ರತ್ನಾಗಿರಿ ಯು ಅರೇಬಿಯನ್ ಸಮುದ್ರದ ಕರಾವಳಿಯಲ್ಲಿರುವ ರತ್ನಾಗಿರಿ ಮರಾಠಿ:रत्नागिरीಜಿಲ್ಲೆಯಲ್ಲಿನ ಒಂದು ಬಂದರು ನಗರ.ಭಾರತದ ಮಹಾರಾಷ್ಟ್ರ ರಾಜ್ಯದ ವಾಯುವ್ಯ [] ಭಾಗದಲ್ಲಿದೆ. ಈ ಜಿಲ್ಲೆಯು ಕೊಂಕಣದ ಒಂದು ಭಾಗವೆನಿಸಿದೆ.

ರತ್ನಾಗಿರಿ
Ratnagiri (रत्नागिरी)
city
Population
 (2001)
 • Total೭೦,೩೩೫

ಇಡೀ ಅರೇಬಿಯನ್ ಸಮುದ್ರದ ಕರಾವಳಿ ಪ್ರದೇಶದಲ್ಲೇ ಅತ್ಯಂತ ಸುಂದ್ರ ತಾಣವಾಗಿದೆ.

ಸಹ್ಯಾದ್ರಿ ಬೆಟ್ಟದ ಅಂಚಿನಲ್ಲಿರುವ ಪಶ್ಚಿಮ ಭಾಗದಲ್ಲಿದೆ.ಅತ್ಯಧಿಕ ಮಳೆಯಿಂದಾಗಿ ಅಲ್ಲಿ ಮಣ್ಣಿನ ಸವಕಳಿ ಸಾಮಾನ್ಯವಾಗಿದ್ದು,ಆದರೂ ಕರಾವಳಿಯು ಅಧಿಕ ಫಲವತ್ತಾದ ಭೂಮಿ ಹೊಂದಿದೆ.ಅಲ್ಲಿನ ಜೇಡಿ ಮಣ್ಣು ಫಲವತ್ತಾದ ಮೃದು ಮಣ್ಣಿನಲ್ಲಿ ಆ ಭಾಗದಲ್ಲಿ ಅಕ್ಕಿ,ತೆಂಗು,ಗೋಡಂಬಿ ಮತ್ತು ಹಣ್ಣುಗಳು ಅದರಲ್ಲೂ ಬಹುಮುಖ್ಯವಾಗಿ "ಹಾಪೂಸ್ "(ಆಲ್ಫೊನ್ಸ್ ಮಾವಿನ ಹಣ್ಣು ಇಲ್ಲಿನ ಪ್ರಮುಖ ಉತ್ಪನ್ನವಾಗಿದೆ.) ಮೀನುಗಾರಿಕೆಯು ರತ್ನಾಗಿರಿಯಲ್ಲಿ ಒಂದು ಮಹತ್ವದ ಉದ್ದಿಮೆಗಳಲ್ಲೊಂದು.

.ಹಲವಾರು ಭಾರತೀಯ ಪ್ರಮುಖ ವ್ಯಕ್ತಿತ್ವಗಳಿಗೆ ಈ ಜಿಲ್ಲೆ ಉತ್ತಮ ತಾಣವಾಗಿದೆ.ಉದಾಹರಣೆಗೆ "ಲೋಕ ಮಾನ್ಯ"ಬಾಲ್ ಗಂಗಾಧರ್ ತಿಲಕ್ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಬ್ರಿಟಿಶ್ ರಾಜ್ ವಿರುದ್ದ ಹೋರಾಡಿದ ನಾಯಕ,ಭಾರತ ರತ್ನ "ಮಹರ್ಷಿ"ಧೊಂಡೊ ಕೇಶವ ಕಾರ್ವೆ ಓರ್ವ ಸಮಾಜಸುಧಾರಕ ಮತ್ತು ಶಿಕ್ಷಣತಜ್ಞ,ಅಲ್ಲದೇ ಪ್ರತಿಭಾವಂತಗಣಿತಜ್ಞ ರಘುನಾಥ್ ಪುರುಷೋತ್ತಮ ಪರಾಂಜಪೆ ಇವರೆಲ್ಲರೂ ಜಿಲ್ಲೆಯ ಆಸು ಪಾಸಿನಲ್ಲಿ ಇದ್ದವರು.

16°59′N 73°18′E / 16.98°N 73.3°E / 16.98; 73.3ರತ್ನಾಗಿರಿಯು ಇಲ್ಲಿ [] ಪ್ರತಿಷ್ಟಾಪಿತಗೊಂಡಿದೆ. ಇದು ಸರಾಸರಿ ಸಮುದ್ರ ಮಟ್ತಕ್ಕಿಂತ 11 ಮೀಟರ್ ಗಳು (36 ಅಡಿಗಳಷ್ಟು ಎತ್ತರದ ಊರ್ಧ್ವ ಮುಖದಲ್ಲಿದೆ. ಈ ಪ್ರದೇಶವು ಉಷ್ಣವಲಯದಲ್ಲಿದೆ...

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

ಕಳೆದ 2008ರ [] ಭಾರತದ ಗಣತಿಯ ಪ್ರಕಾರ ರತ್ನಾಗಿರಿಯಲ್ಲಿ ಸುಮಾರು 5,೦೦೦೦೦ ಜನಸಂಖ್ಯೆ ಇದೆ.ಪುರುಷರು ಮತ್ತು ಮಹಿಳೆಯರು ಅನುಕ್ರಮವಾಗಿ 55% ಹಾಗು 45%ರಷ್ಟಿದ್ದಾರೆ.ಇದರಲ್ಲಿ 86%ರಷ್ಟು ಪುರುಷರು ಮತ್ತು 87%ರಷ್ಟು ಮಹಿಳೆಯರು ಸಾಕ್ಷರರಿದ್ದಾರೆ.ರತ್ನಾಗಿರಿಯ ಜನಸಂಖ್ಯೆಯಲ್ಲಿ 11%ರಷ್ಟು ೬ ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿದ್ದಾರೆ.

