ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್)ಸಂಪಾದಿಸಿ

ಇದು ಕರ್ನಾಟಕ ರಾಜ್ಯದಾದ್ಯಂತ ವಿದ್ಯುತ್ ಪ್ರಸರಣ ಮತ್ತು ವಿತರಣೆ ಮಾಡುವ ಏಕೈಕ ಸಂಸ್ಥೆ. ೧೯೯೯ ರಲ್ಲಿ ಕರ್ನಾಟಕ ವಿದ್ಯುತ್ ಮಂಡಳಿ (ಕೆಇಬಿ) ವಿಸರ್ಜನೆಯಾಗಿ,"ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ" (ಕೆಪಿಟಿಸಿಎಲ್) ಮೈದಳೆಯಿತು. ಈ ನವೆಂಬರ್ ೧೯೯೯ ರಲ್ಲಿ ]]ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ]] (ಕೆ ಇ ಆರ್ ಸಿ ) ರೂಪುಗೊಂಡಿತು.

ಅಂಗ ಸಂಸ್ಥೆಗಳುಸಂಪಾದಿಸಿ

ಈ ಕಂಪನಿಗಳ ವಿದ್ಯುತ್ ಖರೀದಿ ಮತ್ತು ಮಾರಾಟಸಂಪಾದಿಸಿ

 • ( 13/14/12/2014 ಪ್ರತಿ ಯೂನಿಟ್‌ ವಿದ್ಯುತ್ ದರವನ್ನು 80 ಪೈಸೆಯಷ್ಟು ಹೆಚ್ಚಿಸು­ವಂತೆ ಕೋರಿ ರಾಜ್ಯದ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳು. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಅರ್ಜಿ ಸಲ್ಲಿಸಿವೆ.)

ಈ ಕಂಪೆನಿಗಳು 63,437 ದಶಲಕ್ಷ ಯೂನಿಟ್ ವಿದ್ಯುತ್ ಖರೀದಿಸುತ್ತಿದ್ದು, 52,056 ದಶಲಕ್ಷ ಯೂನಿಟ್ ಮಾರಾಟ ಮಾಡುತ್ತಿವೆ. 2016–17ನೇ ಆರ್ಥಿಕ ವರ್ಷಕ್ಕೆ ಐದು ಕಂಪೆನಿಗಳಿಗೆ ಒಟ್ಟು ₨ 31,379 ಕೋಟಿ ಆದಾಯದ ಅಗತ್ಯ ಇದೆ ಎಂದು ಹೇಳಿವೆ.

 • 2014–15ರಲ್ಲಿ ಆದಾಯ ಸಂಗ್ರಹದಲ್ಲಿ ₨ 1,642.9 ಮತ್ತು 2016–17 ರಲ್ಲಿ ₨ 2,831.4 ಕೋಟಿ ಕೊರತೆ ಬೀಳಬಹುದು ಎಂಬ ಅಂದಾಜು ಅರ್ಜಿಯಲ್ಲಿದೆ. ಒಟ್ಟು ₨ 4,165.5 ಕೋಟಿ ಆದಾಯದ ಕೊರತೆ ಆಗಬಹುದು. ಈ ಎಲ್ಲ ಅಂಶಗಳನ್ನು ಆಧರಿಸಿ ದರ ಹೆಚ್ಚಳ ಬೇಡಿಕೆಯನ್ನು ಪುರಸ್ಕರಿಸುವಂತೆ ಕಂಪೆನಿಗಳು ಕೋರಿವೆ.
 • ಕರ್ನಾಟಕ ವಿದ್ಯುತ್ ಸರಬರಾಜು ನಿಗಮ ಕೂಡ 2014–15ನೇ ಸಾಲಿನ ವಾರ್ಷಿಕ ಕಾರ್ಯನಿರ್ವಹಣಾ ಪರಿಶೀಲನೆ ವರದಿಗೆ ಒಪ್ಪಿಗೆ ಕೋರಿ ಅರ್ಜಿ ಸಲ್ಲಿಸಿದೆ. ಆದಾಯದಲ್ಲಿ ₨ 255.99 ಕೋಟಿ ಕೊರತೆ ಆಗಬಹುದು ಎಂಬ ಅಂದಾಜು ಮಂಡಿಸಿರುವ ನಿಗಮ, ಇದನ್ನು 2016–17ನೇ ಸಾಲಿನಲ್ಲಿ ಸಂಗ್ರಹಿಸಲು ಅನುಮತಿ ಕೋರಿದೆ.
 • ನಿಯಮಗಳ ಪ್ರಕಾರ 2015ರ ಮಾರ್ಚ್‌ 31ರೊಳಗೆ ಅಥವಾ ಅದೇ ದಿನ ದರ ಪರಿಷ್ಕರಣೆಗೆ ಸಂಬಂಧಿಸಿದ ಆದೇಶ ಹೊರಡಿಸಲಾಗುವುದು’ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.4

ವಿದ್ಯುತ್ ಕಂಪೆನಿಗಳ ಆರ್ಥಿಕ ಸ್ಥಿತಿಸಂಪಾದಿಸಿ

ಎಲ್ಲ ಕಂಪೆನಿಗಳೂ ಒಂದೇ ಪ್ರಮಾಣದ ದರ ಹೆಚ್ಚಳಕ್ಕೆ ಮನವಿ ಮಾಡಿವೆ.
(13-12-2014)ವಿದ್ಯುತ್ ಕಂಪನಿಗಳ ಆರ್ಥಿಕ ಸ್ಥಿತಿ4---2014-2015
ವಿವರ ಬೆಸ್ಕಾಂ ಮೆಸ್ಕಾಂ ಸೆಸ್ಕ್ ಹೆಸ್ಕಾಂ ಜಿಸ್ಕಾಂ ಒಟ್ಟು
ವಿದ್ಯುತ್ ಖರೀದಿ/ದಶಲಕ್ಷ ಯೂನಿಟ್ 30,988 5,274 7,051 11,981 8,146 63,437
ವಿದ್ಯುತ್ ಮಾರಾಟ/ ದಶಲಕ್ಷ ಯೂನಿಟ್ 25,787 4,476 5,799 9,450 6542 52,056
2016ನೇಸಾಲಿಗೆ ಆದಾಯದ ಬೇಡಿಕೆ (ಕೋಟಿಗಳಲ್ಲಿ) 15,613.41 2,665.2 3,441.93 5,865.82 3,792.6 31,379
2014ರಲ್ಲಿ ಆದಾಯ ಕೊರತೆ (ಕೋಟಿಗಳಲ್ಲಿ) 839.88 50.99 15.62 427.63 308.76 1842.9
2016 ರಲ್ಲಿ ಆದಾಯ ಕೊರತೆ (ಕೋಟಿಗಳಲ್ಲಿ) 1222.78 306.31 450.48 328.47 523.36 2631..4
ಆದಾಯದಲ್ಲಿ ಒಟ್ಟು ಕೊರತೆ.(ಕೋಟಿಗಳಲ್ಲಿ) 2062.66 357.3 466.1 756..1 523.35 4165.5
ದರ ಏರಿಕೆ-1ಯೂನಿಟ್`ಗೆ -ಪೈಸೆ> 80 80 80 80 80 -

ಕರ್ನಾಟಕದ ವಿದ್ಯುತ್ ಸ್ಥಾವರಗಳುಸಂಪಾದಿಸಿ

ಕರ್ನಾಟಕದ ಕೆ.ಪಿ.ಟಿ.ಸಿ.ಎಲ್. ವಿದ್ಯುತ್ ಸ್ಥಾವರಗಳು

ಉಷ್ಣ ವಿದ್ಯುತ್ ಸ್ಥಾವರಗಳು
ಸ್ಥಾವರ ಸಾಮರ್ಥ್ಯ-ಮೆಗಾವಾಟ್‍ಗಳಲ್ಲಿ
ಬಳ್ಳಾರಿ 3ನೇ ಘಟಕ 700
ಯರಮರಸ್ 1600
ಕೂಡಗಿ 4000
ಯಡ್ಲಾಪುರ 800
ಛತ್ತೀಸ್ಗಡ 1600
ಅನಿಲಾಧಾರಿತ ಘಟಕ
ಬಿಡದಿ 700
ಖಾಸಗಿ ಘಟಕಗಳು
ಕಲಬರ್ಗಿ 1350
ಘಟಪ್ರಭಾ 1320
ಒಟ್ಟು 12070

[೧]

