ಜೊತೆ ಜೊತೆಯಲಿ (ಧಾರಾವಾಹಿ)
ಜೊತೆ ಜೊತೆಯಲಿ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಧಾರಾವಾಹಿಯು ಝೀ ಕನ್ನಡದಲ್ಲಿ 9 ಸೆಪ್ಟೆಂಬರ್ 2019 ರಿಂದ 19 ಮೇ 2023 ರವರೆಗೆ ಪ್ರಸಾರವಾಗಿತ್ತು [೧] . ಈ ಕಾರ್ಯಕ್ರಮವು ಮರಾಠಿ ಭಾಷೆಯ ತುಲಾ ಪಾಹತೆ ರೇ ಧಾರಾವಾಹಿಯ ರಿಮೇಕ್ ಆಗಿದೆ. ಅನಿರುದ್ಧು ಜಟ್ಕರ್ ಮತ್ತು ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ [೨] .
ಜೊತೆ ಜೊತೆಯಲಿ (ಧಾರಾವಾಹಿ) | |
---|---|
ಶೈಲಿ | ಧಾರಾವಾಹಿ |
ನಿರ್ದೇಶಕರು | ಆರೂರು ಜಗದೀಶ |
ನಟರು | ಅನಿರುದ್ಧ ಮೇಘಾ ಶೆಟ್ಟಿ ಮಾನಸ ಮನೋಹರ್ ಅಪೂರ್ವ ಶ್ರೀ ಪ್ರಿಯದರ್ಶಿನಿ ಪೃಥ್ವಿ ಅಂಬಾರ್ |
ಇವರ ಧ್ವನಿ | ನಿಹಾಲ್ ತಾವ್ರೋ ನಿನಾದ ನಾಯಕ್ ರಜತ್ ಹೆಗ್ಡೆ |
ನಿರೂಪಣಾ ಸಂಗೀತಕಾರ | ಸುನಾದ್ ಗೌತಮ್ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಣ | |
ನಿರ್ಮಾಪಕ(ರು) | ಸ್ಮಿತಾ ಜಗದೀಶ್ ಶೆಟ್ಟಿ |
ಸಮಯ | ಅಂದಾಜು. 20-22 ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಝಿ ಕನ್ನಡ |
Original airing | 9 ಸೆಪ್ಟೆಂಬರ್ 2019 ರಿಂದ 19 ಮೇ 2023 ರವರೆಗೆ |
ಕಥಾ ಸಾರಾಂಶ
ಬದಲಾಯಿಸಿಮಧ್ಯವಯಸ್ಕ ಉದ್ಯಮಿ ಆರ್ಯವರ್ಧನ್ ಅನು ಎಂಬ ಮಧ್ಯಮ ವರ್ಗದ ಹುಡುಗಿಯನ್ನು ಪ್ರೀತಿಸುತ್ತಾನೆ. ಅವರ ಸಂಬಂಧವು ನಂಬಿಕೆಯ ಅಡಿಪಾಯದಿಂದ ಪ್ರಾರಂಭವಾಗುತ್ತದೆ, ಆದರೆ ಅವರ ವಯಸ್ಸಿನ ವ್ಯತ್ಯಾಸದಿಂದಾಗಿ ಅವರು ತಮ್ಮ ಸಂಬಂಧದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಆರಂಭದಲ್ಲಿ ಆರ್ಯ ಅನುವನ್ನು ಪ್ರೀತಿಸುತ್ತಿದ್ದರೂ, ತನ್ನ ವಯಸ್ಸಿನ ಕಾರಣದಿಂದಾಗಿ ಅವಳ ಪ್ರೀತಿಯನ್ನು ಸ್ವೀಕರಿಸುವುದಿಲ್ಲ. ಆದರೆ ಅವಳಿಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ಅವನು ಅರಿತುಕೊಂಡಾಗ, ಅವಳು ಮಲಗಿದ್ದಾಳೆ ಎಂದು ಭಾವಿಸಿ ಅವನು ಅವಳನ್ನು ಪ್ರೀತಿ ಮಾಡುತ್ತಿದ್ದಾನೆಂದು ಒಪ್ಪಿಕೊಳ್ಳುತ್ತಾನೆ. ಆದರೆ ಎಚ್ಚರವಾಗಿದ್ದ ಅನು ಈ ಮಾತನ್ನು ಕೇಳುತ್ತಾಳೆ. ಅವರ ಪ್ರೀತಿಯ ಬಗ್ಗೆ ಪರಸ್ಪರ ಮುಖಾಮುಖಿಯಾಗಿ ಒಪ್ಪಿಕೊಳ್ಳದಿದ್ದರೂ ಅವರ ಪ್ರೀತಿ ಕಥೆಯು ಸಣ್ಣ ಪುಟ್ಟ ಜಗಳದೊಂದಿಗೆ ಸುಗಮವಾಗಿ ಸಾಗುತ್ತಾ ಇರುತ್ತದೆ.
