿವಿಧ ಸಾಧನಗಳನ್ನು ಬಳಸುತ್ತದೆ.
ಕರೆನ್ಸಿ ವಿತರಣೆ ಏಕಸ್ವಾಮ್ಯತೆ ಹೊಂದಿರುವ ಕಡೆ, ಅಥವಾ ಕೇಂದ್ರ ಬ್ಯಾಂಕ್‌ಗೆ ಬದ್ಧವಾದ ಬ್ಯಾಂಕ್‌ಗಳ ಮೂಲಕ ಕರೆನ್ಸಿಗಳನ್ನು ವಿತರಿಸುವ ನಿಯಂತ್ರಿತ ವ್ಯವಸ್ಥೆ ಇರುವ ಕಡೆಯಲ್ಲಿ, ವಿತ್ತೀಯ ಪ್ರಾಧಿಕಾರಕ್ಕೆ ಹಣಕಾಸು ಪೂರೈಕೆ ಬದಲಿಸುವ ಸಾಮರ್ಥ್ಯವಿರುತ್ತದೆ. ಹೀಗೆ ಅದು ಬಡ್ಡಿದರದ ಮೇಲೆ ಪ್ರಭಾವ ಬೀರುತ್ತದೆ(ವಿತ್ತೀಯ ನೀತಿ ಗುರಿಗಳನ್ನು ಸಾಧಿಸುವುದಕ್ಕಾಗಿ) 19ನೇ ಶತಮಾನದ ಅಂತ್ಯದಲ್ಲಿ ವಿತ್ತೀಯ ನೀತಿ ಆರಂಭವಾಗಿದ್ದು, ಆಗ ಸುವರ್ಣಮಾನಕ ಪದ್ಧತಿಯನ್ನು ಕಾಯ್ದುಕೊಳ್ಳಲಾಗುತ್ತಿತ್ತು.
ವಿತ್ತೀಯ ನೀತಿಯೊಂದು ವಿತ್ತೀಯ ಪೂರೈಕೆಯ ಗಾತ್ರವನ್ನು ತಗ್ಗಿಸಿದರೆ ಅಥವಾ ಬಡ್ಡಿದರ ವರ್ಧಿಸಿದರೆ ಆ ನೀತಿಯನ್ನು ಪರಿಮಿತ ನೀತಿ ಎಂದು ಉಲ್ಲೇಖಿಸಲಾಗುತ್ತದೆ. ವಿಸ್ತರಣಾ ನೀತಿಯು ಹಣಕಾಸಿನ ಪೂರೈಕೆಯ ಗಾತ್ರವನ್ನು ಹೆಚ್ಚಿಸುತ್ತದೆ ಅಥವಾ ಬಡ್ಡಿದರವನ್ನು ಕುಗ್ಗಿಸುತ್ತದೆ. ಇದಿಷ್ಟೇ ಅಲ್ಲದೇ, ವಿತ್ತೀಯ ನೀತಿಗಳನ್ನು ಈ ಕೆಳಗಿನಂತೆ ಬಣ್ಣಿಸಲಾಗಿದೆ: ಕೇಂದ್ರ ವಿತ್ತೀಯ ಪ್ರಾಧಿಕಾರ ಗೊತ್ತುಮಾಡಿದ ಬಡ್ಡಿದರ ಆರ್ಥಿಕ ಬೆಳವಣಿಗೆ ಸೃಷ್ಟಿಯ ಉದ್ದೇಶ ಹೊಂದಿದ್ದರೆ ಹೊಂದಾಣಿಕೆಯ ನೀತಿ; ಬೆಳವಣಿಗೆ ಸೃಷ್ಟಿಸದೇ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶ ಇಲ್ಲದಿದ್ದರೆ ತಟಸ್ಥ ನೀತಿ; ಹಣದುಬ್ಬರ ತಗ್ಗಿಸುವ ಉದ್ದೇಶ ಹೊಂದಿದ್ದರೆ ಅದು ಬಿಗಿ ನೀತಿ ಎಂದು ಬಣ್ಣಿಸಲಾಗುತ್ತದೆ.
ಈ ಗುರಿಗಳ ಸಾಧನೆಗೆ ಅನೇಕ ಹಣಕಾಸಿನ ನೀತಿಯ ಸಾಧನಗಳು ಲಭ್ಯವಿವೆ: ಕಾನೂನುಬದ್ಧ ಬಡ್ಡಿ ದರಗಳನ್ನು ಹೆಚ್ಚಿಸುವುದು; ಆರ್ಥಿಕ ನೆಲಗಟ್ಟನ್ನು ತಗ್ಗಿಸುವುದು; ಮೀಸಲು ಅಗತ್ಯಗಳನ್ನು ಹೆಚ್ಚಿಸುವುದು. ಇವೆಲ್ಲವೂ ಹಣಕಾಸಿನ ಪೂರೈಕೆಯನ್ನು ಪರಿಮಿತಗೊಳಿಸುವ ಪ್ರಭಾವ ಹೊಂದಿವೆ. ಅದು ಹಿಂದುಮುಂದಾದರೆ ಹಣಕಾಸಿನ ಪೂರೈಕೆಯನ್ನು ವಿಸ್ತರಿಸುತ್ತದೆ. ಹಣಕಾಸಿನ ನೀತಿಯನ್ನು 1970ರವರೆಗೆ, ಸಾಮಾನ್ಯವಾಗಿ ಖಜಾನೆ ನೀತಿಯಿಂದ ಪ್ರತ್ಯೇಕವಾಗಿ ರಚಿಸಲಾಗುತ್ತಿತ್ತು. ಬ್ರೆಟ್ಟನ್ ವುಡ್ಸ್ ವ್ಯವಸ್ಥೆ 1970ರ ದಶಕದ ಪೂರ್ವದಿಂದ ಈಗಲೂ ಬಹುತೇಕ ರಾಷ್ಟ್ರಗಳು ಪ್ರತ್ಯೇಕವಾಗಿ ಎರಡು ನೀತಿಗಳನ್ನು ರಚಿಸುವುದನ್ನು ಖಾತರಿ ಮಾಡಿದೆ.
ಬಹುತೇಕ ಎಲ್ಲ ಆಧುನಿಕ ರಾಷ್ಟ್ರಗಳಲ್ಲಿ ವಿಶೇಷ ಸಂಸ್ಥೆಗಳು(ಬ್ಯಾಂಕ್ ಆಫ್ ಇಂಗ್ಲೆಂಡ್,ಯುರೋಪಿಯನ್ ಸೆಂಟ್ರಲ್ ಬ್ಯಾಂಕ್,ರಿಸರ್ವ್ ಬ್ಯಾಂಕ್ ಆಫ್ ಇಂಡಿಯ, ಫೆಡರಲ್ ರಿಸರ್ವ್ ಸಿಸ್ಟಮ್ ಇನ್ ದಿ ಯುನೈಟೆಡ್ ಸ್ಟೇಟ್ಸ್ ಬ್ಯಾಂಕ್ ಆಫ್ ಜಪಾನ್,ಬ್ಯಾಂಕ್ ಆಫ್ ಕೆನಡಾ ಅಥವಾ ರಿಸರ್ವ್ ಬ್ಯಾಂಕ್ ಆಫ್ ಆಸ್ಟ್ರೇಲಿಯ)ಅಸ್ತಿತ್ವದಲ್ಲಿದ್ದು,ವಿತ್ತೀಯ ನೀತಿಯನ್ನು ಜಾರಿಗೆತರುವ ಕೆಲಸ ವಹಿಸಿಕೊಂಡಿವೆ. ಅನೇಕ ವೇಳೆ ಕಾರ್ಯಾಂಗದಿಂದ ಪ್ರತ್ಯೇಕವಾಗಿ ಅವು ಕಾರ್ಯನಿರ್ವಹಿಸುತ್ತವೆ. ಸಾಮಾನ್ಯವಾಗಿ ಈ ಸಂಸ್ಥೆಗಳನ್ನು ಕೇಂದ್ರ ಬ್ಯಾಂಕ್‌ಗಳು ಎಂದು ಕರೆಯಲಾಗುತ್ತಿದೆ. ಹಣಕಾಸು ವ್ಯವಸ್ಥೆಯ ಸುಸೂತ್ರ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮುಂತಾದ ಇತರೆ ಜವಾಬ್ದಾರಿಗಳು ಅದಕ್ಕಿರುತ್ತವೆ.
ವಿತ್ತೀಯ ನೀತಿಯ ಪ್ರಾಥಮಿಕ ಸಾಧನವು ಮುಕ್ತ ಪೇಟೆಯ ಕಾರ್ಯಾಚರಣೆಗಳಾಗಿದೆ. ವಿವಿಧ ಸಾಲದ ಸಾಧನಗಳನ್ನು, ವಿದೇಶಿ ಕರೆನ್ಸಿಗಳನ್ನು ಅಥವಾ ಸರಕುಗಳನ್ನು ಮಾರುವ, ಖರೀದಿಸುವ ಮೂಲಕ ಚಲಾವಣೆಯಲ್ಲಿರುವ ಹಣದ ಪರಿಮಾಣವನ್ನು ನಿರ್ವಹಿಸುವುದು ಇದರಲ್ಲಿ ಒಳಗೊಂಡಿವೆ. ಇವೆಲ್ಲ ಖರೀದಿಗಳು ಅಥವಾ ಮಾರಾಟಗಳು ಹೆಚ್ಚುಕಡಿಮೆ ಮೂಲ ಕರೆನ್ಸಿ ಮಾರುಕಟ್ಟೆಯಲ್ಲಿ ಚಲಾವಣೆಗೆ ಪ್ರವೇಶಿಸುವ ಅಥವಾ ನಿರ್ಗಮಿಸುವುದರಲ್ಲಿ ಫಲ ನೀಡುತ್ತದೆ.
ಸಾಮಾನ್ಯವಾಗಿ, ಮುಕ್ತ ಪೇಟೆ ಕಾರ್ಯಾಚರಣೆಯ ಅಲ್ಪಾವಧಿ ಗುರಿಯು ಬಡ್ಡಿದರದ ನಿರ್ದಿಷ್ಟ ಅಲ್ಪಾವಧಿ ಗುರಿಯನ್ನು ಸಾಧಿಸುವುದಾಗಿದೆ. ಇತರ ನಿದರ್ಶನಗಳಲ್ಲಿ, ವಿತ್ತೀಯ ನೀತಿಯು ಕೆಲವು ವಿದೇಶಿ ಕರೆನ್ಸಿಗಳಿಗೆ ಅಥವಾ ಚಿನ್ನಕ್ಕೆ ಸಂಬಂಧಿಸಿದ ನಿರ್ದಿಷ್ಟ ವಿನಿಮಯ ದರದ ಮೇಲೆ ಗುರಿಯಿರಿಸುವುದು ಒಳಗೊಂಡಿದೆ. ಉದಾಹರಣೆಗೆ,USAಗೆ ಸಂಬಂಧಪಟ್ಟಂತೆ ಸದಸ್ಯ ರಾಷ್ಟ್ರಗಳು ದಿಢೀರನೇ ಪರಸ್ಪರ ಸಾಲ ನೀಡುವ ದರವಾದ ಫೆಡರಲ್ ನಿಧಿಗಳ ದರದ ಮೇಲೆ ಫೆಡರಲ್ ರಿಸರ್ವ್ ಗುರಿಯಿರಿಸುತ್ತದೆ; ಆದಾಗ್ಯೂ, ಚೀನದ ವಿತ್ತೀಯ ನೀತಿಯಲ್ಲಿರೆನ್‌ಮಿನ್ಬಿ(ಚೀನದ ಕರೆನ್ಸಿ) ಮತ್ತು ವಿದೇಶಿ ಕರೆನ್ಸಿಗಳ ಸಮೂಹದ ನಡುವಿನ ವಿನಿಯಮ ದರದ ಮೇಲೆ ಗುರಿಯಿರಿಸುವುದಾಗಿದೆ.
ವಿತ್ತೀಯ ನೀತಿಯನ್ನು ನಿರ್ವಹಿಸುವ ಇತರೆ ಪ್ರಾಥಮಿಕ ಮಾರ್ಗಗಳಲ್ಲಿ:(i)ರಿಯಾಯಿತಿ ಸಾಲ ವಿಭಾಗ(ಅಂತಿಮ ಋಣದಾತ),(ii)ಆಂಶಿಕ ಠೇವಣಿ ಸಾಲ(ಮೀಸಲು ಅಗತ್ಯದಲ್ಲಿ ಬದಲಾವಣೆಗಳು);(iii)ನೈತಿಕ ಮನವೊಲಿಕೆ ಮಾರ್ಗ(ನಿರ್ದಿಷ್ಟ ಫಲಿತಾಂಶಗಳನ್ನು ಸಾಧಿಸುವಂತೆ ಕೆಲವು ಮಾರುಕಟ್ಟೆ ಹೂಡಿಕೆದಾರರ ಮನವೊಲಿಕೆ);(iv) "ಮುಕ್ತ ಮಾರುಕಟ್ಟೆ ನೀತಿಯ ಕಾರ್ಯಾಚರಣೆಗಳು"(ಮಾರುಕಟ್ಟೆಯ ಮುಕ್ತ ವಿತ್ತೀಯ ನೀತಿ).
ಸಿದ್ಧಾಂತ
ಬದಲಾಯಿಸಿಸರ್ಕಾರ, ಕೇಂದ್ರ ಬ್ಯಾಂಕ್ ಅಥವಾ ರಾಷ್ಟ್ರದ ವಿತ್ತೀಯ ಪ್ರಾಧಿಕಾರವು (i) ವಿತ್ತೀಯ ಸರಬರಾಜು,(ii) ಹಣದ ಅಗತ್ಯತೆ, (iii) ಹಣದ ವೆಚ್ಚ ಅಥವಾ ಬಡ್ಡಿದರವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ವಿತ್ತೀಯ ನೀತಿ ಎನ್ನಲಾಗುತ್ತದೆ. ಆರ್ಥಿಕತೆಯ ಸ್ಥಿರತೆ ಮತ್ತು ಬೆಳವಣಿಗೆ ಆಧಾರಿತವಾದ ಗುರಿಗಳ ಸಮೂಹವನ್ನು ಸಾಧಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ವಿತ್ತೀಯ ಸಿದ್ಧಾಂತವು ಗರಿಷ್ಠ ಹಣಕಾಸು ನೀತಿ ರೂಪಿಸುವ ಬಗ್ಗೆ ಒಳನೋಟವನ್ನು ಒದಗಿಸುತ್ತದೆ
ಆರ್ಥಿಕವ್ಯವಸ್ಥೆಯಲ್ಲಿ ಬಡ್ಡಿದರಗಳ ನಡುವೆ ಸಂಬಂಧದ ಮೇಲೆ ವಿತ್ತೀಯ ನೀತಿ ಅವಲಂಬಿತವಾಗಿದೆ. ಹಣವನ್ನು ಸಾಲವಾಗಿ ಪಡೆಯುವ ದರ ಮತ್ತು ಹಣದ ಒಟ್ಟು ಪೂರೈಕೆ ಇದರಲ್ಲಿ ಸೇರಿದೆ. ಆರ್ಥಿಕ ಬೆಳವಣಿಗೆ, ಹಣದುಬ್ಬರ,ಇತರೆ ಕರೆನ್ಸಿಗಳ ಜತೆ ವಿನಿಮಯ ದರ ಮತ್ತು ನಿರುದ್ಯೋಗ ಮುಂತಾದ ಫಲಶ್ರುತಿಗಳ ಮೇಲೆ ಪ್ರಭಾವ ಬೀರುವುದಕ್ಕಾಗಿ ವಿತ್ತೀಯ ನೀತಿಯು ಇವುಗಳಲ್ಲಿ ಒಂದು ಅಥವಾ ಎರಡನ್ನೂ ನಿಯಂತ್ರಿಸಲು ವಿವಿಧ ಸಾಧನಗಳನ್ನು ಬಳಸುತ್ತದೆ. ಕರೆನ್ಸಿ ವಿತರಣೆ ಏಕಸ್ವಾಮ್ಯತೆ ಹೊಂದಿರುವ ಕಡೆ,ಕೇಂದ್ರ ಬ್ಯಾಂಕ್‌ಗೆ ಬದ್ಧವಾದ ಬ್ಯಾಂಕ್‌ಗಳ ಮೂಲಕ ಕರೆನ್ಸಿಗಳನ್ನು ವಿತರಿಸುವ ನಿಯಂತ್ರಿತ ವ್ಯವಸ್ಥೆ ಇರುವ ಕಡೆಯಲ್ಲಿ, ವಿತ್ತೀಯ ಪ್ರಾಧಿಕಾರಕ್ಕೆ ಹಣಕಾಸು ಪೂರೈಕೆ ಬದಲಿಸುವ ಸಾಮರ್ಥ್ಯವಿರುತ್ತದೆ. ಹೀಗೆ ಬಡ್ಡಿದರದ ಮೇಲೆ ಪ್ರಭಾವ ಬೀರುತ್ತದೆ(ನೀತಿ ಗುರಿಗಳನ್ನು ಸಾಧಿಸುವುದಕ್ಕಾಗಿ) 19ನೇ ಶತಮಾನದ ಅಂತ್ಯದಲ್ಲಿ ವಿತ್ತೀಯ ನೀತಿ ಆರಂಭವಾಗಿದ್ದು, ಆಗ ಚಿನ್ನದ ಪ್ರಮಿತಿವನ್ನು ಕಾಯ್ದುಕೊಳ್ಳಲಾಗುತ್ತಿತ್ತು. ವಿತ್ತೀಯ ನೀತಿಯೊಂದು ವಿತ್ತೀಯ ಪೂರೈಕೆಯ ಗಾತ್ರವನ್ನು ತಗ್ಗಿಸಿದರೆ ಅಥವಾ ಬಡ್ಡಿದರ ವರ್ಧಿಸಿದರೆ ಆ ನೀತಿಯನ್ನು ಪರಿಮಿತ ನೀತಿ ಎಂದು ಉಲ್ಲೇಖಿಸಲಾಗುತ್ತದೆ. ವಿಸ್ತರಣಾ ನೀತಿಯು ಹಣಕಾಸಿನ ಪೂರೈಕೆಯ ಗಾತ್ರವನ್ನು ಹೆಚ್ಚಿಸುತ್ತದೆ ಅಥವಾ ಬಡ್ಡಿದರವನ್ನು ಕುಗ್ಗಿಸುತ್ತದೆ. ಇದಿಷ್ಟೇ ಅಲ್ಲದೇ, ವಿತ್ತೀಯ ನೀತಿಗಳನ್ನು ಈ ಕೆಳಗಿನಂತೆ ಬಣ್ಣಿಸಲಾಗಿದೆ: ಕೇಂದ್ರ ವಿತ್ತೀಯ ಪ್ರಾಧಿಕಾರ ಗೊತ್ತುಮಾಡಿದ ಬಡ್ಡಿದರ ಆರ್ಥಿಕ ಬೆಳವಣಿಗೆ ಸೃಷ್ಟಿಯ ಉದ್ದೇಶ ಹೊಂದಿದ್ದರೆ ಹೊಂದಾಣಿಕೆಯ ನೀತಿ; ಬೆಳವಣಿಗೆ ಸೃಷ್ಟಿಸದೇ, ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶ ಇಲ್ಲದಿದ್ದರೆ ತಟಸ್ಥ ನೀತಿ; ಹಣದುಬ್ಬರ ತಗ್ಗಿಸುವ ಉದ್ದೇಶ ಹೊಂದಿದ್ದರೆ ಅದು ಬಿಗಿ ನೀತಿ ಎಂದು ಬಣ್ಣಿಸಲಾಗುತ್ತದೆ.
ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡುವುದು ಮತ್ತು ಬಡ್ಡಿದರಗಳನ್ನು ಕೆಳಮಟ್ಟಕ್ಕೆ ಇಳಿಸುವುದು ನೀತಿರಚನೆಕಾರರಿಗೆ ಮುಖ್ಯವಾಗಿದೆ. ವಿತ್ತೀಯ ನೀತಿಗಳಿಗೆ ಸಂಬಂಧಿಸಿದಂತೆ ಅವು ಪ್ರಾಮುಖ್ಯವಲ್ಲ ಮತ್ತು ಅಪ್ರಸ್ತುತವೆನಿಸಿವೆ.
ಹಣದುಬ್ಬರವನ್ನು ತಗ್ಗಿಸಲು ನೀತಿರಚನೆಕಾರರು ಬದ್ಧವಾಗಿದ್ದಾರೆಂದು ಖಾಸಗಿ ನಿಯೋಗಿಗಳು(ಗ್ರಾಹಕರು ಮತ್ತು ಸಂಸ್ಥೆಗಳು) ನಂಬಿದ್ದರೆ,ಭವಿಷ್ಯದ ದರಗಳು ಇಳಿಮುಖವಾಗುವುದೆಂದು ಅವರು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ.(ಈ ನಿರೀಕ್ಷೆಗಳು ಹೇಗೆ ರೂಪುಗೊಳ್ಳುತ್ತದೆ ಎನ್ನುವುದು ಸಂಪೂರ್ಣ ಭಿನ್ನ ವಿಚಾರ; ಉದಾಹರಣೆಗೆ ತರ್ಕಬದ್ಧ ನಿರೀಕ್ಷೆಗಳನ್ನು ಹೊಂದಾಣಿಕೆ ನಿರೀಕ್ಷೆಗಳೊಂದಿಗೆ ತುಲನೆ ಮಾಡಿ) ನೌಕರದಾರನೊಬ್ಬ ಭವಿಷ್ಯದಲ್ಲಿ ದರಗಳು ಹೆಚ್ಚುವುದೆಂದು ನಿರೀಕ್ಷಿಸಿದ್ದರೆ,ಈ ದರಗಳಿಗೆ ಹೊಂದಿಕೆಯಾಗಿ ಹೆಚ್ಚಿನ ವೇತನ ಪಡೆಯಲು ವೇತನ ಒಪ್ಪಂದ ರೂಪಿಸಬಹುದು. ಆದ್ದರಿಂದ ಕಡಿಮೆ ವೇತನಗಳ ನಿರೀಕ್ಷೆಯನ್ನು ನೌಕರರು ಮತ್ತು ಮಾಲೀಕರ ನಡುವೆ ವೇತನ ನಿಗದಿ ನಡವಳಿಕೆಯಲ್ಲಿ ಬಿಂಬಿಸಲಾಗುತ್ತದೆ.(ದರಗಳು ಕಡಿಮೆಯಾಗುವ ನಿರೀಕ್ಷೆಯಲ್ಲಿ ಕಡಿಮೆ ವೇತನಗಳು) ವೇತನಗಳು ವಾಸ್ತವವಾಗಿ ಕಡಿಮೆ ಇದ್ದಾಗ, ಬೇಡಿಕೆ ಎಳೆಯುವ ಹಣದುಬ್ಬರ ಇರುವುದಿಲ್ಲ. ಏಕೆಂದರೆ ನೌಕರರು ಕಡಿಮೆ ವೇತನ ಸ್ವೀಕರಿಸುತ್ತಿರುತ್ತಾರೆ. ವೆಚ್ಚ ಹೆಚ್ಚಳದ ಹಣದುಬ್ಬರ ಕೂಡ ಇರುವುದಿಲ್ಲ. ಏಕೆಂದರೆ ಮಾಲೀಕರು ವೇತನದ ರೂಪದಲ್ಲಿ ಕಡಿಮೆ ಪಾವತಿ ಮಾಡುತ್ತಾರೆ.
ಕಡಿಮೆ ಮಟ್ಟದ ಹಣದುಬ್ಬರ ಸಾಧನೆಗೆ ನೀತಿರಚನೆಕಾರರು ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡಬೇಕು; ಈ ಪ್ರಕಟಣೆಗಳು ಭವಿಷ್ಯದ ವಾಸ್ತವ ನೀತಿಯನ್ನು ಬಿಂಬಿಸುತ್ತದೆಂದು ಖಾಸಗಿ ನಿಯೋಗಿಗಳು ನಂಬಬೇಕು. ಕೆಳ ಮಟ್ಟದ ಹಣದುಬ್ಬರದ ಗುರಿಗಳ ಬಗ್ಗೆ ನೀಡಿದ ಪ್ರಕಟಣೆಯನ್ನು ಖಾಸಗಿ ನಿಯೋಗಿಗಳು ನಂಬದಿದ್ದರೆ, ವೇತನ ನಿಗದಿಯಲ್ಲಿ ಉನ್ನತ ಮಟ್ಟದ ಹಣದುಬ್ಬರ ನಿರೀಕ್ಷಿಸಲಾಗುತ್ತದೆ ಮತ್ತು ವೇತನಗಳು ಏರಿಕೆಯಾಗಿ ಹಣದುಬ್ಬರ ಜಿಗಿಯುತ್ತದೆ. ಹೆಚ್ಚಿನ ವೇತನವು ಗ್ರಾಹಕರ ಬೇಡಿಕೆ, ಬೇಡಿಕೆ ಎಳೆಯುವ ಹಣದುಬ್ಬರ ಮತ್ತು ಸಂಸ್ಥೆಯ ವೆಚ್ಚಗಳನ್ನು, ವೆಚ್ಚ ಹೆಚ್ಚಿಸುವ ಹಣದುಬ್ಬರವನ್ನು ವೃದ್ಧಿಸುತ್ತದೆ.ಇದರಿಂದ ಹಣದುಬ್ಬರ ಏರಿಕೆಯಾಗುತ್ತದೆ. ಆದ್ದರಿಂದ ವಿತ್ತೀಯ ನೀತಿ ಕುರಿತು ನೀತಿರಚನೆಕಾರಕರ ಪ್ರಕಟಣೆಗಳು ವಿಶ್ವಾಸಾರ್ಹವಿಲ್ಲದಿದ್ದರೆ ನೀತಿಯು ಇಚ್ಛಿತ ಪರಿಣಾಮ ಬೀರುವುದಿಲ್ಲ.
ಖಾಸಗಿ ನಿಯೋಗಿಗಳು ಕಡಿಮೆ ಹಣದುಬ್ಬರ ನಿರೀಕ್ಷಿಸಿದ್ದಾರೆಂದು ನೀತಿರಚನೆಕಾರರು ನಂಬಿದ್ದರೆ, ವಿಸ್ತರಣೆ ವಿತ್ತೀಯ ನೀತಿಯ ಅಳವಡಿಕೆಗೆ ಅವರನ್ನು ಪ್ರಚೋದಿಸುತ್ತದೆ.(ವರ್ಧಿಸುವ ಆರ್ಥಿಕ ಫಲಶ್ರುತಿಯ ಗರಿಷ್ಠ ಸೌಲಭ್ಯಗಳು ಹಣದುಬ್ಬರದ ಗರಿಷ್ಠ ವೆಚ್ಚವನ್ನು ಮೀರಿಸುತ್ತದೆ); ಆದಾಗ್ಯೂ,ಖಾಸಗಿ ನಿಯೋಗಿಗಳಿಗೆ ತರ್ಕಬದ್ಧ ನಿರೀಕ್ಷೆಗಳಿಗಳಿವೆಯೆಂದು ಭಾವಿಸಿದಲ್ಲಿ, ನೀತಿ ರಚನೆಕಾರರು ಇಂತಹ ಪ್ರಚೋದನೆಗೆ ಒಳಗಾಗುವುದನ್ನು ಅವರು ತಿಳಿದಿರುತ್ತಾರೆ.
ತಾವು ಕಡಿಮೆ ಹಣದುಬ್ಬರ ನಿರೀಕ್ಷಿಸಿದರೆ, ವಿಸ್ತರಣಾ ನೀತಿ ಅಳವಡಿಸುವ ಮೂಲಕ ಹಣದುಬ್ಬರ ಏರಿಕೆಯಾಗುತ್ತದೆಂದು ಖಾಸಗಿ ನಿಯೋಗಿಗಳು ಅರಿತಿರುತ್ತಾರೆ. ತರುವಾಯ,ಖಾಸಗಿ ನಿಯೋಗಿಗಳು ಹೆಚ್ಚಿನ ಹಣದುಬ್ಬರ ನಿರೀಕ್ಷಿಸುತ್ತಾರೆ.(ನೀತಿರಚನೆಕಾರರು ಕಡಿಮೆ ಹಣದುಬ್ಬರ ವಿಶ್ವಾಸಾರ್ಹ ವೆಂದು ಪ್ರಕಟಿಸುವ ತನಕ) ಈ ಮುನ್ನೆಣಿಕೆಯನ್ನು ಹೊಂದಾಣಿಕೆ ನಿರೀಕ್ಷೆಯ ಮೂಲಕ ಪೂರೈಸಲಾಗುತ್ತದೆ(ವೇತನ ನಿಗದಿ ನಡವಳಿಕೆ);ಆದ್ದರಿಂದ ಹಣದುಬ್ಬರ ಏರಿಕೆಯಾಗುತ್ತದೆ(ಹೆಚ್ಚುವರಿ ಉತ್ಪಾದನೆಯ ಸೌಲಭ್ಯವಿಲ್ಲದೇ). ಆದ್ದರಿಂದ ವಿಶ್ವಾಸಾರ್ಹ ಪ್ರಕಟಣೆಗಳನ್ನು ನೀಡದಿದ್ದ ಪಕ್ಷದಲ್ಲಿ ವಿಸ್ತರಣಾ ವಿತ್ತೀಯ ನೀತಿ ವಿಫಲಗೊಳ್ಳುತ್ತದೆ.
ವಿವಿಧ ವಿಧಾನಗಳಲ್ಲಿ ಪ್ರಕಟಣೆಗಳ ವಿಶ್ವಾಸಾರ್ಹತೆ ಸಾಧಿಸಬಹುದು. ಕಡಿಮೆ ಹಣದುಬ್ಬರ ಗುರಿಗಳೊಂದಿಗೆ ಸ್ವತಂತ್ರ ಕೇಂದ್ರ ಬ್ಯಾಂಕ್ ಸ್ಥಾಪನೆಯು ಒಂದು ವಿಧಾನವಾಗಿದೆ.(ಆದರೆ ಉತ್ಪಾದನೆ ಗುರಿಗಳಿಲ್ಲ). ಆದ್ದರಿಂದ ಸ್ವತಂತ್ರ ಸಂಸ್ಥೆಯು ನಿಗದಿಮಾಡಿದ್ದರಿಂದ ಹಣದುಬ್ಬರ ಕಡಿಮೆಯೆಂಬುದು ಖಾಸಗಿ ನಿಯೋಗಿಗಳಿಗೆ ಮನವರಿಕೆಯಾಗುತ್ತದೆ. ಕೇಂದ್ರ ಬ್ಯಾಂಕುಗಳಿಗೆ ಅವುಗಳ ಖ್ಯಾತಿ ವೃದ್ಧಿಗೆ ಮತ್ತು ನೀತಿಗುರಿಯತ್ತ ದೃಢ ಬದ್ಧತೆಯ ಸಂಕೇತವಾಗಿ ತನ್ನ ಗುರಿಗಳನ್ನು ಪೂರೈಸಲು ಪ್ರೋತ್ಸಾಹಕಗಳನ್ನು ನೀಡಬಹುದು.(ಉದಾಹರಣೆಗೆ, ಹೆಚ್ಚಿನ ಬಜೆಟ್‌ಗಳಿಗೆ, ಬ್ಯಾಂಕಿನ ಮುಖ್ಯಸ್ಥರಿಗೆ ವೇತನ ಬೋನಸ್). ವಿತ್ತೀಯ ನೀತಿ ಅನುಷ್ಠಾನದಲ್ಲಿ ಖ್ಯಾತಿಯು ಮುಖ್ಯ ಅಂಶವಾಗಿದೆ. ಆದರೆ ಖ್ಯಾತಿಯ ಕಲ್ಪನೆಯನ್ನು ಬದ್ಧತೆಯೆಂದು ತಪ್ಪಾಗಿ ಎಣಿಸಿ ಗೊಂದಲಕ್ಕೆ ಸಿಲುಕಬಾರದು. ಕೇಂದ್ರ ಬ್ಯಾಂಕ್ ವಿತ್ತೀಯ ನೀತಿಯ ಉತ್ತಮ ನಿರ್ವಹಣೆಯಿಂದ ಅನುಕೂಲಕರ ಖ್ಯಾತಿಯನ್ನು ಗಳಿಸಿರಬಹುದು. ಆದರೆ ಅದೇ ಕೇಂದ್ರಬ್ಯಾಂಕ್ ಬದ್ಧತೆಯ ಯಾವುದೇ ನಿರ್ದಿಷ್ಟ ಸ್ವರೂಪವನ್ನು ಆಯ್ಕೆ ಮಾಡದಿರಬಹುದು.(ಹಣದುಬ್ಬರಕ್ಕೆ ನಿರ್ದಿಷ್ಟ ವ್ಯಾಪ್ತಿಯ ಗುರಿ ನಿಗದಿ ಮಾಡುವುದು). ನೀತಿ ಗುರಿಯ ಬಗ್ಗೆ ಪ್ರಕಟಣೆಯನ್ನು ಮಾರುಕಟ್ಟೆಗಳು ಎಷ್ಟರಮಟ್ಟಿಗೆ ನಂಬುತ್ತವೆಂದು ನಿರ್ಧರಿಸುವಲ್ಲಿ ಖ್ಯಾತಿಯು ನಿರ್ಣಾಯಕ ಪಾತ್ರ ವಹಿಸುತ್ತದೆ. ಆದರೆ ಎರಡೂ ಪರಿಕಲ್ಪನೆಗಳು ಹೋಲಿಕೆಯಿಂದ ಕೂಡಿರಬಾರದು. ತರ್ಕಬದ್ಧ ನಿರೀಕ್ಷೆಗಳಲ್ಲಿ, ಹಿಂದಿನ ನೀತಿ ಕ್ರಮಗಳ ಆಧಾರದ ಮೇಲೆ ನೀತಿರಚನೆಕಾರನಿಗೆ ತನ್ನ ಖ್ಯಾತಿಯನ್ನು ಸಾಬೀತುಮಾಡುವ ಅಗತ್ಯವಿಲ್ಲವೆಂಬುದನ್ನು ಗಮನಿಸಿ; ಉದಾಹರಣೆಗೆ,ಕೇಂದ್ರ ಬ್ಯಾಂಕ್ ಮುಖ್ಯಸ್ಥರ ಖ್ಯಾತಿಯು ಅವರ ಅಥವಾ ಅವಳ ಸಿದ್ಧಾಂತ, ವೃತ್ತಿಪರ ಹಿನ್ನೆಲೆ, ಸಾರ್ವಜನಿಕ ಹೇಳಿಕೆಗಳು,ಇತರೆಗಳಿಂದ ಸಂಪೂರ್ಣವಾಗಿ ಹುಟ್ಟಿರಬಹುದು. ವಾಸ್ತವವಾಗಿ ಹೀಗೆಂದು ವಾದಿಸಲಾಗಿದೆ(ಕೆನ್ನೆತ್ ರೋಗೋಫ್,1985ಗೆ ಉಲ್ಲೇಖವನ್ನು ಸೇರಿಸಿ) "ದಿ ಆಪ್ಟಿಮಲ್ ಕಮಿಟ್‌ಮೆಂಟ್ ಟು ಎನ್ ಇಂಟರ್‌ಮೀಡಿಯೇಟ್ ಮಾನಿಟರಿ ಟಾರ್ಗೆಟ್" 'ಇನ್ ಕ್ವಾರ್ಟರ್ಲಿ ಜರ್ನಲ್ ಆಫ್ ಎಕನಾಮಿಕ್ಸ್'#100, pp. 1169-1189) ವಿತ್ತೀಯ ನೀತಿ ಅನುಷ್ಠಾನದಲ್ಲಿ ಕಾಲ ಅಸಮಂಜಸತೆಗೆ ಸಂಬಂಧಿಸಿದ ಲಕ್ಷಣಗಳನ್ನು ತಪ್ಪಿಸಲು(ವಿಶೇಷವಾಗಿ ವಿಪರೀತ ಹಣದುಬ್ಬರ)ಕೇಂದ್ರ ಬ್ಯಾಂಕ್ ಮುಖ್ಯಸ್ಥರು ಉಳಿದ ಸರಾಸರಿ ಆರ್ಥಿಕತೆಗಿಂತ ಹೆಚ್ಚಾಗಿ ಹಣದುಬ್ಬರದ ಬಗ್ಗೆ ಹೆಚ್ಚಿನ ಅರುಚಿ ಹೊಂದಿರಬೇಕು. ಆದ್ದರಿಂದ ನಿರ್ದಿಷ್ಟ ಕೇಂದ್ರ ಬ್ಯಾಂಕ್ ಖ್ಯಾತಿಯು ಅದರ ಪೂರ್ವ ಸಾಧನೆಗೆ ಕಟ್ಟುಬೀಳುವ ಅಗತ್ಯವಿಲ್ಲ. ಹಣದುಬ್ಬರ ನಿರೀಕ್ಷೆಗಳ ರಚನೆಗೆ ಮಾರುಕಟ್ಟೆಗಳು ಬಳಸಬಹುದಾದ ನಿರ್ದಿಷ್ಟ ಸಾಂಸ್ಥಿಕ ವ್ಯವಸ್ಥೆಗಳಿಗೆ ಅದು ಕಟ್ಟುಬೀಳಬೇಕು.
