ಮೈಕೆಲ್ ಕಿಂಡೋ
ಮೈಕೆಲ್ ಕಿಂಡೋ (೨೮ ಜೂನ್ ೧೯೪೬ - ೩೧ ಡಿಸೆಂಬರ್ ೨೦೨೦) ಅವರು ಜಾರ್ಖಂಡ್‌ನ ಬುಡಕಟ್ಟು ಬೆಲ್ಟ್‌ನ ಭಾರತೀಯ ಫೀಲ್ಡ್ ಹಾಕಿ ಆಟಗಾರ. ಅವರು ಭಾರತವನ್ನು ಪ್ರತಿನಿಧಿಸಿ ಫುಲ್ ಬ್ಯಾಕ್ ಡಿಫೆಂಡರ್ ಸ್ಥಾನದಲ್ಲಿ ಆಡಿದರು. ೧೯೭೧ ಪುರುಷರ ಹಾಕಿ ವಿಶ್ವಕಪ್, ೧೯೭೨ ಬೇಸಿಗೆ ಒಲಿಂಪಿಕ್ಸ್, ೧೯೭೩ ಪುರುಷರ ಹಾಕಿ ವಿಶ್ವಕಪ್, ೧೯೭೪ ಏಷ್ಯನ್ ಗೇಮ್ಸ್, ೧೯೭೫ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಸ್ಪರ್ಧಿಸಿದರು. ಇದಕ್ಕೂ ಮೊದಲು ಅವರು ಹಲವಾರು ಸ್ಥಳೀಯ, ರಾಷ್ಟ್ರೀಯ ಮತ್ತು ಪ್ರಾದೇಶಿಕ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದರು. ೧೯೭೨ ರಲ್ಲಿ ಅವರು ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ಪಡೆದರು. ಮೈಕೆಲ್ ಕಿಂಡೋ ಅವರು ಅರ್ಜುನ ಪ್ರಶಸ್ತಿಯನ್ನು ಪಡೆದ ಮೊದಲ ಆದಿವಾಸಿ ಕ್ರೀಡಾಪಟು.[೧][೨][೩][೪][೫]
Personal information | ||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
ಜನನ |
ಸಿಮ್ಡೆಗಾ, ಜಾರ್ಖಂಡ್ | ೨೮ ಜೂನ್ ೧೯೪೬|||||||||||||||||||||||||||
ಮರಣ |
December 31, 2020 ರೂರ್ಕೆಲಾ, ಒಡಿಶಾ | (aged 74)|||||||||||||||||||||||||||
ಎತ್ತರ | 170 cm (5 ft 7 in) | |||||||||||||||||||||||||||
ತೂಕ | ೬೨ kg | |||||||||||||||||||||||||||
Playing position | ಫುಲ್ಬ್ಯಾಕ್ | |||||||||||||||||||||||||||
Senior career | ||||||||||||||||||||||||||||
ವರ್ಷಗಳು | ತಂಡ | Apps (Gls) | ||||||||||||||||||||||||||
೧೯೬೬-೧೯೭೩ | ಸೇವೆಗಳು | N/A | ||||||||||||||||||||||||||
೧೯೭೮-೧೯೮೦ | ಒಡಿಶಾ (SAIL) | N/A | ||||||||||||||||||||||||||
ರಾಷ್ಟ್ರೀಯ ತಂಡ | ||||||||||||||||||||||||||||
೧೯೬೯-೧೯೭೬ | ಭಾರತ | N/A | ||||||||||||||||||||||||||
Medal record
|
ಮೈಕೆಲ್ ಅವರು ತನ್ನ ಟ್ಯಾಕ್ಲಿಂಗ್ ಮತ್ತು ಡಾಡ್ಜಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದರು. ನೋ-ಲುಕ್ ಪಾಸ್‌ಗಾಗಿ ಅವರನ್ನು ಭಾರತೀಯ ಹಾಕಿಯಲ್ಲಿ ಪ್ರವರ್ತಕ ಎಂದು ಪರಿಗಣಿಸಲಾಯಿತು.
ಆರಂಭಿಕ ಜೀವನ
ಬದಲಾಯಿಸಿಮೈಕೆಲ್ ಕಿಂಡೋ ಅವರು ೨೮ ಜೂನ್ ೧೯೪೬ ರಂದು ಬಿಹಾರದ (ಈಗ ಜಾರ್ಖಂಡ್) ಒಂದು ಹಳ್ಳಿಯಲ್ಲಿ ಜನಿಸಿದರು. ಅವರು ಕುರ್ಡೆಗ್‌ನಲ್ಲಿರುವ ಆರ್‌ಸಿ ಬಾಯ್ಸ್ ಮಿಡ್ಲ್ ಸ್ಕೂಲ್‌ನಲ್ಲಿ ಮೊದಲು ಹಾಕಿ ಸ್ಟಿಕ್ ಅನ್ನು ತೆಗೆದುಕೊಂಡರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಅವರು ಭಾರತೀಯ ನೌಕಾಪಡೆಗೆ ಸೇರಿದರು.[೪][೨][೧]
ವೃತ್ತಿ
ಬದಲಾಯಿಸಿದೇಶೀಯ ವೃತ್ತಿ
ಬದಲಾಯಿಸಿಮೈಕೆಲ್ ಅವರು ನೌಕಾಪಡೆಗೆ ಸೇರಿದರು. ನೌಕಾಪಡೆಯಲ್ಲಿದ್ದ ಸಮಯದಲ್ಲಿ ಅವರು ೧೯೬೬ ರಿಂದ ೧೯೭೬ ರವರೆಗಿನ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ಸರ್ವಿಸಸ್ ಹಾಕಿ ತಂಡಕ್ಕೆ ಆಯ್ಕೆಯಾದರು ಮತ್ತು ಪ್ರತಿನಿಧಿಸಿದರು. ಅವರು ೧೯೭೧ ರಲ್ಲಿ ಅತ್ಯುತ್ತಮ ಸೇವೆಗಳ ಕ್ರೀಡಾಪಟು ಪ್ರಶಸ್ತಿಯನ್ನು ಗೆದ್ದರು.[೪][೨]
ಅಂತರರಾಷ್ಟ್ರೀಯ ವೃತ್ತಿಜೀವನ
ಬದಲಾಯಿಸಿಕಿಂಡೋ ಅವರು ೧೯೬೯ ರಲ್ಲಿ ಕೀನ್ಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸುವ ಮೂಲಕ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪ್ರವೇಶವನ್ನು ಮಾಡಿದರು. ಅವರು ೧೯೭೨ ರ ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಪುರುಷರ ಫೀಲ್ಡ್ ಹಾಕಿ ತಂಡದ ಸದಸ್ಯರಾಗಿದ್ದರು. ಅವರು ಮ್ಯೂನಿಚ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು.[೬] ಮೈಕೆಲ್ ಅವರು ಮೊದಲ ಮೂರು ವಿಶ್ವಕಪ್‌ಗಳಲ್ಲಿ ಆಡಿದ್ದರು. ಅವರು ೧೯೭೧ ರ ವಿಶ್ವಕಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ೧೯೭೩ ರ ವಿಶ್ವಕಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ೧೯೭೫ ರ ವಿಶ್ವಕಪ್‌ನಲ್ಲಿ ಚಿನ್ನದ ಪದಕವನ್ನು ಗೆದ್ದರು. ಅವರು ೧೯೭೪ ರ ಟೆಹ್ರಾನ್ ಏಷ್ಯನ್ ಆಟಗಳಲ್ಲಿ ಫೀಲ್ಡ್ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದರು.[೪][೨][೭][೮][೯][೧೦]
ನಂತರ ಕೆಲಸ
ಬದಲಾಯಿಸಿಮೈಕೆಲ್ ಅವರು ರೂರ್ಕೆಲಾದಲ್ಲಿ ಎಸ್‌ಎಐಎಲ್(SAIL) ಹಾಕಿಯನ್ನು ಸೇರಿಕೊಂಡರು. ೧೭೮ ರಿಂದ ೧೯೮೦ ರವರೆಗೆ ರಾಷ್ಟ್ರೀಯ ಪಂದ್ಯಗಳಲ್ಲಿ ಒಡಿಶಾ ಪ್ರತಿನಿಧಿಸಿದರು. ಅವರು ಜಾರ್ಖಂಡ್‌ನ ತಮ್ಮ ಹಳ್ಳಿಯಲ್ಲಿ ಮಕ್ಕಳಿಗಾಗಿ ಪಂದ್ಯಾವಳಿಗಳನ್ನು ನಡೆಸುತ್ತಿದ್ದರು. ಮೈಕೆಲ್ ಅವರು ೧೯೯೩ ರ ಬಿಕಾನೆರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಒಡಿಶಾ ರಾಜ್ಯ ತಂಡದ ಆಯ್ಕೆಗಾರರಾಗಿದ್ದರು. ಅವರು ರೂರ್ಕೆಲಾದ ಎಸ್‌ಎಐಎಲ್(SAIL) ಹಾಕಿ ಅಕಾಡೆಮಿಯಲ್ಲಿ ಎಸ್‌ಹೆಚ್‌ಎ(SHA) ಹಾಕಿ ತರಬೇತಿ ನೀಡಿದರು.[೪][೧೧]
ನಿವೃತ್ತಿ ಮತ್ತು ಪರಂಪರೆ
ಬದಲಾಯಿಸಿಕಿಂಡೋ ಅವರು ತಮ್ಮ ಪತ್ನಿ ಮತ್ತು ಅವರ ಮಗನ ಕುಟುಂಬದೊಂದಿಗೆ ವಾಸಿಸುತ್ತಿದ್ದರು.
ಮೈಕೆಲ್ ಕಿಂಡೋ ಅವರು ವಯೋಸಹಜ ಕಾಯಿಲೆಗಳಿಂದಾಗಿ ಇಸ್ಪತ್ ಜನರಲ್ ಆಸ್ಪತ್ರೆಯಲ್ಲಿ ೩೧ ಡಿಸೆಂಬರ್ ೨೦೨೦ ರಂದು ನಿಧನರಾದರು.[೨][೧೧][೧೦][೯] ಅವರ ಕುಟುಂಬದ ಪ್ರಕಾರ, ಅವರು ಸ್ವಲ್ಪ ಸಮಯದಿಂದ ಹಾಸಿಗೆ ಹಿಡಿದಿದ್ದರು ಮತ್ತು ಖಿನ್ನತೆಯಿಂದ ಬಳಲುತ್ತಿದ್ದರು. ೧ ಜನವರಿ ೨೦೨೦ ಗುರುವಾರ ರಂದು ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರಿಗೆ ಗೌರವ ಸಲ್ಲಿಸಲು ಶವಾಗಾರದಿಂದ ರೂರ್ಕೆಲಾ ಹಾಕಿ ಕ್ರೀಡಾಂಗಣಕ್ಕೆ ತರಲಾಯಿತು ಮತ್ತು ಜಿಲ್ಲಾ ಪೋಲೀಸರು ಗೌರವ ರಕ್ಷೆಯೊಂದಿಗೆ ಗೌರವ ಸಲ್ಲಿಸಿದರು. ನಂತರ ಅವರ ದೇಹವನ್ನು ಹಮೀರ್‌ಪುರ ಚರ್ಚ್‌ಗೆ ಕೊಂಡೊಯ್ಯಲಾಯಿತು. ಚರ್ಚ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.[೧೨][೫][೧೩][೧೪][೧೫]
ಅವರು ಗುಮ್ಲಾ-ಸುಂದರ್‌ಗಢ ಬುಡಕಟ್ಟು ಬೆಲ್ಟ್‌ನಾದ್ಯಂತ ಬುಡಕಟ್ಟು ಹಾಕಿಯ ಮಹತ್ವಾಕಾಂಕ್ಷೆಯನ್ನು ಹುಟ್ಟುಹಾಕಿದರು. ಈ ಪ್ರದೇಶವನ್ನು ಇಂದು ಹಾಕಿ ಆಟಗಾರರ ಕನ್ವೇಯರ್ ಬೆಲ್ಟ್ ಎಂದು ಪರಿಗಣಿಸಲಾಗಿದೆ. ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಮೈಕೆಲ್ ಅವರ ವಿದ್ಯಾರ್ಥಿ ದಿಲೀಪ್ ಟಿರ್ಕಿ ಅವರ ಪ್ರಕಾರ, ಮೈಕೆಲ್ ದಶಕಗಳ ಹಿಂದೆ ಆಡುವುದನ್ನು ನಿಲ್ಲಿಸಿದರೂ ಹಾಕಿಯೊಂದಿಗಿನ ತನ್ನ ಒಡನಾಟವನ್ನು ಅವನು ಎಂದಿಗೂ ಬಿಡಲಿಲ್ಲ. ೧೯೭೫ ರ ಚಿನ್ನದ ತಂಡದ ಕಿಂಡೋ ಅವರ ಸಹೋದ್ಯೋಗಿಗಳು ಅವರನ್ನು ಕಿಂಡಿ ಭಾಯ್ ಎಂದು ಕರೆಯುತ್ತಿದ್ದರು. ಅವರು ಎಂದಿಗೂ ತಂಡದ ಉತ್ಸಾಹವನ್ನು ಕುಸಿಯಲು ಬಿಡಲಿಲ್ಲ ಎಂದು ಅವರು ಹೇಳುತ್ತಾರೆ. ಅವರ ಗೌರವಾರ್ಥವಾಗಿ ಇಂದಿಗೂ ಸಿಮ್ಡೆಗಾ ಜಿಲ್ಲೆಯ ಸೇಂಟ್ ಮೇರಿ ಶಾಲೆಯು 'ಮೈಕೆಲ್ ಟೂರ್ನಮೆಂಟ್' ಎಂದು ಹಾಕಿ ಪಂದ್ಯಾವಳಿಯನ್ನು ನಡೆಸುತ್ತಿದೆ.[೧೧][೭][೨][೯][೧೦]
ಪ್ರಶಸ್ತಿಗಳು
ಬದಲಾಯಿಸಿಗೆದ್ದ ಮತ್ತು ಸ್ವೀಕರಿಸಿದ ಎಲ್ಲಾ ಪದಕಗಳ ಪಟ್ಟಿ
- ಅತ್ಯುತ್ತಮ ಸೇವೆಗಳು ಕ್ರೀಡಾಪಟು ಪ್ರಶಸ್ತಿ - ೧೯೭೧
- ಮೂರನೇ ಸ್ಥಾನ, ಬಾರ್ಸಿಲೋನಾ ಪುರುಷರ ಹಾಕಿ ವಿಶ್ವಕಪ್ — ೧೯೭೧
- ಮೂರನೇ ಸ್ಥಾನ (ಕಂಚು), ಮ್ಯೂನಿಚ್ ಬೇಸಿಗೆ ಒಲಿಂಪಿಕ್ಸ್ - ೧೯೭೨
- ಅರ್ಜುನ ಪ್ರಶಸ್ತಿ - ೧೯೭೨
- ರನ್ನರ್-ಅಪ್, ಆಮ್ಸ್ಟೆಲ್ವೀನ್ ಪುರುಷರ ಹಾಕಿ ವಿಶ್ವಕಪ್ — ೧೯೭೩
- ಎರಡನೇ ಸ್ಥಾನ (ಬೆಳ್ಳಿ), ಟೆಹ್ರಾನ್ ಏಷ್ಯನ್ ಗೇಮ್ಸ್ - ೧೯೭೪
- ವಿಜೇತ, ಕೌಲಾಲಂಪುರ್ ಪುರುಷರ ಹಾಕಿ ವಿಶ್ವಕಪ್ — ೧೯೭೫
Source: Times of India
ಉಲ್ಲೇಖಗಳು
ಬದಲಾಯಿಸಿ- ↑ ೧.೦ ೧.೧ Ministry of Youth Affairs and Sports. "Pension information of Michael Kindo". MoYAS NIC Website. Government of India.
Date of Birth: Friday, June 28, 1946
- ↑ ೨.೦ ೨.೧ ೨.೨ ೨.೩ ೨.೪ ೨.೫ "Michael Kindo passes away: 'A fine gentleman, a great player', 1975 World Cup-winning players remember the hockey hero". MSN. 4 ಜನವರಿ 2021.