ಇಂಧನ ಮತ್ತು ಭವಿಷ್ಯಸಂಪಾದಿಸಿ

 • ಒಂದು ದೇಶದ ಅಥವಾ ರಾಜ್ಯದ ಆರ್ಥಿಕ ಸ್ಥಿತಿಗತಿ ಪರಿಗಣಿಸುವಾಗ ಸರ್ಕಾರಗಳು ಪ್ರಧಾನವಾಗಿ ಮೂರು ಅಂಶಗಳ ಬಗ್ಗೆ ಗಮನ ನೀಡಬೇಕು. ಮೊದಲನೆಯದಾಗಿ ಇಂಧನ, ಎರಡನೆಯದಾಗಿ ಸಂಪನ್ಮೂಲಗಳು ಮತ್ತು ಮೂರನೆಯದಾಗಿ ಬಂಡವಾಳ (ಭದ್ರತೆಯ ವಿಚಾರವನ್ನು ನಾಲ್ಕನೇ ಅಂಶವಾಗಿ ಪರಿಗಣಿಸಬಹುದು).
 • ಇಂಧನ ಕ್ಷೇತ್ರವನ್ನು ಹಿನ್ನೆಲೆಯಾಗಿಟ್ಟುಕೊಂಡು ರಾಜ್ಯದ ಅಭಿವೃದ್ಧಿಯ ವೇಗವನ್ನು ವಿಶ್ಲೇಷಣೆ ಈ ರೀತಿ ಇದೆ:
 • ಸದ್ಯ, ರಾಜ್ಯದಲ್ಲಿ 24 ಲಕ್ಷ ಕೃಷಿ ಪಂಪ್‌ಸೆಟ್‌ಗಳು (10 ಎಚ್‌ಪಿವರೆಗಿನವು) ಇವೆ ಎಂದು ಇಂಧನ ಇಲಾಖೆ ಹೇಳುತ್ತಿದೆ. ಇಷ್ಟು ಪಂಪ್‌ಸೆಟ್‌ಗಳು ವಾರ್ಷಿಕವಾಗಿ 1,759 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್‌ ಬಳಸುತ್ತವೆ. ಗ್ರಾಮೀಣ ಪ್ರದೇಶಗಳಿಗೆ ಹೋಗಿ ನೋಡಿದರೆ, ಕೃಷಿ ಉದ್ದೇಶಕ್ಕೆ ಸರಿಯಾಗಿ ವಿದ್ಯುತ್‌ ಪೂರೈಕೆಯೇ ಆಗುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 6ರಿಂದ 8 ಗಂಟೆಗಳಷ್ಟು ಹೊತ್ತು ಮೂರು ಫೇಸ್‌ ವಿದ್ಯುತ್ ಪೂರೈಕೆಯಾದರೆ ಹೆಚ್ಚು. ನೀರಾವರಿ ಉದ್ದೇಶದ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಸರ್ಕಾರ ನೀಡುವ ಅಂಕಿ ಅಂಶಗಳು ವರದಿಗಷ್ಟೇ ಸೀಮಿತ.
 • 1991–92ರಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ 442 ಕೋಟಿ ಯೂನಿಟ್‌ಗಳಷ್ಟು ವಿದ್ಯುತ್‌ ಬಳಸಲಾಗಿತ್ತು. 2015ರಲ್ಲಿ ಇದು 1,759 ಕೋಟಿ ಯೂನಿಟ್‌ಗಳಿಗೆ ಏರಿದೆ. ಅಂದರೆ, ವಿದ್ಯುತ್‌ ಬಳಕೆಯಲ್ಲಿ ನಾಲ್ಕು ಪಟ್ಟು ಹೆಚ್ಚಳವಾಗಿದೆ. ಈ 26 ವರ್ಷಗಳ ಅವಧಿಯಲ್ಲಿ ಆಹಾರ ಉತ್ಪಾದನೆಯಲ್ಲಿ ದಾಖಲೆ ಪ್ರಮಾಣದ ಹೆಚ್ಚಳವಾಗಿಲ್ಲ. ರೈತರ ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್‌ ಒದಗಿಸಲಾಗುತ್ತಿಲ್ಲ.
 • ರಾಜ್ಯದಲ್ಲಿ ಲಭ್ಯವಿರುವ ವಿದ್ಯುತ್‌ನಲ್ಲಿ ಶೇ 51ರಷ್ಟು ಪ್ರಮಾಣವನ್ನು ಬೆಸ್ಕಾಂಗೆ ಹಂಚಲಾಗುತ್ತಿದೆ.ಸದ್ಯ, ರಾಜ್ಯದಲ್ಲಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಶೇ 4ರಷ್ಟು ವಿದ್ಯುತ್‌ ಮಾತ್ರ ಬಳಸುತ್ತಿವೆ. ರಾಜ್ಯದ ಒಟ್ಟಾರೆ ವರಮಾನದಲ್ಲಿ ಕೈಗಾರಿಕೆಗಳ ಕೊಡುಗೆ ಶೇ 15ರಿಂದ ಶೇ 20ರಷ್ಟು ಇದೆ. ಒಂದು ವೇಳೆ, ಕರ್ನಾಟಕದಲ್ಲಿ ಉದ್ದಿಮೆಗಳು ಸಮರ್ಥವಾಗಿ ಬೆಳೆಯುತ್ತಿದೆ ಎಂದಾದರೆ ಒಂದು ದಶಕದಲ್ಲಿ ರಾಜ್ಯದ ವರಮಾನಕ್ಕೆ ಕೈಗಾರಿಕೆಗಳು ನೀಡುತ್ತಿರುವ ಕೊಡುಗೆಯಲ್ಲಿ ಕನಿಷ್ಠ ಶೇ 3 ರಷ್ಟಾದರೂ ಹೆಚ್ಚಳವಾಗಬೇಕಿತ್ತು.

