ರಾಣಿ ದುರ್ಗಾವತಿ (೫ ಅಕ್ಟೋಬರ್ ೧೫೨೪ - ೨೪ ಜೂನ್ ೧೫೬೪) ೧೫೫೦ ರಿಂದ ೧೫೬೪ ರವರೆಗೆ ಗೊಂಡ್ವಾನಾದ ಆಡಳಿತ ರಾಣಿಯಾಗಿದ್ದರು. ಅವರು ಮಹೋಬ ಕೋಟೆಯಲ್ಲಿ ಚಾಂಡೇಲ್ ರಜಪೂತ ರಾಜ ಸಲಿಬಹನ್ [೧] ಕುಟುಂಬದಲ್ಲಿ ಜನಿಸಿದರು. ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾನ ದತ್ತುಪುತ್ರನಾದ ದಳಪತ್ ಷಾ ಕಚ್ವಾಹಾ ಅವರನ್ನು ವಿವಾಹವಾದರು. ರಾಣಿ ದುರ್ಗಾವತಿಯವರ ಸಾಧನೆಗಳು ಆಕೆಯ ಪೂರ್ವಜರ ಧೈರ್ಯ ಮತ್ತು ಪ್ರೋತ್ಸಾಹದ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ.

ರಾಣಿ ದುರ್ಗಾವತಿ
ಗೊ೦ಡ್ವಾನದ ಮಹಾರಾಣಿ
ಉತ್ತರಾಧಿಕಾರಿ ಬಹುಶ: ವೀರ್ ನಾರಾಯಣ್
ಗಂಡ/ಹೆಂಡತಿ ದಳಪತ್ ಷಾ ಕಚ್ವಾಹಾ
ಸಂತಾನ
ವೀರ್ ನಾರಯಣ್
ತಂದೆ ಸಲಿಬಹನ್
ಜನನ ೫ ಅಕ್ಟೋಬರ್ ೧೫೨೪
ಕಲಿನ್ ಜರ್ ಕೋಟೆ
ಮರಣ ೨೪ ಜೂನ್ ೧೫೬೪
ನರೈ ನಾಲ, ಜಬ್ಬಲ್ ಪುರ್, ಮಧ್ಯ ಪ್ರದೇಶ
ಧರ್ಮ ಹಿ೦ದು

ಜೀವನ ಬದಲಾಯಿಸಿ

೧೫೪೨ ರಲ್ಲಿ, ಅವರು ಗರ್ಹಾ ಸಾಮ್ರಾಜ್ಯದ ರಾಜ ಸಂಗ್ರಾಮ್ ಷಾ ಅವರ ದತ್ತುಪುತ್ರ ದಲ್ಪತ್ ಶಾ ಅವರನ್ನು ವಿವಾಹವಾದರು. ಅಬುಲ್ ಫಜಲ್ ಪ್ರಕಾರ, ದಲ್ಪತ್ ಷಾ ಗರ್ಹಾ ಮಂಡಲದ ರಾಜನಿಂದ ದತ್ತು ಪಡೆದ ಕಚ್ವಾಹ ರಜಪೂತನ ಮಗ. [೨] [೩] ಈ ಮದುವೆಯ ಕಾರಣದಿಂದ ಮಹೋಬ ಮಂಡಲದ ಚಂದೇಲ್ ಮತ್ತು ಗರ್ಹಾ ಸಾಮ್ರಾಜ್ಯದ ರಾಜವಂಶದ ( ಗರ್ಹ ಮಂಡಲ ) ಕಲಚೂರಿಗಳು ಮೈತ್ರಿ ಮಾಡಿಕೊಂಡರು. [೪]

