ರಾಜಾ ರಾವ್
ರಾಜಾ ರಾವ್ (ನವೆಂಬರ್ ೦೮, ೧೯೦೮ - ಜುಲೈ ೦೮ ೨೦೦೬)- ಕನ್ನಡಿಗರಾದ ಇವರು ಆಂಗ್ಲ ಭಾಷೆಯಲ್ಲಿ ಹಲವಾರು ಕೃತಿಗಳನ್ನು ಬರೆದು ವಿಶ್ವದಾದ್ಯಂತ ಪ್ರಖ್ಯಾತರಾಗಿದ್ದಾರೆ.
Raja Rao | |
---|---|
ಜನನ | Hassan, Hassan District, Mysore State, British India (now in ಕರ್ನಾಟಕ, India | ೮ ನವೆಂಬರ್ ೧೯೦೮
ಮರಣ | 8 July 2006 Austin, Texas, United States | (aged 97)
ವೃತ್ತಿ | Writer, professor |
ಭಾಷೆ | English, French, Kannada |
ಪ್ರಮುಖ ಕೆಲಸ(ಗಳು) | Kanthapura (1938) The Serpent and the Rope (1960) |
[<span%20class="url"> | |
[[File:ಟೆಂಪ್ಲೇಟು:Portal/Images/Literature|frameless|upright=0.11|link=|alt=]] Literature portal |
೧೯೬೦ರಲ್ಲಿ ಇವರು ಬರೆದ "ದಿ ಸರ್ಪೆಂಟ್ ಅಂಡ್ ದಿ ರೋಪ್" ಎಂಬ ಕಾದಂಬರಿಯು, ತಮ್ಮ ಜೀವನದಿಂದಲೇ ಪ್ರೇರಿತವಾದದ್ದು. ಯೂರೋಪ್ ಹಾಗು ಭಾರತದಲ್ಲಿ ಅವರು ಆಧ್ಯಾತ್ಮವನ್ನರಸಿದ ಕಥೆ ಅದು. ರಾಜಾ ರಾಯರು ಒಮ್ಮೆ "ಬರೆಯುವುದೇ ನನ್ನ ಧರ್ಮ" ಎಂದು ಹೇಳಿದ್ದರು.
ಜೀವನ
ಬದಲಾಯಿಸಿರಾಜಾ ರಾವ್ ಅವರು ನವೆಂಬರ್ ೦೮, ೧೯೦೮ರಂದು ಅಂದಿನ ಮೈಸೂರು ಸಂಸ್ಥಾನದ ಹಾಸನದಲ್ಲಿ ಬ್ರಾಹ್ಮಣ ಮನೆತನದಲ್ಲಿ ಜನಿಸಿದರು. ಇವರ ತಂದೆ ಒಬ್ಬ ಶಿಕ್ಷಕರಾಗಿದ್ದರು. ಅವರ ಪ್ರಾಥಮಿಕ ಶಿಕ್ಷಣವೆಲ್ಲಾ ಹೈದರಾಬಾದ್‍ನಲ್ಲಿ ಕೈಗೂಡಿತು. ಹಾಗು ಅವರು ಅಲಿಗಢ ಮುಸ್ಲಿಮ್ ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ ಹಾಗು ಇತಿಹಾಸದಲ್ಲಿ ಬಿ.ಎ. ಪದವಿಯನ್ನು ೧೯೨೯ರಲ್ಲಿ ಪಡೆದರು. ಇದಾದ ಕೂಡಲೆ, ಫ್ರಾನ್ಸಿನ Collège des Ecossais, Montpellier ಎಂಬಲ್ಲಿ ಫ್ರೆಂಚ್ ಭಾಷೆ ಹಾಗು ಸಾಹಿತ್ಯವನ್ನು ಅಭ್ಯಾಸ ಮಾಡಿದರು. ನಂತರ ಫ್ರಾನ್ಸಿನ ಸೋರ್ಬನ್ನಲ್ಲಿ ಲೂಇ ಕಜಾಮಿಯನ್ ಎಂಬುವರ ಬಳಿ ಐರಿಶ್ ಸಾಹಿತ್ಯದ ಮೇಲೆ ಭಾರತೀಯ ಪ್ರಭಾವ ಎಂಬುದರ ಬಗ್ಗೆ ಸಂಶೋಧಿಸಿದರು.
೧೯೩೧ರಲ್ಲಿ ಇವರು ಫ್ರೆಂಚ ಮಹಿಳೆ ಕೆಮಿಲ್ಲೆ ಮೌಲಿಯವರನ್ನು ಮದುವೆಯಾದರು.(ಈ ದಾಂಪತ್ಯ ಆನಂತರ ವಿಚ್ಛೇದನದಲ್ಲಿ ಕೊನೆಗಂಡಿತು). ಮುಂದೆ ೧೯೬೫ರಲ್ಲಿ ಕ್ಯಾಥರೀನ್ ಜೋನ್ಸ್ ಎಂಬ ರಂಗ ಕಲಾವಿದೆಯನ್ನು ಮದುವೆಯಾದರು. ಇವರ ಮಗನ ಹೆಸರು ಕ್ರಿಸ್ಟೋಫರ್ ರಾಮ. ತದನಂತರ ೧೯೮೬ರಲ್ಲಿ ರಾಜಾರಾವ್ ಕ್ಯಾಥರೀನ್‌ರವರಿಗೆ ವಿಚ್ಛೇದನ ನೀಡಿ ಸೂಸಾನ್ ಎನ್ನುವವರ ಜೊತೆ ಮದುವೆಯಾದರು.
ರಾಜಾ ರಾಯರು ಅಮೇರಿಕದ ಯೂನಿವರ್ಸಿಟಿ ಆಫ್ ಟೆಕ್ಸಸ್-ಆಸ್ಟಿನ್ ನಲ್ಲಿ ಭಾರತೀಯ ತತ್ತ್ವಶಾಸ್ತ್ರವನ್ನು ಬೋಧಿಸುತ್ತಿದ್ದರು.
ಜಯ ಕರ್ನಾಟಕ ಪತ್ರಿಕೆಯಲ್ಲಿ ಇವರು ೧೯೩೧-೩೨ರ ಸಂದರ್ಭದಲ್ಲಿ ನಾಲ್ಕು ಲೇಖನಗಳನ್ನು ಬರೆದಿದ್ದರು.
ಇವರ ಕೃತಿಗಳು
ಬದಲಾಯಿಸಿ- ಕಾಂತಾಪುರ, ೧೯೩೮
- ಚೇಂಜಿಂಗ್ ಇಂಡಿಯಾ (ಬದಲಾಗುತ್ತಿರುವ ಭಾರತ), ೧೯೩೯ (ಇಕ್ಬಾಲ್ ಸಿಂಗ ಜೊತೆ ಸಂಪಾದಿತ)
- ದಿ ಕವ್ ಆಫ್ ದ ಬ್ಯಾರಿಕೇಡ್ಸ್ ಅಂಡ್ ಅದರ್ ಸ್ಟೋರೀಸ್, ೧೯೪೭
- Whither India, ೧೯೪೮ (ಇಕ್ಬಾಲ್ ಸಿಂಗ ಜೊತೆ)
- ದಿ ಸರ್ಪೆಂಟ್ ಅಂಡ್ ದ ರೋಪ್, ೧೯೬೦
- ದಿ ಕ್ಯಾಟ್ ಅಂಡ್ ಶೇಕ್ಸ್‌ಪಿಯರ್, ೧೯೬೫
- ಕಾಮ್ರೇಡ್ ಕಿರಿಲೊವ್, ೧೯೭೬
- The Policeman and the Rose:Stories, 1978
- The Chessmaster and His Moves, ೧೯೮೮
- On the Ganga Ghat, ೧೯೯೩
- The Meaning of India, ೧೯೯೬
- Great Indian way: A life of Mahatma Gandhi, ೧೯೯೮
- The Best of Rajarao, ೧೯೯೮
ಪುರಸ್ಕಾರಗಳು
ಬದಲಾಯಿಸಿ- ೧೯೬೪ - ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ೧೯೬೯ - ಪದ್ಮಭೂಷಣ
- ೧೯೯೭ - ಸಾಹಿತ್ಯ ಆಕಾಡೆಮಿ ಫೆಲೋಶಿಪ್
- ೧೯೩೧-೩೨ ರ ಕಾಲದಲ್ಲಿ ರಾಜಾರಾವ್ ಅವರು ಕನ್ನಡದ ಮಾಸಪತ್ರಿಕೆ
- ಜಯಕರ್ನಾಟಕಕ್ಕೆ ಲೇಖನಗಳನ್ನು ಬರೆದಿದ್ದಾರೆ. ಮುಂದಿನ ಸಾಹಿತ್ಯ ಮಾತ್ರ ಫ್ರೆಂಚ್ ಹಾಗು ಇಂಗ್ಲಿಷ್ ಭಾಷೆಗಳಲ್ಲಿ ರಚಿತವಾಗಿದೆ.
