ಯೋಹನ್ ಜೇಕಬ್ ಬಾಮರ್

ಗಣಿತಜ್ಞ

ಯೋಹನ್ ಜೇಕಬ್ ಬಾಮರ್ (1825-98) ಒಬ್ಬ ಸ್ವಿಸ್ ಗಣಿತವಿದ ಮತ್ತು ಭೌತವಿಜ್ಞಾನಿ.[೧][೨]

ಜನನ, ವಿದ್ಯಾಭ್ಯಾಸ ಬದಲಾಯಿಸಿ

ಸ್ವಿಟ್ಸರ್ಲೆಂಡಿನ ಬ್ಯಾಸೆಲ್-ಲ್ಯಾಂಡಿನಲ್ಲಿ ಜನನ (1-5-1825), ಬಾಸೆಲಿನಲ್ಲಿ ಮರಣ (12-3-1898). ಗಣಿತದಲ್ಲಿ ಡಾಕ್ಟೊರೇಟ್ ಪಡೆದು (1849) ಶಾಲಾ ಶಿಕ್ಷಕ ವೃತ್ತಿ ಹಿಡಿದ.

ಸಾಧನೆಗಳು ಬದಲಾಯಿಸಿ

ಭೌತವಿಜ್ಞಾನದಲ್ಲಿ ಈತನು ಅನಂತರದ ದಿನಗಳಲ್ಲಿ ಬಾಮರನ ಸೂತ್ರವೆಂದು ಪ್ರಸಿದ್ಧವಾದ ಬೈಜಿಕ ಸೂತ್ರವನ್ನು ನೀಡಿದ (1885).[೩][೪]

 

ಇಲ್ಲಿ λ ಹೈಡ್ರೊಜನ್ ರೋಹಿತದಲ್ಲಿ (ಸ್ಪೆಕ್ಟ್ರಮ್) ಕಂಡುಬರುವ ರೇಖೆಯ ಅಲೆಯುದ್ದವನ್ನು ಆ್ಯಂಗ್‍ಸ್ಟ್ರಾಮ್ ಮಾನದಲ್ಲಿ ಪ್ರತಿನಿಧಿಸುತ್ತದೆ. n=2, m=3,4, 5… ಮತ್ತು h=3645.6x10-8 ಸೆಂಮೀ. ಇದೊಂದು ಅನುಭವಜನ್ಯ ಸೂತ್ರ.

ಆ್ಯಂಗ್‌ಸ್ಟ್ರಾಮ್ ಪ್ರಾಯೋಗಿಕವಾಗಿ ವೀಕ್ಷಿಸಿದ್ದ ನಾಲ್ಕು ಹೈಡ್ರೋಜನ್ ರೋಹಿತ ರೇಖೆಗಳ ಅಲೆಯುದ್ದಗಳನ್ನು ಬಾಮರ್ ಈ ಸೂತ್ರದಿಂದ ಪರಿಕಲಿಸಿ ಅವು ವಾಸ್ತವ ಅಲೆಯುದ್ದಗಳೊಡನೆ ನಿಷ್ಕೃಷ್ಟವಾಗಿ ಹೊಂದುತ್ತವೆ ಎಂದು ತೋರಿಸಿದ. ಮುಂದೆ ತನ್ನ ಸೂತ್ರದಿಂದ ಇನ್ನೂ ಅನೇಕ ಹೈಡ್ರೋಜನ ರೇಖೆಗಳ ಅಲೆಯುದ್ದಗಳನ್ನು ಪರಿಕಲಿಸಿದ. ಈ ರೇಖೆಗಳನ್ನು ಪ್ರಾಯೋಗಿಕವಾಗಿ ವೀಕ್ಷಿಸಿ ಸ್ಥಿರೀಕರಿಸಲಾಯಿತು. ಇವು ಪರಿಕಲಿತ ಅಲೆಯುದ್ದಗಳೊಡನೆ 1000 ದಲ್ಲಿ 1 ಭಾಗದಷ್ಟು ನಿಖರತೆಯಿಂದ ಹೊಂದುತ್ತಿದ್ದುವು.

ಬಾಮರನ ಸೂತ್ರ ಮುಂದೆ ಇನ್ನೂ ಅನೇಕ ಪರಮಾಣುಗಳ ರೋಹಿತ ರೇಖೆಗಳನ್ನು ಕುರಿತಂತೆ ಕೂಡ ಇಂಥ ಅನುಭವಜನ್ಯ ಸೂತ್ರಗಳಿಗೆ ಎಡೆ ಹಾಸಿಕೊಟ್ಟಿತು. ಸ್ವತಃ ಬಾಮರನೇ ತನ್ನ ಸೂತ್ರದಲ್ಲಿ n ಗೆ 2 ಕ್ಕಿಂತ ಭಿನ್ನ ಪೂರ್ಣಾಂಕಗಳನ್ನು ಕೊಡುತ್ತ ಹೋದರೆ ಹೈಡ್ರೊಜನ್ ಪರಮಾಣುವಿನ ಅತಿನೇರಳೆ ಮತ್ತು ಅತಿರಕ್ತ ರೋಹಿತರೇಖೆಗಳು ದೊರೆಯುತ್ತವೆಂದು ಪ್ರತಿಪಾದಿಸಿದ. ಮುಂದೆ ಇವೇ ಲೈಮಾನ್, ಪಾಶ್ಚನ್ (Paschen), ಬ್ರ್ಯಾಕೆಟ್ (Brackett) ಮತ್ತು ಫಂಡ್ (Pfund) ಶ್ರೇಣಿಗಳೆಂದು ಪ್ರಸಿದ್ಧಿ ಪಡೆದುವು. ಬಾಮರನ ಸೂತ್ರವನ್ನೇ ಮಾದರಿಯಾಗಿಟ್ಟುಕೊಂಡು ರಿಡ್ಬರ್ಗ್, ಕೈಸರ್ ಮತ್ತು ರುಂಗೆ ಅವರು ಇನ್ನೂ ಹೆಚ್ಚು ವ್ಯಾಪಕ ಶ್ರೇಣಿಸೂತ್ರಗಳನ್ನು ಕೊಟ್ಟರು.

ಉಲ್ಲೇಖಗಳು ಬದಲಾಯಿಸಿ

  1. Britannica, The Editors of Encyclopaedia. "Johann Jakob Balmer". Encyclopedia Britannica, 30 Apr. 2024, https://www.britannica.com/biography/Johann-Jakob-Balmer. Accessed 19 May 2024.
  2. "Balmer, Johann Jakob ." Complete Dictionary of Scientific Biography. . Encyclopedia.com. 16 May. 2024 <https://www.encyclopedia.com>.
  3. Balmer, J. J. (1885). "Notiz über die Spectrallinien des Wasserstoffs" [Note on the spectral lines of hydrogen]. Annalen der Physik und Chemie. 3rd series (in German). 25: 80–87.{{cite journal}}: CS1 maint: unrecognized language (link)
  4. Magie, William Francis (1969). A Source Book in Physics. Cambridge, Massachusetts: Harvard University Press. p. 360

ಹೊರಗಿನ ಕೊಂಡಿಗಳು ಬದಲಾಯಿಸಿ


 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: