ಮೊಗಲ್ ವಾಸ್ತುಶೈಲಿ
ಇಸ್ಲಾಮಿಕ್, ಪರ್ಷಿಯನ್[೧][೨] ಮತ್ತು ಭಾರತೀಯ ವಾಸ್ತುಶೈಲಿ ಗಳ ಮಿಶ್ರಣವಾದ ಮೊಗಲ್ ವಾಸ್ತುಶೈಲಿ ಯು, ಮೊಗಲರು 16 ಮತ್ತು 17ನೆಯ ಶತಮಾನಗಳಲ್ಲಿ ಇಂದಿನ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಅಭಿವೃದ್ಧಿಗೊಳಿಸಿದ ವಿಶೇಷ ಲಕ್ಷಣದ ಶೈಲಿಯಾಗಿದೆ. ಆರಂಭ ಕಾಲದ ಮೊಗಲ್ ವಾಸ್ತುಶೈಲಿ ಯಲ್ಲಿ ಉಳಿದುಕೊಂಡಿರುವುಗಳಲ್ಲಿ ಮೊದಲ ಹಾಗೂ ವಿಶೇಷ ಗುಣಲಕ್ಷಣಗಳುಳ್ಳವು ಮೊಗಲ್ ವಂಶಕ್ಕೆ ಸಂಬಂಧವಿಲ್ಲದ ಚಕ್ರವರ್ತಿ ಶೇರ್ ಷಾ ಸುರಿಯ ಅಲ್ಪಾವಧಿಯ ಆಳ್ವಿಕೆಯಲ್ಲಿ (1540–1545) ನಿರ್ಮಿಸಲಾಯಿತು. ಇವುಗಳಲ್ಲಿ, ದೆಹಲಿಯ ಬಳಿ ಕಿಲಾ ಇ ಕುಹ್ನಾ ಮಸೀದಿ (1541), ದೆಹಲಿಯಲ್ಲಿರುವ ಪುರಾನಾ ಕಿಲಾ (ಹಳೆಯ ಕೋಟೆ)ಯ ಸೇನಾ ವಾಸ್ತುಶೈಲಿ, ಬಾಂಗ್ಲಾದೇಶದಲ್ಲಿರುವ ಲಾಲ್‌ಬಾಗ್ ಕೋಟೆ, ಹಾಗೂ ಇಂದಿನ ಪಾಕಿಸ್ತಾನದಲ್ಲಿ ಝೆಲಮ್ ಸಮೀಪದ ರೊಹ್ತಾಸ್ ಕೋಟೆ ಸೇರಿವೆ. ಶೇರ್ ಷಾಹನ ಅಷ್ಟಕೋನೀ ಯ ಭವ್ಯಸಮಾಧಿಯು, ಭಾರತ ದೇಶದ ಸಾಸಾರಾಮ್‌ನ ಮಾನವನಿರ್ಮಿತ ಕೆರೆಯ ಮಧ್ಯದಲ್ಲಿ ಕಂಬದ ಪೀಠದ ಮೇಲೆ ನಿರ್ಮಿತವಾಗಿದೆ. ಇದನ್ನು ಆತನ ಮಗ ಮತ್ತು ಉತ್ತರಾಧಿಕಾರಿ ಇಸ್ಲಾಮ್ ಷಾಹ್ ಸುರಿ (1545AD-1553AD) ಪೂರ್ಣಗೊಳಿಸಿದ.
