ಆಲಮಟ್ಟಿ ಆಣೆಕಟ್ಟು

ಕರ್ನಾಟಕ ರಾಜ್ಯದ ಅಣೆಕಟ್ಟು
(ಲಾಲ ಬಹಾದ್ದೂರ ಶಾಸ್ತ್ರಿ ಸಾಗರ ಇಂದ ಪುನರ್ನಿರ್ದೇಶಿತ)
ಆಲಮಟ್ಟಿ ಅಣೆಕಟ್ಟು
ಸ್ಥಳಆಲಮಟ್ಟಿ, ನಿಡಗುಂದಿ ತಾಲ್ಲೂಕು, ವಿಜಯಪುರ ಜಿಲ್ಲೆ
ಅಕ್ಷಾಂಶ ರೇಖಾಂಶ16°19′52″N 75°53′17″E / 16.331°N 75.888°E / 16.331; 75.888
ಉದ್ಘಾಟನಾ ದಿನಾಂಕJuly 2005
ತಯಾರಿಕೆಯ ವೆಚ್ಚRs. 5.20 billion
Operator(s)ಕರ್ನಾಟಕ ವಿದ್ಯುತ್ ನಿಗಮ
Dam and spillways
ಇಂಪೌಂಡ್ಸ್ಕೃಷ್ಣಾ ನದಿ
ಎತ್ತರ52.25 m
ಉದ್ದ1565.15 m
Reservoir
ಒಟ್ಟು ಸಾಮರ್ಥ್ಯ130 Tmcft at 519 m MSL
ಸಂಗ್ರಹಣಾ ಪ್ರದೇಶ33,375 ಚದರ ಕಿ.ಮೀ
Surface area24,230 ಹೆಕ್ಟೇರ್ಗಳು
ಆಲಮಟ್ಟಿ ಆಣೆಕಟ್ಟು
ಆಲಮಟ್ಟಿ ಆಣೆಕಟ್ಟಿನ ಹೆಬ್ಬಾಗಿಲು
ಬೋಟಿಂಗ್
ರಾಕ್ ಉದ್ಯಾನವನದ ಹೆಬ್ಬಾಗಿಲು
ಉದ್ಯಾನವನದ ನೋಟ

ಪೀಠಿಕೆ

ಬದಲಾಯಿಸಿ

ಆಲಮಟ್ಟಿ ಆಣೆಕಟ್ಟು(ಲಾಲ ಬಹಾದ್ದೂರ ಶಾಸ್ತ್ರಿ ಸಾಗರ)ನ್ನು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲುಕಿನಲ್ಲಿ ನಿರ್ಮಿಸಲಾಗಿದೆ. ಆಲಮಟ್ಟಿಯಿಂದ ೨ ಕಿ.ಮೀ. ಆಲಮಟ್ಟಿ ಆಣೆಕಟ್ಟು ಇದೆ. ಜಲಾಶಯದ ಗರಿಷ್ಠ ಮಟ್ಟ ಸಮುದ್ರ ಮಟ್ಟದಿಂದ 1705.3272 ft (೨೮೫೮.೬೫ )ಅಡಿ. ಕೃಷ್ಣಾ ನದಿಗೆ ಕಟ್ಟಲಾಗಿದೆ. ಇದನ್ನು ೨೦೧೦ರಲ್ಲಿ ಭಾರತದ ಮಾಜಿ ರಾಷ್ಟ್ರಪತಿಗಳಾದ ಶ್ರೀ ಎ.ಪಿ.ಜೆ.ಅಬ್ದುಲ್ ಕಲಾಮ್ ರವರು ಉದ್ಘಾಟಿಸಿದರು. ಆಲಮಟ್ಟಿ ಆಣೆಕಟ್ಟನ್ನು ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಲಾಗಿದೆ. ಶಾಸ್ತ್ರೀಯವರು ಆಣೆಕಟ್ಟಿನ ಅಡಿಗಲ್ಲು ಸಮಾರಂಭವನ್ನು ೧೯೬೪ರಲ್ಲಿ ಮಾಡಿದ್ದರು. ಅಣೆಕಟ್ಟೆಯ ಕೆಲಸ ಮುಗಿದ ವರ್ಷ ಜುಲೈ ೨೦೦೫. ಅಣೆಕಟ್ಟೆಯ ಎತ್ತರ - ೫೨.೨೫ ಮಿ., ಉದ್ದ - ೧೫೬೫.೧೫ ಮಿ.