ಸೋರಿಕೆಯನ್ನು ತಡೆದರೆ ಅಭಿವೃದ್ಧಿಗೆ ಸಹಾಯಸಂಪಾದಿಸಿ

 • ವಿದ್ಯುತ್‌ ಸಾಗಣೆ ಮತ್ತು ವಿತರಣೆ ಮಾಡುವ ಸಂದರ್ಭದಲ್ಲಿ ಆಗುವ ಸೋರಿಕೆ ಪ್ರಮಾಣ ರಾಜ್ಯದಲ್ಲಿ ಸರಾಸರಿ ಶೇ 18ರಿಂದ 19ರಷ್ಟು ಇದೆ. ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ, ಶೇ 7ರಿಂದ ಶೇ 8ರಷ್ಟು ವಿದ್ಯುತ್‌ ಸೋರಿಕೆಯಾಗಬಹುದು. ಅಂದರೆ ನಮ್ಮಲ್ಲಿ ಶೇ 10ರಷ್ಟು ಹೆಚ್ಚು ವಿದ್ಯುತ್‌ ಸೋರಿಕೆಯಾಗುತ್ತಿದೆ. ಕೃಷಿ ವಿಚಾರಕ್ಕೆ ಬರುವುದಾದರೆ, ರಾಜ್ಯದಲ್ಲಿರುವ ಕೃಷಿ ಪಂಪ್‌ಸೆಟ್‌ಗಳ ಕಾರ್ಯಕ್ಷಮತೆ ಶೇ 40ರಷ್ಟು ಮಾತ್ರ. ಈ ಕಾರಣದಿಂದಾಗಿ ಪಂಪ್‌ಸೆಟ್‌ಗಳು ಹೆಚ್ಚು ವಿದ್ಯುತ್‌ ಬೇಡುತ್ತವೆ. ಇಷ್ಟು ಪ್ರಮಾಣದ ವಿದ್ಯುತ್‌ ಸೋರಿಕೆಯನ್ನು ತಡೆಯಲು ನಾವು ಬುದ್ಧಿಪೂರ್ವಕ ಕ್ರಮ ಕೈಗೊಳ್ಳದ ಹೊರತು, ಹೆಚ್ಚಿನ ವಿದ್ಯುತ್‌ ಉತ್ಪಾದನೆ ಮಾಡಿದರೂ ಹೆಚ್ಚು ಪ್ರಯೋಜನವಾಗದು. ಮುಂದಿನ ಹತ್ತು ವರ್ಷಗಳಲ್ಲಿ ವಿದ್ಯುತ್‌ ಸೋರಿಕೆ ಪ್ರಮಾಣವನ್ನು ಶೇ 12–13ಕ್ಕೆ ಇಳಿಸಿದರೆ ಮತ್ತು ಕೃಷಿ ಪಂಪ್‌ ಸೆಟ್‌ಗಳ ಕಾರ್ಯದಕ್ಷತೆಯನ್ನು ಶೇ 60ಕ್ಕೆ ಹೆಚ್ಚಿಸಿದರೆ ಸಾಕಷ್ಟು ವಿದ್ಯುತ್‌ ಅನ್ನು ನಾವು ಉಳಿತಾಯ ಮಾಡಬಹುದು.

ಪರಿಸರ ಸ್ನೇಹಿ ಇಂಧನಸಂಪಾದಿಸಿ

 • ಸೋಲಾರ್‌ ಸೇರಿದಂತೆ ಇತರ ಪರಿಸರ ಸ್ನೇಹಿ ಇಂಧನ ಮೂಲಗಳಿಂದ ವಿದ್ಯುತ್‌ ತಯಾರಿಸಲು ಇಲಾಖೆ ಉತ್ತೇಜನ ನೀಡುತ್ತಿರುವುದು ಸ್ವಾಗತಾರ್ಹ. ಆದರೆ, ಜಲವಿದ್ಯುತ್‌, ಪೆಟ್ರೋಲಿಯಂ ಉತ್ಪನ್ನಗಳಿಂದ ವಿದ್ಯುತ್‌ ತಯಾರಿಸಲು ಆಗುವ ವೆಚ್ಚಕ್ಕೆ ಹೋಲಿಸಿದರೆ ಸೋಲಾರ್‌ ದುಬಾರಿ. ಪ್ರತಿ ಜಿಲ್ಲೆಯಲ್ಲೂ 5 ಮೆ ವಾ ಸಾಮರ್ಥ್ಯದ ಸೌರ ವಿದ್ಯುತ್‌ ಘಟಕ ಸ್ಥಾಪಿಸುವಂತೆ ಹತ್ತು ವರ್ಷಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ವಾಣಿಜ್ಯೋದ್ಯಮ ಮಹಾ ಸಂಘ (ಎಫ್‌ಕೆಸಿಸಿಐ) ಸಲಹೆ ನೀಡಿತ್ತು. ಆದರೆ ಈಗ ಪ್ರತಿ ಜಿಲ್ಲೆಯಲ್ಲೂ 150 ಮೆವಾ ಸಾಮರ್ಥ್ಯದ ಘಟಕ ಸ್ಥಾಪಿಸಲು ಯೋಚಿಸುತ್ತಿದೆ. ಯೋಜನೆಗಳನ್ನು ರೂಪಿಸುವುದು ದೊಡ್ಡದಲ್ಲ; ಅವುಗಳ ಯಶಸ್ವಿ ಅನುಷ್ಠಾನವೇ ದೊಡ್ಡ ಸವಾಲು.

