ಸಂಗಮೇಶ್ವರ್ ತಾಲ್ಲೂಕು ಮಹಾರಾಷ್ಟ್ರ ರಾಜ್ಯದ ರತ್ನಗಿರಿ ಜಿಲ್ಲೆಯ ರತ್ನಗಿರಿ ಉಪವಿಭಾಗದಲ್ಲಿನ ಒಂದು ತಾಲ್ಲೂಕಾಗಿದೆ. ತಾಲ್ಲೂಕಿನ ಮುಖ್ಯಸ್ಥಾನ ದೇವ್‍ರುಖ್ ಪಟ್ಟಣವಾಗಿದೆ.[] ಸಂಗಮೇಶ್ವರ್‌ನಲ್ಲಿ ಸೋನಾವಿ ಮತ್ತು ಶಾಸ್ತ್ರಿ ನದಿಗಳು ಒಟ್ಟಾಗಿ ಹರಿಯುತ್ತವೆ. ಹೀಗೆ ಎರಡು ನದಿಗಳು ಕೂಡುವುದರಿಂದ "ಸಂಗಮೇಶ್ವರ್" ಎಂಬ ಹೆಸರು ಬಂದಿದೆ. ಇದು ಛತ್ರಪತಿ ಶಿವಾಜಿಯ ಮಗ ಸಾಂಭಾಜಿಯನ್ನು ಮುಘಲ್ ಸಾಮ್ರಾಟ ಔರಂಗ್‍ಜ಼ೇಬ್ ಸೆರೆಹಿಡಿದ ಸ್ಥಳವೆಂದು ಐತಿಹಾಸಿಕವಾಗಿ ಮಹತ್ವದ್ದಾಗಿದೆ.[] ಛತ್ರಪತಿ ಸಾಂಭಾಜಿಗೆ ತುಳಾಪುರ್‌ನಲ್ಲಿ ಚಿತ್ರಹಿಂಸೆ ಕೊಟ್ಟು ಅವನನ್ನು ಗಲ್ಲಿಗೇರಿಸಲಾಯಿತು.

ಆಕರ್ಷಣೆಗಳು

ಬದಲಾಯಿಸಿ
 
ಮಾರ್ಲೇಶ್ವರ್ ದೇವಾಲಯದ ಪ್ರವೇಶದ್ವಾರ.
  • ಮಾರ್ಲೇಶ್ವರ್ ಗುಹಾ ಶಿವ ದೇವಸ್ಥಾನ, ದೇವ್‍ರುಖ್‍ನಿಂದ ೧೭ ಕಿ.ಮಿ. ದೂರದಲ್ಲಿ ಸಹ್ಯಾದ್ರಿ ಪರ್ವತಶ್ರೇಣಿಯಲ್ಲಿ ಸ್ಥಿತವಾಗಿರುವ ಒಂದು ಗುಹಾ ದೇವಾಲಯ.

ಛಾಯಾಂಕಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. The headquarters was moved from the village of Sangameshwar to Devrukh in 1878."Devrukh". Ratnagiri District. Archived from the original on 2018-02-27. Retrieved 2020-06-30.
  2. Alexander Mikaberidze (31 July 2011). Conflict and Conquest in the Islamic World: A Historical Encyclopedia. ABC-CLIO. p. 609. ISBN 978-1-59884-337-8. Retrieved 6 March 2012.