  • ಭಾಷೆ: ಮರಾಠಿ,ಹಿಂದಿ,ಕೊಂಕಣಿ,ಗುಜರಾತಿ
  • ಆಹಾರ: ಸಾಮಾನ್ಯ ಆಹಾರ ಪದ್ದತಿಯಲ್ಲಿ ಅಕ್ಕಿ, ಮೀನು, ಮತ್ತು ಗೋಧಿ ಪ್ರಧಾನವಾದವು.
  • ಉಡುಪು: ಬಹುತೇಕ ಹತ್ತಿ ಉಡುಪುಗಳು.
  • STD ಕೋಡ್: ೦೨೩೫೨
  • ಪಿನ್ ಕೋಡ್: ೪೧೫೬೧೨ ರತ್ನಾಗಿರಿ ನಗರ.
  • ಪಿನ್ ಕೋಡ್: ೪೧೫೬೩೯ ರತ್ನಾಗಿರಿ MIDC.

ಇತಿಹಾಸ

ಬದಲಾಯಿಸಿ

ಸುಮಾರು 1731ರಲ್ಲಿ ರತ್ನಾಗಿರಿಯು ಸಾತಾರಾ ರಾಜರ ಆಡಳಿತದಲ್ಲಿತ್ತು.ನಂತರ 1818ರಲ್ಲಿ ಬ್ರಿಟಿಶ್ ರು ಇದರ ಮೇಲೆ ಹಿಡಿತ ಸಾಧಿಸಿದರು.

ಇದಕ್ಕೂ ಮೊದಲು ಬಿಜಾಪುರದ ಪೊಟು ಶ್ರಿ ಚೆನ್ನಾ ರೆಡ್ಡಿ ರತ್ನಾಗಿರಿಯ ಪ್ರಮುಖ ಕರಾವಳಿ ಭಾಗದಲ್ಲಿ ಕೋಟೆಯೊಂದನ್ನು ನಿರ್ಮಿಸಿದ,ನಂತರ ಮರಾಠಾ ಅರಸು ಶಿವಾಜಿ ಇದನ್ನು ಮತ್ತಷ್ಟು ಬಲಪಡಿಸಿದ.

ರತ್ನಾಗಿರಿಯಲ್ಲಿರುವ ಅರಮನೆಯಲ್ಲಿ ಬರ್ಮಾದ(ಮಯನ್ಮಾರ್ ) ಕೊನೆಯ ರಾಜ ಥೀಬಾ ,ನಂತರ ಆಗಿನ ಬ್ರಿಟಿಶ್ ರಾಜ ವಿರುದ್ದ ದಂಗೆ ಎದ್ದ "ವೀರ"ವಿ.ಡಿ ಸಾವರ್ಕರ್ ಅವರನ್ನು ಇಲ್ಲಿ ಗೃಹಬಂಧನದಲ್ಲಿಡಲಾಗಿತ್ತು.

ಪೌರಾಣಿಕ ಮಹಾಭಾರತ ಕಥೆಯ ಪ್ರಕಾರ ಪಾಂಡವರು ತಮ್ಮ 12ವರ್ಷದ ವನವಾಸದ ಅವಧಿಯ ಕೆಲ ಸಮಯ ಇಲ್ಲಿದ್ದರೆಂದು ಹೇಳಲಾಗುತ್ತದೆ.ತಮ್ಮ 13ವರ್ಷದ ವನವಾಸದಲ್ಲಿ ಅವರು ಅಲ್ಲಿನ ಅರಸು ವೀರವೃತರಾಯ ಅವರೊಂದಿಗೆ ಸೇರಿ ಕೌರವರೊಂದಿಗೆ ಸೆಣಸಿ ನಂತರ ಕುರುಸೇತ್ರ ಯುದ್ದಕ್ಕೆ ತೆರಳಿದರೆಂದು ಹೇಳಲಾಗುತ್ತದೆ.

ರತ್ನಾಗಿರಿ ಮುನ್ಸಿಪಾಲ್ಟಿ

ಬದಲಾಯಿಸಿ

ರತ್ನಾಗಿರಿಯ ಮುನ್ಸಿಪಾಲ್ಟಿಯು [] 1876 ರಲ್ಲಿ ಆರಂಭಗೊಂಡಿತು.ಸದ್ಯದ ಅದರ ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ಶೆಟ್ಟೆ, ಅವರು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದವರು.

ರತ್ನಾಗಿರಿ ಮತ್ತು ಸುತ್ತಮುತ್ತಲಿನ ಕೈಗಾರಿಕೆಗಳು

ಬದಲಾಯಿಸಿ
  • ಭಾರತಿ ಶಿಪ್ ಯಾರ್ಡ್ ಲಿಮಿಟೆಡ್.
  • ಫಿನೊಲೆಕ್ಸ್ ಇಂಡಸ್ಟ್ರೀಸ್ .
  • JSW ಎನರ್ಜಿ ಲಿಮಿಟೆಡ್.
  • JSW ಜೇಗ್ರಹ ಪೊರ್ಟ್ ಲಿಮಿಟೆಡ್.
  • ಗಾದ್ರೆ ಮರೈನ್ ರಫ್ತು ಪ್ರಾವೇಟ್ ಲಿಮಿಟೆಡ್.
  • J K ಫೈಲ್ಸ ಲಿಮಿಟೆಡ್.
  • ನರ್ಮದಾ ಸೆಮೆಂಟ್ ಲಿಮಿಟೆಡ್.
  • ಅಲ್ಟ್ರಾ ಸಿಮೆಂಟ್.
  • ರತ್ನಾಗಿರಿಯ ಹತ್ತಿರದಲ್ಲಿ ಎರಡುMIDCಗಳು,ಅಂದರೆ ಒಂದು ಮಿರ್ಜೊಲೆನಲ್ಲಿ ಇನ್ನೊಂದು ಜಡಗಾಂವ್
  • ದಿ ಭಾರತ್ ಅಲ್ಯುಮಿನಿಯಮ್ ಕಂಪನಿ ಲಿಮಿಟೆಡ್. ಬಾಲ್ಕೊ) []

ಮರೈನ್ ಬಯೊಲಾಜಿಕಲ್ ರಿಸರ್ಚ್ ಸ್ಟೇಶನ್

ಬದಲಾಯಿಸಿ

ಮಹಾರಾಷ್ಟ್ರಾ ಸರ್ಕಾರವು ಮೀನುಗಾರಿಕೆಯ ಇಲಾಖೆಯ ಮೂಲಕ ಮರೈನ್ ಬಯೊಲಾಜಿಕಲ್ ರಿಸರ್ಚ್ ಸ್ಟೇಶನ್ (MBRS)ನನ್ನು 1958ರಲ್ಲಿ ಆರಂಭಿಸಿತು.ಸದ್ಯ ಇದು ರತ್ನಾಗಿರಿ ಜಿಲ್ಲೆಯ ದಾಪೊಳ್ ನಲ್ಲಿರುವ ಡಾ.ಬಾಳಾಸಾಹೇಬ್ ಸಾವಂತ ಕೊಂಕಣ ಕೃಷಿ ವಿದ್ಯಾಪೀಠದ ಅಡಿಯಲ್ಲಿದೆ. ಈ ರಿಸರ್ಚ್ ಸ್ಟೇಶನ್ 10ಹೆಕ್ಟೇರ್ ಜಮೀನಲ್ಲಿದ್ದು ಮೂರು ಅಂತಸ್ತಿನ ಕಟ್ಟಡದೊಳಗೆ ಕಚೇರಿ ನಡೆಯುತ್ತಿದೆ.'ಆಧುನಿಕ ಮೀನು ಸಂಗ್ರಾಹಾಗರ ಮತ್ತು ವಸ್ತು ಸಂಗ್ರಾಹಲಯ' ಮೀನಿನ ಫಾರ್ಮ್ ಯಾಂತ್ರಿಕ ಮೀನುಗಾರಿಕೆ ಮತ್ತು ರಿಸರ್ಚ್ ವೆಸ್ಸಲ್ ,ಸೀಡ್ ಪ್ರಾಡಕ್ಷನ್ ವ್ಯವಸ್ಥೆ ಅಲ್ಲದೇ ಹಲವಾರು ಪ್ರಯೋಗಾಲಯಗಳಿವೆ.

ರತ್ನಾಗಿರಿಯ ಬಯೊಲಾಜಿಕಲ್ ರಿಸರ್ಚ್ ಸ್ಟೇಶನ್ ಇನ್ ಸ್ಟಿಟಟ್ಸ್ ಗಳು ವಿಶೇಷವಾಗಿ ದಕ್ಷಿಣ ಕೊಂಕಣ ಕರಾವಳಿ ಫಿಶರೀಸ್ ಜೋನ್ ಇವುಗಳಲ್ಲಿ ಮೀನು ಉತ್ಪಾದನೆಗೆ ಒತ್ತು ಕೊಡಲಾಗಿದೆ.ಮೀನು ಉದ್ಯಮದಲ್ಲಿ ವೃತ್ತಿಪರತೆಯು ಎದ್ದು ಕಾಣುತ್ತಿದೆ.ಇದರಲ್ಲಿ ತರಬೇತಿ ಪಡೆದ ಮಾನವ ಸಂಪನ್ಮೂಲದ ಬಳಕೆಯು ಇಂದಿನ [] ಅಗತ್ಯವಾಗಿದೆ. ರತ್ನಾಗಿರಿಯ ವಾಡ್ಮರಿಯಾದಲ್ಲಿ ಬೀಜೋತ್ಪಾದನಾ ಕೇಂದ್ರದಲ್ಲಿ ಟೈಗರ್ ಶ್ರಿಂಪ್ ಉತ್ಪಾದನಾ ಘಟಕವಿದೆ. ಇದು ಚಿಕ್ಕ ರೇವು-ಬಂದರುವಿನಲ್ಲಿ 57ಹೆಕ್ಟೇರ್ ನಳ್ಳಿ ವ್ಯಾಪಿಸಿದೆ. ಈ ಯೋಜನೆಗೆ ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್ ,ನ್ಯುವ್ ದೆಹಲಿ ಇದಕ್ಕೆ ಹಣಕಾಸಿನ ನೆರವು ಒದಗಿಸಿದೆ.

