ವಿಕಿಪೀಡಿಯ:ಸಮ್ಮಿಲನ/೩೩ (ಆನ್ಲೈನ್)

ಅಂತರಜಾಲ ವೇದಿಕೆಯದಲ್ಲಿ ಕನ್ನಡ ವಿಕಿಸಮುದಾಯದ ಭೇಟಿ ಮತ್ತು ಮಾತುಕತೆಗೆ ಈ ಸಮ್ಮಿಲನ ನಡೆಸಲಾಗುವುದು. ಕನ್ನಡ ವಿಕಿಪೀಡಿಯಕ್ಕೆ ಬಹಳ ಕೊಡುಗೆ ನೀಡಿದ ಶ್ರೀ ಚಂದ್ರಶೇಖರ್ ಅವರು ಮೇ ತಿಂಗಳಲ್ಲಿ ನಿಧನರಾಗಿದ್ದು, ಅವರಿಗೆ ಸಮುದಾಯದ ವತಿಯಿಂದ ಶ್ರದ್ಧಾಂಜಲಿ ಅರ್ಪಣೆ ಇದೆ. ಇದರೊಂದಿಗೆ ಕನ್ನಡ ವಿಕಿಯೋಜನೆಗಳ ಬಗ್ಗೆ ಚರ್ಚೆ, ಆಗುಹೋಗುಗಳು, ಪ್ರಶ್ನೋತ್ತರ ಮಾಹಿತಿ ವಿನಿಮಯಗಳನ್ನು ನಡೆಸಲಾಗುವುದು.

ಸಮ್ಮಿಲನದ ಉದ್ದೇಶಸಂಪಾದಿಸಿ

 • ವಿಕಿಮೇನಿಯಾ ೨೦೨೧ ರ ಬಗ್ಗೆ ಮಾತುಕತೆ.
 • ಹಿರಿಯ ವಿಕಿಪೀಡಿಯನ್ ಶ್ರೀ ಚಂದ್ರಶೇಖರರಿಗೆ ಶ್ರದ್ಧಾಂಜಲಿ
 • ಕನ್ನಡ ವಿಕಿಪೀಡಿಯ ಮುಂದಿನ ಹಾದಿ ಬಗ್ಗೆ ಚರ್ಚೆ
 • ಕನ್ನಡದ ಇತರ ವಿಕಿಯೋಜನೆಗಳಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಮಾತುಕತೆ.
 • ವಿಕಿ ಸಂಪಾದನೆಯ ಬಗ್ಗೆ ಪ್ರಶ್ನೋತ್ತರ, ಮಾಹಿತಿ ವಿನಿಮಯ
 • ಭಾರತಮಟ್ಟದ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ, ಅಭಿಯಾನಗಳಲ್ಲಿ ಕನ್ನಡ ಸಮುದಾಯದ ತೊಡಗುವಿಕೆ.

ಸಮಯ, ಸ್ಥಳಸಂಪಾದಿಸಿ

ದಿನಾಂಕ: ೩೧ ಅಕ್ಟೋಬರ್, ಭಾನುವಾರ
ಸಮಯ: ಸಂಜೆ ಆರು ಗಂಟೆ
ಸ್ಥಳ: ಆನ್ ಲೈನ್ Google meet ಸಭೆ (ಲಿಂಕ್: meet.google.com/zjg-zjug-vyd )

