ಲಕ್ಷ್ಮೀತರು
Simarouba glauca | |
---|---|
Scientific classification | |
Unrecognized taxon (fix): | Simarouba |
ಪ್ರಜಾತಿ: | S. glauca
|
Binomial name | |
Simarouba glauca |
ಲಕ್ಷ್ಮೀತರು ಅಥವಾ ಸಿಮರೂಬಾ, ಇದರ ಸಸ್ಯನಾಮ ಸಿಮರೂಬ ಗ್ಲಾಕಾ (Simarouba glauca). ಸಾಮಾನ್ಯವಾಗಿ ಭೇದಿ-ತೊಗಟೆ, ಕಹಿಮರ ಮತ್ತು ಅಸಿಟುನೋ ಎಂದು ಕರೆಯುವರು. ಇದು ಒಂದು ಹೂ ಬಿಡುವ ಬಹು ಉಪಯೋಗಿ ಮರವಾಗಿದೆ. ಇದರ ಮೂಲ ಸ್ಥಾನ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಫ್ಲೋರಿಡಾ, ದಕ್ಷಿಣ ಅಮೆರಿಕಾ, ಬಹಾಮಾಸ್, ಕೋಸ್ಟ ರಿಕಾ, ಕ್ಯೂಬಾ, ಮೆಕ್ಸಿಕೊ, ಪ್ಯುರೆಟೋರಿಕೊ ಮತ್ತು ಜಮೈಕಾ [೨] [೩]. ಮಹಾರಾಷ್ಟ್ರದ ಅಮರಾವತಿಯಲ್ಲಿ ಇರುವ ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ಸ್ ಜೆನೆಟಿಕ್ ರಿಸೋರ್ಸಸ್ ಇದನ್ನು 1960 ರ ದಶಕದಲ್ಲಿ ಭಾರತಕ್ಕೆ ಪರಿಚಯಿಸಿತು. 1986 ರಲ್ಲಿ ಇದನ್ನು ಬೆಂಗಳೂರುನಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯಕ್ಕೆ ತರಲಾಯಿತು. 1992 ರಿಂದ ಭಾರತದಲ್ಲಿ ಈ ಸಸ್ಯದ ಮೆಲೆ ವ್ಯವಸ್ಥಿತ ಸಂಶೋಧನೆ ಮತ್ತು ಅಭಿವೃದ್ಧಿಯ ಚಟುವಟಿಕೆಗಳು ಪ್ರಾರಂಭವಾದವು [೪]. ಈಗ ಗುಜರಾತ್, ತಮಿಳುನಾಡು, ಮಹಾರಾಷ್ಟ್ರ,ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳಲ್ಲಿ ಬೆಳೆಯಲಾಗುತ್ತಿದೆ [೫]
ಸಸ್ಯವರ್ಣನೆ
