ಮೇ ೧೮
ದಿನಾಂಕ
ಮೇ ೧೮ - ಮೇ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೮ನೇ (ಅಧಿಕ ವರ್ಷದಲ್ಲಿ ೧೩೯ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
ಬದಲಾಯಿಸಿ- ೧೯೬೯ - ಅಪೋಲೊ ಕಾರ್ಯಕ್ರಮದ ಅಪೋಲೊ ೧೦ ಉಡಾವಣೆ.
- ೧೯೭೪ - ನಗುತ್ತಿರುವ ಬುದ್ಧ ಎಂಬ ಹೆಸರಿನ ಗುಪ್ತ ಯೋಜನೆಯಡಿಯಲ್ಲಿ ಭಾರತ ತನ್ನ ಮೊದಲ ಪರಮಾಣು ಅಸ್ತ್ರವನ್ನು ಪರೀಕ್ಷಿಸಿ ಹಾಗೆ ಮಾಡಿದ ಪ್ರಪಂಚದ ಆರನೇ ದೇಶವಾಯಿತು.
- ೧೯೩೪ - ಮೊದಲ ಬಾರಿಗೆ ಅಕಾಡೆಮಿ ಪ್ರಶಸ್ತಿಯನ್ನು ಆಸ್ಕರ್ ಪ್ರಶಸ್ತಿ ಎಂಬ ಹೆಸರಿನಲ್ಲಿ ನೀಡಲಾಯಿತು.
ಜನನ
ಬದಲಾಯಿಸಿ- ೧೦೪೮ - ಓಮರ್ ಖಯ್ಯಮ್, ಪರ್ಶಿಯದ ಕವಿ.
- ೧೮೬೮ - ನಿಕೊಲಾಯ್ ರೋಮನೊವ್ (ಎರಡನೇ ನಿಕೊಲಸ್), ರಷ್ಯಾದ ಕೊನೆ ಚಕ್ರವರ್ತಿ.
- ೧೮೭೨ - ಬರ್ಟ್ರಾಂಡ್ ರಸ್ಸಲ್, ಬ್ರಿಟನ್ನ ಗಣಿತಜ್ಞ, ತತ್ವಶಾಸ್ತ್ರಜ್ಞ ಮತ್ತು ಸಾಹಿತ್ಯದಲ್ಲಿನ ನೊಬೆಲ್ ಪ್ರಶಸ್ತಿ ವಿಜೇತ.
- ೧೯೨೦ - ಪೋಪ್ ಎರಡನೇ ಜಾನ್ ಪಾಲ್.
- ೧೯೧೩ - ನೀಲಂ ಸಂಜೀವ ರೆಡ್ಡಿ, ಭಾರತದ ರಾಷ್ಟ್ರಪತಿ.
- ೧೯೩೩ - ಭಾರತದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ.