ವಿಕಿಪೀಡಿಯ:STC ತರಬೇತಿ ಕಾರ್ಯಾಗಾರ, ಸಂಪಾದನೋತ್ಸವ ಮತ್ತು ಸಮ್ಮಿಲನ

ಮಾನವನ ಕಾಲಿನ ಮೂಳೆಗಳು - ಕನ್ನಡ SVG ಚಿತ್ರದ ಒಂದು ಉದಾಹರಣೆ

ವಿಕಿಕಾಮನ್ಸಿನಲ್ಲಿ ಮತ್ತು ಆ ಮೂಲಕ ವಿಕಿಪೀಡಿಯಾದಲ್ಲಿ ವಿಜ್ಞಾನ, ತಂತ್ರಜ್ಞಾನ, ನಕಾಶೆಗಳು, ಶೈಕ್ಷಣಿಕ ಮಾಹಿತಿ ಸೇರಿದಂತೆ ಇತರ ಬಹುತೇಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಗಳು ಭಾರತೀಯ ಭಾಷೆಗಳಲ್ಲಿ ಬಹಳ ಕಡಿಮೆ ಇವೆ. ಹಾಗಾಗಿ ಅಂತಹ ಚಿತ್ರಗಳನ್ನು ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ತರುವ SVG Translation Campaign 2019 in India ಅಭಿಯಾನವನ್ನು ೨೧ ಫೆಬ್ರವರಿ ೨೦೧೯ರಿಂದ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಇರುವ ಹಲವಾರು ಚಿತ್ರಗಳ ಇಂಗ್ಲೀಶ್ ಅವೃತ್ತಿಗಳನ್ನು ಮೂಲವಾಗಿಟ್ಟುಕೊಂಡು ಅದರ ಭಾರತೀಯ ಭಾಷಾ ಆವೃತ್ತಿಗಳನ್ನು ತಯಾರುಮಾಡುವ ಯೋಜನೆ ಇದಾಗಿದೆ.

ಈ ಚಿತ್ರಗಳು Scalable Vector Graphics (svg) ಮಾದರಿಯದ್ದಾಗಿರುತ್ತವೆ. ಅದನ್ನು ಇಂಕ್ ಸ್ಕೇಪ್ (Inkscape) ಎಂಬ ತಂತ್ರಾಶದಲ್ಲಿ ತೆರೆದು ಬದಲಾವಣೆಗಳನ್ನು ಮಾಡಬಹುದು. ಈ ಅಭಿಯಾನದಲ್ಲಿ ಕಲಿಯುವ ಮುಖ್ಯ ಸಂಗತಿಗಳೆಂದರೆ ಇಂಕ್ ಸ್ಕೇಪ್ ತಂತ್ರಾಂಶದ ಬಳಕೆ, ಅದರಲ್ಲಿ ಕನ್ನಡ ಚಿತ್ರಗಳ ಆವೃತ್ತಿಯನ್ನು ತಯಾರಿಸುವುದು, ವಿಕಿ ಕಾಮನ್ಸಿಗೆ ಅಪ್ಲೋಡ್ ಮಾಡುವುದು. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಚಿತ್ರಗಳನ್ನು ತಯಾರುಮಾಡಿ ಸೇರಿಸಿದವರಿಗೆ ಬಹುಮಾನಗಳೂ ಇವೆ. ಇದರಲ್ಲಿ ಕನ್ನಡ ಮತ್ತು ತುಳು ವಿಕಿ ಸಮುದಾಯವು ಸಕ್ರಿಯವಾಗಿ ಪಾಲ್ಗೊಂಡು ನಮ್ಮ ಭಾಷೆಗಳ contentಅನ್ನು ಅಭಿವೃದ್ಧಿಗೊಳಿಸೋಣ. ಇದಕ್ಕೆ ಹೆಚ್ಚಿನ ವಿಶೇಷ ತಾಂತ್ರಿಕ ಜ್ಞಾನದ ಅವಶ್ಯಕತೆಯೇನೂ ಇರುವುದಿಲ್ಲ.

ಈ ಸಂಬಂಧ ಒಂದು ತರಬೇತಿ ಕಾರ್ಯಾಗಾರ ಮತ್ತು ಸಂಪಾದನೋತ್ಸವ ಹಾಗೂ ಇದೇ ಸಂದರ್ಭದಲ್ಲಿ ಕನ್ನಡ ವಿಕಿಸಮುದಾಯದ ಸಮ್ಮಿಲನದ ಯೋಜನೆ ಮಾಡಲಾಗಿದೆ. ಎಲ್ಲರೂ ಪಾಲ್ಗೊಳ್ಳಲು ಕೋರಿಕೆ. ಬರಲು ಸಾಧ್ಯವಾಗದ ವಿಕಿಮೀಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಸಂಪಾದನೋತ್ಸವದಲ್ಲಿ ಭಾಗವಹಿಸಬಹುದು.

ದಿನಾಂಕಗಳು ಮತ್ತು ಸ್ಥಳ

ಬದಲಾಯಿಸಿ
  • ದಿನಾಂಕ: 23,24 ಫೆಬ್ರವರಿ 2019 (ಶನಿವಾರ, ಭಾನುವಾರ)
  • ಸಮಯ: ಬೆಳಗ್ಗೆ ೧೦ರಿಂದ ಸಂಜೆ ೫
  • ಸ್ಥಳ: ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ, ದೊಮ್ಮಲೂರು, ಬೆಂಗಳೂರು
  • ವಿಳಾಸ: No. 194, 2nd ‘C’ Cross, Domlur, 2nd Stage, Bengaluru, 560071 (ಗೂಗಲ್ ನಕ್ಷೆ ಕೊಂಡಿ)

ಕಾರ್ಯಕ್ರಮ ವಿವರಗಳು

ಬದಲಾಯಿಸಿ
ವಿಷಯ ನಡೆಸಿಕೊಡುವವರು
SVG Translation Campaign 2019 in India ಬಗ್ಗೆ ಪರಿಚಯ ಗೋಪಾಲಕೃಷ್ಣ, ವಿಕಾಸ್ ಹೆಗಡೆ
ಇಂಕ್ ಸ್ಕೇಪ್ ತಂತ್ರಾಂಶದ ಬೇಸಿಕ್ ತರಬೇತಿ ಮತ್ತು ವಿಕಿಗ್ರಾಫಿಕ್ಸ್ ಬೂಟ್ ಕ್ಯಾಂಪ್ ೨೦೧೮ ಬಗ್ಗೆ ವರದಿ. ಗೋಪಾಲಕೃಷ್ಣ
ಕನ್ನಡದಲ್ಲಿ ಪಾರಿಭಾಷಿಕ ಪದಗಳ ಅನುವಾದ, ಸೃಷ್ಟಿ, ಬಳಕೆ (ಈ ಅಭಿಯಾನಕ್ಕೆ ಸಂಬಂಧಿಸಿದಂತೆ) - ಹೇಗೆ, ಏನು ಇತ್ಯಾದಿ ಪವನಜ ಯು.ಬಿ.
SVG ಚಿತ್ರಗಳನ್ನು ಕನ್ನಡದಲ್ಲಿ ಮಾಡುವುದು ಹಾಗೂ ಕಾಮನ್ಸ್ ಗೆ ಅಪ್ಲೋಡ್ ಮಾಡುವುದು - ತರಬೇತಿ ಮತ್ತು ಚರ್ಚೆ ವಿಕಾಸ್ ಹೆಗಡೆ, ಗೋಪಾಲಕೃಷ್ಣ
STC ಸಂಪಾದನೋತ್ಸವ -
ಸಮ್ಮಿಲನ - ಕನ್ನಡ ವಿಕಿಪೀಡಿಯ ಹಾಗೂ ಸಂಬಂಧಿತ ಯೋಜನೆಗಳ ಬಗ್ಗೆ, ಕೆಲಸ, ಆಗುಹೋಗುಗಳ ಬಗ್ಗೆ ಚರ್ಚೆ, ಮಾಹಿತಿ ವಿನಿಮಯ -
Translatewiki.net ಬಗ್ಗೆ ಮಾಹಿತಿ ಅನೂಪ್ ರಾವ್
ಗ್ರಾಫಿಕ್ಸ್ ಡಿಸೈನಿಂಗ್ - Elements, Priciples & Basics ಸೌಮ್ಯ ನಾಯ್ಡು
ಪ್ರಶ್ನೋತ್ತರ, ಮಾಹಿತಿ ವಿನಿಮಯ -
  • ಬರುವವರು ತಮ್ಮ ಲ್ಯಾಪ್-ಟಾಪ್ ತಂದರೆ ಅಂತರಜಾಲ ಸಂಪರ್ಕ ಸೌಲಭ್ಯವಿದೆ.
  • ನಿಮ್ಮ ಗಣಕದಲ್ಲಿ ಇಂಕ್ ಸ್ಕೇಪ್ ತಂತ್ರಾಂಶ ಅಳವಡಿಸಿಕೊಳ್ಳಿ. ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
  • ಈ STC ಅಭಿಯಾನದ ಬಗ್ಗೆ ಸಂಪೂರ್ಣ ವಿವರಗಳು ಈ ಪುಟದಲ್ಲಿದೆ.
  • ಆನ್ ಲೈನ್ ನಿಘಂಟುಗಳ ಹೊರತಾಗಿ ನಿಮ್ಮಲ್ಲಿ ಒಳ್ಳೆಯ ಇಂಗ್ಲೀಶ್-ಕನ್ನಡ ಮುದ್ರಿತ ನಿಘಂಟುಗಳಿದ್ದಲ್ಲಿ, ಅದನ್ನು ತಂದರೆ ಉಪಯೋಗವಾಗಬಹುದು.

ಭಾಗವಹಿಸಲು ಬಯಸುವವರು

ಬದಲಾಯಿಸಿ

ಸಿ.ಐ.ಎಸ್. ಕಛೇರಿಗೆ ಬಂದು ಭಾಗವಹಿಸುವವರು ಈ ಕೆಳಗೆ ನೋಂದಾಯಿಸಿ

ಬದಲಾಯಿಸಿ

ಸಂಪಾದನೋತ್ಸವದಲ್ಲಿ ಆನ್ ಲೈನ್ ಭಾಗವಹಿಸಲು ಬಯಸುವವರು ಈ ಕೆಳಗೆ ನೋಂದಾಯಿಸಿ

ಬದಲಾಯಿಸಿ

ಪ್ರಶ್ನೆ/ಚರ್ಚೆ/ಸ್ಪಷ್ಟೀಕರಣಗಳು

ಬದಲಾಯಿಸಿ
  • ಕೇದಿಗೆ, ಸಂಪಿಗೆ, ಮಲ್ಲಿಗೆ, ನವಿಲು ಫಾಂಟ್‌ಗಳು ಈಗಾಗಲೇ ವಿಕಿಮೀಡಿಯ ಕಾಮನ್ಸ್‌ನಲ್ಲಿ ಇವೆ. ನಾವುಗಳು ಎಡಿಟ್ ಮಾಡುವ ಪುಟದಲ್ಲಿ ಯಾವ ಯಾವ ಜಾಗದಲ್ಲಿ ಬೇಕೋ, ಅಲ್ಲಿ ಈ ಕೆಳಗಿನವುಗಳನ್ನು ಹಾಕಿದರೆ, ಆ ಫಾಂಟ್ ಬರುತ್ತದೆ. ಕೇದಗೆಯದ್ದು ಇಲ್ಲಿದೆ,
  • ಜಾವಾ ಸ್ಕ್ರಿಪ್ಟ್ ಗಳು Javascript ಅಂತ ಹುಡುಕಿದರೆ ಸಿಗುತ್ತವೆ.
  • us ಯೂಸರ್ ಸ್ಕ್ರಿಪ್ಟ್ ಗಳನ್ನ ಹುಡುಕಲು ಬಳಸಬೇಕು.

ನಿಮಗೆ ಯಾವ ವಿಷಯಗಳು ಬೇಕೋ, ಅದನ್ನು ಅಳವಡಿಸಿ ಎಂದು ಅರಳಿಕಟ್ಟೆಯಲ್ಲಿ ಕೇಳಿ, ಚರ್ಚೆ ಶುರು ಮಾಡಿ ಒಮ್ಮತ ಮೂಡಿಸಿ ಅಡ್ಮಿನ್‌ಗಳಿಗೆ ಕೇಳಿದರೆ, ಕನ್ನಡ ವಿಕಿಪೀಡಿಯಯಲ್ಲಿ ಅಳವಡಿಸಬಹುದು.

  • ಸಹಿ ಭಾರತೀಯ ಕಾಲಮಾನದಲ್ಲಿ ಬರಲು ನಿಮ್ಮ ಪುಟದಲ್ಲಿ ಮೇಲ್ಗಡೆ ಬಲಭಾಗದಲ್ಲಿ

ನನ್ನ ಚರ್ಚೆ ---- ನನ್ನ ಪ್ರಯೋಗಪುಟ ----- ಪ್ರಾಶಸ್ತ್ಯಗಳು ಇವೆ. ಪ್ರಾಶಸ್ತ್ಯಗಳು ==> ಗೋಚರ==> ಇದರ ಅಡಿಯಲ್ಲಿ ==> ಸರ್ವರ್ ಕಾಲ: ==> ಸ್ಥಳೀಯ ಸಮಯ: ==> ಟೈಮ್ ಝೋನ್‌ ಏಷ್ಯಾ --> ಕೋಲ್ಕತ್ತಾ ಅಂತ ಮಾಡಿರಿ. ನಂತರ ಸಹಿ (~~~~) ಹಾಕಿದಾಗ ಭಾರತದ ವೇಳಾಪಟ್ಟಿಯಲ್ಲಿ ಸಮಯ ಕಾಣುತ್ತದೆ.

  • ರಾಜ್ಯೋತ್ಸವ, ಏಷ್ಯಾ ತಿಂಗಳು, ಮಹಿಳಾ ಎಡಿಟಥಾನ್ ಹೀಗೆ ಹಲವು ನಮಗೆ ಕಾಣಿಸಲೇ ಇಲ್ಲ ಅಂತ ದೂರುಗಳನ್ನ ನಾನು ಹಾಕ್ತಾ ಇದ್ದೆ. ಆ ಎಲ್ಲಾ ಸೈಟ್ ನೋಟಿಸ್‌ಗಳನ್ನ ಪ್ರತಿ ಪುಟದಲ್ಲಿಯೂ ಕಾಣಿಸಬೇಕು ಅಂದ್ರೆ ... ಸೈಟ್ ನೋಟಿಸ್ ಮತ್ತು ಸೆಂಟ್ರಲ್ ನೋಟಿಸ್ ಅಂತ ೨ ಬಗೆ ಇದೆ, ಎರಡರಲ್ಲೂ ಹಾಕಬೇಕು. ಈ ವಿಷಯಗಳನ್ನು ಸದಸ್ಯ:Mallikarjunasj ಅವರು ಸದಸ್ಯ:AnoopZ ಅವರಲ್ಲಿ ನಡೆಸಿದರು.
  • ಇಲ್ಲೊಂದಿಷ್ಟು SVG images ಇವೆ. ಇದನ್ನು ಮುಂದಿನ ಹಂತದಲ್ಲಿ ತೆಗೆದುಕೊಳ್ಳಬಹುದು.
ಪ್ರಶ್ನೆ ಸ್ಪಷ್ಟೀಕರಣ
ಕೇದಿಗೆ, ಸಂಪಿಗೆ, ಮಲ್ಲಿಗೆ, ನವಿಲು ಫಾಂಟ್‌ಗಳ ಬಗ್ಗೆ ಈ ಫ಼ಾಂಟ್'ಗಳು ಬಳಕೆದಾರರಿಗೆ ಲಭ್ಯವಿದೆ <div lang = "kn" style= "font-family:kedage">Sample text</div> ಫಾಂಟ್ ಬದಲಾವಣೆಗೆ ಹಿಂದಿನ ಸ್ವರೂಪವನ್ನು ಬಳಸಿ
ಜಾವಾ ಸ್ಕ್ರಿಪ್ಟ್'ಗಳು /ಯೂಸರ್ ಸ್ಕ್ರಿಪ್ಟ್'ಗಳು ವಿವರಗಳಿಗಾಗಿ ಪುಟವನ್ನು w:Wikipedia:User_scripts ನೋಡಿ.
ಭಾರತೀಯ ಕಾಲಮಾನದಲ್ಲಿ ಸಮಯ ಬರಲು ವಿವರಗಳಿಗಾಗಿ ಪುಟವನ್ನು w:Help:Preferences#Time_offset & w:Wikipedia:Comments_in_Local_Time ನೋಡಿ.
ಸೈಟ್ ನೋಟಿಸ್ ಮತ್ತು ಸೆಂಟ್ರಲ್ ನೋಟಿಸ್ ನೀವು ಮೆಟಾ ವಿಕಿ ( ಕೊಂಡಿ : meta:CentralNotice ) ಮೂಲಕ ಎಲ್ಲಾ ಕನ್ನಡ ಭಾಷೆಯ ವಿಕಿಗಳಲ್ಲಿ ಗೋಚರಿಸುವಂತೆ ಸೈಟ್/ಕೆ೦ದ್ರೀಯ ಪ್ರಕಟಣೆಗಳನ್ನು ಕೋರಬಹುದು
@ಸದಸ್ಯ:Mallikarjunasj ,ನಾನು ಮೇಲಿನ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ, ವಿಳಂಬವಾದ ಪ್ರತಿಕ್ರಿಯೆಗಾಗಿ ವಿಷಾದಿಸುತ್ತೇನೆ.★ Anoop✉ ೦೭:೦೮, ೨೯ ಮಾರ್ಚ್ ೨೦೧೯ (UTC)


ಥ್ಯಾಂಕ್ಸ್ ಅನೂಪ್ Mallikarjunasj (talk) ೧೨:೦೬, ೩೦ ಮಾರ್ಚ್ ೨೦೧೯ (UTC)

ಭಾಗವಹಿಸಿದವರು

ಬದಲಾಯಿಸಿ
  1. --Ashwini2001 (ಚರ್ಚೆ) ೧೦:೦೨, ೨೩ ಫೆಬ್ರುವರಿ ೨೦೧೯ (UTC)
  2. --Swathivishwakarma (ಚರ್ಚೆ) ೧೦:೦೩, ೨೩ ಫೆಬ್ರುವರಿ ೨೦೧೯ (UTC)
  3. --Sharmithavsn (ಚರ್ಚೆ) ೧೦:೦೪, ೨೩ ಫೆಬ್ರುವರಿ ೨೦೧೯ (UTC)
  4. --Deekshavishwakarma (ಚರ್ಚೆ) ೧೦:೦೪, ೨೩ ಫೆಬ್ರುವರಿ ೨೦೧೯ (UTC)
  5. --Jasmitha M J (ಚರ್ಚೆ) ೧೦:೦೫, ೨೩ ಫೆಬ್ರುವರಿ ೨೦೧೯ (UTC)
  6. --ವಿಕಾಸ್ ಹೆಗಡೆ/ Vikas Hegde (ಚರ್ಚೆ) ೧೦:೦೬, ೨೩ ಫೆಬ್ರುವರಿ ೨೦೧೯ (UTC)
  7. --ಭರತ್ ಕುಮರ್ ಹೆಚ್ ಎಂ (ಚರ್ಚೆ) ೧೦:೦೭, ೨೩ ಫೆಬ್ರುವರಿ ೨೦೧೯ (UTC)
  8. --Yakshitha (ಚರ್ಚೆ) ೧೦:೧೮, ೨೩ ಫೆಬ್ರುವರಿ ೨೦೧೯ (UTC)
  9. Mallikarjunasj (talk) ೧೦:೩೦, ೨೩ ಫೆಬ್ರುವರಿ ೨೦೧೯ (UTC)
  10. --ನಿತಿನ್ ಹೆಗ್ಡೆ (ಚರ್ಚೆ) ೧೯:೨೨, ೨೩ ಫೆಬ್ರುವರಿ ೨೦೧೯ (UTC)
  11. --ಗೋಪಾಲಕೃಷ್ಣ (ಚರ್ಚೆ) ೦೭:೪೫, ೨೪ ಫೆಬ್ರುವರಿ ೨೦೧೯ (UTC)
  12. --★ Anoop✉ ೦೯:೨೦, ೨೪ ಫೆಬ್ರುವರಿ ೨೦೧೯ (UTC)

ಒಂದನೇ ದಿನ ಈ ಕಾರ್ಯಕ್ರಮದಲ್ಲಿ ಮೊದಲಿಗೆ ಸೆಪ್ಟೆಂಬರ್ ತಿಂಗಳಿನ ಕೊನೆಯಲ್ಲಿ ನಡೆದ ವಿಕಿಗ್ರಾಫಿಸ್ಟ್ಸ್ ಬೂಟ್‌ಕ್ಯಾಂಪ್ (೨೦೧೮ ಇಂಡಿಯಾ)ದ ಬಗ್ಗೆ ಪರಿಚಯ ನಡೆಸಿಕೊಡಲಾಯಿತು. ಇದರಲ್ಲಿ ಯಾವ ಯಾವ ವಿಷಯಗಳನ್ನು ಚರ್ಚಿಸಲಾಯಿತು ಮತ್ತು ಯಾವ ವಿಷಯಗಳನ್ನು ಕಲಿಸಿಕೊಡಲಾಯಿತು ಎಂಬುದನ್ನು ತಿಳಿಸಿಕೊಡಲಾಯಿತು. ಅದಾದ ನಂತರ ಸದಸ್ಯ:Vikashegdeಯವರು SVG Translation Campaign 2019 in India ಬಗ್ಗೆ ಪರಿಚಯ & ತರಬೇತಿ ಮಾಡಿದರು. ಅನಂತರ ಗೋಪಾಲಕೃಷ್ಣ Inkscapeನ ತಳಮಟ್ಟದ ತರಬೇತಿ ನಡೆಸಿಕೊಟ್ಟರು. ಇದರಲ್ಲಿ Inkscape ನಲ್ಲಿ ಯಾವ ರೀತಿ ಭಾಷಾಂತರ ನಡೆಸಬೇಕು ಮತ್ತು ಯಾವ ಟೂಲುಗಳನ್ನು ಬಳಸಿಕೊಳ್ಳಬೇಕೆಂದೂ ತಿಳಿಸಿಕೊಡಲಾಯಿತು.

ಈ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಿ ಮೊದಲನೇಯ ದಿನ ೧೦ ಹಾಗೂ ಎರಡನೆಯ ದಿನ ೧೦ ಜನರು ಭಾಗವಹಿಸಿದರು ಮತ್ತು ಆನ್ಲೈನ್‌ನಲ್ಲಿ ಇಬ್ಬರು ಭಾಗವಹಿಸಿದರು. ಒಟ್ಟು ೧೨ ಜನರು ಸೇರಿ ಸುಮಾರು ೭೭ ಚಿತ್ರಗಳನ್ನು ಮೊದಲನೆಯ ದಿನವೂ ಹಾಗೂ ೧೦ ಚಿತ್ರಗಳನ್ನು ಎರಡನೇಯ ದಿನ ಆಯ್ಕೆ ಮಾಡಿಕೊಂಡು ಅನುವಾದ ನಡೆಸಲು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಆರು ಆಳ್ವಾಸ್ ಕಾಲೇಜು ವಿದ್ಯಾರ್ಥಿ ಸಂಘದ ಮಹಿಳಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರ ಜೊತೆಗೆ ಕನ್ನಡ ಸಮುದಾಯದ ಐದು ಜನ ಪುರುಷರೂ ಭಾಗವಹಿಸಿದ್ದರು.

ಸವಾಲುಗಳು

ಬದಲಾಯಿಸಿ

ಎರಡನೇ ದಿನ 'ಸೌಮ್ಯ ನಾಯ್ಡು' ಅವರು ಗ್ರಾಫಿಕ್ಸ್ ಡಿಸೈನಿಂಗ್ ಬಗ್ಗೆ ಮೂಲಭೂತ ಪಾಠಗಳನ್ನು ಮಾಡಿದರು. ವಿದ್ಯಾರ್ಥಿಗಳಿಗೆ hands on activity ನಡೆಸಲಾಯಿತು. ಅನಂತರ ಸಂಪಾದನೋತ್ಸವ ಮುಂದುವರೆಯಿತು. ಮಧ್ಯಾಹ್ನ 'ಅನೂಪ್ ರಾವ್' ಅವರು Translatewiki ಬಗ್ಗೆ ಒಂದು ಕಿರುಮಾಹಿತಿ ಸೆಶನ್ ಮಾಡಿದರು. ಇದರ ಜೊತೆಗೆ ಉತ್ತಮ ಲೇಖನ ಮತ್ತು ವಿಶೇಷ ಲೇಖನಗಳನ್ನು ಅಭಿವೃದ್ಧಿ ಪಡಿಸುವುದು ಹೇಗೆ ಎಂಬುದನ್ನೂ ತಿಳಿಸಿಕೊಡಲಾಯಿತು.

ಅಭಿಪ್ರಾಯ

ಬದಲಾಯಿಸಿ

SVG ಚೆಕ್ಕರ್

ಬದಲಾಯಿಸಿ

ಕನ್ನಡಕ್ಕೆ ಬಾಷಾಂತರಿಸಿದ SVG ಚಿತ್ರಗಳನ್ನು ಈ ಕೆಳಕಂಡ ಉಪಕರಣವನ್ನು ಉಪಯೋಗಿಸಿ ಅಪ್‍ಲೋಡ್ ಮಾಡುವ ಮುನ್ನ ಪರೀಕ್ಷಿಸಬಹುದು. SVG CHECKER --ವಿದ್ಯಾಧರ ಚಿಪ್ಳಿ (ಚರ್ಚೆ) ೧೭:೨೧, ೨೫ ಮಾರ್ಚ್ ೨೦೧೯ (UTC)

ಚಿತ್ರಗಳು

ಬದಲಾಯಿಸಿ