ಮ್ಯಾಕ್ ಬೆತ್
ಮ್ಯಾಕ್ ಬೆತ್ ನ ದುರಂತ (ಸಾಮಾನ್ಯವಾಗಿ ಮ್ಯಾಕ್ ಬೆತ್ ಎಂದೇ ಗುರುತಿಸಲ್ಪಡುತ್ತದೆ) ವಿಲಿಯನ್ ಷೇಕ್ಸ್ ಪಿಯರ್ ಬರೆದ ರಾಜಹತ್ಯೆಮತ್ತು ನಂತರದ ಪರಿಣಾಮಗಳನ್ನು ಕುರಿತಾದ ನಾಟಕ. ಇದು ಷೇಕ್ಸ್ ಪಿಯರ್ ಬರೆದ ಅತಿ ಚಿಕ್ಕ ದುರಂತನಾಟಕವಾಗಿದೆ ಹಾಗೂ ಇದನ್ನು 1603ರಿಂದ 1607ರ ನಡುವೆ ಬರೆಯಲ್ಪಟ್ಟಿದೆಯೆಂದು ನಂಬಲಾಗಿದೆ. ಪ್ರಾಯಶಃ ಇದು ಷೇಕ್ಸ್ ಪಿಯರ್ ರ ನಾಟಕವಾಗಿದ್ದು, ಇದನ್ನು ರಂಗದ ಮೇಲೆ ಮೊದಲ ಬಾರಿಗೆ ಪ್ರದರ್ಶಿಸಿದುದರ ಉಲ್ಲೇಖವು ಏಪ್ರಿಲ್ 1611ರದ್ದಾಗಿದೆ; ಸೈಮನ್ ಫೋರ್ಮನ್ ತಾವು ಗ್ಲೋಬ್ ಥಿಯೇಟರ್ ನಲ್ಲಿ ಅಂತಹುದೊಂದು ನಾಟಕವನ್ನು ನೋಡಿದುದಾಗಿ ದಾಖಲಿಸಿದ್ದಾರೆ. ಇದನ್ನು ಮೊದಲ ಬಾರಿಗೆ 1623ರಲ್ಲಿ ಪುಟಗಳ ರೂಪದಲ್ಲಿ ಪ್ರಕಟಿಸಲಾಯಿತು, ಬಹುಶಃ ಯಾವುದೋ ಒಂದು ನಾಟಕ ಪ್ರದರ್ಶನಕ್ಕೆಂದು ಪ್ರಾಂಪ್ಟ್ ಬುಕ್ (ಪಾತ್ರಧಾರಿಗಳಿಗೆ ಮಾತನ್ನು ನೆನಪಿಸಿಕೊಡುವವರು ಮಾತುಗಳನ್ನು ಬರೆದಿಟ್ಟುಕೊಳ್ಳುವ ಪುಸ್ತಕ/ಪುಟಗಳು) ಗಾಗಿ ಪ್ರಟತಿವಾದದ್ದು.
ಷೇಕ್ಸ್ ಪಿಯರ್ ಈ ದುರಂತನಾಟಕಗಳನ್ನು ಬರೆಯಲು ಮೂಲ ವಿಷಯಗಳೆಂದರೆ ಸ್ಕಾಟ್ಲೆಂಡ್ ನ ರಾಜ ಮ್ಯಾಕ್ ಬೆತ್ , ಮ್ಯಾಕ್ ಡಫ್,ಮತ್ತು ಡಂಕನ್ ರ ಬಗ್ಗೆ ಹಾಲಿನ್ಷೆಡ್ಸ್ ಕ್ರಾನಿಕಲ್ಸ್ (1587)ನಲ್ಲಿ ದಾಖಲಾಗಿರುವ ವಿಷಯಗಳು, ಹಾಗೂ ಷೇಕ್ಸ್ ಪಿಯರ್ ಮತ್ತು ಅವರ ಸಮಕಾಲೀನರಿಗೆ ತಿಳಿದಂತಹ ಇಂಗ್ಲೆಂಡ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಗಳ ಚರಿತ್ರೆ. ಆದಾಗ್ಯೂ, ಷೇಕ್ಸ್ ಪಿಯರ್ ಹೇಳಿದ ರೀತಿಯ ಮ್ಯಾಕ್ ಬೆತ್ ರ ಕಥೆಯು ಸ್ಕಾಟ್ ಲ್ಯಾಂಡ್ ನ ಯಾವುದೇ ನೈಜ ಐರಿಹಾಸಿಕ ಘಟನೆಯನ್ನು ಹೋಲುವಂತಹುದ್ದಾಗಿಲ್ಲ; ಏಕೆಂದರೆ ಮ್ಯಾಕ್ ಬೆತ್ ಬಹಳ ಮೆಚ್ಚುಗೆ ಗಳಿಸಿದ್ದ ಸಮರ್ಥ ರಾಜರಾಗಿದ್ದರು.
ರಂಗಮಂಚದ ವೇಪಥ್ಯದ ಪ್ರಪಂಚದಲ್ಲಿ ಕೆಲವರು ಈ ನಾಟಕವು ಶಾಪಗ್ರಸ್ತವಾಗಿದೆ ಎಂದು ನಂಬಿದ್ದಾರೆ, ಆದ್ದರಿಂದ ಈ ನಾಟಕದ ಹೆಸರನ್ನು ಗಟ್ಟಿಯಾಗಿ ಹೇಳದೆ, ಈ ನಾಟಕವನ್ನು "ಆ ಸ್ಕಾಟಿಷ್ ನಾಟಕ"ವೆಂದೇ ಗುರುತಿಸುತ್ತಾರೆ. ಶತಮಾನಗಳಿಂದಲೂ ಈ ನಾಟಕವು ಹಲವಾರು ಶ್ರೇಷ್ಠ ನಟನಟಿಯರನ್ನು ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಪಾತ್ರಗಳಿಗೆ ಸೆಳೆದಿದೆ. ಈ ನಾಟಕವನ್ನು ಚಲನಚಿತ್ರ, ಟೆಲಿವಿಷನ್, ಓಪ್ರಾ, ಕಾದಂಬರಿಗಳು, ಕಾಮಿಕ್ ಪುಸ್ತಕಗಳು, ಮತ್ತು ಇತರ ವಾಹಿನಿಗಳಿಗೆ ಅಶವಡಿಸಿಕೊಳ್ಳಲಾಗಿದೆ.
ಪಾತ್ರಗಳು
ಬದಲಾಯಿಸಿ
|
|
ಸಾರಾಂಶ
ಬದಲಾಯಿಸಿನಾಟಕದ ಮೊದಲ ಅಂಕವು ಮಿಂಚು ಗುಡುಗುಗಳ ಆರ್ಭಟದ ನಡುವೆ ಮೂವರು ಮಾಟಗಾತಿಯರು ತಮ್ಮ ಮುಂದಿನ ಭೇಟಿಯು ಮ್ಯಾಕ್ ಬೆತ್ ರೊಂದಿಗೆ ಎಂದು ನಿಶ್ಚಯಿಸುವುದರಿಂದ ಆರಂಭವಾಗುತ್ತದೆ. ಮುಂದಿನ ದೃಶ್ಯದಲ್ಲಿ, ಗಾಯಗೊಂಡ ಮಿಲಿಟರಿ ಅಧಿಕಾರಿಯೊಬ್ಬನು ರಾಜದ್ರೋಹಿ ಮ್ಯಾಕ್ ಡೊನಾಲ್ಡ್ ನೇತೃತ್ವದ ಐರ್ಲೆಂಡ್ ಮತ್ತು ನಾರ್ವೆಯ ಸಂಯುಕ್ತ ಸೇನೆಯನ್ನು ಗ್ಲಾಮಿಸ್ ನ ಜಾಗೀರುದಾರರಾದ ಸೇನಾಪತಿಗಳಾದ– ಮ್ಯಾಕ್ ಬೆತ್ ಮತ್ತು ಬಾಂಕೋ– ಸೇರಿ ಸೋಲಿಸಿದುದಾಗಿ ಸ್ಕಾಂಟ್ಲೆಂಡ್ ನ ದೊರೆ ಡಂಕನ್ ರಿಗೆ ವರದಿ ಮಾಡುತ್ತಾನೆ. ದೊರೆಯ ಸಂಬಂಧಿಯಾದ ಮ್ಯಾಕ್ ಬೆತ್ ರ ಶೌರ್ಯ ಮತ್ತು ಸಮರಕೌಶಲಗಳನ್ನು ಹಾಡಿ ಹೊಗಳಲಾಗುತ್ತದೆ.
ದೃಶ್ಯ ಬದಲಾಗುತ್ತದೆ. ಮ್ಯಾಕ್ ಬೆತ್ ಮತ್ತು ಬಾಂಕೋ, ಹವೆ ಮತ್ತು ತಮ್ಮ ವಿಜಯದ ಬಗ್ಗೆ ಹರಟುತ್ತಾ, ಪ್ರವೇಶಿಸುತ್ತಾರೆ("ಇಷ್ಟು ಹಾಳು ಹವೆಯ ಮತ್ತು ಸುಂದರವಾದ ದಿನವನ್ನು ನಾನು ಎಂದೂ ಕಂಡಿರಲಿಲ್ಲ").[೧] ಅವರು ಬಂಜರುಭೂಮಿಯೊಂದನ್ನು ತಲುಪುತ್ತಿದ್ದಂತೆ, ಈ ಇಬ್ಬರನ್ನೂ ಭೇಟಿಯಾಗಿ ಭವಿಷ್ಯವನ್ನು ನುಡಿಯಲು ಕಾಯುತ್ತಿದ್ದಂತಹ ಆ ಮೂವರು ಮಾಟಗಾತಿಯರು ಪ್ರವೇಶಿಸುತ್ತಾರೆ. ಬಾಂಕೋ ಅವರ ಮಾತುಗಳನ್ನು ಮೊದಲು ವಿರೋಧಿಸಿದರೂ, ಅವರು ಮ್ಯಾಕ್ ಬೆತ್ ರನ್ನು ಕುರಿತು ಮಾತನಾಡುತ್ತಾರೆ. ಮೊದಲನೆಯ ಮಾಟಗಾತಿ ಮ್ಯಾಕ್ ಬೆತ್ ರನ್ನು "ಗ್ಲಾಮಿಸ್ ನ ಜಾಗೀರುದಾರ" ಎಂದು ಘೋಷಿಸುತ್ತಾಳೆ, ಎರಡನೆಯವಳು "ಕಾಡಾರ್ ನ ಜಾಗೀದುದಾರ" ಎನ್ನುತ್ತಾಳೆ ಮತ್ತು ಮೂರನೆಯವಳು ಮ್ಯಾಕ್ ಬೆತ್ "ನಂತರ ರಾಜನಾಗುತ್ತಾನೆ" ಎಂದು ಘೋಷಿಸುತ್ತಾಳೆ. ಮ್ಯಾಕ್ ಬೆತ್ ಸ್ಥಂಭೀಭೂತರಾದಂತೆನಿಸುತ್ತದೆ, ಆದ್ದರಿಂದ ಬಾಂಕೋ ಮತ್ತೆ ಅವರ ಮಾತನ್ನು ಅಲ್ಲಗಳೆಯುತ್ತಾರೆ. ಮಾಟಗಾತಿಯರು ಬಾಂಕೋ ದೊರೆಗಳ ಸಂತತಿಗೇ ತಂದೆಯಾಗುವರೆಂದೂ, ಆದರೆ ಸ್ವತಃ ತಾವು ದೊರೆಗಳಾಗುವುದಿಲ್ಲವೆಂದೂ ಸಾರುತ್ತಾರೆ. ಇಬ್ಬರೂ ತಾವು ಕೇಳಿದ ಭವಿಷ್ಯನುಡಿಗಳ ಬಗ್ಗೆ ಚಕಿತಗೊಂಡಿರುವಾಗ ಮಾಟಗಾತಿಯರು ಮಾಯವಾಗುತ್ತಾರೆ ಹಾಗೂ ಮತ್ತೊಬ್ಬ ಜಾಗೀರುದಾರರಾದ ಮತ್ತು ದೊರೆಗಳ ದೂತರಾಗಿ ಬಂದಂತಹ ರಾಸ್ ಪ್ರವೇಶಿಸಿ ಮ್ಯಾಕ್ ಬೆತ್ ಗೆ ನೀಡಲ್ಪಟ್ಟ ಹೊಸ ಬಿರುದನ್ನು ತಿಳಿಸುತ್ತಾರೆ: ಕಾಡಾರ್ ನ ಜಾಗೀರುದಾರ! ಹೀಗೆ ಮೊದಲನೆಯ ಭವಿಷ್ಯನುಡಿಯು ನಿಜವಾಗುತ್ತದೆ. ಆ ಕ್ಷಣದಿಂದ ಮ್ಯಾಕ್ ಬೆತ್ ರಾಜನಾಗುವ ಕನಸನ್ನು ಕಾಣಲಾರಂಭಿಸುತ್ತಾರೆ.
ಮ್ಯಾಕ್ ಬೆತ್ ಮಾಟಗಾತಿಯರು ಹೇಳಿದ ಭವಿಷ್ಯವಾಣಿಯ ಬಗ್ಗೆ ತನ್ನ ಪತ್ನಿಗೆ ಪತ್ರ ಬರೆಯುತ್ತಾರೆ. ಡಂಕನ್ ಮ್ಯಾಕ್ ಬೆತ್ ರ ಇನ್ವರ್ನೆಸ್ ನಲ್ಲಿರುವ ಕೋಟೆಯಲ್ಲಿ ಉಳಿದುಕೊಳ್ಳಲು ನಿರ್ಧರಿಸಿದಾಗ ಲೇಡಿ ಮ್ಯಾಕ್ ಬೆತ್ ದೊರೆಯನ್ನು ಕೊಂದು ತನ್ನ ಪತಿಗೆ ಸಿಂಹಾಸನವನ್ನು ದಕ್ಕಿಸುವ ಹಂಚು ಹೂಡುತ್ತಾರೆ. ರಾಜಹತ್ಯೆಯ ಬಗ್ಗೆ ಮ್ಯಾಕ್ ಬೆತ್ ಆತಂಕವನ್ನು ವ್ಯಕ್ತಪಡಿಸಿದರೂ, ಲೇಡಿ ಮ್ಯಾಕ್ ಬೆತ್, ಅವನ ಪುರುಷತ್ವವನ್ನು ಕೆಣಕಿ, ಕ್ರಮೇಣ ಅವರನ್ನು ತನ್ನ ಹಂಚಿಕೆಗೆ ಒಡಂಬಡುವಂತೆ ಒಪ್ಪಿಸುತ್ತಾಳೆ
ದೊರೆಯು ಭೇಟಿಯಿತ್ತ ರಾತ್ರಿ ಮ್ಯಾಕ್ ಬೆತ್ ದೊರೆಯನ್ನು ಕೊಲ್ಲುತ್ತಾರೆ. ಈ ಕೃತ್ಯವು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ, ಆದರೆ ಈ ಕೃತ್ಯವು ಮ್ಯಾಕ್ ಬೆತ್ ರನ್ನು ಎಷ್ಟು ಅಧೀರರನ್ನಾಗಿಸುವುದೆಂದರೆ ಲೇಡಿ ಮ್ಯಾಕ್ ಬೆತ್ ಸ್ವತಃ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿ ಬರುತ್ತದೆ. ತನ್ನ ಯೋಜನೆಗೆ ಅನುಗುಣವಾಗಿ, ನಿದ್ರಿಸುತ್ತಿದ್ದ ದಂಕನ್ ರ ಸೇವಕರ ಬಳಿ ರಕ್ತಸಿಕ್ತ ಚೂರಿಗಳನ್ನಿರಿಸಿ ಕೊಲೆಯ ಆರೋಪವನ್ನು ಅವರ ಮೇಲೆ ಹೊರಿಸಿಬಿಡುತ್ತಾರೆ. ಮರುದಿನ ಮುಂಜಾನೆ ಲೆನಾಕ್ಸ್ ಎಂಬ ಒಬ್ಬ ಸ್ಕಾಟಿಷ್ ಕುಲೀನ ಮನೆತನಸ್ಥರು ಮತ್ತು ಫೀಫ್ ನ ಜಾಗೀರುದಾರರಾದ ರಾಜನಿಷ್ಠರಾದ ಮ್ಯಾಕ್ ಡಫ್ ಬರುತ್ತಾರೆ.[೨] ದ್ವಾರಪಾಲಕನೊಬ್ಬನು ಮಹಾದ್ವಾರವನ್ನು ತೆಗೆಯುತ್ತಾರೆ ಮತ್ತು ಮ್ಯಾಕ್ ಬೆತ್ ಅವರನ್ನು ದೊರೆಗಳ ಕೊಠಡಿಗೆ ಕರೆದೊಯ್ಯುತ್ತಾರೆ, ಅಲ್ಲಿ ಮ್ಯಾಕ್ ಡಫ್ ಡಂಕನ್ ರ ಕಳೇಬರವನ್ನು ಕಾಣುತ್ತಾರೆ. ಮ್ಯಾಕ್ ಬೆತ್ ಕೋಪವನ್ನು ನಟಿಸುತ್ತಾ ಅಲ್ಲಿದ್ದ ರಕ್ಷಣಾಭಟರನ್ನು, ಅವರು ತಮ್ಮದೇನೂ ಅಪರಾಧವಿಲ್ಲವೆಂದು ಹೇಳುತ್ತಿದ್ದರೂ, ಕೊಂದುಬಿಡುತ್ತಾರೆ. ಮ್ಯಾಕ್ ಡಫ್ ಗೆ ಮ್ಯಾಕ್ ಬೆತ್ ಮೇಲೆ ಆ ಕ್ಷಣದಲ್ಲೇ ಸಂಶಯ ಮೂಡುತ್ತದಾದರೂ ಅದನ್ನು ಅವರು ಬಹಿರಂಗಗೊಳಿಸುವುದಿಲ್ಲ. ಪ್ರಾಣಭಯದಿಂದ ಡಂಕನ್ ರ ಮಕ್ಕಳಾದ ಮಾಲ್ಕಮ್ ಇಂಗ್ಲೆಂಡ್ ಗೂ, ಡೋನಾಲ್ಬೇಯ್ನ್ ಐರ್ಲೆಂಡ್ ಗೂ ಓಡಿಹೋಗುತ್ತಾರೆ. ಅಧಿಕಾರದ ಹಕ್ಕುಳ್ಳ ವಂಶಸ್ಥರೇ ಓಡಿಹೋದುದು ಅವರ ಮೇಲೆಯೇ ಗುಮಾನಿ ಮೂಡುವಂತಾಗುತ್ತದೆ ಮತ್ತು ಮ್ಯಾಕ್ ಬೆತ್ ನೂತನ ಸ್ಕಾಂಟ್ಲೆಂಡ್ ದೊರೆಯಾಗಿ ಮೃತರಾಜನ ಸಂಬಂಧಿಯೆಣಬ ಕಾರಣದಿಂದ ಸಿಂಹಾಸನವನ್ನು ಏರುತ್ತಾರೆ.
ತನ್ನ ಯಶದ ನಡುವೆಯೂ ಬಾಂಕೋರ ಬಗ್ಗೆ ಮಾಟಗಾತಿಯರು ಹೇಳಿದ್ದ ಭವಿಷ್ಯನುಡಿಗಳು ಮ್ಯಾಕ್ ಬೆತ್ ರ ನೆಮ್ಮದಿ ಕೆಡಿಸುತ್ತವೆ; ಆದ್ದರಿಂದ ಮ್ಯಾಕ್ ಬೆತ್ ಬಾಂಕೋರನ್ನು ಒಂದು ಔತಣಕೂಟಕ್ಕೆ ಕರೆಯುತ್ತಾರೆ ಮತ್ತು ಅಲ್ಲಿ ಅವರಿಗೆ ಬಾಂಕೋ ಮತ್ತು ಅವರ ಚಿಕ್ಕ ಮಗ ಫ್ಲಿಯನ್ಸ್ ಆ ರಾತ್ರಿ ಹೊರಪ್ರಾಂತ್ಯಕ್ಕೆ ಸವಾರಿ ಹೋಗುತ್ತಿದ್ದಾರೆಂಬುದು ತಿಳಿಯುತ್ತದೆ. ಅವರಿಬ್ಬರನ್ನೂ ಕೊಲ್ಲಲು ಇಬ್ಬರನ್ನು ನಿಯಮಿಸುತ್ತಾರೆ ಮತ್ತು ಕೊಲೆ ಆಗುವ ಮುನ್ನ ಮೂರನೆಯ ಕೊಲೆಗಾರನೂ ಉದ್ಯಾನದಲ್ಲಿ ಕಾಣಿಸಿಕೊಳ್ಳುತ್ತಾನೆ. ಕೊಲೆಗಡುಕರು ಬಾಂಕೋರನ್ನು ಕೊಲ್ಲುವರಾದರೂ, ಫ್ಲಿಯನ್ಸ್ ತಪ್ಪಿಸಿಕೊಳ್ಳುತ್ತಾನೆ. ಔತಣಕೂಟದಲ್ಲಿ, ಬಾಂಕೋನ ಭೂತವು ಪ್ರವೇಶಿಸಿ ಮ್ಯಾಕ್ ಬೆತ್ ರ ಜಾಗದಲ್ಲಿ ಕುಳಿತುಕೊಳ್ಳುತ್ತದೆ. ಭೂತವು ಮ್ಯಾಕ್ ಬೆತ್ ಗೆ ಮಾತ್ರ ಕಾಣಿಸುತ್ತಿರುತ್ತದೆ; ಔತಣದಲ್ಲಿದ್ದ ಮಿಕ್ಕವರೆಲ್ಲರೂ ಖಾಲಿ ಕುರ್ಚಿಯತ್ತ ಕೂಗಾಡುತ್ತಿರುವ ಮ್ಯಾಕ್ ಬೆತ್ ರನ್ನು ನೋಡಿ ಕಂಗಾಲಾಗುತ್ತಾರೆ, ಅಸಹಾಯಕರಾದ ಲೇಡಿ ಮ್ಯಾಕ್ ಬೆತ್ ಆ ಜನರನ್ನು ಔತಣಕೂಟದಿಂದ ಹೊರನಡೆಯಲು ಕೋರುತ್ತಾರೆ.
ಬಹಳವೇ ವಿಚಲಿತರಾದ ಮ್ಯಾಕ್ ಬೆತ್ ಮತ್ತೊಮ್ಮೆ ಆ ಮೂವರು ಮಾಟಗಾತಿಯರನ್ನು ಭೇಟಿಯಾಗುತ್ತಾರೆ. ಮಾಟಗಾತಿಯರು ಮೂರು ಆತ್ಮಗಳನ್ನು ಆವಾಹಿಸಿ ಮತ್ತೆ ಮೂರು ಎಚ್ಚರಿಕೆಗಳನ್ನು ಮತ್ತು ಭವಿಷ್ಯವಾಣಿಗಳನ್ನು ನುಡಿಯುತ್ತಾರೆ: "ಮ್ಯಾಕ್ ಡಫ್ ನ ಬಗ್ಗೆ ಹುಷಾರ್,"[೩] "ಹೆಣ್ಣಿನಿಂದ ಹುಟ್ಟಿದ ಯಾರೂ ಮ್ಯಾಕ್ ಬೆತ್ ರನ್ನು ಘಾಸಿಗೊಳಿಸಲಾರರು" ಮತ್ತು "ಗ್ರೇಟ್ ಬರ್ಮಾಮ್ ವುಡ್ ಎತ್ತರದ ಡನ್ಸಿನೇನ್ ಬೆಟ್ಟಗಳು ಮ್ಯಾಕ್ ಬೆತ್ ರ ವಿರುದ್ಧ ಬರುವವರೆಗೆ ಸೋಲಿಲ್ಲ" ಎಂಬುವೇ ಆ ನುಡಿಗಳು. ಮ್ಯಾಕ್ ಡಫ್ ದೇಶಬಹಿಷ್ಕೃತರಾಗಿ ಇಂಗ್ಲೆಂಡ್ ನಲ್ಲಿದ್ದುದರಿಂದ ಅವರಿಂದ ತನಗೇನೂ ಹಾನಿಯಾಗಲಾರದೆಂದು ಮ್ಯಾಕ್ ಬೆತ್ ಭಾವಿಸುತ್ತಾರೆ; ಆದ್ದರಿಂದ ಮ್ಯಾಕ್ ಡಫ್ ರ ಕೋಟೆಯಲ್ಲಿದ್ದ ಎಲ್ಲರನ್ನೂ ಮ್ಯಾಕ್ ಬೆತ್ ಕೊಲ್ಲುತ್ತಾರೆ, ಮ್ಯಾಕ್ ಡಫ್ ರ ಹೆಂಡತಿ ಮತ್ತು ಅವರ ಚಿಕ್ಕ ಮಕ್ಕಳ ಸಮೇತ.
ಲೇಡಿ ಮ್ಯಾಕ್ ಬೆತ್ ಗೆ ತಾನು ಮತ್ತು ತನ್ನ ಪತಿ ಮಾಡಿದ ಅಪರಾಧಗಳ ಹೊರೆ ಕಾಡತೊಡಗುತ್ತದೆ. ಆಕೆ ನಿದ್ರೆಯಲ್ಲೇ ನಡೆಯುತ್ತಾ, ತನ್ನ ಕೈಗೆ ಅಂಟಿದೆಯೆಂದು ಕಲ್ಪಿಸಿಕೊಂಡ ರಕ್ತದ ಕಲೆಗಳನ್ನು ತೊಡೆದುಹಾಕಲು ಯತ್ನಿಸುತ್ತಾ, ತನಗೆ ತಿಳಿದಿರುವ ಆಘಾತಕೆ ಸಂಗತಿಗಳ ಬಗ್ಗೆ ಮಾತನಾಡುತ್ತಾ ಸಾಗುತ್ತಾರೆ.