ಬದಲಾಯಿಸಿಲಕ್ಶ್ಮೀತರು ಮಧ್ಯಮ ಗಾತ್ರದ ನಿತ್ಯಹರಿದ್ವರ್ಣ ಮರವಾಗಿದೆ (ಎತ್ತರ ೭-೧೫ ಮೀಟರ್) ಟ್ಯಾಪ್ ರೂಟ್ ಸಿಸ್ಟಮ್ ಮತ್ತು ಸಿಲಿಂಡರಾಕಾರದ ಕಾಂಡವನ್ನು ಹೊಂದಿದೆ. ಮರಗಳು ೪-೬ ವರ್ಷವಾಗಿದ್ದಾಗ ಹೂಬಿಡಲು ಪ್ರಾರಂಭಿಸುತ್ತವೆ. ಹೂಬಿಡುವಿಕೆಯು ವಾರ್ಷಿಕವಾಗಿದ್ದು, ಡಿಸೆಂಬರ್ನಲ್ಲಿ ಆರಂಭವಾಗಿ ಫೆಬ್ರವರಿವರೆಗೆ ಮುಂದುವರಿಯುತ್ತದೆ. ಶೇ ೪೦-೫೦ ಗಂಡು, ಹೆಣ್ಣು ಹೂವುಗಳನ್ನು ಮತ್ತು ಕೆಲವೊಂದು ಉಭಯಲಿಂಗಿ ಹೂವುಗಳನ್ನು ಬಿಡುತ್ತದೆ. ಕಾಯಿಗಳು ಹಸಿರು ಬಣ್ಣದಿಂದ ಹಳದಿಯಾಗಿ ನಂತರ ಕಪ್ಪು ಕೆನ್ನೇರಳೆ ಬಣ್ಣದ ಹಣ್ಣಾಗಿ ಏಪ್ರಿಲ್ / ಮೇ ಹೊತ್ತಿಗೆ ಕೊಯ್ಲಿಗೆ ಸಿದ್ಧವಗುತ್ತವೆ[೬]. ಇದರ ಹಣ್ಣುಗಳು ಆಲಿವ್ ಹಣ್ಣುನ್ನು ಹೋಲುತ್ತದೆ, ಆದ್ದರಿಂದ ಸ್ಥಳೀಯರು ಇದನ್ನು 'ಅಸಿಟುನೊ' ಅಂತ ಕರೆಯುತ್ತಾರೆ. ಚೆನ್ನಾಗಿ ಬೆಳೆದ ಮರಯೊಂದು ೧೫ ರಿಂದ ೩೦ ಕೆಜಿ ಹಣ್ಣುನ್ನು ಬಿಡುತ್ತದೆ, ಇದರಿಂದ ೨.೫ ಕೆಜಿ ಎಣ್ಣೆಯನ್ನು ತೆಗೆಯಬಹುದು.
ಬೇಸಾಯ ಕ್ರಮಗಳು
ಬದಲಾಯಿಸಿಮಣ್ಣು ಮತ್ತು ಹವಾಗುಣ
ಬದಲಾಯಿಸಿಈ ಮರದ ಬೇಸಾಯಕ್ಕೆ ಬೆಚ್ಚಗಿನ, ಆರ್ದ್ರ, ಉಷ್ಣವಲಯದ ಪ್ರದೇಶವು ಸೂಕ್ತವಾಗಿರುತ್ತದೆ. ಇದರ ಕೃಷಿ, ಮಳೆಯ ವಿತರಣೆ, ಮಣ್ಣಿನ ನೀರಿನ ಹಿಡುವಳಿ ಸಾಮರ್ಥ್ಯ ಮತ್ತು ಮಣ್ಣಿನ ತೇವಾಂಶವನ್ನು ಅವಲಂಬಿಸಿರುತ್ತದೆ. ಇದಕ್ಕೆ 10 ರಿಂದ 40 ° C ತಾಪಮಾನವು ಸೂಕ್ತವಾಗಿರುತ್ತದೆ. ಸಮುದ್ರ ಮಟ್ಟದಿಂದ 1,000 m (3,300 ಅಡಿ) ಎತ್ತರದವರೆಗು ಬೆಳೆಯಬಹುದು [೭].
