ಮೂರನೇ ಕುಮಾರಗುಪ್ತ
ಮೂರನೇ ಕುಮಾರಗುಪ್ತ ಒಬ್ಬ ನಂತರದ ಗುಪ್ತ ಸಾಮ್ರಾಟನಾಗಿದ್ದನು. ಇವನು ಸುಮಾರು ಕ್ರಿ.ಶ. ೫೩೦ರಲ್ಲಿ ತನ್ನ ತಂದೆ ನರಸಿಂಹಗುಪ್ತನ ಉತ್ತರಾಧಿಕಾರಿಯಾದನು.
ಮೂರನೇ ಕುಮಾರಗುಪ್ತ | |
---|---|
೧೩ನೇ ಗುಪ್ತ ಸಾಮ್ರಾಟ | |
ಆಳ್ವಿಕೆ | c. ೫೩೦ – c. ೫೪೦ ಕ್ರಿ.ಶ |
ಪೂರ್ವಾಧಿಕಾರಿ | ನರಸಿಂಹಗುಪ್ತ |
ಉತ್ತರಾಧಿಕಾರಿ | ವಿಷ್ಣುಗುಪ್ತ |
ತಂದೆ | ನರಸಿಂಹಗುಪ್ತ |
ತಾಯಿ | ಶ್ರೀಮಿತ್ರಾದೇವಿ |
ಧರ್ಮ | ಹಿಂದೂ ಧರ್ಮ |
ಇವನ ಬೆಳ್ಳಿ-ತಾಮ್ರ ಮುದ್ರೆಯನ್ನು ೧೮೮೯ರಲ್ಲಿ ಭೀತರಿಯಲ್ಲಿ ಶೋಧಿಸಲಾಯಿತು. ಈ ಮುದ್ರೆಯು ಇವನ ತಂದೆ ನರಸಿಂಹಗುಪ್ತ ಮತ್ತು ಅಜ್ಜ ಪುರುಗುಪ್ತನ ಹೆಸರುಗಳನ್ನು ಉಲ್ಲೇಖಿಸುತ್ತದೆ.[೧][೨] ಇವನ ಒಂದು ಜೇಡಿಮಣ್ಣಿನ ಮುದ್ರೆಯನ್ನು ನಾಲಂದಾದಲ್ಲಿ ಶೋಧಿಸಲಾಯಿತು. ಇದು ಕೂಡ ಇವನ ತಂದೆ ಮತ್ತು ಅಜ್ಜನನ್ನು ಉಲ್ಲೇಖಿಸುತ್ತದೆ.
ಮೂರನೇ ಕುಮಾರಗುಪ್ತನ ನಾಲಂದಾದ ಜೇಡಿಮಣ್ಣಿನ ಮುದ್ರೆಯು ಪುರುಗುಪ್ತನನ್ನು ಮೊದಲನೇ ಕುಮಾರಗುಪ್ತ ಮತ್ತು ರಾಣಿ ಅನಂತಾದೇವಿಯರ ಮಗನೆಂದು ಉಲ್ಲೇಖಿಸುತ್ತದೆ.
ಗುಪ್ತ ಸಾಮ್ರಾಜ್ಯವು ಇವನ ಮತ್ತು ನಂತರದ ರಾಜರ ಆಳ್ವಿಕೆಯಲ್ಲಿ ಪತನಹೊಂದಿತು. ಇವನ ನಂತರ ಇವನ ಮಗ ವಿಷ್ಣುಗುಪ್ತನು ಉತ್ತರಾಧಿಕಾರಿಯಾದನು.
ಉಲ್ಲೇಖಗಳು
ಬದಲಾಯಿಸಿ- ↑ "Kumaragupta-III-of-the-Gupta-Empire".
- ↑ Bhitari Inscribed Copper-Silver Seal of Kumaragupta III - Journal and Proceedings of the Asiatic Society of Bengal, Calcutta. LVIII, p. 89
- ↑ Corpus Inscriptionum Indicarum Vol.3 (inscriptions Of The Early Gupta Kings) p.364
- ↑ Corpus Inscriptionum Indicarum Vol.3 (inscriptions Of The Early Gupta Kings) p.355