ಪೃಥ್ವಿ ಅಂಬಾರ್

ಭಾರತೀಯ ನಟ

ಪೃಥ್ವಿ ಅಂಬಾರ್ ಇವರು ಭಾರತೀಯ ನಟ. ಇವರು ಪ್ರಧಾನವಾಗಿ ಕನ್ನಡ ಮತ್ತು ತುಳು ಚಲನಚಿತ್ರೋದ್ಯಮಗಳಲ್ಲಿ ನಟಿಸುತ್ತಿದ್ದಾರೆ, ಮಂಗಳೂರಿನಲ್ಲಿ ರೇಡಿಯೊ ಜಾಕಿಯಾಗಿಯೂ ಕೆಲಸ ಮಾಡುತ್ತಿದ್ದರು. ಇವರು ೨೦೧೪ ರಲ್ಲಿ ಬಿಡುಗಡೆಯಾದ ಬರ್ಕೆ ಎಂಬ ತುಳು ಚಲನಚಿತ್ರದ ಮೂಲಕ ದೊಡ್ಡ ಪರದೆಗೆ ಪ್ರವೇಶ ಮಾಡಿದರು. ಅವರ ಎರಡನೆಯ ಚಿತ್ರ ಬ್ಲಾಕ್ ಬಸ್ಟರ್ ಪಿಲಿಬೈಲ್ ಯಮುನಕ್ಕ, ಇದನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಕನ್ನಡ ಸಿನೆಮಾ "ದಿಯಾ"ದಲ್ಲಿ ಮುಖ್ಯ ಪಾತ್ರದಲ್ಲಿ ಹಾಗೂ ಕನ್ನಡ ಧಾರವಾಹಿ "ಜೊತೆ ಜೊತೆಯಲಿ"ಯಲ್ಲಿ 'ನೀಲ್' ಪಾತ್ರದಲ್ಲಿ ಇವರು ನಟಿಸಿದ್ದಾರೆ.

ಪೃಥ್ವಿ ಅಂಬಾರ್
ಪೃಥ್ವಿ ಅಂಬಾರ್
ಜನನ೧೭‌ ಆಗಸ್ಟ್‌ ೧೯೮೮
ರಾಷ್ಟ್ರೀಯತೆಭಾರತೀಯ
ಇತರೆ ಹೆಸರುನಾಗರಾಜ್ ಅಂಬಾರ್
ವಿದ್ಯಾಭ್ಯಾಸದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆ , ಕಾಪು
ದಂಡತೀರ್ಥ ಪದವಿಪೂರ್ವ ಕಾಲೇಜು , ಕಾಪು
ಪೂರ್ಣಪ್ರಜ್ಞ ಕಾಲೇಜು , ಉಡುಪಿ
ಸೇಂಟ್ ಅಲೋಶಿಯಸ್ ಕಾಲೇಜು, ಮಂಗಳೂರು.
ವೃತ್ತಿ(ಗಳು)ಆರ್.ಜೆ , ವಿ.ಜೆ , ಮಾಡೆಲ್ ,ನೃತ್ಯಗಾರ, ನಟ.
ಸಂಗಾತಿಪಾರುಲ್ ಶುಕ್ಲ
ಪೋಷಕ(ರು)ವೀರಪ್ಪ ಅಂಬಾರ್ (ತಂದೆ), ಸುಜಾತ ಅಂಬಾರ್ (ತಾಯಿ)[]

ಇವರು ಪಿಲಿಬೈಲ್ ಯಮುನಕ್ಕ ,ಪಮ್ಮಣ್ಣೆ ದಿ ಗ್ರೇಟ್[] , ಗೋಲ್ ಮಾಲ್ , 2 ಎಕ್ರೆ , ಇಂಗ್ಲಿಷ್ , ಆಟಿಡೊಂಜಿ ದಿನ[] , ಎನ್ನ , ಕುದುಕನ ಮದಿಮೆ ಎಂಬ ತುಳು ಹಾಗೂ ರಾಜರು , ಡಿ.ಕೆ ಬೋಸ್ , ದಿಯಾ ಎಂಬ ಕನ್ನಡ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರ ವಹಿಸಿ ನಟಿಸಿದ್ದಾರೆ.

