ಮೈಕೆಲ್ಯಾಂಜೆಲೊ

(ಮೈಕೆಲೇಂಜಲೊ ಇಂದ ಪುನರ್ನಿರ್ದೇಶಿತ)

ಮೈಕೆಲ್ಯಾಂಜೆಲೊ ವಿ ಲೊಡೊವಿಕೊ ಬುವೊನರೊಟಿ ಸಿಮೊನಿ [] (೬ ಮಾರ್ಚ್‌ ೧೪೭೫ – ೧೮ ಫೆಬ್ರವರಿ ೧೫೬೪), ಮೈಕೆಲ್ಯಾಂಜೆಲೊ ಎಂದೇ ಪ್ರಸಿದ್ಧನಾಗಿದ್ದ ಇಟಲಿಯ ನವೋದಯದ ಅವಧಿಯ ಓರ್ವ ವರ್ಣಚಿತ್ರ ಕಲಾವಿದ, ಶಿಲ್ಪಿ, ವಾಸ್ತುಶಿಲ್ಪಿ, ಕವಿ, ಮತ್ತು ಎಂಜಿನಿಯರ್‌. ಕಲೆಗಳಿಂದ ಆಚೆಗೆ ಆತ ಮಾಡಿದ ಕೆಲವೊಂದು ಪ್ರವೇಶಗಳ ಹೊರತಾಗಿಯೂ, ಆತ ಆಯ್ದುಕೊಂಡ ಕ್ಷೇತ್ರಗಳಲ್ಲಿ ಕಂಡುಬಂದ ಅವನ ಬಹುಮುಖ ಪ್ರತಿಭೆಯು ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿತ್ತು. ಇದರಿಂದಾಗಿ ಮೂಲಕಲ್ಪನೆಯ ನವೋದಯದ ಮನುಷ್ಯನೆಂಬ ಶೀರ್ಷಿಕೆಯ ನೀಡುವಿಕೆಗೆ ಸಂಬಂಧಿಸಿದಂತೆ ಅವನ ಪ್ರತಿಸ್ಪರ್ಧಿ ಹಾಗೂ ಇಟಲಿಯ ಸಹವರ್ತಿಯಾದ ಲಿಯೋನಾರ್ಡೊ ಡ ವಿನ್ಸಿಯೊಂದಿಗೆ ಅವನನ್ನು ಅನೇಕಬಾರಿ ಓರ್ವ ಸ್ಪರ್ಧಿಯಂತೆ ಅಥವಾ ಪೈಪೋಟಿಗಾರನಂತೆ ಪರಿಗಣಿಸಲಾಗುತ್ತದೆ.

Michelangelo

Chalk portrait of Michelangelo by Daniele da Volterra
ಹೆಸರುMichelangelo di Lodovico Buonarroti Simoni
ಹುಟ್ಟು (೧೪೭೫-೦೩-೦೬)೬ ಮಾರ್ಚ್ ೧೪೭೫
near Arezzo, in Caprese, Tuscany
ಸಾವು 18 February 1564(1564-02-18) (aged 88)
Rome
ರಾಷ್ಟ್ರೀಯತೆ Italian
ಕ್ಷೇತ್ರ sculpture, painting, architecture, and poetry
ತರಬೇತಿ Apprentice to Domenico Ghirlandaio []
Movement High Renaissance
ಕೃತಿಗಳು David, The Creation of Adam, Pietà
ಹೋಲೋಫರ್ನೆಸ್‌ನ ಮುಖ್ಯಸ್ಥನಾಗಿರುವುದರ ಸ್ವಚಿತ್ರ. ಇದು ಸಿಸ್ಟೀನ್‌ ಪ್ರಾರ್ಥನಾ ಮಂದಿರದ ಒಳಮಾಳಿಗೆಯಲ್ಲಿದೆ.

ಮೈಕೆಲ್ಯಾಂಜೆಲೊ ತನ್ನ ಸುದೀರ್ಘ ಜೀವನಾವಧಿಯಲ್ಲಿ ಪ್ರತಿಕ್ಷೇತ್ರದಲ್ಲೂ ನೀಡಿದ ಕೃತಿಯು ವಿಸ್ಮಯಕಾರಕವಾಗಿತ್ತು; ಪತ್ರವ್ಯವಹಾರಗಳು, ರೇಖಾಚಿತ್ರಗಳು ಮತ್ತು ಉಳಿದಿರುವ ಸ್ಮಾರಕಗಳ ಒಂದು ಆಮೂಲಾಗ್ರ ಸಂಪುಟವನ್ನೂ ಲೆಕ್ಕಕ್ಕೆ ತೆಗೆದುಕೊಂಡಾಗ, ಆತ ೧೬ನೇ ಶತಮಾನದ ಅತ್ಯುತ್ತಮವಾಗಿ-ದಾಖಲಿಸಲ್ಪಟ್ಟಿರುವ ಕಲಾವಿದನಾಗಿ ಕಂಡುಬರುತ್ತಾನೆ. ಆತ ಮೂವತ್ತು ವರ್ಷ ವಯಸ್ಸನ್ನು ಮುಟ್ಟುವುದಕ್ಕೆ ಮುಂಚೆಯೇ, ಪೀಟಾ ಮತ್ತು ಡೇವಿಡ್‌ ಎಂಬ ಆತನ ಎರಡು ಅತ್ಯಂತ-ಪ್ರಸಿದ್ಧ ಕೃತಿಗಳು ಸೃಷ್ಟಿಸಲ್ಪಟ್ಟವು. ವರ್ಣಚಿತ್ರಗಳನ್ನು ರಚಿಸುವುದರ ಕುರಿತಾಗಿ ತಾನು ಹೊಂದಿದ್ದ ಅಷ್ಟೇನೂ ಉನ್ನತವಲ್ಲದ ಅಭಿಪ್ರಾಯದ ಹೊರತಾಗಿಯೂ, ಪಾಶ್ಚಿಮಾತ್ಯ ಕಲೆಯ ಇತಿಹಾಸದಲ್ಲಿ ಹಸಿಚಿತ್ರ ಮಾಧ್ಯಮದಲ್ಲಿನ ಎರಡು ಅತ್ಯಂತ ಪ್ರಭಾವಪೂರ್ಣ ಕೃತಿಗಳನ್ನು ಕೂಡಾ ಮೈಕೆಲ್ಯಾಂಜೆಲೊ ಸೃಷ್ಟಿಸಿದ: ರೋಮ್‌ನಲ್ಲಿನ ಸಿಸ್ಟೀನ್‌ ಪ್ರಾರ್ಥನಾ ಮಂದಿರದ ಒಳಮಾಳಿಗೆಯ ಮೇಲಿನ ಸೃಷ್ಟಿಪರ್ವದ ದೃಶ್ಯಗಳು ಹಾಗೂ ಬಲಿಪೀಠದ ಗೋಡೆಯ ಮೇಲಿನ ದಿ ಲಾಸ್ಟ್ ಜಡ್ಜ್‌ಮೆಂಟ್‌ ಇವೇ ಆ ಎರಡು ಕೃತಿಗಳಾಗಿದ್ದವು. ಓರ್ವ ವಾಸ್ತುಶಿಲ್ಪಿಯಾಗಿ, ಲೌರೆನ್ಷಿಯನ್‌ ಗ್ರಂಥಾಲಯಅತಿ ವಿಲಕ್ಷಣವಾದ ಶೈಲಿಗೆ ಮೈಕೆಲ್ಯಾಂಜೆಲೊ ಪಥನಿರ್ಮಾಪಕನಾದ. ೭೪ನೇ ವಯಸ್ಸಿನಲ್ಲಿರುವಾಗ ಸೇಂಟ್‌ ಪೀಟರ್ಸ್‌ ಬಸಿಲಿಕಾದ ವಾಸ್ತುಶಿಲ್ಪಿಯಾಗಿ ಆತ ಆಂಟೋನಿಯಾ ಡಾ ಸಂಗಾಲ್ಲೋ ದಿ ಯಂಗರ್‌ನ ಸ್ಥಾನಕ್ಕೆ ಉತ್ತರಾಧಿಕಾರಿಯಾದ. ಯೋಜನೆಯನ್ನು ಮೈಕೆಲ್ಯಾಂಜೆಲೊ ಮಾರ್ಪಡಿಸಿದ. ಪಶ್ಚಿಮ ಭಾಗದ ತುದಿಯು ಅವನ ವಿನ್ಯಾಸದ ಅನುಸಾರ ಸಂಪೂರ್ಣಗೊಳಿಸಲ್ಪಟ್ಟಿತು, ಹಾಗೂ ಗುಮ್ಮಟದ ಭಾಗವನ್ನು ಅವನ ಸಾವಿನ ಕೆಲವೊಂದು ಮಾರ್ಪಾಡುಗಳೊಂದಿಗೆ ಸಂಪೂರ್ಣಗೊಳಿಸಲಾಯಿತು.

ಮೈಕೆಲ್ಯಾಂಜೆಲೊನ ಅನನ್ಯ ಗಣನೆ ಅಥವಾ ನಿಲುವಿನ ನಿರೂಪಣೆಯ ನಿಟ್ಟಿನಲ್ಲಿ, ತಾನು ಬದುಕಿರುವಾಗಲೇ ತನ್ನ ಜೀವನಚರಿತ್ರೆಯ ಪ್ರಕಟಣೆಯನ್ನು ಕಂಡ ಮೊಟ್ಟಮೊದಲ ಪಾಶ್ಚಿಮಾತ್ಯ ಕಲಾವಿದನಾಗಿದ್ದ ಆತ.[] ಅವನ ಜೀವಿತಾವಧಿಯಲ್ಲಿ ಅವನ ಕುರಿತಾದ ಎರಡು ಜೀವನಚರಿತ್ರೆಗಳು ಪ್ರಕಟಗೊಂಡವು; ಅವುಗಳಲ್ಲೊಂದಾದ ಜಾರ್ಜಿಯೋ ವಸಾರಿಯಿಂದ ರಚಿಸಲ್ಪಟ್ಟ ಕೃತಿಯು ಪ್ರಸ್ತಾವಿಸಿದ ಪ್ರಕಾರ, ನವೋದಯದ ಆರಂಭವಾದಂದಿನಿಂದ ಕಂಡುಬಂದ ಎಲ್ಲಾ ಕಲಾತ್ಮಕ ಸಾಧನೆಯ ಪರಾಕಾಷ್ಠತೆಯನ್ನು ಆತ ಮುಟ್ಟಿದ್ದ. ಈ ದೃಷ್ಟಿಕೋನವು ಅನೇಕ ಶತಮಾನಗಳವರೆಗೆ ಕಲಾ ಇತಿಹಾಸದಲ್ಲಿ ಚಲಾವಣೆಯಲ್ಲಿತ್ತು. ಅವನ ಜೀವಿತಾವಧಿಯಲ್ಲಿ ಅವನನ್ನು ಇಲ್‌ ಡಿವೈನೊ ("ಓರ್ವ ದೇವತಾಶಾಸ್ತ್ರ ನಿಪುಣ") ಎಂದೂ ಸಹ ಅನೇಕ ಬಾರಿ ಕರೆಯಲಾಗುತ್ತಿತ್ತು.[] ಟೆರಿಬಿಲಿಟಾ ಎಂದು ಕರೆಯಲ್ಪಡುತ್ತಿದ್ದ, ಭಯಭಕ್ತಿಯನ್ನು ಹುಟ್ಟಿಸುವ ಅವನ ಉನ್ನತ ಚಾರಿತ್ರ್ಯದ ಒಂದು ಪ್ರಜ್ಞೆಯು ಅವನ ಸಮಕಾಲೀನರಿಂದ ಅತ್ಯಂತ ಹೊಗಳಿಕೆ ಪಾತ್ರವಾಗಿದ್ದ ಗುಣಗಳಲ್ಲಿ ಒಂದಾಗಿತ್ತು. ಅಷ್ಟೇ ಅಲ್ಲ, ಇದು ಉನ್ನತ ನವೋದಯದ ನಂತರ ಬಂದ ಪಾಶ್ಚಿಮಾತ್ಯ ಕಲೆಯಲ್ಲಿನ ನಂತರದ ಪ್ರಮುಖ ಆಂದೋಲನವಾದ ವಿಲಕ್ಷಣತೆಗೆ ಕಾರಣವಾದ ಮೈಕೆಲ್ಯಾಂಜೆಲೊನ ಭಾವಪೂರ್ಣವಾದ ಮತ್ತು ಅತ್ಯಂತ ವೈಯಕ್ತಿಕ ಶೈಲಿಯನ್ನು ಅನುಕರಿಸುವ ತರುವಾಯದ ಕಲಾವಿದರ ಪ್ರಯತ್ನವೂ ಆಗಿತ್ತು.

ಜೀವನ ಚರಿತ್ರೆ

ಬದಲಾಯಿಸಿ

ಆರಂಭಿಕ ಜೀವನ

ಬದಲಾಯಿಸಿ

ಟಸ್ಕ್ಯಾನಿಯದ ಅರೆಝೊ ಸಮೀಪದಲ್ಲಿರುವ ಕೆಪ್ರೀಸ್‌ನಲ್ಲಿ ೧೪೭೫ರ ಮಾರ್ಚ್‌ ೬ರಂದು ಮೈಕೆಲ್ಯಾಂಜೆಲೊ ಜನಿಸಿದ.[] ಅವನ ಕುಟುಂಬವು ಹಲವಾರು ತಲೆಮಾರುಗಳಿಂದಲೂ ಫ್ಲಾರೆನ್ಸ್‌ನಲ್ಲಿನ ಸಣ್ಣ-ಪ್ರಮಾಣದ ಬ್ಯಾಂಕ್‌ ವ್ಯವಹಾರಸ್ಥರಾಗಿ ತನ್ನ ಕಾರ್ಯಚಟುವಟಿಕೆಯನ್ನು ನಡೆಸಿಕೊಂಡು ಬಂದಿತ್ತು. ಆದರೆ ಅವನ ತಂದೆ ಲೊಡೊವಿಕೊ ಡಿ ಲಿಯೋನಾರ್ಡೊ ಡಿ ಬುವೊನರೊಟಿ ಡಿ ಸಿಮೊನಿ, ಬ್ಯಾಂಕಿನ ಹಣಕಾಸು ಸ್ಥಿತಿಯನ್ನು ಕಾಯ್ದುಕೊಳ್ಳುವಲ್ಲಿ ವಿಫಲನಾದ, ಮತ್ತು ಸಾಂದರ್ಭಿಕವಾಗಿ ಸರ್ಕಾರದಲ್ಲಿನ ಸ್ಥಾನಮಾನಗಳನ್ನು ಹೊಂದಿದ್ದ.[] ಮೈಕೆಲ್ಯಾಂಜೆಲೊ ಹುಟ್ಟಿದ ಸಮಯದಲ್ಲಿ, ಅವನ ತಂದೆಯು ಕೆಪ್ರೀಸ್‌ನ ಸಣ್ಣ ಪಟ್ಟಣದ ಹಾಗೂ ಚಿಯುಸಿಸ್ಥಳೀಯ ಆಡಳಿತನ್ಯಾಯಾಲಯದ ಆಡಳಿತಾಧಿಕಾರಿಯಾಗಿದ್ದ. ಫ್ರಾನ್ಸೆಸ್ಕಾ ಡಿ ನೇರಿ ಡೆಲ್‌ ಮಿನಿಯಾಟೊ ಡಿ ಸಿಯೆನಾ ಎಂಬಾಕೆ ಮೈಕೆಲ್ಯಾಂಜೆಲೊನ ತಾಯಿಯಾಗಿದ್ದಳು.[] ಬುವನೊರೊಟಿ ಕುಟುಂಬದವರು ಕೆನೊಸಾದ ಮಿಥಿಲ್ಡೆ ಕೌಂಟೆಸ್‌ನ ವಂಶಜರೆಂದು ಸಮರ್ಥಿಸಲಾಗಿದೆ; ಈ ಸಮರ್ಥನೆಯು ರುಜುವಾತು ಮಾಡಲ್ಪಡದೆಯೇ ಉಳಿದಿದೆಯಾದರೂ, ಸ್ವತಃ ಮೈಕೆಲ್ಯಾಂಜೆಲೊ ಇದನ್ನು ನಂಬಿದ್ದ.[] ಮೈಕೆಲ್ಯಾಂಜೆಲೊ ಹುಟ್ಟಿದ ಹಲವು ತಿಂಗಳ ನಂತರ, ಅವನ ಕುಟುಂಬವು ಫ್ಲಾರೆನ್ಸ್‌ಗೆ ಮರಳಿತು ಮತ್ತು ಮೈಕೆಲ್ಯಾಂಜೆಲೊ ಅಲ್ಲಿಯೇ ಬೆಳೆದ. ನಂತರದ ದಿನಗಳಲ್ಲಿ, ಆತನ ತಾಯಿಯ ದೀರ್ಘಕಾಲದ ಕಾಯಿಲೆ ಹಾಗೂ ಮರಣದ ನಂತರ, ಆತ ಏಳುವರ್ಷ ವಯಸ್ಸಿನವನಾಗಿರುವಾಗ, ಓರ್ವ ಕಲ್ಲುಕುಟಿಗ ಹಾಗೂ ಅವನ ಹೆಂಡತಿಯ ಜೊತೆಗೆ ಮೈಕೆಲ್ಯಾಂಜೆಲೊ ವಾಸವಾಗಿದ್ದ. ಇವರ ವಾಸಸ್ಥಾನವು ಸೆಟ್ಟಿಗ್ನಾನೊದ ಪಟ್ಟಣದಲ್ಲಿದ್ದು ಅಲ್ಲಿ ಅವನ ತಂದೆ ಒಂದು ಅಮೃತಶಿಲೆ ಕಲ್ಲುಗಣಿ ಹಾಗೂ ಒಂದು ಸಣ್ಣ ಉದ್ಯಮವನ್ನು ಹೊಂದಿದ್ದ.[] ಮೈಕೆಲ್ಯಾಂಜೆಲೊ ಕುರಿತು ಜಾರ್ಜಿಯೋ ವಸಾರಿ ಉಲ್ಲೇಖಿಸುತ್ತಾ, "ನನ್ನಲ್ಲೇನಾದರೂ ಸ್ವಲ್ಪ ಒಳ್ಳೆಯತನವಿದ್ದರೆ, ಅರೆಝೊದ ನಿನ್ನ ದೇಶದ ವಿರಳವಾದ ವಾತಾವರಣದಲ್ಲಿ ನಾನು ಹುಟ್ಟಿದ್ದೇ ಕಾರಣ. ಪೋಷಣೆಯ ರೂಪದಲ್ಲಿ ನನಗೆ ಸಿಕ್ಕ ಹಾಲಿನ ಆಹಾರದ ಜೊತೆಜೊತೆಗೆ, ಉಳಿ ಮತ್ತು ಸುತ್ತಿಗೆಯನ್ನು ನಿಭಾಯಿಸುವ ಕೌಶಲವನ್ನು ನಾನು ಸ್ವೀಕರಿಸಿದೆ; ಇದರ ನೆರವಿನಿಂದಲೇ ನನ್ನ ಕಲಾಕೃತಿಗಳನ್ನು ಸೃಷ್ಟಿಸುತ್ತೇನೆ" ಎಂದು ಮೈಕೆಲ್ಯಾಂಜೆಲೋ ಹೇಳಿದುದನ್ನು ತಿಳಿಸಿದ್ದಾನೆ.[]

ಮೈಕೆಲ್ಯಾಂಜೆಲೊ ಚಿಕ್ಕವನಿರುವಾಗಲೇ ವ್ಯಾಕರಣವನ್ನು ಕಲಿಯಲೆಂದು ಫ್ಲಾರೆನ್ಸ್‌ನಲ್ಲಿರುವ ಫ್ರಾನ್ಸೆಸ್ಕೊ ಡಾ ಅರ್ಬಿನೊ ಎಂಬ ಮಾನವ ಜಿಜ್ಞಾಸುವಿನ ಬಳಿಗೆ ಅವನ ತಂದೆಯು ಅವನನ್ನು ಕಳಿಸಿದ.[][][b] ಆದಾಗ್ಯೂ, ಆ ಚಿಕ್ಕ ಕಲಾವಿದ ಅಲ್ಲಿನ ಕಲಿಕೆಯಲ್ಲಿ ಅಂಥ ಆಸಕ್ತಿಯನ್ನೇನೂ ತೋರಿಸಲಿಲ್ಲ. ಅದರ ಬದಲಿಗೆ ಚರ್ಚುಗಳಲ್ಲಿದ್ದ ವರ್ಣಚಿತ್ರಗಳನ್ನು ನಕಲು ಮಾಡಿಕೊಂಡು ಬರುವುದು ಮತ್ತು ವರ್ಣಚಿತ್ರ ಕಲಾವಿದರ ಸಹಯೋಗವನ್ನು ಅರಸುವುದು ಇವೇ ಮೊದಲಾದವುಗಳ ಕಡೆಗೆ ಅವನು ಆದ್ಯತೆ ನೀಡಿದ.[] ಹದಿಮೂರು ವರ್ಷದವನಾಗಿರುವಾಗ, ಡೊಮಿನಿಕೊ ಘಿರ್ಲ್ಯಾಂಡೈಯೊ ಎಂಬ ವರ್ಣಚಿತ್ರ ಕಲಾವಿದನ ಬಳಿ ಮೈಕೆಲ್ಯಾಂಜೆಲೊ ಶಿಷ್ಯವೃತ್ತಿಗೆ ಸೇರಿಕೊಂಡ.[][] ಮೈಕೆಲ್ಯಾಂಜೆಲೊ ಕೇವಲ ಹದಿನಾಲ್ಕು ವರ್ಷದವನಿರುವಾಗ, ಓರ್ವ ಕಲಾವಿದನಾಗಿ ಅವನಿಗೆ ಹೊಸಗಸುಬಿತನದ ಅವಕಾಶವನ್ನು ಕಲ್ಪಿಸಿಕೊಡುವಂತೆ ಅವನ ತಂದೆ ಘಿರ್ಲ್ಯಾಂಡೈಯೊನ ಮನವೊಲಿಸಿದ. ಆ ಸಮಯದಲ್ಲಿ ಇದು ಹೆಚ್ಚು ರೂಢಿಯಲ್ಲಿಲ್ಲದ ಅಭ್ಯಾಸವಾಗಿತ್ತು.[] ಫ್ಲಾರೆನ್ಸ್‌ನ ವಸ್ತುತಃ ಆಡಳಿತಗಾರನಾದ ಲೊರೆಂಜೊ ಡೆ’ಮೆಡಿಸಿ ಎಂಬಾತ ೧೪೮೯ರಲ್ಲಿ ಘಿರ್ಲ್ಯಾಂಡೈಯೊಗೆ ಆತನ ಇಬ್ಬರು ಅತ್ಯುತ್ತಮ ವಿದ್ಯಾರ್ಥಿಗಳನ್ನು ಕಳಿಸಿಕೊಡುವಂತೆ ಕೇಳಿದಾಗ, ಮೈಕೆಲ್ಯಾಂಜೆಲೊ ಮತ್ತು ಫ್ರಾನ್ಸೆಸ್ಕೋ ಗ್ರನಾಸ್ಸಿಯರನ್ನು ಘಿರ್ಲ್ಯಾಂಡೈಯೊ ಕಳಿಸಿಕೊಟ್ಟ.[೧೦] ೧೪೯೦ರಿಂದ ೧೪೯೨ರವರೆಗೆ, ಮಾನವ ಜಿಜ್ಞಾಸು ಅಕಾಡೆಮಿಯಲ್ಲಿ ಮೈಕೆಲ್ಯಾಂಜೆಲೊ ವ್ಯಾಸಂಗಮಾಡಿದ. ನವ ಪ್ಲೇಟೋವಾದದ ತತ್ತ್ವಗಳ ನೆಲೆಗಟ್ಟಿನ ಮೇಲೆ ಇದನ್ನು ಮೆಡಿಸಿಯು ಸಂಸ್ಥಾಪಿಸಿದ್ದ. ಬೆರ್ಟೊಲ್ಡೋ ಡಿ ಗಿಯೋವನ್ನಿ ಮಾರ್ಗದರ್ಶನದ ಅಡಿಯಲ್ಲಿ ಮೈಕೆಲ್ಯಾಂಜೆಲೊ ಶಿಲ್ಪಶಾಸ್ತ್ರವನ್ನು ಅಭ್ಯಾಸ ಮಾಡಿದ. ಅಕಾಡೆಮಿಯಲ್ಲಿರುವಾಗ ಮೈಕೆಲ್ಯಾಂಜೆಲೊನ ದೃಷ್ಟಿಕೋನಗಳು ಹಾಗೂ ಅವನ ಕಲೆಯ ಮೇಲೆ, ಮಾರ್ಸಿಲೋ ಫಿಸಿನೊ, ಪಿಕೊ ಡೆಲ್ಲಾ ಮಿರಾಂಡೋಲಾ ಮತ್ತು ಏಂಜೆಲೊ ಪೊಲಿಝಿಯಾನೊ ಸೇರಿದಂತೆ ಆ ಕಾಲದ ಅನೇಕ ಅತ್ಯಂತ ಪ್ರಸಿದ್ಧ ದಾರ್ಶನಿಕರು ಹಾಗೂ ಬರಹಗಾರರ ಪ್ರಭಾವಗಳುಂಟಾದವು.[೧೧] ಈ ಸಮಯದಲ್ಲಿ ಮಡೊನ್ನಾ ಆಫ್ ದಿ ಸ್ಟೆಪ್ಸ್‌ (೧೪೯೦–೧೪೯೨) ಮತ್ತು ಬ್ಯಾಟ್ಲ್‌ ಆಫ್ ದಿ ಸೆಂಟೌರ್ಸ್‌ (೧೪೯೧–೧೪೯೨) ಎಂಬ ಉಬ್ಬುಚಿತ್ರಣಗಳನ್ನು ಮೈಕೆಲ್ಯಾಂಜೆಲೊ ರೂಪಿಸಿದ. ಇವುಗಳ ಪೈಕಿ ಬ್ಯಾಟ್ಲ್‌ ಆಫ್ ದಿ ಸೆಂಟೌರ್ಸ್‌ ಕೃತಿಯು ಪೊಲಿಝಿಯಾನೊನಿಂದ ಸೂಚಿಸಲ್ಪಟ್ಟ ವಿಷಯವೊಂದರ ಮೇಲೆ ಆಧರಿತವಾಗಿತ್ತು ಹಾಗೂ ಲೊರೆಂಝೊ ಡಿ ಮೆಡಿಸಿಯಿಂದ ಕಾರ್ಯರೂಪಕ್ಕೆ ತರಲ್ಪಟ್ಟಿತು.[೧೨] ಇಬ್ಬರೂ ಸಹ ಬೆರ್ಟೊಲ್ಡೋ ಡಿ ಗಿಯೋವನ್ನಿ ಅಡಿಯಲ್ಲಿ ಶಿಷ್ಯವೃತ್ತಿಯನ್ನು ನಡೆಸುತ್ತಿದ್ದರಾದರೂ, ಪಿಯೆಟ್ರೊ ಟೊರಿಗಿಯಾನೊ ೧೭ ವರ್ಷದ ಆ ಹುಡುಗನ ಮೂಗಿನ ಮೇಲೆ ಹೊಡೆದ. ಹೀಗಾಗಿ ಅದೊಂದು ವಿರೂಪಗೊಳಿಸುವಿಕೆಗೆ ಕಾರಣವಾಗಿ ಮೈಕೆಲ್ಯಾಂಜೆಲೊನ ಎಲ್ಲಾ ಭಾವಚಿತ್ರಗಳಲ್ಲೂ ಅದು ಅತ್ಯಂತ ಗಮನಸೆಳೆಯುವಂತಾಗಿದೆ.[೧೩]

ಆರಂಭಿಕ ಪ್ರಾಪ್ತವಯಸ್ಕತೆ

ಬದಲಾಯಿಸಿ

೧೪೯೨ರ ಏಪ್ರಿಲ್‌ ೮ರಂದು ಸಂಭವಿಸಿದ ಲೊರೆಂಜೊ ಡೆ’ಮೆಡಿಸಿಯ ಸಾವು, ಮೈಕೆಲ್ಯಾಂಜೆಲೊನ ಪರಿಸ್ಥಿತಿಗಳನ್ನು ತಲೆಕೆಳಗು ಮಾಡಿತು.[೧೪] ಮೆಡಿಸಿಯ ಕಲಿಕಾಸ್ಥಾನದ ರಕ್ಷಣೆಯನ್ನು ತೊರೆದ ಮೈಕೆಲ್ಯಾಂಜೆಲೊ ತನ್ನ ತಂದೆಯ ಮನೆಗೆ ಹಿಂದಿರುಗಿದ. ನಂತರದ ತಿಂಗಳುಗಳಲ್ಲಿ ಆತ ಒಂದು ವುಡನ್‌ ಕ್ರುಸಿಫಿಕ್ಸ್‌‌ ನ್ನು (ಶಿಲುಬೆಗೇರಿಸಿರುವ ಕ್ರಿಸ್ತನ ವಿಗ್ರಹ) (೧೪೯೩) ಕೆತ್ತಿದ. ಚರ್ಚ್‌ನ ಆಸ್ಪತ್ರೆಯ ಕಳೇಬರಗಳ ಶರೀರಛೇದನ ಮಾದರಿಯ ಒಂದಷ್ಟು ಅಧ್ಯಯನಗಳಿಗಾಗಿ ತನಗೆ ಅನುಮತಿ ನೀಡಿದ್ದ ಸ್ಯಾಂಟೊ ಸ್ಪಿರಿಟೋದ ಫ್ಲಾರನ್ಸಿನ ಚರ್ಚ್‌ ಮೇಲ್ದರ್ಜೆಯ ಅಧಿಕಾರಿಗೆ ಇದನ್ನೊಂದು ಕೊಡುಗೆಯಾಗಿ ಅವನು ನೀಡಿದ.[೧೫] ೧೪೯೩ ಮತ್ತು ೧೪೯೪ರ ನಡುವೆ ಹರ್ಕ್ಯುಲಿಸ್‌ನ ಅತಿಶಯಗಾತ್ರದ ಒಂದು ಪ್ರತಿಮೆಗಾಗಿ ಅಮೃತಶಿಲೆಯ ಒಂದು ಕಲ್ಲುದಿಂಡನ್ನು ಆತ ಖರೀದಿಸಿದ. ಇದು ಫ್ರಾನ್ಸ್‌ಗೆ ಕಳಿಸಲ್ಪಟ್ಟಿತು ಮತ್ತು ತರುವಾಯ ೧೭೦೦ರ ದಶಕದ ಸುಮಾರಿಗೆ ಅದು ಕಾಣೆಯಾಯಿತು.[೧೨][c] ೧೪೯೪ರ ಜನವರಿ ೨೦ರಂದು, ಅತಿಯಾದ ಹಿಮಸುರಿತದ ನಂತರ, ಲೊರೆಂಝೊನ ಉತ್ತರಾಧಿಕಾರಿಯಾದ ಪಿಯೆರೊ ಡಿ ಮೆಡಿಸಿ ಎಂಬಾತ ಒಂದು ಹೊಸ ಪ್ರತಿಮೆಯನ್ನು ನಿಯೋಜಿಸಿದ, ಹಾಗೂ ಮೈಕೆಲ್ಯಾಂಜೆಲೊ ಮತ್ತೊಮ್ಮೆ ಮೆಡಿಸಿಯ ಆಪ್ತ ಆಸ್ಥಾನವನ್ನು ಪ್ರವೇಶಿಸಿದ.

ಅದೇ ವರ್ಷದಲ್ಲಿ, ಸಾವೋನರೋಲಾ ಪ್ರವರ್ಧಮಾನಕ್ಕೆ ಬಂದ ಪರಿಣಾಮವಾಗಿ ಮೆಡಿಸಿ ಬಳಗವನ್ನು ಫ್ಲಾರೆನ್ಸ್‌ನಿಂದ ಉಚ್ಚಾಟಿಸಲಾಯಿತು. ರಾಜಕೀಯ ವಿಪ್ಲವವು ಅಂತ್ಯಗೊಳ್ಳುವುದಕ್ಕೆ ಮುಂಚಿತವಾಗಿಯೇ ನಗರವನ್ನು ತೊರೆದ ಮೈಕೆಲ್ಯಾಂಜೆಲೊ, ಮೊದಲು ವೆನಿಸ್‌‌ಗೆ, ನಂತರದಲ್ಲಿ ಬೊಲೊಗ್ನಾಗೆ ತೆರಳಿದ.[೧೪] ಬೊಲೊಗ್ನಾದಲ್ಲಿ, ಸಂತ ಡೊಮಿನಿಕ್‌ಗಾಗಿ ಮೀಸಲಿಡಲಾಗಿದ್ದ ಚರ್ಚ್‌ನಲ್ಲಿನ ಸೇಂಟ್‌ ಡೊಮಿನಿಕ್‌ನ ಪವಿತ್ರಸ್ಥಳದ ಅಂತಿಮ ಹಂತದ ಸಣ್ಣಪುಟ್ಟ ಆಕೃತಿಗಳ ಕೆತ್ತುವಿಕೆಯನ್ನು ಸಂಪೂರ್ಣಗೊಳಿಸಲು ಅವನು ನಿಯೋಜಿಸಲ್ಪಟ್ಟ. ೧೪೯೪ರ ಅಂತ್ಯದ ವೇಳೆಗೆ, ಫ್ಲಾರೆನ್ಸ್‌ನಲ್ಲಿನ ರಾಜಕೀಯ ಸ್ಥಿತಿಗತಿ ಶಾಂತಗೊಂಡಿತ್ತು. ಇದಕ್ಕೂ ಮುಂಚೆ ಫ್ರೆಂಚರಿಂದ ಬೆದರಿಕೆಗೆ ಒಳಗಾಗಿದ್ದ ಆ ನಗರಕ್ಕೆ ಯಾವುದೇ ಅಪಾಯವುಂಟಾಗುವ ಸಾಧ್ಯತೆಯಿರಲಿಲ್ಲ. ಏಕೆಂದರೆ, VIIIನೇ ಚಾರ್ಲ್ಸ್‌ ಸೋಲುಂಡಿದ್ದ. ಮೈಕೆಲ್ಯಾಂಜೆಲೊ ಫ್ಲಾರೆನ್ಸ್‌ಗೆ ಮರಳಿದನಾದರೂ, ಸಾವೋನರೋಲಾ ಆಡಳಿತದಡಿಯಲ್ಲಿನ ಹೊಸ ನಗರ ಸರ್ಕಾರದಿಂದ ಯಾವುದೇ ನಿಯೋಜನೆಯನ್ನು ಸ್ವೀಕರಿಸಲಿಲ್ಲ. ಆತನಿಗೆ ಮೆಡಿಸಿ ವತಿಯಿಂದ ಮತ್ತೊಮ್ಮೆ ಉದ್ಯೋಗದ ವ್ಯವಸ್ಥೆಯಾಯಿತು.[೧೬] ಫ್ಲಾರೆನ್ಸ್‌ನಲ್ಲಿ ಆತ ಕಳೆದ ಅರ್ಧ ವರ್ಷದ ಅವಧಿಯಲ್ಲಿ, ಆತ ಎರಡು ಪುಟ್ಟ ಪ್ರತಿಮೆಗಳ ಸೃಷ್ಟಿಯಲ್ಲಿ ಅವನು ತನ್ನನ್ನು ತೊಡಗಿಸಿಕೊಂಡ. ಅವುಗಳೆಂದರೆ, ಒಂದು ಬಾಲ ಸೇಂಟ್‌ ಜಾನ್‌ ಬ್ಯಾಪ್ಟಿಸ್ಟ್‌ ಮತ್ತು ಒಂದು ಮಲಗಿದ ಭಂಗಿಯಲ್ಲಿರುವ ಕ್ಯೂಪಿಡ್‌‌ (ರೋಮನ್ನರ ಪ್ರಣಯದೇವತೆ). ಕಾಂಡಿವಿ ತಿಳಿಸುವ ಪ್ರಕಾರ, ಸೇಂಟ್‌ ಜಾನ್‌ ಬ್ಯಾಪ್ಟಿಸ್ಟ್‌ ಪ್ರತಿಮೆಯನ್ನು ಮೈಕೆಲ್ಯಾಂಜೆಲೊ ಕೆತ್ತಲು ಕಾರಣನಾದ ಲೊರೆಂಝೊ ಡಿ ಪಿಯರ್‌ಫ್ರಾನ್ಸೆಸ್ಕೊ ಡಿ’ ಮೆಡಿಸಿಯು, ಮೈಕೆಲ್ಯಾಂಜೆಲೊ "ಅದನ್ನು ಅಳವಡಿಸಿದ್ದು ಪರಿಯು ಹೇಗಿತ್ತೆಂದರೆ ಅದನ್ನು ಸಮಾಧಿಮಾಡಿಟ್ಟಂತೆ ಕಾಣುತ್ತಿತ್ತು. ಹೀಗಾಗಿ ಅದನ್ನು ತಾನು ರೋಮ್‌ಗೆ ಕಳಿಸಿ... ಅದನ್ನೊಂದು ಪ್ರಾಚೀನ ಕೃತಿಯೆಂಬಂತೆ ಯಾರ ತಲೆಗಾದರೂ ಕಟ್ಟಲು ಮತ್ತು... ಅದಕ್ಕಿಂತ ಹೆಚ್ಚಾಗಿ ಮಾರಾಟಮಾಡಲು" ಕೇಳಿದ. ಲೊರೆಂಝೊ ಮತ್ತು ಮೈಕೆಲ್ಯಾಂಜೆಲೊ ಈ ಇಬ್ಬರೂ ಸದರಿ ಕೃತಿಯ ನಿಜವಾದ ಬೆಲೆಗಿಂತ ಹೊರತಾದ ತಪ್ಪುಬೆಲೆಗೆ ಮಾರುವಂತೆ ಮಧ್ಯವರ್ತಿಯೊಬ್ಬನಿಂದ ಮೋಸಗೊಳಿಸಲ್ಪಟ್ಟರು. ಲೊರೆಂಝೊನಿಂದ ಅದನ್ನು ಖರೀದಿಸಿದ್ದ ರಫೇಲಿ ರಿಯಾರಿಯೋ ಎಂಬ ಧರ್ಮಪಾಲನು, ಇದೊಂದು ಮೋಸಗಾರಿಕೆ ಎಂಬುದನ್ನು ಪತ್ತೆಹಚ್ಚಿದನಾದರೂ, ಸದರಿ ಶಿಲ್ಪದ ಗುಣಮಟ್ಟದಿಂದ ತುಂಬಾ ಪ್ರಭಾವಿತನಾಗಿ ಅದರ ಕಲಾವಿದನನ್ನು ರೋಮ್‌ಗೆ ಆಹ್ವಾನಿಸಿದ‌.[೧೭] [d] ತಾನು ಸೃಷ್ಟಿಸಿದ ಶಿಲ್ಪವು ವಿದೇಶದಲ್ಲಿ ಮಾರಾಟವಾದುದರ ಸ್ಪಷ್ಟ ಯಶಸ್ಸು ಹಾಗೂ ಫ್ಲಾರನ್ಸಿನ ಸಂಪ್ರದಾಯವಾದಿ ಸನ್ನಿವೇಶವು ಮೈಕೆಲ್ಯಾಂಜೆಲೊ ಪ್ರಾಯಶಃ ಪ್ರೋತ್ಸಾಹ ನೀಡಿ, ಪ್ರೆಲಟ್‌ ಎಂದು ಕರೆಯಲ್ಪಡುವ ಚರ್ಚ್‌ನ ಉನ್ನತಾಧಿಕಾರಿಯ ಆಹ್ವಾನವನ್ನು ಸ್ವೀಕರಿಸುವಂತೆ ಮಾಡಿತು.[೧೬]

 
ಶಿಲುಬೆಗೆ ಏರಿಸಿದ ನಂತರ ತನ್ನ ತಾಯಿ ಮೇರಿಯ ತೊಡೆಯ ಮೇಲಿನ ಜೀಸಸ್‌ನ ದೇಹದ ಒಂದು ಚಿತ್ರಣವಾದ ಮೈಕೆಲ್ಯಾಂಜೆಲೊನ ಪೀಟಾ ಎಂಬ ಕೃತಿಯನ್ನು ಶಿಲ್ಪಿಯು ತಾನು 24 ವರ್ಷ ವಯಸ್ಸಿನವನಾಗಿದ್ದಾಗ 1499ರಲ್ಲಿ ಕೆತ್ತಿದ.

ಮೈಕೆಲ್ಯಾಂಜೆಲೊ ತನ್ನ ೨೧ನೇ ವಯಸ್ಸಿನಲ್ಲಿ ೧೪೯೬ರ ಜೂನ್‌ ೨೫ರಂದು[೧೮] ರೋಮ್‌ನಲ್ಲಿ ಬಂದಿಳಿದ. ಅದೇ ವರ್ಷದ ಜುಲೈ ೪ರಂದು, ಧರ್ಮಪಾಲ ರಫೇಲಿ ರಿಯಾರಿಯೋಗೆ ಸಂಬಂಧಿಸಿದ ಒಂದು ನಿಯೋಜನೆಯ ಕುರಿತಾಗಿ ಆತ ತನ್ನ ಕೆಲಸವನ್ನು ಪ್ರಾರಂಭಿಸಿದ. ಈ ಕಾರ್ಯವು ಬ್ಯಾಕಸ್‌ ಎಂದು ಕರೆಯಲ್ಪಡುವ ರೋಮನ್ನರ ಮದ್ಯದೇವತೆಯ ಒಂದು ಸಹಜವಾದುದಕ್ಕಿಂತ ಅತಿಶಯ ಗಾತ್ರದ ಪ್ರತಿಮೆಗೆ ಸಂಬಂಧಿಸಿತ್ತು. ಆದಾಗ್ಯೂ, ಅದು ಸಂಪೂರ್ಣಗೊಂಡ ನಂತರ, ಸದರಿ ಕೃತಿಯು ಧರ್ಮಪಾಲನಿಂದ ತಿರಸ್ಕರಿಸಲ್ಪಟ್ಟಿತು, ಮತ್ತು ಜಕೊಪೊ ಗಲ್ಲಿ ಎಂಬ ಬ್ಯಾಂಕರ್‌ ವೃತ್ತಿಯವನ ತೋಟದಲ್ಲಿನ ಅಳವಡಿಕೆಗಾಗಿ ತರುವಾಯ ಅವನ ಸಂಗ್ರಹವನ್ನು ಸೇರಿತು.