ವಿವಿಧೋದ್ದೇಶ ಯೋಜನೆ

ಬದಲಾಯಿಸಿ
  • ಆಲಮಟ್ಟಿ ಅಣೆಕಟ್ಟು ಕೃಷ್ಣಾನದಿಗೆ ಅಡ್ಡಲಾಗಿರುವ ಕಟ್ಟಲಾಗಿರುವ ಒಂದು ದೊಡ್ಡ ನೀರಾವರಿ ಮತ್ತು ವಿದ್ಯುತ್ ಯೋಜನೆ. ಇದು ಕರ್ನಾಟಕದ ಉತ್ತರದಲ್ಲಿರುವ ಬಾಗಲಕೋಟೆ , ವಿಜಯಪುರ ಜಿಲ್ಲೆಗಳ ಅಂಚಿನಲ್ಲಿರುವ ಕೃಷ್ಣಾ -ಮೇಲುಭಾಗದ (ಅಪ್ಪರ್-ಕೃಷ್ಣಾ) ಯೋಜನೆ , ವಿಜಯಪುರ ಜಿಲ್ಲೆಯಲ್ಲಿದೆ. ಇದು (ಅಪ್ಪರ್-ಕೃಷ್ಣಾ) ಯೋಜನೆಯಲ್ಲಿ ಪ್ರಮುಖವಾದ ಅಣೆಕಟ್ಟು.
  • ಈ ಅಣೆಕಟ್ಟಿ ಜಲವಿದ್ಯತ್ ಯೋಜನೆಯಳ್ಲಿ ೨೯೦ ಮೆಗಾ ವ್ಯಾಟ್ (ಯೂನಿಟ್) ವಿದ್ಯತ್ ಉತ್ಪತ್ತಿಯಾಗುತ್ತದೆ; ಉತ್ಪದನಾ ಗುರಿ /ಸಾಮರ್ಥ್ಯ - ೫೬೦ ಎಮ್ ಯು -ಜಿಡಬ್ಲಯು) ಇದರಲ್ಲಿ ಲಂಬ ಕಪ್ಲಾನ್ ಟರ್ಬೈನ್ ಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದನೆ ಮಾಡಲಗುತ್ತದೆ. ಅಣೆಕಟ್ಟೆಯ ಬಲಭಾಗದಲ್ಲಿ ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.
  • ಇದರಲ್ಲಿ ೫೫ಮೆ.ವ್ಯಾ. ನ ಐದು ಜನರೇಟರುಗಳೂ ,೧೫ ಮೆವ್ಯಾ.ನ ಒಂದು ಜನರೇಟರೂ-ವಿದ್ಯುತ್ ಉತ್ಪಾದನ ಘಟಕವೂ ಇವೆ. ಹೀಗೆ ವಿದ್ಯುತ್ ಉತ್ಪಾದನೆಯಾಗಲು ಉಪಯೋಗಿಸಿದ ನೀರು ಕೆಳಭಾಗದಲ್ಲಿರುವ ಕರ್ನಾಟಕದ ನಾರಾಯಣಪುರ ಜಲಾಶಯಕ್ಕೆ ಹೋಗುತ್ತದೆ.
  • ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ (ಕೃಭಾಜನಿನಿ), ಕರ್ನಾಟಕ ರಾಜ್ಯದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು (ಯು.ಕೆ.ಪಿ) ಕಾರ್ಯಗತಗೊಳಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಪೂರ್ಣ ಸ್ವಾಮ್ಯ ಹೊಂದಿರುವ ಒಂದು ನಿಗಮವಾಗಿ 1994 ರ ಆಗಸ್ಟ್ 19 ರಂದು ನಿಗಮಗಳ ಕಾಯ್ದೆ 1956 ರ ಅನುಸಾರ ಪ್ರಾರಂಭಿಸಲಾಗಿದೆ.
  • ಈ ನಿಗಮವು ಕೃಷ್ಣಾ ಮೇಲ್ದಂಡೆ ಯೋಜನೆಯ ಕೆಳಗಿರುವ ಎಲ್ಲಾ ನೀರಾವರಿ ಯೋಜನೆಗಳ ರಚನಾ ಕ್ರಮ, ತನಿಖೆ, ಅಂದಾಜು, ನೆರವೇರಿಕೆ, ಕಾರ್ಯಚರಣೆ ಮತ್ತು ನಿರ್ವಹಣೆಯ ಹೊಣೆಯಾಗಿರುತ್ತದೆ. ಭಾರತ ಸರ್ಕಾರದಿಂದ ಅನುಮತಿ ಪಡೆದು ಕೃಷ್ಣಾ ಮೇಲ್ದಂಡೆ ಯೋಜನೆಯ ನಿರ್ವಹಣೆ ಮಾಡಬೇಕಾಗಿದೆ.
  • ಈ ಅಣೆ ಕಟ್ಟು ಮೊದಲು ಆರಂಭದಲ್ಲಿ (೧೯೬೪) ೧೪೭೦ ಕೋಟಿರೂಪಾಯಿಗಳಯೋಜನೆಯಾಗಿತ್ತು ; ಇದನ್ನು ಕರ್ನಾಟಕದ ಪವರ್ ಕಾರ್ಪೋರೇಶನ್ ಲಿ. ಇದರ ಮೇಲುಸ್ತುವಾರಿಗೆ ವಹಿಸಿದಾಗ ಅದು ಮೂಲ ಯೋಜನೆಗಿಂತ ಶೇಕಡಾ ೫೦ ರಷ್ಟು ಯೋಜನಾ ವೆಚ್ಚವನ್ನು ೬೭೪ ಕೋಟಿಗೆ ಕಡಿತ ಗೊಳಿಸಿತು. ನಂತರ ಅದನ್ನು ಇನ್ನೂ ಕಡಿತಗೊಳಿಸಿ ರೂ.೫೨೦ ಕೋಟಿಗೇ ,ಕೇವಲ ೪೦ ತಿಂಗಳಿಗೂ ಕಡಿಮೆ ಅವಧಿಯಲ್ಲಿ ಮುಗಿಸಿತು.
  • ಆಂಧ್ರಕ್ಕೂ ಕರ್ನಾಟಕಕ್ಕೂ ಈ ಅಣೆ ಕಟ್ಟನ ನೀರಿನ ಮತ್ತು ಎತ್ತರದ ವಿಚಾರದಲ್ಲಿ ವಿವಾದ ಉಂಟಾಗಿ, ಆಲಮಟ್ಟಿ ಅಣೆಕಟ್ಟಿನ ಎತ್ತರವು ಸಮುದ್ರ ಮಟ್ಟದಿಂದ ೫೧೯ ಮೀಟರಿಗೆ (1705.3272 ಅಡಿ) ಸುಪ್ರೀಮ ಕೋರ್ಟಿನ ಆಜ್ಞೆಯಂತೆ ನಿಗದಿಯಾಗಿತ್ತು.೩೦೯೧.ಸಿ ಅಡಿ ನೀರು ಸಂಗ್ರಹವಾಗುವುದು.
  • ಈ ಅಣೆಕಟ್ಟು ವಿಜಯಪುರ ಜಿಲ್ಲೆಯಲ್ಲಿದ್ದರೂ ವಿಜಯಪುರ ಜಿಲ್ಲೆಯದಕ್ಕಿಂತಲೂ ಬಾಗಲಕೋಟೆ ಜಿಲ್ಲೆಯ ಬಹಳಷ್ಟು ಭೂ ಪ್ರದೇಶ ಮುಳುಗಡೆಯಾಗಿದೆ. ಮುಳುಗಡೆಯಿಂದ ನೊಂದ ಜನರಿಗೆ ಇನ್ನೂ ಅನೇಕರಿಗೆ ಪರಿಹಾರ ಸಿಗದೆ ಸಂಕಷ್ಟದಲ್ಲಿದ್ದಾರೆ.

ವಿವಾದ ಮತ್ತು ನೀರು ಹಂಚಿಕೆ

ಬದಲಾಯಿಸಿ
  • ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ನೀರಿನ ಹಂಚಿಕೆ ಬಗ್ಗೆ ಆಂಧ್ರ , ಕರ್ನಾಟಕ, ಮಹಾರಾಷ್ಟ್ರಗಳನಡುವೆ ವಿವಾದ ಬಗೆಹರಿಸಲು ಸುಪ್ರೀಮ್ ಕೋಟಿ೯ಗೆ ಈ ಮೂರೂ ರಾಜ್ಯಗಳು ಅರ್ಜಿ ಸಲ್ಲಿಸಿದ್ದವು.
  • ಸುಪ್ರೀಮ್ ಕೋರ್ಟಿನಲ್ಲಿ ವಾದ ವಿವಾದ ನಡೆದು , ಆಂಧ್ರ, ಕರ್ನಾಟಕ, ಮಹಾರಾಷ್ತ್ರ ಗಳ ನೀರಿನ ಹಂಚಿಕೆಯ ವಿವಾದ ಪರಿಹಾರ ಕಂಡುಕೊಳ್ಳಲು ಸುಪ್ರೀಮ್ ಕೋರ್ಟ ಆದೇಶದಂತೆ ಬ್ರಿಜೇಶ್ ಕುಮಾರ್ ಪಟೇಲ್ ಅವರ ಟ್ತಿಬ್ಯೂನಲ್ ( ಕೃಷ್ಣಾ ನ್ಯಾಯ ಮಂಡಳಿ) ರಚಿಸಲಾಯಿತು.ಅದು ತನ್ನ ೧ ಮತ್ತು ೨ರ ತೀರ್ಪಿನಲ್ಲಿ ಕರ್ನಾಟಕ ರಾಜ್ಯಕ್ಕೆ ೯೧೧ (911) ಟಿಎಮ್.ಸಿ ಅಡಿ ನೀರು ಹಂಚಿಕೆ ಆಗಿತ್ತು. ಅದು ನವೆಂಬರ್ ೨೯;೨೦೧೩ ರಂದು ಅಂತಿಮ ತೀರ್ಪು ನೀಡಿತು. ಜಲಾಶಯದ ಒಟ್ಟು ಸಂಗ್ರಹ ೨೫೭೮ ಟಿ.ಎಮ್. ಸಿ. ಅಡಿ, ನೀರನ್ನು ಮಳೆಯ ಶೇ.೭೫ರ ಆಧಾರದಮೆಲೆ ಮೂರೂ ರಾಜ್ಯಗಳಿಗೆ ಹಂಚಿಕೆ ಮಾಡಿತು. ಇಷ್ಟು ನೀರನ್ನು ಹಂಚಿಕೆ ಮಾಡಿದ ಮೇಲೂ ಹೆಚ್ಚುವರಿಯಾಗಿ ೫೧೩ ಟಿ,ಎಮ್,ಸಿ.ಅಡಿ ನೀರು ಹೆಚ್ಚುವರಿಯಾಗಿ ಸಿಗುತ್ತದೆ.ಈ ಹೆಚ್ಚುವರಿ ನೀರಿನ ಬಗ್ಗೆ ಸೂಕ್ತ ಕಾಲದಲ್ಲಿ ಪುನಹ ಹಂಚಿಕೆ ಮಾಡಲು ಸೂಕ್ತ ವೇದಿಕೆಯಲ್ಲಿ ಮೂರು ರಾಜ್ಯಗಳ ಕೇಳಿಕೊಳ್ಳಬಹುದೆಂದು ಹೇಳಿದೆ. (ಕೃಷ್ಣಾ ಮೊದಲನೇ ನ್ಯಾಯ ಮಂಡಳಿ ಕರ್ನಾಟಕಕ್ಕೆ ೭೩೪ ಟಿ.ಎಮ್.ಸಿ.ಅಡಿ ನೀರು ಕೊಟ್ಟಿತ್ತು ).
ದಿ.೨ - ೧೧- ೨೦೧೩(2-11-2013) ರ ತೀರ್ಪು
ಈಗ ಕೃಷ್ಣಾನ್ಯಾಯಮಂಡಳಿ ತೀರ್ಪು ಕರ್ನಾಟಕಕ್ಕೆ ೯೦೭(907) ಟಿ.ಎಮ್,ಸಿ.ಅಡಿ ;
ಮಹಾರಾಷ್ಟ್ರಕ್ಕೆ --- ೬೬೬ (666) ಟಿ.ಎಮ. ಸಿ.ಅಡಿ ;
ಆಂಧ್ರಕ್ಕೆ --- ೧೦೦೫ (1005) ,ಇಎಮ.ಸ ಸಿ,ಅಡಿ ನೀರನ್ನು ಹಂಚಿಕೆ ಮಾಡಿದೆ.
(ಒಟ್ಟು ಹಂಚಿಕೆ ಮಾಡಿದ ನೀರು ೨೫೭೮ ಟಿ,ಎಮ್,ಸಿ. ಅಡಿ; ಅದಕ್ಕೂ ಹೆಚ್ಚುವರಿ ಉಳಿಯುವ ನೀರು ೫೧೩ ಟಿ,ಎಮ್.ಸಿ ಅಡಿ ಅಂದರೆ ಸಂಗ್ರಹವಾಗಬಹುದಾದ (2578+503) =3091ನೀರು ೨೫೭೮+೫೧೩ = ೩೦೯೧ ಟಿ,ಎಮ್ ಸಿ ಅಡಿ ನೀರು ?).
ಆ ಮಂಡಳಿಯು, ದಿ. ೩೦-೧೨-೨೦೧೩ ರಂದು ಪುನಹ ಎತ್ತಿದ ಆಕ್ಷೇಪಕ್ಕೆ ಆಂದ್ರಕ್ಕೆ ೪ ಟಿ.ಎಮ್.ಸಿ ಅಡಿ ಹೆಚ್ಚು ಮಂಜೂರುಮಾಡಿ ಕೈತೊಳೆದು ಕೊಂಡಿದೆ.
ಆಂಧ್ರವು ಇಷ್ಟೆಲ್ಲಾ ತಕರಾರು ಮಾಡಲು ಕಾರಣ ಕರ್ನಾಟಕ ತನ್ನ ಪಾಲಿನ ನೀರನ್ನು ಪೂರ್ಣ ಉಪಯೋಗಿಸದೆ ಆಂದ್ರಕ್ಕೆ ಬಿಡುತ್ತಿದೆ ಅದನ್ನು ಅದು ಉಪಯೋಗಿಸಿಕೊಂಡು ಸಾವಿರಾರು ಎಕರೆ ಹೆಚ್ಚು ನೀರಾವರಿ ಬೇಸಾಯ ಮಾಡುತ್ತಿದೆ. ಅಲ್ಲದೆ ಮಳೆ ಹೆಚ್ಚಾದಾಗ ಬರುವ ನೀರನ್ನೂ ಉಪಯೋಗಿಸುತ್ತದೆ ಅಥವಾ ಸಮುದ್ರಕ್ಕೆ ಬಿಡುತ್ತದೆ. ಕನಾ೯ಟಕ ತನ್ನ ನೀರನ್ನು ಉಪಯೋಗಿಸಿಕೊಂಡರೆ ಅನಧಿಕೃತವಾಗಿ ಹೆಚ್ಚುವರಿ ನೀರಾವರಿ ಬೇಸಾಯ ಮಾಡುವ ಸಾವಿರಾರು ಎಕರೆ ಜಮೀನಿಗೆ ನೀರಿನ ಕೊರತೆ ಆಗುವುದೆಂಬ ಭಯದಿಂದ ಅದು ತಕರಾರುಮಾಡುತ್ತಿದೆ.

