ಕೆ.ಎಸ್.ಎಲ್.ಸ್ವಾಮಿ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ರವಿ ಎಂದೇ ಮಾಧ್ಯಮಗಳಿಂದ, ಪರಿಚಿತರಿಂದ ಗುರುತಿಸಲ್ಪಡುವ (ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ )'ಕೆ.ಎಸ್.ಎಲ್.ಸ್ವಾಮಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಲ್ಲೊಬ್ಬರು. ಮಂಡ್ಯ ಜಿಲ್ಲೆಯ ಕೃಶ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಇವರ ಹುಟ್ಟೂರು. [೧] ಜಿ.ವಿ.ಅಯ್ಯರ್ ಮತ್ತು ಎಂ.ಆರ್.ವಿಠಲ್ ಅವರ ಸಹಾಯಕರಾಗಿ ಚಿತ್ರರಂಗವನ್ನು ಪ್ರವೇಶಿಸಿದ ರವಿಯವರ ನಿರ್ದೇಶನದ ಮೊದಲ ಚಲನಚಿತ್ರ ತೂಗುದೀಪ. ಗಾಂಧಿನಗರ, ಭಾಗ್ಯಜ್ಯೋತಿ, ಮಲಯ ಮಾರುತ ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ ಇವರು, ತಮ್ಮ ಗುರು ಪುಟ್ಟಣ್ಣ ಅವರ ನಿಧನದಿಂದ ಅಪೂರ್ಣಗೊಂಡಿದ್ದ ಮಸಣದ ಹೂವು ಮತ್ತು "ಸಾವಿರ ಮೆಟ್ಟಿಲು" ಚಿತ್ರಗಳನ್ನು ಮುಂದುವರೆಸಿ, ಪೂರ್ತಿಯಾಗಿ ನಿರ್ದೇಶಿಸಿದರು. ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಮೊದಲಾದಂತೆ ಹಲವಾರು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಚಿತ್ರನಟಿ ಬಿ.ವಿ.ರಾಧ ಇವರ ಪತ್ನಿ.[೨]
೧೯೯೦ರಲ್ಲಿ ಇವರ ನಿರ್ದೇಶನದ "ಜಂಬೂ ಸವಾರಿ" ಅತ್ಯುತ್ತಮ ಮಕ್ಕಳ ಚಿತ್ರವೆಂದು ರಾಷ್ಟ್ರಪತಿಯವರ "ಸ್ವರ್ಣ ಕಮಲ"ಪಡೆದು, ಮುಂದೆ ಜರ್ಮನಿಯ ಕೈಂಡರ್ ಚಲನಚಿತ್ರೋತ್ಸವ (೧೯೯೦) ಹಾಗೂ ಟೆಹರಾನ್ ಚಿತ್ರೋತ್ಸವದಲ್ಲಿ (೧೯೯೧) ಪಾಲ್ಗೊಂಡಿತ್ತು. ಇವರ ನಿರ್ದೇಶನದ ಆರು ಮೂರು ಒಂಬತ್ತು Archived 2015-06-03 ವೇಬ್ಯಾಕ್ ಮೆಷಿನ್ ನಲ್ಲಿ. ಯಕ್ಷಗಾನ ಪ್ರಸಂಗ ಅಳವಡಿಸಲಾದ ಮೊದಲ ಕನ್ನಡ ಚಿತ್ರ ಎಂದು ಹೆಸರಾಯಿತು.ಇವರು ಸುಮಾರು ನಲವತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ನಿರ್ದೇಶಿರುವ ಚಿತ್ರಗಳು
ಬದಲಾಯಿಸಿ1. ತೂಗುದೀಪ
2. ಗಾಂಧೀನಗರ
3. ಲಗ್ನಪತ್ರಿಕೆ
6. ದೇವರ ದುಡ್ಡು
10. ಮಾಗಿಯ ಕನಸು
11. ಮುಗ್ಧ ಮಾನವ
12. ಭಾಗ್ಯ ಜ್ಯೋತಿ
13. ಮಲಯ ಮಾರುತ
14. ಡ್ರೈವರ್ ಹನುಮಂತು
15. ಜಿಮ್ಮಿ ಗಲ್ಲು
16. ಮತ್ತೆ ವಸಂತ
17. ಮಿಥಿಲೆಯ ಸೀತೆಯರು
18. ದೇವರು ಕೊಟ್ಟ ತಂಗಿ
20.ರಾಮ ಲಕ್ಶ್ಮಣ
ಉಲ್ಲೇಖಗಳು
ಬದಲಾಯಿಸಿ- ↑ Khajane, Muralidhara (20 October 2015). "Kannada film-maker K.S.L. Swamy passes away". The Hindu.
- ↑ "History 45 - KSL Swamy Makes His Debut". chitraloka.com. 12 September 2013. Archived from the original on 6 ಅಕ್ಟೋಬರ್ 2017. Retrieved 3 ಜೂನ್ 2017.
{{cite web}}
: Italic or bold markup not allowed in:|publisher=
(help)