ಸಸ್ಯಾಭಿವೃದ್ಧಿ
ಬದಲಾಯಿಸಿಬೀಜಗಳಿಂದ, ಕಸಿ ಮತ್ತು ಅಂಗಾಂಶ ಕೃಷಿ ತಂತ್ರಜ್ಞಾನದಿಂದ ಇದು ಬೆಳೆಯಬಹುದು. ಏಪ್ರಿಲ್ / ಮೇ ತಿಂಗಳಲ್ಲಿ ಹಣ್ಣುಗಳು ಪಕ್ವವಾದಾಗ ಸಂಗ್ರಹಿಸಿ, ಸುಮಾರು ಒಂದು ವಾರದವರೆಗೆ ಸೂರ್ಯನ ಬಿಸಿಲಿನಲ್ಲಿ ಒಣಗಿದ ನಂತರ ಹಣ್ಣುಗಳ ಸಿಪ್ಪೆಯನ್ನು ಬೇರ್ಪಡಿಸಲಾಗುತ್ತದೆ ಮತ್ತು ಬೀಜಗಳನ್ನು ಪ್ಲ್ಯಾಸ್ಟಿಕ್ ಚೀಲಗಳಲ್ಲಿ ಬಿತ್ತಿ ಸಸಿಗಳನ್ನು ಬೆಳೆಯಲಾಗುತ್ತದೆ. 2 ರಿಂದ 3 ತಿಂಗಳ ವಯಸ್ಸಿನ ಸಸಿಗಳನ್ನು ತೋಟಕ್ಕೆ ಸ್ಥಳಾಂತರಿಸಬಹುದು [೮].
ಲಕ್ಷ್ಮೀತರುವಿನಲ್ಲಿರುವ ಮುಖ್ಯ ರಾಸಾಯನಿಕಗಳು
ಬದಲಾಯಿಸಿಇದರಲ್ಲಿ ಕ್ವಜೀನ್ಯೋಡ್ಸ್ ಎಂಬ ರಾಸಯನಿಕಗಳಿವೆ, ಇವು ಟ್ರೈ-ಟರ್ಪಿನ್ಯೋಡ್ಸ್ ಗುಂಪಿಗೆ ಸೇರಿವೆ ಹಾಗೂ ಅನೇಕ ಔಷಧಿಯ ಗುಣ್ಣಗಳನ್ನು ಹೋಂದಿದ ರಾಸಯನಿಕಗಳಾಗಿವೆ.
ಉಪಯೋಗಗಳು
ಬದಲಾಯಿಸಿವಾಣಿಜ್ಯ ಉಪಯೋಗಗಳು
ಬದಲಾಯಿಸಿಲಕ್ಶ್ಮೀತರು ಬೀಜಗಳಿಂದ ಸಂಸ್ಕರಿಸಿದ ತೈಲವನ್ನು ಅಡುಗೆಗೆ, ಜೈವಿಕ ಡೀಸೆಲ್ ಆಗಿ, ಸಾಬೂನುಗಳು, ಮಾರ್ಜಕಗಳು, ಲೂಬ್ರಿಕಂಟ್‌ಗಳು, ವಾರ್ನಿಷ್‌ಗಳು, ಸೌಂದರ್ಯವರ್ಧಕಗಳು, ಔಷಧೀಯ ತಯಾರಿಕೆ ಇತ್ಯಾದಿಗಳಲ್ಲಿ ಬಳಸುತ್ತಾರೆ. ಹಣ್ಣಿನ ತಿರುಳು ಸುಮಾರು 11% ಸಕ್ಕರೆಯ ಅಂಶವನ್ನು ಹೊಂದಿದು, ಇದನ್ನು ಪಾನೀಯ ಮತ್ತು ಜ್ಯಾಮ್ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಇದರ ಕಾಂಡವನ್ನು ಕೀಟಗಳು ತಿನ್ನುವುದಿಲ್ಲ, ಆದರಿಂದ ಕಾಂಡವನ್ನು ಪೀಠೋಪಕರಣ, ಆಟಿಕೆಗಳು, ಪ್ಯಾಕಿಂಗ್ ವಸ್ತುಗಳ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ. ಮರದ ತಿರುಳನ್ನು ಕಾಗದ ಉದ್ಯಮದಲ್ಲಿ ಬಳಸಲಾಗುತ್ತದೆ[೯].
