ವಿಜಯ್ ಸೂರ್ಯ ಒಬ್ಬ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ ಮತ್ತು ನಿರೂಪಕನಾಗಿದ್ದಾರೆ. ಇವರು ಪ್ರಮುಖವಾಗಿ ಕನ್ನಡ ಸಿನಿಮಾ ಹಾಗೂ ಧಾರಾವಾಹಿಯಲ್ಲಿ ನಟಿಸುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದರು.

ವಿಜಯ್ ಸೂರ್ಯ
Born
ವಿಜಯ್ ಸೂರ್ಯ

೭ ಸೆಪ್ಟೆಂಬರ್ ೧೯೯೨
Nationalityಭಾರತೀಯ
Occupation(s)ನಟ, ಮಾಡೆಲ್, ನಿರೂಪಕ
Years active2012– ಪ್ರಸ್ತುತ
Spouseಚೈತ್ರಾ ಎಸ್.
Children2

ವೈಯಕ್ತಿಕ ಜೀವನ ಬದಲಾಯಿಸಿ

ವಿಜಯ್ ಸೂರ್ಯ ಸೆಪ್ಟಂಬರ್ ೭ ೧೯೯೦ ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ನಾಗರಾಜ್, ತಾಯಿ ಲಲಿತಾಂಬ. ಫೆಬ್ರವರಿ ೧೪ ೨೦೧೯ ರಂದು ವಿಜಯ್ ಸೂರ್ಯ ರವರು ಚೈತ್ರಾ ಎಸ್ ರವರನ್ನು ವಿವಾಹವಾದರು. ವಿಜಯ್ ಮತ್ತು ಚೈತ್ರಾ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.

ಶಿಕ್ಷಣ ಬದಲಾಯಿಸಿ

ಇವರು ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್ ನಲ್ಲಿ ಪಡೆದಿದ್ದಾರೆ. ತನ್ನ ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಯುನಿವರ್ಸಿಟಿಯಲ್ಲಿ ಪಡೆದಿದ್ದಾರೆ. ಪದವಿ ಪೂರ್ವ ನಂತರ ಶಿಕ್ಷಣಕ್ಕೆ ವಿದಾಯ ಹೇಳಿದ ಇವರು ಮುಂಬೈಯ ಸುಭಾಷ್ ಗೈರವರ ಫಿಲಂ ಸ್ಕೂಲ್‌ನ 'ವಿಸ್ಲಿಂಗ್ ವುಡ್ಸ್ ಅಕಾಡೆಮಿ'ಯಲ್ಲಿ ನಟನೆಯ ಪದವಿಯನ್ನು ಪಡೆದು ಕೊಂಡಿದ್ದಾರೆ.

ವೃತ್ತಿ ಜೀವನ ಬದಲಾಯಿಸಿ

ಫಿಲಂ ಸ್ಕೂಲ್ ನಿಂದ ಮರಳಿದ ಮೇಲೆ ಸಿಹಿ ಕಹಿ ಗೀತಾರವರ 'ಪಾರ್ವತಿ ಪರಮೇಶ್ವರ' ಎಂಬ ಧಾರಾವಾಹಿಯಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು. ನಂತರ ಕವಿತಾ ಲಂಕೇಶ್ ನಿರ್ದೇಶನದ 'ಕ್ರೇಜ಼ಿ ಲೋಕ' ಎಂಬ ಚಲನಚಿತ್ರದಲ್ಲಿ ಖ್ಯಾತ ನಟನಾದ ರವಿಚಂದ್ರನ್ ರವರ ಮಗನಾಗಿ ಪಾತ್ರ ನಿರ್ವಹಿಸುವುದರ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಇವರು ಖ್ಯಾತ ನಟನಾದ ಜಾಕಿ ಶ್ರಾಫ್ ರವರ ಜೊತೆ "ಉಸ್ಸ್ ಪಾರ್" ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ತದನಂತರ ೨೦೧೪ ರಲ್ಲಿ 'ಅಗ್ನಿಸಾಕ್ಷಿ' ಎಂಬ ಧಾರಾವಾಹಿಯಲ್ಲಿ 'ಸಿದ್ದಾರ್ಥ' ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಟಾಕೀಸ್ ಎಂಬ ಕಾರ್ಯಕ್ರಮದ ನಿರೂಪಕರಾಗಿದ್ದರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿದ್ದ ಪ್ರೇಮಲೋಕ ಧಾರವಾಹಿಯಲ್ಲಿ ಸೂರ್ಯಕಾಂತ್ ಕದಂಬ ಪಾತ್ರ ನಿರ್ವಹಿಸಿದ್ದಾರೆ.

