ದೃಷ್ಟಿಬೊಟ್ಟು (ಕನ್ನಡ ಧಾರಾವಾಹಿ)
ದೃಷ್ಟಿಬೊಟ್ಟು ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ[೧]. 2024ರ ಸೆಪ್ಟೆಂಬರ್ 9 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದವರೆಗೆ ರಾತ್ರಿ 6:30 ಗಂಟೆಗೆ ಪ್ರಸಾರವಾಗುತ್ತಿದೆ[೨]. ಪ್ರೀತಿಯ ಗುಟ್ಟು ದೃಷ್ಟಿಬೊಟ್ಟು ಎಂಬವುದು ಈ ಕಾರ್ಯಕ್ರಮದ ಪೂರ್ಣ ಹೆಸರಾಗಿದೆ. ಈ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ, ನಮ್ಮ ಲಚ್ಚಿ ಖ್ಯಾತಿಯ ನಟ ವಿಜಯ್ ಸೂರ್ಯ, ಹಿರಿಯ ನಟಿ ಅಂಬಿಕಾ ಹಾಗೂ ಹೊಸ ಮುಖ ಅರ್ಪಿತಾ ಮೋಹಿತೆ ನಟಿಸುತ್ತಿದ್ದಾರೆ[೩] [೪].
ದೃಷ್ಟಿಬೊಟ್ಟು (ಕನ್ನಡ ಧಾರಾವಾಹಿ) | |
---|---|
ಶೈಲಿ | ದೈನಂದಿನ ಧಾರಾವಾಹಿ |
ನಿರ್ದೇಶಕರು | ಶ್ರವಂತ್ |
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ನಿರ್ಮಾಣ | |
ನಿರ್ಮಾಪಕ(ರು) | ರಕ್ಷಿತ್ ಗೌಡ ಮತ್ತು ಅನುಷಾ ಶಿವಪ್ರಸದ್ |
ಸಮಯ | 20-22 ನಿಮಿಷಗಳು |
ಪ್ರಸಾರಣೆ | |
ಮೂಲ ವಾಹಿನಿ | ಕಲರ್ಸ್ ಕನ್ನಡ (ವಿಯಾಕಾಂ 18) |
ಮೂಲ ಪ್ರಸಾರಣಾ ಸಮಯ | 9 ಸೆಪ್ಟೆಂಬರ್ 2024 – ಪ್ರಸ್ತುತ |
ಕಥಾ ಸಾರಾಂಶ
ಬದಲಾಯಿಸಿಎರಡು ವಿಭಿನ್ನ ಕೌಟುಂಬಿಕ ಹಿನ್ನೆಲೆಗಳಿಂದ ಬಂದ ದೃಷ್ಟಿ ಎಂಬ ಹುಡುಗಿ ಹಾಗೂ ದತ್ತ ಶ್ರೀರಾಮ್ ಪಾಟೀಲ್ ಎಂಬ ಹುಡುಗನ ಬದುಕುಗಳು ಸಂಧಿಸಿದಾಗ ನಡೆಯುವ ಘಟನೆಗಳನ್ನು ಧಾರಾವಾಹಿಯು ಎಳೆಎಳೆಯಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ಕಥಾ ನಾಯಕಿ ದೃಷ್ಟಿಯ ಪಾಲಿಗೆ ರೂಪ ಅನ್ನುವುದೇ ಶಾಪವಾಗಿರುತ್ತದೆ. ತನ್ನ ಮೈಬಣ್ಣ ಬಿಳಿಯಾಗಿದ್ದರು ಅದನ್ನು ಕಪ್ಪಾಗಿ ಬದಲಾಯಿಸಿಕೊಂಡು ಬದುಕುತ್ತಿರುವ ಅವಳಿಗೆ ತನ್ನ ಸೋದರಿಯನ್ನು ಮರಳಿ ಮನೆಗೆ ಕರೆತಂದು ಕುಟುಂಬವನ್ನು ಒಂದು ಮಾಡಬೇಕೆಂಬ ಗುರಿ ಇರುತ್ತದೆ.
