ವರ್ಗ:ಕೊಪ್ಪಳ ಜಿಲ್ಲೆ
ಕೊಪ್ಪಳ :-
ಹುಲಿ ಕೆರೆ
ಮಿನಿ ಕೇದಾರನಾಥೇಶ್ವರ :-
ಕೊಪ್ಪಳ ಜಿಲ್ಲೆಯಲ್ಲಿ ಇರುವ ಹುಲಿಕೆರೆ ಗ್ರಾಮದ ಶಿವರಾತ್ರಿಶ್ವರ ದೇವಾಲಯ ಗೋಪುರವನ್ನು ಗ್ರಾಮಸ್ಥರೆಲ್ಲರೂ ಸೇರಿ ಕೇದಾರನಾಥೇಶ್ವರ ಶೈಲಿಯಲ್ಲಿಯೇ ನಿರ್ಮಿಸಿದ್ದಾರೆ. ಈ ದೇವಾಲಯವು ಪುರಾಣಗಳ ಕಾಲದಲ್ಲಿ ಉದ್ಭವಲಿಂಗು ಎಂದು ತಿಳಿದುಬಂದಿದೆ.
ಚಾಲುಕ್ಯರ ಕಾಲದಲ್ಲಿ ಜಕಣಾಚಾರಿ ಈ ದೇವಾಲಯವನ್ನು ನಿರ್ಮಿಸಿದ್ದ. ಕ್ರಮೇಣ ಈ ದೇವಾಲಯವನ್ನು ಗ್ರಾಮಸ್ಥರೆಲ್ಲರೂ ಸೇರಿ ಕೇದಾರನಾಥೇಶ್ವರ ಶೈಲಿಯಲ್ಲಿ ನಿರ್ಮಿಸಿ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದ್ದಾರೆ.
"ಕಾರಟಗಿ ಪುಷ್ಕರಣಿ "
ಈ ನಮ್ಮ ಕಾರಟಗಿ ಭಾಗವನನ್ನು ಮೌರ್ಯರು, ಚಾಲುಕ್ಯರು, ನಿಜಾಮರು ,ಮುಂತಾದವರು ಆಳಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವುಗಳಲ್ಲಿ ಈ ಪುಷ್ಕರಣಿ ಸಹ ಒಂದಾಗಿದೆ ಈ ಪುಷ್ಕರಣಿಯನ್ನು ಕಲ್ಯಾಣಿ ಚಾಲುಕ್ಯರ ಕಾಲದ ಅರಸನಾದ ಸುಂಕಲಿ ವೀರಪ್ಪ ದೊರೆ ನಿರ್ಮಿಸಿದನು. ಈ ಪುಷ್ಪಕರಣಿವು ವಿಶಿಷ್ಟ ವಿನ್ಯಾಸದಿಂದ ರಚಿತವಾಗಿದೆ ಮೆಟ್ಟಿಲುಗಳು ಮತ್ತು ಕಲ್ಲಿನ ಸಾಲಿಮಂಟಪಗಳ ಮೇಲೆ ಕೆತ್ತಿಲಾದ ಉಬ್ಬು ಶಿಲ್ಪಗಳಲ್ಲಿ ನಾಗರ, ವಾನರ, ನಂದಿ , ಪಾರಿವಾಳ, ಕೈಗೆತ್ತಿ ಮುಂತಾದ ಉಬ್ಬು ಶಿಲ್ಪಗಳು ಕಾಣಬಹುದಾಗಿದೆ. ಈ ಪುಷ್ಕರಣಿಯನ್ನ ನಮ್ಮ ಪೂರ್ವಜರು ಮಹದೇಶ್ವರ ಹೋಂಡ ಎಂದು ಕರೆಯುತ್ತಿದ್ದರು. ಇದರಲ್ಲಿ ಒಂದು ಮಠವಿತ್ತು ಇಲ್ಲಿ ಅಮರ ಶಿಲ್ಪಿ ಜಕಣಾಚಾರಿ ಕಾಲದಲ್ಲಿ ವಿದ್ಯಾ ಬೋಧನೆಯಲ್ಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ ಹೀಗಾಗಿ ಐತಿಹಾಸಿಕ ಕೊಡುಗೆಗಳಲ್ಲಿ ಇದು ಸಹ ಒಂದಾಗಿದೆ .