ಪುರುಗುಪ್ತ (ಆಳ್ವಿಕೆ ಕಾಲ ಕ್ರಿ.ಶ. 467–473) ಉತ್ತರ ಭಾರತದಲ್ಲಿ ಗುಪ್ತ ರಾಜವಂಶದ ಒಬ್ಬ ಸಾಮ್ರಾಟನಾಗಿದ್ದನು. ಪುರುಗುಪ್ತನು ಗುಪ್ತ ಸಾಮ್ರಾಟ ಮೊದಲನೇ ಕುಮಾರಗುಪ್ತ ಮತ್ತು ರಾಣಿ ಅನಂತಾದೇವಿಯ ಒಬ್ಬ ಮಗನಾಗಿದ್ದನು. ಇವನು ತನ್ನ ಮಲಸಹೋದರ ಸ್ಕಂದಗುಪ್ತನ ಉತ್ತರಾಧಿಕಾರಿಯಾದನು.[] ಇಲ್ಲಿಯವರೆಗೆ ಪುರುಗುಪ್ತನ ಯಾವುದೇ ಶಾಸನ ಪತ್ತೆಯಾಗಿಲ್ಲ. ಇವನು ತನ್ನ ಮೊಮ್ಮಗ ಮೂರನೇ ಕುಮಾರಗುಪ್ತನ ಭೀತರಿ ಬೆಳ್ಳಿ-ತಾಮ್ರ ಮುದ್ರೆ ಮತ್ತು ತನ್ನ ಪುತ್ರರಾದ ನರಸಿಂಹಗುಪ್ತ ಹಾಗೂ ಬುಧಗುಪ್ತ ಹಾಗೂ ಮೊಮ್ಮಗ ಮೂರನೇ ಕುಮಾರಗುಪ್ತರ ನಾಲಂದಾ ಜೇಡಿಮಣ್ಣಿನ ಮುದ್ರೆಗಳಿಂದ ತಿಳಿದುಬಂದಿದ್ದಾನೆ. ಸಾರನಾಥದ ಬುದ್ಧ ವಿಗ್ರಹ ಶಾಸನದಿಂದ, ಎರಡನೇ ಕುಮಾರಗುಪ್ತನು ಇವನ ಉತ್ತರಾಧಿಕಾರಿ ಎಂದು ತೀರ್ಮಾನಿಸಲಾಗಿದೆ.[]

ಪುರುಗುಪ್ತ
೯ನೇ ಗುಪ್ತ ಸಾಮ್ರಾಟ
ಆಳ್ವಿಕೆ c. 467 – c. 473 CE
ಪೂರ್ವಾಧಿಕಾರಿ ಸ್ಕಂದಗುಪ್ತ
ಉತ್ತರಾಧಿಕಾರಿ ಎರಡನೇ ಕುಮಾರಗುಪ್ತ
ತಂದೆ ಮೊದಲನೇ ಕುಮಾರಗುಪ್ತ
ತಾಯಿ ಅನಂತಾದೇವಿ

ವಿಷ್ಣುಗುಪ್ತನ ನಾಲಂದಾ ಮುದ್ರೆಯ ಪ್ರಕಾರ, ವಿಷ್ಣುಗುಪ್ತನು ಎರಡನೇ ಕುಮಾರಗುಪ್ತನ ಮಗ, ಮತ್ತು ಪುರುಗುಪ್ತನ ಮೊಮ್ಮಗನಾಗಿದ್ದನು.[]

ಉಲ್ಲೇಖಗಳು

ಬದಲಾಯಿಸಿ
  1. Mahajan, V. D. (2007) [1960]. Ancient India. New Delhi: S. Chand. p. 512. ISBN 81-219-0887-6.
  2. Agarwal, Ashvini (1989). Rise and Fall of the Imperial Guptas. Delhi: Motilal Banarsidass. pp. 220, 223–5. ISBN 81-208-0592-5.
  3. Corpus Inscriptionum Indicarum Vol.3 (inscriptions Of The Early Gupta Kings) p.364