ಆದರೆ ಇತ್ತ ಕಥಾನಾಯಕ ದತ್ತ, ಬೆಳ್ಳಗಿರುವ ಹೆಣ್ಣುಗಳನ್ನ ಕಂಡರೆ ಉರಿದು ಬೀಳುತ್ತಾನೆ. ಮೊದಲು ಮೆಕಾನಿಕ್ ಆಗಿದ್ದ ದತ್ತನು ಈಗ ರೌಡಿಯಾಗಿರುತ್ತಾನೆ. ದುರುಳ ಪೊಲೀಸನೊಬ್ಬನ ಕೈಗೆ ಸಿಕ್ಕ ದೃಷ್ಟಿ ಅವನ ಕಿರುಕುಳಕ್ಕೆ ಸಿಕ್ಕು ಒದ್ದಾಡುತ್ತಿರುವಾಗ ದತ್ತನ ಪ್ರವೇಶವಾಗುತ್ತದೆ.
ನಿರ್ಮಾಣ
ಬದಲಾಯಿಸಿಧಾರಾವಾಹಿಯ ನಿರ್ಮಾಣವನ್ನು ‘ಪುಟ್ಟಗೌರಿ ಮದುವೆ’, ‘ಗಟ್ಟಿಮೇಳ’ ಧಾರಾವಾಹಿಯಲ್ಲಿ ನಾಯಕ ನಟನಾಗಿ ನಟಿಸಿದ್ದ ರಕ್ಷಿತ್ ಗೌಡ ಹಾಗೂ ಇವರ ಪತ್ನಿ ತಮ್ಮ ನಿರ್ಮಾಣ ಸಂಸ್ಥೆ ಶ್ರೀ ಸಾಯಿ ಆಂಜನೇಯ ಕಂಪನಿ ಪ್ರೆಸೆಂಟ್ಸ್ಯಿಂದ ನಿರ್ಮಾಣ ಮಾಡುತ್ತಿದ್ದಾರೆ[೫] [೬].
ಪ್ರಸಾರ
ಬದಲಾಯಿಸಿ9 ಸೆಪ್ಟೆಂಬರ್ 2024 ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶನಿವಾರದ ವರೆಗೆ ರಾತ್ರಿ 6:30 ವರೆಗೆ ಪ್ರಸಾರವಾಗುತ್ತಿದೆ. ಆದರೆ, ಈ ಧಾರಾವಾಹಿಯ ಪ್ರಸಾರದಿಂದ ಕಲರ್ಸ್ ಕನ್ನಡವು ಜುಲೈನಲ್ಲಿ ಆರಂಭವಾದ ನನ್ನ ದೇವ್ರು ಧಾರಾವಾಹಿಯ ಪ್ರಸಾರದಲ್ಲಿ ಸಮಯ ಬದಲಾವಣೆ ಮಾಡಿದೆ. ನನ್ನ ದೇವ್ರು ಮೊದಲಿಗೆ 6:30 ವರೆಗೆ ಪ್ರಸಾರವಾಗುತ್ತಿತು, ಪ್ರಸ್ತುತ 6:00 ಗಂಟೆಗೆ ಪ್ರಸಾರವಾಗುತ್ತಿದೆ.
ರೂಪಾಂತರಗಳು
ಬದಲಾಯಿಸಿಭಾಷೆ(ಗಳು) | ಶೀರ್ಷಿಕೆ | ಮೂಲ ಬಿಡುಗಡೆ | ವಾಹಿನಿ(ಗಳು) | ಕೊನೆಯ ಪ್ರಸಾರ | ಟಿಪ್ಪಣಿ |
---|---|---|---|---|---|
ಹಿಂದಿ | ಲಾಗಿ ತುಜುಸೇ ಲಗನ್ लागी तुझसे लगन |
28 ಡಿಸೆಂಬರ್ 2009 | ಕಲರ್ಸ್ ಟಿವಿ | 6 ಜನವರಿ 2012 | ಮೂಲ |
ಮರಾಠಿ | ತುಜ್ಯ ರೂಪಾಚ ಚಂದನ तुझ्या रूपाचं चांदणं |
27 ಡಿಸೆಂಬರ್ 2021 | ಕಲರ್ಸ್ ಮರಾಠಿ | 28 ಮೇ 2022 | ರೀಮೆಕ್ |
ಕನ್ನಡ | ದೃಷ್ಟಿಬೊಟ್ಟು | 9 ಸೆಪ್ಟೆಂಬರ್ 2024 | ಕಲರ್ಸ್ ಕನ್ನಡ | ಪ್ರಸಾರವಾಗುತ್ತಿದೆ | ರೀಮೇಕ್ |
ಪಾತ್ರವರ್ಗ
ಬದಲಾಯಿಸಿಪ್ರಮುಖ ಪಾತ್ರಗಳು
ಬದಲಾಯಿಸಿ- ವಿಜಯ್ ಸೂರ್ಯ[೭] : ಕಥಾ ನಾಯಕ ದತ್ತಾತ್ರೇಯ ಶ್ರೀರಾಮ್ ಪಾಟೀಲ್ ಆಲಿಯಾಸ್ ದತ್ತನಾಗಿ.
- ಅರ್ಪಿತಾ ಮೊಹಿತೆ[೮]: ಕಥಾ ನಾಯಕಿ ದೃಷ್ಟಿಯಾಗಿ
- ಅಂಬಿಕಾ[೯] : ಅಬ್ಬಕ್ಕನ ಪಾತ್ರದಲ್ಲಿ. ಶರಾವತಿ, ನೇತ್ರಾವತಿ ಮತ್ತು ದತ್ತನ ತಾಯಿಯಾಗಿ.
ಪೋಷಕ ಪಾತ್ರಗಳು
ಬದಲಾಯಿಸಿ- ತನ್ಮಯಾ ಕಶ್ಯಪ್[೧೦] : ಶರಾವತಿ ಪಾತ್ರದಲ್ಲಿ. ದತ್ತು ಅಕ್ಕನಾಗಿ. ಪ್ರಮುಖು ಖಳನಾಯಕಿ ಯಾಗಿ.
- ದೀಪಶ್ರೀ ಪ್ರಭಾತ್[೧೧] : ಚೆನ್ನಮ್ಮನ ಪಾತ್ರದಲ್ಲಿ. ಮಹಾದೇವ್ ಹೆಂಡತಿಯಾಗಿ. ದೃಷ್ಟಿ ಮತ್ತು ರಾಜಾನ ತಾಯಿಯಾಗಿ
- ಅಶೋಕ್ ಹೆಗ್ಡೆ: ಮಹಾದೇವ್ ಪಾತ್ರದಲ್ಲಿ. ಚೆನ್ನಮ್ಮನ ಗಂಡನಾಗಿ. ದೃಷ್ಟಿ ಮತ್ತು ರಾಜಾನ ತಂದೆಯಾಗಿ.
- ಮೋಕ್ಷಿತಾ ವಸಿಷ್ಟ: ನೇತ್ರಾವತಿ ಆಲಿಯಾಸ್ ನೇತ್ರಾ ಪಾತ್ರದಲ್ಲಿ. ದತ್ತು ತಂಗಿಯಾಗಿ.
- ಸುಜಯ್ ಆರ್ ಹೆಗ್ಡೆ: ಭಜರಂಗಿ ಪಾತ್ರದಲ್ಲಿ. ದತ್ತು ಸ್ನೇಹಿತ ಮತ್ತು ಬಲಗೈ ಬಂಟನಾಗಿ.
- ರವಿ ಚಂದ್ರ: ಸೈಲೆಂಟ್ ಪಾತ್ರದಲ್ಲಿ.
- ಗೀರಿಶ್ ಭಟ್: ಶರಾವತಿ ಗಂಡನಾಗಿ.