ಸಾರಿಗೆ

ಬದಲಾಯಿಸಿ

ರಸ್ತೆ ಸಾರಿಗೆ

ಬದಲಾಯಿಸಿ

ರತ್ನಾಗಿರಿಯು ಮುಂಬಯಿಗೆ ಸಂಪರ್ಕ ಹೊಂದಿದೆ.ಅದರಂತೆ is connected by road to Mumbai, ಮಂಗಳೂರು , ಮಡಗಾಂವ್ , ಕಾರವಾರ್, ಉಡುಪಿ ಮತ್ತು ಕೋಚಿನ್ ಇವೆಲ್ಲವೂ ರಾಷ್ಟ್ರೀಯ ಹೆದ್ದಾರಿ ನಂ17 ಮೂಲಕ ಸಂಪರ್ಕ ಅಂದರೆ (NH-17)ನಲ್ಲಿ ಸಾಧಿಸಿವೆ. ಇದೂ ಅಲ್ಲದೇ ಕೊಂಕಣ ರೈಲ್ವೆಯು ಈ ಪ್ರದೇಶಗಳಲ್ಲದೇ ದೆಹಲಿ ಮತ್ತು ಜೈಪುರ್ ಗಳಿಗೆ ಸಾರಿಗೆ ಸಂಪರ್ಕವಾಗಿದೆ. ರತ್ನಾಗಿರಿ ಸಣ್ಣ ಬಂದರನ್ನೂ ಕೂಡಾ ಹೊಂದಿದೆ. ಇಲ್ಲೊಂದು ವಿಮಾನ ನಿಲ್ದಾಣವಿದೆ ಆದರೆ ಇದಿನ್ನೂ ಕಾರ್ಯಪ್ರವೃತ್ತವಾಗಿಲ್ಲ.

ರತ್ನಾಗಿರಿ-ನಾಗಪುರ್ ರಾಷ್ಟ್ರೀಯ ಹೆದ್ದಾರಿ NH-204 connects ರತ್ನಾಗಿರಿಯಿಂದ ಹಲವಾರು ಮಹತ್ವದ ನಗರಗಳಾದ ಕೊಲ್ಹಾಪುರ್ ,ಸಾಂಗ್ಲಿ,ಸೋಲಾಪುರ್ ,ನಾಂದೇಡ್ ,ನಾಗಪುರ್ ಮತ್ತು ಭಾರತದ ಪೂರ್ವ ಭಾಗದ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ.

MSRTC ಯು ರತ್ನಾಗಿರಿಯಿಂದ ಅಂತರ್ ಸಾರಿಗೆ ವ್ಯವಸ್ಥೆಯನ್ನು ಮುಂಬಯಿ,ಪುಣೆ,ಸಾಂಗ್ಲಿ,ಕೊಲ್ಹಾಪುರ್ ಮತ್ತು ಗೋವಾಗಳಿಗೆ ಕಲ್ಪಿಸುತ್ತದೆ.

ರೈಲುಮಾರ್ಗ

ಬದಲಾಯಿಸಿ

ರತ್ನಾಗಿರಿ ಸ್ಟೇಶನ್ ಕೊಂಕಣ ರೈಲ್ವೆ ಮಾರ್ಗದಲ್ಲಿದೆ. ಕೊಂಕಣ ರೈಲ್ವೆಯ ಸ್ಟೇಶನ್ ಗಳಲ್ಲಿ ಅತಿ ಪ್ರಮುಖ ಸ್ಟೇಶನ್ ಇದಾಗಿದೆ. ಕೇಂದ್ರ ರೈಲ್ವೆಯ ಹತ್ತಿರದ ಜಂಕ್ಷನ್ ಗಳೆಂದರೆ ಪುಣೆ ಮತ್ತು ಕೊಲ್ಹಾಪುರ್ The ರತ್ನಾಗಿರಿ ರೈಲ್ವೆ ಸ್ಟೇಶನ್ ರತ್ನಾಗಿರಿ ನಗರದಿಂದ NH-204ಮೇಲೆ 6 ಕಿಲೊಮೀಟರ್ ಇದೆ. ಕೊಂಕಣ ರೈಲ್ವೆ ಮೇಲಿನ ಎಲ್ಲಾ ಟ್ರೇನ್ ಗಳು ರತ್ನಾಗಿರಿ ಸ್ಟೇಶನ್ ನಲ್ಲಿನಿಂತು ಹೋಗುವ ವಾಡಿಕೆ ಇದೆ. MSRTC ಯು ಸ್ಟೇಶನ್ ನಿಂದ ಹಲವಾರು ಬಸ್ ಗಳನ್ನು ನಗರಕ್ಕೆ ಓಡಿಸುತ್ತದೆ. ರತ್ನಾಗಿರಿಜಿಲ್ಲೆಯ ಇನ್ನುಳಿದ ಮಹತ್ವದ ಸ್ಟೇಶನ್ ಗಳೆಂದರೆ ಚಿಪ್ಲನ್ ,ಖೆಡ್ ,ಮತ್ತು ವಿಠಲವಾಡಿ. ನೀವು ರತ್ನಾಗಿರಿಗೆ ರೈಲಿಗಾಗಿ ಮುಂಗಡ ಕಾದಿರಿಸಲು ಒಂದು ತಿಂಗಳು ಮುಂಚೆ ಟಿಕೆಟ್ ಮಾಡಿಸಬೇಕಾಗುತ್ತದೆ.ಯಾಕೆಂದರೆ ಬಹಳಷ್ಟು ದಿನಗಳು ರೈಲ್ವೆಗಳು ಫುಲ್ ಆಗಿರುತ್ತವೆ.

ಪ್ರಮುಖ ಆಕರ್ಷಣೆಗಳು

ಬದಲಾಯಿಸಿ

ರಾಜ್ ಪುರ್ ಗಂಗಾ: ರಾಜ್ ಪುರ್ ಗಂಗಾದ ಪ್ರೇಕ್ಷಣೀಯ ಸ್ಥಳವು ರಾಜ್ ಪುರ್ ದಿಂದ ಸುಮಾರು ಮೂರು ಕಿ.ಮಿ ದೂರವಿದೆ. ಭೂವಿಜ್ಞಾನಿಗಳ ಪ್ರಕಾರ ಗಂಗಾ, ಸಮೀಪದ ಪರ್ವತದಿಂದ ನೈಸರ್ಗಿಕ ಧುಮ್ಮುಕ್ಕುವ ಒಂದು ಜಲಪಾತ.ಇಲ್ಲಿ ಹದಿನಾಲ್ಕು ಕಪ್ಪು ಶಿಲೆಯಲ್ಲಿ ನೀರಿನ ಕುಂಡಗಳಿವೆ.ಇವು ಸುಮಾರು 2.25ಅಡಿ ಆಳದಿದ್ದು ಆಯಾ ಪ್ರದೇಶದಲ್ಲಿ ಮೂರು ಅಡಿಗೊಂದರಂತೆ ಇಂತಹ ವಿಸ್ಮಯವನ್ನು ಕಾಣಬಹುದು. ರಾಜಪುರ್ ಗಂಗಾದ ಪರಿಮಳಯುಕ್ತ ನೀರು ಮೂರು ವರ್ಷದಲ್ಲಿ ಒಮ್ಮೆ ಕಾಣಿಸಿಕೊಳ್ಳುತ್ತದೆ,ಇದು ಒಂದರಲ್ಲಿ ಕಾಣಿಸಿ ಸುಮಾರು ಎರಡು ತಿಂಗಳ ಕಾಲ ಇರುತ್ತದೆ. ಈ ಹದಿನಾಲ್ಕು ಕುಂಡಾಗಳಲ್ಲಿನ ನೀರಿನ ಉಷ್ಣತೆಯು ಭಿನ್ನವಾಗಿರುತ್ತದೆ.

ರತ್ನಾಗಿರಿಯಿಂದ 70 ಕಿ.ಮಿ ದೂರದಲ್ಲಿರುವ ಮರಳೇಶ್ವರ ಶಿವನ ದೇವಾಲಯವು ಹಿಂದುಗಳ ಒಂದು ಪವಿತ್ರ ಸ್ಥಳ.ಈ ದೇವಾಲಯವು ಗವಿಯೊಳಗಿದೆ. ಗವಿ ಹತ್ತಿರ ಜಲಪಾತವೂ ಒಂದಿದೆ.ಹಿಂದುಗಳ ಪ್ರಕಾರ ಶಿವನು ಮರಳ ಹಳ್ಳಿಯಿಂದ ಮರಳೇಶ್ವರಕ್ಕೆ ತೆರಳುತ್ತಾನೆ,ಯಾವಾಗ ಮೊಗಲ್ ಚಕ್ರವರ್ತಿ ಕೊಂಕಣ ಭಾಗದ ಹಿಂದೂ ದೇವಸ್ಥಾನಗಳನ್ನು ನಾಶಪಡಿಸಲು ಹೋದಾಗ ಈ ಘಟನೆ ಸಂಭವಿಸಿದೆ ಎಂದು ಹಿಂದೂಗಳು ನಂಬುತ್ತಾರೆ.

ಥಿಬಾ ಅರಮನೆ :ಥಿಬಾ ಅರಮನೆಯನ್ನು 1910-11ರಲ್ಲಿ ಕಟ್ಟಲಾಗಿದ್ದು ಬರ್ಮಾದ (ಮಯನ್ಮಾರ್ )ರಾಜ ಮತ್ತು ರಾಣಿಯರು ತಮ್ಮ ಅಜ್ಞಾತ ವಾಸವನ್ನು 1911-16ರ ವರೆಗೆ ಕಳೆದಿದ್ದಾರೆ. ಈ ಜಾಗೆಯು ಈ ರಾಜದಂಪತಿಯ ಗೋರಿಗಳನ್ನು ಹೊಂದಿದೆ. ರತ್ನಾಗಿರಿಯ ಸರ್ಕಾರಿ ಪಾಲಿಟೆಕ್ನಿಕ್ ಕೆಲವರ್ಷಗಳ ಕಾಲ ಥಿಬಾ ಅರಮನೆಯಲ್ಲಿ ನಡೆದು ನಂತರ ತನ್ನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು.

ಮಾಂಡವಿ ಮತ್ತು ಭಾತ್ಯೆ ಬೀಚ್ : ಇವೆರಡೂ ರತ್ನಾಗಿರಿಯಲ್ಲಿ ಪ್ರಸಿದ್ದ ಕಡಲಕಿನಾರೆಗಳಾಗಿವೆ.ಮಾಂಡವಿ ಕಡಲ ಕಿನಾರೆಯನ್ನು ರತ್ನಾಗಿರಿಯ ಮುಖ್ಯ ದ್ವಾರ ಎಂದು ಕರೆಯಲಾಗುತ್ತದೆ. ಭಾತ್ಯ್ ಕಡಲ ಕಿನಾರೆಯಲ್ಲಿ ಯಾವುದೇ ಚಟುವಟಿಕೆಗಳಿದ್ದರೂ ಅದನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತದೆ.ಪ್ರಸಿದ್ದ ಕೋಹಿನೂರ್ ಹೊಟೆಲ್ ಭಾತ್ಯಾ ಬೀಚ್ ನ ಮೇಲ್ಭಾಗದಲ್ಲಿದೆ.

ಮಿರ್ಕರ್ ವಾಡಾ ಬೀಚ್  : ಇದು ನೌಕಾಯಾನದ ವೃತ್ತಿಪರರಿಗೆ ಹೇಳಿಮಾಡಿಸಿದ ಕರಾವಳಿ ಸ್ಟೇಶನ್ ,ಎಲ್ಲಾ ಮೀನುಗಾರಿಕೆ ದೋಣಿಗಳು ಮತ್ತು ಜಲಸಾರಿಗೆಯ ಸೌಲಭ್ಯಗಳಿಗೆ ಇಲ್ಲಿ ತಂಗುದಾಣವಾಗಿದೆ. ನೌಕಾ ಉದ್ಯಮಕ್ಕೆ ರತ್ನಾಗಿರಿ ಪ್ರಮುಖ ವ್ಯಾಪಾರಿ ಸ್ಥಳವೆನಿಸಿದೆ. ಇಲ್ಲಿನ ಬಹುತೇಕ ಮೀನುಗಳನ್ನು -ಮುಂಬಯಿ,ಪುಣೆ,ಗೋವಾ,ಬೆಂಗಳೂರು,ಮಂಗಳೂರು ನಗರ ಮಾರುಕಟ್ಟೆಗಳಿಗೆ ಸಾಗಿಸಲಾಗುತ್ತದೆ.

ಮಾಳಗುಂದ್ : ಪ್ರಖ್ಯಾತ ಮರಾಠಿ ಕವಿ, ಕೇಶವಸುತ , ಇಲ್ಲಿಗೆ ಸಮೀಪದ ಮಾಳಗುಂದದಾಲಿ ಜನಿಸಿದರು. ಇತ್ತೀಚಿಗೆ ಈ ಕವಿಯ ನಿವಾಸವನ್ನು ನವೀಕರಿಸಿ ವಿದ್ಯಾರ್ಥಿಗಳ ವಸತಿ ನಿಲಯ ಮಾಡಲಾಗಿದೆ. "ಮರಾಠಿ ಸಾಹಿತ್ಯ ಅಪರಿಷದ್ "(ಮರಾಠೇ ಲಿಒಟರೇಚರ್ ಸೊಸೈಟಿ)ಯು"ಕೇಶವಸುತ ಸ್ಮಾರಕ"ವನ್ನು ಮಾಳಗುಂದದಲ್ಲಿ ನಿರ್ಮಿಸಿದೆ.

ಜೈಗಢ್ :ಇದು 17ನೆಯ ಶತಮಾನದ ಕೋಟೆಯು ಸಂಗಮೇಶ್ವರ್ ನದಿಯ ಮುಖಭಾಗದಲ್ಲಿದ್ದು ಸಮುದ್ರದ ಅತ್ಯಾಕರ್ಷಕ ನೋಟವೆನಿಸಿದೆ. ಜಯ್ ಗಢನ ಸಮುದ್ರ ಕೋಟೆಯು ಅಲ್ಲಿನ ಕೊಲ್ಲಿಯ ತಟದಲ್ಲಿದ್ದು ಅದಕ್ಕೆ ಆಶ್ರಯ ನೀಡಿದೆ.

ಪವಾಸ್: ಇದು ತನ್ನದೇ ಆದ ನೈಸರ್ಗಿಕ ಸೌಂದರ್ಯವನ್ನು ಒಳಗೊಂಡಿದೆ. ಸ್ವಾಮಿ ಸ್ವರೂಪಾನಂದರು ತಮ್ಮ ಧಾರ್ಮಿಕ ಪ್ರಭಾವವನ್ನು ಗಾಢವಾಗಿ ಬಿಟ್ಟಿದ್ದಾರೆ.ಮಹಾರಾಷ್ಟ್ರದಲ್ಲಿನ ಧಾರ್ಮಿಕ ನಾಯಕರು ಇಲ್ಲಿಯೇ ವಾಸವಾಗಿದ್ದಾರೆ. ಆತನ ನಿವಾಸವಿ ಇಂದು "ಆಶ್ರಮ"ವಾಗಿ ಅದು ಪರಿವರ್ತನೆಯಾಗಿದೆ.

ಅತುಲಿತ ಬಾಲ ಧಾಮ  : ಅತುಲಿತ ಬಾಲ ಧಾಮ ಇದೊಂದು ಪವಿತ್ರ ಸ್ಥಳ. ಈ ಪವಿತ್ರ ಧಾಮವನ್ನು ಸದ್ಗುರು ಶ್ರೀ ಅನಿರುದ್ದ ಉಪಾಸನಾ ಟ್ರಸ್ಟ್ ಮುಂಬಯಿ ನವರು ಆಡಳಿತ ನಿರ್ವಹಣೆಗೆ ತೆಗೆದುಕೊಂಡಿದ್ದಾರೆ. ಇದು TRP ಬಳಿಯ ಪೆಟ್ರೊಲ್ ಪಂಪ್ ಗೆ ಹೊಂದಿಕೊಂಡಿದ್ದು ರತ್ನಾಗಿರಿ ನಗರದಿಂದ ಕೇವಲ ಒಂದು ಕಿ.ಮಿ.ದೂರವಿದೆ. ಪಂಚಮುಖಿ ಹನುಮಾನ್ ಈ ಧಾಮದ ಮೂಲ ದೇವತೆ. ಸಾವಿರಾರು ಭಕ್ತರು ಈ ಧಾಮಕ್ಕೆ ಭೇಟಿ ಮಾಡಿದಾಗ ಅವರು (ದೈಹಿಕ,ಮಾನಸಿಕ ಮತ್ತು ಧಾರ್ಮಿಕ ಬಲ)ವನ್ನು ಪಡೆದ ಉದಾಹರಣೆಗಳಿಗವೆ. ಈ ಒಟ್ಟು ಪ್ರದೇಶವು 2ಎಕರೆಗಳಿಷ್ಟಿದ್ದದು,ನೈಸರ್ಗಿಕವಾಗಿ ಸುಂದರವಾಗಿದೆಯಲ್ಲದೇ ಉಲ್ಲಾಸದಾಯಕವಾಗಿದೆ.

ವೆಲ್ನೆಶ್ವರ್ : ವೆಲ್ನೆಶ್ವರ್ ರತ್ನಾಗಿರಿಯಿಂದ 170ಕಿ.ಮಿ ದೂರದಲ್ಲಿದೆ. ಇದಕ್ಕೆ ಹೊಂದಿಕೊಂಡಂತೆ ಇರುವ ಬೀಚ್ ಸ್ವಚ್ಛ ,ಸುಂದರವಾಗಿದೆ,ದಂಡೆಗುಂಟು ತೆಂಗಿನ ಮರಗಳಿವೆ. ಇದರ ಹತ್ತಿರದ ಸಮುದ್ರದಲ್ಲಿ ಕಲ್ಲು ಬಂಡೆಗಳಿಲ್ಲದಿರುವುದರಿಂದ ಈಜಲು ಸುಲಭವಾಗಿದೆ. ಇಲ್ಲಿ ವೆಲ್ನೇಶ್ವರ್ ಹತ್ತಿರ ಸುಪ್ರಸಿದ್ದ ಶಿವಾ ದೇವಾಲಯವಿದೆ.

ರತ್ನ ದುರ್ಗ: ಇದನ್ನು ಬಹುಮನಿ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿದೆ. ಇದನ್ನು 1670ರಲ್ಲಿ ಶಿವಾಜಿಯು ಬಿಜಾಪುರದ ಆಡಳಿತಗಾರ ಆದಿಲ್ ಷಾನಿಂದ ಗೆದ್ದುಕೊಂಡನು. ಧೊಂಡು ಭಾಸ್ಕರ್ ಪ್ರತಿನಿಧಿಯು 1790ರಲ್ಲಿ ಈ ಕೋಟೆಯನ್ನು ಮರುನಿರ್ಮಿಸಿದನಲ್ಲದೇ ಅದರ ಮುಖ್ಯ ಭಾಗಗಳನ್ನು ಬಲಪಡಿಸಿದ. ಈ ಕೋಟೆಯು ಕುದರೆಯ ಲಾಳದ ಆಕಾರದಂತಿದೆ.ಉದ್ದ1,300ಮೀಟರ್ ಮತ್ತು 1,000ಮೀಟರ್ ಅಗಲವಿದೆ. ಇದರ ಮೂರೂ ಕಡೆಯಿಂದಲೂ ಅರೇಬಿಯನ್ ಸಮುದ್ರ ಸುತ್ತುವರೆದಿದೆ. ಇದರ ಬುರುಜುಗಳಲ್ಲೊಂದಾದ "ಸಿದ್ದ ಬುರುಜು"ವಿನಲ್ಲಿ ಲೈಟ್ ಹೌಸ್ ಇದ್ದು ಇದನ್ನು ಸುಮಾರು 1867ರಲ್ಲಿ ನಿರ್ಮಿಸಲಾಗಿದೆ.ಇತ್ತೀಚಿಗೆ 1962ರಲ್ಲಿ ಅದಕ್ಕೆ ಸದ್ಯದ ರೂಪ ನೀಡಿ ಮರುನಿರ್ಮಿಸಲಾಗಿದೆ. ಈ ಕೋತೆಯೊಳಗಡೆ ಭಗವತಿ ದೇವಿಯ ಅತ್ಯಂತ ಮನಮೋಹಕ ಸಚಿತ್ರ ಕೆತ್ತನೆಯ ದೇವಾಲಯವಿದೆ.

ಗಣಪತಿಪುಲೆ: ಗಣಪತಿಪುಲೆಯು ಅತ್ಯಂತ ಸ್ವಚ್ಛ ಸಮುದ್ರ ಕಿನಾರೆಯನ್ನು ಹೊಂದಿದೆ. "ಪೂರ್ಣ ಗಢ"ಕ್ಕೆ ಹೋಗುವ ದಾರಿಯಲ್ಲಿ ರತ್ನಾಗಿರಿಯಿಂದ 21ಕಿ.ಮಿ ದೂರವಿದೆ. ಇಲ್ಲಿ ಅತ್ಯಂತ ಪರಿಚಿತ ಗಣೇಶ ದೇವಾಲಯವಿದೆ.

ಪರುಷರಾಮ ದೇವಾಲಯ (near ಚಿಪ್ಲುನ್ ಹತ್ತಿರ): ಇದು 1685ರಲ್ಲಿ ಮಹರ್ಷಿ ಬ್ರಹ್ಮೆಂದ್ರ ಅವರು ನಿರ್ಮಿಸಿದ ದೇವಾಲಯವಾಗಿದೆ.

ಶಿವ ಸಮರ್ಥ ಗಢ: (ಸ್ವವರ್ದೆ ಹತ್ತಿರ ಚಿಪ್ಲುನ್)ಶಿವಾಜಿ ಕಾಲದ ಶಿಲ್ಪಕೆತ್ತನೆ ಕಲೆಗಳನ್ನು ಹೊಂದಿದೆ.

ಗವಿಗಳಿರುವ ಚಿಪ್ಲುನ್ , ಖೆಡ್ , ದಾಬೊಲ್ , ಸಂಗಮೇಶ್ವರ , ಗೌಹಾನಿ ವೆಳಗಾಂವ್, ಮತ್ತು ವಾಡೆ ಪಡೆಲ್: ಬುದ್ದನ ಹೆಗ್ಗುರುತುಗಳಾದ ಪಪಾಂಚ್, ಸುಡಾನ್, ಮತ್ತು ಸ್ರತ್ ಅಪ್ಪಾಕಾಸಿನಿಗಳಲ್ಲಿ ಗೌತಮನ ಕಾಲದ (BC 560-481)ರಲ್ಲಿ ಕೊಂಕಣ ಪ್ರದೇಶದ ಹಲವರು ಬುದ್ದ ಧರ್ಮಕ್ಕೆ ಪರಿವರ್ತಿತರಾದ ದಾಖಲೆಗಳಿವೆ. ಚಿಪ್ಲುನ್ ನಲ್ಲಿರುವ ಕೊ1 ಮತ್ತು ಪಬೊಲ್ ಅವರ ಪ್ರಕಾರ ಇವರೆಲ್ಲರೂ "ಸರ್ಥ್ ವಾಲಾಸ್ "ಅಂದರೆ (ಕಾರವಾನ್ -ಮೆನ್ ,ದಾರಿಹೋಕರು)ಕೆಲವರಿಲ್ಲ ವಾಸವಾಗಿದ್ದರು.

