ಮೂಳೆ ಶಸ್ತ್ರಚಿಕಿತ್ಸೆ

ಮೂಳೆ ಶಸ್ತ್ರಚಿಕಿತ್ಸೆ ಅಥವಾ ಅಸ್ಥಿಚಿಕಿತ್ಸೆ (ಇದು orthopaedic ಶಸ್ತ್ರಚಿಕಿತ್ಸೆ ಮತ್ತು orthopaedics ಎಂಬ ಪದಗುಚ್ಛದ ಕಾಗುಣಿತ ಹೊಂದಿದೆ) ಎಂಬುದು ಮ್ಯಾಸ್ಕ್ಯೂಲೊಸ್ಕೆಲಿಟಲ್ ಸಿಸ್ಟಮ್ (ಸ್ನಾಯು,ತಲೆಬುರುಡೆ ಮೂಳೆ ವ್ಯವಸ್ಥೆ) ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯ ವಿಭಾಗವಾಗಿದೆ. ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರು, ಮ್ಯಾಸ್ಕ್ಯೂಲೊಸ್ಕೆಲಿಟಲ್ ಗಾಯ, ಕ್ರೀಡೆಗಳನ್ನು ಆಡುವಾಗ ಉಂಟಾಗುವ ಗಾಯ, ದೀರ್ಘಕಾಲದ ರೋಗಗಳು,(ವಯಸ್ಸಾದಂತೆ ಮರುಕಳಿಸುವ ವಂಶಪರಂಪರೆಯಾಗಿ ಬರುವ) ಸೋಂಕುಗಳು, ಗೆಡ್ಡೆಗಳು ಮತ್ತು ಸಹಜಾತ ಅಸ್ವಸ್ಥತೆಗಳನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾರಹಿತ ವಿಧಾನಗಳನ್ನು ಬಳಸುತ್ತಾರೆ.

ಕತ್ತಿನ ಕೆಳಭಾಗದ ಬೆನ್ನೆಲುಬಿನ ಈ ಮುರಿತವನ್ನು "ಅಶ್ರಬಿಂದುವಿನಂತಹ ಮುರಿತವೆಂದು" ಕರೆಯಲಾಗುತ್ತದೆ. ಇದು ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರು ಮತ್ತು ನರಶಸ್ತ್ರಚಿಕಿತ್ಸಕರು ಚಿಕಿತ್ಸೆ ನೀಡುವ ಸ್ಥಿತಿಗಳಲ್ಲಿ ಒಂದಾಗಿದೆ.
ಈ ಚಿತ್ರವನ್ನು2006 ರ ಸೆಪ್ಟೆಂಬರ್ ನಲ್ಲಿ ತೆಗೆದುಕೊಳ್ಳಲಾಗಿದ್ದು, ಇದರ ಶಸ್ತ್ರಚಿಕಿತ್ಸೆಯನ್ನು ಪೂರೈಸಿದ ಆರು ವರ್ಷಗಳ(2000) ನಂತರ ಬಲ ಭಾಗದ ಎಲುಬಿನ ಕುಳಿಯನ್ನು ಸರಿಮಾಡಲಾದ ಕಾರ್ಯವನ್ನು ತೋರಿಸಲಾಗುತ್ತಿದೆ. ಕೀಲೂತದಿಂದಾಗಿ ಮುಂದೆ ಕೀಲಿಗೆ ಉಂಟಾಗಿರುವ ಹಾನಿಯನ್ನು ನೋಡಬಹುದಾಗಿದೆ.

ನಿಕೋಲಸ್ ಆಂಡ್ರಿ ಎಂಬುವವರು "ಆರ್ತ್ರೋಪೆಡಿಕ್ಸ್ (ಮೂಳೆಚಿಕಿತ್ಸೆ)" ಪದವನ್ನು ರೂಪಿಸಿದ್ದು, ಇದು ಆರ್ಥೊಸ್ ("ಸರಿಮಾಡು", "ನೇರಮಾಡು") ಮತ್ತು ಪ್ಯೇಡಿಯನ್ ("ಮಕ್ಕಳಿಗೆ") ಗೆ ಇರುವ ಗ್ರೀಕ್ ಪದಗಳಿಂದ ಹುಟ್ಟಿದೆ. ಈ ಪದವನ್ನು ೧೭೪೧ ರಲ್ಲಿ ಆರ್ತ್ರೋಪೀಡಿಯಾ: ಆರ್ ದಿ ಆರ್ಟ್ ಆಫ್ ಕರೆಕ್ಟಿಂಗ್ ಅಂಡ್ ಪ್ರಿವೆಂಟಿಂಗ್ ಡಿಫಾರ್ಮಿಟೀಸ್ ಇನ್ ಚಿಲ್ಡ್ರನ್ ಅನ್ನು ಪ್ರಕಟಿಸಿದಾಗ ರೂಪಿಸಲಾಗಿದೆ. ಬೆನ್ನು ಮೂಳೆ ಮತ್ತು ಎಲುಬಿನ ವಿಕಾರಗಳನ್ನು ಸರಿಮಾಡುವುದು ಅಸ್ಥಿಚಿಕಿತ್ಸೆ ವೃತ್ತಿಯ ಅಡಿಗಲ್ಲಾಗಿದೆ. ಇಂದು ಶಿಶುವೈದ್ಯಕೀಯಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ೬ ತಿಂಗಳ ತರಬೇತಿಯನ್ನು ಕಡ್ಡಾಯವಾಗಿ ಮೀಸಲಿಡಲಾಗುತ್ತದೆ.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಬಹುಪಾಲು ವಿಶ್ವವಿದ್ಯಾನಿಲಯಗಳು ಮತ್ತು ರೆಸಿಡೆನ್ಸಿ ಕಾರ್ಯಕ್ರಮಗಳು ಹಾಗು ಮೂಳೆ ಶಸ್ತ್ರಚಿಕಿತ್ಸೆಯ ಶಸ್ತ್ರಚಿಕಿತ್ಸಕರ ಅಮೇರಿಕನ್ ಅಕಾಡಮಿಯು ಆಂಡ್ರಿಯವರ ಕಾಗುಣಿತವನ್ನು ಬಳಸಿದರೂ ಕೂಡ, orthopedics ಇಲ್ಲಿಯ ಮಾನದಂಡವಾಗಿದೆ. ಬೇರೆಕಡೆಗಳಲ್ಲಿ, ಇದನ್ನು ಒಂದೇ ತೆರನಾಗಿ ಬಳಸುವುದಿಲ್ಲ; ಕೆನಡಾದಲ್ಲಿ ಎರಡೂ ಕಾಗುಣಿತಗಳು ಸಮ್ಮತವಾಗಿವೆ; orthopaedics ಅನ್ನು ಕಾಮನ್ ವೆಲ್ತ್ ನ ಉಳಿದ ಪ್ರದೇಶಗಳಲ್ಲಿ ಅದರಲ್ಲೂ ವಿಶೇಷವಾಗಿ ಬ್ರಿಟನ್ ನಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.