ಅಣೆಕಟ್ಟೆ ಎತ್ತರ

ಬದಲಾಯಿಸಿ
  • ಕೊನೆಗೆ ಜಲಾಶಯದ ಮಟ್ಟವನ್ನು 519. 6 (1705.33 ಅಡಿ) ರಿಂದ 524 .256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು (ಸಮುದ್ರ ಮಟ್ಟದಿಂದ ಎತ್ತರ ; 1705.//್ಠ/3272ಅಡಿ = 519.6 ಮೀ x1.094ಗಜ*3ಅಡಿ=1705.33 ಅಡಿ) ನ್ಯಾಯಂಗ ಸಮಿತಿ 29 ನವೆಂಬರ್ 2013 ರಲ್ಲಿ ತೀರ್ಮಾನ ಕೊಟ್ಟಿತು. ಆದರೆ ಆಂದ್ರವು ಅದನ್ನು ಪುನಹ ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿ ವಿರೋಧಿಸಿತು. ಅಕಸ್ಮಾತ್ ಎತ್ತರಿಸಿದಲ್ಲಿ ತನಗೆ ಅದರಲ್ಲಿ ಸಂಗ್ರಹವಾಗುವ ಹೆಚ್ಚುವರಿ 200 ಟಿ ಎಮ್ ಸಿ ನೀರಿನಲ್ಲಿ ಹೆಚ್ಚು ಭಾಗ ಕೊಡಬೇಕೆಂದು ಕೇಳಿತು . ಆದರೆ ನ್ಯಾಯ ಮಂಡಳಿ ಮಳೆಯ-ಸರಾಸರಿ ಶೇ. 65 ಅಂದಾಜು ಹಿಡಿದು ಹೀದೆ ನವೆಂಬರ್ 29, 2013 ರ ತೀರ್ಪಿನಲ್ಲಿ ಕೊಟ್ಟ 1005 ಟಿಎಮ್ ಸಿ ನೀರಿನ ಜೊತೆಗೆ ಆಂದ್ರಕ್ಕೆ 2 ರ ಐ-ತೀರ್ಪು ನೀಡಿ 4 ಟಿ ಎಮ್ ಸಿ ಯಷ್ಟು ಹೆಚ್ಚುವರಿ ನೀರು ಕೊಡಲು ತೀರ್ಮಾನ ಕೊಟ್ಟಿದೆ. ನಿಗದಿಮಾಡಿದೆ . ಅಣೆ ಕಟ್ಟೆ ಎತ್ತರಿಸಿದ ನಂತರ ಸಿಗವ- ಆ ಹೆಚ್ಚುವರಿ ನೀರನ್ನು ಕರ್ನಾಟಕವೇ ಉಪಯೋಗಿಸಬಹುದು ಎಂದು ನಿರ್ಣಯಿಸಿದ್ದಾರೆ. (ಆಗಸ್ಟ್ 2013 ಕ್ಕೆ ಅದರಲ್ಲಿ 90.91 ಟಿ.ಎಮ್ ಸಿ ನೀರು ಸಂಗ್ರಹವಿರುವುದಾಗಿ ವರದಿಯಾಗಿದೆ. (ಇಂಗ್ಲಿಷ್ ವಿಕಿ- ಆಲಮಟ್ಟಿ ಜಲಾಶಯ) ಒಟ್ಟು ಧಾಮಾಶಾ 200 ಟಿಎಮ್ ಸಿ ನೀರು ಅದರಲ್ಲಿ ಸಂಗ್ರಹವಾಗುವುದಾಗಿ ಹೇಳಲಾಗಿದೆ.)
  • ಆಲಮಟ್ಟಿಯ ಗರಿಷ್ಟ ಮಟ್ಟ 519.6 ಮೀಟರ್ ಆದರೆ ಅದರ ಬಳಕೆ ಕನಿಷ್ಟ ಮಟ್ಟ(ಡೆಡ್ ಸ್ಟೋರೇಜ್ ) 506.87 ಮೀಟರ್. ಇದಕ್ಕಿಂತ ಕಡಿಮೆಯಾದಲ್ಲಿ ಕಾಲುವೆಗೆ ನೀರು ಬಿಡಲು ಆಗುವುದಿಲ್ಲ. ಈ ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಈ ಅಣೆಕಟ್ಟು ಸುಮಾರು 6 ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವುದು .(ಆಧಾರ:- ಕೃಷ್ಣಾ ಭಾಗ್ಯ ಜಲನಿಗಮದ ಪತ್ರಿಕಾ ಹೇಳಿಕೆ 23-4-2014—ಪ್ರಜಾವಾಣಿ ವರದಿ)

ನೀರಾವರಿ ಪ್ರದೇಶ

ಬದಲಾಯಿಸಿ
  • ಅಪ್ಪರ್ ಕೃಷ್ಣಾ ವಿವಿದೋದ್ದೇಶ ಯೋಜನೆಯಲ್ಲಿ ಮುಖ್ಯವಾಗಿ ಎರಡು ಅಣೆಕಟ್ಟುಗಳು ಘಟಪ್ರಭಾ ನದಿ, ಕೃಷ್ಣಾ ನದಿಗಳು ಸಂಗಮದ ಹತ್ತಿರ ಕಟ್ಟಲಾಗಿದೆ. ಕೆಳ ಭಾಗದ ಆಂದ್ರದಲ್ಲಿ ಮಲಪ್ರಭಾ ನದಿ ಕೃಷ್ಣಾ ನದಿ ಸೇರುವಲ್ಲಿ ಕಟ್ಟಲಾಗಿದೆ.
  • ಈಯೋಜನೆಯು ಎರಡು -ಮೂರು ಹಂತಗಳಲ್ಲಿ ಪೂರ್ಣಗೊಳಿಸುವ ಯೋಜನೆ ಯಾಗಿತ್ತು.. ಮೊದಲ ಹಂತದಲ್ಲಿ, ಈ ಯೋಜನೆಯಿಂದ ೧೧೯ ಟಿ.ಎಮ್,ಸಿ ನೀರನ್ನು ಉಪಯೋಗಿಸಿಕೊಂಡು ೪,೨೫,೦೦೦ ಹೆಕ್ಟೇರು ಜಮೀನನ್ನು ನೀರಾವರಿಕೃಷಿಗೆ ಒಳಪಡಿಸುವುದು; ಎರಡನೇ ಹಂತದ ಯೋಜನೆಯಲ್ಲಿ , ೫೪ ಟಿಎಮ್.ಸಿ. ನೀರನ್ನು ಉಪಯೋಗಿಸಿಕೊಂಡು ೧,೯೭,೧೨೦ ಹೆಕ್ಟೇರು ಜಮೀನಿಗೆ ನೀರು ಒದಗಿಸುವುದು.
  • ೧ ನೇ ಮತ್ತು ೨ ನೇ ಹಂತದ ಈ ನೀರಾವರಿ ಯೋಜನೆಯಿಂದ , ಬರದ ನಾಡು /ಜಿಲ್ಲೆ ಗಳಾದ ಉತ್ತರ ಕರ್ನಾಟಕದ, ಗುಲ್ಬರ್ಗಾ , ಯಾದಗಿರಿ, ರಾಯಚೂರು, ಬೀಜಾಪುರ, ಬಾಗಿಲಕೋಟೆ ಈ ಪ್ರದೇಶಗಳನ್ನು ನೀರಾವರಿ ಯೋಜನೆ ಗೆ ಒಳಪಡಿಸುವುದು. ಇದಕ್ಕಾಗಿ ಮೊದಲ ೧ ಮತ್ತು ೨ನೇ ಹಂತದ ಯೋಜನೆಗಳು ಪೂರ್ಣಗೊಂಡು ೬.೦೮ ಲಕ್ಷ ಹೆಕ್ಟೇರು ಪ್ರದೇಶ ನೀರಾವರಿ ಪಡೆಯಲು ಸಿದ್ಧವಾಗಿದೆ. ಇದಕ್ಕಾಗಿ ೧೭೩ ಟಿ.ಎಮ್.ಸಿ ನೀರು ಉಪಯೋಗಿಸಲು ಸಿದ್ಧವಾಗಿದೆ . (೧ ಹೆಕ್ಟೇರು = ೨.೫ ಎಕರೆ.)
  • ದಿ. ೩೦-೧೨-೨೦೧೦ ರಲ್ಲಿ ಕೃಷ್ಣಾ ನೀರು ಹಂಚಿಕೆ ವಿವಾದ ನ್ಯಾಯ ಮಂಡಳಿ-೨, ಆಂಧ್ರ, ಕರ್ನಾಟಕ. ಮಹಾರಾಷ್ತ್ರಗಳ ನಡುವೆ, ಹೆಚ್ಚುವರಿ ನೀರನ್ನು, ಈ ರೀತಿ ಹಂಚಿಕೆ ಮಾಡಿತು.
  1. ಮಹಾರಾಷ್ರಕ್ಕೆ ೮೧ ಟಿ.ಎಮ್.ಸಿ. ; (ಮೀಟರ್)
  2. ಕರ್ನಾಟಕಕ್ಕೆ ೧೭೭ ಟಿ,ಎಮ್,ಸಿ; (ಮೀಟರ್)
  3. ಆಂಧ್ರ ಪ್ರದೇಶಕ್ಕೆ ೧೯೦ ಟಿಎಮ್ ಸಿ. ; (ಮೀಟರ್)
  4. ಕರ್ನಾಟಕಕ್ಕೆ ಕೊಡಮಾಡಿದ ೧೭೭ ಟಿ.ಎಮ್.ಸಿ. (ಮೀಟರ್)ನೀರಿನಲ್ಲಿ ೧೩೦.೯೦ ಟಿಎಮ್ ಸಿ (ಮೀಟರ್)ಮೂರನೇಹಂತದ ಯೋಜನೆಯಿಂದ ದೊರಕುವ ಭಾಗ.

