ರುದ್ರನಾಥ

ಭಾರತ ದೇಶದ ಗ್ರಾಮಗಳು

ರುದ್ರನಾಥ ಭಾರತಉತ್ತರಾಖಂಡ ರಾಜ್ಯದ ರುದ್ರಪ್ರಯಾಗ ಜಿಲ್ಲೆಯಲ್ಲಿನ ಒಂದು ಪುಣ್ಯಕ್ಷೇತ್ರ. ಪಂಚ ಕೇದಾರಗಳ ಪೈಕಿ ಒಂದಾಗಿರುವ ರುದ್ರನಾಥ ಹಿಮಾಲಯದ ಉನ್ನತ ಪ್ರದೇಶದಲ್ಲಿ ಇದ್ದು ಇಲ್ಲಿ ಶಿವನು ನೀಲಕಂಠ ಮಹಾದೇವನೆಂಬ ಹೆಸರಿನಿಂದ ಪೂಜೆಗೊಳ್ಳುವನು. ಐತಿಹ್ಯಗಳ ಪ್ರಕಾರ ಮಹಾಭಾರತ ಯುದ್ಧದ ನಂತರ ಪಾಂಡವರು ತಮ್ಮ ಬಂಧುಹತ್ಯಾ ಪಾಪವನ್ನು ನಿವಾರಿಸಿಕೊಳ್ಳಲು ತೀರ್ಥಯಾತ್ರೆ ಕೈಗೊಂಡರು. ಶಿವನು ಇವರಿಗೆ ದರ್ಶನವೀಯಲು ಇಚ್ಛಿಸದೆ ಎತ್ತಿನ ರೂಪ ತಳೆದು ನೆಲದೊಳಗೆ ಮರೆಯಾದನು. ನಂತರ ಹಿಮಾಲಯದ ಐದು ಸ್ಥಾನಗಳಲ್ಲಿ ರುದ್ರನು ಎತ್ತಿನ ಐದು ಅಂಗಗಳ ರೂಪದಿಂದ ಪ್ರತ್ಯಕ್ಷನಾದನು. ಇವುಗಳ ಪೈಕಿ ಮುಖದ ಭಾಗವು ರುದ್ರನಾಥದಲ್ಲಿ ಪ್ರತಿಷ್ಠೆಯಾಯಿತೆಂದು ಹೇಳಲಾಗುತ್ತದೆ.[]

ರುದ್ರನಾಥ

ಹೆಸರು: ರುದ್ರನಾಥ
ನಿರ್ಮಾತೃ: ಪಾಂಡವರು ದಂತಕಥೆಯ ಪ್ರಕಾರ,
ಕಟ್ಟಿದ ದಿನ/ವರ್ಷ: ಅಪರಿಚಿತ
ಪ್ರಮುಖ ದೇವತೆ: Shiva
ಸ್ಥಳ: ರುದ್ರನಾಥ (ಹಳ್ಳಿ) , ಗರ್ವಾಲ್

ಅದ್ಭುತ ಪ್ರಕೃತಿ ಸೌಂದರ್ಯದ ತಾಣವಾಗಿರುವ ರುದ್ರನಾಥದ ಮಂದಿರವು ೨೨೮೬ ಮೀಟರ್ ಎತ್ತರದಲ್ಲಿದ್ದು ಇಲ್ಲಿಂದ ತ್ರಿಶೂಲ, ನಂದಾದೇವಿ ಮುಂತಾದ ಹಿಮಾಲಯದ ಶಿಖರಗಳ ಸುಂದರ ನೋಟ ಲಭಿಸುತ್ತದೆ. ದೇವಾಲಯದ ಸಮೀಪದಲ್ಲಿಯೇ ವೈತರಣಿ ಎಂದು ಕರೆಯಲ್ಪಡುವ ಉಪನದಿಯೊಂದು ಹರಿಯುತ್ತಿದೆ. ರಿಷಿಕೇಶದಿಂದ ೨೧೫ ಕಿ.ಮೀ. ದೂರದಲ್ಲಿರುವ ರುದ್ರನಾಥಕ್ಕೆ ಅತಿ ಸಮೀಪದಲ್ಲಿರುವ ಪಟ್ಟಣ ಗೋಪೇಶ್ವರ.

ಚಿತ್ರಗಳು

ಬದಲಾಯಿಸಿ
 
View from Naola Pass
 
View of Nanda Devi

ಉಲ್ಲೇಖಗಳು

ಬದಲಾಯಿಸಿ
  1. http://uttaranchal-tourism.com/rudranath-temple.html Archived 2019-03-25 ವೇಬ್ಯಾಕ್ ಮೆಷಿನ್ ನಲ್ಲಿ. Rudranath Temple, uttaranchal-tourism.com