ತರಬೇತಿ

ಬದಲಾಯಿಸಿ

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು, ಸಾಮಾನ್ಯವಾಗಿ ನಾಲ್ಕು ವರ್ಷಗಳ ಪದವಿ ಶಿಕ್ಷಣ ಮತ್ತು ನಾಲ್ಕು ವರ್ಷಗಳ ವೈದ್ಯಕೀಯ ಶಾಲಾ ವ್ಯಾಸಂಗ ಪೂರ್ಣಗೊಳಿಸಿರುತ್ತಾರೆ. ಅನಂತರ, ಈ ವೈದ್ಯಕೀಯ ಶಾಲೆಗಳ ಪದವೀಧರರು ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಆಂತರಿಕವಾಗಿರುವ, ರೆಸಿಡೆನ್ಸಿ ತರಬೇತಿಗೆ ಒಳಪಡುತ್ತಾರೆ. ಐದು ವರ್ಷಗಳ ರೆಸಿಡೆನ್ಸಿ ತರಬೇತಿಯು ಒಂದು ವರ್ಷದ ಸಾಮಾನ್ಯ ಶಸ್ತ್ರಚಿಕಿತ್ಸಾ ತರಬೇತಿ, ಅನಂತರ ನಾಲ್ಕು ವರ್ಷಗಳ ಮೂಳೆ ಶಸ್ತ್ರಚಿಕಿತ್ಸಾ ತರಬೇತಿಯನ್ನು ಒಳಗೊಂಡಿರುತ್ತದೆ.

ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ರೆಸಿಡೆನ್ಸಿ ತರಬೇತಿಗೆ ಆಯ್ಕೆಯಾಗುವುದು ಅತ್ಯಂತ ಸ್ಪರ್ಧಾತ್ಮಕವಾಗಿರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿ ವರ್ಷ ಸರಿಸುಮಾರು ೭೦೦ ವೈದ್ಯರು ಮೂಳೆ ಶಸ್ತ್ರಚಿಕಿತ್ಸಾ ರೆಸಿಡೆನ್ಸಿ ತರಬೇತಿ ಪೂರ್ಣಗೊಳಿಸುತ್ತಾರೆ. ಪ್ರಸ್ತುತದ ಮೂಳೆ ಶಸ್ತ್ರಚಿಕಿತ್ಸಾ ರೆಸಿಡೆನ್ಸಿ ತರಬೇತಿಯಲ್ಲಿರುವ ಶಿಕ್ಷಣಾರ್ಥಿಗಳಲ್ಲಿ ಸುಮಾರು ೧೦ ಪ್ರತಿಶತದಷ್ಟು ಮಹಿಳೆಯರಿದ್ದಾರೆ; ಸುಮಾರು ೨೦ ಪ್ರತಿಶತದಷ್ಟು ಶಿಕ್ಷಣಾರ್ಥಿಗಳು ಅಲ್ಪಸಂಖ್ಯಾತರ ಗುಂಪುಗಳಿಗೆ ಸೇರಿದ ಸದಸ್ಯರಾಗಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸರಿಸುಮಾರು ೨೦,೪೦೦ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ಮತ್ತು ಸ್ಥಳೀಯವಾಗಿ ಕಾರ್ಯಪ್ರವೃತ್ತರಾಗಿರುವ ಚಿಕಿತ್ಸಕಗಳಿದ್ದಾರೆ.[] ಅಮೇರಿಕ ಸಂಯುಕ್ತ ಸಂಸ್ಥಾನದ ಕಾರ್ಮಿಕರ ವಿಭಾಗವು ಪ್ರಕಟಿಸಿದ, ಉದ್ಯೋಗಕ್ಕೆ ಸಂಬಂಧಿಸಿದ ಬಾಹ್ಯನೋಟ ನೀಡುವ ಇತ್ತೀಚಿನ ಕೈಪಿಡಿ(೨೦೦೯–೨೦೧೦) ಯ(ಆಕ್ಯುಪೇಶನಲ್ ಔಟ್ ಲುಕ್ ಹ್ಯಾಂಡ್ ಬುಕ್ )ಪ್ರಕಾರ ೩ ರಿಂದ ೪ ಪ್ರತಿಶತದೊಳಗಿರುವ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಶಸ್ತ್ರಚಿಕಿತ್ಸಜ್ಞರು ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರಾಗಿದ್ದಾರೆ.

ಮೂಳೆಚಿಕಿತ್ಸೆಯ ಅನೇಕ ಶಸ್ತ್ರಚಿಕಿತ್ಸಕರನ್ನು ಅವರ ರೆಸಿಡೆನ್ಸಿ ತರಬೇತಿ ಮುಗಿಸಿದ ನಂತರ. ಮುಂದಿನ ತರಬೇತಿ ಪಡೆಯಲು ಅಥವಾ ಫೆಲೋಷಿಪ್ ಗಾಗಿ (ವಿದ್ಯಾರ್ಥಿ ವೇತನಕ್ಕಾಗಿ) ಆಯ್ಕೆಮಾಡಲಾಗುತ್ತದೆ. ಫೆಲೋಷಿಪ್ ತರಬೇತಿಯು ಮೂಳೆಚಿಕಿತ್ಸೆಯಲ್ಲಿ ವಿಶೇಷ ತಜ್ಞತೆಯನ್ನು ಪಡೆಯುವಂತಹದಾಗಿದ್ದು, ಒಂದು ವರ್ಷದ ವರೆಗೆ (ಕೆಲವೊಮ್ಮೆ ಎರಡುವರ್ಷ) ನಡೆಯುತ್ತದೆ. ಅಲ್ಲದೇ ಕೆಲವೊಮ್ಮೆ ಪ್ರಾಯೋಗಿಕ ಮತ್ತು ಶಸ್ತ್ರಚಿಕಿತ್ಸಾ ತರಬೇತಿಯೊಂದಿಗೆ ಒಳಗೊಂಡ ಸಂಶೋಧನ ಘಟಕ ಹೊಂದಿರುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ನೀಡಲಾಗುವ ಮೂಳೆಚಿಕಿತ್ಸೆಯ ಉಪವಿಶೇಷತಾ ತರಬೇತಿಯ ಉದಾಹರಣೆಗಳು ಕೆಳಕಂಡಂತಿವೆ:

  • ಕೈಯ ಶಸ್ತ್ರಚಿಕಿತ್ಸೆ
  • ಭುಜ ಮತ್ತು ಮೊಣಕೈ ಶಸ್ತ್ರಚಿಕಿತ್ಸೆ
  • ಕೀಲುಗಳ ಸಂಪೂರ್ಣ ಪುನರ್ನಿರ್ಮಾಣ ಆರ್ತ್ರೋಪ್ಲ್ಯಾಸ್ಟಿ)
  • ಶಿಶುವೈದ್ಯ ಅಸ್ಥಿಚಿಕಿತ್ಸೆ
  • ಪಾದ ಮತ್ತು ಕಣಕಾಲಿನ ಶಸ್ತ್ರಚಿಕಿತ್ಸೆ
  • ಬೆನ್ನೆಲುಬು ಶಸ್ತ್ರಚಿಕಿತ್ಸೆ
  • ಸ್ನಾಯು ಮತ್ತು ತಲೆ ಬುರುಡೆ(ಮ್ಯಾಸ್ಕ್ಯೂಲೊಸ್ಕೆಲಿಟಲ್) ಗ್ರಂಥಿವಿಜ್ಞಾನ
  • ಸರ್ಜಿಕಲ್ ಸ್ಪೋರ್ಟ್ಸ್ ಮೆಡಿಸಿನ್ (ಕ್ರೀಡಾ ವಿಶೇಷದ ಶಸ್ತ್ರಚಿಕಿತ್ಸಕ ಔಷಧೀ ವಿಧಾನ)
  • ಮೂಳೆ ಹಾನಿ

ಚಿಕಿತ್ಸೆಯ ಈ ವಿಶೇಷ ಕ್ಷೇತ್ರಗಳು ಮೂಳೆ ಶಸ್ತ್ರಚಿಕಿತ್ಸೆಗೆ ಹೊರತಾಗಿಲ್ಲ. ಉದಾಹರಣೆಗೆ, ಕೈಯ ಶಸ್ತ್ರಚಿಕಿತ್ಸೆಯನ್ನು ಕೆಲವು ಪ್ಲ್ಯಾಸ್ಟಿಕ್ ಶಸ್ತ್ರಚಿಕಿತ್ಸಜ್ಞರು ಮಾಡಿದರೆ, ಬೆನ್ನೆಲುಬಿನ ಶಸ್ತ್ರಚಿಕಿತ್ಸೆಯನ್ನು ನರಶಸ್ತ್ರಚಿಕಿತ್ಸಕರು ಮಾಡುತ್ತಾರೆ. ಇದರೊಂದಿಗೆ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಪಾದ ಅತ್ತು ಕಣಕಾಲಿನ ಶಸ್ತ್ರಚಿಕಿತ್ಸೆಯನ್ನು ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟ ಪೊಡಿಯಾಟ್ರಿಕ್ ಮೆಡಿಸನ್ (D.P.M.) ವೈದ್ಯರು ನಡೆಸುತ್ತಾರೆ. ಕೆಲವು ಕುಟುಂಬ ವೃತ್ತಿಪರ ವೈದ್ಯರು ಸ್ಪೋರ್ಟ್ಸ್ ಮೆಡಿಸಿನ್(ಕ್ರೀಡೆಯಲ್ಲಿ ಉಂಟಾದ ಗಾಯಗಳಿಗೆ ನೀಡುವ ಚಿಕಿತ್ಸೆ) ಅನ್ನು ಅಭ್ಯಾಸ ಮಾಡಿರುತ್ತಾರೆ; ಆದರೂ ಅವರ ವೃತ್ತಿಯ ಕ್ಷೇತ್ರವು ಶಸ್ತ್ರಚಿಕಿತ್ಸೆಯ ಪ್ರಕ್ರಿಯೆಯನ್ನು ಒಳಗೊಂಡಿರುವುದಿಲ್ಲ.

ವಿಶೇಷತೆಯುಳ್ಳ ರೆಸಿಡೆನ್ಸಿ/ರೆಜಿಸ್ಟಾರ್ ತರಬೇತಿಯನ್ನು ಮುಗಿಸಿದ ನಂತರ, ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕ ಮಂಡಳಿಯ ಪ್ರಮಾಣೀಕರಣಕ್ಕೆ ಅರ್ಹರಾಗುತ್ತಾರೆ. ಅಮೇರಿಕನ್ ಬೋರ್ಡ್ ಆಫ್ ಆರ್ತ್ರೋಪೆಡಿಕ್ ಸರ್ಜರಿಯಿಂದ ಪ್ರಮಾಣೀಕರಿಸಲ್ಪಡುವುದೆಂದರೆ, ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕ ಮಂಡಳಿಯ ನಿರ್ದಿಷ್ಟಗೊಳಿಸಲಾದ ಶೈಕ್ಷಣಿಕ , ಮೌಲ್ಯ ಮಾಪನ ಮತ್ತು ಪರೀಕ್ಷಾ ಅಪೇಕ್ಷೆಗಳನ್ನು ಪೂರೈಸಿದ್ದಾರೆ ಎಂದಾಗುತ್ತದೆ.[] ಈ ಪ್ರಕ್ರಿಯೆಯು, ಪ್ರಮಾಣೀಕರಿಸಲಾದ ಬರಹ ಪರೀಕ್ಷೆಯು ಪೂರ್ಣಗೊಂಡು, ಅನಂತರ ೬ ತಿಂಗಳ ಕಾಲಾವಧಿಯಲ್ಲಿ ಶಸ್ತ್ರಚಿಕಿತ್ಸಕನ ಪ್ರಾಯೋಗಿಕ ಮತ್ತು ಶಸ್ತ್ರಚಿಕಿತ್ಸಾ ಪ್ರದರ್ಶನ ಕುರಿತು ಮಾಡಲಾಗುವ ಮೌಖಿಕ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಕೆನಡಾದಲ್ಲಿ, ರಾಯಲ್ ಕಾಲೇಜ್ ಆಫ್ ಫಿಸಿಷನ್ಸ್ ಅಂಡ್ ಸರ್ಜನ್ಸ್ ಆಫ್ ಕೆನಡಾ ಪ್ರಮಾಣೀಕರಿಸುವ ಸಂಸ್ಥೆಯಾಗಿದೆ; ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಲ್ಲಿ ರಾಯಲ್ ಆಸ್ಟ್ರಲೇಷಿಯನ್ ಕಾಲೇಜ್ ಆಫ್ ಸರ್ಜನ್ಸ್ ಪ್ರಮಾಣೀಕರಣವನ್ನು ಮಾಡುತ್ತದೆ.

ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ, ಕೈಯ ಶಸ್ತ್ರಚಿಕಿತ್ಸೆ ಮತ್ತು ಕ್ರೀಡಾ ಔಷಧಶಾಸ್ತ್ರದಲ್ಲಿ ಪ್ರಾವಿಣ್ಯ ಪಡೆದವರು ಅವರ ಮಂಡಳಿಯ ಪ್ರಮಾಣೀಕರಣದೊಂದಿಗೆ ಸರ್ಟಿಫಿಕೇಟ್ ಆಫ್ ಆಡೆಡ್ ಕ್ವಾಲಿಪಿಕೇಷನ್ (CAQ) ಅನ್ನು ಪಡೆದುಕೊಳ್ಳಬಹುದು. ಇದನ್ನು ಪ್ರತ್ಯೇಕವಾಗಿ ನಿಗದಿಪಡಿಸಲಾದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಹೊಂದಬಹುದು. ಇತರ ಉಪ ವಿಶೇಷತೆಗಳಿಗೆ ಯಾವುದೇ ಅಧಿಕ ಪ್ರಮಾಣೀಕರಣಗಳಿಲ್ಲ.

ವೃತ್ತಿಯಾಗಿ

ಬದಲಾಯಿಸಿ
 
Logo

ಹೀಗೆ ೧೯೯೯ ರಿಂದ ೨೦೦೩ ರ ವರೆಗೆ ಮಂಡಳಿಯ ಪ್ರಮಾಣೀಕರಣಕ್ಕೆ ಸಲ್ಲಿಸಲಾದ ಅರ್ಜಿಗಳ ಪ್ರಕಾರ, ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ನಡೆಸುವ ಅಗ್ರ ೨೫ ಅತ್ಯಂತ ಸಾಮಾನ್ಯ ವಿಧಾನಗಳು,ಅನುಕ್ರಮವಾಗಿ (ಕ್ರಮದಲ್ಲಿ) ಕೆಳಕಂಡಂತಿವೆ[]:

  1. ಮಂಡಿಯ ಆರ್ತ್ರೋಸ್ಕೊಪಿ ಮತ್ತು ಮೆನಿಸೆಕ್ಟೊಮಿ
  2. ಭುಜದ ಆರ್ತ್ರೋಸ್ಕೊಪಿ ಮತ್ತು ಒತ್ತಡ ನಿವಾರಣೆ
  3. ಕಾರ್ಪಲ್ ಟನಲ್ (ಮಣಿಕಟ್ಟಿನ ಕುಳಿ) ನ ಬಿಡುಗಡೆ
  4. ಮಂಡಿಯ ಆರ್ತ್ರೋಸ್ಕೊಪಿ ಮತ್ತು ಕ್ರಾಂಡ್ರೋಪ್ಲ್ಯಾಸ್ಟಿ
  5. ಸಹಾಯಕ ಅಂತರ್ನಿರ್ವಿಷ್ಟವನ್ನು ತೆಗೆದುಹಾಕುವಿಕೆ
  6. ಮಂಡಿ ಆರ್ತ್ರೋಸ್ಕೊಪಿ ಮತ್ತು ಆಂಟೀರಿಯರ್ ಕ್ರೂಷಿಯೇಟ್ ಲಿಗ್ಮೆಂಟ್ ನ ಪುನರ್ನಿರ್ಮಾಣ
  7. ಬದಲಿ ಮಂಡಿಯ ಜೋಡಣೆ
  8. ತೊಡೆಯೆಲುಬಿನ ಕೊರಳಿನ ಭಾಗದ ಛಿದ್ರತೆ, ಬಿರಿತವನ್ನು ಸರಿಮಾಡುವುದು
  9. ತೊಡೆಯೆಲುಬಿನ ಮೇಲ್ಭಾಗದ ಗಂಟುಗಳಲ್ಲೊಂದರಲ್ಲಿ ಉಂಟಾಗುವ ಬಿರಿತವನ್ನು ಸರಿಮಾಡುವುದು
  10. ಚರ್ಮ/ಸ್ನಾಯು/ಮೂಳೆ/ಬಿರಿತದ ಡಿಬ್ರೈಡ್ಮೆಂಟ್
  11. ಮಂಡಿ ಆರ್ತ್ರೋಸ್ಕೊಪಿ ರಿಪ್ಯೇರ್ ಆಫ್ ಬೊತ್ ಮೆನಿಸ್ಕಿ
  12. ಕಟಿಭಾಗದ ಬದಲಿಸುವಿಕೆ
  13. ಭುಜದ ಆರ್ತ್ರೋಸ್ಕೊಪಿ/ಡಿಸ್ಟಲ್ ಕೊರಳೆಲುಬಿನ ಛೇದನ
  14. ಆವರ್ತಕ ಮಣಿಕಟ್ಟುಪಟ್ಟಿಯ ಸ್ನಾಯು ರಜ್ಜುವನ್ನು ಸರಿಮಾಡುವುದು
  15. ರೇಡಿಯಸ್ (ಮೂಳೆ)/ಎಲುಬಿ\ನ ಬಿರಿತವನ್ನು ಸರಿಮಾಡುವಿಕೆ
  16. ಲ್ಯಾಮಿನೆಕ್ಟೋಮಿ
  17. ಕಣಕಾಲಿನ ಬಿರಿತ (ಬಿಮ್ಯಾಲಿಯೊಲರ್ ನಂತಹ)ವನ್ನು ಸರಿಮಾಡುವಿಕೆ
  18. ಭುಜದ ಆರ್ತ್ರೋಸ್ಕೊಪಿ ಮತ್ತು ಡಿ ಬ್ರೈಡ್ಮೆಂಟ್
  19. ಸೊಂಟದ ಬೆನ್ನಿನ ಕೆಳಭಾಗದ ಬೆನ್ನು ಮೂಳೆಯ ಬೆಸುಗೆ
  20. ರೇಡಿಸ್ ನ ಕೊನೆಯಲ್ಲಿರುವ ಭಾಗದ ಬಿರಿತವನ್ನು ಸರಿಮಾಡುವಿಕೆ
  21. ಬೆನ್ನಿನ ಕೆಳಭಾಗದ ಅಂತರಕಶೇರುಕ ಭಾಗದ ಶಸ್ತ್ರಚಿಕಿತ್ಸೆ
  22. ಛೇದಿಸಿದ ಬೆರಳಿನ ಸ್ನಾಯುರಜ್ಜು ಕೋಶ
  23. ಕಣಕಾಲು ಬಿರಿತ (ಮೊಳಕಾಲಿನ ಎರಡು ಮೂಳೆಗಳಲ್ಲಿ ಚಿಕ್ಕ ತೆಳುವಾದ ಮೂಳೆ)ವನ್ನು ಸರಿಮಾಡುವಿಕೆ
  24. ತೊಡೆಯೆಲುಬಿನ ಬಿರಿತವನ್ನು ಸರಿಮಾಡುವಿಕೆ
  25. ಮೂಳೆಗಳ ಮೇಲ್ಭಾಗದ ಪದರಿನ ಟ್ರಕ್ಯಾಂಟ್ರಿಕ್ ಬಿರಿತವನ್ನು ಸರಿಮಾಡುವಿಕೆ

ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ಒಂದು ವಾರಕ್ಕೆ ಸಾಮಾನ್ಯವಾಗಿ ೫೦–೫೫ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಇದನ್ನು ಚಿಕಿತ್ಸಾಲಯ, ಶಸ್ತ್ರಚಿಕಿತ್ಸೆ, ಅನೇಕ ಆಡಳಿತ್ಮಾಕ ಕಾರ್ಯಗಳು ಮತ್ತು ಭೋಧನೆ ಮತ್ತು/ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿದ್ದರೆ ಸಂಶೋಧನೆಗಳ ಪರಿಧಿಯೊಳಗೆ ನಿಗದಿಪಡಿಸಿಕೊಳ್ಳಲಾಗುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮೂಳೆಚಿಕಿತ್ಸೆ ಚಿಕಿತ್ಸಕನಿಗೆ ೨೦೦೯ರ ಸುಮಾರಿಗೆ ಸಾಮಾನ್ಯವಾಗಿ $೪೦೬,೮೪೭ ಸಂಬಳ ನೀಡಲಾಗುತ್ತಿತ್ತು.[]

ಇತಿಹಾಸ

ಬದಲಾಯಿಸಿ
 
ರೇಡಿಯಸ್ ಮತ್ತು ಒಳ ಎಲುಬಿನ ಮುರಿತವನ್ನು ಸರಿಮಾಡಲು ಬಳಸುವ ಮೂಳೆಚಿಕಿತ್ಸೆಯ ಅಂತರ್ನಿವೇಶನಗಳುಒಳ ಎಲುಬಿನಲ್ಲಿ(ಬಲ ಮುಂದೋಳು) ಗೋಚರವಾಗುತ್ತಿರುವ ಮುರಿತವನ್ನು ಗಮನಿಸಿ.

ಜೀನ್-ಆಂಡ್ರೆ ವೆನೆಲ್ ೧೭೮೦ ರಲ್ಲಿ ಮೊದಲ ಮೂಳೆ ಶಸ್ತ್ರಚಿಕಿತ್ಸಾ ಸಂಸ್ಥೆಯನ್ನು ಸ್ಥಾಪಿಸಿದರು. ಇದು ಮಕ್ಕಳ ಎಲುಬಿನ ವಿಕಾರತೆಗಳಿಗೆ ಚಿಕೆತ್ಸೆ ನೀಡಿದ ಮೊದಲ ಆಸ್ಪತ್ರೆಯಾಯಿತು. ಇವರನ್ನು ಕೆಲವರು ಅಸ್ಥಿಚಿಕಿತ್ಸೆಯ ಪಿತಾಮಹನೆಂದು ಪರಿಗಣಿಸುತ್ತಾರೆ, ಅಥವಾ ಅವರ ಆಸ್ಪತ್ರೆಯ ಸ್ಥಾಪನೆಯಿಂದಾಗಿ ಮತ್ತು ಪ್ರಕಟಿಸಲಾದ ಅವರ ವಿಧಾನದಿಂದಾಗಿ ಅವರನ್ನು ಮೊದಲ ನಿಜವಾದ ಅಸ್ಥಿಚಿಕಿತ್ಸಜ್ಞ ಎಂದು ಪರಿಗಣಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]

ಆಂಟೊನಿಯಸ್ ಮ್ಯಾಥಿಸನ್, ಡಚ್ ಮಿಲಿಟರಿ ಶಸ್ತ್ರಚಿಕಿತ್ಸಕ ೧೮೫೧ ರಲ್ಲಿ ಪ್ಲಾಸ್ಟರ್(ಪ್ಲಾಸ್ಟರ್ ಆಫ್ ಪ್ಯಾರಿಸ್) ಕಟ್ಟನ್ನು ಕಂಡುಹಿಡಿದರು. ಯುದ್ಧ ಕಾಲದಲ್ಲಾದ ಅನುಭವದಿಂದಾಗಿ ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಅನೇಕ ಬೆಳವಣಿಗೆಗಳಾದವು. ಮಧ್ಯಾವಧಿಯ ಯುದ್ಧ ಭೂಮಿಯಲ್ಲಿ ಗಾಯಗೊಂಡವರನ್ನು, ಕುದುರೆಗಳ ರಕ್ತದಲ್ಲಿ ನೆನೆಸಿದ ಬ್ಯಾಂಡೇಜ್ (ಕಟ್ಟು) ಮತ್ತು ಪಟ್ಟಿಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಿಗಿಯಾಗಿಸಲು ಅದನ್ನು ಒಣಗಿಸಲಾಗುತ್ತಿತ್ತು ಆದರೆ ಇದು ಅಷ್ಟೊಂದು ಶುಚಿಯಾಗಿರುತ್ತಿರಲಿಲ್ಲ. ಮಹಾಯುದ್ಧ I ರ ಸಂದರ್ಭದಲ್ಲಿ ಅಂಗಕರ್ಷಣ ಮತ್ತು ಪಟ್ಟಿ ಕಟ್ಟುವಿಕೆ ಅಭಿವೃದ್ಧಿ ಹೊಂದಿದವು. ತೊಡೆಯೆಲುಬು ಮತ್ತು ಮೊಳಕಾಲು ಮೂಳೆಯ ಮುರಿತಗಳನ್ನು ಗುಣಪಡಿಸಲು ಅಂತರಮಜ್ಜೆಯ ದಂಡ ಗಳ ಬಳಕೆಯನ್ನು ಜರ್ಮನಿಯ ಗೆರ್ ಹಾರ್ಡ್ ಕುಂಟ್ಸ್ಚರ್ ರವರು ಮೊದಲ ಬಾರಿಗೆ ಪರಿಚಯಿಸಿದರು. ಇದರಿಂದಾಗಿ ಮಹಾಯುದ್ಧ II ರ ಸಂದರ್ಭದಲ್ಲಿ ಗಾಯಗೊಂಡ ಜರ್ಮನ್ ಸೈನಿಕರು ಶೀಘ್ರದಲ್ಲಿ ಗುಣಹೊಂದಿದರು. ಅಲ್ಲದೇ ಪ್ರಪಂಚದ ಉಳಿದ ಭಾಗಗಳಲ್ಲಿ ಮುರಿತ ಗಳಿಗೆ ಅಂತರಮಜ್ಜೆ ದಂಡದ ಜೋಡಣೆಯನ್ನು ವ್ಯಾಪಕವಾಗಿ ಅನುಸರಿಸಲಾಯಿತು. ಅದೇನೇ ಆದರೂ ೧೯೭೦ ರ ವರೆಗೆ ಅಂಗಕರ್ಷಣವು ತೊಡೆಯೆಲುಬು ಮುರಿತವನ್ನು ಗುಣಪಡಿಸುವ ಉತ್ತಮ ವಿಧಾನವಾಗಿತ್ತು. ಸೀಟಲ್ ಗುಂಪಿನಲ್ಲಿದ್ದ ಹಾರ್ಬೊರ್ ವ್ಯೂ ಮೆಡಿಕಲ್ ಸೆಂಟರ್ ಬಿರಿತವನ್ನು ತೆರೆಯದೆಯೇ ಅಂತರಮಜ್ಜೆ ಜೋಡಣೆ ಮಾಡುವುದರೊಂದಿಗೆ ಈ ಚಿಕಿತ್ಸೆಯನ್ನು ಜನಪ್ರಿಯಗೊಳಿಸಿತು. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೇರಿಕದ ಶಸ್ತ್ರಚಿಕಿತ್ಸಕರು ಮುರಿತದ ಬಾಹ್ಯ ಜೋಡಣೆಯನ್ನು ಮತ್ತಷ್ಟು ಉತ್ತಮಗೊಳಿಸಿದರು. ಆದರೆ USSR ನಲ್ಲಿ ಗೆವ್ರಿಲ್ ಅಬ್ರಮೊವಿಚ್ ಲಿಜರೊ ಇದರ ಅಭಿವೃದ್ಧಿಯಲ್ಲಿ ಅತ್ಯಂತ ದೊಡ್ಡ ಕೊಡುಗೆ ನೀಡಿದ್ದಾರೆ. ಇವರನ್ನು ೧೯೫೦ ರ ಹೊತ್ತಿನಲ್ಲಿ ಮೂಳೆಚಿಕಿತ್ಸೆಯ ಅಧಿಕ ತರಬೇತಿಯನ್ನು ನೀಡದೇ ಸೈಬೀರಿಯಾ ದಲ್ಲಿ ರಷ್ಯನ್ ಸೈನಿಕರನ್ನು ಉಪಚರಿಸಲೆಂದು ಕಳುಹಿಸಲಾಗಿತ್ತು. ಯಾವುದೇ ಸಾಧನವಿಲ್ಲದೇ ಅವರು ಗುಣವಾಗದ , ಸೋಂಕು ತಗುಲಿದ, ತಪ್ಪಾಗಿ ಜೋಡಿಸಿದ ದುರ್ಬಲ ಸ್ಥಿತಿಯೊಂದಿಗೆ ಇದನ್ನು ಎದುರಿಸಬೇಕಾಯಿತು. ಸ್ಥಳೀಯ ಬೈಸಿಕಲ್ ಶಾಪ್ ನ ಸಹಾಯದೊಂದಿಗೆ ಅವರು ಬೈಸಿಕಲ್ ನ ಚಕ್ರಗಳಂತಹ, ಬಾಹ್ಯದಲ್ಲಿ ಉಂಗುರ ಮಾದರಿಯ ರಿಂಗ್ ಇರುವ ಜೋಡಣಾ ಸಾಧನ ಗಳನ್ನು ಸೃಷ್ಟಿಸಿದರು. ಅವರ ಸಾಧನದೊಂದಿಗೆ ಅವರು ಬೇರೆಲ್ಲೂ ಕೇಳದಷ್ಟು ಮಟ್ಟದಲ್ಲಿ ಗುಣ, ಮರುಜೋಡಣೆ, ನಾಶವಾದ ಅಸ್ಥಿಸೃಷ್ಟಿಯನ್ನು ಸಾಧಿಸಿದರು. ಇವರ ಲಿಜರೊವ್ ಸಲಕರಣೆಯನ್ನು ಇನ್ನೂ ಇಂದು ನಾಶವಾದ ಅಸ್ಥಿಸೃಷ್ಟಿವಿಧಾನಗಳ ರೂಪದಲ್ಲಿ ಬಳಸಲಾಗುತ್ತಿದೆ.