ವಿತ್ತೀಯ ನೀತಿಗೆ ಸಂಬಂಧಿಸಿದ ವಿಶ್ವಾಸಾರ್ಹತೆ ಕುರಿತು ಆಗಾಗ್ಗೆ ಚರ್ಚೆಯಾಗುತ್ತಿದ್ದರೂ ಕೂಡ, ವಿಶ್ವಾಸಾರ್ಹತೆಯ ನಿಖರ ಅರ್ಥದ ಬಗ್ಗೆ ಅಪರೂಪವಾಗಿ ವ್ಯಾಖ್ಯಾನಿಸಲಾಗಿದೆ. ಇಂತಹ ಸ್ಪಷ್ಟೀಕರಣದ ಕೊರತೆಯಿಂದ ಅತ್ಯಂತ ಅನುಕೂಲಕರ ಎಂಬ ನಂಬಿಕೆಯಿಂದ ಕೂಡ ನೀತಿಯನ್ನು ದೂರಮಾಡುತ್ತದೆ. ಉದಾಹರಣೆಗೆ, ಸಾರ್ವಜನಿಕ ಹಿತಾಸಕ್ತಿ ಪಾಲನೆಯ ಸಾಮರ್ಥ್ಯವು ಕೇಂದ್ರ ಬ್ಯಾಂಕುಗಳ ಜತೆ ಆಗಾಗ್ಗೆ ಸಂಬಂಧಿಸುವ ವಿಶ್ವಾಸಾರ್ಹತೆಯ ಕುರಿತ ಒಂದು ವ್ಯಾಖ್ಯಾನ. ಕೇಂದ್ರ ಬ್ಯಾಂಕ್ ತನ್ನ ವಾಗ್ದಾನಗಳನ್ನು ಎಷ್ಟು ನಂಬಿಕಾರ್ಹತೆಯಿಂದ ಉಳಿಸಿಕೊಳ್ಳುತ್ತದೆನ್ನುವುದು ಕೂಡ ಸಾಮಾನ್ಯ ವ್ಯಾಖ್ಯೆಯಾಗಿದೆ. ಕೇಂದ್ರ ಬ್ಯಾಂಕ್ ಸಾರ್ವಜನಿಕರಿಗೆ ಸುಳ್ಳು ನುಡಿಯಬಾರದೆಂದು ಪ್ರತಿಯೊಬ್ಬರೂ ಬಹುತೇಕ ಒಪ್ಪುತ್ತಾರೆ. ಆದರೆ ಸಾರ್ವಜನಿಕ ಹಿತಾಸಕ್ತಿ ರಕ್ಷಣೆಗೆ ಅತ್ಯುತ್ತಮವಾಗಿ ಕೇಂದ್ರ ಬ್ಯಾಂಕ್ ಹೇಗೆ ಸೇವೆ ಸಲ್ಲಿಸಬಹುದೆಂಬ ಬಗ್ಗೆ ವ್ಯಾಪಕ ಭಿನ್ನಾಭಿಪ್ರಾಯವಿದೆ. ಆದ್ದರಿಂದ ವ್ಯಾಖ್ಯೆಯ ಕೊರತೆಯಿಂದ ಜನರು ವಿಶ್ವಾಸಾರ್ಹತೆಯ ಒಂದು ನಿರ್ದಿಷ್ಟ ನೀತಿಯನ್ನು ಬೆಂಬಲಿಸುತ್ತಿರುವುದಾಗಿ ನಂಬಿರುತ್ತಾರೆ. ವಾಸ್ತವವಾಗಿ ಅವರು ಇನ್ನೊಂದು ನೀತಿಯನ್ನು ಬೆಂಬಲಿಸಿರುತ್ತಾರೆ.[೩]
ವಿತ್ತೀಯ ನೀತಿಯ ಇತಿಹಾಸ
ಬದಲಾಯಿಸಿವಿತ್ತೀಯ ನೀತಿಯು ಮುಖ್ಯವಾಗಿ ಬಡ್ಡಿದರ ಮತ್ತು ಸಾಲಕ್ಕೆ ಸಂಬಂಧಿಸಿದೆ. ಅನೇಕ ಶತಮಾನಗಳವರೆಗೆ, ಎರಡು ಸ್ವರೂಪಗಳ ವಿತ್ತೀಯ ನೀತಿ ಜಾರಿಯಲ್ಲಿತ್ತು.(i) ನಾಣ್ಯಗಳ ಬಗ್ಗೆ ನಿರ್ಧಾರಗಳು, (ii)ಕಾಗದದ ಹಣ ಮುದ್ರಿಸುವ ನಿರ್ಧಾರಗಳು ಮತ್ತು ಸಾಲದ ಸೃಷ್ಟಿ. ವಿತ್ತೀಯ ಪ್ರಾಧಿಕಾರದ ಭಾಗವೆಂದು ಈಗ ಭಾವಿಸಿದ ಬಡ್ಡಿ ದರಗಳು ಆ ಸಂದರ್ಭದಲ್ಲಿ ವಿತ್ತೀಯ ನೀತಿಯ ಇತರೆ ಸ್ವರೂಪಗಳ ಜತೆ ಸಾಮಾನ್ಯವಾಗಿ ಸಮನ್ವಯತೆ ಹೊಂದಿರಲಿಲ್ಲ. ವಿತ್ತೀಯ ನೀತಿಯನ್ನು ಕಾರ್ಯಾಂಗದ ನಿರ್ಧಾರವೆಂದು ಕಾಣಲಾಗುತ್ತಿತ್ತು. ನಾಣ್ಯವನ್ನು ಟಂಕಿಸುವ ಅಧಿಕಾರ ಅಥವಾ ನಾಣ್ಯಟಂಕನ ಲಾಭ ಗಳಿಸುವ ಪ್ರಾಧಿಕಾರದ ಕೈಯಲ್ಲಿ ಸಾಮಾನ್ಯವಾಗಿ ವಿತ್ತೀಯ ನೀತಿ ಇರುತ್ತಿತ್ತು. ಹೆಚ್ಚು ವ್ಯಾಪಾರ ಜಾಲಗಳ ಬರುವಿಕೆಯೊಂದಿಗೆ,ಚಿನ್ನ ಮತ್ತು ಬೆಳ್ಳಿಯ ನಡುವೆ ಹಾಗೂ ಸ್ಥಳೀಯ ಕರೆನ್ಸಿ ಮತ್ತು ವಿದೇಶಿ ಕರೆನ್ಸಿಗಳ ನಡುವೆ ದರನಿಗದಿ ಮಾಡುವ ಸಾಮರ್ಥ್ಯ ಲಭಿಸಿತು. ಈ ಅಧಿಕೃತ ಬೆಲೆಯು ಮಾರುಕಟ್ಟೆ ದರಕ್ಕಿಂತ ವ್ಯತ್ಯಾಸ ಹೊಂದಿದ್ದರೂ ಕಾನೂನಿನ ಮೂಲಕ ಜಾರಿಗೆ ತರುವುದು ಸಾಧ್ಯವಾಗಿತ್ತು.
ಬ್ಯಾಂಕ್ ಆಫ್ ಇಂಗ್ಲೆಂಡ್ 1694ರಲ್ಲಿ ಸ್ಥಾಪನೆ ಆಗುವುದರೊಂದಿಗೆ, ನೋಟುಗಳನ್ನು ಚಿನ್ನದ ಬೆಂಬಲದೊಂದಿಗೆ ಮುದ್ರಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿತು.ಹೀಗಾಗಿ ಕಾರ್ಯಾಂಗದಿಂದ ಪ್ರತ್ಯೇಕವಾದ ವಿತ್ತೀಯ ನೀತಿಯ ಕಲ್ಪನೆ ಕುಡಿಯೊಡೆಯಲು ಪ್ರಾರಂಭಿಸಿತು.[೪]
ನಾಣ್ಯಗಳ ಮೌಲ್ಯವನ್ನು ಕಾಯ್ದುಕೊಳ್ಳುವುದು, ನಾಣ್ಯ ರೂಪದ ಹಣಕ್ಕೆ ಸಮಾನವಾಗಿ ಮಾರಾಟವಾಗುವ ನೋಟುಗಳ ಮುದ್ರಣ ಹಾಗೂ ನಾಣ್ಯಗಳು ಚಲಾವಣೆಯಿಂದ ನಿರ್ಗಮಿಸದಂತೆ ತಪ್ಪಿಸುವುದು ವಿತ್ತೀಯ ನೀತಿಯ ಗುರಿಯಾಗಿತ್ತು. ಕೈಗಾರೀಕೃತ ರಾಷ್ಟ್ರಗಳು ಕೇಂದ್ರ ಬ್ಯಾಂಕುಗಳನ್ನು ಸ್ಥಾಪಿಸಿದ ಆಗಿನ ಉದ್ದೇಶವು ಚಿನ್ನದ ಪ್ರಮಿತಿಗೆ ರಾಷ್ಟ್ರದ ಕರೆನ್ಸಿ ನಿಗದಿಯನ್ನು ಕಾಯ್ದುಕೊಳ್ಳುವ ಇಚ್ಛೆ ಮತ್ತು ಚಿನ್ನ ಬೆಂಬಲಿತ ಕರೆನ್ಸಿಗಳ ಜತೆ ಉಪಕ್ರಮಗಳೊಂದಿಗೆ ವ್ಯಾಪಾರ ಮಾಡುವುದಕ್ಕೆ ಸಂಬಂಧಿಸಿತ್ತು. ಈ ಗುರಿಯ ಸಾಧನೆಗೆ, ಕೇಂದ್ರ ಬ್ಯಾಂಕುಗಳು ಚಿನ್ನದ ಪ್ರಮಿತಿಯ ಭಾಗವಾಗಿ, ಸ್ವಂತ ಸಾಲದಾರರಿಗೆ ಮತ್ತು ದ್ರವ್ಯತೆ ಅಗತ್ಯವಾದ ಇತರೆ ಬ್ಯಾಂಕುಗಳಿಗೆ ಬಡ್ಡಿದರಗಳನ್ನು ವಿಧಿಸಲು ಪ್ರಾರಂಭಿಸಿತು. ಚಿನ್ನದ ಪ್ರಮಿತಿಯ ನಿರ್ವಹಣೆಗೆ ಬಹುತೇಕ ಬಡ್ಡಿದರಗಳನ್ನು ಪ್ರತಿತಿಂಗಳೂ ಹೊಂದಾಣಿಕೆ ಮಾಡುವುದು ಅಗತ್ಯವಾಗಿತ್ತು.
ಕೈಗಾರೀಕೃತ ರಾಷ್ಟ್ರಗಳು 1870-1920ರ ಅವಧಿಯಲ್ಲಿ ಕೇಂದ್ರ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಿದವು. ಅವುಗಳಲ್ಲಿ ಕೊನೆಯದು 1913ರಲ್ಲಿ ಸ್ಥಾಪಿತವಾದ ಫೆಡರಲ್ ರಿಸರ್ವ್.[೫] ಈ ಹಂತದಲ್ಲಿ "ಅಂತಿಮ ಋಣದಾತ"ನೆಂಬ ಕೇಂದ್ರ ಬ್ಯಾಂಕ್ ಪಾತ್ರವು ಮನವರಿಕೆಯಾಯಿತು. ಆರ್ಥಿಕತೆಯಲ್ಲಿ ಗರಿಷ್ಠ ಕ್ರಾಂತಿಯ ಕಾರಣದಿಂದ ಇಡೀ ಆರ್ಥಿಕ ವ್ಯವಸ್ಥೆ ಮೇಲೆ ಬಡ್ಡಿದರಗಳು ಸಣ್ಣಭಾಗವಲ್ಲದೇ ಬಹುಮಟ್ಟಿಗೆ ಪ್ರಭಾವ ಬೀರಿತೆಂಬುದು ಹೆಚ್ಚು ಅರಿವಿಗೆ ಬಂತು. ಆರ್ಥಿಕ ವಹಿವಾಟಿನ ಬದಲಾವಣೆ ಆಧಾರದ ಮೇಲೆ ಎಷ್ಟು ಹೆಚ್ಚು ಮಂದಿ ಅಥವಾ ಎಷ್ಟು ಕಡಿಮೆ ಮಂದಿ ನಿರ್ಧಾರ ಕೈಗೊಳ್ಳುತ್ತಾರೆಂಬ ಬಗ್ಗೆ ಇದು ಗಮನ ಸೆಳೆಯಿತು.
ವ್ಯವಹಾರ ಆವರ್ತವೊಂದಿದ್ದು, ಆ ಆವರ್ತದ ಜತೆ ಬಡ್ಡಿದರಗಳ ಸಂಬಂಧದ ಬಗ್ಗೆ ಆರ್ಥಿಕ ಸಿದ್ಧಾಂತಕ್ಕೆ ಕ್ರಮೇಣ ಅರಿವಾಗುತ್ತಿದೆ ಎನ್ನುವುದು ಸ್ಪಷ್ಟವಾಯಿತು. (ಆದಾಗ್ಯೂ,ಬಡ್ಡಿದರದ ಮೇಲೆ ಪ್ರಭಾವ ಬೀರುವ ಮೂಲಕ ಇಡೀ ಆರ್ಥಿಕತೆಯನ್ನು ನಡೆಸುವುದು ತೈಲ ಟ್ಯಾಂಕರನ್ನು ಸಣ್ಣದೋಣಿಯ ಹುಟ್ಟಿನಿಂದ ನಡೆಸಿದಂತೆ ಎಂದು ಆಗಾಗ್ಗೆ ಬಣ್ಣಿಸಲಾಗಿದೆ). ವಿಸ್ತರಣೆ ಮತ್ತು ಪರಿಮಿತ ನೀತಿಗಳ ಕೇಂದ್ರ ಬ್ಯಾಂಕ್ ನೀತಿಗಳಿಂದ ಬಹುಶಃ ಆರ್ಥಿಕ ಆವರ್ತ ಸಂಭವಿಸುತ್ತಿರಬಹುದೆಂದು ಕ್ಯಾಸ್ ಬಿಸಿನೆಸ್ ಸ್ಕೂಲ್ ಸಂಶೋಧನೆಯು ಸಲಹೆ ಮಾಡಿದೆ; ಕೇಂದ್ರ ಬ್ಯಾಂಕ್ ನೀತಿಗಳು ಅಸ್ತಿತ್ವಕ್ಕೆ ಬರುವುದಕ್ಕೆ ಮುಂಚೆ ಆರ್ಥಿಕತೆಯಲ್ಲಿ ಆವರ್ತಗಳ ಕೊರತೆಯನ್ನು ಗಮನಿಸುವ ಮೂಲಕ ಪುರಾವೆಗಳು ಸಿಕ್ಕಿದವು.
ವಿತ್ತೀಯ ನಿಯಂತ್ರಣವಾದಿ ಬೃಹದರ್ಥ ಶಾಸ್ತ್ರಜ್ಞರು ಕೆಳಮಟ್ಟದಲ್ಲಿ, ಸ್ಥಿರದರದಲ್ಲಿ ವಿತ್ತೀಯ ಪೂರೈಕೆಯನ್ನು ಹೆಚ್ಚಿಸುವುದಕ್ಕೆ ಕೆಲವು ಬಾರಿ ಸಲಹೆ ಮಾಡಿದ್ದರು. ಕಡಿಮೆ ಹಣದುಬ್ಬರ ಮತ್ತು ಸ್ಥಿರ ಉತ್ಪಾದನೆ ಬೆಳವಣಿಗೆ ಕಾಯ್ದುಕೊಳ್ಳಲು ಅದನ್ನು ಅತ್ಯುತ್ತಮ ಮಾರ್ಗವೆಂದು ಅವರು ಭಾವಿಸಿದ್ದರು.[೬] ಆದಾಗ್ಯೂ,U.S. ಫೆಡರಲ್ ರಿಸರ್ವ್ ಅಧ್ಯಕ್ಷ ಪಾಲ್ ವೋಲ್ಕರ್ 1979 ಅಕ್ಟೋಬರ್‌ನಲ್ಲಿ ಈ ನೀತಿಯನ್ನು ಪ್ರಯತ್ನಿಸಿದಾಗ ಆರ್ಥಿಕತೆಯಲ್ಲಿ ಒಟ್ಟು ವಿತ್ತೀಯ ಮೊತ್ತ ಮತ್ತು ಇತರೆ ಬೃಹತ್ ಆರ್ಥಿಕತೆಯ ವ್ಯತ್ಯಾಸಗಳ ನಡುವೆ ಅತಿಯಾದ ಅಸ್ಥಿರ ಸಂಬಂಧದ ಕಾರಣದಿಂದ ಅದು ಅಪ್ರಾಯೋಗಿಕವೆಂದು ಕಂಡುಬಂತು.[೭] ಹಣದ ಪೂರೈಕೆ ಮೇಲೆ ಗುರಿಯಿರಿಸುವುದು ತಾವು ಆಶಿಸಿದ್ದಕ್ಕಿಂತ ಕಡಿಮೆ ಯಶಸ್ಸು ಪಡೆದಿದೆ ಎಂದು ಮಿಲ್ಟನ್ ಫ್ರೈಡ್‌ಮ್ಯಾನ್ 2003ರ ಜೂನ್ 7ರಂದು ಫೈನಾನ್ಸಿಯಲ್ ಟೈಮ್ಸ್ ಜತೆ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ.[೮][೯][೧೦] ಆದ್ದರಿಂದ ವಿತ್ತೀಯ ನಿರ್ಧಾರಗಳು ಇಂದು ವಿಶಾಲ ವ್ಯಾಪ್ತಿಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುತ್ತವೆ. ಅವು ಯಾವುದೆಂದರೆ:
- ಅಲ್ಪಾವಧಿ ಬಡ್ಡಿದರಗಳು;
- ದೀರ್ಘಾವಧಿ ಬಡ್ಡಿದರಗಳು;
- ಆರ್ಥಿಕತೆ ಮೂಲಕ ಹಣದ ಚಲಾವಣೆ ವೇಗ;
- ವಿನಿಮಯ ದರಗಳು;
- ಸಾಲದ ಗುಣಮಟ್ಟ;
- ಸಾಲಪತ್ರಗಳು ಮತ್ತು ಷೇರುಗಳು (ಕಾರ್ಪೊರೇಟ್ ಮಾಲೀಕತ್ವ ಮತ್ತು ಋಣ);
- ಸರ್ಕಾರ ವರ್ಸಸ್ ಖಾಸಗಿ ವಲಯ ವೆಚ್ಚ/ಉಳಿತಾಯಗಳು;
- ದೊಡ್ಡ ಪ್ರಮಾಣದಲ್ಲಿ ಅಂತಾರಾಷ್ಟ್ರೀಯ ಬಂಡವಾಳ ಹರಿವುಗಳು;
- ವಿತ್ತೀಯ ಜನ್ಯಗಳಾದ ಆಯ್ಕೆ, ತೆರಿಗೆಯ ಮುನ್ನೋಟ, ಭವಿಷ್ಯದ ಗುತ್ತಿಗೆಗಳು ಮುಂತಾದವು.