ಉದ್ಯಾನ ವನ-ಪ್ರೇಕ್ಷಣೀಯ ಸ್ಥಳ

ಬದಲಾಯಿಸಿ

ಅಣೆಕಟ್ಟಿನ ಪ್ರದೇಶದಲ್ಲಿ ಏಳು ತಾರಸಿ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ .ಅದರಲ್ಲಿ ದೋಣಿ ವಿಹಾರ (ಬೋಟಿಂಗ್), ಸಂಗೀತ ಕಾರಂಜಿ., ಮತ್ತು ನಿಂತ ಕಾರಂಜಿಗಳು ಇವೆ. ಅಣೆಕಟ್ಟಿನ ಒಂದು ಬದಿಯಲ್ಲಿ, "ರಾಕ್ ಹಿಲ್" ಎಂಬ ಕೃತಕ ಅರಣ್ಯವನ್ನು ಅಭಿವೃದ್ಧಿ ಪಡಿಸಲಾಗಿದೆ. ,ಅದರಲ್ಲಿ ಸೆರಾಮಿಕ್ ಕಾಡುಪ್ರಾಣಿಗಳ ಹಾಗೂ ಪಕ್ಷಿಗಳ ಪ್ರತಿರೂಪಗಳಿವೆ ಮತ್ತು ಭಾರತದ ಹಳ್ಳಿಯ ಜೀವನವನ್ನು ಪ್ರತಿನಿಧಿಸುವ ಅನೇಕ ವಿಗ್ರಹಗಳನ್ನು ಹೊಂದಿದೆ

ಅಣೆಕಟ್ಟೆ ಎತ್ತರದ ಬಗೆಗೆ 2014 ರ ಬೆಳವಣಿಗೆ

ಬದಲಾಯಿಸಿ
  • ಜಲಾಶಯದ ಮಟ್ಟವನ್ನು 519. 6 (1705.33 ಅಡಿ)ಸಮುದ್ರ ಮಟ್ಟದಿಂದ ರಿಂದ 524 .256 ಮೀಟರ್ ಮಟ್ಟಕ್ಕೆ ಎತ್ತರಿಸಬಹುದೆಂದು ನ್ಯಾಯಂಗ ಸಮಿತಿ ೨೯ ನವೆಂಬರ್ ೨೦೧೩ ರಲ್ಲಿ ತೀರ್ಮಾನ ಕೊಟ್ಟಿದ್ದು ಸರಿಯಷ್ಟೆ.
  • ಆದರೆ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಮತ್ತೆ 22 ಗ್ರಾಮಗಳು ಮುಳುಗಡೆಯಾಗಲಿವೆ. ‘ನಾರ್ವೆ’(ಮಾದರಿ) ತಡೆಗೋಡೆ ನಿರ್ಮಿಸುವ ಮೂಲಕ ಈ ಪೈಕಿ 12 ಗ್ರಾಮಗಳನ್ನು ರಕ್ಷಿಸಿ, ಮುಳುಗಡೆ ವ್ಯಾಪ್ತಿಯನ್ನು ತಗ್ಗಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ವಿಭಾಗ ಮುಂದಾಗಿದೆ.
  • ಆದರೆ ‘ಯಾವುದೇ ಕಾರಣಕ್ಕೂ ತಡೆಗೋಡೆ ಬೇಡ, ಎಲ್ಲ 22 ಹಳ್ಳಿಗಳನ್ನು ಮುಳುಗಡೆ ವ್ಯಾಪ್ತಿಗೆ ಸೇರಿಸಿ ಸೂಕ್ತ ಪರಿಹಾರ, ಪುನರ್ವಸತಿ ಕಲ್ಪಿಸಿ’ ಎಂಬುದು ಸಂತ್ರಸ್ತರ ಆಗ್ರಹ. ಅವರು ಈ ಕುರಿತು ಪುನರ್ವಸತಿ ಆಯುಕ್ತರಿಗೆ ಮನವಿ ಮಾಡಿದ್ದಾರೆ.
  • ಆಲಮಟ್ಟಿ ಜಲಾಶಯದ ಹಿನ್ನೀರು ವ್ಯಾಪ್ತಿಯಲ್ಲಿ ನಾರ್ವೆ ದೇಶದ ಮಾದರಿಯಂತೆ ತಡೆಗೋಡೆ ನಿರ್ಮಿಸುವ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರ ಸಹಕಾರದೊಂದಿಗೆ ಈಗಾಗಲೇ ಸಮೀಕ್ಷೆ ನಡೆಸಲಾಗಿದೆ ಎಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಆಯುಕ್ತ ತಿಳಿಸಿದರು.
  • ತಡೆಗೋಡೆ ನಿರ್ಮಾಣದಿಂದ ಆಲಮಟ್ಟಿ ಜಲಾಶಯದಲ್ಲಿ ರಾಜ್ಯದ ಪಾಲಿನ ನೀರಿನ ಸಂಗ್ರಹಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಬಾಗಲಕೋಟೆ ಜಿಲ್ಲೆಯ ಗೋವಿಂದಕೊಪ್ಪ, ಗದ್ದನಕೇರಿ, ಉದಗಟ್ಟಿ, ಕಲಾದಗಿ, ಅಲಗುಂಡಿ, ಕಾತರಕಿ, ಬಾವಲತ್ತಿ, ಕೊಪ್ಪ ಎಸ್‌ಕೆ, ಹಿರೇಪಡಸಲಗಿ, ಕುಂಬಾರಹಳ್ಳ, ಸನಾಳ ಹಾಗೂ ವಿಜಯಪುರ ಜಿಲ್ಲೆಯ ವಂದಾಲ ಗ್ರಾಮವನ್ನು ಹಿನ್ನೀರಿನಲ್ಲಿ ಮುಳುಗಡೆಯಾಗದಂತೆ ರಕ್ಷಿಸಬಹುದಾಗಿದೆ’ ಎಂದು ಅವರು ವಿವರಿಸಿದರು.
  • ಮನೆ, ಹೊಲ ಮುಳುಗಡೆಯಾಗುವುದಕ್ಕೆ ಸಂತ್ರಸ್ತರಿಂದ ವಿರೋಧ ವ್ಯಕ್ತವಾಗುವುದು ಸಹಜ. ಆದರೆ, ಅವಳಿ ಜಿಲ್ಲೆಯ 12 ಗ್ರಾಮಗಳ ಸಂತ್ರಸ್ತರು ‘ನಮ್ಮೂರನ್ನು ಹಿನ್ನೀರಿನಲ್ಲಿ ಮುಳುಗಿಸಿ, ಪರಿಹಾರ ನೀಡಿ....’ ಎಂದು ದುಂಬಾಲು ಬಿದ್ದಿರುವು ದರಿಂದ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
  • ಸಂತ್ರಸ್ತರ ಭಾವನೆ ಏನೇ ಇರಲಿ, ಮುಳುಗಡೆಯಾ ಗುವುದನ್ನು ತಪ್ಪಿಸಲು ಮತ್ತು ಯೋಜನಾ ವೆಚ್ಚ ತಗ್ಗಿಸಲು ಇರುವ ಸಾಧ್ಯತೆಯ ಬಗ್ಗೆ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ, ಈ ಸಂಬಂಧ ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಿ’ ಎಂದು ಸಚಿವ ಎಸ್‌.ಆರ್‌.ಪಾಟೀಲ ಅವರು ಪುನರ್ವಸತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
  • ಬಾಗಲಕೋಟೆ: ಬೃಹತ್‌ ಅಣೆಕಟ್ಟೆಯಲ್ಲಿ ಸಂಗ್ರಹವಾಗುವ ಹಿನ್ನೀರು ಗ್ರಾಮಗಳಿಗೆ ಮತ್ತು ಕೃಷಿಭೂಮಿಗೆ ವ್ಯಾಪಿಸದಂತೆ ತಡೆಯುವ ಉದ್ದೇಶದಿಂದ ಮೊಟ್ಟಮೊದಲ ಬಾರಿಗೆ ನಾರ್ವೆ ದೇಶದಲ್ಲಿ ವೈಜ್ಞಾನಿಕವಾಗಿ ತಡೆಗೋಡೆ ನಿರ್ಮಾಣ ಪ್ರಯೋಗ ನಡೆಯಿತು.
  • ಈ ಪ್ರಯೋಗ ಯಶಸ್ವಿಯಾದುದರಿಂದ ‘ನಾರ್ವೆ ತಡೆಗೋಡೆ’ ಮಾದರಿ ಎಲ್ಲೆಡೆ ಪ್ರಸಿದ್ಧಿಯಾಯಿತು. ಇಂದು ವಿಶ್ವದ ಹಲವು ರಾಷ್ಟ್ರಗಳು ಬೃಹತ್‌ ನೀರಾವರಿ ಯೋಜನೆಗಳಲ್ಲಿನ ಮುಳುಗಡೆ ಪ್ರಮಾಣ ತಗ್ಗಿಸಲು ‘ನಾರ್ವೆ ತಡೆಗೋಡೆ ಮಾದರಿ’ಯನ್ನು ಅಳವಡಿಸಿಕೊಳ್ಳುತ್ತಿವೆ’ ಎಂದು ಶಿವಯೋಗಿ ಕಳಸದ ತಿಳಿಸಿದರು.
  • ತಡೆಗೋಡೆ ನಿರ್ಮಿಸಿದರೆ ಲಾಭ:
  • 12 ಹಳ್ಳಿಗಳ ಮುಳುಗಡೆ ತಡೆಯಬಹುದು
  • ಇದರಿಂದ ₨ 5600 ಕೋಟಿ ಉಳಿತಾಯ
  • 5 ಸಾವಿರ ಎಕರೆ ಫಲವತ್ತಾದ ಕೃಷಿ ಭೂಮಿ ಉಳಿಯಲಿದೆ
  • 47,500 ಜನರ ಸ್ಥಳಾಂತರ ತಪ್ಪಿಸಬಹುದು
  • 12 ಪುನರ್ವಸತಿ ಕೇಂದ್ರ ನಿರ್ಮಾಣದ ಅಗತ್ಯ ಇರುವುದಿಲ್ಲ
  • ಪುನರ್ವಸತಿ ಕೇಂದ್ರಕ್ಕೆ ಬೇಕಾದ 2900 ಎಕರೆ ಭೂಮಿ ಉಳಿಯಲಿದೆ

೨೦೧೬ ರ ವರೆಗಿನ ಬೆಳವಣಿಗೆ

ಬದಲಾಯಿಸಿ
  • ಆಲಮಟ್ಟಿ ಮತ್ತು ನಾರಾಯಣಪುರ ಆಣೆಕಟ್ಟುಗಳಿಂದ ಕಲಬುರ್ಗಿ, ಯಾದಗಿರಿ, ರಾಯಚೂರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 6.22 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಹಂಚಿಕೆಯಾದ ಒಟ್ಟು 173 ಟಿಎಂಸಿ ಪೂರ್ಣ ಪ್ರಮಾಣದ ನೀರನ್ನು ಬಲಸಿಕೊಳ್ಳಲಾಗುತ್ತಿದೆ.
  • ಕೃಷ್ಣ ಮೇಲ್ದಂಡೆ ಯೋಜನೆ ಹಂತ–1 ಮತ್ತು 2ರ ಅಡಿ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರಮುಖವಾಗಿ ಮುಳವಾಡ ಏತ ನೀರಾವರಿ ಯೋಜನೆ ಹಂತ–2, ಆಲಮಟ್ಟಿ ಎಡದಂಡೆ ಕಾಲುವೆ, ಆಲಮಟ್ಟಿ ಬಲದಂಡೆ ಕಾಲುವೆ, ಇಂಡಿ ಶಾಖಾ ಕಾಲುವೆ, ಇಂಡಿ ಏತನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು 1.95 ಲಕ್ಷ ಹೆಕ್ಟೇರ್ ಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
  • ಮುಳವಾಡ ಏತ ನೀರಾವರಿ ಯೋಜನೆಯಡಿ ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ 4 ಹಂತಗಳಲ್ಲಿ ನೀರನ್ನು ಎತ್ತಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ, ಮುದ್ದೇಬಿಹಾಳ, ವಿಜಯಪುರ, ಸಿಂಧಗಿ ಮತ್ತು ಇಂಡಿ ಬಬಲೇಶ್ವರ, ತಿಕೋಟಾ ತಾಲ್ಲೂಕುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಮುಳವಾಡ ಏತ ನೀರಾವರಿ ಯೋಜನೆಯ ಮೂರನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗಿದೆ. ಮೂರನೇ ಹಂತದ ಯೋಜನೆಯ ಅಂದಾಜು ವೆಚ್ಚ ₹ 4610.89 ಕೋಟಿಯಾಗಿದ್ದು ಈಗಾಗಲೇ ₹ 1031.50 ಕೋಟಿ ವೆಚ್ಚ ಮಾಡಲಾಗಿದೆ.
  • ಆಲಮಟ್ಟಿ ಎಡದಂಡೆ ಕಾಲುವೆ ಜಾಲದ ಮೂಲಕ 4.60 ಟಿಎಂಸಿ ನೀರನ್ನು ಮುದ್ದೇಬಿಹಾಳ ಮತ್ತು ಬಸವನಬಾಗೇವಾಡಿ ತಾಲ್ಲೂಕಿನ 20,235 ಹೆಕ್ಟೇರ್‌ ಪ್ರದೇಶಕ್ಕೆ ಒದಗಿಸಲಾಗುತ್ತಿದೆ. ಇದಕ್ಕಾಗಿ ₹232.67 ಕೋಟಿ ಖರ್ಚು ಮಾಡಲಾಗಿದೆ. ಇದಲ್ಲದೆ ಚಿಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೂ ಕ್ರಮ ಕೈಗೊಳ್ಳಲಾಗಿದೆ.
  • ಭೂಸ್ವಾಧೀನ ಪಡಿಸಿಕೊಳ್ಳಬೇಕಾದ 1,34,107 ಎಕರೆ ಪೈಕಿ 60 ಸಾವಿರ ಎಕರೆ ಪ್ರದೇಶದ ಭೂಸ್ವಾಧೀಣಕ್ಕೆ 11(1) ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ತಗಲುವ ವೆಚ್ಚ ₹ 31,894 ಕೋಟಿ ಎಂದೂ ಅಂದಾಜಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್‌ವಸತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತಮಟ್ಟದ ಸಮಿತಿ ರಚಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕ್ರಿಯಾ ಯೋಜನೆ ಪರಿಶೀಲನಾ ಸಮಿತಿ ರಚಿಸಲಾಗಿದೆ. ಮುಳುಗಡೆ ಹೊಂದುವ 20 ಗ್ರಾಮಗಳ ಪೈಕಿ 11 ಗ್ರಾಮಗಳ ಮುಳುಗಡೆ ತಡೆಯಲು ವಿನೂತನ ತಾಂತ್ರಿಕ ಪರಿಹಾರ ಕಂಡುಕೊಳ್ಳಲೂ ಯತ್ನಿಸಲಾಗುತ್ತಿದೆ.

ತೆಲಂಗಾಣಾ ಉದಯದ ನಂತರದ ಸಮಸ್ಯೆ

ಬದಲಾಯಿಸಿ
  • ಆಂಧ್ರ ಪ್ರದೇಶವು, ಆಂದ್ರ ಮತ್ತು ತೆಲಂಗಾಣಾ ಎಂದು ವಿಭಝಿತವಾದ ಮೇಲೆ ಕೃಷ್ಣಾನದಿನೀರು ಹಂಚಿಕೆ ಸಮಸ್ಯೆ ಎದುರಾಗಿ ಕೃಷ್ಣಾ ನದಿ ನ್ಯಾಯಾಧಿಕರಣದಮುಂದೆ ತೆಂಗಾಣಾ ಆಂದ್ರ ಗಳ ನೀರಿನ ಹಂಚಿಕೆಯ ಅರ್ಜಿ ವಿಚಾರಣೆಗೆ ಬಂದಿತ್ತು. ಕೃಷ್ಣಾನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂದು ತೆಲಂಗಾಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಗಿದಿದ್ದು, ಯೋಜನಾವಾರು ನೀರು ಹಂಚಿಕೆ ಸಾಧ್ಯವಿಲ್ಲ ಎಂದು ಕೃಷ್ಣಾ ನದಿ ನ್ಯಾಯಾಧಿಕರಣ ಮಹತ್ವದ ತೀರ್ಪು ನೀಡಿದೆ. ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕು. ಕೃಷ್ಣಾ ನದಿ ನೀರಿನ ಬಗ್ಗೆ ಮತ್ತೆ ಪ್ರಾರಂಭದಿಂದಲೇ ವಿಚಾರಣೆ ನಡೆಸಬೇಕು ಎಂದು ತೆಲಂಗಾಣ ಸರ್ಕಾರ ಸುಪ್ರೀಂಕೋರ್ಟ್‌ ಹಾಗೂ ನ್ಯಾಯಾಧಿಕರಣದ ಮೊರೆ ಹೋಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬೃಜೇಶ್‌ ಕುಮಾರ್‌ ನೇತೃತ್ವದ ನ್ಯಾಯಾಧಿಕರಣವು ಆಂಧ್ರಪ್ರದೇಶಕ್ಕೆ ನೀಡಲಾಗಿರುವ ನೀರನ್ನೇ ತೆಲಂಗಾಣವು ಹಂಚಿಕೊಳ್ಳಬೇಕು ಎಂದು ತೀರ್ಪು ನೀಡಿದ್ದು ಆಂಧ್ರಪ್ರದೇಶ ಮತ್ತು ತೆಲಂಗಾಣ ನಡುವೆ ಮಾತ್ರ ನೀರು ಹಂಚಿಕೆ ಸಾಧ್ಯ ಎಂದು ಹೇಳಿದೆ.
  • ಕೃಷ್ಣಾ ನ್ಯಾಯಾಧಿಕರಣವು 2010ರಲ್ಲಿ ಅಂತಿಮ ಐ ತೀರ್ಪು ಮತ್ತು 2013ರ ಸ್ಪಷ್ಟತಾ ತೀರ್ಪುಗಳ ಮೂಲಕ ಕೃಷ್ಣಾ ಕೊಳ್ಳದ ಮಹಾರಾಷ್ಟ್ರ, ಕರ್ನಾಟಕ ಮತ್ತು ಆಂಧ್ರ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಇದರನ್ವಯ ಮಹಾರಾಷ್ಟ್ರಕ್ಕೆ 666 ಟಿಎಂಸಿ, ಕರ್ನಾಟಕಕ್ಕೆ 907 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 1005 ಟಿಎಂಸಿ ನೀರನ್ನು ಹಂಚಿಕೆಯಾಗಿದೆ. ಆದರೆ ಆಂಧ್ರಪ್ರದೇಶ ಪುನರ್‌ ರಚನೆ ಕಾಯ್ದೆ-2014ರ ಅಡಿಯಲ್ಲಿ ಆಂಧ್ರಪ್ರದೇಶ ವಿಭಜನೆಗೊಂಡು ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ವಿಂಗಡಣೆಯಾದ ಕಾರಣ ಕೃಷ್ಣಾ ನದಿ ನೀರನ್ನು ಮರುಹಂಚಿಕೆ ಮಾಡಬೇಕೆಂದು ತೆಲಂಗಾಣ ಕೋರಿತ್ತು, ಈ ಕೋರಿಕೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ವಿರೋಧ ಸೂಚಿಸಿತ್ತು.[]

ನಿರಾಶ್ರತರ ಸಮಸ್ಯೆ

ಬದಲಾಯಿಸಿ
  • ಕೃಷ್ಣಾ ಮೇಲ್ದಂಡೆ ಯೋಜನೆ ಮುಳುಗಡೆಯ ಕುಟುಂಬಗಳ ಪೈಕಿ ಐದರಿಂದ ಆರು ಸಾವಿರ ಜನರಿಗೆ ಎಡೆಹಳ್ಳಿಯಲ್ಲಿ ಪುನರ್‌ವಸತಿ ಕಲ್ಪಿಸಲಾಗಿದೆ. ಯೋಜನೆಯ ಮೊದಲ ಹಂತದಲ್ಲಿ ಪರಿಹಾರ ಪಡೆದ ಬೀಳಗಿ ತಾಲ್ಲೂಕಿನ ಈ ಹಳ್ಳಿಯ ಎಷ್ಟೋ ಮಂದಿಗೆ ಈಗಲೂ ಹಕ್ಕುಪತ್ರಸಿಕ್ಕಿಲ್ಲ. ಹದಿನೆಂಟು ವರ್ಷಗಳ ಹಿಂದೆ ಪಡಿತರ ಚೀಟಿಯಲ್ಲಿ ಎಷ್ಟು ಜನರ ಹೆಸರಿತ್ತೋ ಅಷ್ಟೇ ಜನ ಸಂತ್ರಸ್ತರ ಪಟ್ಟಿಯಲ್ಲಿದೆ. ಅವರು ಆಗ ಬಾಲಕರಾಗಿದ್ದವರು ಈಗ ಯುವಕರಾಗಿ, ಸಂಸಾರಗಳನ್ನು ಪಡೆದಿದ್ದಾರೆ. ಅವರ ಸಂಸಾರದಲ್ಲಿ ನಂತರ ಹುಟ್ಟಿದ ಎಷ್ಟೋ ಸದಸ್ಯರ ಹೆಸರು ಪಟ್ಟಿಯಲ್ಲಿ ಇಲ್ಲ. ಹಿಂದೆ ವಿಶಾಲ ಮನೆಗಳಲ್ಲಿ ಇದ್ದವರು ಈಗ ತಗಡಿನ ಪುನರ್ವಸತಿ ಮನೆಗಳಲ್ಲಿ ಇದ್ದಾರೆ.ಆದರೆ, ಮುಳುಗಡೆಯ ಕಷ್ಟ ಅವರಿಗೆಲ್ಲಅ ತಟ್ಟಿದೆ ಎನ್ನುತ್ತಾರೆ ಕೃಷ್ಣಾ ಮೇಲ್ದಂಡೆ ಸಂತ್ರಸ್ತರ ಹೋರಾಟದ ಸಮಿತಿ ಅಧ್ಯಕ್ಷ ಅದೃಶ್ಯಪ್ಪ, [][]

ಆಲಮಟ್ಟಿ ಉದ್ಯಾನವನದ ಚಿತ್ರಗಳು

ಬದಲಾಯಿಸಿ

ಟಿ.ಎಂ.ಸಿ

ಬದಲಾಯಿಸಿ
1 ಟಿ. ಎಮ್.ಸಿ. = 100 ಕೋಟಿ ಘನ ಮೀಟರ್ ಅಥವಾ ಗಜ ಅಥವಾ ಅಡಿ; ಟಿ. ಎಮ್.ಸಿ.ನಂತರ ಅದನ್ನು ಬರೆಯಬೇಕು.
1,000,000,000 ಘನ ಅಡಿ = 28,000,000 ಘನ ಮೀಟರ್ ; ಕರ್ನಾಟಕ ಭಾಗ್ಯ ನಿಗಮದ ಅಂತರ್ ಜಾಲ ತಾಣದಲ್ಲಿ ಹಂಚಿದ ನೀರಿನ ಪ್ರಮಾಣದ ಅಂಕೆ ಮುಂದೆ ಮೀ / ಅಡಿ ಬರೆದಿಲ್ಲ.; ಮೀಟರ್ ಎಂದು ಊಹಿಸಿಕೊಳ್ಳಬೇಕು.
There are 28,316,846,592 liters in 1 TMC of water.
Tmcft, TMC, tmc, or Tmc ft are abbreviations for 1,000,000,000 = 1 billion or one Thousand Million Cubic ft. It is a measurement used in referring to water volume in river flow or reservoirs.
1 Tmcft is therefore equal to: 28,316,846,592 liters
1,000,000,000 cubic ft or 28,000,000 m3
22,956.841139 acre feet

ಹೊರ ಸಂಪರ್ಕ

ಬದಲಾಯಿಸಿ
  • ೧. ಇಂಗ್ಲಿಷ್ ವಿಕಿ ಆಲಮಟ್ಟಿ ಡ್ಯಾಮ್
  • ೨. ಸುದ್ದಿ ಮಾದ್ಯಮ -ಪ್ರಜಾವಾಣಿ ದಿ೩೦-೧೧-೨೦೧೩ ಮತ್ತು ೨೧-೧೨-೨೦೧೩
  • ೩.http://www.kbjnl.com/Upper-Krishna-Project
  • ೪.ಪ್ರಜಾವಾಣಿ ವಾರ್ತೆ/ 12/31/2014
  • ೫.ಪ್ರಜಾವಾಣಿ ೨೪-೩-೨೦೧೬:[೧]