ದಲ್ಪತ್ ಷಾ ೧೫೫೦ ರಲ್ಲಿ ನಿಧನರಾದರು ಮತ್ತು ವೀರ ನಾರಾಯಣನ ಚಿಕ್ಕ ವಯಸ್ಸಿನ ಕಾರಣ, ದುರ್ಗಾವತಿ ಗೊಂಡ್ವಾನಾ ಸಾಮ್ರಾಜ್ಯದ ಆಡಳಿತವನ್ನು ವಹಿಸಿಕೊಂಡರು. ದಿವಾನ್ ಬೆಯೋಹರ್ ಅಧರ್ ಸಿಂಹ ಮತ್ತು ಮಂತ್ರಿ ಮಾನ್ ಠಾಕೂರ್ ಅವರು ಆಡಳಿತವನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ನೋಡಿಕೊಳ್ಳುವಲ್ಲಿ ರಾಣಿಗೆ ಸಹಾಯ ಮಾಡಿದರು. ರಾಣಿ ದುರ್ಗಾವತಿ ತನ್ನ ಸಾಮ್ರಾಜ್ಯದಾದ್ಯಂತ ಶಾಂತಿ, ವ್ಯಾಪಾರ ಮತ್ತು ಒಳ್ಳೆಯ ಇಚ್ಛೆಯನ್ನು ಉತ್ತೇಜಿಸಿದರು. [೫]

ರಾಣಿ ದುರ್ಗಾವತಿ ತಮ್ಮ ರಾಜಧಾನಿಯನ್ನು ಸಿಂಗೋರ್ಗಢ ಕೋಟೆಯಿ೦ದ ಚೌರಗಢಕ್ಕೆ ಸ್ಥಳಾಂತರಿಸಿದರು. ಇದು ಸಾತ್ಪುರ ಬೆಟ್ಟದ ಶ್ರೇಣಿಯಲ್ಲಿ ನೆಲೆಗೊಂಡಿರುವ ಆಯಕಟ್ಟಿನ ಪ್ರಾಮುಖ್ಯತೆಯ ಕೋಟೆಯಾಗಿದೆ [೬]

ಶೇರ್ ಶಾ ಸೂರಿಯ ಮರಣದ ನಂತರ, ಶುಜಾ ಖಾನ್ ಮಾಲ್ವಾವನ್ನು ವಶಪಡಿಸಿಕೊಂಡರು ಮತ್ತು ೧೫೫೬ರಲ್ಲಿ [೭] ಅವನ ಮಗ ಬಾಜ್ ಬಹದ್ದೂರ್ ಉತ್ತರಾಧಿಕಾರಿಯಾದನು. ಸಿಂಹಾಸನವನ್ನು ಏರಿದ ನಂತರ, ಬಾಜ್, ರಾಣಿ ದುರ್ಗಾವತಿಯ ಮೇಲೆ ಆಕ್ರಮಣ ಮಾಡಿದನು ಆದರೆ ದಾಳಿಯು ಹಿಮ್ಮೆಟ್ಟಿಸಿತು [೮]

೧೫೬೨ ರಲ್ಲಿ, ಅಕ್ಬರ್ ಮಾಲ್ವಾ ದೊರೆ ಬಾಜ್ ಬಹದ್ದೂರ್ ನನ್ನು ಸೋಲಿಸಿದನು ಮತ್ತು ಮಾಲ್ವಾವನ್ನು ವಶಪಡಿಸಿಕೊಂಡು ಅದನ್ನು ಮೊಘಲ್ ಪ್ರಭುತ್ವವನ್ನಾಗಿ ಮಾಡಿದನು. ಪರಿಣಾಮವಾಗಿ, ರಾಣಿಯ ರಾಜ್ಯದ ಗಡಿಯು ಮೊಘಲ್ ಸಾಮ್ರಾಜ್ಯವನ್ನು ಮುಟ್ಟಿತು.

ರಾಣಿಯ ಸಮಕಾಲೀನ ಮೊಘಲ್ ಜನರಲ್, ಖ್ವಾಜಾ ಅಬ್ದುಲ್ ಮಜಿದ್ ಅಸಫ್ ಖಾನ್, ರೇವಾದ ದೊರೆ ರಾಮಚಂದ್ರನನ್ನು ಸೋಲಿಸಿದ ಮಹತ್ವಾಕಾಂಕ್ಷೆಯ ವ್ಯಕ್ತಿ. ರಾಣಿ ದುರ್ಗಾವತಿಯ ರಾಜ್ಯದ ಸಮೃದ್ಧಿಯು ಅವನನ್ನು ಆಕರ್ಷಿಸಿತು ಮತ್ತು ಮೊಘಲ್ ಚಕ್ರವರ್ತಿ ಅಕ್ಬರನ ಅನುಮತಿಯನ್ನು ಪಡೆದ ನಂತರ ಅವನು ರಾಣಿಯ ರಾಜ್ಯವನ್ನು ಆಕ್ರಮಿಸಿದನು.

ಅಸಫ್ ಖಾನ್‌ನ ದಾಳಿಯ ಬಗ್ಗೆ ರಾಣಿ ಕೇಳಿ ಹಾಗು ಅವರ ದಿವಾನ್ ಬೆಯೋಹರ್ ಅಧರ್ ಸಿಂಹ (ಅಧರ್ ಕಾಯಸ್ಥ) [೯] ಮೊಘಲ್ ಪಡೆಗಳ ಬಲವನ್ನು ಸೂಚಿಸಿದರು ರಾಣಿ ತಮ್ಮ ರಾಜ್ಯವನ್ನು ತಮ್ಮ ಎಲ್ಲಾ ಶಕ್ತಿಯಿಂದ ರಕ್ಷಿಸಲು ನಿರ್ಧರಿಸಿದರು. ಅವಮಾನಕರ ಜೀವನ ನಡೆಸುವುದಕ್ಕಿಂತ ಗೌರವಯುತವಾಗಿ ಸಾಯುವುದು ಉತ್ತಮ ಎಂದು ರಾಣಿ ಸಮರ್ಥಿಸಿಕೊಂಡರು.

ರಕ್ಷಣಾತ್ಮಕ ಯುದ್ಧದಲ್ಲಿ ಹೋರಾಡಲು, ಅವರು ಒಂದು ಬದಿಯಲ್ಲಿ ಗುಡ್ಡಗಾಡು ಮತ್ತು ಇನ್ನೊಂದು ಬದಿಯಲ್ಲಿ ಗೌರ್ ಮತ್ತು ನರ್ಮದಾ ನದಿಗಳ ನಡುವೆ ನೆಲೆಗೊಂಡಿರುವ ನರೈಗೆ ಹೋದರು. ಇದು ಮೊಘಲ್ ಭಾಗದಲ್ಲಿ ತರಬೇತಿ ಪಡೆದ ಸೈನಿಕರು ಮತ್ತು ಆಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಅಸಮಾನ ಯುದ್ಧವಾಗಿತ್ತು. ಅಲ್ಲದೆ ರಾಣಿ ದುರ್ಗಾವತಿಯ ಬದಿಯಲ್ಲಿ ಹಳೆಯ ಶಸ್ತ್ರಾಸ್ತ್ರಗಳೊಂದಿಗೆ ಕೆಲವು ತರಬೇತಿ ಪಡೆಯದ ಸೈನಿಕರು ಮಾತ್ರ ಇದ್ದರು. ಅವರ ಫೌಜ್ದಾರ್ ಅರ್ಜುನ್ ದಾಸ್ ಯುದ್ಧದಲ್ಲಿ ಕೊಲ್ಲಲ್ಪಟ್ಟರು ಮತ್ತು ರಾಣಿ ಸ್ವತಃ ರಕ್ಷಣೆಯನ್ನು ಮುನ್ನಡೆಸಲು ನಿರ್ಧರಿಸಿದರು. ಶತ್ರುಗಳು ಕಣಿವೆಯನ್ನು ಪ್ರವೇಶಿಸುತ್ತಿದ್ದಂತೆ, ರಾಣಿಯ ಸೈನಿಕರು ಅವರ ಮೇಲೆ ದಾಳಿ ಮಾಡಿದರು. ಎರಡೂ ಕಡೆಯವರು ಕೆಲವರನ್ನು ಕಳೆದುಕೊಂಡರು, ಆದರೆ ರಾಣಿಯು ಹೆಚ್ಚು ಕಳೆದುಕೊಂಡರು.

ಈ ಹಂತದಲ್ಲಿ, ರಾಣಿ ತಮ್ಮ ಸಲಹೆಗಾರರೊಂದಿಗೆ ತಮ್ಮ ತಂತ್ರವನ್ನು ಪರಿಶೀಲಿಸಿದರು. ಅವರು ರಾತ್ರಿಯಲ್ಲಿ ಮೊಘಲರ ಮೇಲಿನ ದಾಳಿಯನ್ನು ಮುಂದುವರಿಸಲು ಬಯಸಿದ್ದರು, ಆದರೆ ಅವರ ಮುಖ್ಯಸ್ಥರು ಅವರನ್ನು ನಿರುತ್ಸಾಹಗೊಳಿಸಿದರು ಮತ್ತು ರಾತ್ರಿಯ ಬೆಳಕಿನಲ್ಲಿ ತೆರೆದ ಯುದ್ಧದಲ್ಲಿ ಸೈನ್ಯವನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಮರುದಿನ ಬೆಳಿಗ್ಗೆ, ಅಸಫ್ ಖಾನ್ ದೊಡ್ಡ ಬಂದೂಕುಗಳನ್ನು ತರಿಸಿದ್ದನು. ರಾಣಿಯು ತನ್ನ ಆನೆಯಾದ ಸರ್ಮನ ಮೇಲೆ ಸವಾರಿ ಮಾಡಿ ಯುದ್ಧಕ್ಕೆ ಬಂದರು. ಅವರ ಮಗ ವೀರ ನಾರಾಯಣ ಕೂಡ ಈ ಯುದ್ಧದಲ್ಲಿ ಭಾಗವಹಿಸಿದ್ದ. ಅವರು ಮೊಘಲ್ ಸೈನ್ಯವನ್ನು ಮೂರು ಬಾರಿ ಹಿಂದಕ್ಕೆ ಸರಿಸಲು ಒತ್ತಾಯಿಸಿದರು ಆದರೆ ಅಂತಿಮವಾಗಿ ಅವರು ಗಾಯಗೊಂಡರು ಹಾಗು ಸುರಕ್ಷಿತ ಸ್ಥಳಕ್ಕೆ ನಿವೃತ್ತರಾಗಬೇಕಾಯಿತು. ಯುದ್ಧದ ಸಮಯದಲ್ಲಿ, ರಾಣಿಯು ತಮ್ಮ ಕಿವಿಯ ಬಳಿ ಬಾಣದಿಂದ ತೀವ್ರವಾಗಿ ಗಾಯಗೊಂಡರು. ಮತ್ತೊಂದು ಬಾಣ ಅವರ ಕುತ್ತಿಗೆಯನ್ನು ಚುಚ್ಚಿತು ಮತ್ತು ಅವರು ಪ್ರಜ್ಞೆಯನ್ನು ಕಳೆದುಕೊಂಡರು. ಪ್ರಜ್ಞೆ ಬಂದ ಮೇಲೆ ಸೋಲು ಸನ್ನಿಹಿತವಾಗಿದೆ ಎಂದು ಗ್ರಹಿಸಿದರು. ಅವರ ಮಾವುತ ಅವರನ್ನು ಯುದ್ಧಭೂಮಿಯನ್ನು ತೊರೆಯಲು ಸಲಹೆ ನೀಡಿದರೂ ಅವರು ನಿರಾಕರಿಸಿದರು ಮತ್ತು ತಮ್ಮ ಕಠಾರಿ ತೆಗೆದು ೨೪ ಜೂನ್ ೧೫೬೪ ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಹುತಾತ್ಮ ದಿನವನ್ನು (೨೪ ಜೂನ್ ೧೫೬೪) ಇಂದಿಗೂ "ಬಲಿದಾನ್ ದಿವಸ್" ಎಂದು ಸ್ಮರಿಸಲಾಗುತ್ತದೆ.