೧೪೯೭ರ ನವೆಂಬರ್‌ನಲ್ಲಿ, ರೋಮ್‌ನ ಮಠಾಧಿಪತ್ಯದಲ್ಲಿನ ಫ್ರೆಂಚ್‌ ರಾಯಭಾರಿಯು ಅವನ ಅತ್ಯಂತ ಪ್ರಸಿದ್ಧ ಕೃತಿಗಳಲ್ಲೊಂದಾದ ಪೀಟಾ ಕೃತಿಗೆ ಸಂಬಂಧಿಸಿದ ಕೆಲಸವನ್ನು ನಿಯೋಜಿಸಿದ ಮತ್ತು ಇದರ ಕುರಿತಾದ ಒಡಂಬಡಿಕೆಗೆ ನಂತರದ ವರ್ಷದ ಆಗಸ್ಟ್‌ ತಿಂಗಳಲ್ಲಿ ಸಹಿ ಹಾಕಲಾಯಿತು. ಅವನ ಕೆಲಸದ ಕುರಿತಾಗಿ ಇದ್ದ -"ಶಿಲ್ಪಕಲೆಯ ಎಲ್ಲಾ ಸಾಮರ್ಥ್ಯಗಳ ಮತ್ತು ಬಲಗಳ ಒಂದು ಪ್ರಕಟಪಡಿಸುವಿಕೆ"- ಎಂಬ ಸಮಕಾಲೀನ ಅಭಿಪ್ರಾಯವನ್ನು ವಸಾರಿಯು ಹೀಗೆ ಸಂಕ್ಷೇಪಿಸಿ ಹೇಳಿದ್ದಾನೆ: "ಪ್ರಕೃತಿಯು ದೇಹದ ಮಾಂಸದಲ್ಲಿ ಸೃಷ್ಟಿಸಲು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗಿನ ಒಂದು ನಿಖರತೆಗೆ, ಒಂದು ಸ್ವರೂಪವೇ ಇಲ್ಲದ ಅಥವಾ ಆಕಾರಗೆಟ್ಟಿರುವ ಕಲ್ಲಿನ ಬಂಡೆಯೊಂದನ್ನು ಎಂದಾದರೂ ಕೆತ್ತಿ ರೂಪಿಸಿರುವುದು ಸಾಧ್ಯವಾಗಿದೆಯೆಂದರೆ ಖಂಡಿತವಾಗಿಯೂ ಒಂದು ಪವಾಡವಲ್ಲದೇ ಬೇರೇನೂ ಅಲ್ಲ."

ರೋಮ್‌ನಲ್ಲಿ‌, ಸಾಂಟಾ ಮಾರಿಯಾ ಡಿ ಲೊರೆಟೊ ಚರ್ಚ್‌ನ ಸಮೀಪದಲ್ಲಿ ಮೈಕೆಲ್ಯಾಂಜೆಲೊ ವಾಸವಾಗಿದ್ದ. ಚಾಲ್ತಿಯಲ್ಲಿರುವ ದಂತಕಥೆಯ ಪ್ರಕಾರ, ಪೆಸ್ಕಾರಾದ ಮಾರ್ಕ್ವಿಸ್‌-ಸಮಾನಸ್ಕಂಧೆ ಹಾಗೂ ಓರ್ವ ಕವಯಿತ್ರಿಯಾದ ವಿಟ್ಟೊರಿಯಾ ಕೊಲೊನ್ನಾ ಎಂಬಾಕೆಯ ಪ್ರೇಮಪಾಶಕ್ಕೆ ಇಲ್ಲಿ ಆತ ಸಿಲುಕಿದ.[ಸೂಕ್ತ ಉಲ್ಲೇಖನ ಬೇಕು] ೧೮೭೪ರಲ್ಲಿ ಅವನ ಮನೆಯನ್ನು ಕೆಡವಲಾಯಿತು, ಮತ್ತು ಹೊಸ ಯಜಮಾನರಿಂದ ಉಳಿಸಿಕೊಳ್ಳಲ್ಪಟ್ಟಿದ್ದ ಅದರ ವಾಸ್ತುಶಿಲ್ಪೀಯ ಘಟಕಗಳನ್ನು ೧೯೩೦ರಲ್ಲಿ ನಾಶಪಡಿಸಲಾಯಿತು. ಇಂದು ಗಿಯಾನಿಕೊಲೊ ಬೆಟ್ಟದ ಮೇಲೆ ಮೈಕೆಲ್ಯಾಂಜೆಲೊನ ಮನೆಯ ಒಂದು ಆಧುನಿಕ ಮರು-ನಿರ್ಮಾಣವನ್ನು ಕಾಣಬಹುದು. ವ್ಯಾಟಿಕನ್‌ನಲ್ಲಿ ಸ್ಥಿತವಾಗಿರುವ ಲಾವೊಕೂನ್‌ ಮತ್ತು ಅವನ ಮಕ್ಕಳು ಎಂಬ ಶಿಲ್ಪಕೃತಿಯನ್ನು ಮೈಕೆಲ್ಯಾಂಜೆಲೊ ಕಾರ್ಯರೂಪಕ್ಕೆ ತಂದ ಎಂದು ಸಂದೇಹವಾದಿಗಳು ಆಪಾದಿಸಿದ್ದೂ ಕೂಡಾ ಇದೇ ಅವಧಿಗೆ ಸಂಬಂಧಿಸಿದೆ[೧೯].

ಕೃತಿಗಳು

ಬದಲಾಯಿಸಿ
 
1504ರಲ್ಲಿ ಮೈಕೆಲ್ಯಾಂಜೆಲೊನಿಂದ ಸಂಪೂರ್ಣಗೊಳಿಸಲ್ಪಟ್ಟ ಡೇವಿಡ್‌ನ ಪ್ರತಿಮೆಯು, ನವೋದಯದ ಅತ್ಯಂತ ಹೆಸರುವಾಸಿಯಾದ ಕೃತಿಗಳಲ್ಲಿ ಒಂದಾಗಿದೆ.

ಡೇವಿಡ್‌ನ ಪ್ರತಿಮೆ‌

ಬದಲಾಯಿಸಿ

ಮೈಕೆಲ್ಯಾಂಜೆಲೊ ೧೪೯೯–೧೫೦೧ರಲ್ಲಿ ಫ್ಲಾರೆನ್ಸ್‌ಗೆ ಮರಳಿದ. ನವೋದಯ-ವಿರೋಧಿ ಪಾದ್ರಿಯಾಗಿದ್ದ ಮತ್ತು ಫ್ಲಾರೆನ್ಸ್‌ನ ನಾಯಕನಾಗಿದ್ದ ಗಿರೊಲಾಮೊ ಸಾವೋನರೋಲಾನ (೧೪೯೮ರಲ್ಲಿ ಅಧಿಕಾರವನ್ನು ನಿರ್ವಹಿಸಿದ್ದು) ಪತನದ ನಂತರ ಮತ್ತು ಗೊನ್ಫಾಲೊನಿಯೆರೆ ಪಿಯರ್‌ ಸೊಡೆರಿನಿಯು ಪ್ರವರ್ಧಮಾನಕ್ಕೆ ಬಂದನಂತರದ ಗಣರಾಜ್ಯದಲ್ಲಿ ಸನ್ನಿವೇಶಗಳು ಬದಲಾಗುತ್ತಿದ್ದವು. ಅಗಸ್ಟಿನೊ ಡಿ ಡುಸಿಯೊ ಎಂಬಾತನಿಂದ ೪೦ ವರ್ಷಗಳಷ್ಟು ಹಿಂದೆಯೇ ಪ್ರಾರಂಭಿಸಲ್ಪಟ್ಟಿದ್ದ ಒಂದು ಪೂರ್ಣವಾಗಿರದ ಯೋಜನೆಯನ್ನು ಸಂಪೂರ್ಣಗೊಳಿಸಲು ಗಿಲ್ಡ್‌ ಆಫ್‌ ವೂಲ್‌ನ ನಿಯೋಗಿಗಳು ಅವನನ್ನು ಕೇಳಿಕೊಂಡರು. ಇದು ಫ್ಲಾರನ್ಸಿನ ಸ್ವಾತಂತ್ರ್ಯದ ಸಂಕೇತವಾಗಿ ಡೇವಿಡ್‌ನನ್ನು ಚಿತ್ರಿಸಿರುವ ಒಂದು ಬೃಹದಾಕಾರದ ಪ್ರತಿಮೆಯಾಗಿದ್ದು, ಪಲಾಝೊ ವೆಖಿಯೊದ ಮುಂಭಾಗದಲ್ಲಿನ ಪಿಯಾಝಾ ಡೆಲ್ಲಾ ಸೈನೋರಿಯಾದಲ್ಲಿ ಅದನ್ನು ಸ್ಥಾಪಿಸಬೇಕಿತ್ತು. ತನ್ನ ಅತ್ಯಂತ ಪ್ರಸಿದ್ಧ ಕೃತಿಯಾದ ಡೇವಿಡ್‌ನ ಪ್ರತಿಮೆ‌ಯನ್ನು ೧೫೦೪ರಲ್ಲಿ ಸಂಪೂರ್ಣಗೊಳಿಸುವ ಮೂಲಕ ಮೈಕೆಲ್ಯಾಂಜೆಲೊ ಪ್ರತಿಸ್ಪಂದಿಸಿದ. ಅಷ್ಟು ಹೊತ್ತಿಗಾಗಲೇ ಒಂದು ಬಾರಿ ಓರ್ವ ಕಲಾವಿದನ ಶಿಲ್ಪಕಲಾ ಚಾತುರ್ಯಕ್ಕೆ ತನ್ನನ್ನು ಒಡ್ಡಿಕೊಂಡಿದ್ದ, ಕರಾರದಲ್ಲಿನ ಗಣಿಗಳಿಂದ ಪಡೆಯಲಾದ ಅಮೃತಶಿಲೆಯ ಬಂಡೆಯೊಂದರಿಂದ ಸೃಷ್ಟಿಸಲಾಗಿದ್ದ ಈ ಮೇರುಕೃತಿಯು, ಅಸಾಮಾನ್ಯವಾದ ತಾಂತ್ರಿಕ ಕೌಶಲ್ಯ ಹಾಗೂ ಸಾಂಕೇತಿಕ ಕಲ್ಪನೆಯ ಬಲವನ್ನು ಒಳಗೊಂಡ ಓರ್ವ ಶಿಲ್ಪಿಯಾಗಿ ಅವನ ಪ್ರಸಿದ್ಧಿಯನ್ನು ಖಚಿತವಾಗಿ ಪ್ರತಿಷ್ಠಾಪಿಸಿತು.

ಈ ಅವಧಿಯಲ್ಲಿ, ಹೋಲಿ ಫ್ಯಾಮಿಲಿ ಅಂಡ್‌ ಸೇಂಟ್‌ ಜಾನ್‌ ಎಂಬ ವರ್ಣಚಿತ್ರ ಕೃತಿಯನ್ನೂ ಸಹ ಮೈಕೆಲ್ಯಾಂಜೆಲೊ ಸೃಷ್ಟಿಸಿದ. ಡೋನಿ ಟೊಂಡೊ ಅಥವಾ ಹೋಲಿ ಫ್ಯಾಮಿಲಿ ಆಫ್ ದಿ ಟ್ರಿಬ್ಯೂನ್‌ ಎಂದೂ ಇದಕ್ಕೆ ಹೆಸರಿತ್ತು. ಏಂಜೆಲೊ ಡೋನಿ ಮತ್ತು ಮದ್ದಲೆನಾ ಸ್ಟ್ರೋಝಿ ಎಂಬಿಬ್ಬರ ಮದುವೆಯ ಸಂದರ್ಭಕ್ಕಾಗಿ ಮತ್ತು ೧೭ನೇ ಶತಮಾನದಲ್ಲಿ, ನ್ಯಾಯವೇದಿಕೆ ಎಂದು ಕರೆಯಲಾಗುವ ಉಫಿಝಿಯಲ್ಲಿನ ಕೋಣೆಯಲ್ಲಿ ತೂಗುಹಾಕುವುದಕ್ಕಾಗಿ ಇದನ್ನು ಆಯೋಜಿಸಲಾಗಿತ್ತು. ಈಗ ಲಂಡನ್ನಿನ ನ್ಯಾಷನಲ್‌ ಗ್ಯಾಲರಿಯಲ್ಲಿರುವ ಮತ್ತು ಮ್ಯಾಂಚೆಸ್ಟರ್‌ ಮಡೊನ್ನಾ ಎಂದು ಹೆಸರಾಗಿರುವ ಜಾನ್‌ ಎಂಬ ಬ್ಯಾಪ್ಟಿಸ್ಟ್‌ನೊಂದಿಗಿನ ಮಡೊನ್ನಾ ಮತ್ತು ಮಗುವಿನ ವರ್ಣಚಿತ್ರವನ್ನೂ ಸಹ ಆತ ಸೃಷ್ಟಿಸಿರಬಹುದು.

ಸಿಸ್ಟೀನ್‌ ಪ್ರಾರ್ಥನಾ ಮಂದಿರದ ಒಳಮಾಳಿಗೆ

ಬದಲಾಯಿಸಿ
 
ಸಿಸ್ಟೀನ್‌ ಪ್ರಾರ್ಥನಾ ಮಂದಿರದ ಒಳಮಾಳಿಗೆಯಲ್ಲಿ ಮೈಕೆಲ್ಯಾಂಜೆಲೊ ವರ್ಣಚಿತ್ರಗಳನ್ನು ರಚಿಸಿದ; ಈ ಕೆಲಸವು ಸಂಪೂರ್ಣಗೊಳ್ಳಲು ಸರಿಸುಮಾರು ನಾಲ್ಕು ವರ್ಷಗಳು (1508–1512) ಹಿಡಿದವು

೧೫೦೫ರಲ್ಲಿ, ಹೊಸದಾಗಿ ಆಯ್ಕೆಯಾದ IIನೇ ಪೋಪ್‌ ಜೂಲಿಯಸ್‌ ಮೈಕೆಲ್ಯಾಂಜೆಲೊವನ್ನು ಮರಳಿ ರೋಮ್‌ಗೆ ಆಹ್ವಾನಿಸಿದ. ಪೋಪ್‌ನ ಸಮಾಧಿಯ ನಿರ್ಮಾಣ ಕಾರ್ಯವನ್ನು ಅವನಿಗೆ ನಿಯೋಜಿಸಲಾಯಿತು. ಪೋಪ್‌ನ ಆಶ್ರಯದಡಿಯಲ್ಲಿ, ಹಲವಾರು ಇತರ ನಿಯೋಜಿತ ಕಾರ್ಯಗಳನ್ನು ನೆರವೇರಿಸುವ ಸಲುವಾಗಿ ಸಮಾಧಿಯ ಮೇಲಿನ ಕೆಲಸವನ್ನು ಮೈಕೆಲ್ಯಾಂಜೆಲೊ ಎಡೆಬಿಡದೆ ನಿಲ್ಲಿಸಬೇಕಾಗಿ ಬಂತು. ಈ ಅಡೆತಡೆಗಳ ಕಾರಣದಿಂದಾಗಿ ಮೈಕೆಲ್ಯಾಂಜೆಲೊ ಸದರಿ ಸಮಾಧಿಯ ಕುರಿತಾಗಿ ೪೦ ವರ್ಷಗಳವರೆಗೆ ಕೆಲಸಮಾಡಬೇಕಾಗಿ ಬಂತು. ಮೈಕೆಲ್ಯಾಂಜೆಲೊನಿಂದ ಸೃಷ್ಟಿಯಾದ ಮೋಸೆಸ್‌ನ ಪ್ರತಿಮೆಯನ್ನು ಒಂದು ಪ್ರಮುಖ ಲಕ್ಷಣವಾಗಿ ಒಳಗೊಂಡಿದ್ದ ಸದರಿ ಸಮಾಧಿಯು ಮೈಕೆಲ್ಯಾಂಜೆಲೊನ ಸಂಪೂರ್ಣ ತೃಪ್ತಿಗೆ ಅನುಸಾರವಾಗಿ ಎಂದಿಗೂ ಸಂಪೂರ್ಣಗೊಳ್ಳಲೇ ಇಲ್ಲ. ರೋಮ್‌ನಲ್ಲಿನ ‌ವಿಂಕೊಲಿಯಲ್ಲಿರುವ S. ಪಿಯೆಟ್ರೊನ ಚರ್ಚ್‌ನಲ್ಲಿ ಇದು ನೆಲೆಗೊಂಡಿದೆ.

ಇದೇ ಕಾಲದ ಅವಧಿಯಲ್ಲಿ, ಸಿಸ್ಟೀನ್‌ ಪ್ರಾರ್ಥನಾ ಮಂದಿರದ ಒಳಮಾಳಿಗೆಗೆ ವರ್ಣಚಿತ್ರ ಕಲೆಯ ಸ್ಪರ್ಶವನ್ನು ನೀಡುವ ಹೊಣೆಯನ್ನು ಮೈಕೆಲ್ಯಾಂಜೆಲೊ ಹೊತ್ತುಕೊಂಡ. ಇದು ಸಂಪೂರ್ಣಗೊಳ್ಳಲು ಸರಿಸುಮಾರು ನಾಲ್ಕು ವರ್ಷಗಳನ್ನು (೧೫೦೮–೧೫೧೨) ತೆಗೆದುಕೊಂಡಿತು. ಮೈಕೆಲ್ಯಾಂಜೆಲೊನ ವಿವರಣೆಯ ಪ್ರಕಾರ, ಕಲಾವಿದನಿಗೆ ಆಪ್ತವಲ್ಲದ ಮಾಧ್ಯಮವೊಂದರಲ್ಲಿ ಮೈಕೆಲ್ಯಾಂಜೆಲೊಗೆ ಕೆಲಸವನ್ನು ನಿಯೋಜಿಸಲು ಪೋಪ್‌ನನ್ನು ಬ್ರಮಾಂಟೆ ಮತ್ತು ರಾಫೆಲ್‌ ಮನವೊಪ್ಪಿಸಿದರು. ತನ್ನ ಪ್ರತಿಸ್ಪರ್ಧಿಯಾದ ರಾಫೆಲ್‌ನೊಂದಿಗೆ ಮೈಕೆಲ್ಯಾಂಜೆಲೊ ಪ್ರತಿಕೂಲವಾದ ಹೋಲಿಕೆಗಳಿಗೆ ಈಡಾಗಿ ಕಷ್ಟಪಡುತ್ತಾನೆ ಎಂಬ ದೃಷ್ಟಿಯಿಂದ ಹೀಗೆ ಮಾಡಲಾಯಿತು. ಏಕೆಂದರೆ ಆ ಕಾಲದಲ್ಲಿ ಓರ್ವ ಜ್ಯೇಷ್ಠ ಹಸಿಚಿತ್ರ ವರ್ಣಚಿತ್ರ ಕಲಾವಿದನಾಗಿ ರಾಫೆಲ್‌ ತನ್ನದೇ ಸ್ವಂತದ ಕಲಾನೈಪುಣ್ಯದ ಉತ್ತುಂಗ ಸ್ಥಾನದಲ್ಲಿದ್ದ. ಆದಾಗ್ಯೂ, ಆಧುನಿಕ ಇತಿಹಾಸಕಾರರು ಸಮಕಾಲೀನ ಸಾಕ್ಷ್ಯದ ಆಧಾರದ ಮೇಲೆ ಈ ಕಥೆಯನ್ನು ಪರಿಗಣಿಸದೆ ಬಿಡುವುದರ ಜೊತೆಗೆ, ಇದು ಕಲಾವಿದನ ಸ್ವಂತದ ದೃಷ್ಟಿಕೋನದ ಕೇವಲ ಒಂದು ಪ್ರತಿಬಿಂಬವಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಕ್ಷತ್ರಗಳಿಂದ ತುಂಬಿಕೊಂಡಿರುವ ಆಕಾಶವೊಂದಕ್ಕೆ ಪ್ರತಿಯಾಗಿ ೧೨ ಏಸುದೂತರ ಚಿತ್ರಗಳನ್ನು ರಚಿಸಲು ಮೈಕೆಲ್ಯಾಂಜೆಲೊ ಮೂಲತಃ ನಿಯೋಜಿತನಾಗಿದ್ದನಾದರೂ, ಒಂದು ವಿಭಿನ್ನವಾದ ಹಾಗೂ ಹೆಚ್ಚು ಸಂಕೀರ್ಣವಾದ ಯೋಜನೆಯೊಂದಕ್ಕಾಗಿ ವಶೀಲಿಬಾಜಿ ಮಾಡಿದ. ಸೃಷ್ಟಿಕಾರ್ಯ, ಮಾನವನ ಅವನತಿ ಹಾಗೂ ಪ್ರವಾದಿಗಳ ಮೂಲಕ ನಡೆಯುವ ಮೋಕ್ಷಪ್ರಾಪ್ತಿಯ ಭರವಸೆ ಮತ್ತು ಕ್ರಿಸ್ತನ ಕುಲದ ಕಥೆ ಇವೇ ಮೊದಲಾದವುಗಳ ನಿರೂಪಣೆಯನ್ನು ಈ ಸಂಕೀರ್ಣ ಯೋಜನೆಯು ಒಳಗೊಂಡಿತ್ತು. ಈ ಕಾರ್ಯವು ಪ್ರಾರ್ಥನಾ ಮಂದಿರದೊಳಗಣ ಅಲಂಕರಿಸುವಿಕೆಯ ಒಂದು ಬೃಹತ್‌ ಯೋಜನೆಯ ಭಾಗವಾಗಿದ್ದು, ಕೆಥೊಲಿಕ್‌ ಚರ್ಚ್‌ನ ಸಿದ್ಧಾಂತದ ಬಹುಭಾಗವನ್ನು ಅದು ನಿರೂಪಿಸುತ್ತದೆ.