ವಿದ್ಯುತ್‌ ನಿಯಂತ್ರಣ ಆಯೋಗಸಂಪಾದಿಸಿ

 • ರಾಜ್ಯದ ವಿದ್ಯುತ್‌ ಕ್ಷೇತ್ರದ ಮಟ್ಟಿಗೆ ಹೇಳುವುದಾದರೆ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗವೇ (ಕೆಇಆರ್‌ಸಿ) ಪರಮೋಚ್ಛ ನಾಯಕ.
 • ಸಂವಿಧಾನಾತ್ಮಕ ಸಂಸ್ಥೆಯಾಗಿರುವ ಇದು, ವಿದ್ಯುತ್‌ ತಯಾರಿಕೆ, ನಿರ್ವಹಣೆ ಮತ್ತು ಸರಬರಾಜು ವ್ಯವಸ್ಥೆಯಲ್ಲಿ ನಿರ್ವಹಿಸುವ ಪಾತ್ರ ದೊಡ್ಡದು. ತನ್ನ ಕಾರ್ಯನಿರ್ವಹಣೆಯಲ್ಲಿ ಅದಕ್ಕೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಇಂಧನ ಕ್ಷೇತ್ರದ ಅಭಿವೃದ್ಧಿಗೆ ನೀಲ ನಕ್ಷೆ ತಯಾರಿಸುವುದರಿಂದ ಹಿಡಿದು ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಆಯೋಗದ ಮೇಲಿದೆ.ವಾಸ್ತವದಲ್ಲಿ ಇಂಧನ ಕ್ಷೇತ್ರದ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಸೀಮಿತ. ನೀತಿಗಳನ್ನು ರೂಪಿಸುವುದು, ಬಜೆಟ್‌ ಹಂಚಿಕೆ ಸೇರಿದಂತೆ ಸರ್ಕಾರಕ್ಕೆ ಇರುವುದು ಬೆರಳೆಣಿಕೆಯ ಜವಾಬ್ದಾರಿಗಳು ಮಾತ್ರ.
 • ಆಯೋಗವು ಸರ್ಕಾರ ಮತ್ತು ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿರಬೇಕು ಎಂಬ ಉದ್ದೇಶದಿಂದಲೇ 2003ರಲ್ಲಿ ವಿದ್ಯುತ್‌ ಕಾಯ್ದೆ ಜಾರಿಗೆ ತರಲಾಗಿದೆ. ಈ ಕಾಯ್ದೆ ಕೊಟ್ಟಿರುವ ಅಧಿಕಾರದ ಅಡಿಯಲ್ಲಿ ಆಯೋಗವು ನಿಸ್ಪಕ್ಷಪಾತ ಮತ್ತು ಮುಕ್ತವಾಗಿ ಕಾರ್ಯನಿರ್ವಹಿಸಿದರೆ ಸಾಕು, ಇಡೀ ವ್ಯವಸ್ಥೆಯೇ ಸರಿ ಹೋಗುತ್ತದೆ.

[೨]

ವಿದ್ಯುತ್ ಉತ್ಪಾದನೆ-ವಿತರಣೆಸಂಪಾದಿಸಿ

 • 6-11-2016
ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಮೂಲ ಲಭ್ಯ ವಿದ್ಯುತ್ ಹಂಚಿಕೆ
*ರಾಜ್ಯ :11,556 ಮೆ.ವ್ಯಾ.ಗಳು
 • ಕೇಂದ್ರದಿಂದ : 2,286
 • ಖಾಸಗಿಯಿಂದ : 1,200
 • ಓಟ್ಟು : 15,052
 • ಜಲ ವಿದ್ಯುತ್ :3773 ಮೆಗಾ ವ್ಯಾಟ್
 • ಉಷ್ಣ ವಿದ್ಯುತ್ ಸ್ಥಾವರ : 6,089
 • ಮರುಬಳಕೆ ಇಂದನ ಮೂಲ: 5,190
 • 1.ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ : 18 %
 • 2.ಗುಲ್ಬರ್ಗ ವಿ.ಸರಬರಾಜು ಕಂ. : 15 %
 • 3.ಮಂಗಳೂರು ವಿ. ಸರಬರಾಜು ಕಂ.: 8 %
 • 4.ಹುಬ್ಬಳ್ಳಿ ವಿ. ಸ.ಕಂ. : 8 %
 • 5.ಬೆಂಗಳೂರು ವಿ.ಸ. ಕಂ. :51 %

ವಾರ್ಷಿಕ ವಿದ್ಯುತ್ ಬಳಕೆಸಂಪಾದಿಸಿ

 • ಬೆಸ್ಕಾಂ :2408.2 ಕೋಟಿ ಯೂನಿಟ್‍ಗಳು
 • ಹೆಸ್ಕಾಂ :921.7 ಕೋಟಿ ಯೂನಿಟ್‍ಗಳು
 • ಜೆಸ್ಕಾಂ :597.7 ಕೋಟಿ ಯೂನಿಟ್‍ಗಳು
 • ಸೆಸ್ಕ‍್ :511.2 ಕೋಟಿ ಯೂನಿಟ್‍ಗಳು
 • ಮೆಸ್ಕಾಂ :403.8 ಕೋಟಿ ಯೂನಿಟ್‍ಗಳು
 • ಒಟ್ಟು 4837.6 ಕೋಟಿ ಯೂನಿಟ್‍ಗಳು
 • +ಇತರೆ -

ಸೋರಿಕೆಸಂಪಾದಿಸಿ

 • ಸಾಗಣೆ ಮತ್ತು ವಿತರಣೆಯಲ್ಲಿನ ವಿದ್ಯುತ್ ಸೋರಿಕೆ ಪ್ರಮಾಣ ಶೇಕಡಾವಾರು:
2010 2011 2012 2013 2014
ಬೆಸ್ಕಾಂ 15.09 14.48 14.46 13.82 13.89
ಮೆಸ್ಕಾಂ 12.64 13.07 12.09 11.88 11.93
ಸೆಸ್ಕ‍್ 16.42 13.07 12.09 11.88 11.93
ಹೆಸ್ಕಾಂ 20.86 19.85 19.99 19.96 18.05
ಜೆಸ್ಕಾಂ 25.53 22.06 21.71 19.09 17.77
ಸೋರಿಕೆ ಶೇಕಡಾವಾರು 21.26 19.96 19.61 18.92

ಬಜೆಟ್ನಲ್ಲಿ ಇಂಧನ ಇಲಾಖೆಗೆ ಹಂಚಿದ ಹಣಸಂಪಾದಿಸಿ

 • ಆಧಾರ : ಕರ್ನಾಟಕವಿದ್ಯುತ್ ನಿಯಂತ್ರಣ ಆಯೋಗದ 16ನೇ ವಾರ್ಷಿಕ ವರದಿ ( 2014-15)(ಪ್ರಜಾವಾಣಿ 6-11-2016)
2011-12 2012-13 2013-14 2014-15 2015-16
8532 ಕೋಟಿ ರೂ. 10,289 ಕೋಟಿ ರೂ. 10,312 ಕೋಟಿ ರೂ. 11683 ಕೋಟಿ ರೂ. 12878 ಕೋಟಿ ರೂ.

[೩]