ಅಂತಿಮವಾಗಿ ಆರ್ಯವರ್ಧನ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ನಿರ್ಧರಿಸುತ್ತಾನೆ. ತನ್ನ ಹಿಂದಿನ ಜೀವನದ ಬಗ್ಗೆ ಹಂಚಿಕೊಳ್ಳುತ್ತಾನೆ - ಅವನ ಮೊದಲ ಮದುವೆ ಮತ್ತು ಅವನ ಮೊದಲ ಹೆಂಡತಿ ಸಾವಿನ ಬಗ್ಗೆ. ಅದನ್ನು ಮರೆಮಾಚಿದ್ದಕ್ಕಾಗಿ ಅನು ಮೊದಲಿಗೆ ಅವನನ್ನು ದ್ವೇಷಿಸುತ್ತಾಳೆ, ಆದರೆ ನಂತರ ಅವನ ಪ್ರಾಮಾಣಿಕತೆ ಅವಳ ಮನಸ್ಸು ಗೆಲ್ಲುತ್ತದೆ. ಅವನು ತನ್ನ ಹಿಂದಿನ ಜೀವನದ ಬಗ್ಗೆ ಹಂಚಿಕೊಳ್ಳಲು ಬಯಸುತ್ತಾನೆ. ಆದರೆ ಅನು ಭೂತಕಾಲವು ಭೂತಕಾಲ ಎಂದು ಹೇಳುತ್ತಾಳೆ. ನಂತರ ಅವನು ಅಂತಿಮವಾಗಿ ಅವಳನನ್ನು ಒಪ್ಪಿಕೊಂಡು ಅವಳಿಗೆ ಪ್ರಪೋಸ್ ಮಾಡುತ್ತಾನೆ. ಮುಂದೆ ಅವರು ತಮ್ಮ ಕುಟುಂಬಗಳನ್ನು ತಮ್ಮ ಸಂಬಂಧವನ್ನು ಒಪ್ಪಿಕೊಳ್ಳುವಂತೆ ಮಾಡುವ ಸವಾಲನ್ನು ಎದುರಿಸುತ್ತಾರೆ.
ಅಂತಿಮವಾಗಿ ಎಲ್ಲರೂ ಒಪ್ಪಿದಾಗ, ಅನು ಅವನನ್ನು ಮದುವೆಯಾಗಲು ನಿರಾಕರಿಸುತ್ತಾಳೆ. ಏಕೆಂದರೆ ಅವನು ಅವಳಿಂದ ಒಂದು ಪ್ರಮುಖ ಸತ್ಯವನ್ನು ಮರೆಮಾಚಿದ್ದರಿಂದ, ಅವನ ಮೇಲಿನ ನಂಬಿಕೆ ಸ್ವಲ್ಪ ಅಲುಗಾಡುತ್ತದೆ ಮತ್ತು ಮೊದಲೇ ಸತ್ಯವನ್ನು ಹೇಳದಿದ್ದಕ್ಕಾಗಿ ಅವನನ್ನು ದೂಷಿಸುತ್ತಾಳೆ. ಅವಳು ಅವನ ಭೂತಕಾಲವನ್ನು ಹುಡುಕಲು ಹೋಗುತ್ತಾಳೆ. ಅವನು ತನ್ನ ಬಾಲ್ಯದಲ್ಲಿ ಯಾವ ಕಷ್ಟಗಳನ್ನು ಅನುಭವಿಸಿದ್ದಾನೆಂದು ಅರಿತುಕೊಳ್ಳುತ್ತಾಳೆ. ಅವನನ್ನು ಬಳಿ ನೋಯಿಸಿದ್ದಕ್ಕಾಗಿ ತಪ್ಪಿತಸ್ಥ ಭಾವನೆ ಹೊಂದುತ್ತಾಳೆ. ಅವಳು ಅವನ ಬಳಿ ಕ್ಷಮೆಯಾಚಿಸುತ್ತಾಳೆ. ಅವರು ಮತ್ತೆ ಒಂದಾಗಿ, ಅಂತಿಮವಾಗಿ ಸಂತೋಷದಿಂದ ಮದುವೆಯಾಗುತ್ತಾರೆ.