ಅಕ್ಬರ್
ಬದಲಾಯಿಸಿ- ಚಕ್ರವರ್ತಿ ಅಕ್ಬರ್ (1556–1605) ಬಹಳ ಭವ್ಯವಾಗಿ ನಿರ್ಮಿಸಿದ, ತನ್ನ ಆಳ್ವಿಕೆಯಲ್ಲಿ ಶೈಲಿಯು ಹುರುಪಿನಿಂದ ಅಭಿವೃದ್ಧಿ ಗಳಿಸಿತು. ಗುಜರಾತ್ ಮತ್ತು ಇತರೆ ಶೈಲಿಗಳಂತೆ, ಆತನ ನಿರ್ಮಾಣಗಳಲ್ಲಿ ಮುಸ್ಲಿಮ್ ಮತ್ತು ಹಿಂದೂ ಶೈಲಿಯ ಕಟ್ಟಡ ನಿರ್ಮಾಣದ ಗುಣಲಕ್ಷಣಗಳಿದ್ದವು. ಅಕ್ಬರ್ 1500ರ ಶತಮಾನದ ಅಪರಾರ್ಧದಲ್ಲಿ, ಆಗ್ರಾದ 26 miles (42 km) ಪಶ್ಚಿಮದಲ್ಲಿ ಫತಹ್‌ಪುರ್ ಸಿಕ್ರಿ ಎಂಬ ರಾಜವೈಭವದ ನಗರ ನಿರ್ಮಿಸಿದ.
- ಫತಹ್‌ಪುರ ಸಿಕ್ರಿಯಲ್ಲಿರುವ ಹಲವು ನಿರ್ಮಾಣಗಳ ಅಕ್ಬರ್‌ನ ನಿರ್ಮಾಣ ಶೈಲಿಯನ್ನು ನಿರೂಪಿಸುತ್ತವೆ. ಇಲ್ಲಿರುವ ಭವ್ಯ ಮಸೀದಿಯ ಸೊಬಗು ಮತ್ತು ವಾಸ್ತುಶೈಲಿಯ ಪ್ರಭಾವವು ಇನ್ನೆಲ್ಲೂ ಕಾಣಸಿಗದು. ಬುಲಂದ್ ದರ್ವಾಜಾ ಎಂಬ ದಕ್ಷಿಣ ದ್ವಾರವು ತನ್ನ ಗಾತ್ರ ಮತ್ತು ನಿರ್ಮಾಣ ವಿನ್ಯಾಸವು ಇಡೀ ಭಾರತದಲ್ಲಿರುವ ಉಳಿದ ಎಲ್ಲಾ ದ್ವಾರಗಳಿಗಿಂತಲೂ ಭವ್ಯವಾಗಿದೆ. ಮೊಗಲರು ಮನಮೋಹಕ ಸಮಾಧಿಗಳನ್ನು ನಿರ್ಮಿಸಿದರು.
- ಇದರಲ್ಲಿ ಆಗ್ರಾ ಸಮೀಪದಲ್ಲಿ ಸಿಕಂದರಾದಲ್ಲಿರುವ ಅಕ್ಬರನ ತಂದೆ ಹುಮಾಯೂನ್ ಹಾಗೂ ಅಕ್ಬರನ ಸಮಾಧಿಗಳು ತಮ್ಮದೇ ವೈಶಿಷ್ಟ್ಯ ಹೊಂದಿರುವ ನಿರ್ಮಾಣವಾಗಿವೆ. ಜಹಾಂಗೀರ್‌ನ ಆಳ್ವಿಕೆಯಲ್ಲಿ (1605–1627) ಹಿಂದೂ ಲಕ್ಷಣಗಳು ವಾಸ್ತುಶೈಲಿಯಿಂದ ಮಾಯವಾದವು. ಲಾಹೋರ್‌ನಲ್ಲಿರುವ ಆತನ ಭವ್ಯ ಮಸೀದಿಯು ಪರ್ಷಿಯನ್ ಶೈಲಿಯಲ್ಲಿ ನಿರ್ಮಾಣವಾಗಿದೆ. ಇದರ ಬಾಹ್ಯಭಾಗವು ಪಿಂಗಾಣಿ-ಲೇಪಿತ ಹೆಂಚುಗಳನ್ನು ಹೊಂದಿದೆ. ಆಗ್ರಾದಲ್ಲಿ, 1628ರಲ್ಲಿ ಪೂರ್ಣಗೊಂಡ ಇತಮದ್-ಉದ್-ದೌಲಾನ ಸಮಾಧಿಯು ಇಡಿಯಾಗಿ ಬಿಳಿಯ ಹಾಲುಗಲ್ಲಿನಲ್ಲಿ ನಿರ್ಮಿತವಾಗಿ, ಪಿಯೆಟ್ರಠಾ ಡ್ಯೂರಾ ಶಬಲಕಲ್ಲಿನಿಂದ ಆವೃತವಾಗಿದೆ.
- ಈ ರೀತಿಯ ಅಲಂಕಾರಗಳಲ್ಲಿ ಇದು ಇಡೀ ಪ್ರಪಂಚದಲ್ಲೇ ಅತ್ಯಂತ ವೈಭವೋಪೇತ ಉದಾಹರಣೆಯಾಗಿದೆ. ಕಾಶ್ಮೀರ ರಾಜ್ಯದ ಡಲ್ ಕೆರೆಯ ದಂಡೆಯಲ್ಲಿ ಜಹಾಂಗೀರ್ ಷಾಲಿಮಾರ್ ಉದ್ಯಾನಗಳು ಮತ್ತು ಅದರೊಡನೆಯ ಕಟ್ಟಡಗಳನ್ನು ನಿರ್ಮಿಸಿದ. ತನ್ನ ಸಾಕುಜಿಂಕೆಗಾಗಿ ಹಿರಣ್ ಮಿನಾರ್ ಎಂಬ ಸ್ಮಾರಕವನ್ನು ಪಾಕಿಸ್ತಾನದ ಶೇಖುಪುರದಲ್ಲಿ ನಿರ್ಮಿಸಿದ. ತನ್ನ ಪತ್ನಿಯ ಮೇಲಿನ ಅಪಾರ ಪ್ರೇಮದ ಫಲವಾಗಿ, ಜಹಾಂಗೀರ್ ಮರಣಾನಂತರ ಆತನ ಪತ್ನಿಯು ಲಾಹೋರ್‌ನಲ್ಲಿ ಆತನಿಗಾಗಿ ಒಂದು ಭವ್ಯಸಮಾಧಿಯನ್ನು ನಿರ್ಮಿಸಿದಳು.
ಷಾ ಜಹಾನ್
ಬದಲಾಯಿಸಿ- ಷಾ ಜಹಾನ್ (1627–1658) ಆಳ್ವಿಕೆಯಲ್ಲಿ ಶೈಲಿಯ ಮೂಲ ಮತ್ತು ಪ್ರಾಬಲ್ಯವು ಕೋಮಲ ಲಾಲಿತ್ಯ, ನಯನಾಜೂಕುಗಳಿಗೆ ದಾರಿ ಮಾಡಿಕೊಟ್ಟಿತು. ದೆಹಲಿ ಹಾಗೂ ಆಗ್ರಾ ನಗರಗಳಲ್ಲಿ ನಿರ್ಮಾಣವಾದ ಭವ್ಯ ಅರಮನೆಗಳೇ ಇದಕ್ಕೆ ಸಾಕ್ಷಿಯಾಗಿವೆ. ಇದರಲ್ಲಿ ವಿಶಿಷ್ಟವಾಗಿ ದೆಹಲಿಯಲ್ಲಿರುವ ಅರಮನೆಯು ಭಾರತದಲ್ಲಿಯೇ ಅತ್ಯಂತ ಸುಂದರ ಅರಮನೆಗಳಲ್ಲೊಂದು ಎನ್ನಲಾಗಿದೆ. ಆಗ್ರಾದಲ್ಲಿರುವ ತಾಜ್ ಮಹಲ್, ಮೊಗಲ್ ಸಮಾಧಿಗಳಲ್ಲಿ ಅತ್ಯಂತ ಅದ್ಭುತ ಹಾಗೂ ಪ್ರಸಿದ್ಧವಾದದ್ದು. ಇದು ಷಾ ಜಹಾನ್‌ನ ಪತ್ನಿ ಮುಮ್ತಾಜ್ ಮಹಲ್‌ಳ ಸಮಾಧಿ. *ಆಗ್ರಾ ಕೋಟೆಯಲ್ಲಿರುವ ಮೋತಿ ಮಸಜೀದ್ (ಮುತ್ತಿನ ಮಸೀದಿ) ಹಾಗೂ ದೆಹಲಿಯಲ್ಲಿರುವ ಜಮಾ ಮಸಜೀದ್ ವೈಭವೋಪೇತ ನಿರ್ಮಾಣಗಳಾಗಿವೆ. ಆಹ್ಲಾದಕರ ಪ್ರಭಾವ, ವೈಶಾಲ್ಯ ಹಾಗೂ ಲಾಲಿತ್ಯಗಳ ಅನುಭವ ನೀಡಲೆಂದು ಅವುಗಳ ಸ್ಥಾನ, ವಾಸ್ತುಶೈಲಿ ಮತ್ತು ನಿರ್ಮಾಣಾಂಶಗಳನ್ನು ಸಮರ್ಪಕವಾಗಿ ಸರಿದೂಗಿಸಲಾಗಿದೆ. ತನ್ನ ಅದ್ಭುತ ನಿರ್ಮಾಣಗಳ ಮೂಲಕ ಷಾ ಜಹಾನ್ ಭಾರತದಲ್ಲಿ ಅತ್ಯಂತ ಪ್ರತಿಷ್ಠಿತ ನಿರ್ಮಾಣಗಾರ ನೆಂದು ಪರಿಗಿಣಿಸಲ್ಪಟ್ಟಿದ್ದಾನೆ.
- ಆತನು ಭವ್ಯ ಸಮಾಧಿ, ಹಾಗೂ, ವೈಭವೋಪೇತವಾದ ಮೋತಿ ಮಸಜೀದ್, ಶೀಶ್ ಮಹಲ್ ಮತ್ತು ನೌಲಾಖಾ ಮಂಟಪಗಳನ್ನು ಒಳಗೊಂಡಿರುವ ಬೃಹದಾಕಾರದ ಲಾಹೋರ್ ಕೋಟೆಯ ಕೆಲವು ಭಾಗಗಳನ್ನೂ ಸಹ ನಿರ್ಮಿಸಿದ. ತನಗಾಗಿಯೇ ಷಾ ಜಹಾನ್ ಮಸಜೀದ್ ಎಂಬ ಒಂದು ಮಸೀದಿಯನ್ನು ಥತ್ತಾದಲ್ಲಿ ನಿರ್ಮಿಸಿದ. ತನ್ನ ಆಳ್ವಿಕೆಯಲ್ಲಿ, ಷಾ ಜಹಾನ್‌ನ ಅರಮನೆಯ ವೈದ್ಯ ಷೇಕ್ ಇಲ್ಮ್-ಉದ್ದೀನ್ ಅನ್ಸಾರಿ ಲಾಹೋರ್‌ನಲ್ಲಿ ವಾಜೀರ್ ಖಾನ್ ಮಸಜೀದ್ ಎಂಬ ಇನ್ನೊಂದು ಮಸೀದಿಯನ್ನು ನಿರ್ಮಿಸಿದನು.
ತಾಜ್ ಮಹಲ್
ಬದಲಾಯಿಸಿ- 'ಶಾಶ್ವತತೆಯ ಕೆನ್ನೆಯ ಮೇಲೆ ಕಣ್ಣೀರ ಹನಿ' ಎಂದು ರವೀಂದ್ರನಾಥ್ ಠಾಗೂರ್ ವರ್ಣಿಸಿದ ತಾಜ್ ಮಹಲ್ ನಿರ್ಮಾಣವನ್ನು ಮೊಗಲ್ ಚಕ್ರವರ್ತಿ ಷಾ ಜಹಾನ್ ,ತನ್ನ ಪತ್ನಿ ಮುಮ್ತಾಜ್ ಮಹಲ್‌ಳ ನೆನಪಿಗಾಗಿ 1648ರಲ್ಲಿ ಪೂರ್ಣಗೊಳಿಸಿದ. ಮುಖ್ಯ ಅಂತಸ್ತಿನ ಕೆಳಗೆ ನೆಲಮನೆಯಲ್ಲಿ ಇಡಲಾದ ಷಾ ಜಹಾನ್‌ನ ಶಿಲಾಶವಸಂಪುಟವನ್ನು ಹೊರತುಪಡಿಸಿ, ಸಮಪಾರ್ಶ್ವತೆಯ ಅತಿಲಂಬ ಸಮತಲವು ಇಡೀ ಸಂಕೀರ್ಣದ ಮೂಲಕ ಹಾದುಹೋಗುತ್ತದೆ.