ಜನನ,ಜೀವನ ಮತ್ತು ಶಿಕ್ಷಣ

ಬದಲಾಯಿಸಿ

ಪೃಥ್ವಿ ಇವರು ೧೭ ನೇ ಆಗಸ್ಟ್ ೧೯೮೮ ರಂದು ಕರ್ನಾಟಕದ ಉಡುಪಿ ಜಿಲ್ಲೆಯಲ್ಲಿ ತುಳು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಇವರು ಉಡುಪಿಯ ಕಾಪುವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು . ನಂತರ ಕಾಪುವಿನ ದಂಡತಿರ್ಥ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದರು. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದು, ಮಾಸ್ ಕಮ್ಯುನಿಕೇಷನ್ ನಲ್ಲಿ ಪದವಿ ಪಡೆಯಲು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸೇರಿದರು.[]

ವೃತ್ತಿಜೀವನ

ಬದಲಾಯಿಸಿ

ಇವರು ಮಂಗಳೂರಿನಲ್ಲಿ ಆರ್.ಜೆ. ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.[] ಇವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಇವರು ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಇವರು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ ಆರ್.ಜೆ. ಇವರು ಆರ್.ಜೆ. ನಾಗರಾಜ್ ಎಂದು ಜನಪ್ರಿಯರಾಗಿದ್ದರು. ಇವರು ೨೦೧೪ ರಲ್ಲಿ ಬರ್ಕೆ ಎಂಬ ತುಳು ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಿಸಿದರು.

೨೦೧೬ ರಲ್ಲಿ ಇವರು ಕೆ.ಸೂರಜ್ ಶೆಟ್ಟಿಯವರ ಎರಡನೇ ತುಳು ಚಿತ್ರ ಪಿಲಿಬೈಲ್ ಯಮುನಕ್ಕ ದಲ್ಲಿ ಸೋನಲ್ ಮೊಂಟಿರೊ ಅವರೊಂದಿಗೆ ನಟಿಸಿದರು. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು. ನಂತರ ಇವರು ಹಲವಾರು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು.

ವೈಯಕ್ತಿಕ ಜೀವನ

ಬದಲಾಯಿಸಿ

ಪೃಥ್ವಿ ಅಂಬಾರ್ ತಮ್ಮ ಗೆಳತಿ ಪಾರುಲ್ ಶುಕ್ಲಾ ಅವರನ್ನು ೨೦೧೯ ರ ನವೆಂಬರ್ ೩ ರಂದು ಮಂಗಳೂರಿನಲ್ಲಿ ವಿವಾಹವಾದರು.[]

ಧಾರಾವಾಹಿ/ಚಿತ್ರಗಳ ಪಟ್ಟಿ

ಬದಲಾಯಿಸಿ

ಅಭಿನಯಿಸಿದ ಧಾರಾವಾಹಿಗಳು

ಬದಲಾಯಿಸಿ
ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೦೮ ರಾಧಾ ಕಲ್ಯಾಣ ಶೀಲಂ []
೨೦೧೫ ಲವ್ ಲವಿಕೆ ಮನು
೨೦೧೪ ಸಾಗರ ಸಂಗಮ ಸಂಜು
೨೦೨೦ ಜೊತೆ ಜೊತೆಯಲಿ ನೀಲ್ []

ಅಭಿನಯಿಸಿದ ತುಳು ಚಲನಚಿತ್ರಗಳು

ಬದಲಾಯಿಸಿ
ವರ್ಷ ತಲೆಬರಹ ಪಾತ್ರ ಉಲ್ಲೇಖ
೨೦೧೪ ಬರ್ಕೆ []
೨೦೧೬ ಪಿಲಿಬೈಲ್ ಯಮುನಕ್ಕ [೧೦][೧೧]
೨೦೧೮ ಪಮ್ಮಣ್ಣೆ ದಿ ಗ್ರೇಟ್ [೧೨][೧೩]
೨೦೧೯ ಗೋಲ್ಮಾಲ್ [೧೪][೧೫]
ಆಟಿಡೊಂಜಿ ದಿನ [೧೬][೧೭]
ಇಂಗ್ಲಿಷ್ [೧೮]
೨೦೨೦ ಕುದ್ಕನ‌ ಮದ್ಮೆ [೧೯][೨೦]
ಎನ್ನ [೨೧]
ರಡ್ಡ್ ಎಕ್ರೆ [೨೨]
VIP'S ಲಾಸ್ಟ್ ಬೆಂಚ್ [೨೩]

ಅಭಿನಯಿಸಿದ ಕನ್ನಡ ಚಲನಚಿತ್ರಗಳು

ಬದಲಾಯಿಸಿ
Key
  Denotes films that have not yet been released
ವರ್ಷ ಶೀರ್ಷಿಕೆ ಪಾತ್ರ Notes ಉಲ್ಲೇಖ
೨೦೧೬ ಕರ್ವ Unknown [೨೪]
2017 ರಾಜರು Unknown [೨೫]
2019 DK Boss Unknown [೨೬]
೨೦೨೦ Dia ಆದಿ Debut as Lead [೨೭]
೨೦೨೧ Life Is Beautiful   TBA Filming [೨೮]
Sugarless  TBA Filming [೨೯]
For Regn  TBA Filming [೩೦]

ನಾಮನಿರ್ದೇಶನ ಮತ್ತು ಪ್ರಶಸ್ತಿಗಳು

ಬದಲಾಯಿಸಿ
ಸಿನಿಮಾ ಪ್ರಶಸ್ತಿ ವರ್ಗ ಫಲಿತಾಂಶ ಉಲ್ಲೇಖ
ದಿಯಾ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಅತ್ಯುತ್ತಮ ನಟ ಪ್ರಶಸ್ತಿ (ಪುರುಷ) ನಾಮನಿರ್ದೇಶನ [೩೧]

ಉಲ್ಲೇಖಗಳು

ಬದಲಾಯಿಸಿ
  1. D, Deepa L. (29 August 2016). "PRUTHVI AMBER". Retrieved 23 May 2020.
  2. "Pruthvi Ambar in Pammanne the Great tulu movie". Varthabharati. Retrieved 29 May 2020.
  3. "'ಆಟಿಡೊಂಜಿ ದಿನ' ತುಳು ಸಿನಿಮಾದಲ್ಲಿ ಪೃಥ್ವಿ". Asianet News Network Pvt Ltd. Retrieved 29 May 2020.
  4. "Pruthvi Ambar: Age, Wiki, Biography | FilmiFeed". www.filmifeed.com. Archived from the original on 3 ಜೂನ್ 2020. Retrieved 28 May 2020.
  5. "NK TV: Pruthvi Amber is Mangaluru's new sensation". NewsKarnataka (in ಇಂಗ್ಲಿಷ್). Archived from the original on 3 ಜೂನ್ 2020. Retrieved 28 May 2020.
  6. Pathur, Shashikara (3 November 2019). "ಪೃಥ್ವಿ ಅಂಬಾರ್ ಬಾಳಲ್ಲಿ ಪ್ರೇಮ ಪಯಣದ ಆರಂಭ". https://kannada.filmibeat.com. Retrieved 29 May 2020. {{cite web}}: External link in |website= (help)
  7. D, Deepa L. (29 August 2016). "ರಾಧಾ ಕಲ್ಯಾಣ ಧಾರವಾಹಿಯಲ್ಲಿ ಪೃಥ್ವಿ ಅಂಬರ್". Retrieved 28 May 2020.
  8. "'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ 'ದಿಯಾ' ಸಿನಿಮಾದ ನಟ ಪೃಥ್ವಿ ಅಂಬರ್!". Vijaya Karnataka. Retrieved 28 May 2020.
  9. D, Deepa L. (29 August 2016). "PRUTHVI AMBER". Retrieved 29 May 2020.
  10. "ತುಳು ಚಿತ್ರ ರಂಗದಲ್ಲಿ ದಾಖಲೆ ಬರೆದ 'ಪಿಲಿಬೈಲ್ ಯಮುನಕ್ಕ'". https://kannada.filmibeat.com. 24 December 2016. Retrieved 28 May 2020. {{cite news}}: External link in |work= (help)
  11. "ಭರಪೂರ ಹಾಸ್ಯಕ್ಕೆ ಕೊರತೆ ಇಲ್ಲದ 'ಪಿಲಿಬೈಲ್ ಯಮುನಕ್ಕ' ಅರುಣಾ ಚಿತ್ರಮಂದಿರದಲ್ಲಿ ಮೂರನೇ ವಾರಕ್ಕೆ ಲಗ್ಗೆ". ಸುದ್ದಿ ಪುತ್ತೂರು. Archived from the original on 3 ಜೂನ್ 2020. Retrieved 28 May 2020.
  12. "​ಆ. 24: 'ಪಮ್ಮಣ್ಣೆ ದಿ ಗ್ರೇಟ್' ಬಿಡುಗಡೆ - Varthabharathi". Dailyhunt (in ಇಂಗ್ಲಿಷ್). Retrieved 29 May 2020. {{cite news}}: zero width space character in |title= at position 1 (help)
  13. "ಪಮ್ಮಣೆ ದಿ ಗ್ರೇಟ್ ಸಿನಿಮಾ ಬಿಡುಗಡೆ: ಕರಾವಳಿಯಾದ್ಯಂತ 14 ಟಾಕೀಸ್‍ಗಳಲ್ಲಿ ತೆರೆಗೆ - BUNTS NEWS WORLD". www.buntsnews.com. Retrieved 29 May 2020.
  14. https://www.youtube.com/watch?v=MePoPzlgW04
  15. Cinema, Tulu (19 April 2019). ""Golmaal" Tulu Movie Review". Retrieved 29 May 2020.