ಕಲ್ಲಿದ್ದಲು ಅಭಾವಸಂಪಾದಿಸಿ

 • 9 Dec, 2016
 • ಶಕ್ತಿನಗರ (ರಾಯಚೂರು ಜಿಲ್ಲೆ)ಯಲ್ಲಿರುವ ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ) ಗಣಿ ಕಂಪೆನಿಗಳಿಗೆ ಪಾವತಿಸಬೇಕಾದ ಹಣ ಬಾಕಿ ಉಳಿಸಿಕೊಂಡಿರುವುದರಿಂದ ಗಣಿಗಳಿಂದ ಸರ್ಮಪಕವಾಗಿ ಕಲ್ಲಿದ್ದಲು ಪೂರೈಕೆ ಆಗುತ್ತಿಲ್ಲ. ಇದರಿಂದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ (ಆರ್‌ಟಿಪಿಎಸ್) ಕಲ್ಲಿದ್ದಲಿನ ಸಂಗ್ರಹ ಕುಸಿತವಾಗಿದೆ.(Raichur Thermal Power Station)
 • ಸದ್ಯ 60 ಸಾವಿರ ಟನ್ ನಷ್ಟು ಕಲ್ಲಿದ್ದಲು ಸಂಗ್ರಹ ಇದ್ದು, ಆರ್‌ಟಿಪಿಎಸ್ ಎಂಟು ಘಟಕಗಳಲ್ಲಿ ಉತ್ಪಾದನೆಗೆ ದಿನನಿತ್ಯ 30 ಸಾವಿರ ಟನ್ ಕಲ್ಲಿದ್ದಲು ಅಗತ್ಯವಿದೆ. ‘ಸಿಂಗರೇಣಿ, ಮಹಾನದಿ ಕೋಲ್‌ಫೀಲ್ಡ್, ವೆಸ್ಟರ್ನ್‌ಕೋಲ್‌ಫೀಲ್ಡ್ ಕಂಪೆನಿಗಳ ಕಲ್ಲಿದ್ದಲು ಗಣಿಗಳಿಂದ ಆರ್‌ಟಿಪಿಎಸ್‌ಗೆ ದಿನನಿತ್ಯ ಕನಿಷ್ಠ 8 ರೇಕ್‌ಗಳು (ಒಂದು ರೇಕು– 59 ಬೋಗಿಗಳಿರುವ ಸರಕು ಸಾಗಣೆ ರೈಲು) ಬರಬೇಕು. ಆದರೆ ಹಣ ಪಾವತಿಯಾಗದ ಕಾರಣ ವಿವಿಧ ಗಣಿಗಳಿಂದ ಕಡಿಮೆ ರೇಕ್‌ಗಳು ಬರುತ್ತಿವೆ’ ಎಂದು ಆರ್‌ಟಿಪಿಎಸ್ ಅಧಿಕಾರಿಗಳು ಹೇಳುತ್ತಾರೆ.
 • ‘ಕಲ್ಲಿದ್ದಲು ಸಂಗ್ರಹ ಕಡಿಮೆ ಇರುವ ಕಾರಣ ವಿವಿಧ ಗಣಿಗಳಿಂದ ಬರುವ ಕಲ್ಲಿದ್ದಲನ್ನು ಸಂಗ್ರಹಾಗಾರಕ್ಕೆ ಸುರಿಯುವ ಬದಲಾಗಿ ನೇರವಾಗಿ ವಿದ್ಯುತ್ ಘಟಕಗಳಿಗೆ ಪೂರೈಕೆ ಮಾಡುವ ಬಂಕ್‌ಗಳಿಗೆ ಸುರಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಕಲ್ಲಿದ್ದಲಿನ ಕೊರತೆಯ ಮಧ್ಯೆಯೂ ವಿದ್ಯುತ್ ಉತ್ಪಾದನೆಗೆ ತೊಂದರೆ ಆಗದಂತೆ ಶೇ 96 ರಷ್ಟು ಪ್ಲಾಂಟ್ ಲೋಡ್ ಫ್ಯಾಕ್ಟರ್ (ಪಿಎಲ್‌ಎಫ್) ಕಾಯ್ದುಕೊಳ್ಳಲಾಗಿದೆ’ ಎಂದು ಆರ್‌ಟಿಪಿಎಸ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ವೇಣುಗೋಪಾಲ ತಿಳಿಸಿದ್ದಾರೆ.[ [೪]

ವಿದ್ಯುತ್ ಕೊರತೆಸಂಪಾದಿಸಿ

 • 18 Dec, 2016
 • ರಾಜ್ಯದ ಒಟ್ಟಾರೆ ವಿದ್ಯುತ್‌ ಬೇಡಿಕೆ 7,193 ಮೆಗಾವಾಟ್‌ ಇದೆ. ಶಾಖೋತ್ಪನ್ನ, ಪವನ, ಜಲ ವಿದ್ಯುತ್, ನವೀಕೃತ ಇಂಧನ ಸೇರಿ ವಿವಿಧ ಮೂಲಗಳಿಂದ 4,136 ಮೆ.ವಾ ಮಾತ್ರ ಉತ್ಪಾದನೆ ಆಗುತ್ತಿದೆ. ಕೇಂದ್ರ ಸರ್ಕಾರದಿಂದ ಸರಾಸರಿ 2,200 ಮೆ.ವಾ. ಪೂರೈಕೆ ಆಗುತ್ತಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿ 700ರಿಂದ 800 ಮೆ.ವಾ. ವ್ಯತ್ಯಾಸ ಇದೆ.