ಚಿನ್ನದ ಪ್ರಮಿತಿಗೆ ಹಿಂದಿರುಗಬೇಕೆಂದು ಸಣ್ಣ ಗುಂಪಿಗೆ ಸೇರಿದ ಜನರು ಸಲಹೆ ಮಾಡಿದರು.(ಡಾಲರ್‌ಗೆ ಅಧಿಕೃತ ಕರೆನ್ಸಿ ಸ್ಥಾನಮಾನ ತೆಗೆಯುವುದು ಮತ್ತು ಫೆಡರಲ್ ರಿಸರ್ವ್ ಬ್ಯಾಂಕ್ ಕೂಡ) ವಿತ್ತೀಯ ನೀತಿ ಅಪಾಯಗಳಿಂದ ತುಂಬಿದ್ದು, ವಿತ್ತೀಯ ನೀತಿ ವಿಫಲವಾದರೆ ಈ ಅಪಾಯಗಳಿಂದ ಜನಸಮುದಾಯಕ್ಕೆ ತೀಕ್ಷ್ಣ ಹಾನಿ ಉಂಟುಮಾಡುತ್ತದೆನ್ನುವುದು ಅವರ ಮೂಲಭೂತ ವಾದವಾಗಿತ್ತು. ಪ್ರಸಕ್ತ ವಿತ್ತೀಯ ನೀತಿ ಬಗ್ಗೆ ಇತರರು ಇನ್ನೊಂದು ಸಮಸ್ಯೆಯನ್ನು ಕಂಡುಕೊಂಡರು. ನಮ್ಮ ಹಣದ ಮೌಲ್ಯವನ್ನು ವ್ಯಾಖ್ಯಾನಿಸುವ ಬೌತಿಕತೆಯಿಲ್ಲ ಎನ್ನುವುದು ಅವರಿಗೆ ಸಮಸ್ಯೆಯಾಗಿರಲಿಲ್ಲ. ಆ ಹಣವನ್ನು ಸಾಲದ ಬದಲಿಗೆ ಗ್ರಾಹಕನಿಗೆ ಋಣವಾಗಿ ಆಂಶಿಕ ಮೀಸಲು ಎರವಲು ನೀಡುವುದರಿಂದ ಸಣ್ಣ ಭಾಗದ ಸಮಾಜ ಹೊರತುಪಡಿಸಿ ಎಲ್ಲರೂ(ಎಲ್ಲ ಸರ್ಕಾರಗಳೂ ಸೇರಿದಂತೆ) ನಿರಂತರ ಋಣದಲ್ಲಿ ಮುಳುಗುತ್ತವೆ ಎನ್ನುವುದು ಅವರ ಸಮಸ್ಯೆಯಾಗಿತ್ತು.
ವಾಸ್ತವವಾಗಿ ಅನೇಕ ಅರ್ಥಶಾಸ್ತ್ರಜ್ಞರು ಚಿನ್ನದ ಪ್ರಮಿತಿಗೆ ಹಿಂದಿರುಗುವುದಕ್ಕೆ ಅಸಮ್ಮತಿ ವ್ಯಕ್ತಪಡಿಸಿದರು. ಹಾಗೆ ಮಾಡುವುದರಿಂದ ತೀಕ್ಷ್ಣವಾಗಿ ಹಣದ ಪೂರೈಕೆಯನ್ನು ಸೀಮಿತಗೊಳಿಸುತ್ತದೆ ಮತ್ತು ವಿತ್ತೀಯ ನೀತಿಯಲ್ಲಿ 100 ವರ್ಷಗಳ ಪ್ರಗತಿಯನ್ನು ಅಳಿಸಿಹಾಕುತ್ತದೆಂದು ಅವರು ವಾದಿಸಿದರು. ಕೆಲವು ವೇಳೆ ಜಟಿಲ ಹಣಕಾಸು ವಹಿವಾಟುಗಳು ದೊಡ್ಡ ವ್ಯವಹಾರವನ್ನು(ವಿಶೇಷವಾಗಿ ಅಂತಾರಾಷ್ಟ್ರೀಯ ವ್ಯವಹಾರ)ಸುಲಭ ಮತ್ತು ಸುರಕ್ಷಿತಗೊಳಿಸಿದರೆ ಚಿನ್ನದ ಪ್ರಮಿತಿಯಿಂದ ವ್ಯವಹಾರ ಇನ್ನಷ್ಟು ಕಠಿಣವಾಗಬಹುದು ಅಥವಾ ಅಸಾಧ್ಯವಾಗಿಸಬಹುದು ಎಂದು ವಾದಿಸಿದರು. ಇದಲ್ಲದೇ, ಉಸ್ತುವಾರಿ ಮತ್ತು ಅಪಾಯವನ್ನು ಬಳಸಿಕೊಳ್ಳುವಲ್ಲಿ ಪರಿಣತಿ ಪಡೆದ ಜನರಿಗೆ/ಕಂಪೆನಿಗಳಿಗೆ ಅಪಾಯವನ್ನು ಹಸ್ತಾಂತರಿಸುವುದರಿಂದ, ಯಾವುದೇ ಹಣಕಾಸಿನ ಅಪಾಯವನ್ನು ಗೊತ್ತಿರುವ ಡಾಲರ್ ಮೊತ್ತಕ್ಕೆ ಪರಿವರ್ತಿಸಬಹುದು. ಆದ್ದರಿಂದ ವ್ಯವಹಾರದಲ್ಲಿ ಒಳಗೊಂಡ ಎಲ್ಲರಿಗೂ ಅದರ ಭವಿಷ್ಯ ತಿಳಿಯುತ್ತದೆ ಮತ್ತು ಹೆಚ್ಚು ಲಾಭದಾಯಕವಾಗಿರುತ್ತದೆ.
ಕೇಂದ್ರ ಬ್ಯಾಂಕಿಂಗ್‌ನಲ್ಲಿ ಪ್ರವೃತ್ತಿಗಳು
ಬದಲಾಯಿಸಿಕೇಂದ್ರ ಬ್ಯಾಂಕ್ ವಿತ್ತೀಯ ನೆಲೆಗಟ್ಟಿನ ವಿಸ್ತರಣೆ ಅಥವಾ ಪರಿಮಿತಿಗೆ ಒಳಪಡಿಸುವ ಮೂಲಕ ಬಡ್ಡಿದರಗಳ ಮೇಲೆ ಪ್ರಭಾವ ಬೀರುತ್ತದೆ. ವಿತ್ತೀಯ ನೆಲೆಗಟ್ಟು ಚಲಾವಣೆಯಲ್ಲಿರುವ ಕರೆನ್ಸಿ ಮತ್ತು ಕೇಂದ್ರ ಬ್ಯಾಂಕ್‌ನಲ್ಲಿ ಠೇವಣಿಯಾಗಿಟ್ಟಿರುವ ಬ್ಯಾಂಕ್ ಮೀಸಲು ಹಣ ಹೊಂದಿವೆ. ಮುಕ್ತ ಪೇಟೆ ಕಾರ್ಯಾಚರಣೆಗಳು ಅಥವಾ ಸರ್ಕಾರದ ಹಳೆಯ ಸಾಲದ ಮಾರಾಟ ಅಥವಾ ಖರೀದಿ, ಅಥವಾ ಮೀಸಲು ಅಗತ್ಯಗಳ ಬದಲಾವಣೆ ಮೂಲಕ ಕೇಂದ್ರ ಬ್ಯಾಂಕ್ ವಿತ್ತೀಯ ನೆಲೆಗಟ್ಟಿನ ಮೇಲೆ ಪ್ರಭಾವ ಬೀರುವ ಮುಖ್ಯ ದಾರಿಯಾಗಿದೆ. ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಕುಂಠಿತಗೊಳಿಸಲು ಬಯಸಿದ್ದರೆ, ಅದು ಸರ್ಕಾರದ ಋಣಪತ್ರಗಳನ್ನು ಖರೀದಿಸುವ ಮೂಲಕ ಚಲಾವಣೆಯಲ್ಲಿರುವ ನಗದಿನ ಮೊತ್ತವನ್ನು ಹೆಚ್ಚಿಸುತ್ತದೆ ಅಥವಾ ಬ್ಯಾಂಕುಗಳ ಮೀಸಲು ಖಾತೆಗಳಿಗೆ ಸಾಲ ನೀಡುತ್ತವೆ. ಪರ್ಯಾಯವಾಗಿ ರಿಯಾಯಿತಿಗಳು ಅಥವಾ ಓವರ್‌ಡ್ರಾಫ್ಟ್(ಕೇಂದ್ರ ಬ್ಯಾಂಕ್ ನಮೂದಿಸಿದ ಸೂಕ್ತ ಜಾಮೀನಿನ ಮೇಲೆ ಬ್ಯಾಂಕುಗಳಿಗೆ ಸಾಲ)ಮೇಲೆ ಬಡ್ಡಿದರಗಳನ್ನು ಅದು ತಗ್ಗಿಸಬಹುದು.
ಅಂತಹ ವ್ಯವಹಾರಗಳ ಮೇಲೆ ಬಡ್ಡಿದರ ಸಾಕಷ್ಟು ಕಡಿಮೆಯಿದ್ದರೆ,ಮೀಸಲು ಅಗತ್ಯಗಳನ್ನು ಪೂರೈಸಲು ವಾಣಿಜ್ಯ ಬ್ಯಾಂಕುಗಳು ಕೇಂದ್ರ ಬ್ಯಾಂಕ್‌ನಿಂದ ಸಾಲ ಪಡೆಯಬಹುದು ಮತ್ತು ಹೆಚ್ಚುವರಿ ದ್ರವ್ಯತೆಯನ್ನು ತಮ್ಮ ಆಯವ್ಯಯ ಶಿಲ್ಕನ್ನು ವಿಸ್ತರಿಸಲು ಬಳಸುವ ಮೂಲಕ ಆರ್ಥಿಕತೆಗೆ ಸಾಲದ ಲಭ್ಯತೆಯನ್ನು ಹೆಚ್ಚಿಸುತ್ತದೆ. ಮೀಸಲು ಅಗತ್ಯಗಳನ್ನು ತಗ್ಗಿಸುವುದರಿಂದ ಇದೇ ರೀತಿಯ ಪರಿಣಾಮ ಬೀರುತ್ತದೆ.ಸಾಲಗಳ ವಿತರಣೆ ಹೆಚ್ಚಿಸಲು ಅಥವಾ ಲಾಭದಾಯಕ ಆಸ್ತಿಗಳ ಖರೀದಿ ಸಲುವಾಗಿ ಬ್ಯಾಂಕುಗಳಿಗೆ ನಿಧಿ ಪೂರೈಸುತ್ತದೆ.
ವಿನಿಮಯ ದರ ಬದಲಾಗುವ ಸ್ಥಿತಿಯಲ್ಲಿದ್ದರೆ ಕೇಂದ್ರ ಬ್ಯಾಂಕ್‌ಗೆ ನಿಜವಾದ ಸ್ವತಂತ್ರ ವಿತ್ತೀಯ ನೀತಿ ನಿರ್ವಹಣೆ ಸಾಧ್ಯವಾಗುತ್ತದೆ.[೧೧] ವಿನಿಮಯ ದರ ಸಮರೂಪವಾಗಿದ್ದರೆ ಅಥವಾ ಯಾವುದೇ ರೀತಿಯಲ್ಲಿ ನಿರ್ವಹಿಸಲ್ಪಟ್ಟರೆ,ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಬೇಕು ಅಥವಾ ಮಾರಬೇಕಾಗುತ್ತದೆ. ವಿದೇಶಿ ವಿನಿಮಯದಲ್ಲಿ ಈ ವಹಿವಾಟುಗಳಿಂದ ವಿತ್ತೀಯ ನೆಲೆಗಟ್ಟಿನ ಮೇಲೆ ಪ್ರಭಾವ ಬೀರಿ ಮುಕ್ತ ಪೇಟೆ ಖರೀದಿಗಳು ಮತ್ತು ಸರ್ಕಾರಿ ಋಣಪತ್ರಗಳ ಮಾರಾಟಗಳಿಗೆ ದಾರಿಕಲ್ಪಿಸುತ್ತದೆ; ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಿದರೆ, ವಿತ್ತೀಯ ನೆಲೆಗಟ್ಟು ವಿಸ್ತರಣೆಯಾಗುತ್ತದೆ ಮತ್ತು ವಿತ್ತೀಯ ನೆಲೆಗಟ್ಟು ವಿಸ್ತರಣೆಯಾದರೆ ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸುತ್ತದೆ. ಆದರೆ ಶುದ್ಧ ಬದಲಾಗುವ ವಿನಿಮಯ ದರದ ಪ್ರಕರಣದಲ್ಲಿ ಕೂಡ,ಬಂಡವಾಳ ಚಲನಶೀಲವಾಗಿರುವ ಜಗತ್ತಿನಲ್ಲಿ ಕೇಂದ್ರ ಬ್ಯಾಂಕುಗಳು ಮತ್ತು ವಿತ್ತೀಯ ಅಧಿಕಾರವರ್ಗ "ಗಾಳಿ ಬಂದ ಕಡೆ ವಾಲುವುದು ಸಾಧ್ಯ".
ಇದೇ ಪ್ರಕಾರವಾಗಿ,ವಿನಿಮಯ ದರದ ನಿರ್ವಹಣೆಯು ದೇಶೀಯ ವಿತ್ತೀಯ ಪರಿಸ್ಥಿತಿಗಳ ಮೇಲೆ ಪ್ರಭಾವ ಬೀರುತ್ತದೆ. ಕೇಂದ್ರ ಬ್ಯಾಂಕ್ ತನ್ನ ವಿತ್ತೀಯ ನೀತಿಯನ್ನು ಕಾಯ್ದುಕೊಳ್ಳಲು,ವಿದೇಶಿ ವಿನಿಮಯ ನಿರ್ವಹಣೆಗಳನ್ನು ಹದ್ದುಬಸ್ತಿಗೆ ತರಬೇಕು ಅಥವಾ ವ್ಯತಿರಿಕ್ತ ಪ್ರಭಾವ ತಗ್ಗಿಸಬೇಕು. ಉದಾಹರಣೆಗೆ, ಕೇಂದ್ರ ಬ್ಯಾಂಕ್ ವಿದೇಶಿ ವಿನಿಮಯ ಖರೀದಿಸಿದರೆ(ವಿದೇಶಿ ವಿನಿಮಯ ಮೌಲ್ಯಕ್ಕೆ ಪ್ರತಿಯಾಗಿ)ಮೂಲ ಹಣವು ವರ್ಧಿಸುತ್ತದೆ. ಆದ್ದರಿಂದ ಆ ಹೆಚ್ಚಳದ ಪ್ರಭಾವ ತಗ್ಗಿಸಲು ಕೇಂದ್ರ ಬ್ಯಾಂಕ್ ಸರ್ಕಾರದ ಋಣಪತ್ರಗಳನ್ನು ಮಾರಿ ವಿತ್ತೀಯ ನೆಲೆಗಟ್ಟನ್ನು ಸಮಾನ ಮೊತ್ತದಲ್ಲಿ ಇರಿಸಬೇಕು. ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ಪ್ರಕ್ಷುಬ್ದ ಚಟುವಟಿಕೆಯಿಂದ ವಿದೇಶಿ ವಿನಿಮಯ ಕೂಡ ನಿರ್ವಹಿಸುವ ಕೇಂದ್ರ ಬ್ಯಾಂಕ್ ದೇಶೀಯ ವಿನಿಮಯ ನೀತಿಯ ಮೇಲೆ ನಿಯಂತ್ರಣ ಕಳೆದುಕೊಳ್ಳಬಹುದು.