- ಮುಖ್ಯ ನಿರ್ಮಾಣದ ಪಶ್ಚಿಮ ಬದಿಯಲ್ಲಿ ಮಕ್ಕಾದತ್ತ ಮುಖಮಾಡಿರುವ, ಮಸೀದಿಗೆ ಪೂರಕವಾಗಿರುವಂತೆ, ಕೆಮ್ಮರಳು ಶಿಲೆಯಲ್ಲಿ ನಿರ್ಮಿತ ತದ್ರೂಪಿ ಮಸೀದಿಯ ತನಕ ಈ ಸಮಪಾರ್ಶ್ವತೆಯು ವಿಸ್ತರಿಸಿದೆ. ಭಾರತ ದೇಶದ ಆಗ್ರಾದಲ್ಲಿರುವ ತಾಜ್ ಮಹಲ್ (1630–1648) ಹಾಗೂ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಷಾಲಿಮಾರ್ ಉದ್ಯಾನ (1641–1642) ಇವೆರಡೂ ಸಹ UNESCOದ ವಿಶ್ವ ಪರಂಪರೆಯ ಪಟ್ಟಿಯಲ್ಲಿವೆ.
- ಈ ನಿರ್ಮಾಣಗಳ ಹಲವಲ್ಲಿ ವಾಸ್ತುಶೈಲಿಯ ಸಾಮ್ಯತೆ ಮತ್ತು ಮೊಗಲರು ನೀರಿಗಾಗಿ ವ್ಯಕ್ತಪಡಿಸಿದ ಪ್ರೇಮವನ್ನು ಕಾಣಬಹುದಾಗಿದೆ. ತಾಜ್ ಮಹಲನ್ನು ಅತಿ ಸುಂದರ ಪ್ರೀತಿಯ ಸ್ಮಾರಕಗಳಲ್ಲಿ ಒಂದು, ಹಾಗೂ, ಪ್ರವಾಸೋದ್ಯಮದ ದೃಷ್ಟಿಯಿಂದ, ವಿಶ್ವದ ಏಳು ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಔರಂಗಜೇಬ್ ಹಾಗೂ ಆನಂತರದ ಮೊಗಲ್ ವಾಸ್ತುಶೈಲಿ
ಬದಲಾಯಿಸಿ- ಔರಂಗಜೇಬ್‌ನ ಆಳ್ವಿಕೆಯಲ್ಲಿ (1658–1707) ಚೌಕಾಕಾರದ ಕಲ್ಲು ಹಾಗೂ ಅಮೃತಶಿಲೆಗಳ ಸ್ಥಾನಗಳಲ್ಲಿ ಗಾರೆ ನಿರ್ಮಾಣ ಹೊಂದಿದ ಕಚ್ಚಾಕಲ್ಲುಗಳನ್ನು ಬಳಸಲಾಯಿತು. 'ಇಂಡೊ-ಮುಸ್ಲಿಮ್' ವಾಸ್ತುಶೈಲಿಯ ನಿರ್ಮಾಣಗಳು ಶ್ರೀರಂಗಪಟ್ಟಣ ಮತ್ತು ಲಕ್ನೋ ನಗರಗಳಲ್ಲಿವೆ. ಲಾಹೋರ್ ಕೋಟೆಗೆ ತನ್ನ ಛಾಫು ಅಳವಡಿಸಿದ. ಹದಿಮೂರು ದ್ವಾರಗಳಲ್ಲಿ ಒಂದನ್ನು ಆತನು ನಿರ್ಮಿಸಿದ. ಇದಕ್ಕಾಗಿ ಈ ದ್ವಾರಕ್ಕೆ ಆತನ ಹೆಸರು ಅಲಾಮ್‌ಗೀರ್ ಎಂದು ಮರುನಾಮಕರಣ ಮಾಡಲಾಗಿದೆ.