ಕಲ್ಲಿದ್ದಲು, ನೀರು ಕೊರತೆಸಂಪಾದಿಸಿ

 • ಕಲ್ಲಿದ್ದಲು ಕೊರತೆಯಿಂದ ಯರಮರಸ್‌ ಶಾಖೋ ತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್‌) ಇದುವರೆಗೆ ಕಾರ್ಯಾರಂಭವನ್ನೇ ಮಾಡಿಲ್ಲ. ಮತ್ತೊಂದೆಡೆ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ (ಬಿಟಿಪಿಎಸ್) ನೀರಿನ ಕೊರತೆ ಇರುವುದರಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ ಮುಂದಿನ ಬೇಸಿಗೆ ಮತ್ತಷ್ಟು ಭೀಕರ ಆಗುವ ಸಾಧ್ಯತೆಯಿದೆ.
 • 1,600 ಮೆ.ವಾ. ಸಾಮರ್ಥ್ಯದ ವೈಟಿಪಿಎಸ್‌ಗೆ ಕಲ್ಲಿದ್ದಲು ಹಂಚಿಕೆ ಆಗಿದ್ದರೂ ಪೂರೈಕೆ ಆಗುತ್ತಿಲ್ಲ. ಸದ್ಯ ರಾಯಚೂರು ಶಾಖೋತ್ಪನ್ನ ವಿದ್ಯುತ್‌ ಕೇಂದ್ರದಿಂದಲೇ ಅಲ್ಪ ಪ್ರಮಾಣದಲ್ಲಿ ಪೂರೈಸಲಾಗುತ್ತಿದೆ. ಆದರೆ, ಅದರಿಂದ ವಿದ್ಯುತ್ ಉತ್ಪಾದಿಸಲು ಸಾಧ್ಯವಾಗುತ್ತಿಲ್ಲ. ತುಂಗ ಭದ್ರಾ ನದಿಯಲ್ಲಿ ನೀರು ಬತ್ತಿರುವುದ ರಿಂದ ಬಿಟಿಪಿಎಸ್‌ಗೆ ಅಗತ್ಯದಷ್ಟು ನೀರು ಸಿಗುತ್ತಿಲ್ಲ. ಹೀಗಾಗಿ 1,700 ಮೆ.ವಾ. ಸಾಮರ್ಥ್ಯ ಇದ್ದರೂ ಸಹ 802 ಮೆ.ವಾ. ಮಾತ್ರ ಉತ್ಪಾದನೆ ಆಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.[೫]

ಬೇಡಿಕೆ ಮತ್ತು ಪೂರೈಕೆಸಂಪಾದಿಸಿ

ಎಸ್ಕಾಂ ಬೇಡಿಕೆ ಪೂರೈಕೆ
ಬೆಸ್ಕಾಂ 3477 3346
ಮೆಸ್ಕಾಂ 588 617
ಚೆಸ್ಕಾಂ 800 706
ಜೆಸ್ಕಾಂ 968 781
ಹೆಸ್ಕಾಂ 1555 1172

[೫]

ನೋಡಿಸಂಪಾದಿಸಿ

ಆಧಾರಸಂಪಾದಿಸಿ

 1. http://kptcl.com
 2. http://bescom.org/about-us-2
 3. w:Karnataka Power Transmission Corporation
 4. ಪ್ರಜಾವಾಣಿ - ೧೪-೧೨-೨೦೧೪2014--
 5. ಆರ್‌ಟಿಪಿಎಸ್:ಕಲ್ಲಿದ್ದಲು ಸಂಗ್ರಹ ಕುಸಿತ;ಉಮಾಪತಿ ಬಿ. ರಾಮೋಜಿ;9 Dec, 2016

ಉಲ್ಲೇಖಸಂಪಾದಿಸಿ

 1. ನಿತ್ಯ 1,400 ಮೆಗಾವಾಟ್‌ ವಿದ್ಯುತ್‌ ಕೊರತೆಪ್ರಜಾವಾಣಿ ವಾರ್ತೆ:Sat,07/02/2015
 2. ಇಂಧನ ಕ್ಷೇತ್ರಕ್ಕೆ ‘ಶಕ್ತಿ’ ತುಂಬಲು ಬೇಕಿದೆ ನೀಲ ನಕ್ಷೆ;ಎಂ.ಜಿ.ಪ್ರಭಾಕರ;6 Nov, 2016;(ಲೇಖಕರು: ಕೆಇಆರ್‌ಸಿ ಸಲಹಾ ಸಮಿತಿಯ ಸದಸ್ಯ)
 3. ಆಧಾರ : ಕರ್ನಾಟಕವಿದ್ಯುತ್ ನಿಯಂತ್ರಣ ಆಯೋಗದ 16ನೇ ವಾರ್ಷಿಕ ವರದಿ ( 2014-15)(ಪ್ರಜಾವಾಣಿ 6-11-2016)
 4. ಆರ್‌ಟಿಪಿಎಸ್:ಕಲ್ಲಿದ್ದಲು ಸಂಗ್ರಹ ಕುಸಿತ
 5. ಲೋಡ್‌ ಶೆಡ್ಡಿಂಗ್!;18 Dec, 2016