ವಿಕ್ಟೋರಿಯಾ ಸ್ಮಾರಕ

22°32′42″N 88°20′33″E / 22.5449°N 88.3425°E / 22.5449; 88.3425

Victoria Memorial Hall
ಸ್ಥಾಪನೆ1921
ಸ್ಥಳQueen's Way - ಕೊಲ್ಕತ್ತ, ಭಾರತ India
ವರ್ಗMuseum
ಸಂಗ್ರಹದ ಗಾತ್ರNearly ೩೦,೦೦೦ (as on March ೩೧, ೨೦೦೯)[]
ಪರಿಪಾಲಕChittaranjan Panda
ಜಾಲತಾಣvictoriamemorial-cal.org

ವಿಕ್ಟೋರಿಯಾ ಸ್ಮಾರಕ ವನ್ನು ಅಧಿಕೃತವಾಗಿ ವಿಕ್ಟೋರಿಯಾ ಮೆಮೊರಿಯಲ್ ಹಾಲ್ ಎನ್ನಲಾಗಿದ್ದು ಈ ಕಟ್ಟಡವನ್ನುಯುನೈಟೈಡ್ ಕಿಂಗ್ಡಮ್ ನ ವಿಕ್ಟೋರಿಯಾ ಮಹಾರಾಣಿ ಮತ್ತು ಭಾರತದ ಸಾಮ್ರಾಜ್ಞಿಗೆ ಉಲ್ಲೇಖಿಸಲಾಗುತ್ತದೆ.ಇದು ಭಾರತಪಶ್ಚಿಮ ಬಂಗಾಳದ ರಾಜ್ಯದ ಕೊಲ್ಕತ್ತಾದಲ್ಲಿದ್ದು ಇದು ಬ್ರಿಟಿಶ್ ಇಂಡಿಯಾದ ಅಂದಿನ ರಾಜಧಾನಿಯಾಗಿತ್ತು. ಸದ್ಯ ಅದೀಗ ವಸ್ತು ಸಂಗ್ರಹಾಲಯ ಮತ್ತು ಪ್ರವಾಸಿ ಆಕರ್ಷಣೆಯೆನಿಸಿದೆ.[] ಇದು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದಡಿಯ ಸ್ವಾಯತ್ತ ಸಂಸ್ಥೆಯಾಗಿದೆ.

ವಿನ್ಯಾಸ ಮತ್ತು ನಿರ್ಮಾಣದ ರಚನೆ

ಬದಲಾಯಿಸಿ

ಈ ಸ್ಮಾರಕದ ವಿನ್ಯಾಸವನ್ನು ವಿಲಿಯಮ್ ಎಮೆರ್ಸನ್ [] ಅವರು ಇಂಡೊ-ಸಾರ್ಸೆನಿಕ್ ಶೈಲಿ (ಭಾರತದಲ್ಲಿನ ಇಸ್ಲಾಮ್ ಶೈಲಿ)ಯು ಆಗಿನ ಮೊಘಲ್ ರಚನಾ ಕೌಶಲದ ಅಂಶಗಳನ್ನು ಸೇರಿಸಿ ವಿನ್ಯಾಸಗೊಳಿಸಿದ್ದಾರೆಂದು ಹೇಳಲಾಗಿದೆ. ಲಾರ್ಡ್ ರೆಡ್ಸ್ಡೇಲ್ ಮತ್ತು ಸರ್ ಡೇವಿಡ್ ಪ್ರೇನ್ ಇಲ್ಲಿನ ಉದ್ಯಾನಗಳನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಮಾರಕಕ್ಕೆ ೧೯೦೬ ರಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಈ ಐತಿಹಾಸಿಕ ಸ್ಮಾರಕವು ಭಾರತದಲ್ಲಿನ ಬ್ರಿಟಿಶ್ ಸಾಮ್ರಾಜ್ಯಶಾಹಿಗೆ ತೋರುವ ಒಂದು ಗೌರವವಾಗಿದೆ.

ವಾಸ್ತುಶಿಲ್ಪಿ ವಿಲಿಯಮ್ ಎಮೆರ್ಸನ್ ಇಂತಹ ಸ್ಮಾರಕಕ್ಕಾಗಿ ನಿಜವಾದ ಯೋಜನೆಯೊಂದನ್ನು ಸಿದ್ದಪಡಿಸಿದ್ದರು. ಈ ಕಟ್ಟಡದ ರಚನೆಯು ಬ್ರಿಟಿಶ್ ಮತ್ತು ಮೊಘಲ್ ರ ವಾಸ್ತು ಶೈಲಿಯ ಮಿಶ್ರಣವನ್ನು ಪ್ರತಿನಿಧಿಸುತ್ತದೆ. ಶ್ವೇತ ಮಕ್ರಾನಾ ಅಮೃತಶಿಲೆಯನ್ನು ವಿಕ್ಟೋರಿಯಾ ಸ್ಮಾರಕ ಹಾಲ್ ನ ರಚನೆಯಲ್ಲಿ ಬಳಸಲಾಗಿದೆ.ನೂತನ ಕಟ್ಟಡವನ್ನು ೧೯೨೧ ರಲ್ಲಿ ಉದ್ಘಾಟಿಸಲಾಯಿತು. ಈ ಬೃಹತ್ ಹಾಲ್ 338 feet (103 m) ರಿಂದ228 feet (69 m) ಮತ್ತು ಒಟ್ಟು 184 feet (56 m) ರಷ್ಟು ಎತ್ತರ ಹೊಂದಿದೆ.

ಚಿತ್ರ:Dsc04135.jpg
ವಿಕ್ಟೋರಿಯಾ ಸ್ಮಾರಕದ ಮುಂಭಾಗ

ಇದರ ನಿರ್ಮಾಣಕ್ಕಾಗಿ ಬ್ರಿಟಿಶ್ ಸರ್ಕಾರದ ಹಣವನ್ನು ಉಪಯೋಗಿಸಿಲ್ಲ. ಬ್ರಿಟಿಶ್ ಸರ್ಕಾರದಿಂದ ಕೆಲವು ಕೆಲಸ ಕಾರ್ಯಗಳಿಗೆ ಅವಲಂಬಿತ ಭಾರತದ ಕೆಲ ವ್ಯಕ್ತಿಗಳು ಈ ಕಾರ್ಯಕ್ಕಾಗಿ ತಮ್ಮ ದೇಣಿಗೆ ನೀಡಿದ್ದಾರೆ.ಹೀಗೆ ಈ ವಿಕ್ಟೋರಿಯಾ ಮೆಮೊರಿಯಲ್ ಹಾಲ್ ಕಟ್ಟಡ ರೂಪ ತಳೆದಿದೆ.[ಸೂಕ್ತ ಉಲ್ಲೇಖನ ಬೇಕು]

ಈ ವಿಕ್ಟೋರಿಯಾ ಮೆಮೊರಿಯಲ್ ಸ್ಮಾರಕವು ಗಾತ್ರದಲ್ಲಿ ಬಹುದೊಡ್ಡದಾಗಿದ್ದು ಇದು ವಿಶಾಲವಾದ ಉದ್ಯಾನಗಳ ಮಧ್ಯೆ ಇದು ಹರಡಿ ಒಟ್ಟು 64 acres (260,000 m2) ರಷ್ಟು ಪ್ರದೇಶ ಹೊಂದಿದೆ. ಈ ವಸ್ತುಸಂಗ್ರಹಾಲಯದಲ್ಲಿ ವಿಕ್ಟೋರಿಯಾ ಮತ್ತು ಬ್ರಿಟಿಶ್ ಉಪಸ್ಥಿತಿಯ ಬಗ್ಗೆ ಮಾಹಿತಿ ನೀಡುವ ಹಲವು ಪ್ರದರ್ಶನಗಳಿವೆ.ಇದಲ್ಲದೇ ಇನ್ನೂ ಹಲವು ದೊಡ್ಡ ಪ್ರಮಾಣದ ಸಂಗ್ರಹಗಳಿವೆ.. ಈ ಸ್ಮಾರಕದಲ್ಲಿ ರಾಯಲ್ ಗ್ಯಾಲರಿಯಲ್ಲಿ ವಿಕ್ಟೋರಿಯಾ ರಾಣಿಯ ವಿವಿಧ ಚಿತ್ರಗಳು ಮತ್ತು ಪ್ರಿನ್ಸ್ ಅಲ್ಬರ್ಟ್ ರ ಭಾವಚಿತ್ರಗಳನ್ನು ಕಾಣಬಹುದು.ಅಲ್ಲಿರುವ ಸಾಕಷ್ಟು ಚಿತ್ರಕಲೆಗಳು ಅವರ ಬದುಕಿನ ಚಿತ್ರಣವನ್ನು ನೀಡುತ್ತವೆ...

ಭಾರತ ೧೯೪೭ ರಲ್ಲಿ ಸ್ವಾತಂತ್ರ್ಯ ಪಡೆದ ನಂತರ ವಿಕ್ಟೋರಿಯಾ ಸ್ಮಾರಕಕ್ಕೆ ಕೆಲವು ಹೆಚ್ಚುವರಿಗಳನ್ನು ಸೇರಿಸಿ ಅದರಲ್ಲಿ ಕಾಯ್ಡಿಡಲಾಗಿದೆ. ಈ ಹೆಚ್ಚುವರಿ ಸಂಗ್ರಹದಲ್ಲಿ ನ್ಯಾಶನಲ್ ಲೀಡರ್ಸ್ ಗ್ಯಾಲರಿ ಇದ್ದು,ಇದರಲ್ಲಿ ಚಿತ್ರಗಳು,ಭಾವಚಿತ್ರಗಳು,ತೈಲ ಚಿತ್ರಗಳು,ಚಿತ್ರ ಕಲೆಗಳು ಅದಲ್ಲದೇ ಭಾರತದ ಸ್ವಾತಂತ್ರ್ಯಕ್ಕೆ ಸಂಭಂಧಿಸಿದ ದಾಖಲೆಗಳ ಚಿತ್ರಣವಿದೆ.

ಚಿತ್ರಗಳ ಗ್ಯಾಲರಿ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. Government of India, Ministry of Culture, ANNUAL REPORT ೨೦೦೮-೦೯ p. ೩೦
  2. http://www.iloveindia.com/indian-monuments/victoria-memorial.html
  3. http://www.kolkatainformation.com/calhert/v_mem.htm Archived 2007-03-10 ವೇಬ್ಯಾಕ್ ಮೆಷಿನ್ ನಲ್ಲಿ. [kolkatainformation.com]