ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ

ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಕಛೇರಿ ಕಟ್ಟಡ

ಸಂತ ಅಲೋಶಿಯಸ್ ಕಾಲೇಜು ಜೆಸುವಿಟ್ ಫಾದರ್ಸ್ ನಡೆಸುವ ಒಂದು ಕ್ರೈಸ್ತ ವಿದ್ಯಾಸಂಸ್ಥೆ. ಇದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಮಂಗಳೂರು ಮಹಾನಗರದಲ್ಲಿದೆ. ಈ ಸಂಸ್ಥೆಯು ಸುಮಾರು ೩೭ ಎಕ್ರೆ (150,000 m2) ವಿಸ್ತೀರ್ಣದ ಭೂಮಿಯನ್ನು ಹೊಂದಿದ್ದು ಮಂಗಳೂರು ನಗರದ ಹೃದಯ ಭಾಗದಲ್ಲಿದೆ. ಪೂರ್ವಕ್ಕೆ ಬಂಟ್ಸ್ ಹಾಸ್ಟೇಲ್ ವೃತ್ತ, ಪಶ್ಚಿಮಕ್ಕೆ ಹಂಪನಕಟ್ಟೆ ವೃತ್ತ, ದಕ್ಷಿಣಕ್ಕೆ ಜ್ಯೋತಿ ವೃತ್ತ, ಉತ್ತರಕ್ಕೆ ಪಿವಿಎಸ್ ವೃತ್ತವನ್ನು ಹೊಂದಿದೆ. ಕಾಲೇಜಿನ ಉತ್ತರ ಭಾಗದಲ್ಲಿ ಜಿಲ್ಲಾ ಮ್ಯಾಜಸ್ಟ್ರೇಟ್ ನ್ಯಾಯಾಲಯವಿದೆ. ಮಂಗಳೂರು ನಗರದ ಬಾವುಟ ಗುಡ್ಡವೆಂದೇ ಪ್ರಚಲಿತದಲ್ಲಿರುವ ಸ್ಥಳವೂ ಕಾಲೇಜಿನ ಜಾಗವೂ ಅಕ್ಕಪಕ್ಕದಲ್ಲಿದೆ. ಬಾವುಟ ಗುಡ್ಡವನ್ನು ಲೈಟ್ ಹೌಸ್ ಎಂದು ಕರೆಯುತ್ತಾರೆ. ಕಾಲೇಜಿನ ಆಡಳಿತ ಕಛೇರಿ ಕಟ್ಟಡದಿಂದ ನಿಂತು ನೋಡಿದರೆ ಅರಬ್ಬೀ ಸಮುದ್ರ ಕಾಣಿಸುತ್ತದೆ.[೧]

ಇತಿಹಾಸ ಬದಲಾಯಿಸಿ

 1. ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಯೂರೋಪಿನ ಜೆಸುವಿಟ್ ಫಾದರ್‍ರವರ ಆಗಮನದಿಂದ ಆರಂಭವಾಯಿತು. ಇದಕ್ಕಿಂತ ಮೂರು ವರ್ಷ ಮೊದಲು ಮಂಗಳೂರು ಯುವ ಕೆಥೋಲಿಕ್ ಸಮುದಾಯದಿಂದ ಶಿಕ್ಷಣ ಸಂಸ್ಥೆ ಪ್ರಾರಂಭವಾಯಿತು. ಕಾಲೇಜಿನ ಆಡಳಿತ ಕಟ್ಟದ ಪಕ್ಕದಲ್ಲೇ ಸಂತ ಅಲೋಶಿಯಸ್ ಗೊಂಝಾಗರ ಬಗ್ಗೆ ಇಟಲಿಯಿಂದ ಬಂದ ಜೆಸುವಿಟ್ ಬ್ರದರ್ ಆಂತೋನಿಯೊ ಮೋಶ್ಚಿನಿಯವರು ತಯಾರಿಸಿದ ವಿಶೇಷ ಚಿತ್ರಕಲೆಗಳಿವೆ. ಇದು ಮಂಗಳೂರಿನ ಪ್ರಾಚ್ಯ ಕಲೆಗಳಲ್ಲಿ ಪ್ರಮುಖವಾಗಿದ್ದು, ದಿನವೊಂದಕ್ಕೆ ನೂರಾರು ಜನ ಪ್ರವಾಸಿಗಳ ಆಕರ್ಷಣೀಯ ತಾಣವಾಗಿದೆ.