ಅನೇಕ ಮಂದಿ ಅರ್ಥಶಾಸ್ತ್ರಜ್ಞರು 1980ರ ದಶಕದಲ್ಲಿ ಗರಿಷ್ಠ ವಿತ್ತೀಯ ನೀತಿಯ ಖಾತರಿಗೆ ರಾಷ್ಟ್ರದ ಕೇಂದ್ರ ಬ್ಯಾಂಕ್ ಉಳಿದ ಸರ್ಕಾರದ ಕಾರ್ಯಾಂಗದಿಂದ ಪ್ರತ್ಯೇಕವಾಗಿ ವ್ಯವಹರಿಸುವುದು ಉತ್ತಮ ಮಾರ್ಗವೆಂದು ನಂಬಿದ್ದರು. ಸ್ವತಂತ್ರವಾಗಿ ಕಾರ್ಯನಿರ್ವಹಣೆ ಮಾಡದ ಕೆಲವು ಕೇಂದ್ರಬ್ಯಾಂಕುಗಳು ಸ್ವಾತಂತ್ರ್ಯ ಗಳಿಸಲು ಆರಂಭಿಸಿದವು. ಪ್ರಸಕ್ತ ಸರ್ಕಾರದ ಮರುಆಯ್ಕೆ ಸೇರಿದಂತೆ ರಾಜಕೀಯ ಗುರಿಗಳ ಮೇಲೆ ಪ್ರಭಾವ ಬೀರಲು ವಿತ್ತೀಯ ನೀತಿಗಳ ಸಾಧನಗಳನ್ನು ದುರ್ಬಳಕೆ ಮಾಡುವುದನ್ನು ತಪ್ಪಿಸುವುದು ಇದರ ಉದ್ದೇಶವಾಗಿತ್ತು.
ವಿತ್ತೀಯನೀತಿ ನಿರ್ವಹಿಸುವ ಸದಸ್ಯರು ಸುದೀರ್ಘ,ಸ್ಥಿರ ಕಾಲಾವಧಿಯನ್ನು ಹೊಂದಿರಬೇಕೆನ್ನುವುದು ಸ್ವಾತಂತ್ರ್ಯದ ಸಾಂಕೇತಿಕ ಅರ್ಥ. ಇದು ಒಂದು ರೀತಿಯ ಸೀಮಿತ ಸ್ವಾತಂತ್ರ್ಯವೆನ್ನುವುದು ಸುಸ್ಪಷ್ಟ.
ವಿತ್ತೀಯ ನೀತಿಯ ಪ್ರಕ್ರಿಯೆಯಲ್ಲದಿದ್ದರೂ ಫಲಿತಾಂಶಗಳನ್ನು ಹೆಚ್ಚು ಪಾರದರ್ಶಕವಾಗಿಸಲು 1990ರ ದಶಕದಲ್ಲಿ, ಔಪಚಾರಿಕ ಸಾರ್ವಜನಿಕ ಹಣದುಬ್ಬರ ಗುರಿಗಳನ್ನು ಕೇಂದ್ರ ಬ್ಯಾಂಕುಗಳು ಅಳವಡಿಸಿಕೊಂಡವು. ಬೇರೆ ರೀತಿಯಲ್ಲಿ ಹೇಳುವುದಾದರೆ, ಗೊತ್ತಾದ ವರ್ಷದಲ್ಲಿ ಕೇಂದ್ರ ಬ್ಯಾಂಕ್ 2% ಹಣದುಬ್ಬರದ ಗುರಿಯನ್ನು ಹೊಂದಿದ್ದಾಗ, ಹಣದುಬ್ಬರ 5%ಗೆ ತಿರುಗಿದರೆ, ಕೇಂದ್ರ ಬ್ಯಾಂಕ್ ಅದಕ್ಕೆ ವಿವರಣೆಯನ್ನು ಸಾಂಕೇತಿಕವಾಗಿ ನೀಡಬೇಕಾಗುತ್ತದೆ.
ಬ್ಯಾಂಕ್ ಆಫ್ ಇಂಗ್ಲೆಂಡ್ ಇವೆರಡೂ ಪ್ರವತ್ತಿಗಳಿಗೆ ನಿದರ್ಶನವಾಗಿದೆ. ಬ್ಯಾಂಕ್ ಆಫ್ ಇಂಗ್ಲೆಂಡ್ ಕಾಯ್ದೆ 1998ರ ಮೂಲಕ ಸರ್ಕಾರದಿಂದ ಸ್ವತಂತ್ರವಾಗಿ 2.5% RPI (ಈಗ 2% of CPI)ಅಳವಡಿಸಿಕೊಂಡಿತು.
ವಿತ್ತೀಯ ನೀತಿ ವ್ಯವಹಾರ ಆವರ್ತಗಳನ್ನು ಸುಗಮಗೊಳಿಸುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಚರ್ಚೆ ತೀವ್ರಗೊಂಡಿದೆ. ಕೀನ್ಸಿಯನ್ ಆರ್ಥಿಕತೆಯ ಮುಖ್ಯ ಕಲ್ಪನೆ ಕೇಂದ್ರ ಬ್ಯಾಂಕ್ ಅಲ್ಪಾವಧಿಯಲ್ಲಿ ಒಟ್ಟು ಬೇಡಿಕೆಯನ್ನು ಉತ್ತೇಜಿಸಬಹುದೆನ್ನುವುದು. ಏಕೆಂದರೆ,ಅಲ್ಪಾವಧಿಯಲ್ಲಿ ಆರ್ಥಿಕತೆಯಲ್ಲಿ ಗಣನೀಯ ಸಂಖ್ಯೆಯ ದರಗಳು ಸ್ಥಿರವಾಗಿರುತ್ತದೆ ಮತ್ತು ಸಂಸ್ಥೆಗಳು ಬೇಡಿಕೆಯಿರುವಷ್ಟು ಸರಕುಗಳನ್ನು ಉತ್ಪಾದಿಸಿ, ಸೇವೆಗಳನ್ನು ನೀಡಬಹುದು.(ಆದಾಗ್ಯೂ, ದೀರ್ಘಾವಧಿಯಲ್ಲಿನಿಯೋಕ್ಲಾಸಿಕಲ್ ಮಾದರಿಯ ರೀತಿ ಹಣವು ತಟಸ್ಥವಾಗಿರುತ್ತದೆ). ಫ್ರೆಡರಿಕ್ ವಾನ್ ಹಾಯೇಕ್ ಮತ್ತು ಲುಡ್ವಿಗ್ ವಾನ್ ಮಿಸಸ್ ವಾದಗಳು ಸೇರಿರುವ ಆಸ್ಟ್ರಿಯನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕೂಡ ಇದೆ. ಆದರೆ ಈ ವಿಷಯದ ಬಗ್ಗೆ ಬಹುತೇಕ ಅರ್ಥಶಾಸ್ತ್ರಜ್ಞರು ಕೀನ್ಸಿಯನ್ ಅಥವಾ ನಿಯೋಕ್ಲಾಸಿಕಲ್ ವರ್ಗಗಳಿಗೆ ಸೇರಿದ್ದಾರೆ.
ಅಭಿವೃದ್ಧಿಶೀಲ ರಾಷ್ಟ್ರಗಳು
ಬದಲಾಯಿಸಿಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪರಿಣಾಮಕಾರಿ ನಿರ್ವಹಣೆಯ ವಿತ್ತೀಯ ನೀತಿ ಸ್ಥಾಪನೆಯಲ್ಲಿ ಸಮಸ್ಯೆಗಳಿರಬಹುದು. ಕೆಲವೇ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳು ಸರ್ಕಾರಿ ಸಾಲದಲ್ಲಿ ಆಳವಾದ ಮಾರುಕಟ್ಟೆಗಳನ್ನು ಹೊಂದಿರುವುದು ಮುಖ್ಯ ತೊಂದರೆಯಾಗಿದೆ.
ವಿತ್ತೀಯ ನೆಲೆಯನ್ನು ತ್ವರಿತಗತಿಯಲ್ಲಿ ವಿಸ್ತರಿಸುವ ಮೂಲಕ ಹಣದುಬ್ಬರ ತೆರಿಗೆಯನ್ನು ಹೇರುವುದಕ್ಕಾಗಿ ಹಣದ ಬೇಡಿಕೆ ಮತ್ತು ಖಜಾನೆ ಒತ್ತಡವನ್ನು ಮುಂಗಾಣಲು ಇರುವ ಕಷ್ಟಗಳಿಂದ ಈ ವಿಷಯ ಮತ್ತಷ್ಟು ಜಟಿಲಗೊಂಡಿತು. ಸಾಮಾನ್ಯವಾಗಿ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳ ವಿತ್ತೀಯ ನೀತಿ ನಿರ್ವಹಣೆಯಲ್ಲಿ ಕೇಂದ್ರ ಬ್ಯಾಂಕುಗಳು ಕಳಪೆ ದಾಖಲೆಗಳನ್ನು ಹೊಂದಿದ್ದವು. ಅಭಿವೃದ್ಧಿಶೀಲ ರಾಷ್ಟ್ರದಲ್ಲಿ ವಿತ್ತೀಯ ಅಧಿಕಾರವು ಸರ್ಕಾರದಿಂದ ಮುಕ್ತ ನಿರ್ವಹಣೆ ಇರಲಿಲ್ಲ. ಆದ್ದರಿಂದ ಸರ್ಕಾರದ ರಾಜಕೀಯ ಇಚ್ಛೆಗಳಿಂದ ಅಥವಾ ಇತರೆ ವಿತ್ತೀಯೇತರ ಗುರಿಗಳ ಅನುಸರಣೆಯಿಂದ ವಿತ್ತೀಯ ನೀತಿ ಹಿಂಭಾಗದ ಸ್ಥಾನಕ್ಕೆ ಸರಿದವು. ಇದು ಸೇರಿದಂತೆ ಮತ್ತಿತರ ಕಾರಣಗಳಿಂದಾಗಿ,ವಿಶ್ವಾಸಾರ್ಹ ವಿತ್ತೀಯ ನೀತಿ ಸ್ಥಾಪಿಸಲು ಇಚ್ಛಿಸುವ ಅಭಿವೃದ್ಧಿಶೀಲ ರಾಷ್ಟ್ರಗಳು ಕರೆನ್ಸಿ ಮಂಡಳಿ ಸ್ಥಾಪಿಸಬಹುದು ಅಥವಾ ಡಾಲರೀಕರಣ(ದೇಶೀಯ ಹಣಕ್ಕೆ ಬದಲಿಯಾಗಿ ಅಥವಾ ಸಮಾನಾಂತರವಾಗಿ ವಿದೇಶಿ ಕರೆನ್ಸಿ) ಮಾಡಬಹುದು. ಇಂತಹ ಸ್ವರೂಪದ ವಿತ್ತೀಯ ಸಂಸ್ಥೆಗಳು ಹಸ್ತಕ್ಷೇಪದಿಂದ ಸರ್ಕಾರದ ಕೈಗಳನ್ನು ಕಟ್ಟುತ್ತವೆ ಮತ್ತು ಇಂತಹ ನೀತಿಗಳು ನಿರೂಪಕ ರಾಷ್ಟ್ರದ ನೀತಿಯನ್ನು ಬಿಂಬಿಸುತ್ತವೆ.
ಹಣಕಾಸು ಮಾರುಕಟ್ಟೆಗಳ ಉದಾರೀಕರಣ ಮತ್ತು ಸುಧಾರಣೆ ಮಾಡುವ ಇತ್ತೀಚಿನ ಪ್ರಯತ್ನಗಳು(ವಿಶೇಷವಾಗಿ ನೈಜೀರಿಯ ಮತ್ತಿತರ ಕಡೆ ಬ್ಯಾಂಕುಗಳು ಮತ್ತಿತರ ಸಂಸ್ಥೆಗಳ ಮರುಬಂಡವಾಳೀಕರಣ)ಪ್ರಸ್ತುತ ಕೇಂದ್ರ ಬ್ಯಾಂಕುಗಳಿಂದ ವಿತ್ತೀಯ ನೀತಿ ಚೌಕಟ್ಟುಗಳನ್ನು ಅನುಷ್ಠಾನಕ್ಕೆ ತರುವ ಮುಕ್ತ ಅವಕಾಶವನ್ನು ಕ್ರಮೇಣ ಒದಗಿಸುತ್ತದೆ.
ವಿತ್ತೀಯ ನೀತಿಯ ವಿಧಗಳು
ಬದಲಾಯಿಸಿಆಚರಣೆಯಲ್ಲಿರುವ ಎಲ್ಲ ವಿತ್ತೀಯ ನೀತಿ ವಿಧಗಳು ಚಲಾವಣೆಯಲ್ಲಿರುವ ಮೂಲ ಕರೆನ್ಸಿ(M0) ಮೊತ್ತವನ್ನು ನವೀಕರಿಸುವುದನ್ನು ಒಳಗೊಂಡಿದೆ. ಋಣ ಮತ್ತು ಸಾಲ ಸಾಧನಗಳ(ಸರ್ಕಾರದ ವಿತರಣೆ) ಮುಕ್ತ ಮಾರಾಟಗಳು ಮತ್ತು ಖರೀದಿಗಳ ಮೂಲಕ ಮೂಲ ಕರೆನ್ಸಿಯ ದ್ರವ್ಯತೆಯಲ್ಲಿ ಬದಲಾವಣೆ ಮಾಡುವ ಪ್ರಕ್ರಿಯೆಗೆ ಮುಕ್ತ ಪೇಟೆ ಕಾರ್ಯಾಚರಣೆಗಳು ಎಂದು ಕರೆಯಲಾಗುತ್ತದೆ.
ವಿತ್ತೀಯ ಪ್ರಾಧಿಕಾರದಿಂದ ಸ್ಥಿರ ಮಾರುಕಟ್ಟೆ ವಹಿವಾಟುಗಳು ಕರೆನ್ಸಿಯ ಪೂರೈಕೆಯನ್ನು ಬದಲಿಸುತ್ತದೆ ಮತ್ತು ಇದರಿಂದ ಇತರೆ ಮಾರುಕಟ್ಟೆ ವ್ಯತ್ಯಾಸಗಳಾದ ಅಲ್ಪಾವಧಿ ಬಡ್ಡಿದರಗಳು ಮತ್ತು ವಿನಿಮಯ ದರದ ಮೇಲೆ ಪ್ರಭಾವ ಬೀರುತ್ತದೆ.
ವಿತ್ತೀಯ ನೀತಿಯ ವಿವಿಧ ವಿಧಗಳ ನಡುವೆ ಭಿನ್ನತೆಯು ತಮ್ಮ ಗುರಿಗಳನ್ನು ಸಾಧಿಸಲು ವಿತ್ತೀಯ ಪ್ರಾಧಿಕಾರ ಬಳಸುವ ಸಾಧನಗಳ ಸಮೂಹ ಮತ್ತು ಗುರಿ ವ್ಯತ್ಯಾಸಗಳ ಮೇಲೆ ಮುಖ್ಯವಾಗಿ ಅವಲಂಬಿತವಾಗಿದೆ.
ವಿತ್ತೀಯ ನೀತಿ | ಮಾರುಕಟ್ಟೆ ವ್ಯತ್ಯಾಸದ ಗುರಿ | ದೀರ್ಘಾವಧಿಯ ಉದ್ದೇಶ |
---|---|---|
ಹಣದುಬ್ಬರದ ಗುರಿ | ದಿಢೀರ್ ಸಾಲದ ಮೇಲೆ ಬಡ್ಡಿ ದರ | CPIನಲ್ಲಿ ಕೊಟ್ಟ ಬದಲಾವಣೆ ದರ |
ದರ ಮಟ್ಟದ ಗುರಿ | ದಿಢೀರ್ ಸಾಲದ ಮೇಲೆ ಬಡ್ಡಿದರ | ನಿರ್ದಿಷ್ಟ
CPI ಸಂಖ್ಯೆ |
ವಿತ್ತೀಯ ಒಟ್ಟು ಮೊತ್ತ | ಹಣದ ಪೂರೈಕೆಯಲ್ಲಿ ಬೆಳವಣಿಗೆ | CPIನಲ್ಲಿ ಕೊಟ್ಟ ಬದಲಾವಣೆ ದರ |
ಸ್ಥಿರ ವಿನಿಮಯ ದರ | ಕರೆನ್ಸಿಯ ಸ್ಥಳದ ದರ | ಕರೆನ್ಸಿಯ ಸ್ಥಳದ ದರ |
ಚಿನ್ನದ ಪ್ರಮಿತಿ | ಚಿನ್ನದ ಸ್ಥಳದ ದರ | ಚಿನ್ನದ ದರದಿಂದ ಕಡಿಮೆ ಹಣದುಬ್ಬರದ ಅಳತೆ |
ಮಿಶ್ರಿತ ನೀತಿ | ವಾಡಿಕೆಯ ಬಡ್ಡಿದರಗಳು | ವಾಡಿಕೆಯ ನಿರುದ್ಯೋಗ+ CPI ಬದಲಾವಣೆ |
ವಿನಿಮಯ ದರದ ಆಡಳಿತಗಳಿಗೆ ಸಮಾನಾಂತರವಾಗಿ ವಿತ್ತೀಯ ನೀತಿಗಳ ವಿವಿಧ ವಿಧಗಳನ್ನು ವಿತ್ತೀಯ ಆಡಳಿತಗಳು ಎಂದು ಕೂಡ ಕರೆಯುತ್ತಾರೆ. ಸ್ಥಿರ ವಿನಿಮಯ ದರ ಕೂಡ ವಿನಿಮಯ ದರದ ಆಡಳಿತ; ಚಿನ್ನದ ಪ್ರಮಿತಿಯುಳ್ಳ ಇತರೆ ರಾಷ್ಟ್ರಗಳ ಕರೆನ್ಸಿಗಳತ್ತ ಚಿನ್ನದ ಪ್ರಮಿತಿಯು ಸ್ಥಿರ ಆಡಳಿತದ ಫಲಿತಾಂಶಗಳನ್ನು ಒದಗಿಸುತ್ತದೆ. ಚಿನ್ನದ ಪ್ರಮಿತಿ ಇಲ್ಲದ ಕಡೆ ಬದಲಾಗುವ ಆಡಳಿತದ ಫಲಿತಾಂಶ ನೀಡುತ್ತದೆ. ಹಣದುಬ್ಬರದ ಮೇಲೆ ಗುರಿಯಿರಿಸುತ್ತಾ, ಸಂಬಂಧಿತ ವಿದೇಶಿ ಕರೆನ್ಸಿಗಳ ನಿರ್ವಹಣೆಯು ನಿಖರ ಸಮಾನ ವ್ಯತ್ಯಾಸಗಳನ್ನು(ಸುಸಂಗತ ಗ್ರಾಹಕ ದರ ಸೂಚ್ಯಂಕ ಮುಂತಾದವು)ಅನುಸರಿಸದೇ ಇದ್ದರೆ,ಒಟ್ಟು ವಿತ್ತೀಯ ಸಂಗ್ರಹವು ಬದಲಾಗುವ ವಿನಿಮಯ ದರವನ್ನು ಸೂಚಿಸುತ್ತದೆ.