ರುತ್ ಜ್ಯಾಕ್ಸನ್ ರವರು, ೧೯೩೭ ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿನ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟ ಮೊದಲ ಮಹಿಳಾ ಅಸ್ಥಿಚಿಕಿತ್ಸಾ ತಜ್ಞೆಯಾಗಿದ್ದಾರೆ. ಮೂಳೆಚಿಕಿತ್ಸಾ ಕ್ಷೇತ್ರವು ಪುರುಷರ ಸಂಖ್ಯೆಯನ್ನು ಹೆಚ್ಚಾಗಿ ಹೊಂದಿರುವ ಕ್ಷೇತ್ರದಂತೆಯೇ ಮುಂದುವರೆದುಕೊಂಡು ಬಂದಿದೆ. ೨೦೦೬ ರಲ್ಲಿ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಲ್ಲಿ ೧೨.೪ ಪ್ರತಿಶತದಷ್ಟು ಮೂಳೆಚಿಕಿತ್ಸಕರು ಮಹಿಳೆಯರಾಗಿದ್ದರು.[]

ಡೇವಿಡ್. ಎಲ್ ಮ್ಯಾಕಂಟೋಷ್ , ಮಂಡಿಯ ಮುರಿದುಕೊಂಡ ಮುಂಭಾಗದ ಮಂಡಿಯ ಶಿಲುಬೆಯಾಕೃತಿಯ ಸ್ನಾಯು,ಅಂಟೀರಿಯರ್ ಕ್ರೂಷಿಯೇಟ್ ಲಿಗ್ಮೆಂಟ್ (ಜೋಡಣೆ) (ACL)ನ ನಿರ್ವಹಣೆಯಲ್ಲಿ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದರು. ಸ್ಕೀ ಕ್ಷೇತ್ರದ, ಜಾರುಬಂಡೆಯ ಕ್ರೀಡಾಪಟುಗಳಲ್ಲಿ ಮತ್ತು ನೃತ್ಯಗಾರರಲ್ಲಿ ಸಂಭವಿಸಬಹುದಾದ ಈ ಸಾಮಾನ್ಯ ಪೆಟ್ಟು, ಮೂಳೆಯ ಶಾಶ್ವತ ಅಸ್ಥಿರತೆಯನ್ನು ಉಂಟುಮಾಡುವ ಮೂಲಕ ಅವರ ಕ್ರೀಡೆಗಳಿಗೆ ವಿದಾಯ ಹೇಳುವಂತೆ ಮಾಡುತ್ತದೆ. ಗಾಯಗೊಂಡ ಫುಟ್ಬಾಲ್ ಕ್ರೀಡಾಳುಗಳೊಂದಿಗೆ ಕಾರ್ಯನಿರ್ವಹಿಸಿದ ಡಾ.ಮ್ಯಾಕಂಟೋಷ್, ಮಂಡಿಯ ಪ್ರಬಲ ಮತ್ತು ಸಂಕೀರ್ಣವಾದ ಚಲನೆಯನ್ನು ಕಾಪಾಡಲು ಮತ್ತು ಸ್ಥಿರತೆಯನ್ನು ಪುನಃ ಸ್ಥಾಪಿಸಲು ಪಾರ್ಶ್ಚ ರಚನೆಗಳಿಂದ ಉಳಿಯಬಲ್ಲ ಮೂಳೆಕಟ್ಟನ್ನು ಪುನಃಬೆಳೆಯುವಂತೆ ಮಾಡಬಲ್ಲ ಮಾರ್ಗವನ್ನು ಸೃಷ್ಟಿಸಿದರು. ACL ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆಯ ಅನಂತರದ ಬೆಳವಣಿಗೆಗಳು, ಅನೇಕ ಕ್ರೀಡಾಪಟುಗಳನ್ನು ಕ್ರೀಡೆಗೆ ಮರಳುವಂತೆ ಮಾಡಿದವು.

ಆಧುನಿಕ ಮೂಳೆ ಶಸ್ತ್ರಚಿಕಿತ್ಸೆ ಮತ್ತು ಮ್ಯಾಸ್ಕ್ಯೂಲೊಸ್ಕೆಲಿಟಲ್ ಸಂಶೋಧನೆ, ಕಡಿಮೆ ಛೇದನದೊಂದಿಗೆ ಶಸ್ತ್ರಚಿಕಿತ್ಸೆ ಮಾಡುವುದನ್ನು ಹಾಗು ಅಂತರ್ನಿರ್ವೇಶಿಸುವ ಘಟಕಗಳನ್ನು ಉತ್ತಮವಾಗಿರಿಸುವ ಮತ್ತು ಹೆಚ್ಚು ಸ್ಥಿರವಾಗಿರುವಂತೆ ಮಾಡುವುದನ್ನು ಕಂಡುಕೊಂಡಿವೆ.

ಆರ್ತ್ರೋಸ್ಕೊಪಿ

ಬದಲಾಯಿಸಿ

ಆರ್ತ್ರೋಸ್ಕೊಪಿಕ್ ವಿಧಾನಗಳ ಬಳಕೆ ವಿಶೇಷವಾಗಿ ಗಾಯಗೊಂಡ ರೋಗಿಗಳಿಗೆ ಬಹುಮುಖ್ಯವಾಗಿರುತ್ತದೆ. ಜಪಾನ್ ನ ಡಾ. ಮಸಾಕಿ ವ್ಯಾಟ್ನಬೇ ಎಂಬುವವರು ೧೯೫೦ ರ ಹೊತ್ತಿನಲ್ಲಿ, ಮೃದು ಎಲುಬಿನ ಕನಿಷ್ಠ ಛೇದನದ ಶಸ್ತ್ರಚಿಕಿತ್ಸೆ ಮಾಡಲು ಮತ್ತು ಉಳಿಯಬಲ್ಲ ಮೂಳೆಕಟ್ಟುಗಳ ಪುನಃ ನಿರ್ಮಾಣ ಮಾಡಲು ಆರ್ತ್ರೋಸ್ಕೊಪಿಯನ್ನು ಕಂಡುಹಿಡಿದರು. ಸಾಂಪ್ರದಾಯಿಕ 'ಛೇದನ' ಶಸ್ತ್ರಚಿಕಿತ್ಸೆಯಿಂದ ಗುಣಹೊಂದಲು ವಾರಗಳಿಂದ ಹಿಡಿದು ತಿಂಗಳುಗಳೇ ಬೇಕಾಗುತ್ತದೆ. ಆದರೆ ಆರ್ತ್ರೋಸ್ಕೊಪಿಯು ರೋಗಿಗಳನ್ನು ಶಸ್ತ್ರಚಿಕಿತ್ಸೆಯಿಂದ ಕೆಲವೇ ಕೆಲವು ದಿನಗಳಲ್ಲಿ ಗುಣಹೊಂದುವಂತೆ ಮಾಡುತ್ತದೆ. ಮಂಡಿಯ ಆರ್ತ್ರೋಸ್ಕೊಪಿಯು, ಇಂದು ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ಮಾಡುವಂತಹ ಸಾಮಾನ್ಯ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿದೆ. ಅಲ್ಲದೇ ಇದನ್ನು ಹೆಚ್ಚಾಗಿ ಮೆನಿಸೆಕ್ಟೊಮಿ ಅಥವಾ ಕ್ರಾಂಡ್ರೋಪ್ಲ್ಯಾಸ್ಟಿಯೊಂದಿಗೆ ಮಾಡಲಾಗುತ್ತದೆ. ಮೂಳೆಚಿಕಿತ್ಸೆಯ ಬಹುಪಾಲು ವಿಧಾನಗಳನ್ನು ಕಡಿಮೆ ಛೇದನದ ಮೂಲಕವೇ ನೇರವೇರಿಸಲಾಗುತ್ತದೆ.

ಆರ್ತ್ರೋಪ್ಲ್ಯಾಸ್ಟಿ

ಬದಲಾಯಿಸಿ

ಒಟ್ಟಾರೆ ಸೊಂಟದ ಬದಲಿಕೆಯ ಆಧುನಿಕ ವಿಧಾನವನ್ನು ಮೊದಲ ಬಾರಿಗೆ ೧೯೬೦ ರ ಹೊತ್ತಿನಲ್ಲಿ ಇಂಗ್ಲೆಂಡ್ ನಲ್ಲಿ ಸರ್ ಜಾನ್ ಚಾರ್ಲೆಯವರು ಕಂಡುಹಿಡಿದರು.[] ಅವರು ಕೀಲಿನ ಮೇಲ್ಮೈ ಅನ್ನು, ಲೋಹದ ಅಥವಾ ಅಧಿಕ ಗಾತ್ರದ ಪಾಲಿತೀನ್ ಅಂತರ್ನಿವೇಶನಗಳನ್ನು, ಮೀಥೈಲ್ ಮೀಥಕ್ರೈಲೇಟ್ ಎಂಬ ಮೂಳೆಗಳನ್ನು ಜೋಡಿಸಲು ಬಳಸುವ ಸಿಮೆಂಟ್ ಅನ್ನು ಹಾಕಿ ಮೂಳೆಗೆ ಬಂಧಿಸುವುದರ ಮೂಲಕ ಬದಲಿಸಬಹುದಾಗಿದೆ. ಚಾರ್ಲೆ ಆವಿಷ್ಕರಿಸಿದಾಗಿನಿಂದಲೂ ಕೀಲು ಬದಲಿಕೆ (ಆರ್ತ್ರೋಪ್ಲ್ಯಾಸ್ಟಿ)ಯ ವಿನ್ಯಾಸ ಮತ್ತು ವಿಧಾನದಲ್ಲಿ ನಿರಂತರ ಸುಧಾರಣೆಗಳು ನಡೆಯುತ್ತಲೇ ಬಂದಿವೆ. ಅಲ್ಲದೇ ಆರ್. ಐ. ಹ್ಯಾರೀಸ್ ರ ಪುತ್ರರಾದ ಡಬ್ಲ್ಯೂ. ಹೆಚ್. ಹ್ಯಾರೀಸ್ ರವರನ್ನು ಒಳಗೊಂಡಂತೆ ಅನೇಕ ಜನರು ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಆ. ಐ. ಹ್ಯಾರೀಸ್ ರವರ ತಂಡವು ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ, ನೇರವಾಗಿ ಮೂಳೆಗೆ ಅಂತರ್ನಿರ್ವೇಶನವನ್ನು ಬಂಧಿಸುವುದರೊಂದಿಗೆ, ಸಿಮೆಂಟ್ ಹಾಕದ ಆರ್ತ್ರೋಪ್ಲ್ಯಾಸ್ಟಿ ವಿಧಾನಗಳನ್ನು ಕಂಡುಹಿಡಿದಿದ್ದರು.

ಸಂಧಿವಾತದಿಂದಾಗುವ ಕೀಲೂತದ ರೋಗಿಗಳಿಗೆ ಮ್ಯಾಕ್ಟೋಷ್ ರವರು ಆರಂಭಿಸಿದ ವಿಧಾನಗಳಿಗೆ ಹೋಲುವ ಮತ್ತು ಅನಂತರ ೧೯೭೦ರ ಹೊತ್ತಿನಲ್ಲಿ ಅಸ್ಥಿಸಂಧಿವಾತಕ್ಕೆ ಗುನ್ಸ್ಟನ್ ಮತ್ತು ಮ್ಯಾರ್ಮೋರ್ ರವರು ಕಂಡುಹಿಡಿದ ವಿಧಾನಗಳಿಗೆ ಹತ್ತಿರವಿರುವ ಚಿಕಿತ್ಸಾವಿಧಾನಗಳನ್ನೇ ಮಂಡಿಯ ಬದಲಿಕೆಗಳಿಗೆ ಬಳಸಲಾಯಿತು. ಇವುಗಳನ್ನು ನ್ಯೂಯಾರ್ಕ್ ನಲ್ಲಿ ಡಾ ಜಾನ್ ಇನ್ಸಾಲ್ ಎಂಬುವವರು ಸ್ಥಿರ ಬೇರಿಂಗ್ ವ್ಯವಸ್ಥೆಯನ್ನು ಬಳಸುವ ಮೂಲಕ ಹಾಗು ಡಾ ಫ್ರೆಡ್ರಿಕ್ ಬ್ಯೂಕೆಲ್ ಮತ್ತು ಡಾ ಮೈಕೆಲ್ ಪಪ್ಪಸ್ ರವರು ಚಲನಾ ಬೇರಿಂಗ್ ವ್ಯವಸ್ಥೆಯನ್ನು ಬಳಸುವ ಮೂಲಕ ಅಭಿವೃದ್ಧಿಪಡಿಸಿದರು.[]

ಏಕ ವಿಭಾಗವುಳ್ಳ ಕೀಲು ಬದಲಿಕೆಯಲ್ಲಿ ಕೇವಲ ಒಂದು ತೂಕದ- ಸಂಧಿವಾತ ಮಂಡಿಯ ಮೇಲ್ಮೈಯನ್ನು ಮಾತ್ರ ಬದಲಿಸಲಾಗುವುದು. ಇದು ಆಯ್ಕೆಮಾಡಿಕೊಂಡ ರೋಗಿಗಳಲ್ಲಿ ಸಂಪೂರ್ಣ ಕೀಲನ್ನು ಬದಲಿಸುವುದಕ್ಕಿರುವ ಪರ್ಯಾಯ ಮಾರ್ಗವಾಗಿದೆ.

ಕೀಲಿನ ಬದಲಿಕೆಯನ್ನು ಇತರ ಕೀಲುಗಳ ಮೇಲು ಸೀಮಿತ ಪ್ರಮಾಣದಲ್ಲಿ ಮಾಡಬಹುದು , ವಿಶೇಷವಾಗಿ ಭುಜದ, ಮೊಣಕೈ, ಮಣಿಕಟ್ಟು, ಕಣಕಾಲು, ಬೆನ್ನೆಲುಬು ಮತ್ತು ಬೆರಳುಗಳು.

ಇತ್ತೀಚಿನ ವರ್ಷಗಳಲ್ಲಿ, ಕೀಲುಗಳ ಮೇಲೈ ಬದಲಿಕೆಯು , ಅದರಲ್ಲೂ ವಿಶೇಷವಾಗಿ ಸೊಂಟದ ಕೀಲಿನ ಬದಲಿಕೆಯು , ಯುವಜನರಲ್ಲಿ ಮತ್ತು ಅತ್ಯಂತ ಗತಿಶೀಲ ರೋಗಿಗಳಲ್ಲಿ ಪ್ರಖ್ಯಾತವಾಗಿದೆ. ಈ ರೀತಿಯ ಶಸ್ತ್ರಚಿಕಿತ್ಸೆ, ಅತ್ಯಂತ ಸಾಂಪ್ರದಾಯಿಕ ಮತ್ತು ಕಡಿಮೆ ಮೂಳೆಯನ್ನು ಒಳಗೊಳ್ಳುವ ಒಟ್ಟು ಸೊಂಟದ ಬದಲಿಕೆಯ ಅಗತ್ಯವನ್ನು ಮುಂದೂಡುತ್ತದೆ. ಆದರೆ ಮುರಿತ ಮತ್ತು ಮೂಳೆಯ ಸಾವಿನಿಂದಾಗಿ ಬೇಗ ವಿಫಲವಾಗುವ ಅಪಾಯವಿರುತ್ತದೆ.

ಘಟಕಗಳ ಬೇರಿಂಗ್ ಮೇಲ್ಮೆ ಸವೆದು ಹೋಗುವುದು ಕೀಲಿನ ಬದಲಿಕೆಯಲ್ಲಿರುವ ಪ್ರಮುಖ ಸಮಸ್ಯೆಯಾಗಿದೆ. ಇದು ಸುತ್ತಲಿನ ಮೂಳೆಯನ್ನು ಹಾನಿಮಾಡಬಹುದು ಮತ್ತು ಅಂತಿಮವಾಗಿ ಅಂತರ್ನಿರ್ವೇಶನ ವಿಫಲವಾಗುವಂತೆ ಮಾಡಬಹುದು. ಇತ್ತೀಚಿನ ವರ್ಷಗಳಲ್ಲಿ ಪರ್ಯಾಯ ಬೇರಿಂಗ್ ಮೇಲ್ಮೈಗಳ ಬಳಕೆಯು ಹೆಚ್ಚಾಗಿದೆ. ಅದರಲ್ಲೂ ವಿಶೇಷವಾಗಿ ಯುವ ರೋಗಿಗಳಲ್ಲಿ ಕೀಲು ಬದಲಿಕೆ ಘಟಕಗಳ ಧರಿಸುವ ಗುಣಲಕ್ಷಣದಲ್ಲಿ ಸುಧಾರಣೆಯನ್ನು ತರುವ ಪ್ರಯತ್ನದಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಸೆರಾಮಿಕ್ ಮತ್ತು ಎಲ್ಲಾ ಲೋಹದ ಅಂತರ್ನಿವೇಶನ (ಮೂಲ ರೀತಿಯಲ್ಲಿರುವಂತೆ ಪ್ಲ್ಯಾಸ್ಟಿಕ್ ನ ಮೇಲೆ ಲೋಹವನ್ನು ಬಳಸುವ ಪದ್ಧತಿಗೆ ವಿರುದ್ಧವಾಗಿ)ವನ್ನು ಒಳಗೊಂಡಿರುತ್ತದೆ. ಪ್ಲ್ಯಾಸ್ಟಿಕ್ (ಅಲ್ಟ್ರಾ ಹೈ-ಆಣ್ವಿಕ-ತೂಕದಪಾಲಿತೀನ್) ಅನ್ನು ಕೂಡ ಪರ್ಯಾಯವಾಗಿ ಬಳಸಬಹುದು, ಇದು ಧರಿಸುವ ಗುಣಲಕ್ಷಣಗಳನ್ನು ಸುಧಾರಿಸಬಹುದು.

ಇವನ್ನೂ ಗಮನಿಸಿ

ಬದಲಾಯಿಸಿ
  • ಮೂಳೆ ಮುರಿತ
  • ಮೂಳೆ ಕಸಿಕಟ್ಟುವಿಕೆ
  • ಬ್ರೊಸ್ಟ್ರೋಮ್ ವಿಧಾನ
  • ಕಂಪ್ಯೂಟರ್ ನೆರವಿನ ಮೂಲಕ ಮೂಳೆ ಶಸ್ತ್ರಚಿಕಿತ್ಸೆ
  • Arbeitsgemeinschaft für Osteosynthesefragen
  • ಗತಿ ವಿಶ್ಲೇಷಣೆ
  • ಹ್ಯಾಲೊ ಬ್ರೇಸ್
  • ಕೈಯ ಶಸ್ತ್ರಚಿಕಿತ್ಸೆ
  • ಪೋಡಿಯಾಟ್ರಿಕ್ ಶಸ್ತ್ರಚಿಕಿತ್ಸೆ
  • ಮೂಳೆಚಿಕಿತ್ಸೆ ಶುಶ್ರೂಷೆ
  • ಅಂಗಕರ್ಷಣ
  • ಭಾಗಶಃ ಮೊಣಕಾಲು ಬದಲಿಸುವಿಕೆ
  • ಎಪಿಫಿಸಿಯೋಡೆಸಿಸ್
  • ಮರುರಚನಾ ಶಸ್ತ್ರಕ್ರಿಯೆ
  • ಬುಡ್ಡಿ ವ್ರ್ಯಾಪ್ಪಿಂಗ್

3 ಆಯಾಮಗಳ ಮುದ್ರಣ

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. ಅಮೇರಿಕನ್ ಬೋರ್ಡ್ ಆಫ್ ಆರ್ತ್ರೋಪೆಡಿಕ್ ಸರ್ಜರಿ
  2. "ಅಮೇರಿಕನ್ ಬೋರ್ಡ್ ಆಫ್ ಆರ್ತ್ರೋಪೆಡಿಕ್ ಸರ್ಜರಿ". Archived from the original on 2007-06-12. Retrieved 2021-08-10.
  3. *ಗ್ಯಾರೆಟ್, WE, ಅಟ್ ಆಲ್. . ಅಮೇರಿಕನ್ ಬೋರ್ಡ್ ಆಫ್ ಆರ್ತ್ರೋಪೆಡಿಕ್ ಸರ್ಜರಿ ಪ್ರಾಕ್ಟೀಸ್ ಆಫ್ ದಿ ಆರ್ತ್ರೋಪೆಡಿಕ್ ಸರ್ಜನ್: ಭಾಗ-II, ಪ್ರಮಾಣೀಕರಣದ ಪರೀಕ್ಷೆ. ದಿ ಜರ್ನಲ್ ಆಫ್ ಬೋನ್ ಅಂಡ್ ಜಾಯಿಂಟ್ ಸರ್ಜರಿ (ಅಮೇರಿಕನ್). ೨೦೦೬;೮೮:೬೬೦-೬೬೭.
  4. ಅವ್ರೇಜ್ ಆರ್ತ್ರೋಪೆಡಿಕ್ ಸರ್ಜನ್ ಸ್ಯಾಲರಿ. ಆರ್ತ್ರೋಪೆಡಿಕ್ ಸರ್ಜನ್ ಜಾಬ್ ಕರಿಯರ್ ಎಜುಕೇಶನ್ ಅಂಡ್ ಅನ್ ಎಂಪ್ಲಾಯ್ಮೆಂಟ್ ಹೆಲ್ಪ್ ಫ್ರಮ್ Salary.com
  5. ಡೇ CS, ಲೇಜ್ DE, Ahn CS. ಡೆವರ್ಸಿಟಿ ಬೇಸ್ಡ್ ಆನ್ ರೇಸ್, ಎಥ್ನಿಸಿಟಿ, ಅಂಡ್ ಸೆಕ್ಸ್ ಬಿಟ್ವೀನ್ ಅಕಾಡಮಿಕ್ ಆರ್ತ್ರೋಪೆಡಿಕ್ ಸರ್ಜರಿ ಅಂಡ್ ಅದರ್ ಸ್ಪೆಷಾಲಿಟೀಸ್: ಎ ಕಂಪ್ಯಾರಿಟಿವ್ ಸ್ಟಡಿ. ಬೋನ್ ಜಾಯಿಂಟ್ ಸರ್ಜರಿ Am. ೨೦೧೦: ೯೨:೨೩೨೮-೨೩೩೫
  6. Wroblewski, B.M. (2002). "Professor Sir John Charnley (1911–1982)". Rheumatology. 41 (7). The British Society for Rheumatology via Oxford Journals: 824–825. doi:10.1093/rheumatology/41.7.824. PMID 12096235. Retrieved 2008-04-28.
  7. Hamelynck, K.J. (2006). "The history of mobile-bearing total knee replacement systems". Orthopedics. 29 (9 Suppl): S7–12. PMID 17002140. Retrieved 2008-04-28.


ಬಾಹ್ಯ ಕೊಂಡಿಗಳು‌

ಬದಲಾಯಿಸಿ