ಔಷಧೀಯ ಉಪಯೋಗಗಳು
ಬದಲಾಯಿಸಿಈ ಮರವು ಔಷಧೀಯ ಬಳಕೆಯ ದೀರ್ಘ ಇತಿಹಾಸವನ್ನು ಹೊಂದಿದೆ. ಎಲೆಗಳು ಮತ್ತು ತೊಗಟೆಯನ್ನು ಉಷ್ಣವಲಯದಲ್ಲಿ, ವಿಶೇಷವಾಗಿ ಮಲೇರಿಯಾ, ಜ್ವರ ಮತ್ತು ಭೇದಿ ಚಿಕಿತ್ಸೆಯಲ್ಲಿ ಹಾಗೂ ರಕ್ತಸ್ರಾವವನ್ನು ನಿಲ್ಲಿಸಲು ಉಪಯೊಗಿಸುತ್ತಾರೆ. ಎಲೆ, ಹಣ್ಣಿನ ತಿರುಳು ಮತ್ತು ಬೀಜಗಳನ್ನು ಅಮೈಬಿಯಸಿಸ್, ನೋವು ನಿವಾರಕ, ಆಂಟಿಹೆಲ್ಮಿಂಟಿಕ್, ಜೀವಿವಿರೋಧಿ, ಪ್ರತಿಜನಕ [೧೦], ಆಂಟಿಲೆಕೆಮಿಕ್, ಆಂಟಿಮಾಲೆರಿಯಲ್, ಆಂಟಿಟ್ಯುಮರಸ್ [೧೧], ಆಂಟಿವೈರಲ್, ಸಂಕೋಚಕ, ಸೈಟೊಟಾಕ್ಸಿಕ್, ಎಮೆನಾಗೋಗ್ಯೂ, ಫೀಬಿಫ್ಯೂಜ್, ಚರ್ಮದ ಹೈಡ್ರೇಟರ್, ಸ್ಟೊಮ್ಯಾಚಿಕ್, ಸುಡೋರಿಫಿಕ್, ಟಾನಿಕ್,ವರ್ಮಿಫ್ಯೂಜ್ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಅಮೈಬಿಯಾಸಿಸ್, ಜಠರದುರಿತ, ಹುಣ್ಣುಗಳನ್ನು ಗುಣಪಡಿಸುವಲ್ಲಿ ಉಪಯೋಗಿಸಲಾಗುತ್ತದೆ[೧೨].
ಛಾಯಾಚಿತ್ರಗಳು
ಬದಲಾಯಿಸಿ-
ಲಕ್ಷ್ಮೀತರು ಮರ
-
ಲಕ್ಷ್ಮೀತರು ಮರದ ಎಲೆಗಳು ಮತ್ತು ಅದರ ಜೋಡಣೆ
-
ಲಕ್ಷ್ಮೀತರು ಮರ
-
ಲಕ್ಷ್ಮೀತರು ಮರದ ಎಲೆಗಳು ಮತ್ತು ಅದರ ಜೋಡಣೆ
-
ಲಕ್ಷ್ಮೀತರು ಹೂ
-
ಲಕ್ಷ್ಮೀತರು ಹಣ್ಣು
ಉಲ್ಲೇಖಗಳು
ಬದಲಾಯಿಸಿ- ↑ "Simarouba glauca DC". Germplasm Resources Information Network. United States Department of Agriculture. 2009-05-05. Archived from the original on 2009-09-18. Retrieved 2009-12-02.
- ↑ [೧]
- ↑ [೨] Archived 2009-09-18 ವೇಬ್ಯಾಕ್ ಮೆಷಿನ್ ನಲ್ಲಿ. [೩]
- ↑ [೪]
- ↑ [Govindaraju, K., Darukeshwara, J., Srivastava, A.K., Food and chemical Toxicology, 2009, 47:1327-1332]
- ↑ [೫]
- ↑ [೬]
- ↑ [೭]
- ↑ [೮]
- ↑ [೯]
- ↑ "ಆರ್ಕೈವ್ ನಕಲು" (PDF). Archived from the original (PDF) on 2018-02-19. Retrieved 2018-01-07.
- ↑ ]