ಹಣದುಬ್ಬರದ ಗುರಿ
ಬದಲಾಯಿಸಿಈ ನೀತಿಯ ಅನ್ವಯದಡಿ ಹಣದುಬ್ಬರವನ್ನು ಗ್ರಾಹಕ ದರ ಸೂಚ್ಯಂಕ ಮುಂತಾದ ನಿರ್ದಿಷ್ಟ ವ್ಯಾಖ್ಯೆಯಲ್ಲಿ ಇಚ್ಛಿತ ವ್ಯಾಪ್ತಿಯಲ್ಲಿ ಇರಿಸುವ ಗುರಿ ಹೊಂದಲಾಗಿದೆ.
ಕೇಂದ್ರ ಬ್ಯಾಂಕ್ ಬಡ್ಡಿದರದ ಗುರಿ ಮೇಲೆ ಆವರ್ತಕ ಹೊಂದಾಣಿಕೆಗಳನ್ನು ಮಾಡುವ ಮೂಲಕ ಹಣದುಬ್ಬರದ ಗುರಿಯನ್ನು ಸಾಧಿಸಲಾಗುತ್ತದೆ. ಬಡ್ಡಿದರವು ಸಾಮಾನ್ಯವಾಗಿ ಹಣದ ಹರಿವಿನ ಉದ್ದೇಶಗಳಿಗಾಗಿ ಬ್ಯಾಂಕುಗಳು ಪರಸ್ಪರ ದಿಢೀರ್ ಸಾಲ ನೀಡುವ ಅಂತರಬ್ಯಾಂಕ್ ದರವಾಗಿದೆ. ರಾಷ್ಟ್ರವನ್ನು ಅವಲಂಬಿಸಿ ಈ ನಿರ್ದಿಷ್ಟ ಬಡ್ಡಿದರವನ್ನು ನಗದು ದರ ಅಥವಾ ಅದಕ್ಕೆ ಸದೃಶವಾದ ಇನ್ನೊಂದು ಹೆಸರಿನಲ್ಲಿ ಕರೆಯಲಾಗುತ್ತದೆ.
ಮುಕ್ತ ಪೇಟೆಯ ಕಾರ್ಯಾಚರಣೆಗಳನ್ನು ಬಳಸಿ ನಿರ್ದಿಷ್ಟ ಅವಧಿಗೆ ಬಡ್ಡಿದರದ ಗುರಿಯನ್ನು ಕಾಯ್ದುಕೊಳ್ಳಲಾಗುತ್ತದೆ. ಸಾಂಕೇತಿಕವಾಗಿ ಬಡ್ಡಿದರದ ಗುರಿಯನ್ನು ಸ್ಥಿರವಾಗಿಡುವ ಕಾಲಾವಧಿಯು ಮಾಸಿಕಗಳು ಮತ್ತು ವಾರ್ಷಿಕಗಳಲ್ಲಿ ವ್ಯತ್ಯಾಸವಿರುತ್ತದೆ. ನೀತಿ ಸಮಿತಿಯಿಂದ ಬಡ್ಡಿದರದ ಗುರಿಯನ್ನು ಸಾಮಾನ್ಯವಾಗಿ ಮಾಸಿಕ ಅಥವಾ ತ್ರೈಮಾಸಿಕದ ಆಧಾರದ ಮೇಲೆ ಪುನರ್ಪರಿಶೀಲನೆ ಮಾಡಲಾಗುತ್ತದೆ.
ಆರ್ಥಿಕ ಪ್ರವೃತ್ತಿಗಳನ್ನು ಮುಂಗಾಣುವ ಪ್ರಯತ್ನವಾಗಿ ವಿವಿಧ ಮಾರುಕಟ್ಟೆ ಸೂಚಕಗಳಿಗೆ ಪ್ರತಿಕ್ರಿಯೆಯಾಗಿ ಬಡ್ಡಿದರದ ಗುರಿಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಹೀಗೆ ಮಾಡುವ ಮೂಲಕ ವ್ಯಾಖ್ಯಾನಿಸಿದ ಹಣದುಬ್ಬರ ಗುರಿ ಸಾಧನೆಯತ್ತ ಮಾರುಕಟ್ಟೆಯನ್ನು ಇಡಲಾಗುತ್ತದೆ. ಉದಾಹರಣೆಗೆ,ಟೈಲರ್ ನಿಯಮವೆಂದು ಕರೆಯಲಾದ ಹಣದುಬ್ಬರದ ಗುರಿಯ ಒಂದು ಸರಳ ವಿಧಾನವು ಹಣದುಬ್ಬರದ ದರ ಮತ್ತು ಉತ್ಪಾದನೆ ಅಂತರದ ನಡುವೆ ಬದಲಾವಣೆಗಳಿಗೆ ಪ್ರತಿಕ್ರಿಯೆಯಾಗಿ ಬಡ್ಡಿದರವನ್ನು ಹೊಂದಾಣಿಕೆ ಮಾಡುತ್ತದೆ. ಸ್ಟಾನ್‌ಪೋರ್ಡ್ ಯೂನಿವರ್ಸಿಟಿಯ ಜಾನ್ B.ಟೇಲರ್ ಈ ನಿಯಮವನ್ನು ಪ್ರಸ್ತಾಪಿಸಿದರು.[೧೨]
ಹಣದುಬ್ಬರದ ಗುರಿಯ ದೃಷ್ಟಿಕೋನದಿಂದ ವಿತ್ತೀಯ ನೀತಿಯನ್ನು ರೂಪಿಸುವುದಕ್ಕೆ ನ್ಯೂಜಿಲೆಂಡ್ ಪ್ರವರ್ತಕವೆನಿಸಿತು. ಪ್ರಸಕ್ತ ಆಸ್ಟ್ರೇಲಿಯ,ಕೆನಡಾ, ಚಿಲಿ,ಕೊಲಂಬಿಯ,ಯೂರೋಜೋನ್, ನ್ಯೂಜಿಲೆಂಡ್, ನಾರ್ವೆ,ಐಸ್‌ಲ್ಯಾಂಡ್,ಫಿಲಿಪೈನ್ಸ್,ಪೋಲೆಂಡ್, ಸ್ವೀಡನ್,ಸೌತ್ ಆಫ್ರಿಕಾ,ಟರ್ಕಿ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಇದನ್ನು ಬಳಸಲಾಗುತ್ತಿದೆ.
ದರ ಮಟ್ಟದ ಮೇಲೆ ಗುರಿ
ಬದಲಾಯಿಸಿಒಂದು ವರ್ಷದ CPI ಬೆಳವಣಿಗೆಯು ತರುವಾಯದ ವರ್ಷಗಳಲ್ಲಿ ಬಿಂಬಿತವಾಗುವುದನ್ನು ಹೊರತುಪಡಿಸಿ ದರ ಮಟ್ಟದ ಗುರಿಯು ಹಣದುಬ್ಬರದ ಗುರಿಯ ರೀತಿಯಲ್ಲೇ ಇರುತ್ತದೆ.ಹೀಗಾಗಿ ಕಾಲಾನಂತರದಲ್ಲಿ ಒಟ್ಟು ವಿತ್ತೀಯ ದರಮಟ್ಟ ಕದಲುವುದಿಲ್ಲ.
ಒಟ್ಟು ವಿತ್ತೀಯ ಮೊತ್ತ
ಬದಲಾಯಿಸಿಹಣದ ಪೂರೈಕೆಯಲ್ಲಿ ಸ್ಥಿರ ಬೆಳವಣಿಗೆಯ ಆಧಾರದ ಮೇಲೆ 1980ರ ದಶಕದಲ್ಲಿ ಅನೇಕ ರಾಷ್ಟ್ರಗಳು ವಿಧಾನವೊಂದನ್ನು ಬಳಸಿದವು. ಈ ವಿಧಾನವನ್ನು ನವೀಕರಿಸಿ ಹಣ ಮತ್ತು ಸಾಲ(M0, M1 ಇತರೆ)ದ ವಿವಿಧ ವರ್ಗಗಳನ್ನು ಸೇರಿಸಲಾಯಿತು. USA ನಲ್ಲಿ ಅಲಾನ್ ಗ್ರೀನ್‌ಸ್ಪಾನ್ ಅವರನ್ನು ಫೆಡ್ ಚೇರ್‌ಮನ್ ಆಗಿ ಆಯ್ಕೆ ಮಾಡುವ ಮೂಲಕ ವಿತ್ತೀಯ ನೀತಿಯ ಈ ವಿಧಾನವನ್ನು ಸ್ಥಗಿತಗೊಳಿಸಲಾಯಿತು.
ಈ ವಿಧಾನಕ್ಕೆ ಕೆಲವು ಬಾರಿ ವಿತ್ತ ನಿಯಂತ್ರಣ ವಾದವೆಂದು ಕರೆಯಲಾಗುತ್ತದೆ.
ಅನೇಕ ವಿತ್ತೀಯ ನೀತಿ ಒಂದಲ್ಲ ಒಂದು ಸ್ವರೂಪದ ದರ ಸಂಕೇತದ ಮೇಲೆ ಗಮನಹರಿಸುತ್ತದೆ. ಈ ವಿಧಾನವು ವಿತ್ತೀಯ ಪ್ರಮಾಣಗಳ ಮೇಲೆ ಗಮನಹರಿಸುತ್ತದೆ.
ಸ್ಥಿರ ವಿನಿಮಯ ದರ
ಬದಲಾಯಿಸಿವಿದೇಶಿ ಕರೆನ್ಸಿಯ ಜತೆ ಸ್ಥಿರ ವಿನಿಮಯ ದರವನ್ನು ಕಾಯ್ದುಕೊಳ್ಳುವುದರತ್ತ ಈ ನೀತಿ ಆಧಾರಿತವಾಗಿದೆ. ಸ್ಥಿರ ವಿನಿಮಯ ದರಗಳ ವಿವಿಧ ಹಂತಗಳಿವೆ. ವಿತ್ತೀಯ ನೀತಿ ರೂಪಿಸುವ ರಾಷ್ಟ್ರದ ಜತೆ ಸ್ಥಿರ ವಿನಿಮಯ ದರ ಎಷ್ಟು ಕಟ್ಟುನಿಟ್ಟಾಗಿದೆ ಎಂಬ ಸಂಬಂಧದ ಮೇಲೆ ಅವುಗಳಿಗೆ ದರ್ಜೆ ನೀಡಲಾಗುತ್ತದೆ.
ಅಧಿಕೃತ ಸ್ಥಿರ ದರಗಳ ವ್ಯವಸ್ಥೆಯಲ್ಲಿ ಸ್ಥಳೀಯ ಸರ್ಕಾರ ಅಥವಾ ವಿತ್ತೀಯ ಪ್ರಾಧಿಕಾರವು ಸ್ಥಿರ ವಿನಿಮಯ ದರವನ್ನು ಘೋಷಿಸುತ್ತದೆ. ಆದರೆ ಆ ದರವನ್ನು ಕಾಯ್ದುಕೊಳ್ಳಲು ಸಕ್ರಿಯವಾಗಿ ಕರೆನ್ಸಿಯನ್ನು ಖರೀದಿಸುವುದಿಲ್ಲ ಅಥವಾ ಮಾರುವುದಿಲ್ಲ. ಬದಲಿಗೆ ಈ ದರವನ್ನು ಪರಿವರ್ತನೀಯತೆ-ರಹಿತ ಕ್ರಮಗಳಿಂದ(ಉದಾ: ಬಂಡವಾಳ ನಿಯಂತ್ರಣಗಳು, ಆಮದು/ರಫ್ತು ಪರವಾನಗಿಗಳು, ಇತರೆ)ಜಾರಿಗೆ ತರಲಾಗುತ್ತದೆ. ಈ ಪ್ರಕರಣದಲ್ಲಿ ಕಾಳಸಂತೆಯ ವಿನಿಮಯ ದರವಿರುತ್ತದೆ. ಅಲ್ಲಿ ಕರೆನ್ಸಿಯನ್ನು ಮಾರುಕಟ್ಟೆ/ಅನಧಿಕೃತ ದರದಲ್ಲಿ ಮಾರಾಟಮಾಡಲಾಗುತ್ತದೆ.
ಸ್ಥಿರ-ಪರಿವರ್ತನೀಯತೆ ವ್ಯವಸ್ಥೆಯಲ್ಲಿ,ವಿನಿಮಯ ದರ ಗುರಿ ಸಾಧನೆಗೆ ದಿನನಿತ್ಯದ ಆಧಾರದ ಮೇಲೆ ಕೇಂದ್ರ ಬ್ಯಾಂಕ್ ಅಥವಾ ವಿತ್ತೀಯ ಪ್ರಾಧಿಕಾರವು ಕರೆನ್ಸಿಯನ್ನು ಖರೀದಿಸುತ್ತದೆ ಮತ್ತು ಮಾರುತ್ತದೆ. ಆ ಗುರಿ ದರವು ಸ್ಥಿರ ಮಟ್ಟ ಅಥವಾ ಸ್ಥಿರ ಪಟ್ಟಿಯದ್ದಾಗಿರಬಹುದು. ಪಟ್ಟಿಯೊಳಗೆ ವಿನಿಮಯ ದರ ಕಾಯ್ದುಕೊಳ್ಳಲು ಖರೀದಿ ಅಥವಾ ಮಾರಾಟಕ್ಕೆ ವಿತ್ತೀಯ ಪ್ರಾಧಿಕಾರ ಮಧ್ಯಪ್ರವೇಶ ಮಾಡುವ ತನಕ ವಿನಿಮಯ ದರ ಏರುಪೇರಾಗುತ್ತದೆ. (ಈ ಪ್ರಕರಣದಲ್ಲಿ ಸ್ಥಿರ ಮಟ್ಟದೊಂದಿಗೆ ಸ್ಥಿರ ವಿನಿಮಯ ದರವನ್ನು ಪಟ್ಟಿಗಳೊಂದಿಗೆ ಸ್ಥಿರ ವಿನಿಮಯ ದರದ ವಿಶೇಷ ಪ್ರಕರಣದಂತೆ ಕಾಣಬಹುದು. ಅಲ್ಲಿ ಪಟ್ಟಿಗಳನ್ನು ಶೂನ್ಯಕ್ಕೆ ಇರಿಸಲಾಗುತ್ತದೆ).
ಕರೆನ್ಸಿ ಮಂಡಳಿ ನಿರ್ವಹಿಸುವ ಸ್ಥಿರ ವಿನಿಮಯ ದರಗಳ ವ್ಯವಸ್ಥೆಯಲ್ಲಿ ಸ್ಥಳೀಯ ಕರೆನ್ಸಿಯ ಪ್ರತಿಯೊಂದು ಅಂಶವು ವಿದೇಶಿ ಕರೆನ್ಸಿಯ ಒಂದಂಶದ ಬೆಂಬಲ ಹೊಂದಿರಬೇಕು.(ವಿನಿಮಯ ದರದ ಸರಿಪಡಿಸುವಿಕೆ) ಇದರಿಂದ ಸ್ಥಳೀಯ ವಿತ್ತೀಯ ಮೂಲವು ದೃಢ ಕರೆನ್ಸಿಯ ಬೆಂಬಲವಿಲ್ಲದೇ ಹಣದುಬ್ಬರ ಆಗದಿರುವುದನ್ನು ಖಾತರಿಪಡಿಸುತ್ತದೆ ಮತ್ತು ಸ್ಥಳೀಯ ಕರೆನ್ಸಿಯನ್ನು ದೃಢ(ವಿತ್ತೀಯ ನೀತಿ ರಾಷ್ಟ್ರದ)ಕರೆನ್ಸಿಗೆ ಪರವರ್ತಿಸಲು ಇಚ್ಛಿಸುವವರಿಗೆ ಸ್ಥಳೀಯ ಕರೆನ್ಸಿಯ ವ್ಯವಹಾರದ ಬಗ್ಗೆ ಚಿಂತೆಗಳನ್ನು ನಿವಾರಿಸುತ್ತದೆ.
ಡಾಲರೀಕರಣದಲ್ಲಿ ವಿದೇಶಿ ಕರೆನ್ಸಿಯನ್ನು(ಸಾಮಾನ್ಯವಾಗಿ US ಡಾಲರ್,ಆದ್ದರಿಂದ "ಡಾಲರೀಕರಣ" ಪದ)ವಿಶೇಷವಾಗಿ ಅಥವಾ ಸ್ಥಳೀಯ ಕರೆನ್ಸಿಗೆ ಸಮಾನಾಂತರವಾಗಿ ವಿನಿಮಯ ಮಾಧ್ಯಮವಾಗಿ ಮುಕ್ತವಾಗಿ ಬಳಸಲಾಗುತ್ತದೆ. ಸ್ಥಳೀಯ ಕರೆನ್ಸಿಯಲ್ಲಿ ಸ್ಥಳೀಯ ಜನರು ಎಲ್ಲ ನಂಬಿಕೆ ಕಳೆದುಕೊಂಡ ಕಾರಣ ಈ ಫಲಿತಾಂಶ ಬರುತ್ತದೆ ಅಥವಾ ಇದು ಸರ್ಕಾರದ ಒಂದು ನೀತಿಯಾಗಿರುತ್ತದೆ(ಸಾಮಾನ್ಯವಾಗಿ ಹಣದುಬ್ಬರ ನಿಯಂತ್ರಣಕ್ಕೆ ಮತ್ತು ವಿಶ್ವಾಸಾರ್ಹ ವಿತ್ತೀಯ ನೀತಿ ಬಿಂಬಿಸಲು)
ಈ ನೀತಿಗಳು ಅನೇಕ ವೇಳೆ ವಿತ್ತೀಯ ನೀತಿಯನ್ನು ವಿದೇಶಿ ಪ್ರಾಧಿಕಾರಕ್ಕೆ ಅಥವಾ ಸರ್ಕಾರಕ್ಕೆ ಬಿಟ್ಟುಕೊಡುತ್ತವೆ.ವಿದೇಶಿ ವಿನಿಮಯ ದರ ನಿರ್ವಹಣೆಗೆ ಸ್ಥಿರ ವಿತ್ತೀಯ ನೀತಿಯ ರಾಷ್ಟ್ರವು ಆಸರೆ ರಾಷ್ಟ್ರದ ವಿತ್ತೀಯ ನೀತಿಯೊಂದಿಗೆ ಸಂಯೋಜನೆ ಹೊಂದಬೇಕಾಗುತ್ತದೆ. ಸ್ಥಳೀಯ ವಿತ್ತೀಯ ನೀತಿಯು ಆಸರೆ ರಾಷ್ಟ್ರದ ಮೇಲೆ ಅವಲಿಂಬಿತವಾಗುವ ಮಟ್ಟವು ಬಂಡವಾಳ ಸಂಗ್ರಹಣೆ, ಮುಕ್ತತೆ, ಸಾಲದ ಮಾರ್ಗಗಳು ಮತ್ತು ಇತರೆ ಆರ್ಥಿಕ ಅಂಶಗಳನ್ನು ಆಧರಿಸಿದೆ.