- ವೀವೆಕ್ ಮಂಡ್ಯ: ಲೇಖಿತ್ ಪಾತ್ರದಲ್ಲಿ. ಮೀನೂ ತಂದೆಯಾಗಿ
- ಶ್ರೀ ಧನ್ಯ ಪಾಟೀಲ್: ಹೇಮಾವತಿ ಪಾತ್ರದಲ್ಲಿ. ದತ್ತು ಎರಡನೇ ಅಕ್ಕನಾಗಿ.
- ಅನೂಪ್ (ಮುದ್ದುರಾಜ್ ಅನೂಪ್) : ರಾಜಾನ ಪಾತ್ರದಲ್ಲಿ. ದೃಷ್ಟಿ ತಮ್ಮನಾಗಿ.
- ಸುಹಾನ ಸಂಜಯ್: ಮೀನೂ ಪಾತ್ರದಲ್ಲಿ.
- ಮೌರ್ಯ ಗೌರವ್: ಬಬ್ಲೂ ಪಾತ್ರದಲ್ಲಿ. ಶರಾವತಿ ಮಗನಾಗಿ
- ಗೌತಮಿ ಜಯರಾಮ್: ಇಂಪನಾ ಪಾತ್ರದಲ್ಲಿ. ದತ್ತನಿಗೆ ನಿಶ್ಚಿತಾರ್ಥವಾಗಿರುವ ಹುಡುಗಿಯಾಗಿ.
ಅತಿಥಿ ಪಾತ್ರದಲ್ಲಿ
ಬದಲಾಯಿಸಿ- ರಾಘು ಶಿವಮೊಗ್ಗ[೧೨] :ವೀರೇಶ್ ಪಾತ್ರದಲ್ಲಿ. ಇನ್ಸ್‌ಪೆಕ್ಟರ್ ಆಗಿ
ಉಲ್ಲೇಖಗಳು
ಬದಲಾಯಿಸಿ- ↑ "ರೂಪವೇ ಶಾಪವಾದವಳ ಸುತ್ತ ಸುತ್ತಿಕೊಂಡ ಕೌಟುಂಬಿಕ ಕಥೆ ದೃಷ್ಟಿಬೊಟ್ಟು". ಹಿಂದೂಸ್ತಾನ್ ಟೈಮ್ಸ್ ಕನ್ನಡ. Retrieved 4 ಸೆಪ್ಟಂಬರ್ 2024.
- ↑ "'ದೃಷ್ಟಿಬೊಟ್ಟು'..! ಹೊಸ ಧಾರಾವಾಹಿ ಸೆಪ್ಟೆಂಬರ್ 9ರಿಂದ ಪ್ರಸಾರ". ಝೀ ನ್ಯೂಸ್ ಇಂಡಿಯಾ. Retrieved 4 ಸೆಪ್ಟಂಬರ್ 2024.
- ↑ "ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ 'ದೃಷ್ಟಿಬೊಟ್ಟು'; ರೂಪವೇ ಶಾಪವಾದವಳ ಕಥೆ". ವಿಶ್ವವಾಣಿ. Retrieved 5 ಸೆಪ್ಟಂಬರ್ 2024.
- ↑ "ದೃಷ್ಟಿಯ ಬಣ್ಣ ಬಯಲು, ಇಷ್ಟು ಫಾಸ್ಟ್ ಆಗಿ ಓಡ್ತಾ ಇರೋದೇಕೆ ಧಾರಾವಾಹಿ?". ಫಿಲ್ಮಿಬೀಟ್ ಕನ್ನಡ. Retrieved 21 ಸೆಪ್ಟಂಬರ್ 2024.
- ↑ "ಪುಟ್ಟಗೌರಿ, ಗಟ್ಟಿಮೇಳ ಖ್ಯಾತಿಯ ರಕ್ಷಿತ್ ಗೌಡ ನಿರ್ಮಾಣದ ಹೊಸ ಧಾರಾವಾಹಿ". ಟೈಮ್ಸ್ ಎಕ್ಸ್ ಪಿ ಕನ್ನಡ. Retrieved 6 ಸೆಪ್ಟಂಬರ್ 2024.