ಪರಂಪರೆ ಬದಲಾಯಿಸಿ

ಮದನ್ ಮಹಲ್ ಕೋಟೆ ಜಬಲ್ಪುರ್ ರಾಣಿ ದುರ್ಗಾವತಿ ಮತ್ತು ಅವರ ಮಗ ವೀರ್ ನಾರಾಯಣರೊಂದಿಗೆ ಉತ್ತಮ ಸಂಬಂಧ ಹೊಂದಿದೆ.

೧೯೮೩ ರಲ್ಲಿ, ಮಧ್ಯಪ್ರದೇಶ ಸರ್ಕಾರವು ಜಬಲ್‌ಪುರ ವಿಶ್ವವಿದ್ಯಾಲಯವನ್ನು ರಾಣಿ ದುರ್ಗಾವತಿ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಿತು.

ಭಾರತ ಸರ್ಕಾರವು ೨೪ ಜೂನ್ ೧೯೮೮ ರ೦ದು [೧೦] ಆಕೆಯ ಮರಣದ ಸ್ಮರಣಾರ್ಥ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು.

ಜಬಲ್ಪುರ್ ಜಂಕ್ಷನ್ ಮತ್ತು ಜಮ್ಮುತಾವಿ ನಡುವೆ ಸ೦ಚರಿಸುವ ರೈಲು ಗಾಡಿಗೆ ದುರ್ಗಾವತಿ ಎಕ್ಸ್‌ಪ್ರೆಸ್ (೧೧೪೪೯/೧೧೪೫೦) ಎ೦ದು ಕರೆಯುವ ಮೂಲಕ ರಾಣಿಯನ್ನು ಸ್ಮರಿಸಿಕೊಳ್ಳಲಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್ ೧೪ ಜುಲೈ ೨೦೧೮ ರಂದು ಐ.ಸಿ.ಜಿ.ಎಸ್ ರಾಣಿ ದುರ್ಗಾವತಿಯನ್ನು ನಿಯೋಜಿಸಿತು, ಇದುವೆ ಈ ರೀತಿಯ ಮೂರನೇ ಇನ್‌ಶೋರ್ ಪೆಟ್ರೋಲ್ ವೆಸೆಲ್ (ಐ.ಪಿ.ವಿ) ಆಗಿದೆ. [೧೧]

 
ಐಸಿಜಿಎಸ್ ರಾಣಿ ದುರ್ಗಾವತಿ


ಇವನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Beveridge, H. (1907). The Akbarnama Of Abul Fazl Vol. 2. p. 324.
  2. Dikshit, R. K. (1976). The Candellas of Jejākabhukti (in ಇಂಗ್ಲಿಷ್). Abhinav Publications. p. 8. ISBN 978-81-7017-046-4.
  3. Abul Fazl, Henry Beveridge (1907). Akbarnama Vol-2. p. 326.
  4. Archana Garodia Gupta (20 April 2019). The Women Who Ruled India- Leaders. Warriors. Icons (Ebook) (in English). Hachette India. ISBN 9789351951537.{{cite book}}: CS1 maint: unrecognized language (link)
  5. Knight, Roderic. "The "Bana", Epic Fiddle of Central India". Asian Music. 32 (1): 101–140. doi:10.2307/834332. JSTOR 834332.
  6. Abul Fazl, Henry Beveridge (1907). Akbarnama Vol-2. p. 327.
  7. Gupta, Parmeshwari Lal (1969). Coins (in ಇಂಗ್ಲಿಷ್). National Book Trust. p. 128. ISBN 9788123718873.
  8. Abul Fazl, Henry Beveridge (1907). Akbarnama Volume-2. pp. 327–328.
  9. "Archived copy" (PDF). Archived from the original (PDF) on 10 August 2019. Retrieved 18 September 2018.{{cite web}}: CS1 maint: archived copy as title (link)
  10. "Rani Durgavati Stamp, Government of India, 1988".
  11. "Coast Guard commissions 3rd IPV 'Rani Durgavati' at Vizag". The Economic Times.