ಇದನ್ನೂ ನೋಡಿ: ಸ್ಥಿರ ಕರೆನ್ಸಿಗಳ ಪಟ್ಟಿ
ಚಿನ್ನದ ಪ್ರಮಿತಿ
ಬದಲಾಯಿಸಿಚಿನ್ನದ ಪ್ರಮಿತಿ ಒಂದು ವ್ಯವಸ್ಥೆಯಾಗಿದ್ದು, ಇದರಲ್ಲಿ ಚಿನ್ನದ ಗಟ್ಟಿಗಳ ಏಕಮಾನಗಳ ಮೇಲೆ ರಾಷ್ಟ್ರೀಯ ಕರೆನ್ಸಿಯನ್ನು ಅಳೆಯಲಾಗುತ್ತದೆ. ಮೂಲಕರೆನ್ಸಿಯನ್ನು ಇತರೆ ರಾಷ್ಟ್ರಗಳಿಗೆ ಮತ್ತು ಪೌರರ ಜತೆ ದಿನನಿತ್ಯ ಖರೀದಿಸುವ ಮತ್ತು ಮಾರುವ ಮೂಲಕ ಅದನ್ನು ಸ್ಥಿರವಾಗಿಡಲಾಗುತ್ತದೆ.(ಉದಾ:ಮುಕ್ತ ಪೇಟೆ ಕಾರ್ಯಾಚರಣೆಗಳು) ಆರ್ಥಿಕ ಬೆಳವಣಿಗೆ ಮತ್ತು ಸ್ಥಿರತೆಗೆ ಚಿನ್ನದ ಮಾರಾಟ ಅತೀ ಮುಖ್ಯವಾಗಿದೆ.
ಚಿನ್ನದ ಪ್ರಮಿತಿಯು "ಸ್ಥಿರ ವಿನಿಮಯ ದರ" ನೀತಿಯ ವಿಶೇಷ ಪ್ರಕರಣವೆಂದು ಪರಿಗಣಿಸಬಹುದು. ಚಿನ್ನದ ದರವನ್ನು "ಸರಕು ದರ ಸೂಚ್ಯಂಕ"ದ ವಿಶೇಷ ವಿಧ ಎಂದು ಪರಿಗಣಿಸಬಹುದು.
ಇಂದು ಜಗತ್ತಿನಲ್ಲಿ ಎಲ್ಲಿಯೂ ಇಂತಹ ವಿಧದ ವಿತ್ತೀಯ ನೀತಿ ಬಳಕೆಯಿಲ್ಲ.[ಸೂಕ್ತ ಉಲ್ಲೇಖನ ಬೇಕು] ಆದರೆ 1971ಕ್ಕಿಂತ ಮುಂಚಿತವಾಗಿ ವಿಶ್ವಾದ್ಯಂತ ಚಿನ್ನದ ಪ್ರಮಿತಿಯ ಒಂದು ಸ್ವರೂಪವು ವ್ಯಾಪಕವಾಗಿ ಬಳಕೆಯಲ್ಲಿತ್ತು. ವಿವರಗಳಿಗೆ ನೋಡಿ ಬ್ರೆಟ್ಟನ್ ವೂಡ್ಸ್ ಸಿಸ್ಟಮ್ .
ಅದರ ಮುಖ್ಯ ಅನುಕೂಲಗಳು ಸರಳತೆ ಮತ್ತು ಪಾರದರ್ಶಕತೆ
ವಿವಿಧ ರಾಷ್ಟ್ರಗಳ ನೀತಿಗಳು
ಬದಲಾಯಿಸಿ- ಆಸ್ಟ್ರೇಲಿಯ- ಹಣದುಬ್ಬರ ಗುರಿ
- ಬ್ರೆಜಿಲ್-ಹಣದುಬ್ಬರ ಗುರಿ
- ಕೆನಡಾ-ಹಣದುಬ್ಬರ ಗುರಿ
- ಚಿಲಿ-ಹಣದುಬ್ಬರ ಗುರಿ
- ಚೀನ - ವಿತ್ತೀಯ ಗುರಿ ಮತ್ತು ಕರೆನ್ಸಿ ಸಂಗ್ರಹದ ಮೇಲೆ ಅದರ ಗುರಿ
- ಯೂರೋಜೋನ್-ಹಣದುಬ್ಬರ ಗುರಿ
- ಹಾಂಕಾಂಗ್ - ಕರೆನ್ಸಿ ಮಂಡಳಿ (US ಡಾಲರ್‌ಗೆ ಸ್ಥಿರ)
- ಭಾರತ - ಹಣದುಬ್ಬರ ಗುರಿ
- ನ್ಯೂಜಿಲೆಂಡ್-ಹಣದುಬ್ಬರ ಗುರಿ
- ನಾರ್ವೆ-ಹಣದುಬ್ಬರ ಗುರಿ
- ಸಿಂಗಪುರ-ವಿನಿಮಯ ದರ ಗುರಿ
- ಸೌತ್ ಆಫ್ರಿಕಾ-ಹಣದುಬ್ಬರ ಗುರಿ
- ಸ್ವಿಜರ್‌ಲ್ಯಾಂಡ್ - ಹಣದುಬ್ಬರ ಗುರಿ [೧೩]
- ಟರ್ಕಿ - ಹಣದುಬ್ಬರ ಗುರಿ
- ಯುನೈಟೆಡ್ ಕಿಂಗ್‌ಡಮ್[೧೪]- ಹಣದುಬ್ಬರ ಗುರಿ, 'ಉತ್ಪಾದನೆ ಮತ್ತು ಉದ್ಯೋಗ' ಕುರಿತ ಎರಡನೇ ಗುರಿಗಳ ಜತೆ.
- ಯುನೈಟೆಡ್ ಸ್ಟೇಟ್ಸ್[೧೫]-ಮಿಶ್ರಿತ ನೀತಿ(1980ರ ದಶಕದಿಂದ ಇದು "ಟೈಲರ್ ನಿಯಮ"ದಿಂದ ಸೂಕ್ತ ಹೊಂದಿಕೆ/ಬಣ್ಣಿತವಾಗಿದೆ. ಹಣದುಬ್ಬರ ಆಘಾತಗಳು ಮತ್ತು ಫಲಿತಾಂಶಕ್ಕೆ ಫೆಡ್ ನಿಧಿಗಳ ದರ ಸ್ಪಂದಿಸುತ್ತದೆಂದು ಅದು ತೋರಿಸುತ್ತದೆ.
ವಿತ್ತೀಯ ನೀತಿಯ ಸಾಧನಗಳು
ಬದಲಾಯಿಸಿವಿತ್ತೀಯ ನೆಲೆಗಟ್ಟು
ಬದಲಾಯಿಸಿವಿತ್ತೀಯ ನೀತಿಯನ್ನು ವಿತ್ತೀಯ ನೆಲೆಗಟ್ಟಿನ ಗಾತ್ರವನ್ನು ಬದಲಿಸುವ ಮೂಲಕ ಅನುಷ್ಠಾನಕ್ಕೆ ತರಬಹುದು. ಇದು ನೇರವಾಗಿ ಆರ್ಥಿಕ ವ್ಯವಸ್ಥೆಯಲ್ಲಿ ಚಲಾವಣೆಯಲ್ಲಿರುವ ಒಟ್ಟು ಹಣದ ಮೊತ್ತವನ್ನು ಬದಲಿಸುತ್ತದೆ. ವಿತ್ತೀಯ ನೆಲೆಗಟ್ಟನ್ನು ಬದಲಿಸಲು ಕೇಂದ್ರ ಬ್ಯಾಂಕ್ ಮುಕ್ತ ಪೇಟೆ ಕಾರ್ಯಾಚರಣೆಗಳನ್ನು ಬಳಸಬಹುದು. ಕೇಂದ್ರ ಬ್ಯಾಂಕ್ ದೃಢಕರೆನ್ಸಿಯ ವಿನಿಮಯವಾಗಿ ಸಾಲಪತ್ರಗಳನ್ನು ಖರೀದಿಸುತ್ತದೆ/ಮಾರುತ್ತದೆ.
ಕೇಂದ್ರ ಬ್ಯಾಂಕ್ ದೃಢ ಕರೆನ್ಸಿಯ ಪಾವತಿಯ ವಿತರಣೆ/ಸಂಗ್ರಹಣೆ ಮಾಡಿದರೆ, ಆರ್ಥಿಕತೆಯಲ್ಲಿ ಕರೆನ್ಸಿಯ ಮೊತ್ತದಲ್ಲಿ ಬದಲಾವಣೆಯಾಗಿ, ವಿತ್ತೀಯ ನೆಲೆಗಟ್ಟಿನಲ್ಲಿ ಮಾರ್ಪಾಟು ಮಾಡುತ್ತದೆ.
ಮೀಸಲು ಅಗತ್ಯಗಳು
ಬದಲಾಯಿಸಿವಿತ್ತೀಯ ಪ್ರಾಧಿಕಾರವು ಬ್ಯಾಂಕುಗಳ ಮೇಲೆ ನಿಯಂತ್ರಣ ಹೇರುತ್ತದೆ. ಕೇಂದ್ರ ಬ್ಯಾಂಕ್ ಜತೆ ಬ್ಯಾಂಕುಗಳು ಮೀಸಲು ನಿಧಿಯಾಗಿ ಹೊಂದಿರುವ ಒಟ್ಟು ಆಸ್ತಿಯ ಪ್ರಮಾಣವನ್ನು ಬದಲಿಸುವ ಮೂಲಕ ವಿತ್ತೀಯ ನೀತಿಯನ್ನು ಅನುಷ್ಠಾನಕ್ಕೆ ತರಬಹುದು. ಬ್ಯಾಂಕುಗಳು ತಮ್ಮ ಆಸ್ತಿಯಲ್ಲಿ ಸಣ್ಣ ಭಾಗವಾಗಿ ತಕ್ಷಣದ ವಾಪಸಾತಿಗೆ ಲಭ್ಯವಿರುವ ನಗದನ್ನು ಮಾತ್ರ ನಿರ್ವಹಿಸುತ್ತದೆ;ಉಳಿದವನ್ನು ದ್ರವ್ಯತೆಯಿಲ್ಲದ ಆಸ್ತಿಗಳಾದ ಅಡಮಾನಗಳು ಮತ್ತು ಸಾಲಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ದ್ರವ್ಯತೆ ನಗದಿನ ಒಟ್ಟು ಆಸ್ತಿಯ ಪ್ರಮಾಣದಲ್ಲಿ ಬದಲಾವಣೆ ಮಾಡುವ ಮೂಲಕ, ಫೆಡರಲ್ ರಿಸರ್ವ್ ಸಾಲವಾಗಿ ನೀಡುವ ನಿಧಿಗಳ ಲಭ್ಯತೆಯಲ್ಲಿ ಬದಲಾವಣೆ ಮಾಡುತ್ತದೆ. ಇದು ಹಣದ ಪೂರೈಕೆಯಲ್ಲಿ ಬದಲಾವಣೆ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಕೇಂದ್ರ ಬ್ಯಾಂಕುಗಳು ಆಗಾಗ್ಗೆ ಮೀಸಲು ಅಗತ್ಯಗಳಲ್ಲಿ ಸಾಂಕೇತಿಕ ಬದಲಾವಣೆ ಮಾಡುವುದಿಲ್ಲ. ಏಕೆಂದರೆ ಸಾಲದ ವೃದ್ಧಿಯಿಂದ ಹಣದ ಪೂರೈಕೆಯಲ್ಲಿ ಏರುಪೇರಿನ ಬದಲಾವಣೆಯನ್ನು ಸೃಷ್ಟಿಸುತ್ತದೆ.
ರಿಯಾಯಿತಿ ದರದ ಸಾಲ ವಿಭಾಗ
ಬದಲಾಯಿಸಿಅನೇಕ ಕೇಂದ್ರ ಬ್ಯಾಂಕುಗಳು ಅಥವಾ ಹಣಕಾಸು ಸಚಿವಾಲಯಗಳು ತಮ್ಮ ರಾಷ್ಟ್ರದೊಳಗಿನ ಹಣಕಾಸು ಸಂಸ್ಥೆಗಳಿಗೆ ನಿಧಿಗಳನ್ನು ಸಾಲವಾಗಿ ನೀಡುವ ಅಧಿಕಾರ ಹೊಂದಿರುತ್ತವೆ. ಪ್ರಸಕ್ತ ಸಾಲಗಳಿಗೆ ಆಹ್ವಾನಿಸುವ ಮೂಲಕ ಅಥವಾ ಹೊಸ ಸಾಲಗಳನ್ನು ವಿಸ್ತರಿಸುವ ಮೂಲಕ ವಿತ್ತೀಯ ಪ್ರಾಧಿಕಾರವು ನೇರವಾಗಿ ಹಣದ ಪೂರೈಕೆಯ ಗಾತ್ರವನ್ನು ಬದಲಿಸಬಹುದು.
ಬಡ್ಡಿ ದರಗಳು
ಬದಲಾಯಿಸಿವಿತ್ತೀಯ ಪೂರೈಕೆಯ ಪರಿಮಿತಿಯನ್ನು ಪರೋಕ್ಷ ವಾಗಿ ಸಾಮಾನ್ಯ ಬಡ್ಡಿ ದರವನ್ನು ಹೆಚ್ಚಿಸುವ ಮೂಲಕ ಸಾಧಿಸಬಹುದು. ವಿವಿಧ ರಾಷ್ಟ್ರಗಳಲ್ಲಿನ ವಿತ್ತೀಯ ಅಧಿಕಾರವರ್ಗಕ್ಕೆ ಆರ್ಥಿಕ-ವಿಸ್ತಾರದ ಬಡ್ಡಿದರಗಳ ನಿಯಂತ್ರಣದಲ್ಲಿ ಭಿನ್ನ ಮಟ್ಟಗಳನ್ನು ಹೊಂದಿರುತ್ತವೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ, ಫೆಡರಲ್ ರಿಸರ್ವ್ ರಿಯಾಯಿತಿ ದರವನ್ನು ನಿಗದಿ ಮಾಡಬಹುದು.ಮುಕ್ತ ಪೇಟೆ ಕಾರ್ಯಾಚರಣೆಗಳ ಮೂಲಕ ಇಚ್ಛಿತ ಫೆಡರಲ್ ನಿಧಿಗಳ ದರವನ್ನು ಸಾಧಿಸಬಹುದು. ಈ ದರವು ಇತರೆ ಮಾರುಕಟ್ಟೆ ಬಡ್ಡಿದರಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದು. ಆದರೆ ಪರಿಪೂರ್ಣ ಸಂಬಂಧ ಇರುವುದಿಲ್ಲ. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮುಕ್ತ ಪೇಟೆ ಕಾರ್ಯಾಚರಣೆಗಳು ಸಾಲಪತ್ರ ಮಾರುಕಟ್ಟೆಯ ಒಟ್ಟು ಗಾತ್ರಕ್ಕೆ ಸಂಬಂಧಿಸಿದಂತೆ ಸಣ್ಣ ಭಾಗವನ್ನು ಹೊಂದಿದೆ. ವಿತ್ತೀಯ ನೆಲೆಗಟ್ಟು ಮತ್ತು ಬಡ್ಡಿದರ ಎರಡಕ್ಕೂ ಸ್ವತಂತ್ರ ಗುರಿಗಳನ್ನು ಸ್ಥಾಪಿಸಲು ಸಾಧ್ಯವಿಲ್ಲ. ಏಕೆಂದರೆ ಅವೆರಡೂ ಏಕೈಕ ಸಾಧನ- ಮುಕ್ತ ಪೇಟೆ ಕಾರ್ಯಾಚರಣೆಗಳಿಂದ ರೂಪಾಂತರ ಹೊಂದಿವೆ; ಯಾವುದನ್ನು ನಿಯಂತ್ರಿಸಬೇಕೆಂಬುದನ್ನು ಆಯ್ಕೆ ಮಾಡಬೇಕು.
ಇತರೆ ರಾಷ್ಟ್ರಗಳಲ್ಲಿ, ವಿತ್ತೀಯ ಪ್ರಾಧಿಕಾರವು ಸಾಲಗಳು, ಉಳಿತಾಯ ಖಾತೆಗಳು ಅಥವಾ ಇತರೆ ಹಣಕಾಸು ಆಸ್ತಿಗಳ ಮೇಲೆ ನಿರ್ದಿಷ್ಟ ಬಡ್ಡಿದರಗಳ ಆದೇಶ ನೀಡಲು ಸಮರ್ಥವಾಗಬಹುದು. ತನ್ನ ನಿಯಂತ್ರಣದಲ್ಲಿರುವ ಬಡ್ಡಿದರವನ್ನು ಏರಿಸುವ ಮೂಲಕ ವಿತ್ತೀಯ ಪ್ರಾಧಿಕಾರವು ಹಣದ ಪೂರೈಕೆಯನ್ನು ಪರಿಮಿತಗೊಳಿಸಬಹುದು. ಏಕೆಂದರೆ ಹೆಚ್ಚಿನ ಬಡ್ಡಿದರಗಳು ಉಳಿತಾಯಗಳಿಗೆ ಪ್ರೋತ್ಸಾಹಿಸುತ್ತವೆ ಮತ್ತು ಸಾಲ ಪಡೆಯಲು ನಿರುತ್ಸಾಹಗೊಳಿಸುತ್ತವೆ. ಇವೆರಡೂ ಪರಿಣಾಮಗಳಲ್ಲಿ ಹಣದ ಪೂರೈಕೆಯ ಗಾತ್ರವನ್ನು ತಗ್ಗಿಸುತ್ತದೆ.