- ಮದುವೆಯ ನಂತರ
ಆದಾಗ್ಯೂ ಮದುವೆಯ ನಂತರ ಅನುವಿಗೆ ಆರ್ಯನ ಹಿಂದಿನ ಜೀವನದ ಬಗ್ಗೆ ತಿಳಿದು, ಅವಳು ಆಘಾತಕ್ಕೊಳಗಾಗುತ್ತಾಳೆ. ಈ ಬಾರಿ ಅವಳ ನಂಬಿಕೆ ಮುರಿದುಹೋಗುತ್ತದೆ. ಆರ್ಯಗೆ ಈ ಬಗ್ಗೆ ತಿಳಿದಿರುವುದಿಲ್ಲ. ಅವಳ ಮೇಲಿನ ಅವನ ಪ್ರೀತಿ ಶುದ್ಧ, ಸತ್ಯ ಮತ್ತು ತುಂಬಾ ಭಾವೋದ್ರಿಕ್ತವಾಗಿರುತ್ತದೆ.
20 ವರ್ಷಗಳ ಹಿಂದೆ, ಸುಭಾಷ್ ಪಾಟೀಲ್ ಅವರನ್ನು ಬೆಂಗಳೂರಿನಲ್ಲಿ ತನ್ನ ರೂಮ್ಮೇಟ್ ಜೆಂಡೆ ಅವರೊಂದಿಗೆ ವಾಸಿಸುವ ಬಡ ಅನಾಥನಾಗಿ ತೋರಿಸಲಾಗಿರುತ್ತದೆ. ಒಂದು ದಿನ, ಅವರು ಸಂದರ್ಶನ ನೀಡಲು ಧಾವಿಸುತ್ತಿರುವಾಗ, ಅವರು ತಮ್ಮ ಆಟೋ ರಿಕ್ಷಾವನ್ನು ಬೆಂಗಳೂರಿನ ರಾಜನಂದಿನಿ ವಿಲಾಸದಲ್ಲಿ ವಾಸಿಸುವ ಶ್ರೀಮಂತ ಉದ್ಯಮಿ ರಾಜವರ್ಧನ್ ಮತ್ತು ಶಾರದಾದೇವಿ ಅವರ ಪುತ್ರಿ ರಾಜನಂದಿನಿ ವರ್ಧನ್ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ರಾಜನಂದಿನಿಯ ಕಾರಿನ ಟೈರ್ ಪಂಕ್ಚರ್ ಆಗುತ್ತಿದ್ದಂತೆ, ಸುಭಾಷ್ ಅವಳನ್ನು ಅವಳ ಗಮ್ಯಸ್ಥಾನಕ್ಕೆ ಬಿಡುತ್ತಾನೆ, ಅವನ ಸಂದರ್ಶನವು ಅದೇ ಕಂಪನಿಯಲ್ಲಿದೆ ಎಂದು ಅರಿತುಕೊಳ್ಳುತ್ತಾನೆ. ಶ್ರೀಮಂತಿಕೆಯ ಆಸೆಯಿಂದ ಮೋಸ ಮಾಡಿ ರಾಜನಂದಿನಿಯ ವಿಶ್ವಾಸವನ್ನು ಗೆಲ್ಲುತ್ತಾನೆ. ಇಬ್ಬರೂ ಅಂತಿಮವಾಗಿ ಪರಸ್ಪರ ತಮ್ಮ ಪ್ರೀತಿಯನ್ನು ಒಪ್ಪಿಕೊಂಡು ಮದುವೆಯಾಗುತ್ತಾರೆ. ಅವರ ಮದುವೆಯ ನಂತರ, ಸುಭಾಷ್ ರಾಜವರ್ಧನ್ ಅವರ ಆಸೆಗಾಗಿ ರಾಜನಂದಿನಿ ವಿಲಾಸದಲ್ಲಿ ರಾಜನಂದಿನಿಯೊಂದಿಗೆ ವಾಸಿಸಲು ಪ್ರಾರಂಭಿಸುತ್ತಾನೆ. ಆದಾಗ್ಯೂ, ರಾಜವರ್ಧನ್ ಸುಭಾಶ್ ವಿರುದ್ಧ ಎಲ್ಲಾ ಪುರಾವೆಗಳನ್ನು ಪಡೆಯುತ್ತಾನೆ ಮತ್ತು ತನ್ನ ವ್ಯವಹಾರವನ್ನು ಮೋಸದಿಂದ ಪಡೆದ ಬಗ್ಗೆ ತಿಳಿದು ಅವನಿಗೆ ಅವಮಾನಿಸುತ್ತಾನೆ. ಇದಕ್ಕೆ ಪ್ರತೀಕಾರವಾಗಿ, ಸುಭಾಷ್ ತಿಳಿಯದೆ ಅವನಿಗೆ ತಪ್ಪು ಔಷಧಿಯನ್ನು ನೀಡುತ್ತಾನೆ. ಇದರ ಪರಿಣಾಮವಾಗಿ ರಾಜವರ್ಧನ್ ಸಾವನ್ನಪ್ಪುತ್ತಾನೆ. ಸುಭಾಷ್ ರಾಜವರ್ಧನ್ ಅವರ ಮರಣೋತ್ತರ ವರದಿಗಳನ್ನು ಸಹ ಬದಲಾಯಿಸುತ್ತಾನೆ. ಇದು ರಾಜವರ್ಧನ್ ಸಾವಿಗೆ ತಾನು ಕಾರಣ ಎಂದು ಶಾರದಾ ದೇವಿ ಭಾವಿಸುವಂತೆ ಮಾಡುತ್ತದೆ.
ತಪ್ಪಿತಸ್ಥಳೆಂದು ಭಾವಿಸಿ, ಅವಳು ಪೊಲೀಸರಿಗೆ ಸತ್ಯವನ್ನು ಬಹಿರಂಗಪಡಿಸಲು ನಿರ್ಧರಿಸುತ್ತಾಳೆ. ಆದರೆ, ಸುಭಾಷ್ ಅವಳನ್ನು ತಡೆಯುತ್ತಾನೆ, ಅವಳು ಹಾಗೆ ಮಾಡಿದರೆ ಅವಳು ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳುತ್ತಾನೆ. ಕೆಲವು ದಿನಗಳ ನಂತರ, ರಾಜನಂದಿನಿ ಸುಭಾಷ್ ನನ್ನು ಅನುಮಾನಿಸುತ್ತಾಳೆ. ಅವನ ಕಚೇರಿಯ ಕ್ಯಾಬಿನ್ ನಲ್ಲಿ ಮೈಕ್ರೊಫೋನ್ ಅನ್ನು ಅಡಗಿಸಿಹಿಡುತ್ತಾಳೆ. ಸುಭಾಷ್ ಮತ್ತು ಜೆಂಡೆ ಅವರ ಯೋಜನೆಯನ್ನು ಮೈಕ್ರೊಫೋನ್ ನಲ್ಲಿ ರೆಕಾರ್ಡ್ ಆಗುತ್ತದೆ. ಅವಳು ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಾಳೆ. ಈ ಪುರಾವೆಯನ್ನು ಪಡೆದ ನಂತರ, ರಾಜನಂದಿನಿ ಸುಭಾಷ್ ಮತ್ತು ಜೆಂಡೆ ಅವರನ್ನು ಪೊಲೀಸರಿಗೆ ಒಪ್ಪಿಸುವುದಾಗಿ ಬೆದರಿಕೆ ಹಾಕುತ್ತಾಳೆ. ಸುಭಾಷ್ ಮತ್ತು ರಾಜನಂದಿನಿ ಮಧ್ಯೆ ನಡೆದ ಜಗಳದ ಸಮಯದಲ್ಲಿ ತಿಳಿಯದೆಯೇ ಅವಳು ಬಂಡೆಯಿಂದ ಬಿದ್ದು ಸಾಯುತ್ತಾಳೆ. ಅಲ್ಲಿಯವರೆಗೆ ಸುಭಾಷ್ ಪಾಟೀಲ್ ಆಗಿದ್ದವನು ಆರ್ಯವರ್ಧನ್ ಆಗಿ ಬದಲಾದನು.
- ಕಥೆ ಮುಂದುವರೆದು
ಒಂದು ದಿನ ಕಾರಿನಲ್ಲಿ ಬರುತ್ತಿದ್ದ ಆರ್ಯನಿಗೆ ಅಪಘಾತವಾಗುತ್ತದೆ. ಇತ್ತ ಸಾಲಾಭಾದೆಯನ್ನು ತಾಳಲಾರದೆ ಆರ್ಯನ ತಮ್ಮ ಸಂಜಯ್ ದೇಸಾಯಿ ಆತ್ಮಹತ್ಯೆಯನ್ನು ಮಾಡಿಕೊಳ್ಳುತ್ತಾನೆ. ಕಾಕಾತಾಳಿಯಾವಾಗಿ ಇಬ್ಬರು ಒಂದೇ ಜಾಗದಲ್ಲಿ ಇರುತ್ತಾರೆ. ಅಪಘಾತದಲ್ಲಿ ಆರ್ಯನ ಮುಖ ಗುರುತಿಸಲು ಸಾಧ್ಯವಾಗದಷ್ಟು ಹಾಳಾಗಿ ಹೋಗಿರುತ್ತದೆ. ಸಂಜಯ್ ತಾಯಿಯ ತಪ್ಪಿನಿಂದಾಗಿ ಆರ್ಯನಿಗೆ ಸಂಜು ಮುಖವನ್ನು ಪ್ಲಾಸ್ಟಿಕ್ ಸರ್ಜರಿ ಮೂಲಕ ಕೊಡಲಾಗುತ್ತದೆ. ಅಪಘಾತದ ಕಾರಣದಿಂದ ತನ್ನ ನೆನಪಿನ ಶಕ್ತಿಯನ್ನು ಆರ್ಯ ಕಳೆದುಕೊಂಡಿರುತ್ತಾನೆ.
ಪಾತ್ರವರ್ಗ
ಬದಲಾಯಿಸಿಮುಖ್ಯ ಪಾತ್ರಗಳು
ಬದಲಾಯಿಸಿ- ಅನಿರುದ್ಧ ಜಾಟ್ಕರ್ (2019-2022): ಕಥಾ ನಾಯಕ ಆರ್ಯವರ್ಧನ್ ಪಾತ್ರದಲ್ಲಿ. ಸುಭಾಷ್ ಪಾಟೀಲ್ ಆಲಿಯಾಸ್ ಆರ್ಯನಾಗಿ. ರಾಜಾ ನಂದಿನಿ ಹಾಗೂ ಅನು ಸಿರಿಮನೆ ಗಂಡನಾಗಿ
- ಹರೀಶ್ ರಾಜ್(2022–2023): ಆರ್ಯವರ್ಧನ್ ಮತ್ತು ಸಂಜಯ್ ದೇಸಾಯಿ ಪಾತ್ರದಲ್ಲಿ.
- ಮೇಘಾ ಶೆಟ್ಟಿ: ಕಥಾ ನಾಯಕಿ ಅನು ಸಿರಿಮನೆ ಪಾತ್ರದಲ್ಲಿ. ಪುಷ್ಪ ಹಾಗೂ ಸುಬ್ಬುವಿನ 21 ವರ್ಷದ ಏಕೈಕ ಮಗಳಾಗಿ. ಆರ್ಯವರ್ಧನ್ ಎರಡನೇ ಹೆಂಡತಿಯಾಗಿ. ರಾಜನಂದಿನಿಯ ಪುನರ್ಜನ್ಮ.
- ಸೋನು ಗೌಡ: ರಾಜನಂದಿನಿಯಾಗಿ. ರಾಜವರ್ಧನ್ ಹಾಗೂ ಶಾರಾದ ಮಗಳಾಗಿ. ಸುಭಾಷ್ ಪಾಟೀಲ್ ಹೆಂಡತಿಯಾಗಿ. ಹರ್ಷವರ್ಧನ್ ನ ಅಕ್ಕನಾಗಿ.
