ಮೆಣಸಿನಕಾಯಿ ಎಣ್ಣೆ
ಮೆಣಸಿನಕಾಯಿ ವಿತ್ತನದಿಂದ ಮೆಣಸಿನಕಾಯಿ ಎಣ್ಣೆಯನ್ನು ಉತ್ಪನ್ನ ಮಾಡುವುದಕ್ಕೆ ಆಗುತ್ತದೆ. ಮೆಣಸಿನಕಾಯಿ ಸಸ್ಯ ಸೊಲನೇಸಿ ಕುಟುಂಬಕ್ಕೆ ಸೇರಿದ್ದ ಗಿಡ. ಇದರ ಸಸ್ಯ ಶಾಸ್ತ್ರ ಹೆಸರು ಕಾಪ್ಸಿಕಮ್ ಅನ್ನೂಮ್ (capsicum annuum). ಮೆಣಸಿನಕಾಯಿ ಗಿಡದ ವೊದಲಿನ ಹುಟ್ಟು/ಸ್ಥಾನ ಮಧ್ಯ ಅಮೆರಿಕ, ಹಲವಾರು ಪ್ರಭೇದಗಳನ್ನು, ಅಲ್ಲಿನ ಸ್ಥಾನಿಕ ಇಂಡಿಯನ್ ಜನ ಅಭಿವೃದ್ದಿ ಗೊಳಿಸಿದ್ದಾರೆ [೧]. ಮಧ್ಯ ಅಮೆರಿಕದಲ್ಲಿ ಮೆಣಸಿನ ಗಿಡವನ್ನು ಕಂಡು ಹಿಡಿದ ಸ್ಪಾಂಡಿಯನ್ಸು (Spaniards)ಮತ್ತು ಪೊರ್ಚುಗೀಸ (Portuguese) ರು, ಇದು ಪ್ರಪಂಚದ ಎಲ್ಲ ಕಡೆ ವ್ಯಾಪಿಸುವುದಕ್ಕೆ ಕಾರಣವಾದರು. ಕ್ರಿ.ಪೂ.೭೫೦೦ ಕಾಲಕ್ಕೆ ಇದು ಮಧ್ಯ ಅಮೆರಿಕದಲ್ಲಿ ಬಳಕೆಯಲ್ಲಿದೆ ಅಂತಾ ತಿಳಿದು ಬಂದಿದೆ. ಕ್ರಿ.ಶ.೧೫೦೦ರಲ್ಲಿ ಇದನ್ನು ದಕ್ಷಿಣ ಏಷಿಯಾಕ್ಕೆ ಪರಿಚಯ ಮಾಡಲಾಗಿದೆ. ಪ್ರಪಂಚದಲ್ಲಿ ಮೆಣಸಿನ ಕಾಯಿಯನ್ನು ಉತ್ಪನ್ನ ಮಾಡುವುದರಲ್ಲಿ ಭಾರತ ದೇಶ ಪ್ರಥಮ ಸ್ಥಾನದಲ್ಲಿದೆ.[೨].ಮೆಣಸಿನಕಾಯಿಯಲ್ಲಿ ಹೀಗೆ ೨೫ ಪ್ರಭೇದಗಳಿವೆ. ಕಾಪ್ಸಿಯಮ್ ಫ್ರುಟೆನ್ಸ್ (Capsicum frutescens),ಮತ್ತು ಕಾಪ್ಸಿಕಮ್ ಅನ್ನೂಮ್ ವರ್ ಅನ್ನೂಮ್ (Capsicum annuum var. annuum)ಪ್ರಭೇದಗಳನ್ನು ಹೆಚ್ಚಾಗಿ ಬೆಳೆಸಲಾಗುತ್ತದೆ.
ಪ್ರಪಂಚದಲ್ಲಿ ಮೆಣಸಿನಕಾಯಿಯನ್ನು ಸಾಗುವಳಿ ಮಾಡುವ ದೇಶಗಳು
ಬದಲಾಯಿಸಿಭಾರತದೇಶ, ಚೈನಾ, ಇಂಡೋನೇಷ್ಯಾ, ಕೊರಿಯ, ಪಾಕಿಸ್ತಾನ, ಟರ್ಕಿ, ಶ್ರೀಲಂಕ, ಘಾನಾ, ರಷ್ಯಾ,ಈಜಿಫ್ಟ್ , ಮೆಕ್ಸಿಕೋ, ಉತ್ತರ ಮತ್ತು ಮಧ್ಯ ಅಮೆರಿಕ, ಸ್ಪೈನ್, ರೊಮಾನಿಯ, ಇಟಲಿ, ಹಂಗರಿ, ಪೆರು, ಮತ್ತು ಅರ್ಜೆಂಟೀನ ದೇಶಗಳಲ್ಲಿ ಮೆಣಸಿನಕಾಯಿ ಸಾಗುವಳಿ ಮಾಡಲಾಗಿದೆ [೩]. ಭಾರತ ದೇಶ, ಪ್ರಪಂಚದಲ್ಲಿ ಮೆಣಸಿನಕಾಯಿ ಉತ್ಪತ್ತಿಯಲ್ಲಿ ಪ್ರಥಮ ಸ್ಥಾನದಲ್ಲಿದೆ, ಎರಡನೆ ಸ್ಥಾನ ಚೈನಾ. ಭಾರತದಲ್ಲಿ ವರ್ಷಕ್ಕೆ ೧೧ ಲಕ್ಷ ಟನ್ನುಗಳ ಮೆಣಸಿನಕಾಯಿ ಉತ್ಪತ್ತಿ ಆಗುತ್ತದೆ, ಎರಡನೆ ಸ್ಥಾನದಲ್ಲಿದ್ದ ಚೈನಾದಲ್ಲಿ ೪ ಲಕ್ಷಟನ್ನುಗಳು, ಪ್ರಪಂಚದಲ್ಲಿ ಒಟ್ಟಾಗಿ ೭-೮ ಮಿಲಿಯನು ಟನ್ನುಗಳು ಉತ್ಪನ್ನವಾಗುತ್ತದೆ[೫].
ಭಾರತದಲ್ಲಿ ಮೆಣಸಿನಕಾಯಿಯನ್ನು ಸಾಗುವಳಿ ಮಾಡುವ ರಾಜ್ಯಗಳು
ಬದಲಾಯಿಸಿಆಂಧ್ರ ಪ್ರದೇಶ, ಕರ್ನಾಟಕ. ಮಹಾರಾಷ್ಟ್ರ, ಉತ್ತರಪ್ರದೇಶ, ಪಂಜಾಬ, ತಮಿಳುನಾಡು, ರಾಜಸ್ಥಾನ, ಒಡಿಶಾ, ಪಶ್ಚಿಮಬಂಗಾಲ, ಮಧ್ಯ ಪ್ರದೇಶರಾಜ್ಯಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡಲಾಗುತ್ತದೆ [೫]
ಗಿಡ
ಬದಲಾಯಿಸಿಇದು ವೋಲಿಕೆಯಂಥಾ(herbaceous)ಏಕವಾರ್ಷಿಕ ಗಿಡ. ಒತ್ತುಗೂಡಿರುವ ಕೊಂಬೆಗಳನ್ನೂ,ರೆಂಬೆಗಳನ್ನೂ ಹೊಂದಿರುತ್ತದೆ. ೦.೫-೧.೫ ಮೀಟರ ಎತ್ತರ ಬೆಳೆಯುತ್ತದೆ. ಹಸಿರು ಬಣ್ಣದ ಎಲೆಗಳು ಗುಂಪಾಗಿ ಬೆಳೆಯುತ್ತವೆ. ಹೂವುಗಳು ಬೆಳ್ಳಗಿದ್ದು ಒಂಟಿಯಾಗಿ ಅಥವಾ ಎರಡು, ಮೂರು ಗೊಂಚಲುಗಳಾಗಿ ಎಲೆದಂಟಿನೊಂದಿಗೆ ವೊದಲು ಬೆಳೆಯುತ್ತವೆ. ಕಾಯಿ ಹಸಿರು ಬಣ್ಣವಾಗಿದ್ದು, ಹಣ್ಣಾದ ಮೇಲೆ ಕೆಂಪಾಗಿ ಕಾಣಿಸುತ್ತದೆ [೧]. ಕಾಯಿ ಉದ್ದ ಒಂದು ಅಂಗುಲದಿಂದ ಮೂರು ಅಂಗುಲದವರೆಗಿರುತ್ತದೆ. ಎಲೆ ದೀರ್ಘಾಂಡಾಕಾರವಾಗಿ, ತೊಡಿಮೆ ಹತ್ತಿರ ದಪ್ಪಾಗಿದ್ದು, ಕೊನೆ ವೊನಚಾಗಿರುತ್ತದೆ. ಒಂದು ಹಣ್ಣಲ್ಲಿ ಬಹುಳ ವಿತ್ತನಗಳು ಚಪ್ಪಟವಾಗಿ, ವರ್ತುಲಾಕಾರದಲ್ಲಿರುತ್ತವೆ. ಹಣ್ಣಲ್ಲಿ ವಿತ್ತನ ೪೫% ವರೆಗಿರುತ್ತದೆ. ವಿತ್ತನದ ಮೇಲೆ ಹಲುವಾದ ಹೊಟ್ಟು ಇರುತ್ತದೆ. ವಿತ್ತನದಲ್ಲಿ ಬೀಜ ಪ್ರತಿಶತ ೨೩% ತನಕ ಇರುತ್ತದೆ.
ವಿತ್ತನ ಶೇಖರಣೆ
ಬದಲಾಯಿಸಿವಿತ್ತನವನ್ನು ಶೇಖರಣೆ ಮಾಡುವುದು ತುಸು ಕಷ್ಟವಾದದ್ದು. ಹಸಿ ಮೆಣಸಿನಕಾಯಯನ್ನು ಪಲ್ಯ ಮತ್ತು ಚಟ್ನಿ ಮಾಡುವುದಕ್ಕೆ ಬಳಸುತ್ತಾರೆ. ಒಣಗಿಸಿದ ಮೆಣಸಿನಕಾಯಿಂದ ಪುಡಿ ಮಾಡುವ ಕಾರ್ಖಾನೆಗಳಿಂದ ಮೆಣಸಿನಕಾಯಿ ವಿತ್ತನವನ್ನು ಶೇಖರಣೆ ಮಾಡುವ ಅವಕಾಶವಿವೆ. ಭಾರತದಲ್ಲಿ ಸದ್ಯ(೨೦೧೩ಕ್ಕೆ)ಒಂದು ಸಂವತ್ಸರಕ್ಕೆ ೨.೭ ಲಕ್ಷ ಟನ್ನುಗಳ ಮೆಣಸಿನ ಕಾಯಿ ವಿತ್ತನವನ್ನು ಶೇಖರಣೆ ಮಾಡಲು ಸಾಧ್ಯವಿದೆ. ಇದರಿಂದ ೬೭ ಸಾವಿರಟನ್ನುಗಳಷ್ಟು ಎಣ್ಣೆಯನ್ನು ಉತ್ಪಾದಿಸ ಬಹುದು [೩]. ವಿತ್ತನದಿಂದ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ನಲ್ಲಿ ಪ್ರಾಸೆಸ್ ಮಾಡಿ ತೆಗೆಯಬಹುದು.
ವಿತ್ತನ ಅಂದರೆ ಬೀಜ. ವಿತ್ತನ ಪದವು ತೆಲುಗು ಮೂಲದ್ದು,
ಎಣ್ಣೆ
ಬದಲಾಯಿಸಿಮೆಣಸಿನಕಾಯಿ ಎಣ್ಣೆ ಕೆಂಪಾಗಿದ್ದು ,ದಪ್ಪೆ (viscous)ಯಾಗಿರುತ್ತದೆ. ಎಣ್ಣೆಗೆ ಮೆಣಸಿನಕಾಯಿ ತರಹ ಘಾಟಾದ ವಾಸನೆಯಿದೆ. ಎಣ್ಣೆಯನ್ನು ಅಲ್ಕಲಿ ರಿಪೈನಿಂಗ್ ಮಾಡಿದಾಗ, ಈ ವಾಸನೆ ಹೋಗುತ್ತದೆ. ಎಣ್ಣೆಯಲ್ಲಿ ಎರಡು ದ್ವಿ ಬಂಧಗಳಿದ್ದ, ೧೮ ಕಾರ್ಬನುಗಳಿದ್ದ ಲಿನೊಲಿಕಾಮ್ಲ(ಒಮೇಗಾ-೬ ಆಮ್ಲ)೭೨-೭೫% ಕುಸುಂಬೆ ಎಣ್ಣೆ ತರಹ ಹೆಚ್ಚಿನ ಅಂಶದಲ್ಲಿ ಇರುತ್ತದೆ. ಏಕ ದ್ವಿ ಬಂಧವುಳ್ಳ ಒಲಿಕ್ ಆಮ್ಲ ೬-೮% ತನಕ್ಕಿರುತ್ತದೆ. ಎಣ್ಣೆಯಲ್ಲಿ ಸಂತೃಪ್ತ ಕೊಬ್ಬಿನ ಆಮ್ಲವಾದ ಸ್ಟಿಯರಿಕ್ ಆಮ್ಲ ೧೮-೨೦% ವರೆಗಿರುತ್ತದೆ. ಕೆಲವು ಪ್ರಭೇದ ಮೆಣಸಿನ ಎಣ್ಣೆಯಲ್ಲಿ ಪಾಮಿಟಿಕ್ ಆಮ್ಲ೧೫-೧೬%,ಸ್ಟಿಯರಿಕ್ ಆಮ್ಲ೨-೩% ವರೆಗಿರುವ ಸಂಭವವಿದೆ.
ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳ ಪಟ್ಟಿ [೬][೭]
ಕೊಬ್ಬಿನ ಆಮ್ಲ | ಶೇಕಡ |
ಸ್ಟಿಯರಿಕ್ ಆಮ್ಲ(C18:0) | 19.೦ |
ಒಲಿಕ್ ಆಮ್ಲ(C18:1) | 8.೦ |
ಲಿನೊಲಿಕ್ ಆಮ್ಲ(C18:2) | 73.0 |
ಎಣ್ಣೆಯಲ್ಲಿ ೭೫% ವರೆಗೆ ಎರಡು ದ್ವಿ ಬಂಧಗಳಿರುವ ಲಿನೊಲಿಕ್ ಆಮ್ಲ ಇರುವುದರಿಂದ ಎಣ್ಣೆಯ ಅಯೋಡಿನ್ ಮೌಲ್ಯ ಹೆಚ್ಚು ಇರುತ್ತದೆ. ಎಣ್ಣೆಯ ಅಯೋಡಿನ್ ಮೌಲ್ಯ/ಸಂಖ್ಯೆ ೧೩೦-೧೪೫ ವರೆಗೆ ಇರುತ್ತದೆ. ಅನ್ ಸಪೋನಿಫಿಯಬುಲ್ ಪದಾರ್ಥ ೨.೦% ವರೆಗೂ ಇರುತ್ತದೆ.
ಎಣ್ಣೆಯ ಭೌತಿಕ ಧರ್ಮಗಳ ಪಟ್ಟಿ[೬][೭]
ಭೌತಿಕ ಧರ್ಮ | ಮಿತಿ |
ವಕ್ರೀಭವನ ಸೂಚಕ 400Cవద్ద | 1.468-1.474 |
ಅಯೋಡಿನ್ ಮೌಲ್ಯ | 130-143 |
ಸಪೊನಿಫಿಕೆಸನ್ ಸಂಖ್ಯೆ/ಮೌಲ್ಯ | 185-200 |
ಅನ್ ಸಪೋನಿಫಿಯಬುಲ್ ಪದಾರ್ಥ | 2.0 గరిష్టం |
ಆಮ್ಲ ಮೌಲ್ಯ | 10.0గరిష్టం |
ವಿಶಿಷ್ಟಗುರುತ್ವ 30/300Cవద్ద | 0.9180-.9231 |
ವರ್ಣ 1/4" | 30.0 |
ಎಣ್ಣೆಯ ಉಪಯೋಗಗಳು
ಬದಲಾಯಿಸಿ- ಅಡುಗೆ ಎಣ್ಣೆಯಾಗಿ ಉಪಯೋಗಿಸುವುದಕ್ಕೆ ಯೋಗ್ಯವಾದ ಎಣ್ಣೆ.
- ಜೈವಿಕ ಇಂಧನವನ್ನಾಗಿಯೂ ಉಪಯೋಗಿಸ ಬಹುದು.
ಉಲ್ಲೇಖನ
ಬದಲಾಯಿಸಿ- ↑ ೧.೦ ೧.೧ http://www.flowersofindia.net/catalog/slides/Capsicum.html
- ↑ http://www.kew.org/plant-cultures/ plants/chilli_ pepper_history. html
- ↑ ೩.೦ ೩.೧ ೩.೨ SEA HandBook-2009,By The Solvent extractors' Association of India.page.No:945.946
- ↑ http://www.flowersofindia.net/catalog/slides/Chilli.html
- ↑ ೫.೦ ೫.೧ "ಆರ್ಕೈವ್ ನಕಲು". Archived from the original on 2013-05-23. Retrieved 2013-10-23.
- ↑ ೬.೦ ೬.೧ "ಆರ್ಕೈವ್ ನಕಲು". Archived from the original on 2011-06-25. Retrieved 2013-10-23.
- ↑ ೭.೦ ೭.೧ http://www.sciencedirect.com/science/article/pii/S0889157513000367