- ಇಸವಿ 1674ರಲ್ಲಿ, ಫಿದಾ'ಎ ಕೊಕಾ ನ ಮೇಲ್ವಿಚಾರಣೆಯಲ್ಲಿ, ನಿರ್ಮಾಣವಾದ ಬಾದ್ಷಾಹಿ ಮಸಜೀದ್, ಔರಂಗಜೇಬ್ ಆಳ್ವಿಕೆಯ ಕಾಲದ ಅತ್ಯಂತ ಭವ್ಯ ಕಟ್ಟಡವಾಗಿದೆ. ಈ ಮಸೀದಿಯು ಲಾಹೋರ್ ಕೋಟೆಯ ಪಕ್ಕದಲ್ಲಿದೆ. ಕೆಮ್ಮರಳು ಶಿಲಾ ನಿರ್ಮಿತ ಸಭೆಯ ಮಸೀದಿಗಳ ಶ್ರೇಣಿಯಲ್ಲಿ ಬಾದ್ಷಾಹಿ ಮಸೀದಿಯು ಕೊನೆಯದಾಗಿದೆ. ಷಾ ಜಹಾನ್ ಷಾ ಜಹಾನಾಬಾದ್‌ನಲ್ಲಿ ನಿರ್ಮಿಸಿದ ಮಸೀದಿಯ ಮಾದರಿಯಲ್ಲಿ ಇದನ್ನು ನಿರ್ಮಿಸಲಾಗಿದೆ.
- ಗುಮ್ಮಟಗಳ ಅಮೃತ ಶಿಲೆ ಹಾಗೂ ಮರದ ಕುಸುರಿ ಕೆಲಸದೊಂದಿಗೆ ಗೋಡೆಗಳ ಕೆಮ್ಮರಳು ಶಿಲೆಯು ತದ್ವಿರುದ್ಧವಾಗಿದೆ. ನಿರ್ಮಾಣವಸ್ತುಗಳು ವಾಜೀರ್ ಖಾನ್ ಮಸೀದಿಯಲ್ಲಿ ಕಾಣಸಿಗುವ ಸ್ಥಳೀಯ ಸಾಂಪ್ರದಾಯಿಕ ಹೆಂಚಿನ ಕಲ್ಲಿನ ಆಸರೆಗೋಡೆ ಶೈಲಿಯಿಂದ ಬೇರೆಯಾದವು. ಬ್ಲೇರ್ ಮತ್ತು ಬ್ಲೂಮ್‌ರ ಪ್ರಕಾರ, ಶೃಂಗದಂತಹ ಕಮಾನುಗಳು ಮತ್ತು ಅರಬ್ಬಿ ಶೈಲಿಯ ಹೂವಿನಂತಹ ವಿನ್ಯಾಸಗಳು ಅಮೃತ ಶಿಲೆಯೊಂದಿಗೆ ಬೆಸೆದಿರುವುದು. ಈ ಬೃಹತ್ ಕಟ್ಟಡಕ್ಕೆ ತನ್ನ ಮೂಲರೂಪಕ್ಕಿಂತಲೂ ಹಗುರವಾದ ರೂಪ ನೀಡುತ್ತದೆ.
- ಈ ಕಾಲದಲ್ಲಿನ ಹಚ್ಚುವರಿ ಸ್ಮಾರಕಗಳು ಔರಂಗಜೇಬ್‌ನ ರಾಜಮನೆತನದ ಸ್ತ್ರೀಯರೊಂದಿಗೆ ಸಂಬಂಧ ಹೊಂದಿದೆ. ದರಿಯಾಗಂಜ್‌ನಲ್ಲಿ ನಿರ್ಮಿತ ಭವ್ಯ ಜೀನತ್ ಅಲ್-ಮಸಜೀದ್ ನ ನಿರ್ಮಾಣವನ್ನು ಔರಂಗಜೇಬ್‌ನ ಎರಡನೆಯ ಮಗಳು ಜೀನತ್-ಉಲ್-ನಿಸಾ ಉಸ್ತುವಾರಿ ನಡೆಸಿದ್ದಳು. ಸಬ್ಜಿಮಂಡಿಯ ರೊಷನ್-ಆರಾ-ಬಾಗ್‌ನಲ್ಲಿರುವ ನಾಜೂಕಾದ ಇಟ್ಟಿಗೆ ಮತ್ತು ಪ್ಲ್ಯಾಸ್ಟರ್ ಭವ್ಯ ಸಮಾಧಿಯು, 1671ರಲ್ಲಿ ನಿಧನಳಾದ ಔರಂಗಜೇಬ್‌ನ ಸಹೋದರಿ ರೋಷನ್-ಆರಾಳ ನೆನಪಿನಲ್ಲಿ ನಿರ್ಮಿತವಾಯಿತು.
- ದುರದೃಷ್ಟವಶಾತ್, ರೋಷನಾರಾ ಬೇಗಮ್‌ಳ ಸಮಾಧಿ ಮತ್ತು ಅದರ ಸುತ್ತಮುತ್ತಲ ಸುಂದರ ಉದ್ಯಾನವು ದೀರ್ಘಕಾಲದಿಂದ ಅಲಕ್ಷ್ಯದ ಪರಿಣಾಮವಾಗಿ ತೀವ್ರ ದುಃಸ್ಥಿತಿಗೆ ಬಂದಿದೆ. ಆಗ 17ನೆಯ ಶತಮಾನದ ಅಪರಾರ್ಧದಲ್ಲಿ, ಔರಂಗಜೇಬ್‌ನ ಪುತ್ರ ರಾಜಕುಮಾರ ಆಜಮ್ ಷಾ ತನ್ನ ತಾಯಿ ದಿಲ್ರಾಸ್ ಬಾನೊ ಬೇಗಮ್ ಳ ಪ್ರೀತಿಪೂರ್ವಕ ನೆನಪಿನಲ್ಲಿ, ಮಹಾರಾಷ್ಟ್ರ ರಾಜ್ಯದ ಔರಂಗಬಾದ್‌ನಲ್ಲಿ ಬೀಬೀ ಕಾ ಮಕ್ಬಾರಾ ಎಂಬ ಭವ್ಯ ಸಮಾಧಿಯನ್ನು ನಿರ್ಮಿಸಿದ.
- ಇಸವಿ 1673 A.D.ಯಲ್ಲಿ ನಿರ್ಮಿತ ಆಲಮ್‌ಗಿರಿ ದ್ವಾರವು ಇಂದಿನ ಪಾಕಿಸ್ತಾನದ ಲಾಹೋರ್‌ನಲ್ಲಿರುವ ಲಾಹೋರ್ ಕೋಟೆಯ ಹೆಬ್ಬಾಗಿಲಾಗಿದೆ. ಮೊಗಲ್ ಚಕ್ರವರ್ತಿ ಔರಂಗಜೇಬ್ ಆಳ್ವಿಕೆಯ ಕಾಲದಲ್ಲಿ, ಬಾದ್ಷಾಹಿ ಮಸಜೀದ್‌ನ್ನು ಎದುರಿಸುವಂತೆ ಪಶ್ಚಿಮಾಭಿಮುಖವಾಗಿ ನಿರ್ಮಿಸಲಾಗಿತ್ತು. ಈ ಮಹಾನ್ ಐತಿಹಾಸಿಕ ದ್ವಾರದ ಎರಡೂ ಬದಿಗಳಲ್ಲಿ ಗುಮ್ಮಟವುಳ್ಳ ಮಂಟಪಗಳು, ಕೊಳಲಿನಂತಹ ತಿರುಳುಗಳು, ಕಮಲದಳದಂತಹ ಅಡಿಪಾಯಗಳು ಹೊಂದಿರುವ ಎರಡು ಅರ್ಧವೃತ್ತದ ಕೊತ್ತಲಗಳಿವೆ.
ಮೊಗಲ್ ಉದ್ಯಾನ
ಬದಲಾಯಿಸಿ- ಮೊಗಲ್ ಉದ್ಯಾನಗಳು, ಇಸ್ಲಾಮಿಕ್ ವಾಸ್ತುಶೈಲಿಯಲ್ಲಿ ಮೊಗಲರು ನಿರ್ಮಿಸಿದ ಉದ್ಯಾನಗಳ ಸಮೂಹವಾಗಿದೆ. ಪರ್ಷಿಯನ್ ಉದ್ಯಾನಗಳು ಹಾಗೂ ಟಿಮುರಿಡ್ ಉದ್ಯಾನಗಳ ಶೈಲಿಗಳು ಮೊಗಲ್ ಉದ್ಯಾನಗಳ ಶೈಲಿಯ ಮೇಲೆ ಪ್ರಭಾವ ಬೀರಿದ್ದವು. ಗೋಡೆಗಳ ನಡುವಿನ ಆವರಣಗಳಲ್ಲಿ ರೇಖೀಯ ವಿನ್ಯಾಸರಚನೆಗಳ ಗಮನಾರ್ಹ ಬಳಕೆಯಾಗಿದೆ.
- ಇದರ ವೈಶಿಷ್ಟ್ಯಗಳಲ್ಲಿ ಕೊಳಗಳು, ಕಾರಂಜಿಗಳು ಹಾಗೂ ಉದ್ಯಾನಗಳೊಳಗಿನ ಕಾಲುವೆಗಳಿವೆ. ತಾಜ್ ಮಹಲ್‌ನಲ್ಲಿರುವ ಚಾರ್ ಬಾಗ್ ಉದ್ಯಾನಗಳು, ಲಾಹೋರ್, ದೆಹಲಿ ಮತ್ತು ಕಾಶ್ಮೀರದಲ್ಲಿರುವ ಷಾಲಿಮಾರ್ ಉದ್ಯಾನಗಳು, ಇದಲ್ಲದೆ ಹರಿಯಾಣದಲ್ಲಿರುವ ಪಿಂಜೋರ್ ಉದ್ಯಾನಗಳು ಪ್ರಸಿದ್ಧವಾಗಿವೆ.
ಆಕರಗಳು
ಬದಲಾಯಿಸಿ- ↑ [7] ^ ಹಿಸ್ಟರಿ ಆಫ್ ದಿ ತಾಜ್ ಮಹಲ್ ಆಗ್ರಾ, ಪರಿಷ್ಕರಿತ ಆವೃತ್ತಿ: 20 ಜನವರಿ 2009.
- ↑ Anon. [http:// www.islamicart. com/library/empires /india/ taj_mahal.html "The Taj mahal"]. Islamic architecture. Islamic Arts and Architecture Organization. Retrieved 22 may 2009.
{{cite web}}
: Check|url=
value (help); Check date values in:|accessdate=
(help)
- This article incorporates text from a publication now in the public domain: Chisholm, Hugh, ed. (1911). Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help); Invalid|ref=harv
(help); Missing or empty|title=
(help) - ಕೇ, ಜಾನ್ (2000). ಇಂಡಿಯಾ: ಎ ಹಿಸ್ಟರಿ. ಗ್ರೋವ್ ಪ್ರೆಸ್, ನ್ಯೂ ಯಾರ್ಕ್.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಮೊಗಲ್ ಉದ್ಯಾನಗಳು (ಸ್ಮಿತ್ಸನಿಯನ್ ಸಂಸ್ಥೆಯ ಚಿತ್ರಸಂಪುಟ)
- ಜಾಲಿ/ಝರೋಖಾ/ಜಲಾ/ಜಲಾಕಾ Archived 2013-11-08 ವೇಬ್ಯಾಕ್ ಮೆಷಿನ್ ನಲ್ಲಿ. (ಭಾರತ ದೇಶದ ಆಗ್ರಾ ನಗರದ ಮೊಗಲ್ ವಾಸ್ತುಶೈಲಿಯಿಂದ)