ಪೋಷಕ ಪಾತ್ರಗಳು
ಬದಲಾಯಿಸಿ- ಯಶವಂತ್ ಬಿ: ಝೆಂಡೆ ಪಾತ್ರದಲ್ಲಿ[೩]
- ಮಾನಸಾ ಮನೋಹರ್: ಮೀರಾ ಪಾತ್ರದಲ್ಲಿ
- ಅಪೂರ್ವಾ ಶ್ರೀ: ಪುಷ್ಪಾ ಪಾತ್ರದಲ್ಲಿ
- ಪ್ರಿಯದರ್ಶಿನಿ: ರಮ್ಯಾ ಪಾತ್ರದಲ್ಲಿ. ಅನು ಅವರ ಸ್ನೇಹಿತೆಯಾಗಿ
- ಪೃಥ್ವಿ ಅಂಬರ್: ನೀಲ್ ಪಾತ್ರದಲ್ಲಿ
ಸಂಗೀತ
ಬದಲಾಯಿಸಿಈ ಧಾರಾವಾಹಿಯ ಹಾಡನ್ನು ಹರ್ಷಪ್ರಿಯ ಭಾರದ್ವಾಜ್ ಬರೆದಿದ್ದು, ಸುನಾದ್ ಗೌತಮ್ ಸಂಗೀತವನ್ನು ನಿರ್ದೇಶಿಸಿದ್ದಾರೆ. ಝಿ ಕನ್ನಡ ಸರಿಗಮಪ ಕಾರ್ಯಕ್ರಮದ ಸ್ಪರ್ಧಿಗಳಾಗಿದ್ದ ನಿಹಾಲ್ ತಾವ್ರೋ, ನಿನಾದ ನಾಯಕ್, ರಜತ್ ಹೆಗ್ಡೆ ಗಾಯನ ಮಾಡಿದ್ದಾರೆ.
ಈ ಹಾಡು ತುಂಬ ಜನಪ್ರಿಯವಾಗಿದ್ದು[೪], ಯೂಟ್ಯೂಬಿನಲ್ಲಿ 1 ಕೋಟಿ 20 ಲಕ್ಷಕ್ಕೂ ಹೆಚ್ಚು ಸಲ[೫] ಈ ಹಾಡಿನ ವೀಡಿಯೋವನ್ನು ವೀಕ್ಷಿಸಿದ್ದಾರೆ,
ಪ್ರಸಾರ
ಬದಲಾಯಿಸಿ9 ಸೆಪ್ಟೆಂಬರ್ 2020 ಸೋಮವಾರದಿಂದ ಶುಕ್ರವಾರದವರೆಗೆ 8:30 PM IST ಕ್ಕೆ ಪ್ರಥಮ ಪ್ರದರ್ಶನಗೊಂಡಿತು.
ಉಲ್ಲೇಖಗಳು
ಬದಲಾಯಿಸಿ- ↑ "Jothe Jotheyali Serial on (Zee Kannada) Cast, Episode, Title Song". The Clash Of News (in ಅಮೆರಿಕನ್ ಇಂಗ್ಲಿಷ್). 2020-05-02. Archived from the original on 2020-07-08. Retrieved 2020-07-08.
- ↑ "Jote Joteyali Kannada Serial Cast 2019 » Kannadaserial.co". Kannadaserial.co (in ಅಮೆರಿಕನ್ ಇಂಗ್ಲಿಷ್). 2019-08-12. Archived from the original on 2020-07-10. Retrieved 2020-07-08.
- ↑ Tamizha, Hip Hop (2019-09-27). "Jothe Jotheyali Kannada Serial Cast, Story, Episodes, Videos and Photos". WikiBioPic - Wiki Biography Pictures (in ಅಮೆರಿಕನ್ ಇಂಗ್ಲಿಷ್). Archived from the original on 2020-08-09. Retrieved 2020-07-08.
- ↑ "ಆರ್ಕೈವ್ ನಕಲು". Archived from the original on 2020-07-11. Retrieved 2020-07-08.
- ↑ https://www.youtube.com/watch?v=z6nx-IPMxNM