ಸ್ಕಂದಗುಪ್ತ
ಸ್ಕಂದಗುಪ್ತ (ಮರಣ 467) ಉತ್ತರ ಭಾರತದ ಒಬ್ಬ ಗುಪ್ತ ಸಾಮ್ರಾಟನಾಗಿದ್ದನು. ಇವನನ್ನು ಸಾಮಾನ್ಯವಾಗಿ ಮಹಾನ್ ಗುಪ್ತ ಸಾಮ್ರಾಟರಲ್ಲಿ ಕೊನೆಯವನು ಎಂದು ಪರಿಗಣಿಸಲಾಗುತ್ತದೆ.
ಸ್ಕಂದಗುಪ್ತನ ಪೂರ್ವವೃತ್ತಗಳು ಅಸ್ಪಷ್ಟವಾಗಿ ಉಳಿದಿವೆ. ನಂತರದ ಅಧಿಕೃತ ವಂಶಾವಳಿಗಳು ಇವನ ಹೆಸರನ್ನು ಬಿಟ್ಟುಬಿಡುತ್ತವೆ, ಮತ್ತು ಇವನ ಕಾಲದ ಶಾಸನಗಳು ಕೂಡ ಇವನ ತಾಯಿಯ ಹೆಸರನ್ನು ಬಿಟ್ಟುಬಿಡುತ್ತವೆ. "ಸಾರ್ವಭೌಮತ್ವದ ದೇವತೆ, ಸ್ವಂತ ಇಚ್ಛೆಯಿಂದ, ಎಲ್ಲ ಇತರ ರಾಜಕುಮಾರರನ್ನು ಅನುಕ್ರಮವಾಗಿ ತಿರಸ್ಕರಿಸಿ ಇವನನ್ನು ತನ್ನ ಗಂಡನಾಗಿ ಆಯ್ಕೆಮಾಡಿದಳು" ಎಂದು ಮತ್ತೊಂದು ಸಮಕಾಲೀನ ದಾಖಲೆಯು ಗಮನಿಸುತ್ತದೆ. ಸ್ಕಂದಗುಪ್ತನು ಕಿರಿ ರಾಣಿಯ ಮಗನೆಂದು ಸೂಚಿಸುತ್ತದೆ ಎಂದು ಇದನ್ನು ವ್ಯಾಖ್ಯಾನಿಸಲಾಗಿದೆ.[೧] ಇವನು ತನಗೆ ಆಳುತ್ತಿದ್ದ ಗುಪ್ತ ವಂಶದಲ್ಲಿ ಬಡ್ತಿಕೊಟ್ಟುಕೊಂಡ ಕೇವಲ ಒಬ್ಬ ಯಶಸ್ವಿ ಸೇನಾಧಿಪತಿಯಾಗಿದ್ದನು ಎಂದು ಕೂಡ ಇರಬಹುದು.
ಇವನು ನಿಸ್ಸಂಶಯವಾಗಿ ಈ ಸಾಮ್ರಾಜ್ಯದ ಬಖೈರುಗಳಲ್ಲಿನ ಅತ್ಯಂತ ದೊಡ್ಡ ಸವಾಲುಗಳಲ್ಲಿ ಕೆಲವನ್ನು ಎದುರಿಸಿದನು ಏಕೆಂದರೆ ಇವನು ಪುಷ್ಯಮಿತ್ರರು ಮತ್ತು ಹುಣರೊಂದಿಗೆ ಹೋರಾಡಬೇಕಾಯಿತು. ಸ್ಕಂದಗುಪ್ತನ ಭೀತರಿ ಸ್ತಂಭ ಶಾಸನದಿಂದ ಬಹಿರಂಗಗೊಂಡಂತೆ, ಇವನು ಮಧ್ಯ ಭಾರತದಲ್ಲಿ ನೆಲೆಸಿದ್ದ ಆದರೆ ನಂತರ ಬಂಡಾಯವೆದ್ದ ಬುಡಕಟ್ಟಾದ ಪುಷ್ಯಮಿತ್ರರನ್ನು ಪರಾಜಿತಗೊಳಿಸಿದನು.
ಇವನು ವಾಯವ್ಯದಿಂದ ದಾಳಿಮಾಡಿದ ಹುಣರನ್ನೂ ಎದುರಿಸಿದನು. ಸ್ಕಂದಗುಪ್ತನು ತನ್ನ ತಂದೆಯ ಆಳ್ವಿಕೆಯ ಕಾಲದಲ್ಲಿ ಹುಣರ ವಿರುದ್ಧ ಯುದ್ಧ ಮಾಡಿದ್ದನು, ಮತ್ತು ಸಾಮ್ರಾಜ್ಯದಾದ್ಯಂತ ಮಹಾನ್ ಯೋಧನಾಗಿ ಹೊಗಳಲ್ಪಟ್ಟಿದ್ದನು. ೪೫೫ರಲ್ಲಿ ಇವನು ಹುಣ ಆಕ್ರಮಣವನ್ನು ಸದೆಬಡಿದು ಅವರನ್ನು ಹತ್ತಿರ ಬರದಂತೆ ತಡೆಯುವಲ್ಲಿ ಯಶಸ್ವಿಯಾದನು.
ಆದರೆ, ಯುದ್ಧಗಳ ವೆಚ್ಚಗಳು ಸಾಮ್ರಾಜ್ಯದ ಸಂಪನ್ಮೂಲಗಳನ್ನು ಬರಿದುಮಾಡಿದವು ಮತ್ತು ಅದರ ಪತನಕ್ಕೆ ಕೊಡುಗೆ ನೀಡಿದವು. ವಿಶೇಷವಾಗಿ, ಸ್ಕಂದಗುಪ್ತನು ಹೊರಡಿಸಿದ ನಾಣ್ಯಗಳಿಗೆ ಉಗ್ರವಾಗಿ ಕೀಳ್ಬೆರಕೆ ಮಾಡಲಾಗಿದೆ.
ಸ್ಕಂದಗುಪ್ತನು ೪೬೭ರಲ್ಲಿ ನಿಧನನಾದನು ಮತ್ತು ಇವನ ನಂತರ ಮಲಸಹೋದರ ಪುರುಗುಪ್ತ (ಕ್ರಿ.ಶ. 467–473), ಎರಡನೇ ಕುಮಾರಗುಪ್ತ (ಕ್ರಿ.ಶ. 473–476), ಬುಧಗುಪ್ತ (ಕ್ರಿ.ಶ. 476–495?) ಮತ್ತು ನರಸಿಂಹಗುಪ್ತರು ಉತ್ತರಾಧಿಕಾರಿಗಳಾದರು. ಇವರ ಕಾಲದಲ್ಲಿ ಉತ್ತರ ಭಾರತದ ಬಯಲುಗಳಲ್ಲಿನ ರಾಜ್ಯ ಸತತವಾಗಿ ಹುಣರ ದಾಳಿಗೆ ಒಳಗಾಯಿತು. ಸ್ಕಂದಗುಪ್ತನ ಹೆಸರು ಜಾವಾ ಪಠ್ಯ ತಂತ್ರಿಕಾಮಂಡಕದಲ್ಲಿ ಕಾಣಿಸುತ್ತದೆ, ಮತ್ತು ಇವನ ಆಸ್ಥಾನಕ್ಕೆ ಶ್ರೀಲಂಕಾದ ರಾಜ ಮೇಘವರ್ಮನು ಶ್ರೀಲಂಕಾದಿಂದ ಪ್ರಯಾಣ ಬೆಳೆಸುತ್ತಿದ್ದ ಭಿಕ್ಷುಗಳಿಗಾಗಿ ಬೋಧ್ ಗಯಾದಲ್ಲಿ ಬೌದ್ಧ ವಿಹಾರವನ್ನು ಕಟ್ಟಲು ಅನುಮತಿ ಕೇಳಲು ರಾಜದೂತನನ್ನು ಕಳಿಸಿದನು ಎಂದು ಚೀನಾದ ಬರಹಗಾರ ವಾಂಗ್ ಹ್ಯೂನ್ ಟ್ಸೆ ಉಲ್ಲೇಖಿಸಿದ್ದಾನೆ.
ಉಲ್ಲೇಖಗಳು
ಬದಲಾಯಿಸಿ- ↑ Majumdar, RC (1954), Chapter III: The expansion and consolidation of the Empire, in RC Maumdar, AD Pusalker & AK Majumdar (eds.) The History and Culture of the Indian People: [vol. 3] The Classical Age. Bharatiya Vidya Bhavan (1962), pp. 17-28.