ಪ್ರಸ್ತುತ ಬದಲಾಯಿಸಿ

 1. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಐಟಿಐ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ, ಬಿ.ಎಡ್.ಪದವಿ, ಪಿಎಚ್.ಡಿ. ಪದವಿ, ಸಂಶೋಧನಾ ಕೇಂದ್ರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಸುಸಜ್ಜಿತ ಪ್ರಯೋಗಾಲಯಗಳ ವಿಜ್ಞಾನ ನಿಕಾಯ ಇಲ್ಲಿದೆ.
 2. ಸಂತ ಅಲೋಶಿಯಸ್ ಕಾಲೇಜಿಗೆ 134 ವರ್ಷಗಳ ಇತಿಹಾಸವಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನೆಗೊಳಪಟ್ಟ ಈ ಸಂಸ್ಥೆಯು 2007ರಲ್ಲಿ ಸ್ವಾಯತ್ತ ಮಾನ್ಯತೆ ಪಡೆದ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ 3900ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಕಾಲೇಜಿನ ನಿಕಾಯಗಳು(Faculties) ಬದಲಾಯಿಸಿ

ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ.

 1. ಕಲಾ ಅಧ್ಯಯನನಿಕಾಯ
 2. ವಿಜ್ಞಾನ ಅಧ್ಯಯನನಿಕಾಯ
 3. ವಾಣಿಜ್ಯ ಅಧ್ಯಯನನಿಕಾಯ
 4. ವ್ಯವಹಾರ ಅಧ್ಯಯನ ನಿಕಾಯ
 5. ವಿದ್ಯುನ್ಮಾನ ಅಧ್ಯಯನ ನಿಕಾಯ
 6. ಸಮಾಜಕಾರ್ಯ ಅಧ್ಯಯನ ನಿಕಾಯ

ವಿಭಾಗಗಳು ಬದಲಾಯಿಸಿ

ಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ. ಕಲಾ ಅಧ್ಯಯನ ನಿಕಾಯದಲ್ಲಿ ೧೦ ವಿಭಾಗಗಳಿವೆ.[೨] ಅವುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗವೂ ಪ್ರಮುಖವಾಗಿದೆ.

ವಿಕಿಪೀಡಿಯ ಶಿಕ್ಷಣ ಯೋಜನೆ ಬದಲಾಯಿಸಿ

 1. ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ
 2. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ/4-5 ಜುಲೈ 2015
 3. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಯೋಜನೆ ೨೦೧೪-೧೫
 4. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಯೋಜನೆ ೨೦೧೫-೧೬
 5. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೬-೧೭
  1. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಯೋಜನೆ ೨೦೧೪-೧೫
  2. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ/4-5 ಜುಲೈ 2015
  3. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಯೋಜನೆ ೨೦೧೫-೧೬
  4. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೬-೧೭
  5. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೯-೨೦
  6. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೨೦-೨೧
  7. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೧೯-೨೦
  8. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೨೦-೨೧
  9. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೨೧-೨೨
  10. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೨೨-೨೩
  11. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೨೩-೨೪
  12. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೨೩-೨೪ ಜುಲೈ
  13. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ವಿಕಿಪೀಡಿಯ ಅಸೋಸಿಯೇಶನ್ ೨೦೨೪-೨೫ ಜನವರಿ

ಉಲ್ಲೇಖ ಬದಲಾಯಿಸಿ

 1. http://www.staloysius.edu.in web/guest;jsessionid=73AD96591437BD8D01DE48B2908B3F3F
 2. http://www.staloysius.edu.in/web/guest/departments