ಕರೆನ್ಸಿ ಮಂಡಳಿ
ಬದಲಾಯಿಸಿಕರೆನ್ಸಿ ಮಂಡಳಿಯು ವಿತ್ತೀಯ ವ್ಯವಸ್ಥೆಯಾಗಿದ್ದು,ರಾಷ್ಟ್ರದ ವಿತ್ತೀಯ ನೆಲೆಗಟ್ಟನ್ನು ಇತರ ದೇಶದ ವಿತ್ತೀಯ ನೆಲೆಗಟ್ಟಿನೊಂದಿಗೆ ಭದ್ರಪಡಿಸುತ್ತದೆ. ಅದು ದೃಢ ಸ್ಥಿರ ವಿನಿಮಯ ದರವಾಗಿ ಕಾರ್ಯನಿರ್ವಹಿಸುತ್ತದೆ.ಅಲ್ಲಿ ಚಲಾವಣೆಯಲ್ಲಿರುವ ಸ್ಥಳೀಯ ಕರೆನ್ಸಿಗೆ ಬೆಂಬಲಿತ ರಾಷ್ಟ್ರದ ವಿದೇಶಿ ಕರೆನ್ಸಿಯು ಸ್ಥಿರದರದಲ್ಲಿ ಬೆಂಬಲವಾಗಿರುತ್ತದೆ.
ಹೀಗೆ, ಸ್ಥಳೀಯ ವಿತ್ತೀಯ ನೆಲೆಗಟ್ಟಿನ ಬೆಳವಣಿಗೆಗೆ ಕರೆನ್ಸಿ ಮಂಡಳಿಯಲ್ಲಿ ಸಮಾನ ಮೊತ್ತದ ವಿದೇಶಿ ಕರೆನ್ಸಿಯನ್ನು ಮೀಸಲುನಿಧಿಯಾಗಿ ಇರಿಸಬೇಕು. ಇದು ಸ್ಥಳೀಯ ವಿತ್ತೀಯ ಪ್ರಾಧಿಕಾರಕ್ಕೆ ಹಣದುಬ್ಬರ ಉಂಟುಮಾಡುವ ಅಥವಾ ಇತರೆ ಉದ್ದೇಶಗಳನ್ನು ಅನುಸರಿಸುವ ಸಾಧ್ಯತೆಯನ್ನು ಸೀಮಿತಗೊಳಿಸುತ್ತದೆ. ಕರೆನ್ಸಿ ಮಂಡಳಿಯ ರಚನೆಯ ಮುಖ್ಯ ತಾರ್ಕಿಕವಿವರಣೆಯು ಮೂರು ಹಂತಗಳನ್ನು ಹೊಂದಿದೆ:
- ಆಸರೆ ರಾಷ್ಟ್ರದ ವಿತ್ತೀಯ ವಿಶ್ವಾಸಾರ್ಹತೆಯನ್ನು ಸೂಚಿಸುವುದು;
- ಆಸರೆ ರಾಷ್ಟ್ರದೊಂದಿಗೆ ಸ್ಥಿರ ವಿನಿಮಯ ದರವನ್ನು ಕಾಯ್ದುಕೊಳ್ಳುವುದು;
- ವಿನಿಮಯ ದರದೊಂದಿಗೆ ವಿಶ್ವಾಸಾರ್ಹತೆ ಸ್ಥಾಪಿಸುವುದು(ಡಾಲರೀಕರಣ ವ್ಯಾಪ್ತಿಯ ಹೊರಗೆ ಕರೆನ್ಸಿ ಮಂಡಳಿ ವ್ಯವಸ್ಥೆಯು ಸ್ಥಿರ ವಿನಿಮಯ ದರಗಳ ಕಠಿಣ ಸ್ವರೂಪ)
ಸೈದ್ಧಾಂತಿಕವಾಗಿ ರಾಷ್ಟ್ರವು ಸ್ಥಳೀಯ ಕರೆನ್ಸಿಯನ್ನು ಒಂದಕ್ಕಿಂತ ಹೆಚ್ಚು ವಿದೇಶಿ ಕರೆನ್ಸಿಯ ಜತೆ ನಿಗದಿಮಾಡಲು ಸಾಧ್ಯ. ಆದರೆ ಆಚರಣೆಯಲ್ಲಿ ಇದು ಸಂಭವಿಸಿಲ್ಲ(ಸರಳ ಏಕೈಕ ಕರೆನ್ಸಿ ಮಂಡಳಿಗಿಂತ ಇದನ್ನು ನಡೆಸುವುದು ಹೆಚ್ಚು ಜಟಿಲ) ಚಿನ್ನದ ಪ್ರಮಿತಿಯು ಕರೆನ್ಸಿಯ ಮಂಡಳಿಯ ವಿಶೇಷ ನಿದರ್ಶನವಾಗಿದ್ದು,ಅದರಲ್ಲಿ ರಾಷ್ಟ್ರೀಯ ಕರೆನ್ಸಿಯ ಮೌಲ್ಯವನ್ನು ವಿದೇಶಿ ಕರೆನ್ಸಿಯ ಬದಲಿಗೆ ಚಿನ್ನದ ಮೌಲ್ಯದ ಜತೆ ಕೊಂಡಿ ಕಲ್ಪಿಸಲಾಗಿದೆ.
ಕರೆನ್ಸಿ ಮಂಡಳಿಯು ಅಧಿಕೃತ ಹಣವನ್ನು ವಿತರಿಸುವುದಿಲ್ಲ. ಆದರೆ ಬದಲಿಗೆ ತನ್ನ ಬೊಕ್ಕಸದಲ್ಲಿರುವ ವಿದೇಶಿ ಕರೆನ್ಸಿಯ ಪ್ರತಿ ಏಕಮಾನಕ್ಕೆ ಸ್ಥಳೀಯ ಕರೆನ್ಸಿಯ ಅನೇಕ ಏಕಮಾನಗಳ ಜತೆಯನ್ನು ವಿತರಿಸುತ್ತದೆ. ಕೇಂದ್ರ ಬ್ಯಾಂಕಿನಲ್ಲಿ ಸ್ಥಳೀಯ ಬ್ಯಾಂಕುಗಳು ಹೊಂದಿರುವ ಹೆಚ್ಚಿನ ಠೇವಣಿಗಳು ಮತ್ತು (ಆರಂಭದಲ್ಲಿ) ರಫ್ತು ಆಧಾರಿತ ಸಂಸ್ಥೆಗಳು ತಮ್ಮ ಸ್ಥಳೀಯ ಬ್ಯಾಂಕುಗಳಲ್ಲಿ ಹೊಂದಿರುವ ಹೆಚ್ಚಿನ ಠೇವಣಿಗಳು(ನಿವ್ವಳ)ಆ ರಾಷ್ಟ್ರದ ಪಾವತಿ ಶಿಲ್ಕುಗಳಲ್ಲಿ ಹೆಚ್ಚುವರಿ ಮೊತ್ತವನ್ನು ಬಿಂಬಿಸುತ್ತವೆ. ದೇಶೀಯ ಹಣ ಪೂರೈಕೆಯ ಪ್ರಗತಿಯು ಕೇಂದ್ರ ಬ್ಯಾಂಕ್‌ನಲ್ಲಿ ಬ್ಯಾಂಕುಗಳು ಹೊಂದಿರುವ ಹೆಚ್ಚುವರಿ ಠೇವಣಿಗಳಿಗೆ ಈಗ ಕೊಂಡಿ ಕಲ್ಪಿಸಿದೆ. ಅದು ಕೇಂದ್ರ ಬ್ಯಾಂಕ್‌ನ ಕೈಯಲ್ಲಿರುವ ಹೆಚ್ಚುವರಿ ದೃಢ ವಿದೇಶಿ ವಿನಿಮಯ ಮೀಸಲುಗಳಿಗೆ ಸಮನಾಗಿದೆ. ಕರೆನ್ಸಿಯ ಸ್ಥಿರತೆಯ ಪ್ರಶ್ನೆಗಳು ಅನ್ವಯವಾಗದಿರುವುದು ಈ ವ್ಯವಸ್ಥೆಯ ಸತ್ವವಾಗಿದೆ. ಇದರ ನ್ಯೂನತೆಗಳು ಏನೆಂದರೆ ಇತರೆ ಸ್ಥಳೀಯ ಪರಿಗಣನೆಗಳಿಗೆ ಅನ್ವಯಿಸುವಂತೆ ವಿತ್ತೀಯ ನೀತಿಯನ್ನು ರೂಪಿಸಲು ರಾಷ್ಟ್ರಕ್ಕೆ ಸಾಮರ್ಥ್ಯವಿರುವುದಿಲ್ಲ ಮತ್ತು ರಾಷ್ಟ್ರ ಮತ್ತು ಅದರ ವ್ಯಾಪಾರಿ ಸಹಯೋಗಿ ರಾಷ್ಟ್ರಗಳ ಜತೆ ಆರ್ಥಿಕ ಭಿನ್ನಾಭಿಪ್ರಾಯಗಳನ್ನು ಪರಿಗಣಿಸದೇ,ಸ್ಥಿರ ವಿನಿಮಯ ದರವು ದೊಡ್ಡ ಪ್ರಮಾಣದಲ್ಲಿ ರಾಷ್ಟ್ರದ ವ್ಯಾಪಾರದ ಷರತ್ತುಗಳನ್ನು ಕೂಡ ಸ್ಥಿರಗೊಳಿಸುತ್ತದೆ.
ಹಾಂಕಾಂಗ್ ಬಲ್ಗೇರಿಯದ ರೀತಿಯಲ್ಲಿ ಕರೆನ್ಸಿ ಮಂಡಳಿಯನ್ನು ನಿರ್ವಹಿಸುತ್ತದೆ. ಎಸ್ಟೋನಿಯ ಸ್ವಾತಂತ್ರ್ಯ ಲಭಿಸಿದ ನಂತರ 1992ರಲ್ಲಿ ಡ್ಯುಟಸ್ಚ್‌ಮಾರ್ಕ್ ಜತೆ ಸ್ಥಿರವಾದ ಕರೆನ್ಸಿ ಮಂಡಳಿಯನ್ನು ಸ್ಥಾಪಿಸಿತು. ಈ ನೀತಿಯನ್ನು ಆ ರಾಷ್ಟ್ರದ ತರುವಾಯ ಆರ್ಥಿಕ ಯಶಸ್ಸಿನ ಮೂಲಾಧಾರವೆಂದು ಕಾಣಲಾಯಿತು.(ಎಸ್ಟೋನಿಯ ಕರೆನ್ಸಿ ಮಂಡಳಿಯ ವಿಸ್ತೃತ ವಿವರಣೆಗೆ ಎಕಾನಮಿ ಆಫ್ ಎಸ್ಟೋನಿಯವನ್ನು ನೋಡಿ). ತೀವ್ರ ಆರ್ಥಿಕ ಹಿಂಜರಿತದ ನಂತರ ಅರ್ಜೆಂಟಿನಾ ತನ್ನ ಕರೆನ್ಸಿ ಮಂಡಳಿಯನ್ನು 2002 ಜನವರಿಯಲ್ಲಿ ತೊರೆಯಿತು. ಕರೆನ್ಸಿ ಮಂಡಳಿಗಳು ಮಾರ್ಪಡಿಸಲಾಗದ್ದಲ್ಲವೆಂಬ ಸತ್ಯವನ್ನು ಇದು ಸ್ಪಷ್ಟಪಡಿಸುತ್ತದೆ. ವಿದೇಶಿ ವಿನಿಮಯ ವ್ಯಾಪಾರಿಗಳ ಸಟ್ಟಾ ವ್ಯವಹಾರದ ಹಿನ್ನೆಲೆಯಲ್ಲಿ ಅದನ್ನು ತ್ಯಜಿಸಬಹುದು. ಡೇಟನ್ ಪೀಸ್ ಅಗ್ರೀಮೆಂಟ್‌ಗೆ 1995ರಲ್ಲಿ ಅಂಕಿತ ಹಾಕಿದ ಬಳಿಕ, ಬೋಸ್ನಿಯ ಮತ್ತು ಹರ್ಜೆಗೋವಿನ ಡ್ಯೂಟಸ್ಚ್‌ಮಾರ್ಕ್ ಜತೆ ಹೊಂದಾಣಿಕೆಯ ಕರೆನ್ಸಿ ಮಂಡಳಿಯನ್ನು ಸ್ಥಾಪಿಸಿದವು.(2002ರಿಂದೀಚೆಗೆ ಯೂರೊದಿಂದ ಬದಲಾಗಿದೆ)
ಸ್ವತಂತ್ರ ವಿತ್ತೀಯ ನೀತಿಯ ಸುಸ್ಥಿರತೆ ಕಷ್ಟವಾಗಿ ಕಾಣುವ ಸಣ್ಣ ಮತ್ತು ಮುಕ್ತ ಆರ್ಥಿಕತೆಗಳಿಗೆ ಕರೆನ್ಸಿಮಂಡಳಿ ಅನುಕೂಲಗಳನ್ನು ಹೊಂದಿವೆ. ಕಡಿಮೆ ಹಣದುಬ್ಬರಕ್ಕೆ ಅದು ವಿಶ್ವಾಸಾರ್ಹ ಬದ್ಧತೆಯನ್ನು ಅವು ರೂಪಿಸಲು ಸಾಧ್ಯ.
ಇದನ್ನೂ ನೋಡಿರಿ
ಬದಲಾಯಿಸಿಉಲ್ಲೇಖಗಳು
ಬದಲಾಯಿಸಿ- ↑ "Monetary Policy". Federal Reserve Board. January 3, 2006.
- ↑ B.M. ಫ್ರೀಡ್‌ಮ್ಯಾನ್ "ಮಾನಿಟರಿ ಪಾಲಿಸಿ," ಇಂಟರ್‌ನ್ಯಾಷನಲ್ ಎನ್‌ಸೈಕ್ಲೋಪೀಡಿಯ ಆಫ್ ದಿ ಸೋಷಿಯಲ್ & ಬಿಹೇವಿಯರಲ್ ಸೈನ್ಸಸ್ , 2001, pp. 9976-9984. ಅಮೂರ್ತ Archived 2008-12-06 ವೇಬ್ಯಾಕ್ ಮೆಷಿನ್ ನಲ್ಲಿ.
- ↑ {0/)ಫೋರ್ಡರ್, ಜೇಮ್ಸ್. ""ಕ್ರೆಡಿಬಿಲಿಟಿ" ಇನ್ ಕಾನ್‌ಟೆಕ್ಸ್ಟ್: ಡು ಸೆಂಟ್ರಲ್ ಬ್ಯಾಂಕರ್ಸ್ ಅಂಡ್ ಎಕಾನಾಮಿಸ್ಟ್ಸ್ ಇಂಟರ್‌ಪ್ರೆಟ್ ದಿ ಟರ್ಮ್ ಡಿಫರೆಂಟ್ಲಿ?" (ಡಿಸೆಂಬರ್ 2004) [೧] Archived 2009-03-26 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Bank of England founded 1694". BBC. March 31, 2006.
- ↑ "Federal Reserve Act". Federal Reserve Board. May 14, 2003.
- ↑ ಮಿಲ್ಟನ್ ಫ್ರೀಡ್‌ಮ್ಯಾನ್ (1960), ಎ ಪ್ರೋಗ್ರಾಂ ಫಾರ್ ಮಾನಿಟರಿ ಸ್ಟೆಬಿಲಿಟಿ. ಫೋರ್ಡ್‌ಹ್ಯಾಮ್ ಯೂನಿವರ್ಸಿಟಿ ಪ್ರೆಸ್.
- ↑ ಬೆನ್ ಬರ್ನಾನ್ಕೆ (2006), 'ಮಾನೆಟರಿ ಅಗ್ರೆಗೇಟ್ಸ್ ಅಂಡ್ ಮಾನಿಟರಿ ಪಾಲಿಸಿ ಎಟ್ ದಿ ಫೆಡರಲ್ ರಿಸರ್ವ್: ಎ ಹಿಸ್ಟೋರಿಕಲ್ ಪರ್‌ಸ್ಪೆಕ್ಟಿವ್'.
- ↑ ವಿಕಿಕೋಟ್
- ↑ "ಬ್ಲಾಗ್: ಪೇವರಿಟ್ ಫ್ರೀಡ್‌ಮ್ಯಾನ್ ಕೋಟ್ಸ್". Archived from the original on 2009-05-02. Retrieved 2010-01-04.
- ↑ ಎಡ್ವರ್ಡ್ ನೆಲ್ಸನ್(2007), 'ಮಿಲ್ಟನ್ ಫ್ರೀಡ್‌ಮ್ಯಾನ್ ಅಂಡ್ U.S. ಮಾನಿಟರಿ ಹಿಸ್ಟರಿ: 1961-2006', ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಸೇಂಟ್. ಲೂವಿಸ್ ರಿವ್ಯೂ 89 (3), ಪೇಜ್ 171.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Exchange Rates". The Library of Economics and Liberty. March 31, 2006.
- ↑ ಅಥಾನಾಸಿಯೋಸ್ ಆರ್ಫಾನೈಡ್ಸ್ (2008). "ಟೈಲರ್ ರೂಲ್ಸ್," ದಿ ನ್ಯೂ ಪಾಲ್‌ಗ್ರೇವ್ ಡಿಕ್‌ಶನರಿ ಆಫ್ ಎಕಾನಾಮಿಕ್ಸ್ , 2ನೇ ಎಡಿಷನ್. v. 8, pp. 200-04. ಅಮೂರ್ತ
- ↑ "ಆರ್ಕೈವ್ ನಕಲು" (PDF). Archived from the original (PDF) on 2010-12-25. Retrieved 2010-01-04.
- ↑ "Monetary Policy Framework". Bank Of England. 2006. Archived from the original on 2010-05-08. Retrieved 2010-01-04.
- ↑ "U.S. Monetary Policy: An Introduction". Federal Bank of San Francisco. 2004. Archived from the original on 2010-04-18. Retrieved 2010-01-04.