ಇಂಗ್ಲೆಂಡ್ ನಲ್ಲಿ, "ನಿಮ್ಮ ಕೋಟೆಗೆ ಮುತ್ತಿಗೆ ಹಾಕಲಾಗಿದೆ; ನಿಮ್ಮ ಹೆಂಡತಿ ಮತ್ತು ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಲಾಗಿದೆ" ಎಂದು ಮ್ಯಾಕ್ ಡಫ್ ಗೆ ರಾಸ್ ಹೇಳುತ್ತಾರೆ."[೪] ಈಗ ಮ್ಯಾಕ್ ಬೆತ್ ಎಲ್ಲರಿಗೂ ಕ್ರೂರಾಧಿಕಾರಿಯಾಗಿ ಗೋಚರಿಸತೊಡಗುತ್ತಾರೆ ಮತ್ತು ಅವರ ಹಲವಾರು ಜಾಗೀರುದಾರರು ಅವರ ವಿರೋಧಿ ಬಣಕ್ಕೆ ಸೇರತೊಡಗುತ್ತಾರೆ. ಮಾಲ್ಕಮ್ ಮ್ಯಾಕ್ ಡಫ್, ಮತ್ತು ಇಂಗ್ಲಿಷ್ ನವರಾದ ನಾರ್ತಂಬರ್ಲ್ಯಾಂಡ್ ನ ಅರ್ಲ್ (ಶ್ರೀಮಂತ ವರ್ಗದ ವ್ಯಕ್ತಿ) ಆದ ಸಿವಾರ್ಡ್ (ಹಿರಿಯ)ರೊಡಗೂಡಿದ ಸೇನೆಯ ಮುಖಂಡತ್ವ ವಹಿಸಿ, ಡನ್ಸಿನೇನ್ ಕೋಟೆಗೆ ಮುತ್ತಿಗೆ ಹಾಕುತ್ತಾರೆ. ಬರ್ನಾಮ್ ವುಡ್ ಎಂಬ ಅರಣ್ಯದಲ್ಲಿ ಬೀಡುಬಿಟ್ಟಿರುವಾಗ, ಸೈನಿಕರಿಗೆ ಮರದ ಕೊಂಬೆಗಳನ್ನು ಕತ್ತರಿಸಿ, ಅವುಗಳನ್ನು ಮುಂದೆ ಹಿಡಿದು, ಅದರ ಮರೆಯಲ್ಲಿ ಸಾಗುತ್ತಾ ತಮ್ಮ ಸಂಖ್ಯೆಗಳನ್ನು ಶತ್ತುಸೈನಿಕರಿಗೆ ತಿಳಿಯದಂತಾಗಿಸುವ ತಂತ್ರವನ್ನು ಆದೇಶಿಸಲಾಯಿತು; ಹೀಗಾಗಿ ಕಾಡೇ ಕೋಟೆಗೆ ಬರುವುದೆಂಬ ಮಾಟಗಾತಿಯರ ಎರಡನೆಯ ಭವಿಷ್ಯವಾಣಿಯೂ ನಿಜವಾಯಿತು. ಏತನ್ಮಧ್ಯೆ, ತನ್ನ ಪತ್ನಿ ಲೇಡಿ ಮ್ಯಾಕ್ ಬೆತ್ ರ ಸಾವಿನ ಬಗ್ಗೆ ತಿಳಿದ ಮ್ಯಾಕ್ ಬೆತ್ ಒಂದು ಸ್ವಗತವನ್ನು ಹೇಳಿಕೊಳ್ಳುತ್ತಿರುತ್ತಾರೆ ("ನಾಳೆ ಮತ್ತು ನಾಳೆ ಮತ್ತು ನಾಳೆ)"[೫](ಆ ಸಾವಿನ ಕಾರಣ ಬಹಿರಂಗಗೊಳಿಸಿಲ್ಲ, ಕೆಲವರು ಆಕೆ ಆತ್ಮಹತ್ಯೆ ಮಾಡಿಕೊಂಡರೆಂದು ಭಾವಿಸುತ್ತಾರೆ; ಮಾಲ್ಕಮ್ ಆಕೆಯ ಬಗ್ಗೆ ಆಡುವ ಕಡೆಯ ಮಾತು ಹೀಗಿದೆ "ತನ್ನ ಸ್ವಂತ ಕ್ರೂರ ಕೈಗಳಿಂದ ಆಕೆ ತನ್ನ ವಧೆ ಮಾಡಿಕೊಂಡರು").[೬]
ಕಾಳಗದಲ್ಲಿ ಕಿರಿಯ ಸಿವಾರ್ಡ್ ಸಾವನ್ನಪ್ಪುತ್ತಾರೆ ಮತ್ತು ಮ್ಯಾಕ್ ಡಫ್ ಮ್ಯಾಕ್ ಬೆತ್ ರನ್ನು ಎದುರಿಸುತ್ತಾರೆ. ಮ್ಯಾಕ್ ಬೆತ್ ತಾನು ಯಾವುದೆ ಹೆಣ್ಣಿಗೆ ಹುಟ್ಟಿದವನಿಂದ ಹತನಾಗುವುದಿಲ್ಲವಾದ್ದರಿಂದ ತನಗೆ ಯಾವುದೇ ಭಯಪಡುವ ಕಾರಣವಿಲ್ಲವೆಂದು ಕೊಚ್ಚಿಕೊಳ್ಳುತ್ತಾರೆ. ಮ್ಯಾಕ್ ಡಫ್ ತಾನು "ತನ್ನ ತಾಯಿಯ ಗರ್ಭದಿಂದ ಸಮಯಕ್ಕೆ ಮುಂಚೆಯೇ ಕಿತ್ತುತೆಗೆಯಲ್ಪಟ್ಟವ[೭] ರೆಂದೂ(ಎಂದರೆ ಸಿಸೇರಿಯನ್ ರೀತ್ಯಾ ಜನನ) "ಹೆಣ್ಣಿನಿಂದ ಹೆರಲ್ಪಟ್ಟವನಲ್ಲ"ವೆಂದೂ ಸಾರುತ್ತಾರೆ(ಇದು ಸಾಹಿತ್ಯಿಕ ವಕ್ರೋಕ್ತಿಗೆ ಒಂದು ಉದಾಹರಣೆ) ಮ್ಯಾಕ್ ಬೆತ್ ತಾವು ಮಾಟಗಾತಿಯ ನುಡಿಗಳನ್ನು ತಪ್ಪಾಗಿ ಅರ್ಥೈಸಿಕೊಂಡಿರುವುದಾಗಿ ಬಹಳ ತಡವಾಗಿ ಅರಿಯುತ್ತಾರೆ. ಮ್ಯಾಕ್ ಡಫ್ ವೇದಿಕೆಯ ಹೊರಗೆ (ವೀಕ್ಷಕರಿಗೆ ಕಾಣದಂತೆ) ಮ್ಯಾಕ್ ಬೆತ್ ರ ಶಿರಚ್ಛೇದ ಮಾಡುತ್ತಾರೆ ಮತ್ತು ಈ ರೀತ್ಯಾ ಕಡೆಯ ಭವಿಷ್ಯನುಡಿಯೂ ನಿಜವಾಗುತ್ತದೆ.
ತದನಂತರ ಸಿಂಹಾಸನದ ಮೇಲೆ ಫ್ಲಿಯನ್ಸ್ ರನ್ನು ಕೂರಿಸದೆ ಮಾಲ್ಕಮ್ ರನ್ನು ಕೂಡಿಸಿದರೂ, ಬಾಂಕೋ ಬಗ್ಗೆ ಮಾಟಗಾತಿಯರು ಹೇಳಿದಂತಹ "ನೀನು ರಾಜರ ಜನಕನಾಗುತ್ತೀಯೆ" ಎಂಬ ನುಡಿಯು ಷೇಕ್ಸ್ ಪಿಯರ್ ರ ಸಮಕಾಲೀನರಾದ ವೀಕ್ಷಕರಿಗೆ ನಿಜವೆಂದೆನ್ನಿಸಿತ್ತು, ಏಕೆಂದರೆ ಸ್ಕಾಂಟ್ಲೆಂಡ್ ನ ಜೇಮ್ಸ್ ವಿ (ನಂತರದ ದಿನಗಳಲ್ಲಿ ಇಂಗ್ಲೆಂಡ್ ನ ಜೇಮ್ಸ್ I) ಬಾಂಕೋರ ವಂಶಾವಳಿಯವರೆಂದೇ ನಂಬಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು]
ಮೂಲಗಳು
ಬದಲಾಯಿಸಿಮ್ಯಾಕ್ ಬೆತ್ ಅನ್ನು ಷೇಕ್ಸ್ ಪಿಯರ್ ರ ಆಂಥೋನಿ ಮತ್ತು ಕ್ಲಿಯೋಪಾತ್ರಗೆ ಹೋಲಿಸಲಾಗಿದೆ. ಆಂಥೋನಿ ಮತ್ತು ಮ್ಯಾಕ್ ಬೆತ್ ಇಬ್ಬರೂ ಹೊಸ ಜಗತ್ತನ್ನು ಬಯಸುತ್ತಾ ಅದಕ್ಕಾಗಿ ಹಳೆಯದನ್ನು ಬಲಿಕೊಡಲೂ ಸಿದ್ಧರಿರುವುದನ್ನು ಬಿಂಬಿಸುವ ಪಾತ್ರಗಳು. ಇಬ್ಬರೂ ಸಿಂಹಾಸನಕ್ಕಾಗಿಯೇ ಕಾದಾಡುತ್ತಿರುತ್ತಾರೆ ಮತ್ತು ಇಬ್ಬರೂ 'ನೀತಿದೇವತೆ'ಗಳನ್ನು ಎದುರಿಸಿ ಸಿಂಹಾಸನವನ್ನು ಪಡೆಯಬೇಕಾಗುತ್ತದೆ. ಆಂಥೋನಿಗೆ ನೀತಿದೇವತೆ ಆಕ್ಟಾವಿಯಸ್, ಮ್ಯಾಕ್ ಬೆತ್ ಗೆ ಬಾಂಕೋ. ಒಮ್ಮೆ ಮ್ಯಾಕ್ ಬೆತ್ ತಮ್ಮನ್ನು ಆಂಥೋನಿಗೆ ಹೀಗೆ ಹೋಲಿಸಿಕೊಳ್ಳುತ್ತಾರೆ "ಬಾಂಕೋವಿನಡಿಯಲ್ಲಿ ನನ್ನ ಬುದ್ಧಿಮತ್ತೆಯು ದೂಷಿತವಾಗುತ್ತದೆ/ಸೀಸರ್ ರೆದುರು ಮಾರ್ಕ್ ಆಂಥೋನಿಗೆ ಆಗುತ್ತಿತ್ತೆಂದು ಹೇಳಲಾದಂತೆ." ಕಡೆಯದಾಗಿ ಎರಡೂ ನಾಟಕಗಳಲ್ಲಿ ಪ್ರಬಲವಾದ ಹಾಗೂ ಯುಕ್ತಿಯಿಂದ ಕಾರ್ಯನಿರ್ವಹಿಸುವ ಸ್ತ್ರೀ ಪಾತ್ರಗಳಿವೆ: ಕ್ಲಿಯೋಪಾತ್ರ ಮತ್ತು ಲೇಡಿ ಮ್ಯಾಕ್ ಬೆತ್.[೮]
ಷೇಕ್ಸ್ ಪಿಯರ್ ಈ ಕಥೆಯನ್ನು ಹಾಲಿನ್ಷೆಡ್ಸ್ ಕ್ರಾನಿಕಲ್ಸ್ ಎಂಬ, ಷೇಕ್ಸ್ ಪಿಯರ್ ಮತ್ತು ಅವರ ಸಮಕಾಲೀನರಿಗೆ ತಿಳಿದಂತಹ ಬ್ರಿಟಿಷ್ ದ್ವೀಪಗಳಿಗೆ ಸಂಬಂಧಿಸಿದ ಜನಪ್ರಿಯ ಐತಿಹಾಸಿಕ ಕಥೆಗಳಿಂದ ಆಯ್ದುಕೊಂಡರು. ಕ್ರಾನಿಕಲ್ಸ್ ನಲ್ಲಿ, ಮಾಟಗಾತಿಯರೊಡನೆ ವ್ಯವಹಾರ ಮಾಡಿದ ಕಾರಣಕ್ಕಾಗಿ ತನ್ನ ಕುಟುಂಬದ ಹಲವಾರು ಸದಸ್ಯರನ್ನು ದೊರೆ ಡಫ್ ಕೊಂದದ್ದನ್ನು ಡಾನ್ವಾಲ್ಡ್ ಎಂಬ ವ್ಯಕ್ತಿಯು ಕಂಡುಕೊಳ್ಳುತ್ತಾನೆ. ಹೆಂಡತಿಯ ಒತ್ತಾಯಕ್ಕೆ ಮಣಿದು, ತನ್ನ ನಾಲ್ಕು ಸೇವಕರ ಜೊತೆ ಸೇರಿ ಅವನು ದೊರೆಯನ್ನು ತನ್ನ ಮನೆಯಲ್ಲಿಯೇ ಕೊಲ್ಲುತ್ತಾನೆ. ಕ್ರಾನಿಕಲ್ಸ್ ನಲ್ಲಿ, ದೊರೆ ಡಂಕನ್ ರ ಅಸಮರ್ಥತೆ ನಡುವೆಯೂ ರಾಜ್ಯವನ್ನು ಬೆಂಬಲಿಸಲು ಹೆಣಗುವ ಪಾತ್ರವಾಗಿ ಮ್ಯಾಕ್ ಬೆತ್ ರನ್ನು ಬಿಂಬಿಸಲಾಗಿದೆ. ಅವರು ಮತ್ತು ಬಾಂಕೋ ಮೂವರು ಮಾಟಗಾತಿಯರನ್ನು ಭೇಟಿಯಾಗುತ್ತಾರೆ, ಆ ಮಾಟಗಾತಿಯರೂ ಷೇಕ್ಸ್ ಪಿಯರ್ ನಾಟಕದಲ್ಲಿ ಬರೆದಂತೆಯೇ ಮೂರು ನುಡಿಗಳನ್ನು ನುಡಿಯುತ್ತಾರೆ. ಲೇಡಿ ಮ್ಯಾಕ್ ಬೆತ್ ರ ಪ್ರೇರಣೆಗೆ ಒಳಗಾಗಿ ಮ್ಯಾಕ್ ಬೆತ್ ಮತ್ತು ಬಾಂಕೋ ಒಡಗೂಡಿ ಡಂಕನ್ ರ ಕೊಲೆಗೆ ಸಂಚು ಹೂಡುತ್ತಾರೆ. ಮ್ಯಾಕ್ ಬೆತ್ ಹತ್ತು ದೀರ್ಘವರ್ಷಗಳಕಾಲ ರಾಜ್ಯವಾಳುತ್ತಾರೆ ಮತ್ತು ಕಡೆಗೆ ಮ್ಯಾಕ್ ಡಫ್ ಮತ್ತು ಮಾಲ್ಕಮ್ ರಿಂದ ಸೋಲಿಸಲ್ಪಡುತ್ತಾರೆ. ಈ ಎರಡೂ ಆವೃತ್ತಿಗಳಲ್ಲಿನ ಸಾಮ್ಯವು ಸ್ಪಷ್ಟವಾಗಿದೆ. ಆದರೆ, ಕೆಲವು ಪಂಡಿತರು ಜಾರ್ಜ್ ಬ್ಯುಕಾನನ್ ಬರೆದ ರಿರಮ್ ಸ್ಕಾಟಿಕಾರಮ್ ಹಿಸ್ಟೋರಿಯಾ ಷೇಕ್ಸ್ ಪಿಯರ್ ರ ಕೃತಿಯನ್ನು ಹೆಚ್ಚು ಹೋಲುತ್ತದೆಂದು ಅಭಿಪ್ರಾಯ ಪಡುತ್ತಾರೆ. ಷೇಕ್ಸ್ ಪಿಯರ್ ರ ಕಾಲದಲ್ಲಿ ಬ್ಯುಕಾನನ್ ರ ಕೃತಿಯು ಲ್ಯಾಟಿನ್ ಭಾಷೆಯಲ್ಲಿ ಲಭ್ಯವಿತ್ತು.[೯]
ಈ ಕಥೆಯ ಬೇರೆ ಯಾವುದೇ ರೂಪಾಂತರದಲ್ಲೂ ಮ್ಯಾಕ್ ಬೆತ್ ದೊರೆಯನ್ನು ಮ್ಯಾಕ್ ಬೆತ್ ರ ಸ್ವಂತ ಕೋಟೆಯಲ್ಲೇ ಕೊಂದದ್ದು ಎಂಬ ಉಲ್ಲೇಖವಿಲ್ಲ. ಷೇಕ್ಸ್ ಪಿಯರ್ ಈ ರೀತಿಯ ಬದಲಾವಣೆಯನ್ನು ಮಾಡಿದುದು ಮ್ಯಾಕ್ ಬೆತ್ ರ ಅಪರಾಧದ ಕರಾಳತೆಗೆ ಹೆಚ್ಚು ಒತ್ತುಕೊಟ್ಟು, ಅತಿಥಿಸತ್ಕಾರದ ಅತ್ಯಂತ ಕರಾಳಮುಖವನ್ನು ತೋರಿಸಲು ಎಂದು ಪಂಡಿತರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆ ಕಾಲದಲ್ಲಿ ಪ್ರಚಲಿತವಾಗಿದ್ದ ಈ ಕಥೆಯ ಬೇರೆ ರೂಪಗಳಲ್ಲಿ ಡಂಕನ್ ಇನ್ವರ್ನೆಸ್ ನಲ್ಲಿ ಹೊಂಚುಹಾಕಿ ನಡೆಸಿದ ಆಕ್ರಮಣಕ್ಕೆ ತುತ್ತಾಗುತ್ತಾರೆ, ಕೋಟೆಯಲ್ಲಲ್ಲ. ಷೇಕ್ಸ್ ಪಿಯರ್ ಡಾನ್ವಾಲ್ಡ್ ಮತ್ತು ದೊರೆ ಡಫ್ ರಿಬ್ಬರ ಕಥೆಗಳನ್ನೂ ಸೇರಿಸಿ ಕಥೆಗೆ ಮಹತ್ತರವಾದ ತಿರುವನ್ನಿತ್ತರು.[೧೦]
ಷೇಕ್ಸ್ ಪಿಯರ್ ಮತ್ತೊಂದು ಗಮನಾರ್ಹ ಬದಲಾವಣೆಯನ್ನು ಮಾಡಿದರು. ಕ್ರಾನಿಕಲ್ಸ್ ನಲ್ಲಿ ಬಾಂಕೋ ಡಂಕನ್ ರನ್ನು ಮ್ಯಾಕ್ ಬೆತ್ ಕೊಲ್ಲುವುದಕ್ಕೆ ಸಹಾಯಕರಾಗಿರುತ್ತಾರೆ. ನಂತರ ಸಿಂಹಾಸವನ್ನು ಏರಬೇಕಾದ ಸಂದರ್ಭದಲ್ಲಿ, ಮಾಲ್ಕಮ್ ಬದಲಿಗೆ ಮ್ಯಾಕ್ ಬೆತ್ ಸಿಂಹಾಸನವನ್ನೇರುವುದನ್ನು ಖಚಿತಪಡಿಸಿಕೊಳ್ಳುವುದರಲ್ಲಿ ಇವರು ಬಹಳ ಪ್ರಮುಖವಾದ ಪಾತ್ರ ವಹಿಸುತ್ತಾರೆ.[೧೧] ಷೇಕ್ಸ್ ಪಿಯರ್ ರ ಕಾಲದಲ್ಲಿ, ಬಾಂಕೋ ಸ್ಟುವರ್ಟ್ ಕಿಂಗ್ ಜೇಮ್ಸ್ Iರವರ ಪೂರ್ವಜರೆಂದು ನಂಬಲಾಗಿತ್ತು.[೧೨][೧೩] ಇತಿಹಾಸದ ಮೂಲಗಳಲ್ಲಿ ಕಾಣಬರುವ ಬಾಂಕೋ ಷೇಕ್ಸ್ ಪಿಯರ್ ಸೃಷ್ಟಿತ ಬಾಂಕೋಗಿಂತಲೂ ಬಹಳವೇ ವಿಭಿನ್ನವಾಗಿದ್ದಾರೆ. ವಿಮರ್ಶಕರು ಈ ಬದಲಾವಣೆಗೆ ಹಲವಾರು ಕಾರಣಗಳನ್ನು ಪ್ರತಿಪಾದಿಸಿದ್ದಾರೆ. ಮೊದಲನೆಯದಾಗಿ, ರಾಜನ ಪೂರ್ವಜರು ಕೊಲೆಗಾರರಾಗಿದ್ದರೆಂದು ತೋರಿಸುವುದು ಅಪಾಯಕರವಾಗಿತ್ತು. ಆ ಕಾಲದಲ್ಲಿ ಬಾಂಕೋ ಬಗ್ಗೆ ಬರೆದಂತಹ ಇತರ ಬರಹಗಾರರೂ ಬಾಂಕೋರನ್ನು ಕೊಲೆಗಾರನಂತೆ ಬಿಂಬಿಸದೆ ಸಭ್ಯವ್ಯಕ್ತಿಯಾಗಿ ತೋರಿಸಿದ್ದಾರೆ; ಜೀನ್ ಡಿ ಸ್ಕೆಲಾಂಡ್ರೆಯವರ ಕೃತಿಯಾದ ಸ್ಟುವರ್ಟೈಡ್ ನಲ್ಲಿಯೂ ಈ ರೀತಿಯ ಬರವಣಿಗೆ ಮೂಡಿದೆ.[೧೪] ಎರಡನೆಯದಾಗಿ, ನಾಟಕೀಯವಾಗಿ ಕೊಲೆಗೆ ಮತ್ತೊಬ್ಬ ಸಹಾಯಕನ ಪಾತ್ರವು ಅನಗತ್ಯವಾದ ಕಾರಣದಿಂದಲೂ ಷೇಕ್ಸ್ ಪಿಯರ್ ಬಾಂಕೋರ ಪಾತ್ರವನ್ನು ಬದಲಾಯಿಸಿರಬಹುದು; ಆದರೆ ಮ್ಯಾಕ್ ಬೆತ್ ರ ಪಾತ್ರಕ್ಕೆ ನಾಟಕೀಯವಾದ ವೈರುದ್ಧ್ಯವನ್ನು ನೀಡುವುದು ಅವಶ್ಯಕವಾಗಿತ್ತು— ಈ ಅವಶ್ಯಕತೆಯನ್ನು ಬಾಂಕೋರ ಪಾತರ್ರವು ಪೂರೈಸುತ್ತದೆ ಎಂದು ಹಲವಾರು ಪಂಡಿತರು ವಾದಿಸುತ್ತಾರೆ.[೧೧]
ದಿನಾಂಕ ಮತ್ತು ವಸ್ತು ವಿಷಯ
ಬದಲಾಯಿಸಿನಂತರದ ಆವೃತ್ತಿಗಳಲ್ಲಿ ತೋರಿಸಿರುವ ಗಮನಾರ್ಹವಾದ ಪುರಾವೆಗಳು ಮ್ಯಾಕ್ ಬೆತ್ ಅನ್ನು ಬರೆದ ಕಾಲವನ್ನು ನಿರ್ದಿಷ್ಟವಾಗಿ ಅರಿಯುವುದರಲ್ಲಿ ಗೊಂದಲವುಂಟುಮಾಡಿವೆ. ಈ ಕೃತಿಯು 1603ರಿಂದ 1606ರ ಅವಧಿಯಲ್ಲಿ ಬರೆಯಲ್ಪಟ್ಟಿತೆಂದು ಹಲವಾರು ಪಂಡಿತರು ಸೂಚಿಸುತ್ತಾರೆ.[೧೫][೧೬] ಈ ನಾಟಕವು ದೊರೆ ಜೇಮ್ಸ್ರ ಪೂರ್ವಜರನ್ನು ವೈಭವೀಕರಿಸುವಂತೆ ಕಾಣುವುದರಿಂದಲೂ ಹಾಗೂ 1603ರಲ್ಲಿ ಸ್ಟುವರ್ಟ್ ಗದ್ದುಗೆಗೇರಿದುದನ್ನು ವೈಭವೀಕರಿಸುವುದರಿಂದಲೂ (ಸ್ವತಃ ಜೇಮ್ಸ್ ತಾವು ಬಾಂಕೋರ ವಂಶದವರೆಂದು ನಂಬಿದ್ದರು),[೧೭] ಈ ನಾಟಕವನ್ನು 1603ಕ್ಕಿಂತಲೂ ಮುಂಚೆ ಬರೆದಿರುವುದು ಅಸಂಭವ ಎಂದು ಅವರು ವಾದಿಸುತ್ತಾರೆ; ಹಾಗೂ ನಾಲ್ಕನೆಯ ಅಂಕದಲ್ಲಿ ಮಾಟಗಾತಿಯರು ಮ್ಯಾಕ್ ಬೆತ್ ಗೆ ತೋರಿಸುವ ಎಂಟು ದೊರೆಗಳ ಮೆರವಣಿಗೆಯ ದೃಶ್ಯವು ದೊರೆ ಜೇಮ್ಸ್ ರಿಗೆ ಅರ್ಪಿಸಿದ ಶ್ಲಾಘನೆಯೆಂದು ಸೂಚಿಸುತ್ತಾರೆ. ಇತರ ಸಂಪಾದಕರು ಈ ಕೃತಿಯ ಅವಧಿಯು 1605-6 ಎಂದು ಅಭಿಪ್ರಾಯ ಪಡುತ್ತಾರೆ; ಇದಕ್ಕೆ ಪ್ರಮುಖವಾದ ಕಾರಣ ಗನ್ ಪೌಡರ್ ಸಂಚು ಮತ್ತು ನಂತರದ ತನಿಖೆಗಳಿಗೆ ಸಂಬಂಧಿತವಾದುದಿರಬೇಕು ವಿಶೇಷತಃ, ದ್ವಾರಪಾಲಕನ ನುಡಿಗಳು (ಅಂಕ II, ದೃಶ್ಯ III, ಸಾಲುಗಳು 1–21), 1606ರಲ್ಲಿ ಕ್ರೈಸ್ತಮತೀಯ ಹೆನ್ರಿ ಗಾರ್ನೆಟ್ ಪ್ರಕರಣದ ತನಿಖೆಗೆ ಸಂಬಂಧಿಸಿತವಾದುದನ್ನು ಸೂಚಿಸುವಂತಿವೆ; "ದ್ವಂದ್ವಾರ್ಥಭಾಷಿಗ" (ಸಾಲು 8) ಗಾರ್ನೆಟ್ "ದ್ವಂದ್ವಾರ್ಥ" [ನೋಡಿ: ಡಾಕ್ಟ್ರೈನ್ ಆಫ್ ಮೆಂಟಲ್ ರಿಸರ್ವೇಷನ್], ಮತ್ತು "ಫಾರ್ಮರ್" (4) ಎಂಬುದನ್ನು ತನ್ನ ಅಲಿಯಾಸ್ ಗಳಾಗಿ ಬಳಸಿರುವುದಕ್ಕೆ ಸೂಚಿತವಾಗಿರಬಹುದು.[೧೮] ಆದರೆ, "ಫಾರ್ಮರ್" ಎಂಬುದು ಸಾಮಾನ್ಯವಾಗಿ ಬಳಕೆಯಲ್ಲಿರುವ ಪದ ಮತ್ತು "ದ್ವಂದ್ವಾರ್ಥ"ವೂ ಸಹ 1583ರಲ್ಲಿ ರಾಣಿ ಎಲಿಝಬೆತ್ ರ ಪ್ರಮುಖ ಸಲಹೆಗಾರರಾದ ಲಾರ್ಡ್ ಬರ್ಘ್ಲೀ ಬರೆದ ಚಿಕ್ಕಪುಸ್ತಕದ ವಸ್ತುವಾಗಿತ್ತು, ಹಾಗೂ 1584ರಲ್ಲಿ ಮಾರ್ಟಿನ್ ಆಝ್ಪಿಲ್ಕ್ಯುಯೆಟಾ ಬರೆದ ಡಾಕ್ಟ್ರೈನ್ ಆಫ್ ಈಕ್ವಿವೊಕೇಷನ್ ನಲ್ಲಿಯೂ ಪ್ರಸ್ತುತವಾಗಿತ್ತು ಹಾಗೂ ಯೂರೋಪ್ ನಲ್ಲೆಲ್ಲಾ ಪಸರಿಸಿ, 1590ರ ದಶಕದಲ್ಲಿ ಇಂಗ್ಲೆಂಡ್ ಗೂ ಹಬ್ಬಿತು.[೧೯]
ಪಂಡಿತರು ಮೂರು "ಸಿಬಿಲ್ ಗಳು" ವಿಚಿತ್ರವಾದ ಸಹೋದರಿಯರಂತೆ ಇದ್ದ ಪಾತ್ರಗಳನ್ನು ಹೊಂದಿದ್ದ ಮನೋರಂಜನೆಯನ್ನು ಆಕ್ಸ್ ಫರ್ಡ್ ನಲ್ಲಿ 1605ರಲ್ಲಿ ದೊರೆ ಜೇಮ್ಸ್ ಕಂಡುದನ್ನು ಉಲ್ಲೇಖಿಸುತ್ತಾರೆ; ಷೇಕ್ಸ್ ಪಿಯರ್ ಈ ಬಗ್ಗೆ ಕೇಳಿತಿಳಿದಿದ್ದು, ಆ ಮೂರು ಸಹೋದರಿಯರ ಪೂರ್ವೋದಾಹರಣೆಯನ್ನು ತಮ್ಮ ನಾಟಕದಲ್ಲಿ ಅಳವಡಿಸಿರಬಹುದೆಂದು ಕೆರ್ಮೋಡ್ ಅನುಮಾನಿಸುತ್ತಾರೆ.[೨೦] ಆದರೆ, A. R. ಬ್ರಾನ್ಮುಲ್ಲರ್, ಜ್ಯೂ ಕೇಂಬ್ರಿಡ್ಜ್ ಆವೃತ್ತಿಯಲ್ಲಿ 1605–6ರ ಪ್ರತಿಪಾದನೆಗಳು ಸಮಗ್ರ ಚಿತ್ರಣ ನೀಡುವುದರಲ್ಲಿ ಅಸಮರ್ಥವಾಗಿವೆ ಎನ್ನುತ್ತಾ 1603ನೆಯ ಇಸವಿಯಲ್ಲೇ ಇದು ಬರೆಯಲ್ಪಟ್ಟುದೆಂದು ವಾದಿಸುತ್ತಾರೆ.[೨೧] 1607ರ ನಂತರವಂತೂ ಇದನ್ನು ಬರೆದಿಲ್ಲವೆಂದು ಸರ್ವಾನುಮತವಿದೆ, ಏಕೆಂದರೆ ಕರ್ಮೋಡೆ 1607ರಲ್ಲಿ ಈ ನಾಟಕದ ಬಗ್ಗೆ "ಸಾಕಷ್ಟು ಉಲ್ಲೇಖಗಳಿವೆ "ಎಂದು ಬರೆಯುತ್ತಾರೆ.[೨೦] ಈ ನಾಟಕವನ್ನು ಪ್ರದರ್ಶಿಸಿದ ಮೊದಲ ದಾಖಲೆಯು ಏಪ್ರಿಲ್ 1611ರದ್ದಾಗಿದ್ದು, ಸೈಮನ್ ಫೋರ್ಮನ್ ಈ ನಾಟಕವನ್ನು ಗ್ಲೋಬ್ ರಂಗಮಂದಿರದಲ್ಲಿ ನೋಡಿದುದಾಗಿ ದಾಖಲಿಸಿದ್ದಾರೆ.[೨೨]
ಮ್ಯಾಕ್ ಬೆತ್ ಮೊದಲ ಪುಟಗಳ ರೂಪದಲ್ಲಿ 1623ರಲ್ಲಿ ಮುದ್ರಣಗೊಂಡಿತು ಹಾಗೂ ಆ ಪುಟಗಳು ಮುಂದಿನ ಪಠ್ಯಕ್ಕೆ ದೊರೆತ ಏಕೈಕ ಆಧಾರವಾದವು. ಈಗ ಉಳಿದಿರುವ ಪಠ್ಯವು ಸರಳವಾಗಿ ನಂತರದ ಬರಹಗಾರರಿಂದ ಬದಲಿಸಲ್ಪಟ್ಟಿತು. ಗಮನಾರ್ಹವಾದ ಆಂಶವೆಂದರೆ ಥಾಮಸ್ ಮಿಡ್ಲ್ ಟನ್ ರ ನಾಟಕವಾದ ದ ವಿಚ್ (1615) ನ ಎರಡು ಹಾಡುಗಳನ್ನು ಅಳವಡಿಸಲಾಯಿತು; ಮಿಡ್ಲ್ ಟನ್ ಮಾಟಗಾತಿಯರು ಮತ್ತು ಹೆಕಾಟೆಯನ್ನು ಹೊಂದಿದ ಮತ್ತೊಂದು ದೃಶ್ಯವನ್ನೂ ಸೇರಿಸಿರುವುದಾಗಿ ಊಹೆಯೂ ಇದೆ. ಏಕೆಂದರೆ ಈ ದೃಶ್ಯಗಳು ವೀಕ್ಷಕರ ಅಪಾರ ಮೆಚ್ಚಿಗೆ ಪಡೆದಿದ್ದವು. 1869ನೆಯ ಇಸವಿಯ ಕ್ಲಾರೆಂಡನ್ ಆವೃತ್ತಿಯಿಂದಲೂ ಸೇರಿಸಲ್ಪಟ್ಟ ಸಂಪೂರ್ಣ ಅಂಕ III, ದೃಶ್ಯ v, ಮತ್ತು ಅಂಕ IV, ದೃಶ್ಯ Iರ ಕೆಲವು ಭಾಗಗಳನ್ನು ಒಳಗೊಂಡ ಪುನರಾವೃತ್ತಿಗಳಾಗಿದ್ದು ಆಧುನಿಕ ಪಠ್ಯಗಳಲ್ಲಿ ಆಗಾಗ್ಗೆ ಸೂಚಿತವಾಗಿವೆ.[೨೩] ಈ ಆಧಾರದ ಮೇಲೆ, ಹಲವಾರು ಪಂಡಿತರು ಹೆಕಾಟೆ ದೇವತೆಯೊಡನೆ ಇರುವ ಈ ಮೂರೂ ಅಂಕವಿರಾಮಗಳನ್ನು ಅನಧಿಕೃತವೆಂದು ಪರಿಗಣಿಸುತ್ತಾರೆ. ಹೆಕಾಟೆಯ ವಿಷಯವನ್ನೊಳಗೊಂಡೂ, ಈ ನಾಟಕವು ಸ್ಪಷ್ಟವಾಗಿ ಬಹಳ ಚಿಕ್ಕ ನಾಟಕವಾಗಿದೆ; ಆದ್ದರಿಂದ ಈ ಪುಟಪ್ರಕಟಿತ ಪಠ್ಯವು ಒಂದು ನಾಟಕವನ್ನು ವೇದಿಕೆಯಲ್ಲಿ ಆಡುವುದಕ್ಕಾಗಿ ಸಾಕಷ್ಟು ತುಂಡರಿಸಿ ಬರೆದಿದ್ದ ಪ್ರಾಂಪ್ಟ್ ಪುಸ್ತಕದಿಂದ ಹೆಕ್ಕಿದ ಪಠ್ಯವೋ, ಅಥವಾ ನಾಟಕಕ್ಕಾಗಿ ಅಳವಡಿಸಿದ ಒಬ್ಬ ನಾಟಕಕಾರನ ಪಠ್ಯವೋ ಆಗಿರಬೇಕೆಂಬ ಅಭಿಪ್ರಾಯವಿದೆ.
ವಿಷಯಗಳು ಮತ್ತು ಪ್ರಮುಖ ಲಕ್ಷಣಗಳು
ಬದಲಾಯಿಸಿThis section possibly contains original research. (September 2007) |
ಮ್ಯಾಕ್ ಬೆತ್ ಷೇಕ್ಸ್ ಪಿಯರ್ ರ ದುರಂತನಾಟಕಗಳ ಪೈಕಿ ಕೆಲವು ಪ್ರಮುಖ ರೀತಿಗಳಲ್ಲಿ ವಿಧಿವಿರೋಧವಾಗಿದೆ. ಇದು ಬಹಳ ಚಿಕ್ಕದು: ಒಥೆಲೋ ಮತ್ತು ಕಿಂಗ್ ಲಿಯರ್ ನಾಟಕಗಳಿಗಿಂತಲೂ ಒಂದು ಸಾವಿರ ಸಾಲುಗಳಷ್ಟು ಚಿಕ್ಕದು ಮತ್ತು ಹ್ಯಾಮ್ಲೆಟ್ ನಾಟಕದ ಅರ್ಧಕ್ಕಿಂತ ಕೊಂಚ ಹೆಚ್ಚು ದೀರ್ಘವಾದುದು. ಈ ಚಿಕ್ಕ ರೂಪವು ಹಲವವಾರು ವಿಮರ್ಶಕರು "ಮೂಲವನ್ನು ಬಹಳವೇ ತುಂಡರಿಸಿದ ಆವೃತ್ತಿಯ ಮೇಲೆ ಆಧಾರವಾದುದು, ಪ್ರಾಯಶಃ ಯಾವುದೋ ಒಂದು ಪ್ರದರ್ಶನಕ್ಕಾಗಿ ಹೊಂದಿದ ಪ್ರಾಂಪ್ಟ್ ಬುಕ್ ನಿಂದ ಪಡೆದುದು ಎಂಬುದನ್ನು ಸೂಚಿಸುತ್ತದೆ" ಎನ್ನಲು ಕಾರಣವಾಗಿದೆ. ಈ ಚಿಕ್ಕದಾದ ಗಾತ್ರವನ್ನು ಇತರ ಅಸ್ವಾಭಾವಿಕ ಲಕ್ಷಣಗಳಿಗೂ ತಳುಕುಹಾಕಲಾಗಿದೆ: ಮೊದಲನೆಯ ಅಂಕದ ತೀವ್ರಗತಿ, ಈ ದೃಶ್ಯಾವಳಿಯಂತೂ "ಅಭಿನಯಕ್ಕೆಂದೇ ಕತ್ತರಿಸಲ್ಪಟ್ಟ ಹಾಗೆ" ಕಾಣಿಸುತ್ತದೆ; ಮ್ಯಾಕ್ ಬೆತ್ ಹೊರತಾಗಿ ಇತರ ಪಾತ್ರಗಳ ಸಾದೃಶ ರಸಹೀನತೆ; ಷೇಕ್ಸ್ ಪಿಯರ್ ರ ಇತರ ದುರಂತನಾಟಕಗಳ ನಾಯಕರಿಗೆ ಹೋಲಿಸಿದರೆ ಸ್ವತಃ ಮ್ಯಾಕ್ ಬೆತ್ ರ ವಿಲಕ್ಷಣತೆ.
ಪಾತ್ರದ ದುರಂತವಾಗಿ
ಬದಲಾಯಿಸಿಅಲೆಕ್ಸಾಂಡರ್ ಪೋಪ್ ಮತ್ತು ಸ್ಯಾಮುಯಲ್ ಜಾನ್ಸನ್ ರ ಕಾಲದಿಂದಲಾದರೂ, ಈ ನಾಟಕದ ವಿಶ್ಲೇಷಣೆಯು ಮ್ಯಾಕ್ ಬೆತ್ ರ ಮಹದಾಸೆಯನ್ನು ಪ್ರಶ್ನಿಸುವ ವಿಷಯದ ಮೇಲೆಯೇ ಕೇಂದ್ರೀಕೃತವಾಗಿದ್ದು, ಈ ಗುಣವಿಶೇಷವು ಸಾಮಾನ್ಯವಾಗಿ ಎಷ್ಟು ಪ್ರಬಲವಾದುದೆಂದರೆ ಅದು ಇಡೀ ಪಾತ್ರವನ್ನೇ ನಿರೂಪಿಸುತ್ತದೆ ಎಂಬುದಾಗಿ ವಿಶ್ಲೇಷಿಸಲಾಗಿದೆ. ಮ್ಯಾಕ್ ಬೆತ್ ತನ್ನ ಸೇನಾ ಶೌರ್ಯಕ್ಕೆ ಹೆಸರುವಾಸಿಯಾದರೂ, ಸಂಪೂರ್ಣವಾಗಿ ದೂಷಿತನೆಂದು ಜಾನ್ಸನ್ ದೃಢೀಕರಿಸುತ್ತಾರೆ. ಈ ಅಭಿಪ್ರಾಯವು ವಿಮರ್ಶಾ ಸಾಹಿತ್ಯದಲ್ಲಿ ಮರುಕಳಿಸುತ್ತದೆ, ಹಾಗೂ, ಕ್ಯಾರೋಲಿನ್ ಸ್ಪರ್ಜಿಯೋನ್ ರ ಪ್ರಕಾರ ಈ ಅಭಿಪ್ರಾಯವನ್ನು ಸ್ವತಃ ಷೇಕ್ಸ್ ಪಿಯರ್ ರೇ ಬೆಂಬಲಿಸಿದ್ದಾರೆ; ತನ್ನ ದುರಂತ ನಾಟಕದ ನಾಯಕನನ್ನು ತುಚ್ಛೀಕರಿಸುವ ಸಲುವಾಗಿ ಅವರಿಗೆ ಧರಿಸಲು ಸೂಕ್ತವಲ್ಲದ ಉಡುಪುಗಳನ್ನು ಆರೋಪಿಸಿರುವಂತೆ ಹಾಗೂ ಅವರು ಬಳಸಿರುವ ಹಲವಾರು ನಿಮಿಸಂ ಗಳ ಮೂಲಕ ಮ್ಯಾಕ್ ಬೆತ್ ಹಾಸ್ಯಾಸ್ಪದವಾಗಿ ಕಾಣುವಂತೆ ಮಾಡಿರುವರೆನ್ನಿಸುತ್ತದೆ: ಮ್ಯಾಕ್ ಬೆತ್ ರ ವಸ್ತ್ರಗಳು ಅವರಿಗೆ ಬಹಳ ದೊಗಲೆ ಅಥವಾ ಅತಿ ಚಿಕ್ಕದೆಂದೆನಿಸುತ್ತವೆ - ಅವರ ಮಹದಾಸೆಯು ಬಹಳ ದೊಡ್ಡದಾಗಿದ್ದು, ನೂತನ ಹಾಗೂ ಅಕ್ರಮವಾದ ರಾಜನ ಪಾತ್ರಕ್ಕೆ ಅವರ ಅರ್ಹತೆಯು ಬಹಳ ಕಡಿಮೆಯಾದಂತೆ. ಮಾಟಗಾತಿಯರು ತಾನು ಕಾಡಾರ್ ನ ಜಾಗೀರುದಾರನಾಗುವನೆಂದು ಹೇಳಿದ ಮಾತುಗಳು ರಾಸ್ ರ ನುಡಿಗಳ ಮೂಲಕ ಧೃಡೀಕೃತವಾದಾಗ ಮ್ಯಾಕ್ ಬೆತ್ ಗೆ "ಎರವಲು ಪಡೆದ ದಿರಿಸುಗಳನ್ನು ಧರಿಸಿದಂತೆ" ಭಾವನೆ ಮೂಡಿದಾಗ(I, 3, ll. 108–109), ಬಾಂಕೋ ಹೀಗೆ ಹೇಳುತ್ತಾರೆ: "ನೂತನ ಗೌರವಗಳು ಅವರನ್ನು ಆವರಿಸುತ್ತವೆ/ನಮ್ಮ ವಿಚಿತ್ರವಾದ ವಸ್ತ್ರಗಳಂತೆ, ಆಕಾರಕ್ಕೆ ಹತ್ತಿಕೊಳ್ಳುವುದಿಲ್ಲ/ಕೇವಲ ಉಪಯೋಗಿಸುವ ಬಲದಿಂದ ಮಾತ್ರ (ಹೊಂದಿಕೊಂಡಂತಿರುತ್ತದೆ)" (I, 3, ll. 145–146). ಹಾಗೂ, ಕೊನೆಗೆ, ಪ್ರಜಾಪೀಡಕನು ಡನ್ಸಿನೇನ್ ನಲ್ಲಿ ವಾಸವಿದ್ದಾಗ, ಕೈಥ್ನೆಸ್ ಗೆ ಮ್ಯಾಕ್ ಬೆತ್ ಬಹಳ ದೊಡ್ಡ ವಸ್ತ್ರವನ್ನು ಬಹಳ ಚಿಕ್ಕ ಬೆಲ್ಟ್ ಬಳಸಿ ಧರಿಸಲು ಯತ್ನಿಸುತ್ತಿರುವ ಮನುಷ್ಯನಂತೆ ಕಾಣುತ್ತಾರೆ: "ಅವರು ಅವರ ವ್ಯಾಧಿಗ್ರಸ್ತ ಗುರಿಗಳನ್ನು ಹತ್ತಿಕ್ಕಲಾಗುತ್ತಿಲ್ಲ / ನಿಯಮಗಳ ಚೌಕಟ್ಟಿನ ಒಳಗೆ" (V, 2, ll. 14–15); ಆಂಗಸ್, ಇದೇ ರೀತಿಯ ಸಾಮ್ಯತೆಯನ್ನು ನೀಡುತ್ತಾ, ಮ್ಯಾಕ್ ಬೆತ್ ಗದ್ದುಗೆಯನ್ನು ಏರಿದ ಸಮಯದಿಂದಲೂ ಎಲ್ಲರೂ ಆಲೋಚಿಸಿದ ಪರಿಯನ್ನು ಕ್ರೋಢೀಕರಿಸಿ ಹೀಗೆನ್ನುತ್ತಾರೆ: "ಈಗ ಅವರ ಪಟ್ಟವು ಹೇಗೆನ್ನಿಸುತ್ತಿದೆಯೆಂದರೆ/ ಅದು ಅವರ ಸುತ್ತಲೂ ಅಳ್ಳಕವಾಗಿ ಹರಡಿಕೊಂಡಿರುವಂತೆ, ರಕ್ಕಸನ ವಸ್ತ್ರವು/ ಕುಳ್ಳ ಕಳ್ಳನಿಗೆ ತೊಡಿಸಿದಂತೆ" (V, 2, ll. 18–20).[೨೪]
ರಿಚರ್ಡ್ III ರ ರೀತಿಯೇ ಗುಣವಾದರೂ, ಆ ಪಾತ್ರದ ವಿಕಲ್ಪಿತಮತಿಯ ಮೂಲಕ ವಿಪುಲವಾದ ಆಕರ್ಷಣೆಯಿಲ್ಲ; ಮ್ಯಾಕ್ ಬೆತ್ ತನ್ನ ಅನಿವಾರ್ಯ ಪತನದವರೆಗೆ ರಕ್ತದ ಮಡುವಿನಲ್ಲಿ ಈಜುತ್ತಾ ಸಾಗುತ್ತಾರೆ. "ಮ್ಯಾಕ್ ಬೆತ್ ಕೊಲ್ಲುವ ಮನೋಭಾವದರೇನಲ್ಲ; ಅವರಿಗೆ ಕೇವಲ ಅಪರಿಮಿತವಾದ ಆಕಾಂಕ್ಷೆಯಿದ್ದಿತು, ಅದರ ಪ್ರಭಾವದಿಂದ ಸಿಂಹಾಸನವನ್ನು ಹೊಂದಲು ತಪ್ಪಿದರೆ ಒದಗುವ ಕೆಡುಕಿಗೆ ಹೋಲಿಸಿದರೆ ಕೊಲೆಯೇ ಕಡಿಮೆ ಮಟ್ಟದ ಅಪರಾಧವೆಂಬಂತೆ ಭಾಸವಾಗುತ್ತದೆ ಎನ್ನುವ ಮಟ್ಟಕ್ಕೆ ಅವರ ದುರಾಸೆ ಬಿಂಬಿತವಾಗಿದೆ" ಎಂದು ಬರೆಯುತ್ತಾರೆ ಕೆನೆತ್ ಮುಯಿರ್. ಇ.ಇ.ಸ್ಟಾಲ್ ರಂತಹ ಕೆಲವು ವಿಮರ್ಶಕರು ಈ ಪಾತ್ರಚಿತ್ರಣವು ಮಧ್ಯಕಾಲೀನ ಅಥವಾ ಸೆನೆಕನ್ ಸಂಪ್ರದಾಯದ ಯಥಾವತ್ ಚಿತ್ರಣವಾಗಿದೆ ಎಂದು ವಿವರಿಸುತ್ತಾರೆ. ಷೇಕ್ಸ್ ಪಿಯರ್ ರ ವೀಕ್ಷಕರು, ಈ ನಿಟ್ಟಿನಲ್ಲಿ, ಖಳನಾಯಕರು ಸಂಪೂರ್ಣ ಕೆಟ್ಟವರಾಗಿರಬೇಕೆಂಬ ನಿರೀಕ್ಷೆ ಹೊಂದಿದವರಾಗಿದ್ದರು, ಹಾಗೂ ಸೆನೆಕನ್ ಶೈಲಿಯು, ಖಳ ಗುಣಗಳನ್ನು ಪ್ರತಿಬಿಂಬಿಸುವ ವ್ಯಕ್ತಿಯನ್ನು ಉಚ್ಛಾಟಿಸುವ ಬದಲಿಗೆ, ಅದನ್ನು ಬೇಡುವ ಹಂತದಲ್ಲಿಯೇ ಇದ್ದರು.
ಆದರೂ, ಇತರ ವಿಮರ್ಶಕರಿಗೆ ಮ್ಯಾಕ್ ಬೆತ್ ರ ಹೇಗೆ ಪ್ರೇರಿತರಾದರು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ದೊರೆತಿಲ್ಲ. ಉದಾಹರಣೆಗೆ ರಾಬರ್ಟ್ ಬ್ರಿಡ್ಜಸ್, ಇಲ್ಲಿ ದ್ವಂದ್ವವನ್ನೇ ಗ್ರಹಿಸಿದರು:ಡಂಕನ್ ರ ಕೊಲೆಗೆ ಮೊದಲು ಮನೋಜ್ಞವಾಗಿ ಭೀತಿಯನ್ನು ವ್ಯಕ್ತಪಡಿಸಬಲ್ಲ ವ್ಯಕ್ತಿಯು ಕೊಲೆ ಮಾಡುವ ಸಾಮರ್ಥ್ಯ ಹೊಂದುವುದು ಅಸಾಧ್ಯವೆನಿಸುತ್ತದೆ. ಹಲವಾರು ವಿಮರ್ಶಕರಿಗೆ ಮೊದಲನೆಯ ಅಂಕದಲ್ಲಿ ಮ್ಯಾಕ್ ಬೆತ್ ಗೆ ದೊರಕುವ ಪ್ರೇರಣೆಯು ಅಸ್ಪಷ್ಟ ಮತ್ತು ಕಡಿಮೆ ಎಂದೆನಿಸುತ್ತದೆ. ಷೇಕ್ಸ್ ಪಿಯರ್ ರ ಮೂಲ ಕೃತಿಯಲ್ಲಿ ಪತಿ ಮತ್ತು ಪತ್ನಿ ಕುಳಿತು ತಮ್ಮ ಹಂಚಿಕೆಗಳನ್ನು ಚರ್ಚಿಸುವ ಒಂದು ದೃಶ್ಯ ಅಥವಾ ದೃಶ್ಯಗಳಿ ಇದ್ದವು ಎಂಬ ಕಲ್ಪನೆಯನ್ನು ಜಾನ್ ಡೋವರ್ ವಿಲ್ಸನ್ ಮುಂದಿಡುತ್ತಾರೆ. ಈ ಅರ್ಥೈಸುವಿಕೆಯು ಸಮಗ್ರವಾಗಿ ಪ್ರಮಾಣೀಕರಿಸಲಾಗುವುದಿಲ್ಲ; ಆದರೆ, ಮಹದಾಸೆಯು ಮ್ಯಾಕ್ ಬೆತ್ ರನ್ನು ಪ್ರೇರೇಪಿಸಿತು ಎಂಬ ಅಂಶವು ಜಾಗತಿಕವಾಗಿ ಅಂಗೀಕೃತವಾಗಿದೆ. ಅವರ ಮಹದಾಸೆಯಿಂದ ಪ್ರೇರೇಪಿತರಾಗಿ ಮಾಡಿದ ದುಷ್ಕೃತ್ಯಗಳು ಅವರನ್ನು ಮತ್ತಷ್ಟು ದುಷ್ಕೃತ್ಯಗಳನ್ನೆಸಗುವ ವರ್ತುಲದಲ್ಲಿ ಬಂಧಿಸಿದವು, ಮ್ಯಾಕ್ ಬೆತ್ ರೇ ಕಂಡಂತೆ: "ರಕ್ತದ ಮಡುವಿನಲ್ಲಿ ಸಿಲುಕಿದ್ದೇನೆ/ಎಷ್ಟು ಆಳಕ್ಕೆ ಮುಳುಗಿದ್ದೇನೆಂದರೆ, ನಾನು ಇನ್ನು ಹೀಗೆಯೇ ಈಜದಿದ್ದರೆ/ಹಿಂತಿರುಗುವುದೂ ಮುಂದೆಹೋಗುವಷ್ಟೇ ಕಷ್ಟವಾಗುತ್ತದೆ."
ನೈತಿಕ ಕ್ರಮದ ದುರಂತನಾಟಕವಾಗಿ
ಬದಲಾಯಿಸಿಮ್ಯಾಕ್ ಬೆತ್ ರ ಮಹದಾಸೆಯಿಂದ ಉಂಟಾದ ಅನರ್ಥಕರ ಸನ್ನಿವೇಶಗಳು ಅವರಿಗೆ ಮಾತ್ರ ಸೀಮಿತವಾದುವಾಗಿರಲಿಲ್ಲ. ಕೊಲೆ ನಡೆದ ವೇಳೆಗೆ ಅನತಿಕಾಲದಿಂದಲೇ ಸ್ಕಾಟ್ಲೆಂಡ್ ಸ್ವಾಭಾವಿಕ ಕ್ರಮಗಳ ವೈರುದ್ಧ್ಯಗಳು ಸಂಭವಿಸಲಾರಂಭಿಸಿದುದರಿಂದ ತಲ್ಲಣಗೊಂಡ ಸ್ಥಳವಾಗಿತ್ತೆಂದು ನಾಟಕವು ಸ್ಪಷ್ಟವಾಗಿ ಬಿಂಬಿಸುತ್ತದೆ. ಷೇಕ್ಸ್ ಪಿಯರ್ ಅಸ್ಥಿತ್ವದ ಮಹಾನ್ ಸರಪಳಿಯ ಬಗ್ಗೆ ಉಲ್ಲೇಖವಿಸಿಕೊಂಡಿದ್ದಿರಬಹುದು ಎನಿಸಿದರೂ, ನಾಟಕದಲ್ಲಿನ ಪಾತ್ರದ ವ್ಯತಿಕ್ರಮಗಳ ಪ್ರತಿಮೆಯು ಸವಿವರ ಬೌದ್ಧಿಕ ಅಧ್ಯಯನಕ್ಕೆ ಬೆಂಬಲಿತವಾಗಿಲ್ಲ. ಅವರು ಜೇಮ್ಸ್ ರ ರಾಜರ ದೈವಿಕ ಹಕ್ಕುಗಳ ಬಗ್ಗೆ ಇದ್ದ ನಂಬಿಕೆಗೆ ವಿಸ್ತೃತವಾದ ಶ್ಲಾಘನೆಯನ್ನು ವ್ಯಕ್ತಪಡಿಸಲೂ ಬಯಸಿರಬಹುದು; ಆದರೆ, ಹೆನ್ರಿ ಎನ್. ಪಾಲ್ ರಿಂದ ಸುದೀರ್ಘವಾಗಿ ರೂಪಿಸಲ್ಪಟ್ಟ ಈ ಸಿದ್ಧಾಂತವೂ ಜಾಗತಿಕವಾಗಿ ಅಂಗೀಕೃತವಾಗಿಲ್ಲ. ಆದರೆ, ಜೂಲಿಯಸ್ ಸೀಸರ್ ನಲ್ಲಿದ್ದಂತೆ ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲಗಳು ಪ್ರತಿಧ್ವನಿತವಾಗುತ್ತವೆ ಹಾಗೂ ಈ ವಸ್ತುನಿಷ್ಠ ಜಗತ್ತಿನ ಘಟನೆಗಳಿಂದ ತೀವ್ರತರವಾಗಿ ಹೆಚ್ಚುತ್ತವೆ. ಈ ನಾಟಕದಲ್ಲಿ ನೈಸರ್ಗಿಕ ಘಟನೆಗಳು ತಲೆಮೇಲಾಗುವಂತಹ ಸನ್ನಿವೇಶಗಳನ್ನು ಬಿಂಬಿಸಿದ್ದು, ಅದರಲ್ಲಿ ನಿದ್ರೆಯೂ ಒಂದು. ತಾನು "ನಿದ್ರೆಯನ್ನು ಕೊಲೆಗೈದಿದ್ದೇನೆ" ಎಂಬ ಮ್ಯಾಕ್ ಬೆತ್ ರ ಘೋಷಣೆಯು ಲೇಡಿ ಮ್ಯಾಕ್ ಬೆತ್ ನಿದ್ರೆಯಲ್ಲಿ ನಡೆಯುವುದನ್ನು ಸಾಂಕೇತಿಕವಾಗಿ ಬಿಂಬಿಸುತ್ತದೆ.
ಮಧ್ಯಕಾಲೀನ ದುರಂತ ಘಟನೆಗಳಿಗೆ ತಾನು ಆಭಾರಿಯಾಗಿರುವುದನ್ನು ಮ್ಯಾಕ್ ಬೆತ್ ಸಾಮಾನ್ಯವಾಗಿ ಒಪ್ಪುವುದನ್ನು ಹಲವಾರು ವೇಳೆ ನಾಟಕದಲ್ಲಿ ನೈತಿಕ ಕ್ರಮವನ್ನು ನಡೆಸಿಕೊಳ್ಳುವುದರಲ್ಲಿ ಪ್ರಮುಖವಾದ ಅಂಶವಾಗಿ ಕಾಣಲಾಗಿದೆ. ಗ್ಲೈನ್ ವಿಕ್ ಹ್ಯಾಮ್ ಹ್ಯಾರೋಯಿಂಗ್ ಆಫ್ ಹೆಲ್ ಎಂಬ ನಿಗೂಢ ನಾಟಕಕ್ಕೆ, ಪೋರ್ಟರ್ ಮೂಲಕ. ಈ ನಾಟಕವನ್ನು ತಳುಕು ಹಾಕುತ್ತಾರೆ. ಈ ನಾಟಕವು, ಸಾಮಾನ್ಯವಾಗಿ ಒಪ್ಪತಕ್ಕುದಕ್ಕಿಂತಲೂ "ಸಾಂಪ್ರದಾಯಿಕ ಕ್ರಿಶ್ಚಿಯನ್ ದುರಂತನಾಟಕ"ಗಳತ್ತ ಹೆಚ್ಚು ಸಂಕೀರ್ಣವಾಗಿದೆಯೆಂದು ಹೊವಾರ್ಡ್ ಫೆಲ್ಪೆರಿನ್ ವಾದಿಸುತ್ತಾರೆ; ಮಧ್ಯಕಾಲೀನ ಕರ್ಮಕಾಂಡಕ್ಕೆ ಸಂಬಂಧಿಸಿದ ನಾಟಕಗಳಲ್ಲಿನ ಪ್ರಜಾಹಿಂಸಕ ನಾಟಕಗಳಿಗೂ ಈ ನಾಟಕಕ್ಕೂ ಸಂಬಂಧವಿದೆಯೆಂಬುದು ಅವರ ಅಭಿಪ್ರಾಯವಾಗಿದೆ.
ದ್ವಿಲಿಂಗತ್ವದ ಸಿದ್ಧಾಂತವನ್ನು ಹಲವಾರು ಬಾರಿ ವ್ಯತಿಕ್ರಮ ಸಿದ್ಧಾಂತದ ಒಂದು ವಿಶೇಷ ಅಂಶವಾಗಿ ಕಾಣಲಾಗುತ್ತದೆ. ಸಾಮಾನ್ಯವಾಗಿ ಲಿಂಗಗಳಿಗೆ ಆರೋಪಿಸಲ್ಪಡುವ ಪಾತ್ರಗಳು ವಿರುದ್ಧವಾಗಿರುವಂತಹುದು ಮಾಟಗಾತಿಯರಲ್ಲಿ ಮತ್ತು ಲೇಡಿ ಮ್ಯಾಕ್ ಬೆತ್ ರಲ್ಲಿ ಮೊದಲ ಅಂಕದಲ್ಲಿ ಕಾಣುವ ಗುಣಗಳಾಗಿವೆ. ಆ ವೈರುದ್ಧ್ಯಗಳ ಬಗ್ಗೆ ಷೇಕ್ಸ್ ಪಿಯರ್ ಗೆ ಇದ್ದ ಸಹಾನುಭೂತಿಯ ಮಟ್ಟವು ಎಷ್ಟೇ ಇದ್ದರೂ, ನಾಟಕ ಕೊನೆಗೊಳ್ಳುವ ವೇಳೆಗೆ ಪುರುಷನು ಪುರುಷನ ಗುಣಗಳನ್ನೇ, ಸ್ತ್ರೀ ಸ್ತ್ರೀಯ ಗುಣಗಳನ್ನೇ ಮತ್ತೆ ಪಡೆದಿರುತ್ತಾರೆ. ಕೆಲವು ಸ್ತ್ರೀವಾದಿ ಮಾನಸಿಕ ವಿಶ್ಲೇಷಣಾ ವಿಮರ್ಶಕರು, ಜ್ಯಾನೆಟ್ ಅಡೆಲ್ಮನ್ ರಂತಹವರು, ನಾಟಕದಲ್ಲಿನ ಪುರುಷ, ಸ್ತ್ರೀಯರ ಪಾತ್ರಗಳನ್ನು ನಡೆಸಿಕೊಂಡಿರುವ ರೀತಿಯನ್ನು ನೈಸರ್ಗಿಕ ಕ್ರಮಕ್ಕೆ ವಿರೋಧವಾಗಿರುವ ಹೆಚ್ಚಿನ ಸಿದ್ಧಾಂತಕ್ಕೆ ತಳುಕು ಹಾಕಿದ್ದಾರೆ. ಈ ದೃಷ್ಟಿಕೋನದಲ್ಲಿ ನೋಡಿದಾಗ, ಮ್ಯಾಕ್ ಬೆತ್ ತಾನು ನೈತಿಕ ಕ್ರಮದಿಂದ ಹೊರಹೋದುದಕ್ಕೆ ಪ್ರಕೃತಿಯ(ಇದನ್ನು ಸ್ತ್ರೀರೂಪವೆಂದು ಪರಿಗಣಿಸಲಾಗುತ್ತದೆ) ಆವರ್ತಗಳಿಂದ ಹೊರತಾಗಿಸುವಂತಹ ಶಿಕ್ಷೆಯನ್ನು ವಿಧಿಸಲಾಗುತ್ತದೆ; ಪ್ರಕೃತಿಯೇ (ಬರ್ನಾಮ್ ವುಡ್ ನ ಚಲನೆಯೇ ಮೂರ್ತಿವೆತ್ತಂತೆ ತೋರಿಸಿದ್ದು) ನೈತಿಕ ಕ್ರಮವನ್ನು ಮರುಸ್ಥಾಪಿಸುವುದರಲ್ಲಿ ಒಂದು ಭಾಗವಾಗಿದೆ.
ಕಾವ್ಯಾತ್ಮಕ ದುರಂತನಾಟಕವಾಗಿ
ಬದಲಾಯಿಸಿಇಪ್ಪತ್ತನೆಯ ಶತಮಾನದ ಆದಿಯಲ್ಲಿ ನಾಟಕವನ್ನು ವಿಮರ್ಶಿಸುವಲ್ಲಿ ಪಾತ್ರದ ಅಧ್ಯಯನದ ಮೇಲೆ ಹೆಚ್ಚಾಗಿ ಅವಲಂಬಿಸುವುದರ ವಿರುದ್ಧ ವಿಮರ್ಶಕರು ದನಿಯೆತ್ತಿದರು. ಈ ಅವಲಂಬನೆಯು, ಆಂಡ್ರೂ ಸೆಸಿಲ್ ಬ್ರಾಡ್ಲೀಗೆ ಹೆಚ್ಚಾಗಿ ಆರೋಪಿಸಬಹುದಾದರೂ, ಮೇರಿ ಕೌಡೆನ್ ಕ್ಲಾರ್ಕ್ ರ ಕಾಲದಿಂದಲೂ ಸುಸ್ಪಷ್ಟವಾಗಿದ್ದಿತು; ಕ್ಲಾರ್ಕ್ ರೇ ಷೇಕ್ಸ್ ಪಿಯರ್ ರ ಸ್ತ್ರೀ ಪಾತ್ರಗಳ ನಾಟಕಪೂರ್ವ ಬದುಕಿನ ನಿಖರವಾದ, ಕೆಲವೊಮ್ಮೆ ಕಲ್ಪಿತವೆನಿಸಬಹುದಾದ, ವಿಚಾರಗಳನ್ನು ದಾಖಲಿಸಿದ್ದಾರೆ. ಉದಾಹರಣೆಗೆ, ಲೇಡಿ ಮ್ಯಾಕ್ ಬೆತ್ ಮೊದಲ ಅಂಕದಲ್ಲಿ ಉಲ್ಲೇಖಿಸುವ ಮಗುವು ಒಂದು ಮೂರ್ಖತೆಯಿಂದ ಕೂಡಿದ ಸೇನಾ ಚಟುವಟಿಕೆಯಲ್ಲಿ ಮರಣಹೊಂದಿತು ಎಂದು ಅವರು ಸೂಚಿಸುತ್ತಾರೆ.
ವಾಮಾಚಾರ ಮತ್ತು ಕೇಡು
ಬದಲಾಯಿಸಿಈ ನಾಟಕದಲ್ಲಿನ ಮೂವರು ಮಾಟಗಾತಿಯರು ಕತ್ತಲೆ, ದೊಂಬಿ ಮತ್ತು ಕದನವನ್ನು ಪ್ರತಿನಿಧಿಸುತ್ತಾರೆ ಹಾಗೂ ಅವರ ಪಾತ್ರಗಳು ಅವುಗಳ ದೂತರು ಮತ್ತು ಸಾಕ್ಷಿಗಳಾಗಿರುವಂತಹುದು.[೨೫] ಅವರ ಇರುವಿಕೆಯು ದ್ರೋಹ ಮತ್ತು ಬರಲಿರುವ ಕೇಡನ್ನು ಸಾರುತ್ತದೆ. ಷೇಕ್ಸ್ ಪಿಯರ್ ರ ದಿನಗಳಲ್ಲಿ, ಮಾಟಗಾತಿಯರನ್ನು ದಂಗೆಕೋರರಿಗಿಂತಲೂ ತುಚ್ಛವಾಗಿ ಕಾಣಲಾಗುತ್ತಿತ್ತು, "ಇರುವುವರಲ್ಲೆಲ್ಲಾ ಅತಿ ದೊಡ್ಡ ದ್ರೋಹಿ ಮತ್ತು ದಂಗೆಕೋರರೆಂದು ವಿಖ್ಯಾತರಾದವರು."[೨೬] ಅವರು ರಾಜದ್ರೋಹಿಗಳಷ್ಟೇ ಅಲ್ಲದೆ, ಆಧ್ಯಾತ್ಮಿಕ ದ್ರೋಹಿಗಳೂ ಆಗಿದ್ದರು. ಅವರಿಂದ ಉಂಟಾಗುವ ಬಹುತೇಕ ಗೊಂದಲವು ಅವರು ನಾಟಕದ ಚೌಕಟ್ಟನ್ನು ನೈಜತೆ ಮತ್ತು ಅಲೌಕಿಕದ ಸೀಮೆಗಳಲ್ಲಿ ಸವಾರಿಗೊಳಿಸುವ ಸಾಮರ್ಥ್ಯದಿಂದ ಸಂಭವಿಸುತ್ತದೆ. ಅವರು ಎರಡೂ ಜಗತ್ತುಗಳಲ್ಲಿ ಎಷ್ಟರ ಮಟ್ಟಿಗೆ ಬೇರುಬಿಟ್ಟಿರುವರೆಂದರೆ ಅವರ ಹತೋಟಿಯಲ್ಲಿ ವಿಧಿಯಿದೆಯೋ ಅಧವಾ ಅವರು ಅದರ ಪ್ರತಿನಿಧಿಗಳು ಮಾತ್ರವೋ ಎನ್ನುವುದು ಅಸ್ಪಷ್ಟವಾಗಿಯೇ ಉಳಿದಿದೆ. ನೈಜ ಜಗತ್ತಿನ ನಿಯಮಗಳಿಗೆ ಒಳಪಡದ ಅವರು ತರ್ಕಕ್ಕೆ ನಿಲುಕದವರಾಗಿರುತ್ತಾರೆ.[೨೭] ಮಾಟಗಾತಿಯರ ನುಡಿಗಳು ಮೊದಲ ಅಂಕದಲ್ಲಿ ಹೀಗಿವೆ: "ನ್ಯಾಯವೇ ಕೆಡುಕು, ಹಾಗೂ ಕೆಡುಕೇ ನ್ಯಾಯ: ಮಬ್ಬು ಬೆಳಕು ಮತ್ತು ಕೊಳಕಾದ ಗಾಳಿಯ ಮೂಲಕ ಸಾಗು"; ಈ ಮಾತುಗಳು, ಒಂದು ವಿಧವಾದ ಗೊಂದಲವನ್ನು ಉಂಟುಮಾಡುವುದರ ಮೂಲಕ, ಇಡೀ ನಾಟಕದ ಜಾಡನ್ನು ಸ್ಥಾಪಿಸುವಂತಹವಾಗಿರುತ್ತವೆ. ಹಾಗೆ ನೋಡಿದರೆ ಇಡೀ ನಾಟಕದಲ್ಲಿ ಕೆಡುಕು ಒಳಿತಿನ ರೀತಿಯಲ್ಲೂ, ಒಳಿತು ಕೆಡುಕಿನ ರೀತಿಯಲ್ಲೂ ಬಿಂಬಿತವಾಗುವ ಸಾಕಷ್ಟು ಸನ್ನಿವೇಶಗಳಿವೆ. "ದುಪ್ಪಟ್ಟು, ದುಪ್ಪಟ್ಟು ಶ್ರಮ, ಮತ್ತು ತೊಂದರೆ," ಎಂಬ ಸಾಲು (ಹಲವಾರು ಬಾರಿ ಅದರ ಅರ್ಥವೇ ಕಳೆದುಕೊಳ್ಳುವಷ್ಟರಮಟ್ಟಿಗೆ ವೈಭವೀಕರಿಸಲಾಗುತ್ತದೆ), ಮಾಟಗಾತಿಯರ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುತ್ತದೆ: ಅವರು ತಮ್ಮ ಸುತ್ತಮುತ್ತಲಿನ ಮನುಷ್ಯರಿಗೆ ತೊಂದರೆಯನ್ನು ಮಾತ್ರ ಬಯಸುತ್ತಾರೆ.[೨೮]
ಮಾಟಗಾತಿಯರು ಮ್ಯಾಕ್ ಬೆತ್ ಗೆ ದೊರೆ ಡಂಕನ್ ರನ್ನು ಕೊಲ್ಲಲು ನೇರವಾಗಿ ಹೇಳದಿದ್ದರೂ, ಅವರು ಮ್ಯಾಕ್ ಬೆತ್ ಗೆ ರಾಜಯೋಗವಿದೆಯೆಂದು ಹೇಳುವುದರ ಮೂಲಕ ಮ್ಯಾಕ್ ಬೆತ್ ರ ಮನದಲ್ಲಿ ಸೂಕ್ಷ್ಮವಾಗಿ ಬಯಕೆಯ ತೆರೆಯನ್ನು ಹೊಮ್ಮಿಸುತ್ತಾರೆ. ಈ ಆಲೋಚನೆಯನ್ನು ಮ್ಯಾಕ್ ಬೆತ್ ರ ಮನದಲ್ಲಿ ಮೂಡಿಸಿ, ಅವರು ಮ್ಯಾಕ್ ಬೆತ್ ಸ್ವಯಂ ನಾಶವಾಗುವ ಪಥಕ್ಕೆ ಪರಿಣಾಮಕಾರಿಯಾಗಿ ದಬ್ಬುತ್ತಾರೆ. ಈ ರೀತಿ ಆಸೆ ಹುಟ್ಟಿಸಿ ನಾಶಪಡಿಸುವ ಕ್ರಮವು ದೆವ್ವವು ಉಪಯೋಗಿಸುವ ಕ್ರಮವೆಂದು ಷೇಕ್ಸ್ ಪಿಯರ್ ರ ಕಾಲದಲ್ಲಿ ಬಹಳ ಜನ ನಂಬಿದ್ದರು. "ಮೊದಲು ದೆವ್ವವು ಮನಸ್ಸಿನಲ್ಲಿ ಆಲೋಚನೆಯನ್ನು ಹುಟ್ಟುಹಾಕುತ್ತದೆ, ನಂತರ ಆ ವ್ಯಕ್ತಿಯು ಆ ಆಲೋಚನೆಗಳನ್ನು ವೃದ್ಧಿಸಿ, ಅದರಲ್ಲಿ ಮುಳುಗಬಹುದು, ಅಥವಾ ಆ ಆಲೋಚನೆಗಳನ್ನು ತ್ಯಜಿಸಿಬಿಡಬಹುದು" ಎಂಬುದು ಅವರ ವಾದ. ಮ್ಯಾಕ್ ಬೆತ್ ಆ ಆಲೋಚನೆಗಳಲ್ಲಿ ತೊಡಗುತ್ತಾರೆ, ಬಾಂಕೋ ಆ ಆಲೋಚನೆಗಳನ್ನು ಹೊರತಳ್ಳುತ್ತಾರೆ.[೨೮]
ಸಾಮ್ಯತೆಯಂತೆ
ಬದಲಾಯಿಸಿThis section possibly contains original research. (May 2010) |
ಜೆ.ಎ. ಬ್ರಯಾಂಟ್ ಜೂನಿಯರ್ ರ ಪ್ರಕಾರ ಮ್ಯಾಕ್ ಬೆತ್ ಒಂದು ಸಾಮ್ಯತೆ ಎಂದೂ ತಿಳಿಯಬಹುದು–; ನಿರ್ದಿಷ್ಟವಾಗಿ ಬೈಬಲ್ ನ ಹಳೆಯ ಮತ್ತು ಹೊಸ ಒಡಂಬಡಿಕೆಯ ಕೆಲವು ವಿಭಾಗಗಳಿಗೆ ಸಾಮ್ಯತೆಯಂತೆ ತಿಳಿಯಬಹುದು. ಸಮ್ ಕ್ರಿಶ್ಚಿಯನ್ ಆಸ್ಪೆಕ್ಟ್ಸ್ ಆಫ್ ಷೇಕ್ಸ್ ಪಿಯರ್ ನಿಂದ:
No matter how one looks at it, whether as history or as tragedy, Macbeth is distinctively Christian. One may simply count the Biblical allusions as Richmond Noble has done; one may go further and study the parallels between Shakespeare's story and the Old Testament stories of Saul and Jezebel as Miss Jane H. Jack has done; or one may examine with W. C. Curry the progressive degeneration of Macbeth from the point of view of medieval theology.[೨೯][೩೦]
ಬ್ರಯಾಂಟ್ ದೊರೆ ಡಂಕನ್ ರ ಕೊಲೆ ಮತ್ತು ಕ್ರಿಸ್ತನ ಕೊಲೆಯ ಬಗ್ಗೆ ಆಳವಾದ ಸಮಾನತೆಗಳನ್ನು ಅಧ್ಯಯನ ಮಾಡುತ್ತಾರೆ, ಆದರೆ ಸಾಮಾನ್ಯ ಪ್ರೇಕ್ಷಕನಿಗೆ ಈ ನಾಟಕದಲ್ಲಿನ ಇತರ ಬೈಬಲ್ ಸಂಬಂಧಿತ ಸಾಮ್ಯತೆಗಳು ಸುಲಭವಾಗಿ ಗೋಚರಿಸುತ್ತವೆ. ಮ್ಯಾಕ್ ಬೆತ್ ರ ಪತನವು ಜೆನೆಸಿಸ್ 3ರ ಪತನವನ್ನು ಬಹಳವೇ ಹೋಲುತ್ತದೆ, ಮತ್ತು ಮ್ಯಾಕ್ ಬೆತ್ ಸಲಹೆಗಾಗಿ ಮಾಟಗಾತಿಯರ ಬಳಿ ಮತ್ತೆ ತೆರಳುವುದು 1 ಸ್ಯಾಮುಯೆಲ್ 28ರಲ್ಲಿನ ದೊರೆ ಸಾವ್ಲ್ ರ ಕಥೆಗೆ ಸಾಮ್ಯತೆಯನ್ನು ಹೊಂದಿದೆ.[೩೧][೩೨] ಈ ವಿಷಯಗಳನ್ನು ಷೇಕ್ಸ್ ಪಿಯರ್ ರ ವೀಕ್ಷಕರು ತಕ್ಷಣವೇ ಗ್ರಹಿಸಿಬಿಡುತ್ತಿದ್ದರು ಹಾಗೂ ಈ ನಾಟಕ ಮತ್ತು ಬೈಬಲ್ ನಲ್ಲಿ ಮತ್ತಷ್ಟು ಸಾಮ್ಯತೆಗಳಿಗಾಗಿ ಅಧ್ಯಯನ ನಡೆಸಿದರೆ ಈ ನಾಟಕವನ್ನು ಷೇಕ್ಸ್ ಪಿಯರ್ ಬರೆದಿರುವುದರ ಉದ್ದೇಶದ ಮೇಲೆ ಹೆಚ್ಚಿನ ಬೆಳಕು ಚೆಲ್ಲುತ್ತದೆ.
ಮೂಢನಂಬಿಕೆಗಳು ಮತ್ತು "ಸ್ಕಾಟಿಷ್ ನಾಟಕ"
ಬದಲಾಯಿಸಿಈಗಿನ ಕಾಲದಲ್ಲಿ ಯಾವುದೇ ನಾಟಕದ ನಿರ್ಮಾಣಕಾಲದಲ್ಲಿ ತೊಡಕುಗಳು ಅಥವಾ ಕೇಡು ಉಂಟದರೆ ಹಲವಾರು ಜನ ಅದನ್ನು ಕೇವಲ ಕಾಕತಾಳೀಯ ಎಂದುಬಿಡುತ್ತಾರೆ, ಆದರೆ ನಟರು ಮತ್ತು ನಾಟಕರಂಗದವರು ಮ್ಯಾಕ್ ಬೆತ್ ಎಂಬ ಹೆಸರನ್ನು ರಂಗಮಂದಿರದ ಒಳಗೆ ಉಚ್ಚರಿಸುವುದು ದುರದೃಷ್ಟಕರ ಎಂದು ನಂಬುತ್ತಾರೆ, ಹಾಗೂ ಕೆಲವು ಬಾರಿ ಆ ಹೆಸರನ್ನು ನೇರವಾಗಿ ಹೇಳದೆ ಬೇರೆ ಮಾರ್ಗಗಳನ್ನು ಬಳಸುತ್ತಾರೆ; ಉದಾಹರಣೆಗೆ ಈ ನಾಟಕವನ್ನು "ಸ್ಕಾಟಿಷ್ ನಾಟಕ",[೩೩] ಅಥವಾ "ಮ್ಯಾಕ್ ಬೀ", ಎಂದು ಕರೆಯುತ್ತಾರೆ ಅಥವಾ ಪಾತ್ರದ ಹೆಸರಿನ ಉಲ್ಲೇಖ ಮಾಡುವಾಗ "ಮಿಸ್ಟರ್ ಮತ್ತು ಮಿಸೆಸ್ M" ಎಂದೋ, ಅಥವಾ "ಸ್ಕಾಟಿಷ್ ದೊರೆ" ಎಂದೋ ಹೇಳುತ್ತಾರೆ.
ಇದಕ್ಕೆ ಕಾರಣವೆಂದರೆ ಷೇಕ್ಸ್ ಪಿಯರ್ ನಿಜವಾದ ಮಾಟಗಾತಿಯರು ಬಳಸುವ ನಿಜವಾದ ವಶೀಕರಣ ಮಂತ್ರಗಳನ್ನೇ ತನ್ನ ಪಠ್ಯದಲ್ಲಿ ಬಳಸಿದ್ದರಂತೆ ಹಾಗೂ ಇದರಿಂದ ಕುಪಿತರಾದ ಮಾಟಗಾತಿಯರು ಈ ನಾಟಕಕ್ಕೆ ಶಾಪ ಹಾಕಿದರಂತೆ.[೩೪] ಆದ್ದರಿಂದ ಈ ನಾಟಕದ ಹೆಸರನ್ನು ರಂಗಮಂದಿರದಲ್ಲಿ ಉಚ್ಚರಿಸಿದರೆ ನಿರ್ಮಿತವಾದ ನಾಟಕವು ವಿನಾಶವಾಗುವುದಂತೆ ಮತ್ತು ವಿಫಲವಾಗುವುದಂತೆ ಹಾಗೂ ಪಾತ್ರವರ್ಗದವರಿಗೆ ಗಾಯ ಅಥವಾ ಸಾವು ಸಂಭವಿಸಬಹುದಂತೆ. ಮ್ಯಾಕ್ ಬೆತ್ ನಾಟಕ ನಡೆಯುತ್ತಿರುವಾದ ಅಪಘಾತಗಳು, ಕೇಡುಗಳು ಮತ್ತು ಸಾವು ಸಹ ಸಂಭವಿಸಿರುವುದರ ಬಗ್ಗೆ ಸಾಕಷ್ಟು ಕಥೆಗಳಿಗವೆ(ಈ ಹೆಸರನ್ನು ಉಚ್ಚರಿಸಿದ ನಟರಿಗೂ ಹೀಗೆ ದುರದೃಷ್ಟ ಮೆಟ್ಟಿಕೊಂಡ ಕಥೆಗಳಿವೆ).[೩೩]
ಈ ಮೂಢನಂಬಿಕೆಗೆ ಇಂಬುಕೊಟ್ಟ ಮತ್ತೊಂದು ಪ್ರಸಂಗವೆಂದರೆ ಆಸ್ಟರ್ ಸ್ಥಳದ ಕೋಲಾಹಲ. ಮ್ಯಾಕ್ ಬೆತ್ ನಾಟಕದ ಎರಡು ಪ್ರದರ್ಶನಗಳಿಗೆ ಸಂಬಂಧಿತವಾಗಿ ಈ ಕೋಲಾಹಲವು ನಡೆದುದರಿಂದ, ಆ ಶಾಪದಿಂದಲೇ ಈ ಪ್ರಸಂಗವು ನಡೆಯಿತೆಂದು ಹಲವಾರು ಬಾರಿ, ಹಲವಾರು ಜನರು ಅಭಿಪ್ರಾಯಪಟ್ಟಿದ್ದಾರೆ.[೩೫]
ನಟನ ಮೇಲೆ ಅವಲಂಬಿತವಾಗಿ, ಈ ಶಾಪವನ್ನು ಪರಿಹರಿಸಲು ಹಲವಾರು ವಿಧಗಳಿವೆ. ಮೈಕಲ್ ಯಾರ್ಕ್ ಅನುಸರಿಸುತ್ತಿದ್ದ ವಿಧಾನವು ಹೀಗಿದೆ: ಯಾರು ಆ ಹೆಸರನ್ನು ಉಚ್ಚರಿಸುತ್ತಾರೋ ಅವರೊಡನೆ ಆ ವೇದಿಕೆಯ ಇರುವ ಕಟ್ಟಡದಿಂದ ಹೊರಕ್ಕೆ ಹೋಗುವುದು, ಕಟ್ಟಡಕ್ಕೆ ಮೂರು ಸುತ್ತು ಬರುವುದು, ಎಡಭುಜದ ಮೇಲಿನಿಂದ ಉಗುಳುವುದು, ಅಶ್ಲೀಲ ಪದನೊಂದನ್ನು ಹೇಳುವುದು, ನಂತರ ಕಟ್ಟಡಕ್ಕೆ ಮತ್ತೆ ಬರಲು ಆಮಂತ್ರಣಕ್ಕಾಗಿ ಕಾಯುವುದು.[೩೬] ಇದಕ್ಕೆ ಸಂಬಂಧಿತವಾದ ಮತ್ತೊಂದು ಆಚಾರವೆಂದರೆ ನಿಂತಲ್ಲಿಯೇ ಮೂರು ತಿರುಗು ಎಷ್ಟು ಜೋರಾಗಿ ಸಾಧ್ಯವೋ ಅಷ್ಟು ಜೋರಾಗಿ ತಿರುಗುವುದು, ಕೆಲವೊಮ್ಮೆ ಜೊತೆಜೊತೆಗೇ ಭುಜದ ಮೇಲಿನಿಂದ ಉಗುಳುವುದು ಮತ್ತು ಅಶ್ಲೀಲ ಪದವೊಂದನ್ನು ನುಡಿಯುವುದು. ಮತ್ತೊಂದು ಜನಪ್ರಿಯ "ಆಚರಣೆ"ಯೆಂದರೆ ಕೊಠಡಿಯಿಂದ ಹೊರಹೋಗುವುದು, ಮೂರು ಬಾರಿ ಬಾಗಿಲಿನ ಮೇಲೆ ಟಕಟಕಾಯಿಸುವುದು, ಒಳಕ್ಕೆ ಆಹ್ವಾನಿಸಲ್ಪಡುವುದು, ಮತ್ತು ಹ್ಯಾಮ್ಲೆಟ್ ನಾಟಕದಿಂದ ಒಂದು ಸಾಲನ್ನು ಹೇಳುವುದು. ಮತ್ತೊಂದು ವಿಧವೆಂದರೆ ದ ಮರ್ಚೆಂಟ್ ಆಫ್ ವೆನಿಸ್ ನಿಂದ ಕೆಲವು ಸಾಲುಗಳನ್ನು ಹೇಳುವುದು, ಈ ನಾಟಕವು ಅದೃಷ್ಟದ ನಾಟಕವೆಂದು ನಂಬಲಾಗಿತ್ತು.[೩೭]
ಪ್ರದರ್ಶನದ ಇತಿಹಾಸ
ಬದಲಾಯಿಸಿಷೇಕ್ಸ್ ಪಿಯರ್ ರ ಕಾಲದಲ್ಲಿ
ಬದಲಾಯಿಸಿಫೋರ್ಮನ್ ರ ದಾಖಲೆಯೊಂದರ ಹೊರತಾಗಿ ಷೇಕ್ಸ್ ಪಿಯರ್ ರ ಕಾಲದಲ್ಲಿ ಈ ನಾಟಕವು ಪ್ರದರ್ಶನಗೊಂಡಿರುವುದರ ಖಚಿತ ಮಾಹಿತಿಯಿಲ್ಲ. ಈ ನಾಟಕವು ಸ್ಕಾಟಿಷ್ ವಿಷಯವನ್ನು ಹೊಂದಿರುವುದರಿಂದ ಈ ನಾಟಕವನ್ನು ದೊರೆ ಜೇಮ್ಸ್ ಗಾಗಿಯೇ ಬರೆದು, ಅವರ ಮುಂದೆಯೇ ಚೊಚ್ಚಲ ಪ್ರದರ್ಶನವನ್ನು ನೀಡಲಾಯಿತೆಂದು ಕೆಲವೊಮ್ಮೆ ಹೇಳಲಾಗುತ್ತದೆ; ಆದರೆ ಈ ಕಲ್ಪನೆಯು ನಿಜವೆಂದು ನಂಬಲು ಯಾವುದೇ ಬಾಹ್ಯ ಪುರಾವೆಗಳು ದೊರೆತಿಲ್ಲ. ಈ ನಾಟಕದ ಪುಟ್ಟದಾದ ಗಾತ್ರ ಮತ್ತು ವೇದಿಕೆಗೆ ಸಂಬಂಧಿತ ಕೆಲವು ಅಂಶಗಳನ್ನು (ಉದಾಹರಣೆಗೆ ರಾತ್ರಿಯ ದೃಶ್ಯಗಳೇ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವುದು ಹಾಗೂ ಸಾಮಾನ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯ ವೇದಿಕೆಯ ಬಾಹ್ಯದಿಂದ ಬರುವ ಸದ್ದುಗಳು) ಈಗ ವಿಸ್ತೃತವಾಗಿರುವ ಪಠ್ಯವನ್ನು ಒಳಾಂಗಣದಲ್ಲಿ ನಾಟಕ ಆಡಲು ಅನುವಾಗುವಂತೆ ಪುನರಾವರ್ತಿಸಲಾಯಿತು ಎಂಬುದನ್ನು ಸೂಚಿಸುತ್ತದೆ, ಬಹುಶಃ 1608ರಲ್ಲಿ ದೊರೆಯ ಜನರು ವಶಪಡಿಸಿಕೊಂಡ ಬ್ಲ್ಯಾಕ್ ಫ್ರಿಯರ್ಸ್ ಥಿಯೇಟರ್ ನಲ್ಲಿ.[೩೮]
ರೆಸ್ಟೊರೇಷನ್ ಮತ್ತು 18ನೆಯ ಶತಮಾನ
ಬದಲಾಯಿಸಿರೆಸ್ಟೊರೇಷನ್ ನಲ್ಲಿ ಸರ್ ವಿಲಿಯಮ್ ದೇವ್ ನಂತ್ ಮ್ಯಾಕ್ ಬೆತ್ ನ ಚಮತ್ಕಾರಯುತವಾದ ಓಪ್ರಾ ಮಾದರಿಯ ಪ್ರದರ್ಶನವನ್ನಿತ್ತರು. ಅದು "ಎಲ್ಲಾ ಹಾಡುಗಾರಿಕೆ ಮತ್ತು ನೃತ್ಯಗಳಿಂದ ತುಂಬಿತ್ತು" ಮತ್ತು "ಮಾಟಗಾತಿಯರಿಗೆ ಹಾರಾಟಗಳು" ಮಾದರಿಯ ವಿಶೇಷ ಆಕರ್ಷಣೆಗಳು ವೇದಿಕೆಯಲ್ಲಿದ್ದವು(ಜಾನ್ ಡೌನೆಸ್, ರಾಸ್ಷಿಯಸ್ ಆಂಗ್ಲಿಕಾನಸ್, 1708). ದೇವ್ ನಂತ್ ರ ಪುನರಾವೃತ್ತಿಯೂ ಲೇಡಿ ಮ್ಯಾಕ್ ಡಫ್ ರ ಪಾತ್ರವನ್ನು ವೃದ್ಧಿಸಿತು, ಆಕೆಯನ್ನು ಲೇಡಿ ಮ್ಯಾಕ್ ಬೆತ್ ರ ಸೈದ್ಧಾಂತಿಕ ವೈರುದ್ಧ್ಯವಾಗಿ ಚಿತ್ರಿಸಲಾಯಿತು.[೩೯] ಏಪ್ರಿಲ್ 19, 1667ರಲ್ಲಿ ದೇವ್ ನಂತ್ ರ ಮ್ಯಾಕ್ ಬೆತ್ ಅನ್ನು ತಮ್ಮ ದಿನಚರಿ ಪುಸ್ತಕದಲ್ಲಿ "ವೇದಿಕೆಗೆ ಅತ್ಯುತ್ತಮವಾದ ನಾಟಕಗಳಲ್ಲಿ ಒಂದು ಹಾಗೂ ನೃತ್ಯ ಮತ್ತು ಸಂಗೀತದ ವಿಭಿನ್ನತೆ ಮತ್ತು ಅನೇಕತೆ ನಾನು ಕಂಡದ್ದರಲ್ಲೇ ಅತಿ ಶ್ರೇಷ್ಠ" ಎಂದು ಸ್ಯಾಮುಯಲ್ ಪೆಪ್ಪಿಸ್ ಬರೆದಿದ್ದಾರೆ.[೩೯] ಮುಂದಿನ ಶತಮಾನದ ಮಧ್ಯಭಾಗದವರೆಗೆ ದೇವ್ ನಂತ್ ರ ಮ್ಯಾಕ್ ಬೆತ್ ಆವೃತ್ತಿಯು ವೇದಿಕೆಯಲ್ಲಿ ರಾರಾಜಿಸಿತು. ಜೇಮ್ಸ್ ಕ್ವಿನ್ ರಂತಹ 18ನೆಯ ಶತಮಾನದ ಖ್ಯಾತ ಮ್ಯಾಕ್ ಬೆತ್ ಗಳು ಈ ಆವೃತ್ತಿಯನ್ನೇ ಉಪಯೋಗಿಸುತ್ತಿದ್ದರು.
ಬೇರಾವುದೇ ಸಂದರ್ಭದಲ್ಲೂ ಶ್ರೇಷ್ಠ ಮ್ಯಾಕ್ ಬೆತ್ ಎಂದು ಪರಿಗಣಿಸಲ್ಪಟ್ಟಿಲ್ಲದ ಚಾರ್ಲ್ಸ್ ಮ್ಯಾಕ್ಲಿನ್, ಅವರು ಕೋವೆಂಟ್ ಗಾರ್ಡನ್ ನಲ್ಲಿ 1773ರಲ್ಲಿ ನೀಡಿದ ಪ್ರದರ್ಶನದಿಂದ ನೆನಪಿನಲ್ಲಿ ಉಳಿದಿದ್ದಾರೆ: ಆ ಪ್ರದರ್ಶನದಲ್ಲಿಯೇ ಕೋಲಾಹಲವು ಉಂಟಾಗಿತು - ಅದಕ್ಕೆ ಕಾರಣ ಗ್ಯಾರಿಕ್ ಮತ್ತು ವಿಲಿಯಮ್ ಸ್ಮಿತ್ ರೊಡನೆ ಮ್ಯಾಕ್ಲಿನ್ ಗಿದ್ದ ವೈಮನಸ್ಯ . ಮ್ಯಾಕ್ ಬೆತ್ ಪಾತ್ರಧಾರಿಗೆ ಇಂಗ್ಲಿಷ್ ಬ್ರಿಗೆಡಿಯರ್ ನ ದಿರಿಸನ್ನು ತೊಡಿಸುವ ಪದ್ಧತಿಯನ್ನು ಬುಡಮೇಲು ಮಾಡಿ ಮ್ಯಾಕ್ಲಿನ್ ಸ್ಕಾಟಿಷ್ ದಿರಿಸು ಧರಿಸಿ ಅಭಿನಯಿಸಿದರು; ಅವರು ಗ್ಯಾರಿಕ್ ರ ಮರಣಕಾಲದ ನುಡಿಗಳನ್ನು ತೆಗೆದುಹಾಕಿದರು ಮತ್ತು ಲೇಡಿ ಮ್ಯಾಕ್ ಡಫ್ ರ ಪಾತ್ರಕ್ಕೆ ಮತ್ತಷ್ಟು ಕತ್ತರಿಯಾಡಿಸಿದರು. ಈ ಅಭಿನಯವು ಸಾಮಾನ್ಯವಾಗಿ ಗೌರವಯುತ ವಿಮರ್ಶೆಗಳನ್ನು ಗಳಿಸಿತಾದರೂ, ಜಾರ್ಜ್ ಸ್ಟೀವನ್ಸ್ ಮ್ಯಾಕ್ಲಿನ್ (ಆಗ ಅವರಿಗೆ ಎಂಬತ್ತು ವಯಸ್ಸು) ಆ ಪಾತ್ರಕ್ಕೆ ಸೂಕ್ತರಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ಯಾರಿಕ್ ರ ನಂತರ 18ನೆಯ ಶತಮಾನದಲ್ಲಿ ಅತಿ ವೈಭವೀಕೃತ ಮ್ಯಾಕ್ ಬೆತ್ ಎಂದರೆ ಜಾನ್ ಫಿಲಿಪ್ ಕೆಂಬಲ್; ಅವರು ಈ ಪಾತ್ರವನ್ನು ಬಹಳ ಜನಪ್ರಿಯವಾಗುವಂತೆ ತನ್ನ ತಂಗಿಯೊಡನೆ ಅಭಿನಯಿಸಿದರು; ಸಹೋದರಿ ಸಾರಾ ಸಿಡ್ಡನ್ಸ್ ರ ಲೇಡಿ ಮ್ಯಾಕ್ ಬೆತ್ ಪಾತ್ರಾಭಿನಯವು ನ ಭೂತೋ ನ ಭವಿಷ್ಯತಿ ಎಂಬಂತಿದ್ದಿತು ಎನ್ನಲಾಗಿದೆ. ಕೆಂಬಲ್ ಮ್ಯಾಕ್ಲಿನ್ ನಿರ್ಮಿತ ನಾಟಕಗಳಲ್ಲಿನ ನೈಜ ಪೋಷಾಕುಗಳತ್ತ ಮತ್ತು ಷೇಕ್ಸ್ ಪಿಯರಿಯನ್ ಭಾಷೆಯತ್ತ ಒಲವು ತೋರಿ ಅದನ್ನು ಮುಂದುವರಿಸಿದರು; ಅವರು ಅಂದಿನ ಸ್ಕಾಟಿಷ್ ದಿರಿಸು ಧರಿಸಿ ನಾಟಕ ಪ್ರಯೋಗ ಕೈಗೊಳ್ಳುತ್ತಿದ್ದರು ಎಂದು ವಾಲ್ಟರ್ ಸ್ಕಾಟ್ ಹೇಳುತ್ತಾರೆ. ಕೆಂಬಲ್ ರ ಅರ್ಥೈಸುವಿಕೆಗೆ ಮಿಶ್ರ ಪ್ರತಿಕ್ರಿಯೆ ಇದ್ದಿತು; ಆದರೆ. ಸಿಡ್ಡನ್ಸ್ ರನ್ನು ಸರ್ವಾನುಮತದಿಂದ ಹೊಗಳುತ್ತಿದ್ದರು. ಆಕೆಯು ಐದನೆಯ ಅಂಕದ "ನಿದ್ರೆಯಲ್ಲಿ ನಡೆಯುವ" ದೃಶ್ಯದಲ್ಲಿ ನೀಡುತ್ತಿದ್ದ ಅಭಿನಯವು ವಿಶೇಷ ಮನ್ನಣೆ ಗಳಿಸಿತು; ಲೈ ಹಂಟ್ ಅದನ್ನು "ಮಹತ್ತರ ಅಭಿನಯ" ಎಂದು ಕರೆದರು. ಮ್ಯಾಕ್ ಬೆತ್ ಗಿಂತಲೂ ಲೇಡಿ ಮ್ಯಾಕ್ ಬೆತ್ ರ ಖಳತ್ವವು ಹೆಚ್ಚು ಆಳವಾಗಿ ಮತ್ತು ಸಮರ್ಥವಾಗಿರುವಂತೆ ಬಿಂಬಿಸಲ್ಪಟ್ಟ ಮೊದಲ ವ್ಯಾಪಕವಾದ ಪ್ರಭಾವಿ ನಿರ್ಮಾಣಕ್ಕೆ ಕೆಂಬಲ್-ಸಿಡ್ಡನ್ಸ್ ರ ಅಭಿನಯಕೌಶಲವೇ ಜೀವಾಳ. ಬಾಂಕೋರ ಭೂತವು ವೇದಿಕೆಯ ಮೇಲೆ ಕಾಣಿಸಿಕೊಳ್ಳದಿದ್ದ ಮೊದಲ ನಾಟಕವಿದು.
ಕೆಂಬಲ್ ರ ಮ್ಯಾಕ್ ಬೆತ್ ಕೆಲವರಿಗೆ ಬಹಳ ಮರ್ಯಾದಾಪರ ಮತ್ತು ಷೇಕ್ಸ್ ಪಿಯರ್ ರ ಕೃತಿಗೆ ಹೋಲಿಸಿದಾಗ ಬಹಳ ಸಭ್ಯವೆಂದು ಕೆಲವು ವಿಮರ್ಶಕರಿಗೆ ಭಾಸವಾಯಿತು. ಅವರ ನಂತರ ಲಂಡನ್ ನ ಪ್ರಮುಖ ನಟರಾಗಿ ಬಂದ ಎಡ್ಮಂಡ್ ಕೀನ್ ತಮ್ಮ ಭಾವಾತಿರೇಕಗಳಿಗೆ, ವಿಶೇಷತಃ 5ನೆಯ ಅಂಕದಲ್ಲಿನ ಅಭಿನಯಕ್ಕೆ, ಟೀಕೆಗೊಳಗಾಗುತ್ತಿದ್ದರು. ಕೀನ್ ರ ಮ್ಯಾಕ್ ಬೆತ್ ಜಾಗತಿಕ ಮನ್ನಣೆಯನ್ನೇನೂ ಪಡೆಯಲಿಲ್ಲ; ವಿಲಿಯಮ್ ಹಾಝ್ಲಿಟ್ ಕೀನ್ ರ ಮ್ಯಾಕ್ ಬೆತ್ ಅವರ ರಿಚರ್ಡ್ IIIಯ ರೀತಿಯಲ್ಲಿಯೇ ಇದೆ ಎಂದು ದೂರಿದರು. ಇತರ ಪಾತರಗಳಲ್ಲಿ ಮಾಡಿದಂತೆಯೇ, ಕೀನ್ ತಮ್ಮ ಅಂಗಸಾಧನೆಯನ್ನು ಮ್ಯಾಕ್ ಬೆತ್ ರ ಮಾನಸಿಕ ಪತನದ ಕುರುಹಾಗಿ ಬಿಂಬಿಸಲು ಪ್ರಮುಖ ಅಂಶವಾಗಿ ಬಳಸಿಕೊಳ್ಳಲು ಯತ್ನಿಸಿದರು. ಮ್ಯಾಕ್ ಬೆತ್ ಕುಲೀನರೆಂಬ ಅಂಶದ ಮೇಲೆ ಒತ್ತು ನೀಡುತ್ತಿದ್ದ ಕೆಂಬಲ್ ರ ರೀತಿಯನ್ನು ಉಲ್ಟಾ ಮಾಡಿ, ಮ್ಯಾಕ್ ಬೆತ್ ರನ್ನು ಅಪರಾಧಿ ಮನೋಭಾವ ಮತ್ತು ಭಯದ ಭಾರಕ್ಕೆ ಕುಸಿಯುವಂತಹ ನಿರ್ದಯಿ ರಾಜಕಾರಣಿಯಂತೆ ಬಿಂಬಿಸಿದರು. ಆದರೆ ಕೀನ್ ದೃಶ್ಯ ಮತ್ತು ಉಡುಪುಗಳ ವೈಭವೀಕರಣದತ್ತ ಸಾಗಿದ್ದ ಕ್ರಮವನ್ನು ತಡೆಯಲು ಯಾವುದೇ ಪ್ರಯತ್ನಗಳನ್ನು ಮಾಡಲಿಲ್ಲ.