ಅಂತಿಮವಾಗಿ ಇದರ ಸಂಯೋಜನೆಯು ೩೦೦ಕ್ಕೂ ಹೆಚ್ಚಿನ ಶಿಲ್ಪಾಕೃತಿಗಳನ್ನು ಒಳಗೊಂಡಿತು. ಅಷ್ಟೇ ಅಲ್ಲ, ಸೃಷ್ಟಿಪರ್ವದ ಪುಸ್ತಕದಿಂದ ಆಯ್ದುಕೊಳ್ಳಲಾದ ಅದರ ಮಧ್ಯದ ಒಂಬತ್ತು ಅಧ್ಯಾಯಗಳೂ ಸಹ ಇದರಲ್ಲಿ ಸೇರಿಕೊಂಡಿದ್ದು, ಅವನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಅವೆಂದರೆ, ದೇವರಿಂದ ಉಂಟಾದ ಭೂಮಿಯ ಸೃಷ್ಟಿ; ದೇವರಿಂದ ಉಂಟಾದ ಮಾನವಕುಲದ ಸೃಷ್ಟಿ ಮತ್ತು ದೇವರ ಕೃಪೆಯಿಂದ ಅವರು ಹೊರಬರುವುದು; ಮತ್ತು ಕೊನೆಯದಾಗಿ, ನೋವಾ ಮತ್ತು ಆತನ ಕುಟುಂಬದಿಂದ ನಿರೂಪಿಸಲ್ಪಟ್ಟಂತೆ ಮಾನವೀಯತೆಯ ಇರುವಿಕೆ ಅಥವಾ ಅವಸ್ಥೆ. ಒಳಮಾಳಿಗೆಗೆ ಆಧಾರವಾಗಿರುವ ಗೋಲೀಯ ತ್ರಿಭುಜಗಳ ಮೇಲೆ ೧೨ ಪುರುಷರು ಹಾಗೂ ಮಹಿಳೆಯರನ್ನು ಚಿತ್ರಿಸಲಾಗಿದ್ದು, ಅವರು ಜೀಸಸ್‌ನ ಆಗಮನದ ಭವಿಷ್ಯ ನುಡಿಯುವಂತಿತ್ತು. ಅವರು ಇಸ್ರೇಲ್‌ನ ಏಳು ಮಂದಿ ಪ್ರವಾದಿಗಳು ಮತ್ತು ಆದರ್ಶಪ್ರಾಯವಾದ ಪ್ರಪಂಚದ ಮಹಿಳೆಯರಾದ ಐದು ಮಂದಿ ಪ್ರವಾದಿನಿಯರಾಗಿದ್ದಾರೆ.

ಒಳಮಾಳಿಗೆಯ ಮೇಲಿನ ಅತ್ಯಂತ ಪ್ರಸಿದ್ಧವಾದ ವರ್ಣಚಿತ್ರಗಳ ಪೈಕಿ ಆದಮ್‌ನ ಸೃಷ್ಟಿ, ಈಡನ್‌ನ ತೋಟದಲ್ಲಿನ ಆದಮ್‌ ಮತ್ತು ಈವ್‌, ಮಹಾನ್‌ ಪ್ರವಾಹ, ಪ್ರವಾದಿ ಇಸೈಯಾ ಮತ್ತು ಕ್ಯುಮೇಷಿಯಾದ ಪ್ರವಾದಿನಿ ಇವೇ ಮೊದಲಾದವು ಸೇರಿವೆ. ಕಿಟಕಿಗಳ ಸುತ್ತಲೂ ಕ್ರಿಸ್ತನ ಪೂರ್ವಜರ ವರ್ಣಚಿತ್ರಗಳನ್ನು ಚಿತ್ರಿಸಲಾಗಿದೆ.

ಫ್ಲಾರೆನ್ಸ್‌ನಲ್ಲಿನ ಮೆಡಿಸಿ ಅಧೀನದ ಪೋಪ್‌ಗಳು

ಬದಲಾಯಿಸಿ
 
ಮೈಕೆಲ್ಯಾಂಜೆಲೊನ ಮೋಸೆಸ್‌ (ಮಧ್ಯದಲ್ಲಿ); ಅವನ ಅಕ್ಕಪಕ್ಕದಲ್ಲಿ ರಾಚೆಲ್‌ ಮತ್ತು ಲಿಯಾ ಇದ್ದಾರೆ..

೧೫೧೩ರಲ್ಲಿ IIನೇ ಪೋಪ್‌ ಜೂಲಿಯಸ್‌ ಮರಣಹೊಂದಿದ ಮತ್ತು ಅವನ ಉದ್ದರಾಧಿಕಾರಿಯಾದ ಪೋಪ್‌ ಲಿಯೋ X ಎಂಬ ಓರ್ವ ಮೆಡಿಸಿ, ಫ್ಲಾರೆನ್ಸ್‌ನಲ್ಲಿನ ಸ್ಯಾನ್‌ ಲೊರೆಂಝೊನ ಬಸಿಲಿಕಾದ ಮುಂಭಾಗವನ್ನು ಮರುನಿರ್ಮಿಸುವ ಮತ್ತು ಅದನ್ನು ಶಿಲ್ಪಕೃತಿಗಳಿಂದ ಸಿಂಗರಿಸುವ ಕೆಲಸವನ್ನು ಮೈಕೆಲ್ಯಾಂಜೆಲೊಗೆ ನಿಯೋಜಿಸಿದ. ಮೈಕೆಲ್ಯಾಂಜೆಲೊ ಇದಕ್ಕೆ ಒಲ್ಲದ ಮನಸ್ಸಿನಿಂದ ಸಮ್ಮತಿಸಿದ. ಕಟ್ಟಡದ ಮುಂಭಾಗಕ್ಕಾಗಿ ರೇಖಾಚಿತ್ರಗಳನ್ನು ಹಾಗೂ ಮಾದರಿಗಳನ್ನು ಸೃಷ್ಟಿಸುವುದರ ಜೊತೆಗೆ, ವಿಶೇಷವಾಗಿ ಈ ಯೋಜನೆಗೆಂದೇ ಪಿಯೆಟ್ರಾಸಾಂಟಾದಲ್ಲಿ ಒಂದು ಹೊಸ ಅಮೃತಶಿಲೆ ಕಲ್ಲುಗಣಿಯನ್ನು ಪ್ರಾರಂಭಿಸಲು ಪ್ರಯತ್ನಿಸುವುದಕ್ಕೂ ಕೂಡ ಅವನು ಮೂರು ವರ್ಷಗಳನ್ನು ಕಳೆದ. ಈ ಅವಧಿಯು ಅವನ ವೃತ್ತಿಜೀವನದಲ್ಲಿನ ಅತ್ಯಂತ ಆಶಾಭಂಗದ ಅವಧಿಯಾಗಿತ್ತು. ಏಕೆಂದರೆ, ಯಾವುದೇ ನಿಜವಾದ ಪ್ರಗತಿಯು ರೂಪುಗೊಳ್ಳುವುದಕ್ಕೆ ಮುಂಚೆಯೇ, ಹಣಕಾಸಿನ-ಕೊರತೆಗೆ ಈಡಾಗಿದ್ದ ಅವನ ಆಶ್ರಯದಾತರಿಂದಾಗಿ ಅವನ ಕೆಲಸವು ಇದ್ದಕ್ಕಿದ್ದಂತೆ ರದ್ದುಗೊಳಿಸಲ್ಪಡುತ್ತಿತ್ತು. ಈಗಲೂ ಸಹ ಕಟ್ಟಡದ ಒಂದು ಮುಂಭಾಗವನ್ನು ಬಸಿಲಿಕಾ ಹೊಂದಿಲ್ಲ.

ಸ್ಪಷ್ಟವಾಗಿ ಗೋಚರಿಸುವಂತೆ ಈ ಅನಿರೀಕ್ಷಿತ ಮಾರ್ಪಾಡಿನಿಂದ ಕಸಿವಿಸಿಗೊಳಗಾಗಿದ್ದ ಮೆಡಿಸಿಯು ನಂತರ ಮತ್ತೊಂದು ಭವ್ಯವಾದ ಪ್ರಸ್ತಾವನೆಯೊಂದಿಗೆ ಮೈಕೆಲ್ಯಾಂಜೆಲೊನ ಬಳಿಗೆ ಮರಳಿ ಬಂದ. ಈ ಬಾರಿ ಅದು ಸ್ಯಾನ್‌ ಲೊರೆಂಝೊದ ಬಸಿಲಿಕಾದಲ್ಲಿನ ಒಂದು ಕೌಟುಂಬಿಕ ಶವಸಂಸ್ಕಾರದ ಪ್ರಾರ್ಥನಾ ಮಂದಿರಕ್ಕೆ ಸಂಬಂಧಿಸಿದುದಾಗಿತ್ತು. ವಂಶಜರಿಗೆ ಸಂಬಂಧಿಸಿ ಹೇಳುವುದಾದರೆ, ಅದೃಷ್ಟವಶಾತ್‌ ಈ ಯೋಜನೆಯು ಆ ಕಲಾವಿದನ ೧೫೨೦ರ ದಶಕ ಮತ್ತು ೧೫೩೦ರ ದಶಕದ ಬಹುತೇಕ ಕಾಲವನ್ನು ಆಕ್ರಮಿಸಿಕೊಂಡಿದ್ದರಿಂದ ಹೆಚ್ಚಿನ ರೀತಿಯಲ್ಲಿ ಅದು ಸಂಪೂರ್ಣವಾಗಿ ಕೈಗೂಡಿದಂತಾಗಿತ್ತು. ಅದಿನ್ನೂ ಅಪೂರ್ಣವಾಗಿಯೇ ಉಳಿದಿದೆಯಾದರೂ, ಕಲಾವಿದನ ಶಿಲ್ಪೀಯ ಮತ್ತು ವಾಸ್ತಶಿಲ್ಪೀಯ ದೃಷ್ಟಿಕೋನದ ಏಕೀಕರಣದ ಒಂದು ಅತ್ಯುತ್ತಮ ಉದಾಹರಣೆ ಇದಾಗಿದೆ. ಪ್ರಮುಖ ಶಿಲ್ಪಕಲಾಕೃತಿಗಳು ಹಾಗೂ ಒಳಾಂಗಣ ಯೋಜನೆಗಳೆರಡನ್ನೂ ಮೈಕೆಲ್ಯಾಂಜೆಲೊ ಸೃಷ್ಟಿಸಿದ್ದು ಇದಕ್ಕೆ ಕಾರಣವೆನ್ನಬಹುದು. ವ್ಯಂಗ್ಯದ ವಿಷಯವೆಂದರೆ, ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವ ಸಮಾಧಿಗಳು ಪ್ರಸಿದ್ಧಿಗೆ ಬಾರದ ಮತ್ತು ಚಿಕ್ಕವರಿರುವಾಗಲೇ ಸತ್ತ ಇಬ್ಬರು ಮೆಡಿಸಿಗಳದ್ದಾಗಿದ್ದು, ಅವರು ಲೊರೆಂಝೋನ ಓರ್ವ ಮಗ ಹಾಗೂ ಮೊಮ್ಮಗ ಆಗಿದ್ದಾರೆ. ಪ್ರಾರ್ಥನಾ ಮಂದಿರದ ಪಾರ್ಶ್ವಗೋಡೆಗಳ ಪೈಕಿ ಒಂದರ ಮೇಲಿರುವ, ಒಂದು ಅಪೂರ್ಣಗೊಂಡಿರುವ ಮತ್ತು ಹೋಲಿಕೆಯ ದೃಷ್ಟಿಯಿಂದ ಅಷ್ಟೊಂದು ಪರಿಣಾಮಕಾರಿಯಲ್ಲದ ಸಮಾಧಿಯೊಂದರಲ್ಲಿ ಸ್ವತಃ ಐಲ್‌ ಮ್ಯಾಗ್ನಿಫಿಕೊನನ್ನು ಸಮಾಧಿ ಮಾಡಲಾಗಿದ್ದು, ಮೂಲತಃ ಉದ್ದೇಶಿಸಿದಂತೆ ಒಂದು ಮುಕ್ತವಾಗಿ-ನಿಲ್ಲುವ ಸ್ಮಾರಕದ ಸ್ವರೂಪವನ್ನು ಅದಕ್ಕೆ ನೀಡಲಾಗಿಲ್ಲ.

 
ಮೈಕೆಲ್ಯಾಂಜೆಲೊನ ದಿ ಲಾಸ್ಟ್ ಜಡ್ಜ್‌ಮೆಂಟ್‌. ಸಂತ ಬಾರ್ಥೊಲೊಮ್ಯೂ ಎಂಬಾತ ತನ್ನ ಹುತಾತ್ಮತೆಯ ಚಾಕುವನ್ನು ಮತ್ತು ತನ್ನ ಸುಲಿದುಹಾಕಿದ ಚರ್ಮವನ್ನು ಹಿಡಿದಿರುವಂತೆ ತೋರಿಸಲಾಗಿದೆ. ಚರ್ಮದ ಮುಖವು ಅದು ಮೈಕೆಲ್ಯಾಂಜೆಲೊ ಎಂಬುದಾಗಿ ಗುರುತಿಸಬಹುದಾಗಿದೆ.

೧೫೨೭ರಲ್ಲಿ, ಫ್ಲಾರನ್ಸಿನ ನಾಗರಿಕರು ರೋಮ್‌ನ ಕೊಳ್ಳೆಯಿಂದ ಪ್ರೇರಿತರಾಗಿ ಮೆಡಿಸಿಯನ್ನು ಆಚೆಗೆಸೆದು ಗಣರಾಜ್ಯವನ್ನು ಪುನಃ ಸ್ಥಾಪಿಸಿದರು. ಇದರಿಂದಾಗಿ ನಗರದ ದಿಗ್ಬಂಧನದ ಸ್ಥಿತಿಯು ಏರ್ಪಟ್ಟಿತು, ಮತ್ತು ೧೫೨೮ರಿಂದ ೧೫೨೯ರವರೆಗೆ ನಗರದ ಕೋಟೆನಿರ್ಮಾಣ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ತನ್ನ ಅಚ್ಚುಮೆಚ್ಚಿನ ಫ್ಲಾರೆನ್ಸ್‌ನ ನೆರವಿಗೆ ಮೈಕೆಲ್ಯಾಂಜೆಲೊ ಧಾವಿಸಿದ. ೧೫೩೦ರಲ್ಲಿ ನಗರವು ಕುಸಿಯಿತು ಮತ್ತು ಮೆಡಿಸಿ ಬಣದವರು ಅಧಿಕಾರಕ್ಕೆ ಬಂದರು. ಡ್ಯೂಕನಂಥ ಮೆಡಿಸಿಯ ದಮನಕಾರಕ ಆಡಳಿತದಿಂದಾಗಿ ಸಹಾನುಭೂತಿಯನ್ನು ಸಂಪೂರ್ಣವಾಗಿ ಕಳೆದುಕೊಂಡ ಮೈಕೆಲ್ಯಾಂಜೆಲೊ, ಮೆಡಿಸಿ ಪ್ರಾರ್ಥನಾ ಮಂದಿರವನ್ನು ಸಂಫೂರ್ಣಗೊಳಿಸುವ ಕೆಲಸವನ್ನು ತನ್ನ ಸಹಾಯಕರಿಗೆ ಬಿಟ್ಟು ಉತ್ತಮಿಕೆಯ ನಿರೀಕ್ಷೆಯಲ್ಲಿ ೧೫೩೦ರ ದಶಕದ ಮಧ್ಯಭಾಗದಲ್ಲಿ ಫ್ಲಾರೆನ್ಸ್‌ನ್ನು ತೊರೆದ. ವರ್ಷಗಳ ನಂತರ ಬಸಿಲಿಕಾ ಡಿ ಸಾಂಟಾ ಕ್ರೋಸ್‌‌ನಲ್ಲಿ ದಫನು ಮಾಡುವುದಕ್ಕಾಗಿ ಅವನ ಕಳೇಬರವನ್ನು ರೋಮ್‌ನಿಂದ ವಾಪಸ್ಸು ತರಲಾಯಿತು; ತನ್ಮೂಲಕ ತನ್ನ ಅಚ್ಚುಮೆಚ್ಚಿನ ಟಸ್ಕ್ಯಾನಿಯಲ್ಲಿ ತನ್ನನ್ನು ಸಮಾಧಿ ಮಾಡಬೇಕೆಂಬ ಆ ಕಲಾಪರಿಣಿತನ ಕೊನೆಯ ಆಸೆಯನ್ನು ಈಡೇರಿಸಲಾಯಿತು.

ರೋಮ್‌ನಲ್ಲಿನ ಕೊನೆಯ ಕೃತಿಗಳು

ಬದಲಾಯಿಸಿ

ಸಿಸ್ಟೀನ್‌ ಪ್ರಾರ್ಥನಾ ಮಂದಿರದ ಬಲಿಪೀಠದ ಗೋಡೆಯ ಮೇಲಿನ ದಿ ಲಾಸ್ಟ್ ಜಡ್ಜ್‌ಮೆಂಟ್‌‌ಹಸಿಚಿತ್ರವು VIIನೇ ಪೋಪ್‌ ಕ್ಲೆಮೆಂಟ್‌ನಿಂದ ನಿಯೋಜಿಸಲ್ಪಟ್ಟಿತು. ಸದರಿ ಕಾರ್ಯಯೋಜನೆಯನ್ನು ವಹಿಸಿದ ಕೆಲವೇ ದಿನಗಳ ನಂತರ ಆತ ಅಸುನೀಗಿದ. ಸದರಿ ಯೋಜನೆಯನ್ನು ಮೈಕೆಲ್ಯಾಂಜೆಲೊ ಪ್ರಾರಂಭಿಸಿದ ಮತ್ತು ಸಂಪೂರ್ಣಗೊಳಿಸಿದನೇ ಎಂಬುದನ್ನು ನೋಡುವಲ್ಲಿ IIIನೇ ಪಾಲ್‌ ನಿಮಿತ್ತನಾಗಿದ್ದ. ಅಕ್ಟೋಬರ್‌ ೧೫೩೪ರಿಂದ ೧೫೪೧ರವರೆಗೆ ಸದರಿ ಯೋಜನೆಯ ಕುರಿತು ಮೈಕೆಲ್ಯಾಂಜೆಲೊ ಶ್ರಮಿಸಿದ. ಈ ಕೃತಿಯು ಬೃಹತ್‌ ಪ್ರಮಾಣದಲ್ಲಿದ್ದು, ಸಿಸ್ಟೀನ್‌ ಪ್ರಾರ್ಥನಾ ಮಂದಿರದ ಬಲಿಪೀಠದ ಹಿಂದಿರುವ ಸಂಪೂರ್ಣ ಗೋಡೆಯನ್ನು ವ್ಯಾಪಿಸಿದೆ. ದಿ ಲಾಸ್ಟ್ ಜಡ್ಜ್‌ಮೆಂಟ್‌ ಕೃತಿಯು ಕ್ರಿಸ್ತನ ಎರಡನೇ ಅವತಾರ ಮತ್ತು ಭವಿಷ್ಯದ್ದರ್ಶನದ ಒಂದು ಚಿತ್ರಣವಾಗಿದ್ದು, ಮಾನವೀಯತೆಯ ಆತ್ಮಗಳು ಹುಟ್ಟಿಕೊಳ್ಳುವುದು ಮತ್ತು ಕ್ರಿಸ್ತನಿಂದ ತೀರ್ಮಾನಿಸಲ್ಪಟ್ಟಂತೆ ಅವುಗಳ ಹಲವಾರು ವಿಧಿಲಿಖಿತಗಳಿಗೆ ನಿಯೋಜಿಸಲ್ಪಟ್ಟಿರುವುದು, ಸಂತರಿಂದ ಸುತ್ತುವರಿಯಲ್ಪಟ್ಟಿರುವುದು ಇವೆಲ್ಲಾ ಅಲ್ಲಿ ಚಿತ್ರಿಸಲ್ಪಟ್ಟಿವೆ.

ಒಮ್ಮೆ ಸಂಪೂರ್ಣಗೊಂಡಾಗ, ಪೋಪ್‌ ಪ್ರಭುತ್ವದ ಪ್ರಾರ್ಥನಾ ಮಂದಿರದಲ್ಲಿನ ನಗ್ನತೆಯ ಚಿತ್ರಿಸುವಿಕೆಗಳು ಅಶ್ಲೀಲ ಹಾಗೂ ಅಪಚಾರ ಎಂದು ಪರಿಗಣಿಸಲ್ಪಟ್ಟಿತು, ಮತ್ತು ಧರ್ಮಪಾಲ ಕರಾಫಾ ಹಾಗೂ ಘನವಂತ ಸೆರ್ನಿನಿ (ಮಾಂಟುವಾದ ರಾಯಭಾರಿ) ಇಬ್ಬರೂ ಸದರಿ ಹಸಿಚಿತ್ರವನ್ನು ತೆಗೆದುಹಾಕಬೇಕು ಇಲ್ಲವೇ ಅದರ ಅಶ್ಲೀಲ ಭಾಗವನ್ನು ಕತ್ತರಿಸಿ ತೆಗೆಯಬೇಕು ಎಂದು ಆಂದೋಲನವನ್ನು ನಡೆಸಿದರು. ಆದರೆ ಇದನ್ನು ಪೋಪ್‌ ಪ್ರತಿರೋಧಿಸಿದ. ಮೈಕೆಲ್ಯಾಂಜೆಲೊನ ಮರಣದ ನಂತರ, ಜನನಾಂಗಗಳನ್ನು ಮರೆಮಾಡಲು ನಿರ್ಧರಿಸಲಾಯಿತು ("ಪಿಕ್ಚುರಾ ಇನ್‌ ಕ್ಯಾಪೆಲ್ಲಾ ಅಪ್‌.ಕಾ ಕೂಪ್ರಿಯಾಂಟುರ್‌" ). ಆದ್ದರಿಂದ, ದೇಹಗಳ ಸಮಷ್ಟಿಯಲ್ಲಿ ಯಾವುದೇ ಮಾರ್ಪಾಡು ಮಾಡದೆಯೇ ಜನನಾಂಗಗಳನ್ನು ಪೆರಿಝೋಮಾಗಳಿಂದ (ಚಡ್ಡಿಗಳಿಂದ) ಮುಚ್ಚಲು ಮೈಕೆಲ್ಯಾಂಜೆಲೊನ ಓರ್ವ ಶಿಷ್ಯನಾದ ಡೇನಿಯೇಲ್‌ ಡಾ ವೊಲ್ಟೇರಾ ಎಂಬಾತನನ್ನು ನಿಯೋಜಿಸಲಾಯಿತು. ೧೯೯೩ರಲ್ಲಿ ಕೆಲಸವು ಪೂರ್ವಸ್ಥಿತಿಗೆ ಬಂದಾಗ, ಡೇನಿಯೇಲ್‌ನ ಎಲ್ಲಾ ಪೆರಿಝೋಮಾಗಳನ್ನು ತೆಗೆಯದಿರಲು ಹಾಗೂ ಅವುಗಳಲ್ಲಿ ಕೆಲವೊಂದನ್ನು ಒಂದು ಐತಿಹಾಸಿಕ ದಾಖಲೆಯಂತೆ ಉಳಿಸಲು ಪಾಲನಾಧಿಕಾರಿಗಳು ಬಯಸಿದರು. ಸದರಿ ಶ್ರೇಷ್ಠಕೃತಿಗೆ ಪರಿಷ್ಕರಣೆಯ (ಟಚ್‌-ಅಪ್‌) ಕಲಾವಿದನಿಂದ ಮಾಡಿಸಲ್ಪಟ್ಟ "ಸಭ್ಯತೆಯ" ಲೇಪಿಸುವಿಕೆಯ ಕಾರ್ಯದಿಂದಾಗಿ ಮೈಕೆಲ್ಯಾಂಜೆಲೊನ ಕೆಲವೊಂದು ಕೃತಿಯು ಹಿಂದೊಮ್ಮೆ ನಿರುಪಯುಕ್ತವೆಂದು ತಿರಸ್ಕರಿಸಲ್ಪಟ್ಟಿದ್ದೂ ಇದಕ್ಕೆ ಮತ್ತೊಂದು ಕಾರಣವಾಗಿತ್ತು. ಕ್ಯಾಪೋಡಿಮೋಂಟೆ ವಸ್ತುಸಂಗ್ರಹಾಲಯ of ನೇಪಲ್ಸ್‌‌‌ಕ್ಯಾಪೋಡಿಮೋಂಟೆ ವಸ್ತುಸಂಗ್ರಹಾಲಯದಲ್ಲಿ ಮಾರ್ಸೆಲೋ ವೆನ್ಸುಟಿಯಿಂದ ಮಾಡಲ್ಪಟ್ಟ, ಪರಿಷ್ಕರಣೆಗೆ ಅಥವಾ ಕತ್ತರಿಸಿ ತೆಗೆಯುವಿಕೆಗೆ ಒಳಗಾಗದ ಮೂಲಕೃತಿಯ ಒಂದು ವಿಶ್ವಾಸಾರ್ಹ ನಕಲನ್ನು ಕಾಣಬಹುದು.

 
ಸೇಂಟ್‌ ಪೀಟರ್ಸ್‌ ಬಸಿಲಿಕಾದ ಗುಮ್ಮಟವನ್ನು ಮೈಕೆಲ್ಯಾಂಜೆಲೊ ವಿನ್ಯಾಸಗೊಳಿಸಿದನಾದರೂ, ಅವನು ಸತ್ತಾಗ ಅದು ಅಪೂರ್ಣವಾಗಿಯೇ ಉಳಿದಿತ್ತು.

ಹಿಂದೊಮ್ಮೆ "ಇನ್ವೆಂಟರ್‌ ಡೆಲ್ಲೆ ಪೊರ್ಷೆರಿ" ಎಂದು ವರ್ಣಿಸಲ್ಪಟ್ಟಿದ್ದ (ಮೂಲ ಇಟಾಲಿಯನ್‌ ಭಾಷೆಯಲ್ಲಿ ಇದರ ಅರ್ಥ "ಅಶ್ಲೀಲ ದೃಶ್ಯಗಳ ಆವಿಷ್ಕಾರಕ" ಎಂದಾಗಿದ್ದು, "ಅಶಿಷ್ಟ ವಸ್ತುಗಳನ್ನು" ಅದು ಉಲ್ಲೇಖಿಸುತ್ತದೆ) ಮೈಕೆಲ್ಯಾಂಜೆಲೊನನ್ನು ಕತ್ತರಿ ಪ್ರಯೋಗದ ಅಥವಾ ಪರಿಷ್ಕರಣೆಯ ಪ್ರಕ್ರಿಯೆಗಳು ಯಾವಾಗಲೂ ಅನುಸರಿಸಿದವು. ವರ್ಣಚಿತ್ರಗಳು ಮತ್ತು ಶಿಲ್ಪಕಲಾಕೃತಿಗಳಲ್ಲಿನ ಮಾನವರ ಜನನಾಂಗಗಳ ಎಲ್ಲಾ ಚಿತ್ರಣಗಳನ್ನು ಮುಚ್ಚುವ ಗುರಿಯನ್ನು ಹೊಂದಿದ್ದ ಕೌಂಟರ್‌-ರೀಫಾರ್ಮೇಷನ್‌ ವತಿಯಿಂದ ಹಮ್ಮಿಕೊಳ್ಳಲಾದ ಕುಖ್ಯಾತ "ಮಾನದ-ಮುಸುಕಿನ ಆಂದೋಲನ"ವು ಮೈಕೆಲ್ಯಾಂಜೆಲೊನ ಕೃತಿಗಳಿಂದಲೇ ಪ್ರಾರಂಭವಾಯಿತು. ಇದಕ್ಕೆ ಎರಡು ಉದಾಹರಣೆಗಳನ್ನು ಕೊಡುವುದಾದರೆ, ಕ್ರಿಸ್ಟೋ ಡೆಲ್ಲಾ ಮಿನರ್ವಾ ದ (ರೋಮ್‌ನಲ್ಲಿರುವ ಸಾಂಟಾ ಮಾರಿಯಾ ಸೋಪ್ರಾ ಮಿನರ್ವಾದ ಚರ್ಚು) ಅಮೃತಶಿಲೆ ಪ್ರತಿಮೆಯನ್ನು, ಅದು ಈಗ ಕಾಣಿಸುವಂತೆ, ಹೆಚ್ಚುವರಿ ಉಡುಗೆತೊಡುಗೆಯಿಂದ ಮುಚ್ಚಲಾಯಿತು, ಮತ್ತು ಮಡೊನ್ನಾ ಆಫ್‌ ಬ್ರಜಸ್‌‌‌ ನಲ್ಲಿನ (ಬೆಲ್ಜಿಯಂನ ಬ್ರಜಸ್‌‌ನಲ್ಲಿರುವ ದಿ ಚರ್ಚ್‌ ಆಫ್‌ ಅವರ‍್ ಲೇಡಿ) ನಗ್ನವಾಗಿರುವ ಬಾಲಯೇಸುವಿನ ಪ್ರತಿಮೆಯನ್ನು ಹಲವಾರು ದಶಕಗಳವರೆಗೆ ಮುಚ್ಚಿಟ್ಟಿರುವ ಸ್ಥಿತಿಯಲ್ಲೇ ಇರಿಸಲಾಯಿತು. ಅಷ್ಟೇ ಅಲ್ಲ, ಲಂಡನ್‌ನಲ್ಲಿನ ಕ್ಯಾಸ್ಟ್‌ ಕೋರ್ಟ್ಸ್‌ (ವಿಕ್ಟೋರಿಯಾ ಮತ್ತು ಆಲ್ಬರ್ಟ್‌ ವಸ್ತು ಸಂಗ್ರಹಾಲಯ)ದಲ್ಲಿನ ಡೇವಿಡ್‌ನ ಮೆದುಗಾರೆಯ ನಕಲು ಪ್ರತಿಮೆಯು, ತನ್ನ ಹಿಂಭಾಗದಲ್ಲಿರುವ ಪೆಟ್ಟಿಗೆಯೊಂದರಲ್ಲಿ ಒಂದು ಮಾನದ-ಮುಸುಕನ್ನು ಹೊಂದಿದೆ. ರಾಜಪ್ರಭುತ್ವಕ್ಕೆ ಸೇರಿದ ಮಹಿಳೆಯರು ಆ ಸ್ಥಳಕ್ಕೆ ಭೇಟಿನೀಡಿದಾಗ, ಅವರಿಗೆ ಮುಜುಗರವಾಗಬಾರದೆಂದು ಪ್ರತಿಮೆಯ ಜನನಾಂಗಗಳ ಮೇಲೆ ಮುಚ್ಚುವುದಕ್ಕಾಗಿ ಇದನ್ನು ಅಲ್ಲಿಡಲಾಗಿತ್ತು.

೧೫೪೬ರಲ್ಲಿ, ವ್ಯಾಟಿಕನ್‌ನಲ್ಲಿನ ಸೇಂಟ್‌ ಪೀಟರ್ಸ್‌ ಬಸಿಲಿಕಾದ ವಾಸ್ತುಶಿಲ್ಪಿಯಾಗಿ ಮೈಕೆಲ್ಯಾಂಜೆಲೊ ನೇಮಿಸಲ್ಪಟ್ಟ ಹಾಗೂ ಅದರ ಗುಮ್ಮಟವನ್ನು ಅವನು ವಿನ್ಯಾಸಗೊಳಿಸಿದ. ಸೇಂಟ್‌ ಪೀಟರ್ಸ್‌ನಲ್ಲಿನ ಕೆಲಸಕಾರ್ಯಗಳು ಮುಂದುವರಿಯುತ್ತಿದ್ದಂತೆ, ಅದರ ಗುಮ್ಮಟವು ಸಂಪೂರ್ಣಗೊಳ್ಳುವ ಮುಂಚೆಯೇ ಮೈಕೆಲ್ಯಾಂಜೆಲೊ ಮರಣಹೊಂದುತ್ತಾನೆ ಎಂಬ ಕಳವಳ ಹುಟ್ಟಿಕೊಂಡಿತು. ಆದಾಗ್ಯೂ, ಆಧಾರದ ವರ್ತುಲವಾದ ಗುಮ್ಮಟದ ಕೆಳಗಿನ ಭಾಗದ ಮೇಲೆ ಕಟ್ಟಡದ ನಿರ್ಮಾಣಕಾರ್ಯವು ಪ್ರಾರಂಭವಾಗುತ್ತಿದ್ದಂತೆ, ವಿನ್ಯಾಸದ ಪೂರ್ಣಗೊಳ್ಳುವಿಕೆಯು ಅನಿವಾರ್ಯವಾಗಿತ್ತು.

ಕಂಡುಬಂದ ಕೊನೆಯ ರೇಖಾಚಿತ್ರ

ಬದಲಾಯಿಸಿ

೨೦೦೭ರ ಡಿಸೆಂಬರ್‌ ೭ರಂದು, ಸೇಂಟ್‌ ಪೀಟರ್ಸ್‌ ಬಸಿಲಿಕಾದ ಗುಮ್ಮಟಕ್ಕೆ ಸಂಬಂಧಿಸಿದ ಮೈಕೆಲ್ಯಾಂಜೆಲೊನ ಕೆಂಪು ಸೀಮೆಸುಣ್ಣದ ರೇಖಾಚಿತ್ರವು ವ್ಯಾಟಿಕನ್‌ನ ದಾಖಲೆಗಳಲ್ಲಿ ಪತ್ತೆಯಾಯಿತು. ಇದು ೧೫೬೪ರಲ್ಲಿ ಆತ ಸಾಯುವುದಕ್ಕೆ ಮುಂಚಿನ ಕೊನೆಯ ರೇಖಾಚಿತ್ರವಾಗಿತ್ತು. ತನ್ನ ಜೀವನದ ನಂತರದ ದಿನಗಳಲ್ಲಿ ಆತ ತನ್ನ ವಿನ್ಯಾಸಗಳನ್ನು ನಾಶಪಡಿಸಿದ್ದರಿಂದಾಗಿ, ಇದು ಅತೀವವಾಗಿ ಅಪರೂಪದ್ದೆನಿಸಿದೆ. ಈ ರೇಖಾಚಿತ್ರವು ಸೇಂಟ್‌ ಪೀಟರ್ಸ್‌ ಚರ್ಚ್‌ನ ಗುಮ್ಮಟ ಗೋಪುರದ ತಲೆಭಾಗದ ತ್ರಿಜ್ಯೀಯ ದುಂಡುಕಂಬಗಳಲ್ಲೊಂದಕ್ಕೆ ಸಂಬಂಧಿಸಿದ ಒಂದು ಆಂಶಿಕ ನಕಾಶೆಯಾಗಿದೆ.[೨೦]

ವಾಸ್ತುಶಿಲ್ಪೀಯ ಕೆಲಸ

ಬದಲಾಯಿಸಿ
 
ಫ್ಲಾರೆನ್ಸ್‌ನ ಬಸಿಲಿಕಾ ಡಿ ಸಾಂಟಾ ಕ್ರೋಸ್‌ ಡಿ ಫೈರೆನ್ಜ್‌ನಲ್ಲಿನ ಮೈಕೆಲ್ಯಾಂಜೆಲೊನ ಸ್ವಂತ ಸಮಾಧಿ

ಇತರ ಜನರಿಂದ ಪ್ರಾರಂಭಿಸಲ್ಪಟ್ಟ ಅನೇಕ ಯೋಜನೆಗಳಲ್ಲಿ ಮೈಕೆಲ್ಯಾಂಜೆಲೊ ತನ್ನನ್ನು ತೊಡಗಿಸಿಕೊಂಡಿದ್ದು, ರೋಮ್‌ನಲ್ಲಿನ ಸೇಂಟ್‌ ಪೀಟರ್ಸ್‌ ಬಸಿಲಿಕಾದಲ್ಲಿನ ಅವನ ಕಸುಬುಗಾರಿಕೆಯು ಅವುಗಳಲ್ಲಿ ಗಮನಾರ್ಹವಾಗಿದೆ. ಇದೇ ಕಾಲದ ಅವಧಿಯಲ್ಲಿ ಮೈಕೆಲ್ಯಾಂಜೆಲೊನಿಂದ ವಿನ್ಯಾಸಗೊಳಿಸಲ್ಪಟ್ಟ ಕ್ಯಾಂಪಿಡೋಗ್ಲಿಯೋ, ರೋಮ್‌ನ ಕ್ಯಾಪಿಟೋಲೈನ್‌ ಬೆಟ್ಟದ ರಚನೆಗಳು ಹಾಗೂ ಸ್ಥಳಾಕಾಶಗಳನ್ನು ಪುನರ್ವ್ಯವಸ್ಥೆಗೊಳಿಸಿತು. ಒಂದು ಚೌಕಾಕಾರಕ್ಕಿಂತ ಮಿಗಿಲಾಗಿ ಒಂದು ರಾಂಬಾಯ್ಡ್‌ನಂತಿರುವ (ಎದುರುಬದುರು ಭುಜಗಳು-ಕೋನಗಳು ಸಮನಾಗಿರುವ ಆದರೆ, ಲಂಬಕೋನವಿಲ್ಲದಿರುವ ಸಮಾನಾಂತರ ಚತುರ್ಭುಜ) ಇದರ ಆಕಾರವು, ಯಥಾದೃಷ್ಟ ರೂಪದ ಪರಿಣಾಮಗಳನ್ನು ಪ್ರತಿರೋಧಿಸುವ ಉದ್ದೇಶವನ್ನು ಹೊಂದಿತ್ತು. ಮೈಕೆಲ್ಯಾಂಜೆಲೊನಿಂದ ನಿರ್ವಹಿಸಲ್ಪಟ್ಟ ಫ್ಲಾರನ್ಸಿನ ಪ್ರಮುಖ ವಾಸ್ತುಶಿಲ್ಪೀಯ ಯೋಜನೆಗಳು ಕಾರ್ಯಗತಗೊಳಿಸದ ಕಟ್ಟಡದ ಮುಂಭಾಗಗಳಾಗಿದ್ದು, ಸ್ಯಾನ್‌ ಲೊರೆಂಝೊದ ಬಸಿಲಿಕಾ, ಫ್ಲಾರೆನ್ಸ್‌ ಮತ್ತು ಮೆಡಿಸಿ ಪ್ರಾರ್ಥನಾ ಮಂದಿರ (ಕ್ಯಾಪೆಲ್ಲಾ ಮೆಡಿಸಿಯಾ ) ಮತ್ತು ಅಲ್ಲಿನ ಲೌರೆನ್ಷಿಯನ್‌ ಗ್ರಂಥಾಲಯ, ಹಾಗೂ ಫ್ಲಾರೆನ್ಸ್‌ನ ಕೋಟೆ-ನಿರ್ಮಾಣಗಳಿಗೆ ಅಥವಾ ರಕ್ಷಣೋಪಾಯಗಳಿಗೆ ಅವು ಸಂಬಂಧಿಸಿವೆ. ಪ್ರಮುಖ ರೋಮನ್‌ ಯೋಜನೆಗಳೆಂದರೆ, ಸೇಂಟ್‌ ಪೀಟರ್ಸ್‌, ಪಲಾಝೋ ಫಾರ್ನೇಸ್‌, ಸ್ಯಾ ಗಿಯೋವನ್ನಿ ಡೇಯ್‌ ಫಿಯೋರೆಂಟಿನಿ, ಬಸಿಲಿಕಾ ಡಿ ಸ್ಯಾಂಟಾ ಮಾರಿಯಾ ಮ್ಯಾಗಿಯೋರ್‌‌ನಲ್ಲಿನ ಸ್ಫೋರ್ಜಾ ಪ್ರಾರ್ಥನಾ ಮಂದಿರ (ಕ್ಯಾಪೆಲ್ಲಾ ಸ್ಫೋರ್ಜಾ ) , ಪೋರ್ಟಾ ಪಿಯಾ ಮತ್ತು ಸ್ಯಾಂಟಾ ಮಾರಿಯಾ ಡೆಗ್ಲಿ ಏಂಜಲಿ.

ಲೌರೆನ್ಷಿಯನ್‌ ಗ್ರಂಥಾಲಯ

ಬದಲಾಯಿಸಿ

೧೫೩೦ರ ಸುಮಾರಿಗೆ, ಫ್ಲಾರೆನ್ಸ್‌ನಲ್ಲಿನ ಸ್ಯಾನ್‌ ಲೊರೆಂಝೊ ಚರ್ಚ್‌ಗೆ ಹೊಂದಿಕೊಂಡಿರುವಂತೆ ಲೌರೆನ್ಷಿಯನ್‌ ಗ್ರಂಥಾಲಯವನ್ನು ಮೈಕೆಲ್ಯಾಂಜೆಲೊ ವಿನ್ಯಾಸಗೊಳಿಸಿದ. ಗೋಡೆಗಂಬಗಳು ತಳಭಾಗದಲ್ಲಿ ತೆಳುವಾದ ತುದಿಯನ್ನು ಹೊಂದಿರುವಂಥ ಹೊಸ ಶೈಲಿಗಳನ್ನು ಅವನು ಸೃಷ್ಟಿಸಿದ. ಅಷ್ಟೇ ಅಲ್ಲ, ಚಚ್ಚೌಕದ ಮತ್ತು ತಿರುವಿನ ಸ್ವರೂಪಗಳೊಂದಿಗಿನ ವೈಲಕ್ಷಣ್ಯವನ್ನು ಎತ್ತಿತೋರಿಸುವ ಒಂದು ಪ್ರತಿಯಾಗಿ ಮೆಟ್ಟಿಲಸಾಲನ್ನೂ ಅವನು ಸೃಷ್ಟಿಸಿದ.

ಮೆಡಿಸಿ ಪ್ರಾರ್ಥನಾ ಮಂದಿರ

ಬದಲಾಯಿಸಿ

ಮೆಡಿಸಿ ಪ್ರಾರ್ಥನಾ ಮಂದಿರವನ್ನು ಮೈಕೆಲ್ಯಾಂಜೆಲೊ ವಿನ್ಯಾಸಗೊಳಿಸಿದ. ಮೆಡಿಸಿ ಕುಟುಂಬದ ಕೆಲವು ನಿಗದಿತ ಸದಸ್ಯರಿಗೆ ಅರ್ಪಿಸಲ್ಪಟ್ಟಿರುವ ಸ್ಮಾರಕಗಳನ್ನು ಮೆಡಿಸಿ ಪ್ರಾರ್ಥನಾ ಮಂದಿರವು ತನ್ನಲ್ಲಿ ಹೊಂದಿದೆ. ಸದರಿ ಯೋಜನೆಯನ್ನು ಮೈಕೆಲ್ಯಾಂಜೆಲೊ ಎಂದಿಗೂ ಸಂಪೂರ್ಣಗೊಳಿಸಲಿಲ್ಲ, ಹೀಗಾಗಿ ಅವನ ವಿದ್ಯಾರ್ಥಿಗಳು ನಂತರ ಇದನ್ನು ಸಂಪೂರ್ಣಗೊಳಿಸಿದರು. ಕೊಡುಗೈತನದ ಲೊರೆಂಝೊನನ್ನು ಮೆಡಿಸಿ ಪ್ರಾರ್ಥನಾ ಮಂದಿರದ ಪ್ರವೇಶದ್ವಾರದ ಬಳಿ ಸಮಾಧಿಮಾಡಲಾಯಿತು. "ಮಡೊನ್ನಾ ಮತ್ತು ಮಗುವಿನ" ಹಾಗೂ ಮೆಡಿಸಿ ಪೋಷಕ ಸಂತರಾದ ಕಾಸ್‌ಮಾಸ್‌ ಮತ್ತು ಡೇಮಿಯನ್‌ರ ಶಿಲ್ಪಕೃತಿಗಳನ್ನು ಅವನ ಹುಗಿತದ ಮೇಲ್ಭಾಗದಲ್ಲಿ ಸ್ಥಾಪಿಸಲಾಯಿತು. "ಮಡೊನ್ನಾ ಮತ್ತು ಮಗು" ಮೈಕೆಲ್ಯಾಂಜೆಲೊನ ಸ್ವಂತ ಕೃತಿಯಾಗಿತ್ತು.

ವ್ಯಕ್ತಿತ್ವ

ಬದಲಾಯಿಸಿ

ಮೈಕೆಲ್ಯಾಂಜೆಲೊ, ಹಲವು ಬಾರಿ ಇತರರೊಂದಿಗೆ ದುರಹಂಕಾರವನ್ನು ವ್ಯಕ್ತಪಡಿಸುತ್ತಿದ್ದ ಮತ್ತು ಸ್ವತಃ ತನ್ನ ಕುರಿತು ಅವನಿಗೆ ಒಂದು ನಿರಂತರವಾದ ಅತೃಪ್ತಿಯಿತ್ತು. ಕಲೆಯೆಂಬುದು ಒಳಗಿನ ಪ್ರೇರಣೆಯಿಂದ ಮತ್ತು ಸಂಸ್ಕೃತಿಯಿಂದ ಹುಟ್ಟಿಬರುತ್ತದೆ ಎಂಬುದು ಅವನ ಅಭಿಪ್ರಾಯವಾಗಿತ್ತು. ತನ್ನ ಪ್ರತಿಸ್ಪರ್ಧಿಯಾದ ಲಿಯೋನಾರ್ಡೊ ಡ ವಿನ್ಸಿಯ ಪರಿಕಲ್ಪನೆಗಳಿಗೆ ಅಸಾಂಗತ್ಯವಾಗಿರುವ ರೀತಿಯಲ್ಲಿ, ಮೈಕೆಲ್ಯಾಂಜೆಲೊ ಜಯಿಸಿಕೊಂಡು ಬರಬೇಕಾದ ಒಂದು ಶತ್ರುವಿನಂತೆ ಪ್ರಕೃತಿಯನ್ನು ಕಂಡ. ಆತ ಸೃಷ್ಟಿಸಿರುವ ಶಿಲ್ಪಾಕೃತಿಗಳು ಪ್ರಭಾವಶಾಲಿಯಾಗಿ ಮತ್ತು ಚಲನಶೀಲವಾಗಿದ್ದು, ತನ್ನದೇ ಸ್ವಂತ ಸ್ಥಳಾವಕಾಶದಲ್ಲಿ ಅವು ಹೊರಗಿನ ಪ್ರಪಂಚಕ್ಕಿಂತ ಭಿನ್ನವಾಗಿವೆ. ಕಲ್ಲಿನ ಒಳಗಡೆ ಈಗಾಗಲೇ ಅಡಗಿರುವ ಸ್ವರೂಪಗಳನ್ನು ಮುಕ್ತವಾಗಿಸುವುದೇ ಶಿಲ್ಪಿಯ ಕೆಲಸ ಎಂಬುದು ಮೈಕೆಲ್ಯಾಂಜೆಲೊನ ಅಭಿಪ್ರಾಯವಾಗಿತ್ತು. ಪ್ರತಿಯೊಂದು ಕಲ್ಲೂ ತನ್ನೊಳಗಡೆ ಒಂದು ಶಿಲ್ಪಕೃತಿಯನ್ನು ಹೊಂದಿದೆ, ಮತ್ತು ಪ್ರತಿಮೆಯ ಭಾಗವಾಗಿಲ್ಲದ ಎಲ್ಲ ಭಾಗಗಳನ್ನು ಕೇವಲ ಕೆತ್ತಿ ಎಸೆಯುವುದೇ ಶಿಲ್ಪವನ್ನು ಕೆತ್ತುವ ಕಾರ್ಯವಾಗಿ ಪರಿಣಮಿಸುತ್ತದೆ ಎಂಬುದು ಅವನ ನಂಬಿಕೆಯಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಮೈಕೆಲ್ಯಾಂಜೆಲೊನ ಕುಶಲತೆಯು, ಅದರಲ್ಲೂ ವಿಶೇಷವಾಗಿ ಶಿಲ್ಪಕೃತಿಯಲ್ಲಿನ ಅವನ ನಿಪುಣತೆಯು ಅವನ ಕಾಲದಲ್ಲಿಯೇ ಅತೀವವಾದ ಮೆಚ್ಚುಗೆಗೆ ಪಾತ್ರವಾಗಿತ್ತು ಎಂಬ ಅಂಶವನ್ನು ಹಲವಾರು ಉಪಾಖ್ಯಾನಗಳು ಹೊರಗೆಡವುತ್ತವೆ. ಮತ್ತೋರ್ವ ಲೊರೆಂಝೊ ಡಿ ಮೆಡಿಸಿಯು ಒಂದಷ್ಟು ಹಣ ಮಾಡವು ಸಲುವಾಗಿ ಮೈಕೆಲ್ಯಾಂಜೆಲೊವನ್ನು ಬಳಸಿಕೊಳ್ಳಲು ಬಯಸಿದ. ಮೈಕೆಲ್ಯಾಂಜೆಲೊ ಕೆತ್ತಿದ್ದ ರೋಮನರ ಪ್ರಣಯದೇವತೆಯಾದ ಕ್ಯುಪಿಡ್‌ನ ಒಂದು ಕೃತಿಯನ್ನು ಅವನು ಹೊಂದಿದ್ದ. ಆದರೆ ಅದು ಸವೆದು ಜೀರ್ಣವಾಗಿರುವಂತೆ ಮತ್ತು ಹಳೆಯದಾಗಿರುವಂತೆ ಕಾಣಿಸುತ್ತಿತ್ತು. ಮೈಕೆಲ್ಯಾಂಜೆಲೊನಿಗೆ ೩೦ ಡಕಟ್ ನಾಣ್ಯಗಳನ್ನು ಪಾವತಿಸಿ ಸದರಿ ಕ್ಯೂಪಿಡ್‌‌ ಶಿಲ್ಪವನ್ನು ಖರೀದಿಸಿದ ಲೊರೆಂಝೊ, ಅದನ್ನು ೨೦೦ ಡಕಟ್‌ ನಾಣ್ಯಗಳಿಗೆ ಮಾರಿದ. ಇದರಿಂದ ಸಂದೇಹಗ್ರಸ್ತನಾದ ಧರ್ಮಪಾಲ ರಫೇಲಿ ರಿಯಾರಿಯೋ, ಇದರ ಕುರಿತು ತನಿಖೆ ನಡೆಸಲು ಒಬ್ಬ ವ್ಯಕ್ತಿಯನ್ನು ನಿಯೋಜಿಸಿದ. ತನಗಾಗಿ ಕ್ಯೂಪಿಡ್‌ನ ಒಂದು ರೇಖಾಚಿತ್ರವನ್ನು ರಚಿಸಿಕೊಡುವಂತೆ ಮೈಕೆಲ್ಯಾಂಜೆಲೊನನ್ನು ಕೇಳಿ ನಂತರ ಪಡೆದುಕೊಂಡ ಆ ವ್ಯಕ್ತಿಯು ಮೈಕೆಲ್ಯಾಂಜೆಲೊನೊಂದಿಗೆ ಮಾತಾಡುತ್ತಾ, ತಾನು ಸೃಷ್ಟಿಸಿದ ಕ್ಯೂಪಿಡ್‌ ಕೃತಿಗೆ ಮೈಕೆಲ್ಯಾಂಜೆಲೊ ೩೦ ಡಕಟ್‌ ನಾಣ್ಯಗಳನ್ನು ಸ್ವೀಕರಿಸಿದರೆ, ಅದೇ ವೇಳೆಗೆ ಲೊರೆಂಝೊ ಅದಕ್ಕೆ ಪ್ರಾಚೀನ ಕಲಾಕೃತಿಯೆಂಬ ಹಣೆಪಟ್ಟಿ ಕಟ್ಟಿ ಅದನ್ನು ೨೦೦ ಡಕಟ್‌ ನಾಣ್ಯಗಳಿಗೆ ಮಾರಿದುದನ್ನು ತಿಳಿಸಿದ. ತಾನು ಕ್ಯೂಪಿಡ್‌ ಕೃತಿಯನ್ನು ತಾನೇ ಸೃಷ್ಟಿಸಿದುದಾಗಿ ಒಪ್ಪಿಕೊಂಡ ಮೈಕೆಲ್ಯಾಂಜೆಲೊ, ತಾನು ಮೋಸಕ್ಕೆ ಒಳಗಾಗಿರುವ ವಿಷಯ ತನಗೆ ತಿಳಿದಿಲ್ಲ ಎಂದು ಹೇಳಿದ. ಸತ್ಯವು ಬಹಿರಂಗಗೊಂಡ ನಂತರ, ಇದನ್ನು ಮೈಕೆಲ್ಯಾಂಜೆಲೊನ ಕಲಾಕೌಶಲ್ಯದ ಒಂದು ಪುರಾವೆಯಾಗಿ ನಂತರ ಪರಿಗಣಿಸಿದ ಆ ಧರ್ಮಪಾಲ, ಅವನಿಗೆ ಬ್ಯಾಕಸ್‌ (ಪ್ರಾಚೀನ ಗ್ರೀಕರ ಮತ್ತು ರೋಮನರ ಮದ್ಯದೇವತೆ) ಶಿಲ್ಪವನ್ನು ಸೃಷ್ಟಿಸುವ ಕೆಲಸವನ್ನು ವಹಿಸಿದ. ಇನ್ನೂ ಹೆಚ್ಚು ಪ್ರಚಲಿತವಾಗಿರುವ ಮತ್ತೊಂದು ಉಪಾಖ್ಯಾನವು ಸಮರ್ಥಿಸುವಂತೆ, ಮೋಸೆಸ್‌ ಚರ್ಚ್‌ಗೆ (ರೋಮ್‌ನ ವಿಂಕೋಲಿಯಲ್ಲಿನ ಸ್ಯಾನ್‌ ಪಿಯೆಟ್ರೊ‌) ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ, "ನೀನೇಕೆ ನನ್ನೊಂದಿಗೆ ಮಾತಾಡಬಾರದು?" ಎಂದು ಕೂಗುತ್ತಾ ಮೈಕೆಲ್ಯಾಂಜೆಲೊ ಪ್ರತಿಮೆಯ ಮೊಣಕಾಲಿಗೆ ಸುತ್ತಿಗೆಯೊಂದರಿಂದ ಬಿರುಸಾಗಿ ಹೊಡೆದ.[ಸೂಕ್ತ ಉಲ್ಲೇಖನ ಬೇಕು]

ತನ್ನ ವೈಯಕ್ತಿಕ ಜೀವನದಲ್ಲಿ, ಮೈಕೆಲ್ಯಾಂಜೆಲೊ ಸಂಯಮದಿಂದ ಅಥವಾ ಹಿತಮಿತವಾದ ನಡತೆಯಿಂದ ಕೂಡಿದ ವ್ಯಕ್ತಿಯಾಗಿದ್ದ. ತನ್ನ ಶಿಷ್ಯನಾದ ಆಸ್ಕಾನಿಯೋ ಕಾಂಡಿವಿಯೊಂದಿಗೆ ಅವನು ಮಾತನಾಡುತ್ತಾ, "ನಾನು ಎಷ್ಟೇ ಶ್ರೀಮಂತನಾಗಿದ್ದರೂ ಸಹ, ಯಾವಾಗಲೂ ಓರ್ವ ಬಡವ್ಯಕ್ತಿಯಂತೆಯೇ ಜೀವನ ಸಾಗಿಸಿಕೊಂಡು ಬಂದೆ" ಎಂದು ತಿಳಿಸಿದ.[೨೧] ಕಾಂಡಿವಿ ತನ್ನ ಗುರುವಿನ ಕುರಿತು ಮಾತನಾಡುತ್ತಾ, ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದಂತೆ ಅವನೊಬ್ಬ ವಿಭಿನ್ನ ವ್ಯಕ್ತಿಯಾಗಿದ್ದ; "ಚಪಲಕ್ಕೆ ತಿನ್ನುವ ಬದಲು ಅವಶ್ಯಕತೆಗೆ ಅನುಸಾರವಾಗಿ ಅವನು ಆಹಾರವನ್ನು ಸೇವಿಸುತ್ತಿದ್ದುದು"[೨೧] ಮತ್ತು "ಅನೇಕ ಬಾರಿ ಅವನ ಬಟ್ಟೆಗಳು ಹಾಗೂ.... ಬೂಟುಗಳನ್ನು ಧರಿಸಿ ಮಲಗುತ್ತಿದ್ದುದು" ಅವನ ಅಭ್ಯಾಸವಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾನೆ.[೨೧] ಈ ಅಭ್ಯಾಸಗಳಿಂದಾಗಿಯೇ ಅವನು ಅಷ್ಟೊಂದು ಜನಪ್ರಿಯನಾಗಲಿಲ್ಲವೆನಿಸುತ್ತದೆ. ಅವನ ಜೀವನಚರಿತ್ರೆಕಾರನಾದ ಪಾವೊಲೊ ಗಿಯೋವಿಯೋ ಎಂಬಾತ ಈ ಕುರಿತು ಮಾತನಾಡುತ್ತಾ, "ಅವನ ಸ್ವಭಾವ ಅದೆಷ್ಟು ಒರಟಾಗಿ ಮತ್ತು ಅಸಂಸ್ಕೃತವಾಗಿತ್ತೆಂದರೆ, ಅವನ ಮನೆಯಲ್ಲಿನ ಅಭ್ಯಾಸಗಳು ನಂಬಲಸಾಧ್ಯವಾಗುವಂತೆ ಕೊಳಕಾಗಿದ್ದವು, ಮತ್ತು ಯಾವುದೇ ವಿದ್ಯಾರ್ಥಿಗಳ ಭಾವೀ ತಲೆಮಾರು ಅವನನ್ನು ಅನುಸರಿಸದಿರುವಂತೆ ವಂಚಿಸಿದವು" ಎಂದು ಹೇಳಿದ್ದಾನೆ.[೨೨] ಸ್ವಭಾವದಲ್ಲಿ ಅವನೊಬ್ಬ ಏಕಾಂಗಿ ಮತ್ತು ವಿಷಣ್ಣತೆಯ ಸ್ವಭಾವದ ವ್ಯಕ್ತಿಯಾಗಿದ್ದರಿಂದ, ಇದನ್ನು ಆತ ಮನಸ್ಸಿಗೆ ತೆಗೆದುಕೊಂಡಿರದಿರಬಹುದು. "ಮನುಷ್ಯರ ಸಹವಾಸದಿಂದ ಅವನು ತನ್ನನ್ನು ಹಿಂದೆಗೆದುಕೊಂಡಿದ್ದರಿಂದಾಗಿ" ಬಿಝಾರೋ ಇ ಫ್ಯಾಂಟಾಸ್ಟಿಕೊ ಎಂದು ಕರೆಯಲ್ಪಡುವ ಸ್ಥಿತಿಯಲ್ಲಿ ಅವನು ಇರುವುದರ ಒಂದು ಪ್ರತಿಷ್ಠೆಯನ್ನು ಪಡೆದುಕೊಂಡಿದ್ದ.[೨೩]

ಲೈಂಗಿಕತೆ

ಬದಲಾಯಿಸಿ
 
ಲಿಬ್ಯಾ ದೇಶದ ಪ್ರವಾದಿನಿ, ನ್ಯೂಯಾರ್ಕ್‌ ನಗರ, ಮೆಟ್ರೋಪಾಲಿಟನ್‌ ಮ್ಯೂಸಿಯಂ ಆಫ್‌ ಆರ್ಟ್‌ಗಾಗಿ ರೂಪಿಸಲಾದ ರೇಖಾಚಿತ್ರ
 
ಲಿಬ್ಯಾ ದೇಶದ ಪ್ರವಾದಿನಿ, ಸಿಸ್ಟೀನ್‌ ಪ್ರಾರ್ಥನಾ ಮಂದಿರ, ನೆರವೇರಿಸಲ್ಪಟ್ಟಿರುವುದು.

ಮೈಕೆಲ್ಯಾಂಜೆಲೊನ ಕಲೆಗೆ ಆಧಾರವಾಗಿದ್ದುದು ಪುರುಷ ಸೌಂದರ್ಯದೆಡೆಗಿನ ಅವನ ಒಲವು. ಇದು ಸೌಂದರ್ಯ ಮೀಮಾಂಸೆಯ ದೃಷ್ಟಿ ಹಾಗೂ ಭಾವನಾತ್ಮಕ ದೃಷ್ಟಿಗಳೆರಡರಿಂದಲೂ ಅವನನ್ನು ಆಕರ್ಷಿಸಿತು. ಕೊಂಚಮಟ್ಟಿಗೆ ಇದು ಪುರುಷತ್ವಕ್ಕೆ ಸಂಬಂಧಿಸಿದ ನವೋದಯದ ಆದರ್ಶೀಕರಣದ ಒಂದು ಅಭಿವ್ಯಕ್ತಿಯಾಗಿತ್ತು. ಆದರೆ ಮೈಕೆಲ್ಯಾಂಜೆಲೊನ ಕಲೆಯಲ್ಲಿ ಈ ಸೌಂದರ್ಯಪ್ರಜ್ಞೆಗೆ ಒಂದು ವಿಷಯಾಸಕ್ತಿ ಸೂಚಕ ಪ್ರತಿಸ್ಪಂದನೆಯಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.[೨೪]

ಪ್ರೇಮದ ಕುರಿತಾದ ಶಿಲ್ಪಿಯ ಅಭಿವ್ಯಕ್ತಿಗಳು ನವಪ್ಲೇಟೋವಾದದ ಸ್ವರೂಪದಲ್ಲಿ ಹಾಗೂ ಮುಕ್ತವಾಗಿ ಸಲಿಂಗಕಾಮದ ಸ್ವರೂಪದಲ್ಲಿ ಚಿತ್ರಿಸಲ್ಪಟ್ಟಿವೆ; ಇತ್ತೀಚಿನ ಪಾಂಡಿತ್ಯವು ಎರಡೂ ಜ್ಞಾನಗಳನ್ನು ಗೌರವಿಸುವ ಅರ್ಥವಿವರಣೆಯೊಂದನ್ನು ಹುಡುಕುತ್ತದೆ. ಆದರೂ ಪರಿಪೂರ್ಣವಾದ ತೀರ್ಮಾನಗಳನ್ನು ತಳೆಯುವಲ್ಲಿ ಅದು ಜಾಗರೂಕತೆಯಿಂದ ವರ್ತಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಸೆಖಿನೋ ಡೆಯ್‌ ಬ್ರಾಸಿ ಈ ಒಗಟಿಗೆ ಒಂದು ಉದಾಹರಣೆಯಾಗಿ ನೀಡಬಹುದು. ೧೫೪೩ರಲ್ಲಿನ ಅವರ ಭೇಟಿಯ ಕೇವಲ ಒಂದು ವರ್ಷದ ನಂತರ ಸಂಭವಿಸಿದ ಸೆಖಿನೋ ಡೆಯ್‌ ಬ್ರಾಸಿಯ ಸಾವು, ಅಂತ್ಯಕ್ರಿಯೆಗೆ ಸಂಬಂಧಿಸಿದ ನಲವತ್ತೆಂಟು ಚಮತ್ಕಾರಿ ಚುಟುಕಗಳನ್ನು ಬರೆಯಲು ಪ್ರೇರೇಪಿಸಿದವು. ಸಂಬಂಧವು ಕೇವಲ ರಮ್ಯಭಾವದವು ಮಾತ್ರವೇ ಆಗಿರದೆ, ಅದರ ಜೊತೆಗೆ ಶಾರೀರಿಕವಾದವೂ ಆಗಿದ್ದವು ಎಂಬುದನ್ನು ಈ ಕುರಿತಾದ ಕೆಲವೊಂದು ದಾಖಲೆಗಳು ಪ್ರಾಸಂಗಿಕವಾಗಿ ಸೂಚಿಸುತ್ತದೆ:

ಲಾ ಕಾರ್ನೆ ಟೆರಾ, ಇ ಕ್ವಿ ಲ್‌'ಒಸಾ ಮಿಯಾ, ಪ್ರಿವೀಡ್‌' ಲಾರ್‌ ಬೆಗ್ಲಿ ಒಚಿ, ಇ ಡೆಲ್‌ ಲೆಗಿಯಾಡ್ರೊ ಆಸ್ಪೆಟೊಫ್ಯಾನ್‌ ಫೆಡೆ ಅ ಕ್ವೆಲ್‌ ಚ್‌'ಐ' ಫು ಗ್ರೇಜಿಯಾ ನೆಲ್‌ ಲೆಟೊ,ಚೆ ಅಬ್ರಸ್ಸಿಯಾವಾ, ಇ' ನ್‌ ಚೆ ಲ್‌'ಅನಿಮಾವೈವ್‌.[೨೫]

ದಿ ಫ್ಲೆಶ್‌ ನೌ ಅರ್ತ್‌, ಅಂಡ್‌ ಹಿಯರ್‌ ಮೈ ಬೋನ್ಸ್‌,ಬಿರೆಫ್ಟ್‌ ಆಫ್‌ ಹ್ಯಾಂಡ್‌ಸಂ ಐಸ್‌, ಅಂಡ್‌ ಜಾಂಟಿ ಏರ್‌,ಸ್ಟಿಲ್‌ ಲಾಯಲ್‌ ಆರ್‌ ಟು ಹಿಮ್‌ ಐ ಜಾಯ್ಡ್‌ ಇನ್‌ ಬೆಡ್‌,ಹೂಮ್‌ ಐ ಎಂಬ್ರೇಸ್ಡ್‌, ಇನ್‌ ಹೂಮ್‌ ಮೈ ಸೋಲ್‌ ನವ್‌ ಲಿವ್ಸ್‌.

ಇತರರ ಪ್ರಕಾರ, ನಿಷ್ಕಾಮ ಸಂಭಾಷಣೆಯ ಒಂದು ಭಾವನಾರಹಿತ ಹಾಗೂ ನಾಜೂಕಾದ ಮರು-ಕಲ್ಪಿಸಿಕೊಳ್ಳುವಿಕೆಯನ್ನು ಅವು ಬಿಂಬಿಸುತ್ತವೆ, ಆ ಮೂಲಕ ಪರಿಷ್ಕೃತಗೊಂಡ ಸಂವೇದನಾ ಶಕ್ತಿಗಳ ಒಂದು ಅಭಿವ್ಯಕ್ತಿಯಾಗಿ ಕಾಮಪ್ರಚೋದಕ ಕಾವ್ಯವನ್ನು ನೋಡಲಾಗಿದೆ (೧೬ನೇ ಶತಮಾನದ ಇಟಲಿಯಲ್ಲಿನ ಪ್ರೇಮಸಂಬಂಧಿ ಹೇಳಿಕೆಗಳಿಗೆ ಈಗಿರುವುದಕ್ಕಿಂತ ಹೆಚ್ಚು ವ್ಯಾಪಕವಾದ ಅನ್ವಯಿಕೆಯನ್ನು ನೀಡಲಾಗಿತ್ತು ಎಂಬುದನ್ನು ಅವಶ್ಯವಾಗಿ ನೆನಪಿನಲ್ಲಿಟ್ಟುಕೊಳ್ಳಬೇಕು).[೨೬] ಕೆಲವೊಂದು ತರುಣರು ಕ್ರಿಯಾಶೀಲ ಜ್ಞಾನವನ್ನು ಹೊಂದಿದವರಾಗಿದ್ದರು ಮತ್ತು ಈ ಶಿಲ್ಪಿಯಿಂದ ಪ್ರಯೋಜನವನ್ನು ಪಡೆದರು. ೧೫೩೨ರಲ್ಲಿ ಫೆಬೋ ಡಿ ಪೊಗಿಯೋ ಎಂಬಾತ ತನ್ನ ಮೋಹಕ ಗುಣವನ್ನು, ಹಣಕ್ಕೆ ಪ್ರತಿಯಾಗಿ ಕೇಳುವ ಮೈಕೆಲ್ಯಾಂಜೆಲೊನ ಪ್ರೀತಿಯ ಕವನಕ್ಕೆ ಉತ್ತರವಾಗಿ ಪ್ರತಿಪಾದಿಸಿದ. ಇದಕ್ಕೂ ಮುಂಚೆ ೧೫೨೨ರಲ್ಲಿ ಘೆರಾರ್ಡೊ ಪೆರಿನಿ ಎಂಬಾತ, ಅವನಿಂದ ನಾಚಿಕೆಯಿಲ್ಲದೆಯೇ ಕದ್ದಿದ್ದ. ಎಲ್ಲಕ್ಕಿಂತ ಮಿಗಿಲಾಗಿ ಮೈಕೆಲ್ಯಾಂಜೆಲೊ ತನ್ನ ಖಾಸಗಿತನವನ್ನು ಸಮರ್ಥಿಸಿಕೊಂಡ. ಆತನ ಸ್ನೇಹಿತನಾದ ನಿಕೊಲೊ ಕ್ವಾರೇಟೇಸಿಯ ಓರ್ವ ನೌಕರ ತನ್ನ ಮಗನು ಹಾಸಿಗೆಯಲ್ಲೂ ಉತ್ತಮ ಸಹಕಾರ ನೀಡುತ್ತಾನೆ ಎಂದು ಹೇಳುವ ಮೂಲಕ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಸಲೆಹೆ ನೀಡಿದಾಗ, ಸಾತ್ವಿಕ ಕೋಪದೊಂದಿಗೆ ಅದನ್ನು ತಿರಸ್ಕರಿಸಿದ ಮೈಕೆಲ್ಯಾಂಜೆಲೊ, ಆ ನೌಕರನನ್ನು ಹೊರಗಟ್ಟುವಂತೆ ಕ್ವಾರೇಟೇಸಿಗೆ ಸೂಚಿಸಿದ.

ತನ್ನ ಪ್ರೇಮದ ಕುರಿತಾದ ಬರಹ ರೂಪದಲ್ಲಿನ ಮಹಾನ್‌ ಅಭಿವ್ಯಕ್ತಿಯನ್ನು ಆತ ತೊಮಸೊ ಡೇಯಿ ಕ್ಯಾವಲಿಯೆರಿಗೆ (ಸುಮಾರು ೧೫೦೯–೧೫೮೭) ನೀಡಿದ. ಇವನನ್ನು ಮೈಕೆಲ್ಯಾಂಜೆಲೊ ೧೫೩೨ರಲ್ಲಿ ಭೇಟಿಯಾದಾಗ ಇವನಿಗೆ ೨೩ ವರ್ಷ ವಯಸ್ಸಾಗಿದ್ದರೆ, ಮೈಕೆಲ್ಯಾಂಜೆಲೊಗೆ ೫೭ ವರ್ಷ ವಯಸ್ಸಾಗಿತ್ತು. ಕ್ಯಾವಲಿಯೆರಿಯು ಈ ವಯಸ್ಸಾದ ಮನುಷ್ಯನ ವಾತ್ಸಲ್ಯಕ್ಕೆ ಮುಕ್ತನಾಗಿ, ಹೀಗೆ ಅಭಿವ್ಯಕ್ತಿಸಿದ: ಐ ಸ್ವೇರ್‌ ಟು ರಿಟರ್ನ್‌ ಯುವರ್‌ ಲವ್‌. ನೆವರ್ ಹ್ಯಾವ್‌ ಐ ಲವ್ಡ್‌ ಎ ಮ್ಯಾನ್‌ ಮೋರ್‌ ದ್ಯಾನ್‌ ಐ ಲವ್‌ ಯು, ನೆವರ್‌ ಹ್ಯಾವ್‌ ಐ ವಿಶ್ಡ್‌ ಫಾರ್‌ ಎ ಫ್ರೆಂಡ್‌ಷಿಪ್‌ ಮೋರ್‌ ದ್ಯಾನ್‌ ಐ ವಿಶ್‌ ಫಾರ್‌ ಯುವರ್ಸ್‌. ಕ್ಯಾವಲಿಯೆರಿಯು ಮೈಕೆಲ್ಯಾಂಜೆಲೊಗೆ ಅವನ ಸಾವಿನ ತನಕವೂ ನಿಷ್ಟನಾಗಿಯೇ ಉಳಿದುಕೊಂಡ.

ಮುನ್ನೂರಕ್ಕೂ ಹೆಚ್ಚಿನ ಸುನೀತಗಳು (ಹದಿನಾಲ್ಕು ಸಾಲಿನ ಕವನಗಳು) ಹಾಗೂ ಲಘು ಶೃಂಗಾರಗೀತೆಗಳನ್ನು ಮೈಕೆಲ್ಯಾಂಜೆಲೊ ಅವನಿಗೆ ಅರ್ಪಿಸಿದ. ಅವನಿಂದ ಸಂಯೋಜಿಸಲ್ಪಟ್ಟ ಪದ್ಯಗಳ ಬೃಹತ್‌ ಸರಣಿಯನ್ನು ಇದು ರೂಪಿಸಿತು. ಕೆಲವೊಂದು ಆಧುನಿಕ ವ್ಯಾಖ್ಯಾನಕಾರರು ಸಮರ್ಥಿಸುವ ಪ್ರಕಾರ, ಸದರಿ ಸಂಬಂಧವು ಕೇವಲ ಒಂದು ನಿಷ್ಕಾಮ ವಾತ್ಸಲ್ಯದ ಸಂಬಂಧವಾಗಿತ್ತು, ಮತ್ತು ಮೈಕೆಲ್ಯಾಂಜೆಲೊ ಓರ್ವ ಪರ್ಯಾಯ ಮಗನನ್ನು ಅರಸುತ್ತಿದ್ದ ಎಂಬುದನ್ನು ಅದು ಸೂಚಿಸುತ್ತಿತ್ತು.[೨೭] ಆದಾಗ್ಯೂ, ಅವರ ಸಲಿಂಗಕಾಮದ ಸ್ವರೂಪವನ್ನು ಅವನಿದ್ದ ಸಮಯದಲ್ಲಿಯೇ ಗುರುತಿಸಲಾಗಿತ್ತು.

ಇದರಿಂದಾಗಿ ಕಿರಿಯ ಮೈಕೆಲ್ಯಾಂಜೆಲೊ ಎಂಬ ಹೆಸರಿನ ಅವನ ಸೋದರ ಮೊಮ್ಮಗನು ಅವರಿಗೆ ಅಡ್ಡಲಾಗಿ ಒಂದು ಔಚಿತ್ಯ ಜ್ಞಾನದ ಪರದೆಯನ್ನು ಎಳೆಯಲು ಸಾಧ್ಯವಾಯಿತು. ಈ ಸೋದರ ಮೊಮ್ಮಗನು ೧೬೨೩ರಲ್ಲಿ ಕಾವ್ಯದ ಒಂದು ಆವೃತ್ತಿಯನ್ನು ಪ್ರಕಟಿಸಿದ್ದ ಮತ್ತು ಇದರಲ್ಲಿನ ಸರ್ವನಾಮಗಳ ಲಿಂಗವು ಬದಲಿಸಲ್ಪಟ್ಟಿತ್ತು. ಜಾನ್‌ ಅಡಿಂಗ್ಟನ್‌ ಸೈಮಂಡ್ಸ್‌ ಎಂಬ ಸಲಿಂಗಕಾಮದ ಕುರಿತಾದ ಆರಂಭಿಕ ಬ್ರಿಟಿಷ್‌ ಕ್ರಿಯಾವಾದಿಯು,
ಮೂಲ ಸುನೀತಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಮೂಲಕ ಹಾಗೂ ೧೮೯೩ರಲ್ಲಿ ಪ್ರಕಟಗೊಂಡ ಎರಡು-ಸಂಪುಟಗಳ ಒಂದು ಜೀವನಚರಿತ್ರೆಯನ್ನು ಬರೆಯುವ ಮೂಲಕ ಈ ಬದಲಾವಣೆಯನ್ನು ರದ್ದುಗೊಳಿಸಿದ.
 
ಸಿಸ್ಟೀನ್‌ ಪ್ರಾರ್ಥನಾ ಮಂದಿರದಲ್ಲಿನ ಒಂದು ಇಗ್ನುಡೊ.

ಈ ಸುನೀತಗಳು ಯಾವುದೇ ಆಧುನಿಕ ಭಾಷೆಯಲ್ಲಿನ ಪದ್ಯಗಳ ಮೊಟ್ಟಮೊದಲ ಬೃಹತ್‌ ಸರಣಿಯಾಗಿದ್ದು, ಓರ್ವ ಮನುಷ್ಯನಿಂದ ಇನ್ನೊಬ್ಬನಿಗೆ ಅವು ಹೇಳಲ್ಪಟ್ಟಿವೆ. ಷೇಕ್ಸ್‌ಪಿಯರ್‌‌ನ ಸುನೀತಗಳಿಗಿಂತ ಮುಂಚಿತವಾಗಿ ಹುಟ್ಟಿಕೊಂಡಿರುವ ಇವು, ಓರ್ವ ಐವತ್ತರ ಹರೆಯದ ಸದಭಿರುಚಿಯ ವ್ಯಕ್ತಿಯಿಂದ ತನ್ನ ಯುವ ಗೆಳೆಯನಿಗೆ ಬರೆಯಲ್ಪಟ್ಟ ಗೀತೆಗಳಾಗಿವೆ.

ಐ ಫೀಲ್‌ ಆಸ್‌ ಲಿಟ್‌ ಬೈ ಫೈರ್‌ ಎ ಕೋಲ್ಡ್‌ ಕೌಂಟಿನನ್ಸ್‌
ದಟ್‌ ಬರ್ನ್ಸ್‌ ಮಿ ಫ್ರಂ ಅಫಾರ್‌ ಅಂಡ್‌ ಕೀಪ್ಸ್‌ ಇಟ್‌ಸೆಲ್ಫ್‌ ಐಸ್‌-ಚಿಲ್‌;
ಎ ಸ್ಟ್ರೆಂತ್‌ ಐ ಫೀಲ್‌ ಟೂ ಶೇಪ್ಲಿ ಆರ್ಮ್ಸ್‌ ಟು ಫಿಲ್‌
ವಿಚ್‌ ವಿಥೌಟ್‌ ಮೋಷನ್‌ ಮೂವ್ಸ್‌ ಎವೆರಿ ಬ್ಯಾಲನ್ಸ್‌.

— (ಮೈಕೇಲ್‌ ಸಲ್ಲಿವನ್‌, ಭಾಷಾಂತರ)

ನಂತರದ ದಿನದಲ್ಲಿ ಆತ ಓರ್ವ ಕವಯಿತ್ರಿ ಹಾಗೂ ಗಣ್ಯ ವಿಧವೆಯಾದ ವಿಟ್ಟೊರಿಯಾ ಕೊಲೊನ್ನಾ ಎಂಬಾಕೆಗೆ ಒಂದು ಮಹಾನ್‌ ಪ್ರೀತಿಯನ್ನು ನೀಡಿದ. ೧೫೩೬ ಅಥವಾ ೧೫೩೮ರಲ್ಲಿ ಇವಳನ್ನು ಅವನು ರೋಮ್‌ನಲ್ಲಿ ಭೇಟಿಯಾದ ಸಮಯದಲ್ಲಿ ಅವಳು ತನ್ನ ನಲವತ್ತನೇ ವಯಸ್ಸಿನ ಅಂಚಿನಲ್ಲಿದ್ದಳು. ಪರಸ್ಪರರಿಗೆ ಅವರು ಸುನೀತಗಳನ್ನು ಬರೆದುಕೊಂಡರು ಮತ್ತು ಅವಳು ಸಾಯುವವರೆಗೂ ನಿರಂತರ ಸಂಪರ್ಕದಲ್ಲಿದ್ದರು.

ಮೈಕೆಲ್ಯಾಂಜೆಲೊ ದೈಹಿಕ ಸಂಬಂಧಗಳನ್ನು ಹೊಂದಿದ್ದನೇ ಅಥವಾ ಇಲ್ಲವೇ ಎಂದು ನಿಶ್ಚಿತವಾಗಿ ಅರಿಯುವುದಕ್ಕೆ ಸಾಧ್ಯವಿಲ್ಲವಾದರೂ (ಕಾಂಡಿವಿ ಎಂಬಾತನು ಅವನಿಗೆ ಓರ್ವ "ಸನ್ಯಾಸಿಯ-ಥರದ ಅವ್ಯಭಿಚಾರತೆಯ" ಹಣೆಪಟ್ಟಿಯನ್ನು ಕಟ್ಟಿದ್ದಾನೆ)[೨೮], ಅವನ ಕಾವ್ಯ ಹಾಗೂ ದೃಶ್ಯಗೋಚರ ಕಲೆಯ ಮೂಲಕ ನಾವು ಕನಿಷ್ಟಪಕ್ಷ ಅವನ ಕಲ್ಪನೆಯ ಒಂದು ಭಾಗದ ಮಿನುಗುನೋಟವನ್ನು ಕಾಣಬಹುದು.[೨೯]

ಇವನ್ನೂ ಗಮನಿಸಿ

ಬದಲಾಯಿಸಿ

3001 ಮೈಕೆಲ್ಯಾಂಜೆಲೊ ಎಂಬ ಕ್ಷುದ್ರಗ್ರಹ ಹಾಗೂ ಮಂಗಳ ಗ್ರಹದ ಮೇಲಿನ ಒಂದು ಕುಳಿಗೆ ಮೈಕೆಲ್ಯಾಂಜೆಲೊ ಹೆಸರನ್ನಿಡಲಾಯಿತು.[೩೦] ಟೀನೇಜ್‌ ಮ್ಯುಟೆಂಟ್‌ ನೀಂಜಾ ಟರ್ಟಲ್ಸ್‌‌‌ ಗೆ ಸೇರಿದ ಮೈಕೆಲ್ಯಾಂಜೆಲೊ ಪಾತ್ರಕ್ಕೂ ಸಹ ಮೈಕೆಲ್ಯಾಂಜೆಲೊ ಹೆಸರನ್ನೇ ಇಡಲಾಗಿದೆ.

೧೯೬೫ರಲ್ಲಿ ಬಂದ ದಿ ಅಗೊನಿ ಅಂಡ್‌ ದಿ ಎಕ್ಸ್‌ಟೆಸಿ ಎಂಬ ಚಲನಚಿತ್ರವು ಮೈಕೆಲ್ಯಾಂಜೆಲೊ ಹಾಗೂ ಸಿಸ್ಟೀನ್‌ ಪ್ರಾರ್ಥನಾ ಮಂದಿರದಲ್ಲಿನ ಅವನ ವರ್ಣಚಿತ್ರರಚನೆಯನ್ನು ಕುರಿತಾದ ಅವನ ಪ್ರಯಾಸಕರ ಸನ್ನಿವೇಶಗಳ ಕಥೆಯನ್ನು ಒಳಗೊಂಡಿದೆ. ಚಲನಚಿತ್ರದಲ್ಲಿ ಅವನ ಪಾತ್ರವನ್ನು ಚಾರ್ಲ್‌‌ಟನ್‌ ಹೆಸ್ಟನ್‌ ಎಂಬಾತ ನಿರ್ವಹಿಸಿದ್ದಾನೆ.

ಅಡಿಟಿಪ್ಪಣಿಗಳು

ಬದಲಾಯಿಸಿ
  • ^ ಮೈಕೆಲ್ಯಾಂಜೆಲೊನ ತಂದೆಯು ತಾರೀಕನ್ನು ಫ್ಲಾರನ್ಸಿನ ವಿಧಾನದಲ್ಲಿನ ಅಬ್‌ ಇನ್‌ಕಾರ್ನೇಷನೆ ಯಲ್ಲಿ ೬ ಮಾರ್ಚ್‌ ೧೪೭೪ ಎಂಬುದಾಗಿ ನಮೂದಿಸುತ್ತಾನೆ. ಆದಾಗ್ಯೂ, ರೋಮನ್‌ ವಿಧಾನವಾದ ಅಬ್‌ ನೇಟಿವಿಟೇಟ್‌‌ ನಲ್ಲಿ ಇದು ೧೪೭೫ ಆಗಿದೆ.
  • ^ ಮೈಕೆಲ್ಯಾಂಜೆಲೊ ತನ್ನ ಶಾಲೆಯನ್ನು ಬಿಟ್ಟುಹೋದಾಗ ಅವನಿಗೆ ಎಷ್ಟು ವಯಸ್ಸಾಗಿತ್ತು ಎಂಬುದರ ಬಗ್ಗೆ ಮೂಲಗಳು ಅಭಿಪ್ರಾಯ ಭೇದವನ್ನು ಹೊಂದಿವೆ. ಅವನು ಹತ್ತು ವರ್ಷದವನಿದ್ದಾಗ ಎಂದು ಡಿ ಟೋನ್ಲೆಯು ಬರೆದರೆ, ಕಾಂಡಿವಿಯ ತನ್ನ ಭಾಷಾಂತರದಲ್ಲಿ ಬರೆಯುವ ಸೆಡ್‌ಗ್ವಿಕ್‌ ಮೈಕೆಲ್ಯಾಂಜೆಲೊಗೆ ಆಗ ಏಳುವರ್ಷಗಳಾಗಿದ್ದವು ಎಂದು ನಮೂದಿಸುತ್ತಾಳೆ.
  • ^ ಸ್ಟ್ರೋಝಿ ಕುಟುಂಬವು ಹರ್ಕ್ಯುಲಿಸ್‌‌ ನ ಶಿಲ್ಪಕೃತಿಯನ್ನು ವಶಪಡಿಸಿಕೊಂಡಿತು. ಫಿಲಿಪ್ಪೊ ಸ್ಟ್ರೋಝಿ ಇದನ್ನು Iನೇ ಫ್ರಾನ್ಸಿಸ್‌‌ಗೆ ೧೫೨೯ರಲ್ಲಿ ಮಾರಿದ. ೧೫೯೪ರಲ್ಲಿ, IVನೇ ಹೆನ್ರಿಯು ಇದನ್ನು ಫಾಂಟೇನ್‌ಬ್ಲ್ಯೂನಲ್ಲಿನ ಜಾರ್ಡಿನ್‌ ಡಿ’ಎಸ್ಟೇಂಜ್‌ನಲ್ಲಿ ಪ್ರತಿಷ್ಠಾಪಿಸಿದ. ಜಾರ್ಡಿನ್‌ ಡಿ’ಎಸ್ಟೇಂಜ್‌ ನಾಶಗೊಳಿಸಲ್ಪಟ್ಟಾಗ ೧೭೧೩ರಲ್ಲಿ ಇದು ಅಲ್ಲಿಂದ ಕಾಣೆಯಾಯಿತು.
  • ^ ಈ ಪ್ರಕರಣದ ಕುರಿತು ವಸಾರಿಯು ಯಾವುದೇ ನಮೂದುಗಳನ್ನು ಮಾಡಿಲ್ಲ ಮತ್ತು ಪಾವೊಲೊ ಗಿಯೋವಿಯೋಲೈಫ್‌ ಆಫ್‌ ಮೈಕೆಲ್ಯಾಂಜೆಲೊ ಕೃತಿಯು ಸೂಚಿಸುವ ಪ್ರಕಾರ, ಈ ಪ್ರತಿಮೆಯನ್ನು ಒಂದು ಪ್ರಾಚೀನ ಕಲಾಕೃತಿಯೆಂದು ಯಾರದ್ದಾದರೂ ತಲೆಗೆ ಕಟ್ಟಲು ಸ್ವತಃ ಮೈಕೆಲ್ಯಾಂಜೆಲೊ ಪ್ರಯತ್ನಿಸಿದ.

ಆಕರಗಳು

ಬದಲಾಯಿಸಿ
ಟಿಪ್ಪಣಿಗಳು
  1. ೧.೦ ೧.೧ ೧.೨ "Web Gallery of Art, image collection, virtual museum, searchable database of European fine arts (1100–1850)". www.wga.hu. Retrieved 13 ಜೂನ್ 2008.
  2. ೨.೦ ೨.೧ ಮೈಕೆಲ್ಯಾಂಜೆಲೊ. (೨೦೦೮). ಬ್ರಿಟಾನಿಕಾ ವಿಶ್ವಕೋಶ ಅಲ್ಟಿಮೇಟ್‌ ರೆಫರೆನ್ಸ್‌ ಸೂಟ್‌ .
  3. Emison, Patricia. A (2004). Creating the "Divine Artist": from Dante to Michelangelo. Brill. ISBN 9789004137097.
  4. ೪.೦ ೪.೧ ೪.೨ J. ಡಿ ಟೋನ್ಲೆ, ದಿ ಯೂತ್‌ ಆಫ್‌ ಮೈಕೆಲ್ಯಾಂಜೆಲೊ , ೧೧
  5. ೫.೦ ೫.೧ C. ಕ್ಲೆಮೆಂಟ್‌, ಮೈಕೆಲ್ಯಾಂಜೆಲೊ , ೫
  6. A. ಕಾಂಡಿವಿ, ದಿ ಲೈಫ್‌ ಆಫ್‌ ಮೈಕೆಲ್ಯಾಂಜೆಲೊ , ೫
  7. ೭.೦ ೭.೧ A. ಕಾಂಡಿವಿ, ದಿ ಲೈಫ್‌ ಆಫ್‌ ಮೈಕೆಲ್ಯಾಂಜೆಲೊ , ೯
  8. R. ಲೀಬರ್ಟ್, ಮೈಕೆಲ್ಯಾಂಜೆಲೊ: ‌ಎ ಸೈಕೋಅನಲಿಟಿಕ್‌ ಸ್ಟಡಿ ಆಫ್‌ ಹಿಸ್‌ ಲೈಫ್‌ ಅಂಡ್‌ ಇಮೇಜಸ್‌ , ೫೯
  9. C. ಕ್ಲೆಮೆಂಟ್‌, ಮೈಕೆಲ್ಯಾಂಜೆಲೊ , ೭
  10. C. ಕ್ಲೆಮೆಂಟ್‌, ಮೈಕೆಲ್ಯಾಂಜೆಲೊ , ೯
  11. J. ಡಿ ಟೋನ್ಲೆ, ದಿ ಯೂತ್‌ ಆಫ್‌ ಮೈಕೆಲ್ಯಾಂಜೆಲೊ , ೧೮–೧೯
  12. ೧೨.೦ ೧೨.೧ A. ಕಾಂಡಿವಿ, ದಿ ಲೈಫ್‌ ಆಫ್‌ ಮೈಕೆಲ್ಯಾಂಜೆಲೊ , ೧೫
  13. "Will the Real Michelangelo Please Stand Up?". Retrieved 14 ಡಿಸೆಂಬರ್ 2009.
  14. ೧೪.೦ ೧೪.೧ J. ಡಿ ಟೋನ್ಲೆ, ದಿ ಯೂತ್‌ ಆಫ್‌ ಮೈಕೆಲ್ಯಾಂಜೆಲೊ , ೨೦–೨೧
  15. A. ಕಾಂಡಿವಿ, ದಿ ಲೈಫ್‌ ಆಫ್‌ ಮೈಕೆಲ್ಯಾಂಜೆಲೊ , ೧೭
  16. ೧೬.೦ ೧೬.೧ J. ಡಿ ಟೋನ್ಲೆ, ದಿ ಯೂತ್‌ ಆಫ್‌ ಮೈಕೆಲ್ಯಾಂಜೆಲೊ , ೨೪–೨೫
  17. A. ಕಾಂಡಿವಿ, ದಿ ಲೈಫ್‌ ಆಫ್‌ ಮೈಕೆಲ್ಯಾಂಜೆಲೊ , ೧೯–೨೦
  18. J. ಡಿ ಟೋನ್ಲೆ, ದಿ ಯೂತ್‌ ಆಫ್‌ ಮೈಕೆಲ್ಯಾಂಜೆಲೊ , ೨೬–೨೮
  19. ಕ್ಯಾಟರ್‌ಸನ್‌, ಲಿನ್‌. "ಮೈಕೆಲ್ಯಾಂಜೆಲೊ's 'ಲಾವೋಕೂನ್‌?'" ಆರ್ಟಿಬಸ್‌ ಎಡ್‌ ಹಿಸ್ಟರಿಯೇ. ೫೨. ೨೦೦೫: ಪುಟ ೩೩
  20. "Michelangelo 'last sketch' found". BBC News. 7 ಡಿಸೆಂಬರ್ 2007. Retrieved 9 ಫೆಬ್ರವರಿ 2009.
  21. ೨೧.೦ ೨೧.೧ ೨೧.೨ ಕಾಂಡಿವಿ, ದಿ ಲೈಫ್‌ ಆಫ್‌ ಮೈಕೆಲ್ಯಾಂಜೆಲೊ , ಪುಟ ೧೦೬.
  22. ಪಾವೊಲಾ ಬರೋಚಿ (ಸಂಪಾದಿತ) ಸ್ಕ್ರಿಟಿ ಡಿ’ಆರ್ಟೆ ಡೆಲ್‌ ಸಿನ್‌ಕ್ವೆಸೆಂಟೊ , ಮಿಲನ್‌, ೧೯೭೧; ಸಂಪುಟ I ಪುಟ ೧೦.
  23. ಕಾಂಡಿವಿ, ದಿ ಲೈಫ್‌ ಆಫ್‌ ಮೈಕೆಲ್ಯಾಂಜೆಲೊ , ಪುಟ ೧೦೨.
  24. ಹ್ಯೂಸ್‌, ಆಂಟನಿ: "ಮೈಕೆಲ್ಯಾಂಜೆಲೊ"., ಪುಟ ೩೨೭. ಫೈಡಾನ್‌, ೧೯೯೭.
  25. "ಮೈಕೆಲ್ಯಾಂಜೆಲೊ ಬ್ಯುನಾರೊಟಿ" Archived 21 December 2007[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಬೈ ಗಿಯೋವನ್ನಿ ಡಾಲ್‌’ಓರ್ಟೊ ಬ್ಯಾಬಿಲೋನಿಯಾ ಟಿಪ್ಪಣಿ: ೮೫, ಜನವರಿ ೧೯೯೧, ಪುಟಗಳು ೧೪–೧೬ (Italian)
  26. ಹ್ಯೂಸ್‌, ಆಂಟನಿ: "ಮೈಕೆಲ್ಯಾಂಜೆಲೊ.", ಪುಟ ೩೨೬. ಫೈಡಾನ್‌, ೧೯೯೭.
  27. "ಮೈಕೆಲ್ಯಾಂಜೆಲೊ", ದಿ ನ್ಯೂ ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ, ಮ್ಯಾಕ್ರೋಪೀಡಿಯಾ, ಸಂಪುಟ ೨೪ , ಪುಟ ೫೮, ೧೯೯೧. ಇದರಲ್ಲಿನ ಪಠ್ಯವು ಕೊಂಚ ರಕ್ಷಣಾತ್ಮಕವಾಗಿ ಸಮರ್ಥಿಸಿಕೊಳ್ಳುತ್ತಾ ಸಾಕಷ್ಟು ದೂರ ಸಾಗುತ್ತದೆ: "ಮೈಕೆಲ್ಯಾಂಜೆಲೊ ಓರ್ವ ಸಲಿಂಗಕಾಮಿಯಾಗಿದ್ದ ಎಂಬುದರ ಸೂಚಕಗಳಾಗಿ ಇವು ಸಹಜವಾಗಿ ವ್ಯಾಖ್ಯಾನಿಸಲ್ಪಟ್ಟಿವೆ, ಆದರೆ ಕಲಾವಿದನ ಸ್ವಂತ ಹೇಳಿಕೆಯ ಅನುಸಾರವಾಗಿ ಹೇಳುವುದಾದರೆ, ಇಂಥದೊಂದು ಪ್ರತಿಕ್ರಿಯೆಯು ತಿಳುವಳಿಕೆಯಿಲ್ಲದವರಿಂದ ಬರಲು ಸಾಧ್ಯ'.
  28. ಹ್ಯೂಸ್‌, ಆಂಟನಿ, "ಮೈಕೆಲ್ಯಾಂಜೆಲೊ"., ಪುಟ ೩೨೬. ಫೈಡಾನ್‌, ೧೯೯೭.
  29. ಸೈಗ್ಲಿಯಾನೊ, ಎರಿಕ್‌: "ಮೈಕೆಲ್ಯಾಂಜೆಲೊ'ಸ್‌ ಮೌಂಟೇನ್‌; ದಿ ಕ್ವೆಸ್ಟ್‌ ಫಾರ್‌ ಪರ್ಫೆಕ್ಷನ್‌ ಇನ್‌ ದಿ ಮಾರ್ಬಲ್‌ ಕ್ವಾರೀಸ್‌ ಆಫ್‌ ಕರಾರ." Archived 30 June 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಸೈಮನ್‌ ಮತ್ತು ಷುಸ್ಟರ್‌, ೨೦೦೫. ೨೦೦೭ರ ಜನವರಿ ೨೭ರಂದು ಮರುಸಂಪಾದಿಸಲಾಯಿತು
  30. ಗ್ಯಾಲಂಟ್‌, R., ೧೯೮೬. ನ್ಯಾಷನಲ್‌ ಜಿಯೋಗ್ರಾಫಿಕ್‌ ಪಿಕ್ಚರ್ ಅಟ್ಲಾಸ್‌ ಆಫ್‌ ಅವರ‍್ ಯೂನಿವರ್ಸ್‌ . ನ್ಯಾಷನಲ್‌ ಜಿಯಾಗ್ರಫಿಕ್‌ ಸೊಸೈಟಿ, ೨ನೇ ಆವೃತ್ತಿ. ISBN ೦-೮೭೦೪೪-೬೪೪-೪

ಹೆಚ್ಚಿನ ಓದಿಗಾಗಿ

ಬದಲಾಯಿಸಿ
  • Ackerman, James (1986). The Architecture of Michelangelo. University of Chicago Press. ISBN 978-0226002408.
  • Clément, Charles (1892). Michelangelo. Harvard University, Digitized 25 June 2007: S. Low, Marston, Searle, & Rivington, ltd.: London.{{cite book}}: CS1 maint: location (link)
  • Condivi, Ascanio (1553). The Life of Michelangelo. Pennsylvania State University Press. ISBN 0-271-01853-4. {{cite book}}: Unknown parameter |coauthors= ignored (|author= suggested) (help)
  • Baldini, Umberto (1982). The Sculpture of Michelangelo. Rizzoli. ISBN 0-8478-0447-x. {{cite book}}: Check |isbn= value: invalid character (help); Unknown parameter |coauthors= ignored (|author= suggested) (help)
  • ಐನೆಮ್‌, ಹರ್ಬರ್ಟ್‌ ವಾನ್‌ (೧೯೭೩). ಮೈಕೆಲ್ಯಾಂಜೆಲೊ ಭಾಷಾಂತರ: ರೊನಾಲ್ಡ್‌ ಟೇಲರ್‌. ಲಂಡನ್‌: ಮೆಥುವೆನ್‌.
  • ಗಿಲ್ಬರ್ಟ್‌, ಕ್ರೇಗ್ಟನ್‌ (೧೯೯೪). ಮೈಕೆಲ್ಯಾಂಜೆಲೊ ಆನ್‌ ಅಂಡ್‌ ಆಫ್‌ ದಿ ಸಿಸ್ಟೀನ್‌ ಸೀಲಿಂಗ್‌ . ನ್ಯೂಯಾರ್ಕ್‌: ಜಾರ್ಜ್‌ ಬ್ರೆಝಿಲ್ಲರ್‌.
  • ಹಿಬರ್ಡ್‌, ಹೋವರ್ಡ್‌ (೧೯೭೪). ಮೈಕೆಲ್ಯಾಂಜೆಲೊ ನ್ಯೂಯಾರ್ಕ್‌: ಹಾರ್ಪರ್‌ & ರೋ.
  • ಹಿರ್ಸ್ಟ್, ಮೇಕೇಲ್‌ ಮತ್ತು ಜಿಲ್‌ ಡಂಕರ್ಟನ್‌ (೧೯೯೪) ದಿ ಯಂಗ್ ಮೈಕೆಲ್ಯಾಂಜೆಲೊ: ದಿ ಆರ್ಟಿಸ್ಟ್‌ ಇನ್‌ ರೋಮ್‌ ೧೪೯೬–೧೫೦೧ . ಲಂಡನ್‌: ನ್ಯಾಷನಲ್‌ ಗ್ಯಾಲರಿ ಪಬ್ಲಿಕೇಷನ್ಸ್‌.
  • Liebert, Robert (1983). Michelangelo: A Psychoanalytic Study of his Life and Images. New Haven and London: Yale University Press. ISBN 0-300-02793-1.
  • ಪೀಟ್ರಾಂಜೆಲಿ, ಕಾರ್ಲೊ ಮತ್ತು ಇತರರು (೧೯೯೪). ದಿ ಸಿಸ್ಟೀನ್‌ ಚಾಪೆಲ್‌: ಎ ಗ್ಲೋರಿಯಸ್‌ ರೆಸ್ಟೋರೇಷನ್‌ . ನ್ಯೂಯಾರ್ಕ್‌: ಹ್ಯಾರಿ N. ಅಬ್ರಾಮ್ಸ್‌
  • Sala, Charles (1996). Michelangelo: Sculptor, Painter, Architect. Editions Pierre Terrail. ISBN 978-2879390697.
  • ಸಾಸ್ಲೋ, ಜೇಮ್ಸ್‌ M. (೧೯೯೧). ದಿ ಪೊಯೆಟ್ರಿ ಆಫ್‌ ಮೈಕೆಲ್ಯಾಂಜೆಲೊ: ಆನ್‌ ಅನೋಟೇಟೆಡ್‌ ಟ್ರಾನ್ಸ್ಲೇಷನ್‌ . ನ್ಯೂ ಹ್ಯಾವನ್‌ ಮತ್ತು ಲಂಡನ್‌: ಯೇಲ್‌ ಯೂನಿವರ್ಸಿಟಿ ಪ್ರೆಸ್‌.
  • Rolland, Romain (2009). Michelangelo. BiblioLife. ISBN 1110003536.
  • ಸೆಮೌರ್‌, ಚಾರ್ಲ್ಸ್‌, ಜೂನಿಯರ್‌ (೧೯೭೨). ಮೈಕೆಲ್ಯಾಂಜೆಲೊ: ದಿ ಸಿಸ್ಟೀನ್‌ ಚಾಪೆಲ್‌ ಸೀಲಿಂಗ್‌ . ನ್ಯೂಯಾರ್ಕ್‌: W. W. ನಾರ್ಟನ್‌.
  • Stone, Irving (1987). The Agony and the Ecstasy. Signet. ISBN 0-451-17135-7.
  • ಸಮ್ಮರ್ಸ್‌, ಡೇವಿಡ್‌ (೧೯೮೧). ಮೈಕೆಲ್ಯಾಂಜೆಲೊ ಅಂಡ್‌ ದಿ ಲಾಂಗ್ವೇಜ್‌ ಆಫ್‌ ಆರ್ಟ್‌ . ಪ್ರಿನ್ಸ್‌ಟನ್ ಯೂನಿವರ್ಸಿಟಿ ಪ್ರೆಸ್.
  • Tolnay, Charles (1947). The Youth of Michelangelo. Princeton, NJ: Princeton University Press.
  • ಟೋನ್ಲೆ, ಚಾರ್ಲ್ಸ್‌ ಡೆ. (೧೯೬೪). ದಿ ಆರ್ಟ್‌ ಅಂಡ್‌ ಥಾಟ್‌ ಆಫ್‌ ಮೈಕೆಲ್ಯಾಂಜೆಲೊ . ೫ ಸಂಪುಟಗಳು. ನ್ಯೂಯಾರ್ಕ್‌: ಪ್ಯಾಂಥಿಯಾನ್‌ ಬುಕ್ಸ್‌.
  • Néret, Gilles (2000). Michelangelo. Taschen. ISBN 9783822859766.
  • ವೈಲ್ಡ್‌, ಜೋಹಾನ್ನೆಸ್‌ (೧೯೭೮). ಮೈಕೆಲ್ಯಾಂಜೆಲೊ: ಸಿಕ್ಸ್‌ ಲೆಕ್ಚರ್ಸ್‌ . ಆಕ್ಸ್‌ಫರ್ಡ್‌: ಕ್ಲಾರೆಂಡನ್ ಪ್ರೆಸ್

ಹೊರಗಿನ ಕೊಂಡಿಗಳು

ಬದಲಾಯಿಸಿ