ಪಾಲ್ಗೊಳ್ಳಲು ನೊಂದಾಯಿಸಿದವರುಸಂಪಾದಿಸಿ

 1. --ಪವನಜ ಯು. ಬಿ. (ಚರ್ಚೆ) ೦೨:೨೧, ೨೯ ಅಕ್ಟೋಬರ್ ೨೦೨೧ (UTC)
 2. --ವಿಕಾಸ್ ಹೆಗಡೆ (ಚರ್ಚೆ) ೦೨:೫೩, ೨೯ ಅಕ್ಟೋಬರ್ ೨೦೨೧ (UTC)
 3. --Sudheerbs (ಚರ್ಚೆ) ೦೬:೧೯, ೨೯ ಅಕ್ಟೋಬರ್ ೨೦೨೧ (UTC)
 4. --Vishwanatha Badikana (ಚರ್ಚೆ) ೦೮:೨೯, ೨೯ ಅಕ್ಟೋಬರ್ ೨೦೨೧ (UTC)
 5. --Arpitha05 (ಚರ್ಚೆ) ೦೯:೪೯, ೩೦ ಅಕ್ಟೋಬರ್ ೨೦೨೧ (UTC)
 6. --ಮಲ್ನಾಡಾಚ್ ಕೊಂಕ್ಣೊ (ಚರ್ಚಿಸಿ) ೧೩:೩೨, ೩೦ ಅಕ್ಟೋಬರ್ ೨೦೨೧ (UTC)
 7. --Chaithra C Nayak (ಚರ್ಚೆ) ೧೪:೨೩, ೩೦ ಅಕ್ಟೋಬರ್ ೨೦೨೧ (UTC)
 8. --ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೩೨, ೩೦ ಅಕ್ಟೋಬರ್ ೨೦೨೧ (UTC)

ಪಾಲ್ಗೊಂಡವರುಸಂಪಾದಿಸಿ

 1. ಪವನಜ ಯು. ಬಿ.
 2. ವಿಕಾಸ್ ಹೆಗಡೆ
 3. Sudheerbs
 4. Arpitha05
 5. ಮಲ್ನಾಡಾಚ್ ಕೊಂಕ್ಣೊ
 6. Chaithra C Nayak
 7. ವಿದ್ಯಾಧರ ಚಿಪ್ಳಿ
 8. BHARATHESHA ALASANDEMAJALU
 9. Soorya Hebbar

ಶುಭ ಕೋರುವವರುಸಂಪಾದಿಸಿ

 1. ವಿಕಿಪೀಡಿಯ ಮುಕ್ತ ವಿಶ್ವಕೋಶಕ್ಕೆ ಶ್ರೀ ಚಂದ್ರಶೇಖರ್ ರವರ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ವಂದನಾರ್ಹ. ಬಹುಶಃ ನನಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗದೆ ಇರಬಹುದು. ಅದಕ್ಕೆ ಕ್ಷಮೆ ಬೇಡುತ್ತೇನೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ ನಮಿಸುವೆ.— ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Atmalinga (ಚರ್ಚೆಸಂಪಾದನೆಗಳು)

ಸಮ್ಮಿಲನದ ವರದಿಸಂಪಾದಿಸಿ

ಸಮ್ಮಿಲನವು ಗೂಗಲ್ ಮೀಟ್ ವೇದಿಕೆಯಲ್ಲಿ ಆರು ಗಂಟೆಗೆ ಶುರುವಾಗಿ ಸುಮಾರು ಒಂದೂವರೆ ಗಂಟೆ ಕಾಲ ನಡೆಯಿತು. ಮೊದಲಿಗೆ ವಿಕಿಮೇನಿಯಾ ೨೦೨೧ರಲ್ಲಿ ಭಾಗವಹಿಸಿದ ಅನುಭವದ ಬಗ್ಗೆ ಮತ್ತು ವಿಕಿಮೇನಿಯೋತ್ತರ ಸಭೆಯ ಬಗ್ಗೆ ಅರ್ಪಿತಾ ಮತ್ತು ಪವನಜರು ಮಾತಾಡಿದರು.

ಅನಂತರ ವಿದ್ಯಾಧರ ಚಿಪ್ಳಿಯವರು ದಿವಂಗತ ಚಂದ್ರಶೇಖರ್ ಅವರ ಬಗ್ಗೆ ಮತ್ತು ಅವರ ಸಮಾಜಮುಖಿ ಕೆಲಸಗಳ ಬಗ್ಗೆ ಹಾಗೂ ಅವರೊಂದಿಗೆ ತಮ್ಮ ವೈಯಕ್ತಿಕ ಒಡನಾಟಗಳ ಬಗ್ಗೆ ತಿಳಿಸಿಕೊಟ್ಟರು. ಇಳಿವಯಸ್ಸಿನಲ್ಲೂ ವಿಕಿ ಸಂಪಾದನ ಕಲಿತು ಕನ್ನಡ ವಿಕಿಪೀಡಿಯಾ ಹಾಗೂ ವಿಕಿಸೋರ್ಸಿಗೆ ಗಮನಾರ್ಹ ಕೊಡುಗೆ ನೀಡಿದ ಚಂದ್ರಶೇಖರರಿಗೆ ಕನ್ನಡ ವಿಕಿಪೀಡಿಯಾ ಸಮುದಾಯದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಅನಂತರ ಈ ವರ್ಷದಲ್ಲಿ ಕನ್ನಡ ವಿಕಿಪೀಡಿಯಾ ಸಂಪಾದನೆಗಳು ಕಡಿಮೆಯಾಗಿರುವ ಬಗ್ಗೆ ಮತ್ತು ಹೊಸ ಸಂಪಾದಕರು ಸೇರುತ್ತಿರುವುದು ಕಡಿಮೆಯಾಗಿರುವ ಬಗ್ಗೆ ಚರ್ಚಿಸಲಾಗಿ ಮುಂದೆ ಈ ಶಾಲಾಕಾಲೇಜುಗಳು ಆರಂಭವಾಗಿರುವುದರಿಂದ ಮತ್ತು ಕೊರೋನೋತ್ತರ ಜನಜೀವನ ಸಹಜಸ್ಥಿತಿಗೆ ಬರುತ್ತಿರುವುದರಿಂದ ಮುಂದಿನ ದಿನಗಳಲ್ಲಿ ವಿಕಿ ಚಟುವಟಿಕೆಗಳು ಹೆಚ್ಚಾಗಬಹುದೆಂಬ ಆಶಾಭಾವನೆ ವ್ಯಕ್ತವಾಯಿತು.

ವಿವಿಧ ರಾಷ್ಟ್ರೀಯ/ಅಂತಾರಾಷ್ಟ್ರೀಯ ಮಟ್ಟದ ಅಭಿಯಾನ ಮತ್ತು ಸ್ಪರ್ಧೆಗಳಲ್ಲಿ ಕನ್ನಡ ಸಮುದಾಯದ ತೊಡಗುವಿಕೆ ಕಡಿಮೆಯಾಗಿರುವುದರಿಂದ ಆದಷ್ಟೂ ಹೆಚ್ಚು ಜನ ತೊಡಗಿಕೊಳ್ಳುವಂತೆ ಕೋರಿಕೊಳ್ಳಲಾಯಿತು.

ವಿಕಿಸೋರ್ಸಲ್ಲಿ ಹಲವಾರು ಪುಸ್ತಕಗಳು ಈಗಾಗಲೇ ಅಪ್ಲೋಡ್ ಆಗಿದ್ದು ಅದರ ಪ್ರೂಫ್ ರೀಡಿಂಗ್ ಕೆಲಸಗಳು ಬಾಕಿ ಇರುವುದರಿಂದ ಅದನ್ನು ಆಸಕ್ತರು ಫ್ರೂಫ್ ರೀಡಿಂಗ್ ಕೆಲಸಕ್ಕೆ ತೊಡಗಿಕೊಳ್ಳುವ ಸಲಹೆ ನೀಡಲಾಯಿತು.

ಕನ್ನಡ ವಿಕ್ಷನರಿ ಯೋಜನೆಗೆ ಸದ್ಯಕ್ಕೆ ಯಾವ ನಿರ್ವಾಹಕರು ಇಲ್ಲದಿರುವುದರಿಂದ ಅನೂಪ್ ಶಾನಭಾಗ್ ಅವರು ಅಡ್ಮಿನ್ ಆಗಿ ಅರ್ಜಿ ಸಲ್ಲಿಸುವ ಬಗ್ಗೆ ಮನವಿಮಾಡಿಕೊಳ್ಳಲಾಗಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಅನಂತರ ಪ್ರಶ್ನೋತ್ತರ ಮಾಹಿತಿ ವಿನಿಮಯ ಮುಂತಾದ ಒಂದಿಷ್ಟು ಜೆನೆರಲ್ ಚರ್ಚೆಗಳನ್ನು ನಡೆಸಲಾಯಿತು.