ಹತ್ತೊಂಬತ್ತನೆಯ ಶತಮಾನ
ಬದಲಾಯಿಸಿನಂತರದ ಪ್ರಮುಖವಾದ ಲಂಡನ್ ನ ನಟ, ವಿಲಿಯಮ್ಸ್ ಚಾರ್ಲ್ಸ್ ಮ್ಯಾಕ್ರೆಡಿಯವರ ಮ್ಯಾಕ್ ಬೆತ್, ಕೀನ್ ರಿಗೆ ದೊರೆತಷ್ಟಾದರೂ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು. 1820ರಕ್ಕು ಕೋವೆಂಟ್ ಗಾರ್ಡನ್ ನಲ್ಲಿ ಮ್ಯಾಕ್ರೆಡಿ ತಮ್ಮ ಚೊಚ್ಚಲ ಪ್ರದರ್ಶನವನ್ನಿತ್ತರು. ಹಾಝ್ಲಿಟ್ ಗಮನಿಸಿದಂತೆ, ಮ್ಯಾಕ್ರೆಡಿಯ ಪಾತ್ರಾಧ್ಯಯನವು ಕೇವಲ ಮಾನಸಿಕವಾದುದಾಗಿತ್ತು; ಮಾಟಗಾತಿಯರು ತಮ್ಮ ಎಲ್ಲಾ ಅಲೌಕಿಕ ಶಕ್ತಿಗಳನ್ನು ಕಳೆದುಕೊಂಡರು, ಹಾಗೂ ಮ್ಯಾಕ್ ಬೆತ್ ರ ಪತನವು ಕೇವಲ ಮ್ಯಾಕ್ ಬೆತ್ ರ ಪಾತ್ರದಲ್ಲಿನ ದ್ವಂದ್ವಗಳಿಂದಲೇ ಉಂಟಾದವು. ಮ್ಯಾಕ್ರೆಡಿಯ ಬಹಳ ಪ್ರಖ್ಯಾರ ಲೇಡಿ ಮ್ಯಾಕ್ ಬೆತ್ ಹೆಲೆನಾ ಫಾಸಿಟ್, ಇನ್ನೂ ತಮ್ಮ 20ರ ಹರೆಯದಲ್ಲಿರುವಾಗಲೇ ಚೊಚ್ಚಲ ಪಾತ್ರ ವಹಿಸಿ ಹೀನಾಯವಾದ ಸೋಲು ಕಂಡರು, ಆದರೆ ನಂತರದ ದಿನಗಳಲ್ಲಿ, ಸಿಡ್ಡನ್ ರಂತಲ್ಲದೆ. ಸಮಕಾಲೀನ ಸ್ತ್ರೀಯರ ಉಡುಗೆತೊಡುಗೆಗಳ ಚಿಂತನೆಗೆ ಹೊಂದುವಂತಹ ಪಾತ್ರದ ಅರ್ಥೈಸುವಿಕೆಯ ಮೂಲಕ ಖ್ಯಾತಿಯನ್ನು ಪಡೆದರು. ಮ್ಯಾಕ್ರೆಡಿ ಅಮೆರಿಕದಲ್ಲಿ "ವಿಶ್ರಮಿಸಿದ" ನಂತರ, ಅವರು ಈ ಪಾತ್ರದಲ್ಲಿ ಅಭಿನಯಿಸುವುದನ್ನು ಮುಂದುವರಿಸಿದರು; 1849ರಲ್ಲಿ ಅಮೆರಿಕದ ನಟ ಎಡ್ವಿನ್ ಫಾರೆಸ್ಟ್ ಅವರಿಗೆ ಪ್ರತಿಸ್ಪರ್ಧಿಯಾದರು, ಅವರ ಪಕ್ಷದವರು ಮ್ಯಾಕ್ರೆಡಿಯನ್ನು ಆಸ್ಟರ್ ಸ್ಥಳದಲ್ಲಿ ಕಂಡು ಬುಸುಗುಟ್ಟಿದರು, ಇದರಿಂದ ಸಾಮಾನ್ಯವಾಗಿ ಆಸ್ಟರ್ ಸ್ಥಳದ ಕೋಲಾಹಲ ಎಂದು ಕರೆಯಲ್ಪಡುವ ಕೋಲಾಹಲವು ಉಂಟಾಯಿತು.
ಮಧ್ಯ-ಶತಮಾನದ ಇಬ್ಬರು ಪ್ರಮುಖ ಮ್ಯಾಕ್ ಬೆತ್ ಗಳು, ಸ್ಯಾಮುಯಲ್ ಫೆಲ್ಪ್ಸ್ ಮತ್ತು ಚಾರ್ಲ್ಸ್ ಕೀನ್ ಇಬ್ಬರೂ ವಿಮರ್ಶಾತ್ಮಕ ಉಭಯಭಾವಗಳನ್ನೂ ಮತ್ತು ಜನಪ್ರಿಯ ಯಶವನ್ನೂ ಪಡೆದರು. ಪಾತ್ರದ ಅರ್ಥೈಸುವಿಕೆಗಿಂತಲೂ ವೇದಿಕೆಗೆ ಅಳವಡಿಸಿಕೊಂಡಂತಹ ಅಂಶಗಳಿಂದ ಇಬ್ಬರೂ ಖ್ಯಾತಿ ಪಡೆದಿದ್ದಾರೆ. ಸ್ಯಾಡ್ಲರ್ಸ್ ವೆಲ್ಸ್ ಥಿಯೇಟರ್ ನಲ್ಲಿ ಫೆಲ್ಪ್ಸ್ ಷೇಕ್ಸ್ ಪಿಯರ್ ರ ಸರಿಸುಮಾರು ಸಕಲ ಮೂಲ ಪಠ್ಯಗಳನ್ನೂ ಮತ್ತೆ ಹೊರತಂದರು. ಅವರು ದ್ವಾರಪಾಲಕನ ದೃಶ್ಯದ ಮೊದಲರ್ಧ ಭಾಗವನ್ನು ಮತ್ತೆ ಪರಿಚಯಿಸಿದರು; ಈ ದೃಶ್ಯವನ್ನು ದೇವ್ ನಂತ್ ನಂತರ ಎಲ್ಲಾ ನಿರ್ದೇಶಕರು ಕಡೆಗಣಿಸಿದ್ದರು; ಎರಡನೆಯ ಭಾಗದಲ್ಲಿ ಅಶ್ಲೀಲತೆ ಹೆಚ್ಚಿದ್ದುದರಿಂದ ಅದನ್ನು ಕೈಗೆತ್ತಿಕೊಳ್ಳಲಿಲ್ಲ. ಅವರು ಸೇರಿಸಲ್ಪಟ್ಟಿದ್ದ ಸಂಗೀತವನ್ನು ತೆಗೆದುಹಾಕಿದರು, ಮತ್ತು ಮಾಟಗಾತಿಯರ ಪಾತ್ರವನ್ನು ಕಡತದಲ್ಲಿದ್ದ ಮಟ್ಟಕ್ಕೆ ಇಳಿಸಿದರು. ಅಷ್ಟೇ ಪ್ರಮುಖವಾಗಿ, ಆ ಪುಟಗಳಲ್ಲಿ ನೀಡಿದ್ದಂತಹ ಮ್ಯಾಕ್ ಬೆತ್ ರ ಮರಣದ ಸನ್ನಿವೇಶವನ್ನೂ ಕೈಗೆತ್ತಿಕೊಂಡರು.[೪೦] ವಿಕ್ಟೋರಿಯನ್ ಸಂದರ್ಭದಲ್ಲಿ ಈ ನಿರ್ಧಾರಗಳೆಲ್ಲವೂ ಯಶಸ್ವಿಯಾದವೆಂದೇನಲ್ಲ ಮತ್ತು ಫೆಲ್ಪ್ಸ್ ಷೇಕ್ಸ್ ಪಿಯರ್ ಮತ್ತು 1844ರಿಂದ 1861ರ ವರೆಗೆ ಮಾಡಿದ ಡಝನ್ ಗಿಂಗಲೂ ಹೆಚ್ಚು ನಾಟಕ ನಿರ್ಮಾಣಗಳಲ್ಲಿ ದೇವ್ ನಂತ್ ರ ಪಠ್ಯಗಳ ಹಲವಾರು ಸಂಯುಕ್ತತೆಗಳೊಡನೆ ಪ್ರಯೋಗ ನಡೆಸಿದರು. ಅವರ ಅತಿ ಯಶಸ್ವಿ ಲೇಡಿ ಮ್ಯಾಕ್ ಬೆತ್ ಇಸಾಬೆಲಾ ಗ್ಲಿನ್ ಆಗಿದ್ದರು, ಅವರ ಅಧಿಕಾರಯುತ ನಿಲುವು ಕೆಲವು ವಿಮರ್ಶಕರಿಗೆ ಸಿಡ್ಡನ್ಸ್ ರನ್ನು ನೆನಪಿಸಿದವು.
1850ರ ನಂತರ ಪ್ರಿನ್ಸೆಸ್ಸ್ ಥಿಯೇಟರ್ ನಲ್ಲಿ ಕೀನ್ ರಚಿಸಿ ಆಡಿದ ನಾಟಕದ ಅಮೋಘ ಅಂಶವೆಂದರೆ ಪಾತ್ರಗಳು ತೊಡುತ್ತಿದ್ದ ಪೋಷಾಕುಗಳು ಸಮಂಜಸತೆ. ಆಧುನಿಕ ಸಂಗೀತಮಯ ಕೌತುಕಭರಿತ ನಾಟಕದಲ್ಲಿ ಕೀನ್ ತಮ್ಮ ಶ್ರೇಷ್ಠ ಯಶಸ್ಸನ್ನು ಸಾಧಿಸಿದರು ಹಾಗೂ ಅವರು ಶ್ರೇಷ್ಠವಾದ ಎಲಿಝಬೆತಿಯನ್ ಪಾತ್ರಗಳನ್ನು ನಟಿಸುವಷ್ಟು ಪೂರ್ವಾಗ್ರಹ ಹೊಂದಿಲ್ಲವೆಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು. ವೀಕ್ಷಕರಿಗೆ ಇದರ ಬಗ್ಗೆ ಯಾವುದೇ ತೊಂದರೆ ಕಾಣಲಿಲ್ಲ; 1853ರ ಒಂದು ನಿರ್ಮಾಣವು ಇಪ್ಪತ್ತು ವಾರಗಳ ಕಾಲ ನಡೆಯಿತು. ಇದಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಚಾರಿತ್ರಿಕ ನಿಖರತೆಗೆ ಕೀನ್ ನೀಡುತ್ತತಿದ್ದ ವಿಶೇಷ ಕಾಳಜಿಯೂ ಒಂದು ಎಂದುಕೊಳ್ಳಬಹುದು; ಅವರು ನಿರ್ಮಾಪಕರಾದ ನಾಟಕಗಳಲ್ಲಿ "ಸಸ್ಯಶಾಸ್ತ್ರವೂ ಸಹ ಐತಿಹಾಸಿಕವಾಗಿ ನಿಖರವಾಗಿರುತ್ತಿತ್ತು" ಎನ್ನುತ್ತಾರೆ ಅಲ್ಲಾರ್ಡೈಸ್ ನಿಕೋಲ್.
1875ರಲ್ಲಿ ಈ ಪಾತ್ರದಲ್ಲಿ ಲೈಸಿಯಮ್ ಥಿಯೇಟರ್ ನಲ್ಲಿ ನಟಿಸಲು ಯತ್ನಿಸಿದ ಹೆನ್ರಿ ಇರ್ವಿಂಗ್ ರ ಚೊಚ್ಚಲ ಪ್ರಯತ್ನವು ವಿಫಲವಾಯಿತು. ನಿರ್ಮಾಪಕ ಸಿಡ್ನಿ ಫ್ರಾನ್ಸಿಸ್ ಬೇಟ್ ಮನ್ ನಿರ್ಮಿಸಿದ ಮತ್ತು ತಾರೆ ಕೇಟ್ ಜೋಸೆಫೈನ್ ಬೇಟ್ ಮನ್ ಅಭಿನಯಿಸಿದ ಈ ನಾಟಕದಲ್ಲಿ ಇರ್ವಿಂಗ್ ತಮ್ಮ ವ್ಯವಸ್ಥಾಪಕರಾಗಿದ್ದ ಹೆಝೆಕಿಯಾ ಲಿಂಥಿಕಮ್ ಬೇಟ್ ಮನ್ ರ ಸಾವಿನಿಂದ ಜರ್ಝರಿತರಾಗಿದ್ದರೇನೋ. ಈ ನಾಟಕವು ಎಂಬತ್ತು ಪ್ರದರ್ಶನಗಳನ್ನು ಕಂಡರೂ ಅವರ ಮ್ಯಾಕ್ ಬೆತ್ ಪಾತ್ರವು ಅವರ ಹ್ಯಾಮ್ಲೆಟ್ ಪಾತ್ರಕ್ಕಿಂತಲೂ ಕಳಪೆಯದ್ದಾಗಿತ್ತೆಂದು ಪರಿಗಣಿಸಲಾಗಿತ್ತು. ಅವರು ಮತ್ತೆ ಈ ಪಾತ್ರವನ್ನು ಎಲೆನ್ ಟೆರಿಯವರ ಜೊತೆಯಲ್ಲಿ ಲೈಸಿಯಮ್ ನಲ್ಲಿ 1888ರಲ್ಲಿ ಕೈಗೊಂಡಾಗ ಅವರು ಸುಧಾರಿತ ಅಭಿನಯ ನೀಡಿದರು ಮತ್ತು ನಾಟಕವು 150 ಪ್ರದರ್ಶನಗಳನ್ನು ಕಂಡಿತು.[೪೧] ಹರ್ಮನ್ ಕ್ಲೀಯ್ನ್ ರ ಒತ್ತಾಯದ ಮೇರೆಗೆ ಅವರು ಆರ್ಥರ್ ಸುಲೀವಾನ್ ರನ್ನು ಕೆಲವು ಘಟನಾತ್ಮಕ ಸಂಗೀತದ ತುಣುಕುಗಳನ್ನು ಈ ನಾಟಕಕ್ಕಾಗಿ ಬರೆಯಲು ನಿಯಮಿಸಿಕೊಂಡರು.[೪೨] ಬ್ರಾಮ್ ಸ್ಟೋಕರ್ ರಂತಹ ಗೆಳೆಯರು ಇವರ "ಮಾನಸಿಕ" ಅಧ್ಯಯನವನ್ನು ಸಮರ್ಥಿಸಿಕೊಳ್ಳುತ್ತಾ, ಮ್ಯಾಕ್ ಬೆತ್ ಡಂಕನ್ ರನ್ನು ಕೊಲ್ಲುವ ಕನಸನ್ನು ನಾಟಕದ ಆರಂಭಕ್ಕೆ ಮುಂಚೆಯೇ ಕನಸಿನಲ್ಲಿ ಕಂಡಿದ್ದರು ಎಂಬ ಕಲ್ಪನೆಯನ್ನು ಮೂಲವಾಗಿರಿಸಿಕೊಂಡಿದ್ದರು. ಅವರ ಟೀಕಾಕಾರರಲ್ಲಿ ಒಬ್ಬರಾದ ಹೆನ್ರಿ ಜೇಮ್ಸ್ ಅವರು ಮನಬಂದಂತೆ ನುಡಿಗಳನ್ನು ಬದಲಾಯಿಸಿದುದನ್ನು (ಲೇಡಿ ಮ್ಯಾಕ್ ಬೆತ್ ರ ಮರಣದ ಸನ್ನಿವೇಶದಲ್ಲಿ ಮಾತನಾಡುತ್ತಾ "ಷುಡ್ ಹ್ಯಾವ್" ಎನ್ನುವುದರ ಬದಲು "ವುಡ್ ಹ್ಯಾವ್" ಎಂದದ್ದು) ಮತ್ತು ಅವರು ಪಾತ್ರದತ್ತ ಹೊಂದಿದ್ದ "ವಿಕಲ್ಪಿತ" "ಅತಿ ಕೋಮಲ" ಭಾವನೆಗಳನ್ನು ಖಂಡಿಸಿದರು.[೪೩]
ಇಪ್ಪತ್ತನೆಯ ಶತಮಾನದಿಂದ ಇಂದಿನವರೆಗೆ
ಬದಲಾಯಿಸಿಬ್ಯಾರಿ ವಿನ್ಸೆಂಟ್ ಜಾಕ್ಸನ್ ಪ್ರಭಾವಪೂರಿತ ಆಧುನಿಕ ಪೋಷಾಕು ಧರಿಸಲ್ಪಟ್ಟ ನಾಟಕದ ಆವೃತ್ತಿಯೊಂದನ್ನು 1928ರಲ್ಲಿ ಬರ್ಮಿಂಗ್ ಹ್ಯಾಂ ರಿಪೆರ್ಟರಿ ಯಲ್ಲಿ ರಚಿಸಿ ಆಡಿದರು; ಈ ನಾಟಕವು ಲಂಡನ್ ತಲುಪಿ ರಾಯಲ್ ಕೋರ್ಟ್ ಥಿಯೇಟರ್ ನಲ್ಲಿ ಪ್ರದರ್ಶನಗೊಂಡಿತು. ನಾಟಕವು ಜನರಿಂದ ಮಿಶ್ರ ಪ್ರತಿಕ್ರಿಯೆ ಗಳಿಸಿತು; ಎರಿಕ್ ಮಾಟ್ಯುರಿನ್ ರನ್ನು ಅಸಮರ್ಪಕ ಮ್ಯಾಕ್ ಬೆತ್ ಎಂದು ತೀರ್ಮಾನಿಸಲಾಯಿತಾದರೂ ಮೇರಿ ಮೆರಾಲ್ ರ ಖಳನಾಯಕಿಯ ಪಾತ್ರಕ್ಕೆ ಸಕಾರಾತ್ಮಕ ಟೀಕೆಗಳು ದೊರೆತವು. ದ ಟೈಮ್ಸ್ ಅದನ್ನು "ತಿರಸ್ಕರಣೀಯ ವಿಫಲತೆ" ಎಂದು ಕರೆಯಿತಾದರೂ ಈ ರಚನೆಯು ಚಾರ್ಲ್ಸ್ ಕೀನ್ ರ ಕಾಲದಲ್ಲಿ ನುಸುಳಿದ್ದ ದೃಶ್ಯ ಮತ್ತು ಪುರಾತತ್ವದ ವಿಪರೀತ ವೈಭವೀಕರಣದ ಒಲವನ್ನು ತಳ್ಳಿಹಾಕಿತು.
ಬಹಳವೇ ಪ್ರಕಟಿತವಾದ ಮತ್ತು ಪ್ರಚಾರ ಗಳಿಸಿದ 20ನೆಯ ಶತಮಾನದ ಆವೃತ್ತಿಗಳನ್ನು ಫೆಡರಲ್ ಥಿಯೇಟರ್ ಯೋಜನೆಯ ಅಡಿಯಲ್ಲಿ, ಹಾರ್ಲೆಮ್ ನ ಲಫಾಯೆಟೆ ಥಿಯೇಟರ್ ನಲ್ಲಿ 1936ರ 14ನೆಯ ಏಪ್ರಿಲ್ ನಿಂದ 20ನೆಯ ಜೂನ್ ವರೆಗೆ ಆಡಲಾಯಿತು. ಆರ್ಸನ್ ವೆಲ್ಸ್ ತಮ್ಮ ಮೊದಲನೆಯ ರಂಗರಚನೆಯಲ್ಲಿ ಜ್ಯಾಕ್ ಕಾರ್ಟರ್ ಮತ್ತು ಎಡ್ನಾ ಥಾಮಸ್ ಹಾಗೂ ಬಾಂಕೋರ ಪಾತ್ರದಲ್ಲಿನ ಕೆನಡಾ ಲೀ ಯವರನ್ನು ಈ ಸರ್ವ ಆಫ್ರಿಕನ್ ಅಮೆರಿಕನ್ ನಿರ್ಮಾಣದಲ್ಲಿ ನಿರ್ದೇಶಿಸಿದರು. ಇದು ವೂಡೂ ಮ್ಯಾಕ್ ಬೆತ್ ಎಂದೇ ಖ್ಯಾತವಾಯಿತು, ಏಕೆಂದರೆ ವೆಲ್ಸ್ ಈ ನಾಟಕವನ್ನು ವಸಾಹತೋತ್ತರ ಹಾಯ್ತಿಯಲ್ಲಿ ಸ್ಥಾಪಿಸಿದರು. ಅವರ ನಿರ್ದೇಶನವು ಚಮತ್ಕಾರ ಮತ್ತು ನಿಗೂಢತೆಗಳಿಗೆ ಒತ್ತು ನೀಡಿತು; ಅವರು ಬಳಸಿದ ದಝನ್ ಗಟ್ಟಲೆ "ಆಫ್ರಿಕನ್" ಡ್ರಂಗಳು ದೇವ್ ನಂತ್ ರ ಮಾಟಗಾತಿಯರ ಸಮೂಹಗಾನವನ್ನು ನೆನಪಿಗೆ ತಂದವು. ವೆಲ್ಸ್ ನಂತರ 1948ರ ಚಿತ್ರಕ್ಕೆ ಅಳವಡಿಸಲ್ಪಟ್ಟ ಒಂದು ನಾಟಕದಲ್ಲಿ ಅಭಿನಯಿಸಿ, ಅದನ್ನು ನಿರ್ದೇಶಿಸಿದರು.
ಲಾರೆನ್ಸ್ ಒಲಿವಿಯರ್ 1929ರಲ್ಲಿ ನಿರ್ಮಿತವಾದ ನಾಟಕದಲ್ಲಿ ಮಾಲ್ಕಮ್ ಪಾತ್ರದಲ್ಲೂ 1937ರ ನಿರ್ಮಾಣದಲ್ಲಿ, ಓಲ್ಡ್ ವಿಕ್ ಥಿಯೇಟರ್ ನಲ್ಲಿ ನಡೆದ ನಾಟಕದಲ್ಲಿ ಮ್ಯಾಕ್ ಬೆತ್ ಪಾತ್ರದಲ್ಲೂ ಅಭಿನಯಿಸಿದರು. ಓಲ್ಡ್ ವಿಕ್ ನಲ್ಲಿ ನಡೆದ ನಾಟಕದ ಸಂದರ್ಭದಲ್ಲಿ ವಿಕ್ ನ ಕಲಾತ್ಮಕ ನಿರ್ದೇಶಕ ಲಿಲಿಯನ್ ಬೇಯ್ಲಿಸ್ ನಾಟಕ ಆರಂಭವಾಗುವ ಮುಂಚಿನ ರಾತ್ರಿ ವಿಧಿವಶರಾದರು. ಈ ನಾಟಕದಲ್ಲಿ ಒಲಿವರ್ ರ ಮೇಕಪ್ ಎಷ್ಟು ದಪ್ಪ ಮತ್ತು ಶೈಲೀಕೃತವಾಗಿತ್ತೆಂದರೆ ವಿವಿಯನ್ ಲೀ ಇದರ ಬಗ್ಗೆ ಹೀಗೆ ಹೇಳಿದುದು ಕೇಳಿಬಂದಿದೆ: "ಮೊದಲು ನಿಮಗೆ ಮ್ಯಾಕ್ ಬೆತ್ ರ ಮೊದಲ ಸಾಲು ಕೇಳಿಸುತ್ತದೆ, ನಂತರ ಲ್ಯಾರಿಯ ಮೇಕಪ್ ವೇದಿಕೆಗೆ ಬರುತ್ತದೆ, ನಂತರ ಬಾಂಕೋ ಬರುತ್ತಾರೆ, ತದನಂತರ ಲ್ಯಾರಿ ಬರುತ್ತಾರೆ".[೪೪] ಒಲಿವಿಯರ್ ನಂತರ 20ನೆಯ ಶತಮಾನದ ಬಹಳ ಪ್ರಸಿದ್ಧ ನಿರ್ಮಾಣಗಳಲ್ಲಿ ಒಂದಾದ, ಗ್ಲೆನ್ ಬ್ಯಾಮ್ ಷಾ ನಿರ್ಮಾಪಕರಾದ ಮತ್ತು 1955ರಲ್ಲಿ ಸ್ಟ್ರ್ಯಾಟ್ ಫೋರ್ಡ್-ಅಪಾನ್-ಎವಾನ್ ನಲ್ಲಿ ನಡೆದ ನಾಟಕದಲ್ಲಿ ಅಭಿನಯಿಸಿದರು. ವಿವಿಯನ್ ಲೀ ಲೇಡಿ ಮ್ಯಾಕ್ ಬೆತ್ ಪಾತ್ರ ವಹಿಸಿದರು. ಹೆರಾಲ್ಡ್ ಹಾಬ್ಸನ್ ಹೀಯಾಳಿಸಿದ ಈ ನಾಟಕದ ಪಾತ್ರವರ್ಗದಲ್ಲಿ ಷೇಕ್ಸ್ ಪಿಯರ್ ನಾಟಕಗಳ ಪಾತ್ರಗಳನ್ನು ಅಭಿನಯಿಸುವುದರಲ್ಲಿ ಮುಂದಿನ ದಿನಗಳಲ್ಲಿ ಅಪಾರ ಯಶಸ್ಸು ಗಳಿಸಿದ ಹಲವಾರು ನಟ ನಟಿಯರು ಇದ್ದರು:ಇಯಾನ್ ಹೋಮ್ ಡೋನಾಲ್ಬೇಯ್ನ್ ಪಾತ್ರದಲ್ಲಿ, ಕೀತ್ ಮಿಷೆಲ್ ಮ್ಯಾಕ್ ಡಫ್ ಆಗಿ, ಮತ್ತು ಪ್ಯಾಟ್ರಿಕ್ ವೈಮಾರ್ಕ್ ದ್ವಾರಪಾಲಕನ ಪಾತ್ರದಲ್ಲಿ ಅಭಿನಯಿಸಿದ್ದರು. ಒಲಿವಿಯರ್ ಯಶಕ್ಕೆ ಪ್ರಮುಖ ಕಾರಣರಾಗಿದ್ದರು. ಅವರ ಅಭಿನಯದ ತೀವ್ರತೆ, ಅದರಲ್ಲೂ ಕೊಲೆಗಡುಕರೊಡನೆ ನಡೆಸುವ ಸಂಭಾಷಣೆಯ ಸನ್ನಿವೇಶ ಹಾಗೂ ಬಾಂಕೋರ ಭೂತವನ್ನು ಎದುರಿಸುವಾಗಿನ ಅಭಿನಯ, ಹಲವಾರು ವೀಕ್ಷಕರಿಗೆ ಎಡ್ಮಂಡ್ ಕೀನ್ ರ ಶ್ರೇಷ್ಠ ಅಭಿನಯವನ್ನು ನೆನಪಿಸುವಂತಿತ್ತು. ಒಲಿವಿಯರ್ ರ ರಿಚರ್ಡ್ III ಗಲ್ಲಾ ಪೆಟ್ಟಿಗೆಯಲ್ಲಿ ಸೋಲು ಕಂಡದ್ದರಿಂದ ಈ ನಾಟಕವನ್ನು ಚಲನಚಿತ್ರವಾಗಿಸುವ ಯೋಜನೆಯನ್ನು ಕೈಬಿಡಲಾಯಿತು. ಕೆನೆತ್ ಟೈನನ್ ಈ ಅಭಿನಯದ ಬಗ್ಗೆ ಘಂಟಾಘೋಷವಾಗಿ ಹೀಗೆ ನುಡಿದರು: "ಯಾರೂ ಮ್ಯಾಕ್ ಬೆತ್ ಪಾತ್ರದ ಅಭಿನಯದಲ್ಲಿ ಯಶವನ್ನು ಕಂಡಿಲ್ಲ"—ಒಲಿವಿಯರ್ ಹೊರತಾಗಿ.
1937ರಲ್ಲಿ ಓಲ್ಡ್ ವಿಕ್ ಥಿಯೇಟರ್ ನಲ್ಲಿ ಒಲಿವಿಯರ್ ರ ಸಹನಟಿಯಾಗಿ ನಟಿಸಿದ ಜ್ಯುಡಿತ್ ಆಂಡರ್ಸನ್ ಸಹ ಈ ನಾಟಕದ ಪಾತ್ರಾಭಿನಯದಲ್ಲಿ ಅಮೋಘ ಯಶ ಕಂಡರು. ಅವರು ಬ್ರಾಡ್ವೇಯಲ್ಲಿ ಮಾರಿಸ್ ಎವಾನ್ಸ್ ರ ಎದುರು ಲೇಡಿ ಮ್ಯಾಕ್ ಬೆತ್ ಪಾತ್ರದಲ್ಲಿ ನಟಿಸಿದರು; ಈ ನಾಟಕವನ್ನು ಮಾರ್ಗರೇಟ್ ವೆಬ್ಸ್ ಟರ್ ನಿರ್ದೇಶಿಸಿದ್ದರು ಹಾಗೂ ಈ ನಾಟಕವು 1941ರಲ್ಲಿ 131 ಪ್ರದರ್ಶನಗಳನ್ನು ಕಂಡಿತು, ಇದು ಬ್ರಾಡ್ವೇ ಯಲ್ಲಿ ಅತಿ ಹೆಚ್ಚು ಕಾಲ ನಡೆದ ಮ್ಯಾಕ್ ಬೆತ್ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಆಂಡರ್ಸನ್ ಮತ್ತು ಎವಾನ್ಸ್ ಟೆಲಿವಿಷನ್ ನಲ್ಲಿ ಈ ನಾಟಕದಲ್ಲಿ ಎರಡು ಬಾರಿ ನಟಿಸಿದರು, 1954 ಮತ್ತು 1962ರಲ್ಲಿ; 1962ರಲ್ಲಿ ನಿರ್ಮಾಣಗೊಂಡ ನಾಟಕದಲ್ಲಿನ ನಟನೆಗೆ ಮಾರಿಸ್ ಎವಾನ್ಸ್ ಎಮ್ಮಿ ಅವಾರ್ಡ್ ಪಡೆದರು, ಆಂಡರ್ಸನ್ ಈ ಅವಾರ್ಡ್ ಅನ್ನು ಎರಡು ಬಾರಿಯೂ ಪಡೆದರು. 1971ರಲ್ಲಿ ಈ ನಾಟಕವು ಚಲನಚಿತ್ರವಾಗಿ ದ ಟ್ರಾಜೆಡಿ ಆಫ್ ಮ್ಯಾಕ್ ಬೆತ್ ಹೆಸರಿನಲ್ಲಿ, ರೋಮನ್ ಪೋಲಾನ್ಸ್ಕಿಯವರ ನಿರ್ದೇಶನ ಮತ್ತು ಹಗ್ ಹೆಫ್ನರ್ ರವರ ಕಾರ್ಯಕಾರಿ-ನಿರ್ಮಾಣದಲ್ಲಿ ತೆರೆ ಕಂಡಿತು.
ಈ ನಾಟಕವನ್ನು ಜಪಾನ್ ಚಲನಚಿತ್ರಕ್ಕೂ ಅಳವಡಿಸಲಾಯಿತು; ತ್ರೋನ್ ಆಫ್ ಬ್ಲಡ್ (ಕುಮೋನೋಸು ಜೋ, 1957) ಚಿತ್ರದಲ್ಲಿ ತೋಶಿರೋ ಮಿಫೂನೇ ಮುಖ್ಯಪಾತ್ರದಲ್ಲಿ ಅಭಿನಯಿಸಿದರು ಮತ್ತು ಈ ಚಿತ್ರವನ್ನು ಜಹಗೀರಿ ಜಪಾನಿನ ಕಾಲಘಟ್ಟದಲ್ಲಿದ್ದಂತೆ ನಿರ್ಮಿಸಲಾಯಿತು. ನಾಟಕದ ಯಾವುದೇ ಬರವಣಿಗೆಯೂ ಇಲ್ಲದೆಯೇ ಇರುವಂತಿದ್ದ ಈ ಚಿತ್ರವು ಚೆನ್ನಾಗಿ ಸ್ವೀಕೃತವಾಯಿತು ಮತ್ತು ವಿಮರ್ಶಕ ಹೆರಾಲ್ಡ್ ಬ್ಲೂಮ್ ಇದನ್ನು "ಮ್ಯಾಕ್ ಬೆತ್ ನಾಟಕದ ಅತ್ಯಂತ ಯಶಸ್ವಿ ಸಿನಿಮೀಯ ಅವತರಣಿಕೆ" ಎಂದು ಕರೆದರು.[೪೫]
20ನೆಯ ಶತಮಾನದಲ್ಲಿ ಬಹಳ ಗಮನ ಸೆಳೆದ ರಚನೆಯೆಂದರೆ ಟ್ರೆವರ್ ನನ್ ರವರು ರಾಯಲ್ ಷೇಕ್ಸ್ ಪಿಯರ್ ಕಂಪನಿಗಾಗಿ 1976ರಲ್ಲಿ ನಿರ್ಮಿಸಿದ ನಾಟಕ. ನನ್ ನಿಕೋಲ್ ವಿಲಿಯಮ್ಸನ್ ಮತ್ತು ಹೆಲೆನ್ ಮಿರೆನ್ ರನ್ನು ಈ ನಾಟದಕಲ್ಲಿ ಎರಡು ವರ್ಷಗಳ ಹಿಂದೆ ನಿರ್ದೇಶಿಸಿದ್ದರು, ಆದರೆ ಆ ಪ್ರಯತ್ನವು ಹೆಚ್ಚು ಪ್ರಭಾವವನ್ನು ಬೀರಿರಲಿಲ್ಲ. 1976ರಲ್ಲಿ ನನ್ ಈ ನಾಟಕವನ್ನು ಕನಿಷ್ಠ ಸೆಟ್ ಬಳಸಿ ದ ಅದರ್ ಪ್ಲೇಸ್ ನಲ್ಲಿ ನಿರ್ಮಿಸಿದರು; ಈ ಚಿಕ್ಕ, ಸುಮಾರು ದುಂಡನೆಯ ವೇದಿಕೆಯು ನಟರ ಮಾನಸಿಕ ಭಾವಗಳ ಪ್ರದರ್ಶನದತ್ತ ಕೇಂದ್ರೀಕರಿಸಲು ಅನುಕೂಲಕರವಾಗಿತ್ತು. ಮುಖ್ಯಪಾತ್ರಲ್ಲಿ ನಟಿಸಿದ ಇಯಾನ್ ಮೆಕ್ಲೀನ್ ಮತ್ತು ಲೇಡಿ ಮ್ಯಾಕ್ ಬೆತ್ ಆಗಿ ನಟಿಸಿದ ಜೂಡಿ ಡೆನ್ಷ್ ವಿಮರ್ಶಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದರು. ಡೆನ್ಷ್ ತಮ್ಮ ಅಭಿನಯಕ್ಕಾಗಿ 1977ರ SWET ಶ್ರೇಷ್ಠ ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು ಮತ್ತು 2004ರಲ್ಲಿ RSCಯ ಸದಸ್ಯರು ಅವರ ಅಭಿನಯವು ಕಂಪನಿಯ ಇತಿಹಾಸದಲ್ಲೇ ಒಬ್ಬ ನಟಿ ನೀಡಿದ ಅತ್ಯದ್ಭುತ ನಟನೆ ಎಂದು ಸಾರಿದರು.
ನನ್ ರ ನಿರ್ಮಾಣವು ಲಂಡನ್ ಗೆ 1977ರಲ್ಲಿ ವರ್ಗವಾಯಿತು ಮತ್ತು ನಂತರ ಟೆಲಿವಿಷನ್ ಗಾಗಿ ಚಿತ್ರೀಕರಿಸಲ್ಪಟ್ಟಿತು. ಇದು ಪೀಟರ್ ಹಾಲ್ ರ 1978ರ, ಆಲ್ಬರ್ಟ್ ಫಿನ್ನೇ ಮ್ಯಾಕ್ ಬೆತ್ ಆಗಿ ಮತ್ತು ಡೊರೋತಿ ಟ್ಯುಟಿನ್ ಲೇಡಿ ಮ್ಯಾಕ್ ಬೆತ್ ಆಗಿ ನಟಿಸಿದ್ದ ನಿರ್ಮಾಣವನ್ನು ಹಿಂದಿಕ್ಕಿ ಯಶ ಪಡೆಯಿತು. ಆದರೆ ಇತ್ತೀಚಿನ ದಿನಗಳಲ್ಲಿ ಬಹಳ ಅಪಖ್ಯಾತಿ ಗಳಿಸಿದ ಮ್ಯಾಕ್ ಬೆತ್ 1980ರಲ್ಲಿ ಓಲ್ಡ್ ವಿಕ್ ನಲ್ಲಿ ಆಡಿದಂತಹುದಾಗಿದೆ. ಪೀಟರ್ ಒಟೂಲ್ ಮತ್ತು ಫ್ರಾನ್ಸಿಸ್ ಟೋಮೆಲ್ಟಿ ಅಭಿನಯಿಸಿದ ಈ ನಿರ್ಮಾಣ(ನಿರ್ಮಾಪಕರು ಬ್ರಿಯಾನ್ ಫೋರ್ಬ್ಸ್)ವನ್ನು ರಂಗದ ಕಲಾತ್ಮಕ ನಿರ್ದೇಶಕರಾದ ತಿಮೋತಿ ವೆಸ್ಟ್, ಆ ನಾಟಕದ ಪಾತ್ರದ ಕುಖ್ಯಾತಿಯನ್ನು ಭರಿಸಲು ಇಚ್ಛಿಸದೆ, ಇಡೀ ಟಿಕೆಟ್ ಗಳು ಮಾರಾಟವಾಗಿದ್ದರೂ, ನಾಟಕ ಆರಂಭವಾಗಬೇಕಿದ್ದ ಹಿಂದಿನ ದಿನ, ತನಗೂ ಅದಕ್ಕೂ ಸಂಬಂಧವಿಲ್ಲವೆನ್ನುತ್ತಾ, ತೊರೆದು ನಡೆದರು. ವಿಮರ್ಶಕ ಜ್ಯಾಕ್ ಟಿಂಕರ್ ಡೈಲಿ ಮೇಯ್ಲ್ ನಲ್ಲಿ ಹೀಗೆ ಬರೆದರು: "ಶೌರ್ಯವು ಹಾಸ್ಯಾಸ್ಪದವಾಗಿರುವುದಕ್ಕೆ ಹೋಲಿಸಿದರೆ ನಟನೆಯು ಅಷ್ಟೇನೂ ಕಳಪೆಯದಲ್ಲವೆನಿಸುತ್ತದೆ."[೪೬]
ರಂಗದ ಮೇಲೆ ಲೇಡಿ ಮ್ಯಾಕ್ ಬೆತ್ ಷೇಕ್ಸ್ ಪಿಯರ್ ನಾಟಕಗಳ ಬೇರೆಲ್ಲಾ ಪಾತ್ರಗಳಿಗಿಂತಲೂ ಹೆಚ್ಚು "ಪ್ರಬಲ ಮತ್ತು ಕ್ಲಿಷ್ಟ"ವಾದ ಪಾತ್ರಗಳಲ್ಲಿ ಒಂದಾಗಿದೆ.[೪೭] ಈ ಪಾತ್ರದಲ್ಲಿ ಅಭಿನಯಿಸಿದ ಇತರರ ಪೈಕಿ ಕೆಲವರೆಂದರೆ ಗ್ವೆನ್ ಫ್ಫ್ರಾಂಗ್ ಕನ್-ಡೇವೀಸ್, ಜಾನೆಟ್ ಸೂಝ್ಮನ್, ಗ್ಲೆಂಡಾ ಜಾಕ್ಸನ್, ಮತ್ತು ಜೇನ್ ಲಾಪೋಟಾಯ್ರ್.
2001ರಲ್ಲಿ ಸ್ಕಾಟ್ಲೆಂಡ್, PA ಚಿತ್ರವು ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಪಾತ್ರಗಳ ಚಟುವಟಿಕೆಯು 1970ರ ದಶಕದಲ್ಲಿನ ಪೆನ್ಸಿಲ್ವೇನಿಯಾಗೆ ಸಂಬಂಧಿಸಿದಂತಿದ್ದು, ಚಿತ್ರವು ಜೋ ಮ್ಯಾಕ್ ಬೆತ್ ಮತ್ತು ಆತನ ಸತಿ ಪ್ಯಾಟ್ ನಾರ್ಮ್ ಡಂಕನ್ ರಿಂದ ಒಂದು ಹ್ಯಾಂಬರ್ಗರ್ ಕೆಫೆಯನ್ನು ಹತೋಟಿಗೆ ತೆಗೆದುಕೊಳ್ಳುವ ಕಥೆಯನ್ನು ಹೊಂದಿದೆ. ಈ ಚಿತ್ರದ ನಿರ್ದೇಶಕರು ಬಿಲ್ಲಿ ಮಾರಿಸೆಟ್ಟೆ ಮತ್ತು ಪಾತ್ರವರ್ಗದಲ್ಲಿ ಜೇಮ್ಸ್ ಲೆಗ್ರಾಸ್, ಮಾರಾ ಟಯೆರ್ನೀ ಮತ್ತು ಕ್ರಿಸ್ತೋಫರ್ ವಾಲ್ಕೆನ್ ಇದ್ದಾರೆ.
ನಿಜವಾದ ಮ್ಯಾಕ್ ಬೆತ್ ರ ಊರಾದ ಮೋರೇಯಲ್ಲಿ ಎಲ್ಜಿನ್ ಕ್ಯಾಥೆಡ್ರಲ್ ನಲ್ಲಿ ಆಡಬೇಕೆಂದು ನ್ಯಾಷನಲ್ ಥಿಯೇಟರ್ ಆಫ್ ಸ್ಕಾಟ್ಲೆಂಡ್ ನಿರ್ಮಿಸಿದ ನಾಟಕವನ್ನು ಆಡಲಾಯಿತು. ವೃತ್ತಿಪರ ನಟರು, ನೃತ್ಯಪಟುಗಳು, ಸಂಗೀತಗಾರರು, ಶಾಲಾಮಕ್ಕಳು, ಮತ್ತು ಮೋರೇ ಪ್ರಾಂತ್ಯದ ಸಾಮುದಾಯಿಕ ವರ್ಗವು ಹೈಲ್ಯಾಂಡ್ ಸಾಂಸ್ಕೃತಿಕ ವರ್ಷವೆಂದೇ ಕರೆಯಲಾದ ಈ ವರ್ಷದ(2007) ಪ್ರಮುಖ ಘಟನೆಯಲ್ಲಿ ಭಾಗವಹಿಸಿದರು.
ಅದೇ ವರ್ಷದಲ್ಲಿರೂಪರ್ಟ್ ಗೌಲ್ಡ್ಚಿಚೆಸ್ಟರ್ ಫೆಸ್ಟಿವಲ್ 2007ಕ್ಕಾಗಿ ನಿರ್ಮಸಿದ ಹಾಗೂ ತಾರೆಯರಾದ ಪ್ಯಾಟ್ರಿಕ್ ಸ್ಟುವರ್ಟ್ ಮತ್ತು ಕೇಟ್ ಫ್ಲೀಟ್ ವುಡ್ ಅಭಿನಯಿಸಿದ, ಚಿತ್ರವು ಟ್ರೆವರ್ ನನ್ ರ 1976ರ RSC ನಿರ್ಮಿತ ಚಿತ್ರಕ್ಕೆ ಸವಾಲಾಗುವಂತಿದ್ದಿತು ಎಂದು ಎಲ್ಲಾ ವಿಮರ್ಶಕರ ಸರ್ವಾನುಮತವಿದೆ. ಈ ನಾಟಕವು ಲಂಡನ್ ನ ಗೀಲ್ ಗುಡ್ ಥಿಯೇಟರ್ ಗೆ ವರ್ಗವಾದಾಗ ಡೈಲಿ ಟೆಲಿಗ್ರಾಫ್ ಗಾಗಿ ಚಾರ್ಲ್ಸ್ ಈ ನಾಟಕದ ವಿಮರ್ಶೆ ಬರೆಯುತ್ತಾ, ತಾವು ಇದುವರೆಗೆ ವೀಕ್ಷಿಸಿದ ಎಲ್ಲಾ ಮ್ಯಾಕ್ ಬೆತ್ ಗಳಲ್ಲಿ ಇದೇ ಸರ್ವಶ್ರೇಷ್ಠವೆಂದರು.[೪೮] 2007ರ ಈವನಿಂಗ್ ಸ್ಟ್ಯಾಂಡರ್ಡ್ ಥಿಯೇಟರ್ ಆವಾರ್ಡ್ಸ್ ಸಂದರ್ಭದಲ್ಲಿ ಈ ನಾಟಕವು ಸ್ಟುವರ್ಟ್ ಗೆ ಶ್ರೇಷ್ಠ ನಟ ಪ್ರಶಸ್ತಿ ಮತ್ತು ಗೌಲ್ಡ್ ಗೆ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಗಳನ್ನು ತಂದುಕೊಟ್ಟಿತು.[೪೯] 2008ರಲ್ಲಿ ಇದೇ ಆವೃತ್ತಿಯು ಯುಎಸ್ ನ ಬ್ರೂಕ್ಲಿನ್ ಅಕಾಡೆಮಿ ಆಫ್ ಮ್ಯೂಸಿಕ್ ನಲ್ಲಿ ತುಂಬಿದ ಗೃಹಗಳಿಗೆ ಪ್ರದರ್ಶಿತವಾಗಿ, ನಂತರ ಬ್ರಾಡ್ವೇ(ಲೈಸಿಯಮ್ ಥಿಯೇಟರ್)ಗೆ ಮುಂದುವರಿಯಿತು. 2009ರಲ್ಲಿ ಗೌಲ್ಡ್ ಮತ್ತೆ ಸ್ಟುವರ್ಟ್ ಮತ್ತು ಫ್ಲೀಟ್ ವುಡ್ ರನ್ನು ನಿರ್ದೇಶಿಸಿ ಮೆಚ್ಚಿಗೆ ಗಳಿಸಿದ ನಾಟಕದ ಆವೃತ್ತಿಯನ್ನು ಚಿತ್ರವಾಗಿಸಿದರು; ಈ ಚಿತ್ರವು PBಯ ಶ್ರೇಷ್ಠ ಪ್ರದರ್ಶನಗಳು ಎಂಬ ಸರಣಿಯಲ್ಲಿ ಅಕ್ಡೋಬರ್ ಆರು, 2010ರಂದು ಬಿತ್ತರವಾಯಿತು.
2003ರಲ್ಲಿ ಬ್ರಿಟಿಷ್ ಥಿಯೇಟರ್ ಕಂಪನಿಯಾದ ಪಂಚ್ ಡ್ರಂಕ್ ಲಂಡನ್ ನ ಬ್ಯೂಫಾಯ್ ಬಿಲ್ಡಿಂಗ್ ಎಂಬ ವಿಕ್ಟೋರಿಯನ್ ಮಾದರಿಯ ಶಾಲೆಯನ್ನು "ಸ್ಲೀಪ್ ನೋ ಮೋರ್ " ಎಂಬ ನಾಟಕವನ್ನು ಆಡಲು ಬಳಸಿಕೊಂಡಿತು; ಈ ನಾಟಕದಲ್ಲಿ ಮ್ಯಾಕ್ ಬೆತ್ ಕಥೆಯನ್ನು ಹಿಚ್ ಕಾಕ್ ರ ಮೈ ನವಿರೇಳಿಸುವ ರೀತಿಯಲ್ಲಿ ನಿರ್ಮಿಸಲಾಗಿದ್ದು, ಉತ್ತಮ ಹಿಚ್ ಕಾಕ್ ಚಿತ್ರಗಳಿಂದ ಆಯ್ದು ಪುನರುದ್ಯೋಗಿಸಿದ ಸಂಗೀತವನ್ನು ಬಳಸಲಾಗಿತ್ತು.[೫೦] ಅಮೆರಿಕನ್ ರೆಪೆರ್ಟರಿ ಥಿಯೇಟರ್ ನ ಜೊತೆಗೂಡಿ ಅಕ್ಟೋಬರ್ 2009ರಲ್ಲಿ ಮಸಾಚ್ಯುಸೆಟ್ಸ್, ಬ್ರೂಕ್ಲಿನ್ ನ ಒಂದು ಪಾಳುಬಿಟ್ಟ ಶಾಲೆಯಲ್ಲಿ ಹೊಸದಾಗಿ ವಿಸ್ತರಿಸಲ್ಪಟ್ಟ ಆವೃತ್ತಿಯೊಂದನ್ನು ಪಂಚ್ ಡ್ರಂಕ್ ನಿರ್ಮಿಸಲು ತೊಡಗಿತು.[೫೧]
2004ಲ್ಲಿ ಭಾರತೀಯ ಚಲನಚಿತ್ರ ನಿರ್ದೇಶಕ ವಿಶಾಲ್ ಭಾರಧ್ವಾಜ್ ಮಕ್ಬೂಲ್ ಎಂಬ ಹೆಸರಿನ ಮ್ಯಾಕ್ ಬೆತ್ ನ ಅವತರಣಿಕೆಯೊಂದನ್ನು ನಿರ್ದೇಶಿಸಿದರು. ಸಮಕಾಲೀನ ಮುಂಬಯಿ ಭೂಗತ ಜಗತ್ತಿನ ವಿಷಯವನ್ನು ಮ್ಯಾಕ್ ಬೆತ್ ನಾಟಕಕ್ಕೆ ತಳುಕುಹಾಕಿದ್ದ ಈ ಚಿತ್ರದಲ್ಲಿ ತಾರೆಯರಾದ ಇರ್ಫಾನ್ ಖಾನ್, ತಬು, ಪಂಕಜ್ ಕಪೂರ್, ಓಂಪುರಿ, ನಾಸಿರುದ್ದೀನ್ ಷಾ ಮತ್ತು ಪೀಯೂಷ್ ಮಿಶ್ರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರವು ಅಪಾರ ಮೆಚ್ಚುಗೆ ಪಡೆಯಿತು ಮತ್ತು ನಿರ್ದೇಶಕ ಭಾರಧ್ವಾಜ್ ಮತ್ತು ಇರ್ಫಾನ್ ಖಾನ್ ಗೆ ಖ್ಯಾತಿಯನ್ನು ತಂದಿತ್ತಿತು.[ಸೂಕ್ತ ಉಲ್ಲೇಖನ ಬೇಕು]
ಇತರ ಲೇಖಕರಿಂದ ರಚಿಲಲ್ಪಟ್ಟ ಮ್ಯಾಕ್ ಬೆತ್ ನ ಮುಂದುವರಿದ ಭಾಗಗಳು
ಬದಲಾಯಿಸಿ2006ರಲ್ಲಿ ಹಾರ್ಪರ್ ಕಾಲಿನ್ಸ್ ಮ್ಯಾಕ್ ಬೆತ್ ಅಂಡ್ ಸನ್ ಎಂಬ ಪುಸ್ತಕವನ್ನು ಪ್ರಕಟಣೆ ಮಾಡಿತು; ಇದನ್ನು ಬರೆದವರು ಆಸ್ಟ್ರೇಲಿಯಾದ ಲೇಖಕ ಜಾಕೀ ಫ್ರೆಂಚ್. 2008ರಲ್ಲಿ ಪಿಗಾಸಸ್ ಬುಕ್ಸ್ ದ ಟ್ರಾಜೆಡಿ ಆಫ್ ಮ್ಯಾಕ್ ಬೆತ್ ಪಾರ್ಟ್ II: ದ ಸೀಡ್ ಆಫ್ ಬಾಂಕೋ , ಎಂಬ ಪುಸ್ತಕವನ್ನು ಹೊರತಂದಿತು; ಅಮೆರಿಕನ್ ಲೇಖಕರಾದ ನೋವಾ ಲ್ಯೂಕ್ ಮನ್ ಮೂಲ ಮ್ಯಾಕ್ ಬೆತ್ ಎಲ್ಲಿ ಕೊನೆಗೊಂಡಿತೋ ಅಲ್ಲಿಂದ ಬರವಣಿಗೆಯನ್ನು ಮುಂದುವರಿಸಲು ಮತ್ತು ಕೆಲವು ಅಂತ್ಯ ನೀಡದಿದ್ದ ಪಾತ್ರಗಳಿಗೆ ತಾರ್ಕಿಕ ಅಂತ್ಯ ನೀಡಲು ಈ ಪುಸ್ತಕದಲ್ಲಿ ಯತ್ನಿಸಿದರು.
ಡೇವಿಡ್ ಗ್ರೆಗ್ ರ 2010ರ ನಾಟಕ ಡನ್ಸಿನೇನ್ ಡನ್ಸಿನೇನ್ ನಲ್ಲಿ ಮ್ಯಾಕ್ ಬೆತ್ ಪತನಗೊಂಡದನ್ನು ಆರಂಭದ ಹಂತವಾಗಿ ಹೊಂದಿದ ಪುಸ್ತಕವಾಗಿದೆ; ಮ್ಯಾಕ್ ಬೆತ್ ರ ಆಗ ತಾನೇ ಕೊನೆಗೊಂಡ ಆಡಳಿತವು ಮಾಲ್ಕಮ್ ರ ಆಡಳಿತಕ್ಕಿಂತಲೂ ಹೆಚ್ಚು ದೀರ್ಘ ಮತ್ತು ಸ್ಥಿರವಾಗಿತ್ತು ಎಂಬುದನ್ನು ಈ ಪುಸ್ತಕ ಬಿಂಬಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
ಉಲ್ಲೇಖಗಳು
ಬದಲಾಯಿಸಿ- Coursen, Herbert (1997). Macbeth. Westport: Greenwood Press. ISBN 031330047X.
- Kliman, Bernice (2005). Latin American Shakespeares. Madison: Fairleigh Dickinson University Press. ISBN 0838640648.
{{cite book}}
: Unknown parameter|coauthors=
ignored (|author=
suggested) (help)
ಟಿಪ್ಪಣಿಗಳು
ಬದಲಾಯಿಸಿ- ↑ "Macbeth, Act 1, Scene 3, Line 38". shakespeare-navigators.com.
- ↑ ನೋಡಿ ಮ್ಯಾಕ್ ಬೆತ್ ನಲ್ಲಿ ಆನ್ ದ ನಾಕಿಂಗ್ ಎಟ್ ದ ಗೇಟ್ .
- ↑ ಮ್ಯಾಕ್ ಬೆತ್ , ಅಂಕ 4, ದೃಶ್ಯ 1, ಸಾಲು 72.
- ↑ ಮ್ಯಾಕ್ ಬೆತ್ , ಅಂಕ 4, ದೃಶ್ಯ 3, ಸಾಲು 204.
- ↑ ಮ್ಯಾಕ್ ಬೆತ್ , ಅಂಕ 5, ದೃಶ್ಯ 5, ಸಾಲುಗಳು 17-28.
- ↑ "Macbeth, Act 5, Scene 8, Lines 71-72". shakespeare-navigators.com.
- ↑ ಮ್ಯಾಕ್ ಬೆತ್ , ಅಂಕ 5, ದೃಶ್ಯ 8, ಸಾಲುಗಳು 15-16.
- ↑ ಕೌರ್ಸೆನ್ (1997, 11–13)
- ↑ ಕೌರ್ಸೆನ್ (1997, 15–21)
- ↑ ಕೌರ್ಸೆನ್ (1997, 17)
- ↑ ೧೧.೦ ೧೧.೧ ನಾಗರಾಜನ್, ಎಸ್. "ಎ ನೋಟ್ ಆನ್ ಬಾಂಕೋ." ಷೇಕ್ಸ್ ಪಿಯರ್ ಕ್ವಾರ್ಟರ್ಲಿ. (ಅಕ್ಟೋಬರ್ 1956) 7.4 ಪುಟಗಳು. 371–376.
- ↑ ಪಾಮರ್, ಜೆ. ಫೋಸ್ಟರ್ "ದ ಸೆಲ್ಟ್ ಇನ್ ಪವರ್: ಟ್ಯುಡೋರ್ ಅಂಡ್ ಕ್ರಾಮ್ವೆಲ್" ಟ್ರಾನ್ಸಾಕ್ಷನ್ಸ್ ಆಫ್ ದ ರಾಯಲ್ ಹಿಸ್ಟರಿಕಲ್ ಸೊಸೈಟಿ. 1886 ಸಂಪುಟ. 3 ಪುಟಗಳು. 343–370.
- ↑ ಬಾಂಕೋರ ಸ್ಟುವರ್ಟ್ ವಂಶಾವಳಿಯು 19ನೆಯ ಶತಮಾನದಲ್ಲಿ ಅಲ್ಲಗಳೆಯಲಾಯಿತು; ಫಿಟ್ಝಲನ್ಸ್ ವಾಸ್ತವವಾಗಿ ಬ್ರೆಟನ್ ಕುಟುಂಬದ ವಂಶಸ್ಥರೆಂದು ಕಂಡುಹಿಡಿದ ನಂತರ ಈ ಅಂಶವು ಸಾಬೀತಾಯಿತು.
- ↑ ಮಸ್ಕೆಲ್l, ಡಿ. ಡಬ್ಲ್ಯೂ. "ದ ಟ್ರಾನ್ಸ್ ಫಾರ್ಮೇಷನ್ ಆಫ್ ಹಿಸ್ಟರಿ ಇಂಟು ಎಪಿಕ್: ದ 'ಸ್ಟುವರ್ಟೈಡ್' (1611) ಆಫ್ ಜೀನ್ ಡಿ ಸ್ಖೆಲಾಂಡ್ರೆ." ಆಧುನಿಕ ಭಾಷಾ ಪುನರಧ್ಯಯನ. (ಜನವರಿ 1971) 66.1 ಪುಟಗಳು. 53–65.
- ↑ ಚಾರ್ಲ್ಸ್ ಬಾಯ್ಸ್, ಎಂಸೈಕ್ಲೋಪೀಡಿಯಾ ಆಫ್ ಷೇಕ್ಸ್ ಪಿಯರ್ , ನ್ಯೂ ಯಾರ್ಕ್, ರೌಂಡ್ ಟೇಬಲ್ ಪ್ರೆಸ್, 1990, ಪುಟ. 350.
- ↑ ಎ.ಆರ್. ಬ್ರಾಮುಲ್ಲರ್, ಸಂಪಾದಕ. ಮ್ಯಾಕ್ ಬೆತ್ (CUP, 1997), 5–8.
- ↑ ಬ್ರಾಮುಲ್ಲರ್, ಮ್ಯಾಕ್ ಬೆತ್, ಪುಟಗಳು. 2–3.
- ↑ ಫ್ರ್ಯಾಂಕ್ ಕರ್ಮೋಡೆ, "ಮ್ಯಾಕ್ ಬೆತ್," ದ ರಿವರ್ ಸೈಡ್ ಷೇಕ್ಸ್ ಪಿಯರ್ (ಬೋಸ್ಟನ್: ಹೌಟನ್, ಮಿಫಿನ್, 1974), ಪುಟ. 1308; ಗಾರ್ನೆಟ್ ಬಗ್ಗೆ ವಿವರಗಳಿಗಾಗಿ, ನೋಡಿ ಪೆರೆಝ್ ಝಾಗೋರಿನ್, "ದ ಹಿಸ್ಟಾರಿಕಲ್ ಸಿಗ್ನಿಫಿಕೆನ್ಸ್ ಆಫ್ ಲಯಿಂಗ್ ಅಂಡ್ ಡಿಸ್ಸಿಮುಲೇಷನ್-ಟ್ರೂತ್-ಟೆಲಿಂಗ್, ಲಯಿಂಗ್ ಅಂಡ್ ಸೆಲ್ಫ್-ಡಿಸೆಪ್ಷನ್" ಸೋಷಿಯಲ್ ರಿಸರ್ಚ್, ಶಿಶಿರ 1996.
- ↑ ಮಾರ್ಕ್ ಆಂಡರ್ಸನ್, ಷೇಕ್ಸ್ ಪಿಯರ್ ಬೈ ಅನದರ್ ನೇಮ್, 2005, ಪುಟಗಳು. 402–403.
- ↑ ೨೦.೦ ೨೦.೧ ಕರ್ಮೋಡೆ, ರಿವರ್ ಸೈಡ್ ಷೇಕ್ಸ್ ಪಿಯರ್, ಪುಟ. 1308.
- ↑ ಬ್ರಾಮುಲ್ಲರ್, ಮ್ಯಾಕ್ ಬೆತ್, ಕೇಂಬ್ರಿಡ್ಜ್. ಕೇಂಬ್ರಿಡ್ಜ್ ಯೂನಿವರ್ಸಿಟಿ ಮುದ್ರಣಾಲಯ, 1997; ಪುಟಗಳು. 5–8.
- ↑ ಒಂದು ವೇಳೆ ಫೋರ್ಮನ್ ದಾಖಲೆಯು ನಿಜವಾದುದಾದರೆ; ಸೈಮನ್ ಫೋರ್ಮನ್ ರ ಬಗ್ಗೆ ಇರುವ ಉಲ್ಲೇಖವನ್ನು ಬುಕ್ ಆಫ್ ಪ್ಲೇಸ್ ನ ಅಧಿಕೃತತೆಯ ಬಗ್ಗೆ ಅರಿಯಲು ನೋಡಿ.
- ↑ ಬ್ರೂಕ್, ನಿಕೋಲಸ್, ಸಂಪಾದಕ. ದ ಟ್ರಾಜೆಡಿ ಆಫ್ ಮ್ಯಾಕ್ ಬೆತ್ ಆಕ್ಸ್ ಫರ್ಡ್: ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್, 1998:57.
- ↑ ಕ್ಯಾರೋಲಿನ್ ಸ್ಪರ್ಜಿಯನ್, ಷೇಕ್ಸ್ ಪಿಯರ್ಸ್ ಇಮೇಜರಿ ಅಂಡ್ ವಾಟ್ ಇಟ್ ಟೆಲ್ಸ್ ಅಸ್ . ಇದರಲ್ಲಿ: ಜಾನ್ ವೇಯ್ನ್ (ಸಂಪಾದಕ.): ಷೇಕ್ಸ್ ಪಿಯರ್. ಮ್ಯಾಕ್ ಬೆತ್. ಎ ಕೇಸ್ ಬುಕ್ . ಬ್ರಿಸ್ಟಾಲ್: ವೆಸ್ಟ್ರನ್ ಪ್ರಿಂಟಿಂಗ್ ಸರ್ವೀಸಸ್ (1968), ಪುಟಗಳು. 168–177
- ↑ ಕ್ಲೀಮನ್, 14.
- ↑ Perkins, William (1618). A Discourse of the Damned Art of Witchcraft, So Farre forth as it is revealed in the Scriptures, and manifest by true experience. London: Cantrell Legge, Printer to the Universitie of Cambridge. p. 53. Retrieved 2009-06-24.
- ↑ ಕಾಡ್ಡನ್, ಕರಿನ್ S. "'ಅನ್ ರಿಯಲ್ ಮಾಕರಿ': ಅನ್ ರೀಸನ್ ಅಂಡ್ ದ ಪ್ರಾಬ್ಲಮ್ ಆಫ್ ಸ್ಪೆಕ್ಟಕಲ್ ಇನ್ ಮ್ಯಾಕ್ ಬೆತ್." ELH . ( ಅಕ್ಟೋಬರ್ 1989) 56.3 ಪುಟಗಳು 485–501.
- ↑ ೨೮.೦ ೨೮.೧ ಫ್ರೈ, ರೋಲಾಂಡ್ ಮುಷತ್. "ಮ್ಯಾಕ್ ಬೆತ್ ನ ದುರಂತದ ಪ್ರಾರಂಭಿಸುವಿಕೆ: ಅಂಕ Iರಲ್ಲಿ ಉದ್ದೀಪನ, ಆಲೋಚನೆ, ಮತ್ತು ಒಪ್ಪಿಗೆ." ದ ಹಂಟಿಂಗ್ ಟನ್ ಲೈಬ್ರರಿ ಕ್ವಾರ್ಟರ್ಲಿ . (ಜುಲೈ 1987) 50.3 ಪುಟಗಳು. 249–261.
- ↑ "Full text of "Hippolyta S View Some Christian Aspects Of Shakespeare S Plays"". Archive.org. 1960-08-28. Retrieved 2009-11-01.
- ↑ "Internet Archive: Free Download: Hippolyta S View Some Christian Aspects Of Shakespeare S Plays". Archive.org. Retrieved 2009-11-01.
- ↑ "Genesis 3 (New International Version, ©2010)". biblegateway.com. Retrieved 28 November 2010.
- ↑ "1 Samuel 28 (New International Version, ©2010)". biblegateway.com. Retrieved 28 November 2010.
- ↑ ೩೩.೦ ೩೩.೧ ರಾಬರ್ಟ್ ಫೇಯ್ರೆಸ್, "ದ ಕರ್ಸ್ ಆಫ್ ದ ಪ್ಲೇ", ಆಸ್ಟಿನ್ ಕ್ರಾನಿಕಲ್, 13 ಅಕ್ಟೋಬರ್ 2000.
- ↑ Tritsch, Dina (April 1984). "The Curse of 'Macbeth'. Is there an evil spell on this ill-starred play?". pretallez.com. Retrieved 28 November 2010.
- ↑ Dunning, Brian (September 7, 2010). "Toil and Trouble: The Curse of Macbeth". skeptoid.com. Retrieved 28 November 2010.
- ↑ ಬ್ಯಾಬಿಲಾನ್ 5 – ಜೆ. ಮೈಕಲ್ ಸ್ಟ್ರಾಸ್ ಝಿಂಸ್ಕಿಯವರ ಬರಹಗಳು, ಸಂಪುಟ 6 ಲೇಖಕ ಜೆ. ಮೈಕಲ್ ಸ್ಟ್ರಾಸ್ ಝಿಂಸ್ಕಿ, ಸಿಂಥೆಟಿಕ್ ಲ್ಯಾಬ್ಸ್ ಪಬ್ಲಿಷಿಂಗ್ (2006).
- ↑ Garber, Marjorie B. (2008). Profiling Shakespeare. Routledge. p. 77. ISBN 9780415964463.
- ↑ ವಶಪಡಿಸಿಕೊಂಡ ದಿನಾಂಕವನ್ನು ಅರಿಯಲು ನೋಡಿ, ಉದಾಹರಣೆಗೆ, ಆಡಮ್ಸ್, J. Q., ಷೇಕ್ಸ್ ಪಿಯರಿಯನ್ ಪ್ಲೇಹೌಸಸ್ , ಬೋಸ್ಟನ್: Hಹೌಟನ್, ಮಿಫಿನ್, 1917: 224; ಬೆಂಟ್ಲೀ, G. E. ದ ಜಾಕೋಬಿಯನ್ ಅಂಡ್ ಕೆರೋಲಿನ್ ಸ್ಟೇಜ್ , ಆಕ್ಸ್ ಫರ್ಡ್: ಕ್ಲಾರೆಂಡನ್ ಪ್ರೆಸ್, 1941: 6.13–17; ಚೇಂಬರ್ಸ್, E. K., ದ ಎಲಿಝೆಬತಿಯನ್ ಸ್ಟೇಜ್ , ಆಕ್ಸ್ ಫರ್ಡ್: ಕ್ಲಾರೆಂಡನ್ ಪ್ರೆಸ್, 1923: 2.498. ಮ್ಯಾಕ್ ಬೆತ್ ಒಳಾಂಗಣ ನಾಟಕವಾಗಿ ಎಂಬುದಕ್ಕೆ ನೋಡಿ, ಉದಾಹರಣೆಗೆ ಬಾಲ್ಡ್, R.C., "ಮ್ಯಾಕ್ ಬೆತ್ ಅಂಡ್ ದ ಷಾರ್ಟ್ ಪ್ಲೇಸ್," ರಿವ್ಯೂ ಆಫ್ ಇಂಗ್ಲಿಷ್ ಸ್ಟಡೀಸ್ 4 (1928): 430; ಶಿರ್ಲೀ, ಫ್ರಾನ್ಸೆಸ್, ಷೇಕ್ಸ್ ಪಿಯರ್ಸ್ ಯೂಸ್ ಆಫ್ ಆಫ್-ಸ್ಟೇಜ್ ಸೌಂಡ್ಸ್ , ಲಿಂಕನ್: ಯೂನಿವರ್ಸಿಟಿ ಆಫ್ ನೆಬ್ರಾಸ್ಕಾ ಪ್ರೆಸ್, 1963: 168–89.
- ↑ ೩೯.೦ ೩೯.೧ ಸಿಲ್ವನ್ ಬಾರ್ನೆಟ್, "ಮ್ಯಾಕ್ ಬೆತ್ ಆನ್ ಸ್ಟೇಜ್ ಅಂಡ್ ಸ್ಕ್ರೀನ್," ಮ್ಯಾಕ್ ಬೆತ್ ನಲ್ಲಿ, ಸಂಪಾದಕ. ಸಿಲ್ವನ್ ಬಾರ್ನೆಟ್, ಸಿಗ್ನೆಟ್ ನ ಒಂದು ಕ್ಲ್ಯಾಸಿಕ್, 1998, ಪುಟ. 188.
- ↑ Odell, George Clinton Densmore (1921). Shakespeare from Betterton to Irving. 274. Vol. 2. C. Scribner's sons. Retrieved 2009-08-17.
- ↑ "ಮ್ಯಾಕ್ ಬೆತ್ ಪಾತ್ರದಲ್ಲಿ ಹೆನ್ರಿ ಇರ್ವಿಂಗ್" Archived 2008-12-06 ವೇಬ್ಯಾಕ್ ಮೆಷಿನ್ ನಲ್ಲಿ., ಪೀಪಲ್ ಪ್ಲೇ ಯುಕೆ ಜಾಲತಾಣ.
- ↑ ಮ್ಯಾಕ್ ಬೆತ್ ಗೆ ಸುಲೀವಾನ್ ರ ಘಟನಾತ್ಮಕ ಸಂಗೀತವನ್ನು 1888ರಲ್ಲಿ ನೀಡಿದುದರ ಬಗ್ಗೆ ಮಾಹಿತಿI Archived 2009-10-01 ವೇಬ್ಯಾಕ್ ಮೆಷಿನ್ ನಲ್ಲಿ., ಗಿಲ್ಬರ್ಟ್ ಮತ್ತು ಸುಲೀವಾನ್ ಆರ್ಕೈವ್.
- ↑ Odell, George Clinton Densmore (1921). Shakespeare from Betterton to Irving. 384. Vol. 2. C. Scribner's sons. Retrieved 2009-08-17.
- ↑ ರಾಬರ್ಟ್ ಟಾನಿಟ್ಚ್, ಒಲಿವಿಯರ್, ಅಬ್ಬೆವಿಲ್ಲಾ ಪ್ರೆಸ್ (1985).
- ↑ ಹೆರಾಲ್ಡ್ ಬ್ಲೂಮ್, ಷೇಕ್ಸ್ ಪಿಯರ್: ದ ಇನ್ವೆನ್ಷನ್ ಆಫ್ ದ ಹ್ಯೂಮನ್ . ನ್ಯೂ ಯಾರ್ಕ್: 1999. ISBN 1-57322-751-X, ಪುಟ. 388.
- ↑ 20ನೆಯ ಶತಮಾನದಲ್ಲಿ ಲಂಡನ್ ರಂಗಸ್ಥಳ ಲೇಖಕ ರಾಬರ್ಟ್ ತಾನಿಟ್ಚ್, ಹಾಸ್ ಪಬ್ಲಿಷಿಂಗ್ (2007) ISBN 978-1-904950-74-5.
- ↑ ಬ್ರೌನ್, ಲ್ಯಾಂಗ್ಡನ್ ಷೇಕ್ಸ್ ಪಿಯರ್ ಅರಂಡ್ ದ ಗ್ಲೋಬ್: ಎ ಗೈಡ್ ಟು ನೋಟೆಬಲ್ ಪೋಸ್ಟ್ ವಾರ್ ರಿವೈವಲ್ಸ್ . ನ್ಯೂ ಯಾರ್ಕ್: ಗ್ರೀನ್ ವುಡ್ ಪ್ರೆಸ್, 1986: 355.
- ↑ Spencer, Charles (September 27, 2007). "The best Macbeth I have seen". The Daily Telegraph. Retrieved 2009-10-23.
- ↑ "Winning performances on the West End stage | News". Thisislondon.co.uk. Archived from the original on 2007-12-30. Retrieved 2009-11-01.
- ↑ "Punchdrunk website – Sleep No More". punchdrunk. Archived from the original on 2010-07-04. Retrieved 2009-05-16.
- ↑ "ART website – Sleep No More". ART. Retrieved 2009-12-20.
ಬಾಹ್ಯ ಕೊಂಡಿಗಳು
ಬದಲಾಯಿಸಿಪ್ರದರ್ಶನಗಳು
ಬದಲಾಯಿಸಿ- ಲಂಡನ್ ನಿಂದ ಮತ್ತು ಸ್ಟ್ರಾಟ್ ಫೋರ್ಡ್ ನಿಂದ ಪ್ರದರ್ಶನಗಳು ಮತ್ತು ಛಾಯಾಚಿತ್ರಗಳು, ಮ್ಯಾಕ್ ಬೆತ್ ಪಾತ್ರದ ಅಭಿನಯಗಳು 1960–2000[ಶಾಶ್ವತವಾಗಿ ಮಡಿದ ಕೊಂಡಿ] – ದ ಡಿಸೈನಿಂಗ್ ಷೇಕ್ಸ್ ಪಿಯರ್ ರಿಸೋರ್ಸ್ ನಿಂದ.
- ದ ಷೇಕ್ಸ್ ಪಿಯರ್ ವಿಡಿಯೋ ಸೊಸೈಟಿ ಎಡಿಷನ್ (ಗೂಗಲ್ ವಿಡಿಯೋ – 2 ಗಂಟೆಗಳು 12 ನಿಮಿಷಗಳು) Archived 2009-02-24 ವೇಬ್ಯಾಕ್ ಮೆಷಿನ್ ನಲ್ಲಿ.
- ಫಿಲ್ಮ್ ನಲ್ಲಿ ಮ್ಯಾಕ್ ಬೆತ್ Archived 2008-01-20 ವೇಬ್ಯಾಕ್ ಮೆಷಿನ್ ನಲ್ಲಿ.
- ಸಕಲ ಸ್ತ್ರೀ ನಿರ್ಮಾಣ ಷೇಕ್ಸ್ ಪಿಯರ್ ಇನ್ ದೆಲಾವೇರ್ ಪಾರ್ಕ್ ನಿಂದ
- ಪಿಬಿಎಸ್ ವಿಡಿಯೋ ನಿರ್ದೇಶನ ರೂಪರ್ಟ್ ಗೋಲ್ಡ್ ತಾರೆ ಸರ್ ಪ್ಯಾಟ್ರಿಕ್ ಸ್ಟುವರ್ಟ್
ಶಬ್ದ ಗ್ರಹಣ(ಆಡಿಯೋ ರೆಕಾರ್ಡಿಂಗ್)
ಬದಲಾಯಿಸಿ- ಮ್ಯಾಕ್ ಬೆತ್: ಉಚಿತ ಪೂರ್ಣಪ್ರಮಾನದ ರೆಕಾರ್ಡಿಂಗ್ Archived 2011-07-10 ವೇಬ್ಯಾಕ್ ಮೆಷಿನ್ ನಲ್ಲಿ. ejunto.com ನಲ್ಲಿ
ನಾಟಕದ ಪಠ್ಯ
ಬದಲಾಯಿಸಿ- ಮ್ಯಾಕ್ ಬೆತ್ ನ್ಯಾವಿಗೇಟರ್ – ಶೋಧನಾರ್ಹ, ಮ್ಯಾಕ್ ಬೆತ್ ನ ವ್ಯಾಖ್ಯಾನ ಸಹಿತ HTML ವಿಧಗಳು.
- ದ ಕಂಪ್ಲೀಟ್ ವರ್ಕ್ಸ್ ಆಫ್ ವಿಲಿಯನ್ ಷೇಕ್ಸ್ ಪಿಯರ್ Archived 2011-04-26 ವೇಬ್ಯಾಕ್ ಮೆಷಿನ್ ನಲ್ಲಿ. – ಇಡೀ ನಾಟಕ ಮೂಲ HTMLನಲ್ಲಿ.
- ಕ್ಲಾಸಿಕ್ ಲಿಟರೇಚರ್ ಲೈಬ್ರರಿ – HTML ಕ್ರಮದಲ್ಲಿರುವ ಮ್ಯಾಕ್ ಬೆತ್.
- ಪ್ರಾಜೆಕ್ಟ್ ಗಟನ್ ಬೆರ್ಗ್: ಮ್ಯಾಕ್ ಬೆತ್ Archived 2004-10-09 ವೇಬ್ಯಾಕ್ ಮೆಷಿನ್ ನಲ್ಲಿ. – ASCII ಸರಳ-ಗದ್ಯ ಪ್ರಾಜೆಕ್ಟ್ ಗಟನ್ ಬೆರ್ಗ್ ನಿಂದ.
- ಷೇಕ್ಸ್ ಪಿಯರ್ ನೆಟ್ Archived 2007-08-08 ವೇಬ್ಯಾಕ್ ಮೆಷಿನ್ ನಲ್ಲಿ. – ಮ್ಯಾಕ್ ಬೆತ್ ನ ಪ್ರತಿ ಅಂಕದ ಸಾರಾಂಶ.
- ನೋ ಫಿಯರ್ ಷೇಕ್ಸ್ ಪಿಯರ್ Archived 2011-02-23 ವೇಬ್ಯಾಕ್ ಮೆಷಿನ್ ನಲ್ಲಿ. – ಸ್ಪಾರ್ಕ್ ನೋಟ್ಸ್ ನಿಂದ – ಮೂಲ ಪಠ್ಯ ಮತ್ತು ಆಧುನಿಕ ಅನುವಾದ ಪಕ್ಕ-ಪಕ್ಕದಲ್ಲಿ.
+ ವೀಕ್ಷಕ ವಿವರಣೆ ;
ಬದಲಾಯಿಸಿ- ಮ್ಯಾಕ್ ಬೆತ್ ನ ವಿಮರ್ಶೆಗಳ ವ್ಯಾಖ್ಯಾನಸಹಿತ ಗ್ರಂಥವಿವರಣೆA
- ಷೇಕ್ಸ್ ಪಿಯರ್ ಅಂಡ್ ದ ಯೂಸಸ್ ಆಫ್ ಪವರ್ ಲೇಖಕ ಸ್ಟೀವನ್ ಗ್ರೀನ್ ಬ್ಲಾಟ್ಟ್