ಪ್ರವಾಸಕ್ಕೆ ಸಕಾಲ

ಬದಲಾಯಿಸಿ

ರತ್ನಾಗಿರಿಯನ್ನು ಜನವರಿಯಿಂದ- ಡಿಸೆಂಬರ್ ವರೆಗೂ ಇಲ್ಲಿಗೆ ಪ್ರವಾಸಿಗರು ಬರಬಹುದಾಗಿದೆ. ರತ್ನಾಗಿರಿಯು ಮಾವಿನ ತಳಿಯಾದ ಅಲ್ಫೊನ್ಸ್ ಮತ್ತು ಗೋಡಂಬಿಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧಿಕ ಬೇಡಿಕೆ ಇರುತ್ತದೆ.ಭಾರತದಲ್ಲೂ ಸಹ ಈ ಉತ್ಪನ್ನಗಳಿಗೆ ಅಗಾಧ ಬೇಡಿಕೆ ಇದೆ. ಅಲ್ಫೊನ್ಸ್ ಮತ್ತು ಗೋಡಂಬಿಗಳನ್ನು ಇಷ್ಟಪಡುವವರಾಗಿದ್ದರೆ ಏಪ್ರಿಲ್ -ಜೂನ್ ತಿಂಗಳಲ್ಲಿ ತಾವು ರತ್ನಾಗಿರಿಗೆ ಭೇಟಿ ನೀಡಿದರೆ ಆಗ ಅವುಗಳು ನಿಮಗೆ ಸಮೃದ್ಧವಾಗಿ ದೊರೆಯುತ್ತವೆ.

ನೀವು ನಿಸರ್ಗ ಪ್ರಿಯರಾಗದ್ದರೆ ವರ್ಷಧಾರೆಯನ್ನು ಸವಿಯ ಬಯಸಿದರೆ ರತ್ನಾಗಿರಿಗೆ ಬನ್ನಿ ಮತ್ತೆ ಮತ್ತೆ ಬನ್ನಿ ಯಾಕೆಂದರೆ ಕೊಂಕಣದ ರತ್ನಾಗಿರಿ ಸತತ ಧಾರಾಕಾರ ಮಳೆಗೆ ಪ್ರಖ್ಯಾತವಾಗಿದೆ. ಜೂನ್ -ಮಾರ್ಚ್ ತಿಂಗಳಲ್ಲಿ ಅತ್ಯುತ್ತಮ ಉಲ್ಲಾಸಮಯವಾದ ಹವಾಗುಣ ಸವಿಯಲು ಇಲ್ಲಿಗೆ ಬರಬಹುದು.ಸುಂದರ ಮೋಡಗಳು,ಪರ್ವತಗಳು,ನಿಬಿಡ ಜಲಪಾತಗಳು ಎಲ್ಲರನ್ನೂ ಆಕರ್ಷಿಸುತ್ತವೆ.ರೈಲ್ವೆ,ಕಾರು,ಬಸ್ ಇತ್ಯಾದಿಗಳಲ್ಲಿಆಗಮಿಸಿ ತಾವಿಲ್ಲಿ ಬಿಡಾರ ಹೂಡಬಹುದು.

ನೀವು ಕಡಲಕಿನಾರೆಯನ್ನು ಇಷ್ಟಪಡುವವರಾಗಿದ್ದರೆ ಡಿಸೆಂಬರ್ -ಮೇ ತಿಂಗಳಲ್ಲಿ ತಾವು ಇಲ್ಲಿಗೆ ಪ್ರವಾಸ ಕೈಗೊಂಡರೆ ಕೊಂಕಣ ಪ್ರದೇಶದ ಶಾಂತ ಬೀಚ್ ಗಳನು ಆಸ್ವಾದಿಸಬಹುದು. ಜೂನ್ ತಿಂಗಳಿನಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಬೀಚ್ ಗಳಲ್ಲಿ ಅತಿ ಹೆಚ್ಕಿನ ಅಲೆಗಳ ಸೌಂದರ್ಯ ಸವಿಸಬಹುದು.

ಇವನ್ನೂ ಗಮನಿಸಿ

ಬದಲಾಯಿಸಿ
ರತ್ನಾಗಿರಿ (RN)
ಮುಂಬಯಿನೆಡೆಗೆ ಮುಂದಿನ 'ಸಣ್ಣ' ಸ್ಟೇಶನ್ :
ಭೊಕೆ
ಕೊಂಕಣ ರೈಲ್ವೆ  : ರೈಲ್ವೆ (ಭಾರತ) ಮುಂಬಯಿನಿಂದ ಮುಂದಿನ 'ಸಣ್ಣ' ಸ್ಟೇಶನ್ :
ನಿವಾಸರ್
ಮುಂಬಯಿನಿಂದ ದೂರ (CST) = 0431 ಕಿ.ಮೀ
ಮುಂಬಯಿನೆಡೆಗೆ ಮುಂದಿನ 'ಪ್ರಧಾನ' ಸ್ಟೇಶನ್ :
ಚಿಪ್ಲುನ್
ಕೊಂಕಣ ರೈಲ್ವೆ  : ರೈಲ್ವೆ (ಭಾರತ) ಮುಂಬಯಿನಿಂದ ಮುಂದಿನ 'ಪ್ರಧಾನ' ಸ್ಟೇಶನ್ :
ಕೂಡಲ

ಚಿತ್ರಸಂಪುಟ

ಬದಲಾಯಿಸಿ

ಆಕರಗಳು

ಬದಲಾಯಿಸಿ

ಬಾಹ್ಯ ಕೊಂಡಿಗಳು

ಬದಲಾಯಿಸಿ