- ↑ Ministry of Youth Affairs and Sports. "List of Arjun award Winners for Hockey". MoYAS NIC Website. Government of India.
1972 - Shri Michael Kindo
- ↑ ೪.೦ ೪.೧ ೪.೨ ೪.೩ ೪.೪ "Michael Kindo". Stick2Hockey.
- ↑ ೫.೦ ೫.೧ କିମ୍ବଦନ୍ତୀ ହକି ଖେଳାଳି ମାଇକେଲ କିଣ୍ଡୋ 74 ରେ ପରଲୋକ [Legendary Hockey Player Michael Kindo Passes Away At 74] (Television program) (in ಒಡಿಯ). Odisha TV. 1 ಜನವರಿ 2021. Archived from the original on 12 ಡಿಸೆಂಬರ್ 2021.
- ↑ "Michael Kindo Ind". Official Olympics Organization.
1972 Munich - Bronze - Hockey - Men's Hockey
- ↑ ೭.೦ ೭.೧ FP Sports Staff (4 ಜನವರಿ 2021). "Michael Kindo passes away: 'A fine gentleman, a great player', 1975 World Cup-winning players remember the hockey hero". FirstPost.
- ↑ PTI (31 ಡಿಸೆಂಬರ್ 2020). "Michael Kindo, former Olympic bronze-winning hockey player, passes away". IndianExpress.
- ↑ ೯.೦ ೯.೧ ೯.೨ Asian News International (31 ಡಿಸೆಂಬರ್ 2020). "Legendary Indian Hockey Player Michael Kindo Dies At 73". NDTV Sports.
- ↑ ೧೦.೦ ೧೦.೧ ೧೦.೨ "India's 1975 hockey World Cup winner Michael Kindo, 73, dead". ଉତ୍କଳ (Utkal) Today. Bhubaneswar/New Delhi. 1 ಜನವರಿ 2021. Archived from the original on 15 ಆಗಸ್ಟ್ 2022. Retrieved 26 ಮೇ 2024.
- ↑ ೧೧.೦ ೧೧.೧ ೧೧.೨ Srivastava, Shantanu (9 ಡಿಸೆಂಬರ್ 2018). "Hockey World Cup 2018: An afternoon with Michael Kindo, India's world-beating defender who dazzled with his skills and smarts". Firstpost. Rourkela.
- ↑ PTI (31 ಡಿಸೆಂಬರ್ 2020). "Hockey legend Michael Kindo, 73, passes away". WION News. New Delhi.
- ↑ (Ground Reporter) (1 ಜನವರಿ 2021). ହକି ଖେଳାଳି ମାଇକେଲ କିଣ୍ଡୋଙ୍କୁ ଗାର୍ଡ ଅଫ୍ ଅନର [Guard Of Honor To Hockey Player Michael Kindo] (Television production) (in ಒಡಿಯ). Rourkela: Prameya News7. Archived from the original on 12 ಡಿಸೆಂಬರ್ 2021.
- ↑ (Ground Reporter) (1 ಜನವರಿ 2021). ରାଉରକେଲାରେ ମାଇକେଲ୍ କିଣ୍ଡୋଙ୍କୁ ଗାର୍ଡ ଅଫ୍ ଅନର [Guard Of Honour To Late Michael Kindo In Rourkela] (Television program) (in ಒಡಿಯ). Rourkela: Odisha TV. Archived from the original on 12 ಡಿಸೆಂಬರ್ 2021.
- ↑ Das, Avaniranjan (Ground Reporter) (1 ಜನವರಿ 2021). ହକି କିମ୍ବଦନ୍ତୀ ମାଇକେଲ କିଣ୍ଡୋ ରାଉରକେଲାରେ ରାଜ୍ୟ ସମ୍ମାନ ସହିତ ବିଶ୍ରାମ ରଖାଯାଇଛି [Hockey Legend Michael Kindo Laid To Rest With State Honours In Rourkela] (Television program) (in ಒಡಿಯ). Rourkela: Nandighosha TV. Archived from the original on 12 ಡಿಸೆಂಬರ್ 2021.