  16. "'ದಿಯಾ' ಸಿನಿಮಾ ಹೀರೋ ಪೃಥ್ವಿ ಅಂಬರ್‌ ಕೈಹಿಡಿದ ಉತ್ತರ ಭಾರತದ ಬೆಡಗಿ! ಇವರದ್ದು 10 ವರ್ಷಗಳ ಲವ್‌ಸ್ಟೋರಿ!". Vijaya Karnataka. Retrieved 29 May 2020.
  17. "`ಆಟಿಡೊಂಜಿ ದಿನ' ತುಳು ಸಿನೆಮಾ ಅಕ್ಟೋಬರ್‍ನಲ್ಲಿ ಬೆಳ್ಳಿ ತೆರೆಗೆ". canaranews.com. Retrieved 29 May 2020.
  18. "Pruthvi Ambar in English titled movie". www.daijiworld.com. Retrieved 29 May 2020.
  19. "'ಕುದ್ಕನ ಮದ್ಮೆ' ಚಿತ್ರಕ್ಕೆ ತುಳುನಾಡಿನಲ್ಲಿ ಉತ್ತಮ ರೆಸ್ಪಾನ್ಸ್‌". CitizenLive News. 4 January 2020. Archived from the original on 3 ಜೂನ್ 2020. Retrieved 29 May 2020.
  20. "​'ಕುದ್ಕನ ಮದ್ಮೆ' ಸಿನಿಮಾದಲ್ಲಿ ಪೃಥ್ವಿ ಅಂಬರ್". Vartha Bharati- ವಾರ್ತಾ ಭಾರತಿ (in ಇಂಗ್ಲಿಷ್). Retrieved 29 May 2020. {{cite news}}: zero width space character in |title= at position 1 (help)
  21. "ಎನ್ನ ಸಿನಿಮಾದಲ್ಲಿ ಪೃಥ್ವಿ". Archived from the original on 3 ಜೂನ್ 2020. Retrieved 29 May 2020.
  22. Kapikad, Sathish. "`ರಡ್ಡ್ ಎಕ್ರೆ' ಸಿನಿಮಾದಲ್ಲಿ ಪೃಥ್ವಿ ಅಂಬರ್". KANNADIGA WORLD. Retrieved 29 May 2020.
  23. Cinema, Tulu (27 December 2017). "Young talents to make youth based Tulu film "Last Bench"". Retrieved 29 May 2020.
  24. "ಪ್ರಯೋಗಮುಖಿ ಪೃಥ್ವಿ ಅಂಬರ್‌". Prajavani (in ಇಂಗ್ಲಿಷ್). 4 December 2018. Retrieved 29 May 2020.
  25. "ಕೋಸ್ಟಲ್ ವುಡ್ ನ ಸಕಲಕಲಾವಲ್ಲಭ..." NewsKannada. 8 December 2016. Archived from the original on 3 ಜೂನ್ 2020. Retrieved 29 May 2020.
  26. "ಕನ್ನಡ-ತುಳು ಚಿತ್ರರಂಗದ ಸಕಲಕಲಾವಲ್ಲಭ ನಮ್ಮ ಈ ಕೀರ್ತನ್ ಭಂಡಾರಿ". Kalpa.news. 13 December 2019. Retrieved 29 May 2020.
  27. "Mangaluru: Tulu actor Pruthvi Ambar starrer Kannada movie 'Diya' to release on Feb 7". www.daijiworld.com. Retrieved 28 May 2020.
  28. "Pruthvi Ambaar next film 'Life is Beautiful' to begin shooting in September - The New Indian Express". www.newindianexpress.com. Retrieved 2020-10-09.
  29. "Pruthvi Ambaar on board 'Sugarless' - The New Indian Express". www.newindianexpress.com. Retrieved 2020-10-09.
  30. "Milana Nagaraj to star opposite Pruthvi Ambaar in new film, For Regn - Times of India". The Times of India (in ಇಂಗ್ಲಿಷ್). Retrieved 2020-10-09.
  31. "Winners: Chandanavana Film Critics Academy 2020: Dia, Popcorn Monkey Tiger, Gentleman Walk Away with Maximum Honours". ibtimes. 23 February 2021.