- ರಾಜಾರಾವ್ ೧೯೬೬ ರಿಂದ ೧೯೮೩ ರವರೆಗೆ ಅಮೆರಿಕೆಯ ಸಂಯುಕ್ತ ಸಂಸ್ಥಾನದಲ್ಲಿರುವ ಆಸ್ಟಿನ್ ನಗರದಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ತತ್ವಜ್ಞಾನವನ್ನು ಕಲಿಸುತ್ತಿದ್ದರು ಹಾಗು ಎಮೆರಿಟಸ್ ಪ್ರೊಫೆಸರ್ ಎಂದು ನಿವೃತ್ತರಾದರು.
- ರಾಜಾರಾವ್ ಅವರು ೨೦೦೬ ಜುಲೈ ೦೮ ರಂದು, ತಮ್ಮ ತೊಂಬತ್ತಾರನೆಯ ವಯಸ್ಸಿನಲ್ಲಿ ಅಮೆರಿಕಾದ ಆಸ್ಟಿನ್ (ಟೆಕ್ಸಸ್ ರಾಜ್ಯ) ನಗರದಲ್ಲಿ ನಿಧನರಾದರು.
- ೧೯೮೮ ರಲ್ಲಿ Neustadt International Prize for literature
ನೋಡಿ
ಬದಲಾಯಿಸಿ- ಕೃತಿ ವಿವರ ಮತ್ತು ಜೀವನ-ಇಂದ:ಅವರ ಮಿತ್ರ ಸಿ.ಎನ್. ಶ್ರೀನಾಥ್:Sun, 07/03/2016:ಪ್ರಜಾವಾಣಿ[[೧]]
ಹೊರಗಿನ ಸಂಪರ್ಕಗಳು
ಬದಲಾಯಿಸಿ- "ನಮ್ಮ ಹಾಸನದ ರಾಜಾರಾಯರು" Archived 2006-07-19 ವೇಬ್ಯಾಕ್ ಮೆಷಿನ್ ನಲ್ಲಿ. - ರಾಜಾ ರಾಯರ ನೆನಪಿನಲ್ಲಿ ಯು ಆರ್ ಅನಂತಮೂರ್ತಿಯವರ ಲೇಖನ.
- Raja Rao's Web Page - sponsored by the Raja Rao Publication Project at the University of Texas
- Civil Disobedience, Violence, and Colonial “Justice” in two Indian Novels Archived 2007-02-07 ವೇಬ್ಯಾಕ್ ಮೆಷಿನ್ ನಲ್ಲಿ. - R C Sterne examines Raja Rao’s Kanthapura and Kamala Markandaya’s Some Inner Fury (1956).
- When Writing is Sadhana - M Paranjape writes about a recent meeting with Raja Rao (November 2005)
- The Literary Encyclopedia's article on Raja Rao