ಲಖೀಮ್‍ಪುರ್ ಖೇರೀ ಉತ್ತರ ಪ್ರದೇಶದ ಲಖನೌ ವಿಭಾಗದ ಒಂದು ಜಿಲ್ಲೆ; ಲಖೀಮ್‍ಪುರ್ ಇದರ ರಾಜಧಾನಿ.[] ಖೇರೀ ಲಖೀಮ್‍ಪುರ್‌ನಿಂದ ೨ ಕಿ.ಮಿ. ದೂರದಲ್ಲಿರುವ ಒಂದು ಪಟ್ಟಣ.[][] ಉ.ಅ. 270 41`- 280 42` ಮತ್ತು ಪೂ.ರೇ. 800 42`- 800 2` ಮಧ್ಯದಲ್ಲಿದೆ.

ಲಖೀಮ್‍ಪುರ್ ಖೇರೀ ಜಿಲ್ಲೆ
ಉತ್ತರ ಪ್ರದೇಶದ ಜಿಲ್ಲೆ
ದೂಧ್ವಾ ರಾಷ್ಟ್ರೀಯ ಉದ್ಯಾನದ ಜವುಗು ಪ್ರದೇಶಗಳು
ದೂಧ್ವಾ ರಾಷ್ಟ್ರೀಯ ಉದ್ಯಾನದ ಜವುಗು ಪ್ರದೇಶಗಳು
ಉತ್ತರ ಪ್ರದೇಶದಲ್ಲಿ ಲಖೀಮ್‍ಪುರ್ ಖೇರೀ ಜಿಲ್ಲೆಯ ನೆಲೆ
ಉತ್ತರ ಪ್ರದೇಶದಲ್ಲಿ ಲಖೀಮ್‍ಪುರ್ ಖೇರೀ ಜಿಲ್ಲೆಯ ನೆಲೆ
Coordinates (Lakhimpur, Uttar Pradesh): 27°36′N 80°20′E / 27.6°N 80.34°E / 27.6; 80.34 - 28°36′N 81°18′E / 28.6°N 81.30°E / 28.6; 81.30
ದೇಶಭಾರತ
ರಾಜ್ಯಉತ್ತರ ಪ್ರದೇಶ
ವಿಭಾಗಲಖ್ನೋ
ಪ್ರಧಾನ ಕಾರ್ಯಸ್ಥಳಲಖೀಮ್‍ಪುರ್
Government
 • ಲೋಕಸಭಾ ಕ್ಷೇತ್ರಗಳುಖೇರೀ, ಧೌರಾಹ್ರಾ
Area
 • ಉತ್ತರ ಪ್ರದೇಶದ ಜಿಲ್ಲೆ೭,೬೮೦ km (೨,೯೭೦ sq mi)
Population
 (2011)
 • ಉತ್ತರ ಪ್ರದೇಶದ ಜಿಲ್ಲೆ೪೦,೨೧,೨೪೩
 • Density೫೨೦/km (೧,೪೦೦/sq mi)
 • Urban
೪,೬೧,೦೩೫
ಜನಸಂಖ್ಯಾ ಅಂಕಿಅಂಶಗಳು
 • ಸಾಕ್ಷರತೆ60.10 % (2011 ರ ಜನಗಣತಿಯಲ್ಲಿ)
 • Sex ratio894
Time zoneUTC+05:30 (IST)
Websitehttp://kheri.nic.in

ಭೌಗೋಳಿಕ ವಿವರಗಳು

ಬದಲಾಯಿಸಿ

ಜಿಲ್ಲೆಯ ವಿಸ್ತೀರ್ಣ 2,972 ಚ.ಮೈ. ಭಾರತ-ನೇಪಾಳ ಗಡಿಗೆ ಹೊಂದಿಕೊಂಡಂತೆ ಇದೆ. ಇದರ ಉತ್ತರದ ಗಡಿಯಲ್ಲಿ ಹರಿಯುವ ನದಿ ಮೋಹನ್. ಈ ನದಿ ವಾಯವ್ಯ ದಿಕ್ಕಿನಿಂದ ಹರಿದು ಬರುವ ಹಲವಾರು ನದಿಗಳಿಂದ ಕತ್ತರಿಸಲ್ಪಟ್ಟ ಅನೇಕ ಎತ್ತರದ ಪ್ರಸ್ಥಭೂಮಿಗಳಿಂದ ಕೂಡಿದೆ. ಉಲ್ ನದಿ ಜಿಲ್ಲೆಯ ಮಧ್ಯಭಾಗದಲ್ಲಿ ಹರಿಯುತ್ತದೆ. ಇಲ್ಲಿ ಅನೇಕ ದೊಡ್ಡ ಸರೋವರಗಳುಂಟು. ಕೆಲವು ಸರೋವರಗಳು ಉತ್ತರದ ಪ್ರಾಚೀನ ನದಿಗಳಿಂದ ಸಂಭವಿಸಿದಂಥವು. ನದಿ, ಹಳ್ಳಗಳು ಮಳೆಗಾಲದಲ್ಲಿ ಮೇರೆ ಮೀರಿ ಹರಿಯುತ್ತವೆ. ಘಾಘ್ರಾ ಮತ್ತು ಚೌಕ ನದಿಗಳು ತಮ್ಮ ಪಾತ್ರಗಳನ್ನು ಆಗಾಗ್ಗೆ ಬದಲಾಯಿಸುತ್ತಿರುತ್ತವೆ. ಈ ಕಾರಣದಿಂದಾಗಿ ಇಲ್ಲಿ ರಸ್ತೆಗಳ ನಿರ್ಮಾಣ ತುಂಬ ಕಷ್ಟ. ಪೂರ್ವದ ಎಲ್ಲೆಯಲ್ಲಿ ದಟ್ಟವಾದ ಕಾಡುಗಳುಂಟು. ಅಲ್ಲಿ ಸಾಲವೃಕ್ಷಗಳು ಸಾಮಾನ್ಯ. ಪೂರ್ವದ ಎಲ್ಲೆಯ ಕಡೆಗೆ ಸಸ್ಯಗಳು ಹೆಚ್ಚು ಒತ್ತಾಗಿವೆ. ಅಲ್ಲಿ ನಿಂತ ನೀರಿನಿಂದಾಗಿ ವಾಯುಗುಣ ಅನಾರೋಗ್ಯಕರ. ಉತ್ತರದ ಕಾಡಿನ ಬಹುಭಾಗ ಸರ್ಕಾರಕ್ಕೆ ಸೇರಿದ್ದು.

ಆರ್ಥಿಕತೆ

ಬದಲಾಯಿಸಿ

ನದಿಗಳು ಮೆಕ್ಕಲುಮಣ್ಣನ್ನು ತಂದು ಬಿಡುವುದರಿಂದ ನದೀ ದಂಡೆಗಳು ತುಂಬ ಫಲವತ್ತಾಗಿವೆ. ಬತ್ತ ಇಲ್ಲಿಯ ಮುಖ್ಯ ಬೆಳೆ. ಲಕ್ಷ್ಮೀಪೂರ, ಮಹಮದೀ ಮತ್ತು ಗೋಳಾ ದೊಡ್ಡ ವ್ಯಾಪಾರಸ್ಥಳಗಳು. ಗೋಳಾದಲ್ಲಿ ಒಂದು ಪ್ರಾಚೀನ ದೇವಾಲಯವುಂಟು. ಸಕ್ಕರೆ ಈ ಜಿಲ್ಲೆಯ ಮುಖ್ಯ ಕೈಗಾರಿಕೆ.[] ವ್ಯವಸಾಯ ಮತ್ತು ಪಶು ಪೋಷಣೆ ಇಲ್ಲಿಯ ಮುಖ್ಯ ಕಸುಬು. ಇತ್ತೀಚೆಗೆ ಕಾಡನ್ನು ಕಡಿದು ವ್ಯವಸಾಯ ಕ್ಷೇತ್ರಗಳು ಹೆಚ್ಚಿಸಿಕೊಂಡಿದ್ದಾರೆ. ನೇಪಾಳದೊಂದಿಗೆ ಈ ಜಿಲ್ಲೆ ವ್ಯಾಪಾರಸಂಪರ್ಕ ಹೊಂದಿದೆ.

