ಮದನ್ ಮೆಹೆಲ್ ಜಬಲ್ಪುರ್‌ನ ಒಂದು ಉಪನಗರ ಪ್ರದೇಶವಾಗಿದ್ದು ಐತಿಹಾಸಿಕ ದುರ್ಗಾವತಿ ಕೋಟೆಗೆ ಪ್ರಸಿದ್ಧವಾಗಿದೆ.[]

ಮದನ್ ಮೆಹೆಲ್ ಕೋಟೆ ಜಬಲ್ಪುರ್

ಜಬಲ್ಪುರ್ ಪಟ್ಟಣದಲ್ಲಿನ ಒಂದು ಗುಡ್ಡದ ಮೇಲೆ ಸ್ಥಿತವಾಗಿರುವ ಈ ಚಿಕ್ಕದಾದ ಆಕರ್ಷಕ ಕೋಟೆಯು ರಾಜ್‍ಗೋಂಡ್ ಅರಸರದ್ದಾಗಿದೆ. ಇದು ಹೆಚ್ಚಾಗಿ ದಾಳಿಕೋರರ ಬಗ್ಗೆ ಜಾಗರೂಕರಾಗಿರಲು ಸಿಪಾಯಿಗಳಿರುವಂಥ ಒಂದು ನೆಲೆಯಾಗಿತ್ತು. ಈ ಕೋಟೆಯು ಕ್ರಿ.ಶ. ೧೧ನೇ ಕಾಲದ್ದೆಂದು ನಂಬಲಾಗಿದೆ. ಈ ಕೋಟೆಯು ಗೋಂಡ್ ರಾಣಿಯಾದ ರಾಣಿ ದುರ್ಗಾವತಿ ಮತ್ತು ಅವಳ ಮಗ ವೀರ್ ನಾರಾಯಣ್‍ನೊಂದಿಗೆ ಸಂಬಂಧಿತವಾಗಿದೆ. ರಾಣಿ ದುರ್ಗಾವತಿ ಮುಘಲರ ವಿರುದ್ಧ ಹೋರಾಡುತ್ತ ಅಂತಿಮವಾಗಿ ಮೃತಳಾದಳು ಮತ್ತು ಭಾರತೀಯ ಇತಿಹಾಸದಲ್ಲಿ ಹುತಾತ್ಮೆ ಎಂದು ಪ್ರಶಂಸಿಸಲ್ಪಟ್ಟಿದ್ದಾಳೆ. ಅವಳು ಜಬಲ್ಪುರ್ ಸುತ್ತಲು ಹರಡಿದ ಅಸಂಖ್ಯಾತ ದೇವಾಲಯಗಳು ಮತ್ತು ಹೊಂಡಗಳನ್ನು ಕೂಡ ನಿರ್ಮಿಸಿದಳು, ಮುಖ್ಯವಾಗಿ ಅವಳ ಗರ್ಹಾ ಸಂಸ್ಥಾನದ ಸುತ್ತ.[]

ಉಲ್ಲೇಖಗಳು

ಬದಲಾಯಿಸಿ
  1. "thepenthouse". Archived from the original on 2017-09-22. Retrieved 2020-08-24.
  2. "Madan Mahal, Jabalpur". Archived from the original on 2019-02-20. Retrieved 2020-08-24.

ಹೊರಗಿನ ಕೊಂಡಿಗಳು

ಬದಲಾಯಿಸಿ