- ↑ "ಧಾರಾವಾಹಿ ಅಂತ ಮೂಗು ಮುರಿಯುವವರಿಗೆ ಸಿನಿಮಾ ತೋರಿಸೋಣ ಅಂತಲೇ 'ದೃಷ್ಟಿಬೊಟ್ಟು' ಮಾಡಿದೆ: ನಟ ರಕ್ಷ್". ಟೈಮ್ಸ್ ಎಕ್ಸ್ ಪಿ ಕನ್ನಡ. Retrieved 6 ಸೆಪ್ಟಂಬರ್ 2024.
- ↑ "ರಗಡ್ ಲುಕ್‌ನಲ್ಲಿ ಕಿರುತೆರೆ ನಟ ವಿಜಯ್ ಸೂರ್ಯ". ಟಿವಿ 9 ಕನ್ನಡ. Retrieved 6 ಸೆಪ್ಟಂಬರ್ 2024.
- ↑ "ದೃಷ್ಟಿಗೆ ಸೌಂದರ್ಯವೇ ಶಾಪ ಎನ್ನುತ್ತಿದೆ ; ಹೀರೋಯಿನ್ ಮೇಕಪ್‌ಗೆ ಬೇಕಾಗುವ ಟೈಮ್ ಎಷ್ಟು?". ವಿಜಯ ಕರ್ನಾಟಕ. Retrieved 4 ಸೆಪ್ಟಂಬರ್ 2024.
- ↑ "ಅದೇ ವಾಯ್ಸ್.. ಖಡಕ್ ಲುಕ್.. ಅಬ್ಬಕ್ಕನಾಗಿ ಅಬ್ಬರಿಸಿದ ಅಂಬಿಕಾ..!". ಫಿಲ್ಮಿಬೀಟ್ ಕನ್ನಡ. Retrieved 10 ಸೆಪ್ಟಂಬರ್ 2024.
- ↑ "ದತ್ತ ಭಾಯ್ ಅಕ್ಕ ಶರಾವತಿಯ ಯಾರು ಗೊತ್ತಾ?". ಫಿಲ್ಮಿಬೀಟ್ ಕನ್ನಡ. Retrieved 8 ಸೆಪ್ಟಂಬರ್ 2024.
- ↑ "ದೃಷ್ಟಿಬೊಟ್ಟು' ಧಾರಾವಾಹಿ ಮೂಲಕ 14 ವರ್ಷಗಳ ಬಳಿಕ ಕನ್ನಡ ಕಿರುತೆರೆಗೆ ದೀಪಶ್ರೀ ಪ್ರಭಾತ್ ಕಂಬ್ಯಾಕ್". ಟೈಪ್ಸ್ ಎಕ್ಸ್ ಪಿಕನ್ನಡ. Retrieved 9 ಸೆಪ್ಟಂಬರ್ 2024.
- ↑ "ದೃಷ್ಟಿ ಮೇಲೆ ಕಣ್ಣಾಕಿದ ಇನ್ಸ್‌ಪೆಕ್ಟರ್ ಯಾರು? ರಾಜ್ಯಪ್ರಶಸ್ತಿ ವಿಜೇತ ಅಂತ ಗೊತ್ತಾ?". ಫಿಲ್ಮಿಬೀಟ್ ಕನ್ನಡ. Retrieved 24 ಸೆಪ್ಟಂಬರ್ 2024.
ಬಾಹ್ಯಕೊಂಡಿಗಳು
ಬದಲಾಯಿಸಿ- ದೃಷ್ಟಿಬೊಟ್ಟುಯನ್ನು @ ಜಿಯೋ ಸಿನಿಮಾ ದಲ್ಲಿ ವೀಕ್ಷಣೆ ಮಾಡಿ