ಚಲನಚಿತ್ರಗಳು ಬದಲಾಯಿಸಿ

ವರ್ಷ ಹೆಸರು ಪಾತ್ರ ಟಿಪ್ಪಣಿ
2012 ಕ್ರೇಜಿ ಲೋಕ[೧] ಅಭಯ್ ನಾಮನಿರ್ದೇಶನ - ಸೈಮಾ ಅವಾರ್ಡ್ಸ್ ಫಾರ್ ಬೆಸ್ಟ್ ಡೆಬ್ಯೂಟ್ ಮೇಲ್
2016 ಇಷ್ಟಕಾಮ್ಯ[೨] ಡಾ.ಆಕರ್ಷ್
2017 ಲಕ್ನೋ ಟು ಮುಂಬಯಿ  [೩] TBA ಫಿಲ್ಮಿಂಗ್
2019 [೪] [೫]
2019 ಕದ್ದು ಮುಚ್ಚಿ[೬] ಸಿದ್ದಾರ್ಥ್
2022 ಗಾಳಿಪಟ 2 ರೇವಂತ್ ಗೌರವ ಪಾತ್ರದಲ್ಲಿ
TBA ಶೀರ್ಷಿಕೆ ಇಲ್ಲದ IT ಉದ್ಯೋಗದ ಮೇಲಿನ ಚಿತ್ರ   TBA ಪೋಸ್ಟ್ ಪ್ರೋಡಕ್ಷನ್
TBA ವೀರಪುತ್ರ   TBA ಚೀತ್ರಿಕರಣ
Key
  ಈ ಚಿಹ್ನೆ ಸಿನಿಮಾ ಇನ್ನು ಬಿಡುಗಡೆಯಾಗಬೇಕೆಂದುವುದನ್ನು ಸೂಚಿಸುತ್ತದೆ

ದೂರದರ್ಶನ ಬದಲಾಯಿಸಿ

ಧಾರಾವಾಹಿಗಳು ಬದಲಾಯಿಸಿ

ವರ್ಷ ಹೆಸರು ಪಾತ್ರ ವಾಹಿನಿ ಟಿಪ್ಪಣಿ
ಪಾರ್ವತಿ ಪರಮೇಶ್ವರ
ಉತ್ತರಾಯಣ
2013 ಲಕ್ಷ್ಮೀ ಬಾರಮ್ಮ ೧ ಸಿದ್ದಾರ್ಥ್ ಕ್ರಾಸ್ ಒವರ್
2013 - 2020 ಅಗ್ನಿಸಾಕ್ಷಿ[೭] ಸಿದ್ದಾರ್ಥ್ (ನಾಯಕ) ಕಲರ್ಸ್ ಕನ್ನಡ
2019 ಪ್ರೇಮಲೋಕ ಸೂರ್ಯ (ನಾಯಕ) ಸ್ಟಾರ್ ಸುವರ್ಣ
2020 - 2021 ಜೊತೆಜೊತೆಯಲಿ ಸೂರ್ಯ (ಅತಿಥಿ ಪಾತ್ರ) ಝೀ ಕನ್ನಡ
2023 - ಪ್ರಸ್ತುತ ನಮ್ಮ ಲಚ್ಚಿ ಸಂಗಮ್ (ಮುಖ್ಯ ಪಾತ್ರ) ಸ್ಟಾರ್ ಸುವರ್ಣ
TBA ಕೃಷ್ಣಮ್ಮ ಕಲಿಪಿಂಡಿ ಇದ್ದರಿನಿ TBA ಚೊಚ್ಚಲ ತೆಲುಗು ಧಾರಾವಾಹಿ