ಇತಿಹಾಸ

ಬದಲಾಯಿಸಿ

ಹಿಂದಿನ ಕಾಲದಲ್ಲಿ ಹಸ್ತಿನಾಪುರ ರಾಜರ ವಶದಲ್ಲಿ ಈ ಪ್ರದೇಶವಿತ್ತೆಂದು ಹೇಳಲಾಗಿದೆ.[] 10ನೆಯ ಶತಮಾನದ ಅನಂತರ ಇದು ರಜಪೂತರ ಆಡಳಿತಕ್ಕೆ ಒಳಪಟ್ಟಿತು. ಅಕ್ಬರನ ಕಾಲದಲ್ಲಿ ಇದನ್ನು ಖೈರಾಬಾದ್ ಪರಗಣದಲ್ಲಿ ವಿಲೀನಗೊಳಿಸಲಾಯಿತು. 1801ರಲ್ಲಿ ಇದು ರೋಹಿಲಖಂಡದೊಂದಿಗೆ ಬ್ರಿಟಿಷರ ಅಧೀನಕ್ಕೆ ಬಂತು. ಮುಂದೆ ಅವಧ್‍ನ ನವಾಬರ ಆಳ್ವಿಕೆಗೆ ಒಳಪಟ್ಟಿದ್ದು ಕೊನೆಗೆ ಅದರೊಂದಿಗೆ ಬ್ರಿಟಿಷರ ನೇರ ಆಡಳಿತಕ್ಕೆ ಸೇರಿತು. ಪ್ರಾಚೀನ ಕಾಲದ ಅನೇಕ ಅವಶೇಷಗಳೂ ಶಾಸನಗಳೂ ಇಲ್ಲಿವೆ. ನೇಪಾಳದ ಕಡೆಯ ದಾಳಿಗಳನ್ನು ತಡೆಯುವ ಉದ್ದೇಶದಿಂದ ಕಟ್ಟಲಾದ ಕೋಟೆಗಳ ಸಾಲೇ ಇದೆ.

ಜನಸಂಖ್ಯಾ ಅಂಕಿಅಂಶಗಳು

ಬದಲಾಯಿಸಿ

ಲಖೀಮ್‍ಪುರ್ ಖೇರೀ ಜಿಲ್ಲೆಯ ಜನಸಂಖ್ಯೆ 4,021,243 (2011). ಜಿಲ್ಲೆಯ ಜನರ ಪ್ರಮುಖ ಭಾಷೆ ಹಿಂದಿ. ಲಖಿಂಪುರ ಇದರ ಆಡಳಿತ ಕೇಂದ್ರ. ಜನಸಂಖ್ಯೆ 151,993 (2011).[]

ಖೇರೀ ಪಟ್ಟಣ ಲಖನೌ ನಗರದ ಉತ್ತರಕ್ಕೆ 73 ಮೈ. ದೂರದಲ್ಲಿ ಈಶಾನ್ಯ ರೈಲ್ವೆ ಮಾರ್ಗದಲ್ಲಿದೆ. ಸಕ್ಕರೆ ಕೈಗಾರಿಕೆಯ ಕೇಂದ್ರ. ಜನಸಂಖ್ಯೆ 33,355 (2011).[]

ಉಲ್ಲೇಖಗಳು

ಬದಲಾಯಿಸಿ
  1. "About Lakhimpur-Kheri". Official website Lakhimpur-Kheri. National Informatics Centre. Retrieved 8 May 2013.
  2. Henry Frowde. The Imperial Gazetteer of India, Vol. XII. Published under the authority of the Secretary of State for India in Council. Oxford, Clarendon Press, 1908.
  3. The Imperial Gazetteer of India, Vol. XII, text version
  4. "Uttar Pradesh Sugar Industry". Business.mapsofindia.com. Retrieved 2016-05-13.
  5. Nevill, H.R. (1905). Kheri: A Gazetteer, Being Volume XIII Of The District Gazetteers Of The United Provinces Of Agra And Oudh. Allahabad: Government Press. pp. 135–155. Retrieved 7 April 2021.
  6. "Census of India: Lakhimpur". www.censusindia.gov.in. Retrieved 13 January 2020.
  7. "Census of India Website : Office of the Registrar General & Census Commissioner, India". Archived from the original on 30 November 2021. Retrieved 30 November 2021.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: