ಪುಷ್ಯಮಿತ್ರರು ಕ್ರಿ.ಶ. ೫ನೇ ಶತಮಾನದಲ್ಲಿ ಮಧ್ಯ ಭಾರತದಲ್ಲಿ ವಾಸಿಸುತ್ತಿದ್ದ ಒಂದು ಬುಡಕಟ್ಟಾಗಿತ್ತು. ನರ್ಮದಾ ನದಿಯ ದಂಡೆಯ ಮೇಲೆ ವಾಸಿಸುತ್ತಿದ್ದ ಇವರು ಮೊದಲನೇ ಕುಮಾರಗುಪ್ತನ ಆಳ್ವಿಕೆಯ ಕೊನೆಯ ಕಾಲದಲ್ಲಿ ಗುಪ್ತ ಸಾಮ್ರಾಜ್ಯಕ್ಕೆ ಗಂಭೀರ ಬೆದರಿಕೆಯನ್ನುಂಟುಮಾಡಿದರು ಎಂದು ನಂಬಲಾಗಿದೆ. ಕ್ರಿ.ಶ. ೪೫೫ ಮತ್ತು ೪೬೭ರ ನಡುವಿನ ಘಟನೆಗಳನ್ನು ವರದಿ ಮಾಡಿದ ಶಾಸನಗಳು ಪುಷ್ಯಮಿತ್ರರನ್ನು ಸೋಲಿಸುವಲ್ಲಿ ಕುಮಾರಗುಪ್ತನ ಉತ್ತರಾಧಿಕಾರಿ ಸ್ಕಂದಗುಪ್ತನ ಪಾತ್ರವನ್ನು ಒತ್ತಿಹೇಳುತ್ತವೆ.[೧]

ಪುಷ್ಯಮಿತ್ರರು ನರ್ಮದಾ ನದಿಯ ದಂಡೆಯ ಮೇಲೆ ವಾಸಿಸುತ್ತಿದ್ದರು

ತನ್ನ ಕುಟುಂಬದ ಪತನವಾದ ಅದೃಷ್ಟವನ್ನು ಪುನಃಸ್ಥಾಪಿಸಲು ಸ್ಕಂದಗುಪ್ತನು ತನ್ನನ್ನು ಸಿದ್ಧಗೊಳಿಸಿಕೊಂಡಾಗ, ಒಂದು ಸಂಪೂರ್ಣ ರಾತ್ರಿ ಬರಿ ನೆಲವೆಂಬ ಮಂಚದ ಮೇಲೆ ಕಳೆದನು; ಮತ್ತು ನಂತರ, ಬೃಹತ್ ಶಕ್ತಿ ಮತ್ತು ಸಂಪತ್ತನ್ನು ಬೆಳೆಸಿಕೊಂಡಿದ್ದ ಪುಷ್ಯಮಿತ್ರರನ್ನು ಜಯಿಸಿದ ಮೇಲೆ, ತನ್ನ ಎಡ ಪಾದವನ್ನು ಸ್ವತಃ ಆ ಬುಡಕಟ್ಟಿನ ರಾಜನೆಂಬ ಪಾದಪೀಠದ ಮೇಲೆ ಇರಿಸಿದನು.

ಪುಷ್ಯಮಿತ್ರರು ಕೇವಲ ಈ ಶಾಸನದಿಂದ ಮತ್ತು ಪುರಾಣಗಳಲ್ಲಿನ ಒಂದು ಒಂಟಿ ಉಲ್ಲೇಖದಿಂದ ಪರಿಚಿತರಾಗಿದ್ದಾರೆ. ಈ ಶಾಸನದ ಪಾಠಾಂತರವು ಕೆಲವೊಮ್ಮೆ ವಿವಾದಕ್ಕೊಳಗಾಗಿದೆ ("ಪುಷ್ಯಮಿತ್ರಂಚ" ಬದಲು "ಯುಧಿಅಮಿತೃದಥಸ್ಚ" ಎಂದು ಇರಬಹುದು).[೩] ಹಾಗಾಗಿ ಇವರ ಅಸ್ತಿತ್ವವನ್ನು ಕೆಲವೊಮ್ಮೆ ಅನುಮಾನಿಸಲಾಗುತ್ತದೆ. ಸ್ಕಂದಗುಪ್ತನು ಯಾರ ವಿರುದ್ಧ ಹೋರಾಡಿದನೊ ಅವರು ಹೆಚ್ಚು ಸಂಭಾವ್ಯವಾಗಿ ವಾಕಾಟಕರನ್ನು ಒಳಗೊಂಡ ಒಂದು ಒಕ್ಕೂಟವಾಗಿರಬಹುದು.[೩] ವಾಕಾಟಕ ರಾಜವಂಶವು ಆ ಸಮಯದ ಸುಮಾರು ಒಂದು ಯುದ್ಧದಲ್ಲಿ ಕೊನೆಗೊಂಡಿತು. ದಶಕುಮಾರಚರಿತದ ಪ್ರಕಾರ, ಅವರು ವನವಾಸಿ ಪ್ರದೇಶದ ಮೇಲೆ ಆಕ್ರಮಣ ಮಾಡುತ್ತಿದ್ದಾಗ, ಪ್ರತಿಯಾಗಿ ಹಿಂದಿನಿಂದ ಇವರ ಮೇಲೆ ಆಕ್ರಮಣ ನಡೆದ ಪರಿಣಾಮ ಕೊನೆಯ ವಾಕಾಟಕ ರಾಜನ ಮರಣವಾಯಿತು.

ಉಲ್ಲೇಖಗಳು ಬದಲಾಯಿಸಿ

  1. Kulke, Hermann; Rothermund, Dietmar (2004). A History of India (4. ed.). New York [u .a.]: Routledge. p. 96. ISBN 0415329191. Retrieved 22 August 2015.
  2. Tripathi, Ram Prasad (1981). Studies in political and socio-economic history of early India (in ಇಂಗ್ಲಿಷ್). Neeraj Prakashan. p. 37.
  3. ೩.೦ ೩.೧ Cultural Contours of India by Vijai Shankar Śrivastava p.103