ರಿಯಾಲಿಟಿ ಶೋ ಬದಲಾಯಿಸಿ

ವರ್ಷ ಹೆಸರು ಪಾತ್ರ ವಾಹಿನಿ ಟಿಪ್ಪಣಿ
2014 ತಕಧಿಮಿತ ಡಾನ್ಸಿಂಗ್ ಸ್ಟಾರ್ ಸ್ಪರ್ಧಿ ಈ ಟಿವಿ ಕನ್ನಡ 4ನೇ ವಾರದಲ್ಲಿ ಎಲಿಮಿನೇಟೆಡ್
2018 ಕಾಮಿಡಿ ಟಾಕೀಸ್ ನಿರೂಪಕ ಕಲರ್ಸ್ ಕನ್ನಡ

ಪ್ರಶಸ್ತಿಗಳು ಬದಲಾಯಿಸಿ

ವರ್ಷ ಪ್ರಶಸ್ತಿ ವರ್ಗ ಫಲಿತಾಂಶ ಇತರೆ ಟಿಪ್ಪಣಿಗಳು
ಅನುಬಂಧ ಅವಾರ್ಡ್ಸ್ ಉತ್ತಮ ಜೋಡಿ ಗೆಲುವು ವೈಷ್ಣವಿ ಗೌಡಳೊಂದಿಗೆ
2014-15 ಅನುಬಂಧ ಅವಾರ್ಡ್ಸ್ ಉತ್ತಮ ನಾಯಕ ನಟ ಗೆಲುವು
2016-17 ಅನುಬಂಧ ಅವಾರ್ಡ್ಸ್ ಉತ್ತಮ ನಾಯಕ ನಟ ಗೆಲುವು
2018-19 ಅನುಬಂಧ ಅವಾರ್ಡ್ಸ್ ಉತ್ತಮ ನಾಯಕ ನಟ ಗೆಲುವು

ಉಲ್ಲೇಖಗಳು ಬದಲಾಯಿಸಿ

  1. "ಆರ್ಕೈವ್ ನಕಲು". Archived from the original on 2019-07-20. Retrieved 2019-02-28.
  2. https://vijaykarnataka.indiatimes.com/entertainment/gossip/agnishakshi-vijaysurya/articleshow/58854571.cms
  3. "ಆರ್ಕೈವ್ ನಕಲು". Archived from the original on 2017-08-24. Retrieved 2019-02-28.
  4. "ಆರ್ಕೈವ್ ನಕಲು". Archived from the original on 2019-07-20. Retrieved 2019-02-28.
  5. https://www.filmibeat.com/celebs/vijay-suriya.html
  6. ಟೈಮ್ಸ್ ಆಫ್ ಇಂಡಿಯಾ,Vijay Surya Updated: Dec 14, 2018, 18:36 IST
  7. https://www-celebrityborn-com.cdn.ampproject.org/v/s/www.celebrityborn.com/biography/vijay-suriya/666?amp_js_v=a2&amp_gsa=1&usqp=mq331AQHCAFYAYABAQ%3D%3D#referrer=https%3A%2F%2Fwww.google.com&aoh=15444611576591&amp_ct=1544461430890&amp_tf=From%20%251%24s&ampshare=https%3A%2F%2Fwww.celebrityborn.com%2Fbiography%2Fvijay-suriya%2F666[ಶಾಶ್ವತವಾಗಿ ಮಡಿದ ಕೊಂಡಿ]